ಮಧ್ಯಕಾಲೀನ ಭಾರತದ ಇತಿಹಾಸ - ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು (1)


ಮಾನವೀಯ ಮೌಲ್ಯಗಳಿಂದ ದೂರವಾಗಿ ಮೇಲು ಕೀಳೆಂಬ ಬೇಧಭಾಷೆಗಳಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಿ ಮೌಢಿಮುಕ್ತ ಸಮಾಜದ ಕಡೆಗೆ ಕೊಂಡೊಯ್ಯುವ ಪ್ರಯತ್ನವೇ ಸಮಾಜ ಸುಧಾರಣೆ, ಪ್ರತಿ ವ್ಯಕ್ತಿಯ ಘನತೆಯ ಮಹೋನ್ನತಿಯನ್ನು ಹಾಡುವುದೇ ಸುಧಾರಣೆಯ ಮೂಲಭೂತ ಅಂಶವಾಗಿದೆ.

19ನೇ ಶತಮಾನದನ್ನು ಭಾರತದ ಜತೆಯಲ್ಲಿ ಸಮಾಜ ಸುಧಾರಣಾ ಕಾಲ ಮತ್ತು ಭಾರತೀಯ ನವೋದಯ ಕಾಲವೆಂದು ಸಾಮಾನ್ಯವಾಗಿ ಚಿತ್ರಿಸಲಾಗಿದೆ. ಬ್ರಿಟಿಷರು ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದ ನಂತರ ಭಾರತೀಯ ಇಂಗ್ಲಿಷ್ ವಿದ್ಯಾವಂತ ವರ್ಗವೊಂದು ಸೃಷ್ಟಿಯಾಯಿತು. ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಸಮಾನತ ಮುಂತಾದ ಯುರೋಪಿಯನ್ ಪರಿಕಲ್ಪನೆಗಳು ಭಾರತೀಯ ಸಮಾಜಕ್ಕೆ ಪರಿಚಯವಾಗಲಾರಂಭಿಸಿದವು. ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪಡೆದ ಅನೇಕ ಭಾರತೀಯರು ತಮ್ಮ ಸಮಾಜವನ್ನು ವಿಶ್ಲೇಷಿಸಲು ಆರಂಭಿಸಿದರು. ಇದರ ಜೊತೆಗೆ ಬ್ರಿಟಿಷರು ಸಮಾಜ ಸುಧಾರಣೆಯಲ್ಲಿ ಆಸಕ್ತಿಯನ್ನು ತಳೆದರು. ತಮ್ಮನ್ನು ನಾಗರಿಕರು ಎಂದು ಚಿತ್ರಿಸಿಕೊಳುತ್ತ ತಾವು ಇಲ್ಲಿಗೆ ಬಂದಿರುವುದೇ ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು ಎನ್ನುವ ಬಳಿಯನ ಮೇಲಿನ ಹೊರೆ ಸಿದ್ಧಾಂತವನ್ನು ಪ್ರಚುರಪಡಿಸಿದರು. ಈ ಸಿದ್ಧಾಂತದ ಹಿನ್ನೆಲೆಯಲ್ಲಿ ಬ್ರಿಟಿಷರು ತಮ್ಮ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಯೋಜನೆಯನ್ನು ಹೊಂದಿದ್ದರು. ಅನೇಕ ಭಾರತೀಯರು ತಮ್ಮ ಪರಂಪರೆಯನ್ನು ಹೊಸ ದೃಷ್ಟಿಕೋನಗಳಲ್ಲಿ ನೋಡಲು ಆರಂಭಿಸಿದರು. ಭಾರತೀಯತೆ ಎಂಬ ಹೊಸ ಆಸ್ಥಿತೆಯು ಹುಟ್ಟಿಕೊಂಡಿತು. ಭಾರತೀಯ ಸಮಾಜದಲ್ಲಿ ಮಹಿಳೆಯ ಹಾಗೂ ಶೂದೆ, ಶೂದಾತ ಸಮುದಾಯಗಳು ಆನೇಕ ಹಕ್ಕುಗಳಿಂದ ವಂಚಿತರಾಗಿದ್ದರು. ಇದರ ವಿರುದ್ಧ ವಿವಿಧ ಕಾಲಘಟ್ಟಗಳಲ್ಲಿ ಅನೇಕ ಚಳವಳಿಗಳು ನಡೆದವು. ಪ್ರಾಚೀನ ಮತ್ತು ಮಧ್ಯಕಾಲೀನ ಚಳವಳಿಗಳಿಗಿಂತ ಭಿನ್ನವಾದ ಸುಧಾರಣಾ ಚಳವಳಿಗಳು ಬ್ರಿಟಿಷ್ ವಸಾಹತುಶಾಹಿ ಕಾಲಘಟ್ಟದಲ್ಲಿ ಹುಟ್ಟಿಕೊಂಡವು, ಜಾತಿಪದ್ಧತಿ, ಲಿಂಗ ಅಸಮಾನತೆ, ಸತಿಪದ್ಧತಿ, ವಿಧವಾ ಪುನರ್‌ವಿವಾಹ ನಿರ್ಬಂಧ ಪದ್ಧತಿ, ಕೂದ್ರ ಮತ್ತು ಶೂದ್ರಾತಿಶೂದ್ದರು ಶಿಕ್ಷಣದಿಂದ ವಂಚಿತರಾಗಿದ್ದ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಈ ಸುಧಾರಣಾ ಹೋರಾಟವನ್ನು ರೂಪಿಸಿದರು. ರಾಜಾ ರಾಮಮೋಹನರಾಯ್, ದಯಾನಂದ ಸರಸ್ವತಿ, ರಾನಡೆ, ಜ್ಯೋತಿಭಾಪುಲೆ, ಸ್ವಾಮಿ ವಿವೇಕಾನಂದ, ಆನಿಬೆಸೆಂಟ್, ಸರ್ ಸಯ್ಯದ್ ಅಹ್ಮದ್ ಖಾನ್, ಜೆರಿಯಾರ್, ನಾರಾಯಣ ಗುರು ಮೊದಲಾದ ಮಹನೀಯರು ಸುಧಾರಣಾ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣವೆಂದರೆ ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸಲಾಯಿತು.


ಬ್ರಹ್ಮಸಮಾಜ

ಆಧುನಿಕ ಕಾಲ ಘಟ್ಟದಲ್ಲಿ ಭಾರತದಲ್ಲಿ ಸಮಾಜ ಸುಧಾರಣೆಗೆ ಚಾಲನೆಯನ್ನು ನೀಡಿದವರು ರಾಜಾ ರಾಮಮೊಹನ್ ರಾಯರು (1772-1833). ಇವರು ಸಂಸ್ಕೃತ ಸಾಹಿತ್ಯ ಹಿಂದೂ ಶತ್ರ ಮೀಮಾಂಸ, ಕುರಾನ್, ಪರ್ಷಿಯನ್ ಮತ್ತು ಅರೆಬಿಕ್ ಸಾಹಿತ್ಯ ಪ್ರಕಾರಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು. ಇದಲ್ಲದೆ ಭಾರತದ ಇತರ ಧರ್ಮಗಳ ತಾತ್ವಿಕ ಜಿಜ್ಞಾಸೆಗಳನ್ನೂ ಅಧ್ಯಯನ ಮಾಡಿದರು. ಆದರೆ, ಜ್ಞಾನ ಮತ್ತು ಸುಧಾರಣಾ ದಾಹಕ್ಕೆ ಸಾಕ್ಷಿಯೆಂದರೆ ಬೈಬಲನ್ನು ಮೂಲದಲ್ಲಿ ಅರ್ಥಮಾಡಿಕೊಳ್ಳಲು ಹಿಜ್ರ ಮತ್ತು ಕ್ ಭಾಷೆಗಳನ್ನು ಕಲಿತರು,

 ಇವರು ತಮ್ಮ ಸ್ನೇಹಿತರೊಡಗೂಡಿ ಕಲ್ಕತ್ತಾದಲ್ಲಿ ‘ಆತ್ಮೀಯ ಸಭಾ’ ಪ್ರಾರಂಭಿಸಿದರು. ಈ ಸಭೆಯ ಪ್ರಮುಖ ಆಶಯಗಳೆಂದರೆ ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ ಕೊನೆಗೊಳಿಸುವುದು. 1828ರಲ್ಲಿ ‘ಬ್ರಹ್ಮಸಮಾಜ’ವನ್ನು ಪ್ರಾರಂಭಿಸಿದರು. ಜಾತಿಪದ್ಧತಿ ಮತ್ತು ಮೂಢನಂಬಿಕೆಗಳಿಂದ ಹಿಂದೂ ಧರ್ಮವನ್ನು ಬದಿಗೊಳಿಸುವುದು ಕಾಳಜಿಯಾಗಿತ್ತು. ರಾಜಾ ರಾಮಮೋಹನ್ ರಾಯರು ಮತ್ತು ಇತರೆ ಬ್ರಹ್ಮ ಸಮಾಜವಾದಿ > ಉಪಾಷತ್‌ಗಳು ಸಾರುವ ತಾತ್ವಿಕ ತಳಹದಿಯ ಮೇಲೆ ಒಂದೂ ಸಮಾಜವನ್ನು ಪುನರ್ ರೂಪಿಸ ಪ್ರಯತ್ನವನ್ನು ಮಾಡಿದರು. ಇವರ ಪ್ರಯತ್ನದ ಫಲವಾಗಿ ಮತ್ತು ಅಂದಿನ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್‌ನ ಬೆಂಬಲದಿಂದ 1829ರಲ್ಲಿ ಸತಿಪದ್ಧತಿಯ ಆಚರಣೆಯನ್ನು ಕಾನೂನಾತಕವಾಗಿ ನಿಷೇಧಿಸಲಾಯಿತು. ಪತ್ರಿಕೋದ್ಯಮದ ಮೂಲಕ ಜನರಲ್ಲಿ ವೈಚಾರಿಕತೆಯನ್ನು ಬೆಳೆಸಲು ೬ದರು. ಬಂಗಾಳಿ ಭಾಷೆಯಲ್ಲಿ ಸಂಬಾದ ಕೌಮುದ ಎನ್ನುವ ಪತ್ರಿಕೆಯನ್ನು ಆರಂಭಿಸಿದರು.

ಬ್ರಹ್ಮಸಮಾಜದ ಪ್ರಮುಖ ಅಂಶಗಳೆಂದರೆ,

1: ಏಕದೇವತಾರಾಧನೆಯನ್ನು ಪ್ರತಿಪಾದಿಸಿದರು.

2, ಅರ್ಥಹೀನ ಆಚರಣೆಗಳನ್ನು ವಿರೋಧಿಸಿದರು.

3, ಪ್ರತಿಯೊಬ್ಬ ವ್ಯಕ್ತಿಯ ಘನತೆಯಿಂದ ಬಾಳಬೇಕು ಮತ್ತು ಯಾವ ನಿಯಮ ಮತ್ತು ಆಚರಣೆಗಳು ಇದಕ್ಕೆ ಕೇಡುಂಟು ಮಾಡಬಾರದೆನ್ನುವುದು ಅವರ ನಿಲುವಾಗಿತ್ತು.

4. ಬಹುಪತ್ನಿತ್ವ ಪದ್ಧತಿಯನ್ನು ವಿರೋಧಿಸುವ ಮೂಲಕ ಸ್ತ್ರೀಯರಿಗೆ ಸಮಾನತೆ ದೊರಕಬೇಕೆಂದು ಬ್ರಹ್ಮಸಮಾಜವು ಆಶಿಸಿತು. ವಿಶೇಷವಾಗಿ ವಿಧವೆಯರ ದುಸ್ಥಿತಿಯನ್ನು ದೂರ ಮಾಡುವ ಸಲುವಾಗಿ ಅವರಿಗೆ ಆಸ್ತಿಯಲ್ಲಿ ಪಾಲು ಇರಬೇಕೆಂದು ಪ್ರತಿಪಾದಿಸಿತು, ಬ್ರಹ್ಮಸವಾದವು ಬಾಲ್ಯ ವಿವಾಹವನ್ನು ವಿರೋಧಿಸಿತು.

5. ಒಳ್ಳೆಯದು ಎಲ್ಲಿದ್ದರೂ ಅದನ್ನು ಸ್ವೀಕರಿಸಬಹುದು ಎಂದು ಬ್ರಹ್ಮಸಮಾಜವು ಸಾರಿತು, ವೇದಾಂತ ಮತ್ತು ಉಪನಿಷತ್ತುಗಳು. ಈ ಆಶಯಗಳನ್ನು ಬೋಧಿಸುತ್ತವೆಂದು ಸಾರಿದರು. ಪಶ್ಚಿಮದ ನಾಗರಿಕತೆಯಲ್ಲಿ ಒಳ್ಳೆಯದಿದ್ದರೆ ಆದೂ ಕೂಡ ಸ್ವೀಕಾರಾರ್ಹ ಎನ್ನುವುದು ಅವರ ನಿಲುವಾಗಿತ್ತು. ಹೀಗಾಗಿ ಇಂಗ್ಲಿಷ್ ಶಿಕ್ಷಣಕ್ಕೆ ಇವರು ಒತ್ತು ನೀಡಿದರು.

ಇವಲ್ಲದೆ, ರಾಜಾ ರಾಮಮೋಹನ್‌ರಾಯರು ಪ್ರಗತಿಪರನಾದ ಪಶ್ಚಿಮದ ಆಲೋಚನಾ ಕ್ರಮಗಳನ್ನು ಭಾರತೀಯರು ಸ್ವಾಗತಿಸಬೇಕು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಅನೇಕ ಶಾಲೆಗಳನ್ನು ಮತ್ತು ಕಲ್ಕತ್ತಾದಲ್ಲಿ ವೇದಾಂತ ಕಾಲೇಜನ್ನು ಸ್ಥಾಪಿಸಲು ನೆರವು ನೀಡಿದರು. ರವೀಂದ್ರನಾಥ ಠಾಗೂರರು, ರಾಮಮೋಹನರಾಯರು ಆಧುನಿಕ ಭಾರತದ ಹರಿಕಾರ, ಭಾರತದ ಪುನರುಜೀವನದ ಜನಕ ಮತ್ತು ಭಾರತೀಯ ರಾಷ್ಟ್ರೀಯತೆಯ ಪ್ರವಾದಿ' ಎಂದು ಹೇಳುವ ಮೂಲಕ ರಾಜಾ ರಾಮಮೋಹನ್‌ರಾಯರು ಮತ್ತು ಬ್ರಹ್ಮಸಮಾಜವು ಮಾಡಿದ ಸೇವೆಯನ್ನು ವಿಶ್ಲೇಷಿಸಿದ್ದಾರೆ


ಯುವಬಂಗಾಳಿ ಚಳವಳಿ

ಉತ್ತರ ಭಾರತದಲ್ಲಿ ಆಧುನಿಕತೆಯ ಗಾಳೆಯು ಬೀಸತೊಡಗಿದ್ದು ಹತ್ತೊಂಬತ್ತನೇ ಶತಮಾನದಲ್ಲಿ, ಕಲ್ಕತ್ತಾ ನಗರವು ಹೊಸ ಆಲೋಚನೆಗಳ ಕೇಂದ್ರ ಬಿಂದುವಾಗಿತ್ತು. 1820 ಮತ್ತು 1830ರ ದಶಕದಲ್ಲಿ ಹೊಸ ಚಳವಳಿಗಳು ಹುಟ್ಟಿಕೊಳ್ಳತೊಡಗಿದವು. ಈಗಾಗಲೇ ಬ್ರಹ್ಮಸಮಾಜವನ್ನು ಗಮನಿಸಲಾಗಿದೆ. ಇದೇ ಕಾಲಘಟ್ಟದ ಮತ್ತೊಂದು ಚಳವಳಿಯೆಂದರ 'ಯುವಬಂಗಾಳ ಚಳವಳಿ', ಇದನ್ನು ಪ್ರಾರಂಭಿಸಿದವರು ಹ ಪಿಪಿಯನ್ ಆರೇಜರ್ಯ (1800-183I). ಇವರ ತಂದೆ ಪೋರ್ಚುಗೀಸ್, ತಾಯಿ ಭಾರತೀಯಳು ಆರೇಜಯೋ ಅವರನ್ನು ಅಂಗೋ ಇಂಡಿಯನ್ ಎಂದು ಕರೆಯುತ್ತಾರೆ. 1826ರಿಂದ 1831ರವರೆಗೆ ಕಲ್ಕತ್ತಾದ ಹಿಂದೂ ಕಾಲೇಜಿನಲ್ಲಿ ಸೇವೆಯನ್ನು ಸಲ್ಲಿಸಿದರು. ಇವರ ಬೋಧನೆಯ ಮಾಂತ್ರಿಕ ಶಕ್ತಿಗೆ ಒಳಗಾದ ಅವರ - ವಿದ್ಯಾರ್ಥಿಗಳು ಅವರ ನಿಷ್ಟಾವಂತ ಅನುಯಾಯಿಗಳಾದರು. ಯುರೋಪಿನ ಜನರುಜೀವನ ಚಳವಳಿಯ ಆಶಯಗಳಿಂದ ಪ್ರಭಾವಿತಗೊಂಡಿದ್ದ ಇವರು ತಮ್ಮ ವಿದ್ಯಾರ್ಥಿಗಳು ಮತ್ತು ಸಹವರ್ತಿಗಳಲ್ಲಿ - ವೈಜ್ಞಾನಿಕ ಆಲೋಚನಾ ಕ್ರಮವನ್ನು ತುಂಬುವ ಪ್ರಯತ್ನವನ್ನು ಮಾಡಿದರು. ಹೊಸ ಶಿಕ್ಷಣ ಕ್ರಮವನ್ನು ಜಾರಿಗೊಳಿಸಲು ಬೇಕಾದ ಪಠ್ಯಪುಸ್ತಕಗಳನ್ನು ರೂಪಿಸುವಲ್ಲಿ ವಿಶೇಷ ಶ್ರಮವಹಿಸಿದರು. ಪ್ರಶ್ನಿಸುವ ವೈಜ್ಞಾನಿಕ ದೃಷ್ಟಿಕೋನವನ್ನು ಮೈಗೂಡಿಸಿಕೊಳ್ಳಲು ಬೇಕಾದ ಪ್ರೇರಣೆಯನ್ನು ಒದಗಿಸುವ ವಠಗಳನ್ನು ತಂದರು. ಇದರಿಂದ ಅಂದಿನ ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಗುರಿಯಾದರು. ಆದರೂ ವಿದೆಗುಂದದೆ 'ಆಕಾಡೆಮಿಕ್ ಅಸೋಸಿಯೇಷನ್' (1928) ಎನ್ನುವ ಚರ್ಚಾ ವೇದಿಕೆಯನ್ನು ಕಟ್ಟುವ ಮೂಲಕ ಹೊಸ ಸಂವೇದನೆಗಳನ್ನು ಹುಟ್ಟುಹಾಕಿದರು.

ಯುವಬಂಗಾಳ ಚಳವಸೆಯು ಪ್ರಕೃತಿ, ಮಾನವೀಯತೆ, ದೇವರು ಮುಂತಾದ ವಿಷಯಗಳನ್ನು ಕುರಿತು ಚರ್ಚೆ ಮತ್ತು ಸಂವಾದಗಳನ್ನು ನಡೆಸಿತು. ಮೂಢನಂಬಿಕೆಗಳೆಂದ ತುಂಬೆ ಸಾಮಾಜಿಕ ಮೌಡ್ಯಾಚಾರಗಳಲ್ಲಿ ಮುಳುಗಿದ್ದ ಸಮಾಜಕ್ಕೆ ಪರಿಹಾರವಿರುವುದು ಎಲ್ಲವನ್ನೂ ಎಲ್ಲರೂ ವೈಜ್ಞಾನಿಕವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಂಡಾಗ ಮಾತ್ರ ಎಂದು ಡಿರೇಜಿಯೋ ಪ್ರಚುರಪಡಿಸುವ ಪ್ರಯತ್ನವನ್ನು ಮಾಡಿದರು. ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿದ್ದು ಜಾತಿಘಂತ ಶೋಷಣೆಯ ವಿರೋಧಿಯಾಗಿದ್ದರು, ಸಂಪ್ರದಾಯಸ್ಥ ಕೌಟುಂಬಿಕ ಹಿನ್ನೆಲೆಯಿಂದ ಬಂದ ಆನೇಕ ವಿದ್ಯಾರ್ಥಿಗಳು ಇವರ ಪ್ರಭಾವಕ್ಕೆ ಒಳಗಾಗಿ ಚಳವಳಿಯನ್ನು ಬೆಳೆಸುವಲ್ಲಿ ಕೈಜೋಡಿಸಿದರು. ಹೀಗೆ ಇದೊಂದು ಹೊಸಚಳುವಳಿಯಾಗಿ ಬೆಳೆಯಿತು. ಆದರೆ ಇದರ ಪ್ರಭಾವ ಕಲ್ಕತ್ತಾ ಮತ್ತು ಬಂಗಾಳದ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಹೊಸ ತಲೆಮಾರು ಇವರ ಪ್ರಭಾವಕ್ಕೆ ಒಳಗಾಗಿ ನೈತಿಕವಾಗಿ ಕುಸಿಯುತ್ತಿದೆ ಎನ್ನುವ ಅವರ ಸಹೋದ್ಯೋಗಿಗಳ ಮತ್ತು ಅವರ ದೆಂಬಲಿಗರ ಒತ್ತಡಕ್ಕೆ ಮಣಿದು ತಮ್ಮ ಉದ್ಯೋಗಕ್ಕೆ ರಾಜೀನಾಮೆಯನ್ನು ನೀಡಿದರು. ಸಿರೇಜಿಯಾ ಅವರು ಕೇವಲ 22 ವರ್ಷದವರಾಗಿದ್ದಾಗ 1831ರಲ್ಲಿ ಕಾಲರಾ ರೋಗಕ್ಕೆ ತುತ್ತಾಗಿ ತೀರಿಕೊಂಡರು.


ಆರ್ಯಸಮಾಜ :

187500 ಆಯಾಸದ ಸರಸ್ವತಿಯವರು ಆರ್ಯಸಮಾಜವನ್ನು ಆರಂಭಿಸಿದರು. ಇದು ಬಾಂಬೆಯಲ್ಲಿ ಪ್ರಾರಂಭವಾಯಿತು, ಹತ್ತೊಂಬತ್ತನೆಯ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಆಶಂತ ಪ್ರಭಾವಶಾಲಿಯಾಗಿತ್ತು. ದಯಾನಂದ ಸರಸ್ವತಿಯವರು 1824ರಲ್ಲಿ ಗುಜರಾತಿನ ಕಾರ್ಥವಾಡದಲ್ಲಿ ಜನಿಸಿದರು. ಇವರ ಆರಂಭಿಕ ಹೆಸರು ಮೂಲಶಂಕರ', ಇವ ತಂದೆ ಅಂಬಾಶಂಕರ ತಿವಾರಿ ಮತ್ತು ತಾಯಿ ಅಮೃತಾಬಾಯಿ, ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರದ ದಯಾನಂದರು ಸಂಸ್ಕೃತ ಶಿಕ್ಷಣವನ್ನು ಪಡೆದರು. 21ನೇ ವಯಸ್ಸಿನಲ್ಲಿ ಮನೆಬಿಟ್ಟ ಇವರು ಮುಂದಿನ ಸುಮಾರು 15 ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಿದರು, ದಯಾನಂದ ಸರಸ್ವತಿಯವರು ತಮ್ಮ ಆಲೋಚನಾ ಕ್ರಮವನ್ನು 'ಸತ್ಯಾರ್ಥ ಪ್ರಕಾಶ' ಎಂಬ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾರೆ. ಅವರು ವೇದಗಳ ಅಧ್ಯಯನದಿಂದ ಕಂಡುಕೊಂಡ ಅಂಶವೆಂದರೆ ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿವೆ. ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಅವರು ಘೋಷಿಸಿದ ಡಾಕ್ಯ ವೇದಗಳಿಗೆ ಮರಳೆ' ಎಂಬುದಾಗಿತ್ತು, ಆದ್ದರಿಂದ ಇವರು ಸುಧಾರಣಾವಾದಿಯೆಂಬುದಕ್ಕಿಂತ ಬದಲಿಗೆ ಪುನರುತ್ಥಾನ ವಾಡಿ ಎಂದೆನಿಸಿಕೊಂಡರು. 1877ರಲ್ಲಿ ಆರ್ಯಸಮಾಜದ ಕೇಂದ್ರ ಕಚೇರಿಯನ್ನು ಲಾಹೋರಿನಲ್ಲಿ ತೆರೆದರು. ವೇದಗಳು ಮಾತ್ರ ಪ್ರಮಾಣೀಕೃತ' ಎಂಬುದನ್ನು ಸಾರಿದರು.

ಆರ್ಯ ಸಮಾಜವು ಈ ಕೆಳಗಿನ ಉದ್ದೇಶಗಳನ್ನು ಹೊಂದಿತ್ತು

1 ಎಲ್ಲ ಹಿಂದುಗಳು ರೂಪವಿಲ್ಲದ ಒಬ್ಬನೇ ದೇವರಲ್ಲಿ ನಂಬಿಕೆಯಿಡಬೇಕು.

 2, ಹುಟ್ಟಿನಿಂದ ಯಾರೂ ಶೂದ್ದರೂ ಪರವಾ ಬಾಣರೂ ಅಲ್ಲವೆಂದು ಜಾತಿ ಆಧಾರವನ್ನು ತಿರಸ್ಕರಿಸುವುದು.

3. ಅಂತರ್ಜಾತೀಯ ವಿವಾಹಗಳನ್ನು ಹೊತ್ತಾಹಿಸುವುದು.

4 ಬಹುಪುಷ್ಟಿತ್ವ ಮತ್ತು ಬಾಲ್ಯವಿವಾಹ ಪದ್ಧತಿಯನ್ನು ತಿರಸ್ಕರಿಸುವುದು.

5 ಸ್ತ್ರೀ ಮತ್ತು ಪುರುಷರು ಸಮಾನರು.

6 ವೇದಗಳು ಮಾತ್ರ ಶ್ರೇಷ್ಟ ಪ್ರಾಚೀನ ಪವಿತ್ರ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಮತ್ತು ಬೋಧಿಸಬೇಕು, ಆರ್ಯ ಸಮಾಜದ ಮತ್ತೊಂದು ಪ್ರಮುಖ ಕಾರ್ಯಸೂಚಿ ಎಂದರೆ ‘ಶುದ್ಧಿ’ ಚಳವಳಿ, ಹಿಂದೂಧರ್ಮ ದಿಂದ ಇಸ್ಲಾಂ ಮತ್ತು ಕ್ರೈಸ್ತಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಒಂದೂ ಧರ್ಮಕ್ಕೆ ಸೇರಿಸಿಕೊಳ್ಳುವುದು. ಗೋವುಗಳ ರಕ್ಷಣೆಗೆ ‘ಗೋ ರಕ್ಷಣಾ ಸಂಘವನ್ನು ಆರಂಭಿಸಿದರು.

ಆರ್ಯ ಸಮಾಜವು 1921ರ ವೇಳೆಗೆ ಸುಮಾರು 5 ಲಕ್ಷ ಅನುಯಾಯಿಗಳನ್ನು ಹೊಂದಿತ್ತು. ದಯಾನಂದ ಸರಸ್ವತಿಯವರ ಮರಣಾನಂತರ ಪ್ರಸಿದ್ಧ ‘ದಯಾನಂದ ಆಂಗ್ಲ-ವೇದಿಕ್‌-ಕಾಲೇಜ’ನ್ನು 1886ರಲ್ಲಿ ಪ್ರಾರಂಭಿಸಲಾಯಿತು. ಹಾಗೆಯೇ ಹರಿದ್ವಾರದಲ್ಲಿ ‘ಗುರುಕುಲ ವಿಶ್ವವಿದ್ಯಾಲಯ’ವನ್ನು ಆರಂಭಿಸಲಾಳು, ಭಾರತೀಯ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ತೀವವಾದಿಗಳಾದ ಲಾಲಾ ಲಜಪತ್‌ರಾಯ್ ಅವರು ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆ ಪಡೆದಿದ್ದರು.


ಪ್ರಾರ್ಥನಾ ಸಮಾಜ

ಬಸಮಾಜದ ಸುಧಾರಣಾ ಚಳುವಳಿಯು ಬಂಗಾಳದ ಪ್ರದೇಶವನ್ನು ಏರಿ ಕ್ರಮೇಣ ಬೇರೆ ಕಡೆಗೆ ಹಬ್ಬಲು ಪ್ರಾರಂಭಿಸಿತು, ಬಹ್ಮಸಮಾಜದಿಂದ ತಾತ್ವಿಕ ಪ್ರಭಾವದಿಂದ ಈ ಸಮಾಜವು ಸಮಾಜ ಸುಧಾರಣಾ ಚಳವಳಿಯನ್ನು ರೂಪಿಸಿತು, ಪಶ್ಚಿಮ ಭಾರತದಲ್ಲಿ, ವಿಶೇಷವಾಗಿ ಸಾಂಬೆ ಪ್ರೆಸಿಡೆನ್ಸಿ ಭಾಗದಲ್ಲಿ ಸುಧಾರಣಾ ಚಳವಳಿಯು ಬೆಳೆಯತೊಡಗಿತು.

ಮಹಿಳೆಯರ ಸಮಸ್ಯೆಗಳನ್ನಷ್ಟೇ ಅಲ್ಲದೆ ಶೂದ್ರಾತಿಶೂದ್ರ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಹಿನ್ನೆಲೆಯಲ್ಲಿ ಡಾ. ಆರಾಮ್ ಪಾಂಡುರಂಗ ಆದರೆ ನತೃತ್ವದಲ್ಲಿ ಮುಂಬೈಯಲ್ಲಿ 1867ರಲ್ಲಿ ಪ್ರಾರ್ಥನಾ ಸಮಾಜ ಎಂಬ ಸಂಘಟನೆ ಪ್ರಾರಂಭವಾಯಿತು. ಪಶ್ಚಿಮದ ಆಧುನಿಕ ಆಲೋಚನೆಗಳ ಹಿನ್ನೆಲೆಯಲ್ಲಿ ಹಿಂದೂ ಧರ್ಮವನ್ನು ಪುನರ್ ವಿಮರ್ಶಿಸಿಕೊಳ್ಳುವ ಅಗತ್ಯವಿದೆ ಎಂದು ಈ ಸಂಘಟನೆಯು చదివాడు. ಸಮಾಜ ಸುಧಾರಣೆಯೆಂಬುದು ಕೇವಲ ತಂಬಿಕೆಯಾಗಿ ಉಳಿಯದೆ ವಾಸ್ತವದಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಒತ್ತಾಯಿಸಿತು. ಈ ಸಂಸ್ಥೆಯ ನೇತೃತ್ವದಲ್ಲಿ ಸ್ತ್ರೀಯರ ಶಿಕ್ಷಣ, ನಿರ್ಗತಿಕರಿಗೆ ಬದುಕುವ ಆಸರೆಯನ್ನು ಕಲಿಸುವುದು ಮುಂತಾದ ಕಾರ್ಯಕ್ರಮಗಳು ಅನುಷ್ಠಾನಗೊಂಡವು.

ಪ್ರಾರ್ಥನಾ ಸಮಾಜದ ಇತರೆ ನಾಯಕರೆಂದರೆ, ನ್ಯಾಯಮೂರ್ತಿಗಳಾದ ಮಹದೇವ ಗೋವಿಂದ ರಾನಡೆ, ಆರ್‌.ಜಿ. ಭಂಡಾರ್ಕರ್ ಮತ್ತು ಎನ್.ಜಿ.ಚಂದಾವರ್ಕರ್ ಮುಖ್ಯರಾದವರು, ರಾನಡೆಯವರ ನೇತೃತ್ವದಲ್ಲಿ ಪ್ರಾರ್ಥನಾ ಸಮಾಜದ ಸುಧಾರಣಾ, ವ್ಯಾಪ್ತಿಯು ಮತ್ತಷ್ಟು ಹೆಚ್ಚಾಯಿತು. ರಾನಡೆಯವರು ಬಾಲ್ಯವಿವಾಹ ವಿಧವೆಯರನ್ನು ಸದಸ್ಯರ ಬದುಕಿನಿಂದ ಹೊರತರುವುದು, ಉನ್ನತಜಾತಿಗಳಲ್ಲಿ ವಿಧವಾ ಪುನರ್ ವಿವಾಹ ನಿಷೇಧಗಳನ್ನು ಸುಧಾರಣೆಗೆ ಹಕ ಕಮ ಆತ್ಮವಲ್ಲವೆಂದು ಭಾವಿಸಿದರು. ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಸರಕಾರದ ನೆರವನ್ನು ಪಡೆಯುವುದು ಸರಿಯಾದ ಕ್ರಮವೆಂದರು.


ಸತ್ಯಶೋಧಕ ಸಮಾಜ

ಭಾರತದ ಉಳಿದ ಭಾಗಗಳಲ್ಲಿ ಇದ್ದಂತೆ ಮಹಾರಾಷ್ಟ್ರದಲ್ಲಿಯೂ ಜಾತಿ ಮತ್ತು ಲಿಂಗ ನೆಲೆಗಳ ಶೋಷಣೆಗಳು ವ್ಯಾಪಕವಾಗಿದ್ದವು. ಬ್ರಿಟಿಷ್ ವಸಾಹತುಶಾಹಿ ಕಾಲಘಟ್ಟದಲ್ಲಿ ಈ ಬಗೆಯ ಶೋಷಣೆಗಳ ವಿರುದ್ಧ ಅನೇಕ ಚಳವಳಿಗಳು ಹುಟ್ಟಿಕೊಂಡವು, ಈ ಹಿನ್ನೆಲೆಯಲ್ಲಿ 1873ರಲ್ಲಿ ಹುಟ್ಟಿದ ಸತ್ಯಶೋಧಕ ಸಮಾಜವು ಬ್ರಾಹ್ಮಣೇತರ ವರ್ಗಗಳಿಗೆ ಮತ್ತು ಸ್ತ್ರೀಯರಿಗೆ ಸಮಾನತೆಯ ಹಕ್ಕುಗಳನ್ನು ದೊರಕಿಸಿಕೊಡುವ ಚಳವಳಿಯನ್ನು ಪ್ರಾರಂಭಿಸಿತು. ಈ ಸಮಾಜವನ್ನು ಮಹಾತ್ಮ ಜ್ಯೋತಿಭಾ ಫುಲೆಯವರು ಸ್ಥಾಪಿಸಿದರು. ಸೈದ್ಧಾಂತಿಕ ಹೋರಾಟವನ್ನು ಕಟ್ಟುವ ಹಿನ್ನೆಲೆಯಲ್ಲಿ ‘ಗುಲಾಮಗಿರಿ’ ಶೀಟ್ಯಾರ್ಯಚಾ: ಆಸೂದ್ ಎನ್ನುವ ಗಂಘ ರಚಿಸಿದರು. ಶಾಲೆಗಳನ್ನು ಪ್ರಾರಂಭಿಸಿ ಶೂದ್ದರಿಗೆ ಮತ್ತು ಹೆಣ್ಣುಮಕ್ಕಳಿಗೆ ವಿದ್ಯೆಯನ್ನು ನೀಡಿದರು. ಮಾಲಿ ಸಮುದಾಯಕ್ಕೆ ಸೇರಿದ್ದ ಫುಲೆಯವರು ತಮ್ಮ ಬಾವಿಯಲ್ಲಿ ಅಸ್ಪೃಶ್ಯರು ಮತ್ತು ಎಲ್ಲ ಜಾತಿಯವರಿಗೂ ನೀರು ಸೇವಿಕೊಳ್ಳಲು ಅವಕಾಶವನ್ನು ಕೊಟ್ಟರು. ಮನೆಯವರ ಈ ಪ್ರಯತ್ನದಲ್ಲಿ ಅದರ ಪತ್ನಿ ಸಾವಿತ್ರಿಬಾಯಿ ಫುಲೆಯವರು ಒತ್ತಾಸೆಯಾಗಿದ್ದರು. ಇವರ ಪ್ರಯತ್ನದಿಂದ ಹೆಣ್ಣುಮಕ್ಕಳಿಗೆ ವಸತಿ ನಿಲಯವನ್ನು ಸ್ಥಾಪಿಸಲಾಯಿತು. ಸಮಾನತೆಯ ಆಶಯದ ತಳಹದಿಯ ಮೇಲೆ ಹೊಸ ಸಮಾಜವನ್ನು ನಿರ್ಮಿಸುವ ಆಧುನಿಕ ಕಾಲಘಟ್ಟದ ಪ್ರಯತ್ನಗಳಲ್ಲಿ ಮಲೆ ದಂಪತಿಗಳ ಪ್ರಯತ್ನ ಮುಖ್ಯವಾದದ್ದು. ಇವರ ಆಶಯಗಳಿಂದ ಪ್ರೇರಣೆ ಪಡೆದವರಲ್ಲಿ ಬಾಬಾಸಾಹೇಬ ಅಂಬೇಡ್ಕರ್‌ರು ಮುಖ್ಯರು

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು