ಭಕ್ತಿಚಳವಳಿಯ ಬೆಳವಣಿಗೆಯು ಮಧ್ಯಕಾಲೀನ ಭಾರತದ ಒಂದು ಪ್ರಮುಖ ಲಕ್ಷಣವಾಗಿದೆ. ಮುಕ್ತಿ ಕಲ್ಪನೆಯು ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳಲ್ಲಿ ಬಹಳ ಪ್ರಮುಖ ಸ್ಥಾನ ಪಡೆದಿದೆ. ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಮುಕ್ತಿಯನ್ನು ಪಡೆಯಲು ವಿವಿಧ ಬಗೆಯ ಅನುಸಂಧಾನಗಳನ್ನು ನಡೆಸಲಾಗಿದೆ. ಇದರ ಪರಿಣಾಮ ಪಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗ, ಯಜ್ಞ ಯಾಗ ಮುಂತಾದ ಧಾರ್ಮಿಕ ಆಚರಣೆಗಳು ಬಹುಮುಖ್ಯ ಮಾರ್ಗಗಳೆಂದು ಹೆಚ್ಚು ಪ್ರಸಿದ್ಧಿಯನ್ನು ಪಡೆದವು. ಇದರಲ್ಲಿ ಭಕ್ತಿಮಾರ್ಗಕ್ಕೆ ವಿಶಿಷ್ಟ ಸ್ಥಾನವಿದೆ. ವಿವಿಧ ಧರ್ಮ ಸುಧಾರಕರು ಮತ್ತು ದಾರ್ಶನಿಕರು ಉದಾರವಾದ ಭಕ್ತಿಪಂಥವನ್ನು ಪ್ರತಿಪಾದಿಸಿದರು. ಭಕ್ತಿ ಎಂದರೆ ದೇವರಲ್ಲಿ ಶುದ್ಧ ನಂಬಿಕೆಯನ್ನಿಡುವುದು. ದೇವರಲ್ಲಿ ಭಕ್ತಿ ಮತ್ತು ಶರಣಾಗತಿಯನ್ನು ಒತ್ತಿ ಹೇಳಿದರು. ಜನರಲ್ಲಿ ಭಾತೃತ್ವದ ಭಾವನೆ ಬೆಳೆಸಲು ಪ್ರಯತ್ನಿಸಿದರು. ಮತ್ತು ಸರ್ವಧರ್ಮ ಸಮಾನತೆಯ ತತ್ವವನ್ನು ಪ್ರತಿಪಾದಿಸಿದರು. ಅವರು ಯಾವ ವಿಧಿ-ವಿಧಾನಗಳನ್ನು ಆಚರಿಸುತ್ತಿರಲಿಲ್ಲ. ರಾಮ, ಕೃಷ್ಣ ಹಾಗೂ ಅಲ್ಲಾ ಎಂಬುದಾಗಿ ಹಲವು ನಾಮಗಳಿಂದ ಗುರುತಿಸಲ್ಪಟ್ಟಿ ಭಗವಂತನನ್ನು ಆರಾಧಿಸಿದರು. ಅವರು ಮುಕ್ತಿಯನ್ನು ಪಡೆದುಕೊಳ್ಳಲು ಭಕ್ತಿಮಾರ್ಗ ಸೂಚಿಸಿದರು. ಪರಿಶುದ್ಧ ಮನಸ್ಸು ಮತ್ತು ದೇವರಿಗೆ ಪೂರ್ಣ ಶರಣಾಗತಿಯೇ ಭಕ್ತಿ ಪಂಥದ ಮೂಲ ತತ್ವವಾಗಿತ್ತು. ಸಾ.ಶ. ಚನೆಯ ಶತಮಾನದ ತರುವಾಯ ಉತ್ತರ ಭಾರತದಲ್ಲಿ ಹರಡಿತು. ಭಕ್ತಿ ಪಂಥಕ್ಕೆ ಸಮಾನಾಂತರವಾಗಿಯೇ ಇಸ್ಲಾಂ ಮತದಲ್ಲಿ ಸೂಫಿ ಸಂಪ್ರದಾಯ ಬೆಳೆಯಿತು. ಇವುಗಳಲ್ಲಿ ಪರಸ್ಪರ ಪ್ರಭಾವಗಳನ್ನು ಗುರುತಿಸಬಹುದು.
ಭಕ್ತಿ ಮಾರ್ಗ, ಸಮಾಜದ ಎಲ್ಲ ಸ್ತರದ ಜನತೆಯನ್ನು ತಲುಪಿ ಹೆಚ್ಚು ಸಮಾಜಮುಖಿಯಾಗುತ್ತಲೇ ಸಾರ್ವತ್ರಿಕಗೊಂಡಿತು. ಈ ಅವಧಿಯಲ್ಲಿ ಸಮಾಜದ ವಿವಿಧ ಸಮುದಾಯಗಳಿಂದ ಬಂದ ಭಕ್ತಿ ಸಂತರು ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಭಕ್ತಿ ಪರವಶತೆಯನ್ನು ವ್ಯಕ್ತಪಡಿಸುತ್ತಾ, ಭಕ್ತಿ ಪರಿಕಲ್ಪನೆಯನ್ನು ಹೆಚ್ಚು ಸಮಾಜಮುಖಿಯಾಗಿ ಪರಿಚಯಿಸಿದರು. ಇವರಲ್ಲಿ ಉತ್ತರ ಭಾರತದ ರಮಾನಂದ, ಕಬೀರ, ಗುರುನಾನಕ್, ಮೀರಬಾಯಿ, ಚೈತನ್ಯ, ನಾಮದೇವ ರವಿದಾಸ್, ಸೂರ್‌ಾಸ್, ಮುಖ್ಯರಾಗಿದ್ದಾರೆ. ಕರ್ನಾಟಕದಲ್ಲಿ ಸಮಾಜದ ವಿವಿಧ ಸರಗಳಿಂದ ಬಂದ ಪುರಂದರದಾಸ, ಕನಕದಾಸ, ಶಿಶುನಾಳ ಶರೀಫ ಮುಂತಾದ ಅನೇಕ ಭಕ್ತಿಸಂತರನ್ನು ಕಾಣಬಹುದು.
ರಮಾನಂದ
ರಾಮಾನಂದರು ಅಲಹಾಬಾದ್, ವಾಹಣ ಕುಟುಂಬವೊಂದರಲ್ಲಿ ಜನಿಸಿದರು. ವಾರಣಾಸಿಯಲ್ಲಿ ಹಿಂದೂ ಧಾರ್ಮಿಕ ತತ್ವಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿ ರಾಮಾನುಜರ ತತ್ವದ ಅನುಯಾಯಿಗಳಾದರು.
ಅವರು ಭಕ್ತಿ, ಪ್ರೀತಿಗಳ ಆಧಾರದ ಮೇಲೆ ವೈಷ್ಣವ ಧರ್ಮದ ಶಾಲೆಯೊಂದನ್ನು ಪ್ರಾರಂಭಿಸಿದರು. ಉತ್ತರ ಭಾರತದ ಕೆಲವಡೆ ಸಂಚರಿಸಿ: ರಾಮ-ಸೀತೆಯರ ಪೂಜೆಯ ಭಕ್ತಿ ಆರಾಧನ ಸಿದ್ಧಾಂತದ ಪ್ರತ್ಯೇಕ ಪಂಥವನ್ನು ಜನಪ್ರಿಯಗೊಳಿಸಿದರು. ವಾರಣಾಸಿಯ ಅವರ ಕಾರ್ಯಸ್ಥಾನದ ಕೇಂದ್ರವಾಗಿತ್ತು. ಅವರು ಜಾತಿ ಪದ್ಧತಿಯನ್ನು ಖಂಡಿಸಿ ಎಲ್ಲಾ ಜಾತಿಯವರನ್ನೂ ತಮ್ಮ ಪಂಥಕ್ಕೆ ಸೇರಿಸಿಕೊಂಡರು. ಅವರಲ್ಲಿ ಪ್ರಸಿದ್ಧನಾದವನು ಕಲರ್, ಅವರು ಹಿಂದಿಯಲ್ಲಿ ಪ್ರವಚನ ನೀಡಿದರು.
ಕಬೀರ್ (ಸುಮಾರು 1440-1510) : ಉತ್ತರ ಭಾರತದ ಈ ಕಾಲದ ಮತ್ತೊಬ್ಬ ಪ್ರಸಿದ್ಧ ಸಂತ ಕಬೀರ್, ಕಬೀರರು ವಾರಣಾಸಿಯ ‘ಜುಲಾ’ ಎಂದು ಕರೆಯುವ ನೇಕಾರ ಕಸುಬಿನ ಮುಸಲಾನ ಕುಟುಂಬದಲ್ಲಿ ಬೆಳೆದರು. ರಮಾನಂದರ ಶಿಷ್ಯರಾಗಿದ್ದ ಇವರು ಹೆಚ್ಚು ಕಾಲವನ್ನು ವಾರಣಾಸಿಯಲ್ಲಿ ಕಳೆದರು. ತಮ್ಮದೇ ಹೊಸ ತತ್ವವನ್ನು ಬೋಧಿಸಲು ಪ್ರಾರಂಭಿಸಿದರು. ಜಾತಿ ವ್ಯವಸ್ಥೆ ಮತ್ತು ಬಹುಮೂರ್ತಿಗಳ ಪೂಜೆಯನ್ನು ಖಂಡಿಸಿದ ಅವರು ದೇವರು ಒಬ್ಬನೇ, ಹಿಂದೂ ಮತ್ತು ಮುಸಲ್ಮಾನರಿಗೆ ಆ ಒಬ್ಬ ದೇವರೇ ಹೊರತು ಬೇರೆ ಬೇರೆ ಇಲ್ಲವೆಂದು ಸಾರಿದರು, ಈ ಎರಡು ಮತೀಯರಲ್ಲಿ ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಲು ಯತ್ನಿಸಿದರು. ತಮ್ಮ ಗುರುವಿನಂತೆಯ ಇವರೂ ಸಹ ಜನರ ಆಡು ಭಾಷೆಯಾದ ಹಿಂದಿಯಲ್ಲಿಯೇ ಮಾತನಾಡಿ, ಬರೆದು ಹೆಚ್ಚು ಜನರನ್ನು ತಲುಪಿದರು.
ಕಬೀರರು ದೋಹೆಗಳೆಂಬ ಪದ್ಯಗಳನ್ನು ರಚಿಸಿದರು. ಅವುಗಳನ್ನು ಹಿಂದೂ-ಮುಸಲ್ಮಾನರುಗಳು ಉತ್ತರ ಭಾರತದಲ್ಲಿ ಈಗಲೂ ಹಾಡುತ್ತಾರೆ, ಕಬೀರರ ಅನುಯಾಯಿಗಳನ್ನು “ಕಬೀರ್ ಪಂಥಿಗಳಂದು ಕರೆಯುತ್ತಾರೆ. ಅಂದರೆ ಕಬೀರ್ ಮಾರ್ಗದಲ್ಲಿನ ಪ್ರವಾಸಿಗರು ಎಂದರ್ಥ. ಕಬೀರ್ ಜಾತಿ ಮತ್ತು ಧರ್ಮಗಳ ಗಡಿಗಳನ್ನು ದಾಟಿ ಮಾನವೀಯ ನೆಲೆಯಲ್ಲಿ ಬೋಧಿಸಿದರು. ಭಾರತದ ಪ್ರಮುಖ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಕರಾಗಿದ್ದರು.
ಚೈತನ್ಯ (ಸುಮಾರು 148h-1533) – ಭಕ್ತಿ ಚಳವಳಿಯ ಪ್ರಸಿದ್ಧ ಸಂತರಲ್ಲಿ ಚೈತನ್ಯ ಒಬ್ಬರು,ಇವರು ಬಂಗಾಳದ ನಾಡಿಯಾದಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ತಮ್ಮ 25ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದು ಶ್ರೀಕೃಷ್ಣ ಪಂಥದ ಅನುಯಾಯಿಗಳಾದರು. ಅನೇಕ ವರ್ಷಗಳ ಕಾಲ ಮಥುರಾ ಮತ್ತು ಬೃಂದಾವನಗಳಲ್ಲಿ ತಂಗಿದ್ದರು. ಶ್ರದ್ಧೆಯಿಂದ ಜಾತಿ ಮೊದಲಾದ ಬೇಧಗಳು ತೊಡೆದು ಹೋಗುತ್ತವೆ ಎಂದೂ, ಭಕ್ತಿಯಿಂದ ಮನುಷ್ಯನು ಪರಿಶುದ್ಧನಾಗುವನೆಂದು ಉಪದೇಶ ನೀಡಿದರು. ಕೃಷ್ಣನ ಆರಾಧನೆಯನ್ನು ಜನಾದರಣೀಯವಾಗುವಂತೆ ಮಾಡಿದರು. ಕೃಷ್ಣನನ್ನು ಕುರಿತು ಅನೇಕ ಭಕ್ತಿಗೀತೆಗಳನ್ನು ರಚಿಸಿದರು. ಇವರು ಜನರಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿ, ಭಾತೃತ್ವ ಭಾವವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಅವರ ಆಧ್ಯಾತ್ಮಿಕ ಚಿಂತನೆಯ ಬೋಧನೆಗಳನ್ನು “ಚೈತನ್ಯ ಚರಿತಾಮೃತ" ಎಂಬುದರಲ್ಲಿ ಸಂಗ್ರಹಿಸಲಾಗಿದೆ. ಗುರುನಾನಕ್ (ಸುಮಾರು 1469-1539) : ಈ ಕಾಲದ ಮತ್ತೊಬ್ಬ ಭಕ್ತಿಪಂಥದ ಪ್ರತಿಪಾದಕ ಗುರುನಾನಕ ಚಿಕ್ಕ ವಯಸ್ಸಿನಿಂದಲೇ ಧಾರ್ಮಿಕ ಪ್ರವೃತ್ತಿಯುಳ್ಳವರಾಗಿದ್ದರು. ಗುರುನಾನಕರು ಹಿಂದಿನ ಪಾಕಿಸ್ತಾನದ 'ತಳವಂಡಿ' ಗ್ರಾಮದಲ್ಲಿ ಜನಿಸಿದರು. ದೀರ್ಘಕಾಲ ದೇಶ ಪರ್ಯಟನೆ ನಡೆಸಿದ ನಂತರ ರಾವಿ ನದಿ ದಂಡೆಯ ಕರ್ತರಾ ಪುರದಲ್ಲಿ ಭಕ್ತಿಕೇಂದ್ರವನ್ನು ಸ್ಥಾಪಿಸಿದರು. ಅವರ ಅನುಯಾಯಿಗಳು ಎಲ್ಲ ಜಾತಿ ಮತಗಳ ಗಡಿಗಳನ್ನು ಮೀರಿ, ಲಿಂಗ ತಾರತಮ್ಯವಿಲ್ಲದೆ ಸಹಪಂಕ್ತಿ ಭೋಜನ ಮಾಡುತ್ತಿದ್ದರು. ನಾನಕರು ಸಹ ಪಂಕ್ತಿ ಪೋಷಿಸುವ ಅಂಗರ್' ಎನ್ನುವ ಭೋಜನ ಶಾಲೆ ಆರಂಭಿಸಿದ್ದರು. ಹೀಗೆ ಭಕ್ತಿ ಸಂತರಿಂದ ಕೂಡಿದ ಈ ಪವಿತ್ರ ಸ್ಥಳ ಧರ್ಮಶಾಲೆ ಎಂದು ಹೆಸರಾಯಿತು.ಇದನ್ನು ಈಗ ಗುರುದ್ವಾರ ಎಂದು ಕರೆಯಲಾಗುತ್ತಿದೆ. ದೇವರು ಒಬ್ಬನೇ ಎಂದು ಬೋಧಿಸಿದರಲ್ಲದೇ ಮೂರ್ತಿ ಪೂಜೆಯನ್ನು ಖಂಡಿಸಿದರು. ಸತ್ಕಾರ್ಯ ಮತ್ತು ಪರಿಶುದ್ಧ ಹಾಗೂ ನೀತಿಯುಕ್ತವಾದ ಜೀವನಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟರು. ಅವರಿಗೆ ಹಿಂದೂ ಹಾಗೂ ಮುಸಲ್ಮಾನ ಶಿಷ್ಯರುಗಳಿದ್ದರು. ಇವರ ಶಿಷ್ಯರನ್ನು ಒಬ್ಬರು” ಎಂದು ಕರೆಯಲಾಗಿದೆ. ಇವರ ಬೋಧನೆಗಳನ್ನು ಗುರು ಗ್ರಂಥ ಸಾಹಿಬ್”ನಲ್ಲಿ ಸಂಗ್ರಹಿಸಲಾಗಿದ್ದು, ಇದು ಒಬ್ಬ ಪವಿತ್ರ ಗ್ರಂಥವಾಗಿದೆ. ಇದನ್ನು ಸಿಬ್ಬರ ಆದಿ ಗ್ರಂಥ ಎಂದೂ ಕರೆಯುತ್ತಾರೆ. ಇದನ್ನು ಗುರುದ್ವಾರದಲ್ಲಿಟ್ಟು ಪೂಜಿಸುತ್ತಾರೆ.
ಮೀರಾಬಾಯಿ: ಭಕ್ತಿಪಂಭಕ್ಕೆ ಹೆಸರಾದ ಮೀರಾಬಾಯಿ ಮೇವಾಡದ ರಜತ ರಾಜಕುಮಾರ್, ಮೇವಾರದ ರಾಜಕುಮಾರನನ್ನು ವರಿಸಿದ್ದಳು. ಅನಂತರದಲ್ಲಿ ಲೌಕಿಕ ಬದುಕಿನಿಂದ ದೂರ ಸರಿದಳು. ಅಂದು ಅಸ್ಪಶ್ಯ ಕುಲವೆಂದು ಪರಿಗಣಿಸಿದ ಸಮುದಾಯದಲ್ಲಿ ಹುಟ್ಟಿ ಭಕ್ತಿಸಂತನಾದ ರವಿದಾಸ (ರಾಮ್‌ದಾಸ್) ಎಂಬುವರ ಶಿಷ್ಯಯಾದ ಮೀರಾಬಾಯಿ ತನ್ನ ಬದುಕನ್ನೆಲ್ಲಾ ಶ್ರೀ ಕೃಷ್ಣನ ಆರಾಧನೆಗೆ ಮೀಸಲಿಟ್ಟು ಕೃಷ್ಣನನ್ನು ಕುರಿತು ಭಕ್ತಿಪೂರಿತವಾದ ಕೀರ್ತನೆಗಳನ್ನು ಬರೆದಳು. ಪಾತಿ ಶ್ರೇಷ್ಠತೆಯ ಮನೋಧರ್ಮವನ್ನು ತನ್ನ ಕೀರ್ತನೆಗಳಲ್ಲಿ ವಿಡಂಭಿಸಿದರು. ಈ ಕೀರ್ತನೆಗಳು “ಭಜನೆಗಳು” ಎಂದು ಜನಪ್ರಿಯವಾದರೂ ಇಡೀ ಭಾರತದಲ್ಲಿ ಈಗಲೂ ಈ ಭಜನೆಗಳನ್ನು ಹಾಡಲಾಗುತ್ತಿದೆ. ಹಾಗೂ ಹೆಚ್ಚು ಖ್ಯಾತಿ ಗಳಿಸಿರುವುದು ರಾಜಸ್ತಾನ ಮತ್ತು ಗುಜರಾತ್ ರಾಜ್ಯಗಳಲ್ಲಿ, ಹೀಗೆ ಭಾರತದ ಹಲವಾರು ಭಾಗಗಳಲ್ಲಿ ಧರ್ಮ ಮತ್ತು ಜಾತಿಗಳ ನಡುವಣ ಅಂತರವನ್ನು ತೊಡೆಯಲು ಅನೇಕ ಸುಧಾರಕರು ಪಯತ್ನಿಸಿದರು.
ಮಹಾರಾಷ್ಟ್ರದ ಭೀಮಾ ನದಿಯ ದಡದಲ್ಲಿ ಪಂಡರಾಪುರದ ವಿಠೋಬನ ದೇವಾಲಯವು ಭಕ್ತಿ ಪಂಥದ ಕೇಂದ್ರವಾಗಿತ್ತು. ಜ್ಞಾನೇಶ್ವರ ಮತ್ತು ನಾಮದೇವ, ಏಕನಾಥ, ತುಕಾರಾಮ್ ಮತ್ತು ರಾಮದಾಸರು ಹೊಸ ಪಂಥದ ಸಂತರಲ್ಲಿ ಪ್ರಖ್ಯಾತರಾಗಿದ್ದರು, ಪುರಂದರದಾಸರು ಮತ್ತು ಕನಕದಾಸರು ಕರ್ನಾಟಕದ ಭಕ್ತಿ ಚಳವಳಿಯ ಪ್ರಮುಖರಾಗಿದ್ದರು. ಇವರದು ದಾಸ ಪರಂಪರೆ ಎಂದು ಪ್ರಸಿದ್ಧಿಯನ್ನು ಪಡೆದಿದೆ.
ಸೂಫಿ ಸಂತರು: ಸೂಫಿ ಸಂತರು ಪರ್ಷಿಯಾದಿಂದ ಬಂದು ಭಾರತದ ವಿವಿಧ ಭಾಗಗಳಲ್ಲಿ ನೆಳೆಸಿದರು. ಅವರನ್ನು ಹೀರ (ಗುರು) ಎಂದು ಕರೆಯುತ್ತಾರೆ. “ಸೂಫ್” ಎಂಬ ಸಾದಾ ಉಣ್ಣೆಯ ಅಂಗಿ ತೊಡುತ್ತಿದ್ದುದರಿಂದ ಮುಸ್ಲಿಂ ಸಂತರುಗಳನ್ನು “ಸೂಫಿ” ಎಂದು ಕರೆದರು. ಪ್ರೇಮ ಮತ್ತು ಭಕ್ತಿಯಿಂದ ಪರಮಾತ್ಮನನ್ನು ಅಥವಾ ಅಲ್ಲಾನನ್ನು ಸೇರಲು ಸಾಧ್ಯವೆಂದು ಬೋಧಿಸಿದರು. ಎಲ್ಲಾ ವರ್ಗದ ಜನರನ್ನು ಗೌರವಿಸಿ ಬಾಳುವುದರ ಮಹತ್ವವನ್ನು ಒತ್ತಿ ಹೇಳಿದರು. ಭಕ್ತಿಯಿಂದ ಕೂಡಿದ ನರ್ತನ ಮತ್ತು ಸಂಗೀತವ ನಮ್ಮನ್ನು ದೇವರ ಕಡೆ ಕೊಂಡೊಯ್ಯುತ್ತವೆ ಎಂದು ಸೂಫಿಗಳು ನಂಬಿದ್ದರು. ಅವರು ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಭಕ್ತಿಯ ಮಹತ್ವವನ್ನು ಸಾರಲು ಅನೇಕ ಕೃತಿಗಳನ್ನು ರಚಿಸಿದರು, ಕುತುಬನ್ ಎಂಬಾತನ “ಮೃಗಾವತಿ” ಹಾಗೂ ಮಲ್ಲಿಕ್ ಮಹಮದ್ ಜಯಿಯ “ಪದ್ಮಾವತ್” ಎಂಬ ಕಾವ್ಯಗಳು ಸೂಫಿ ಕವಿ ಪರಂಪರ ಉತ್ತಮ ಉದಾಹರಣೆಗಳಾಗಿವೆ. ಸೂಫಿ ಪರಂಪರೆಗೂ ಅಖಿಲ ಭಾರತ ವ್ಯಾಪ್ತಿ ಇದೆ. ಸೂಫಿ ಪಂಪದಲ್ಲಿ ಸುಮಾರು 12 ವಿವಿಧ ಪಂಗಡಗಳಿದ್ದು, ಅವುಗಳಲ್ಲಿ ನಾಲ್ಕು ಅತ್ಯಂತ ಪ್ರಮುಖವಾದವುಗಳಾಗಿವೆ. ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ವಿಜಯಪುರ ಮುಂತಾದವು ಈ ಪರಂಪರೆಯ ಪ್ರಮುಖ ಕೇಂದ್ರಗಳು. ಉರುಸ್ ಆಚರಣೆಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಇಂದಿಗೂ ಈ ಆಚರಣೆ ಜೀವಂತವಾಗಿವೆ.
ಕಾಮೆಂಟ್ ಪೋಸ್ಟ್ ಮಾಡಿ