ಮಧ್ಯಕಾಲೀನ ಭಾರತದ ಇತಿಹಾಸ - ಭಕ್ತಿ ಪಂಥ (ಭಾಗ 2)

 ಶಿಶುನಾಳ ಶರೀಫ (ಸುಮಾರು 1819-1889)

ಇಮಾಮ್-ಹಜಮಾ- ಇವರ ತಂದೆ-ತಾಯಿಗಳು ಇಂದಿನ ಗದಗ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳದಲ್ಲಿ ಶರೀರು 1819ರಲ್ಲಿ ಜನ್ಮ ತಳೆದರು ಬಾಳ್ವೆಯ ಸಲಹೆಯ ಮೇರೆಗೆ ತಂದ ಇಮಾಮ್ ಸಾಹೇಬ ಮಗುವಿಗೆ ‘ಮಹಮದ್ ಶರೀಫ ಎಂದು ನಾಮಕರಣ ಮಾಡಿದರು. 'ಕಫ' ಪಾರ್ಸಿ ಶಬ್ದ, ಉದಾತ್ತ ಧೈಯಗಳ ಅಥವಾ ಉತ್ತಮ ೨೨ ಸ್ವಭಾವ ಹೊಂದಿ ಇತರರಿಂದ ಗೌರವಿಸಲ್ಪಡುವ ವ್ಯಕ್ತಿ ಎಂದರ್ಥ ಹೆಸರಿಗೆ ತಕ್ಕಂತೆಯೇ ಶರೀಫ ರೂಪುಗೊಂಡರು. ಶಿಶುನಾಳ ಶರೀಫರು ಚಿಕ್ಕಂದಿನಿಂದಲೇ ಇಸ್ಲಾಂ. ವೀರಶೈವ ಹಾಗೂ ವೈದಿಕ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದರು. ತ್ರಿಕಾಲ ಜ್ಞಾನಿಯಾಗಿದ್ದ ಗೋಎಂದಭಟ್ಟರು ಇವರ ಗುರುಗಳು, ಶಿಶುನಾಳದ ಮಕ್ಕಳಿಗಾಗಿ ಶರೀಫ ಸ್ಥಳೀಯ ಚಂದ್ರೇಶ್ವರ ಶಿಶುನಾಳ ಶರೀಫ ದೇವಾಲಯದಲ್ಲಿ ತಾಳೆ ತೆರೆಯುವ ಮೂಲಕ ಅವರಲ್ಲಿ ಧಾರ್ಮಿಕ ವಿಶಾಲ ಮನೋಭಾವ ಬೆಳೆಯಲು ಕಾರಣರಾದರು.

ಸಂಘ ಜೀವಿಯಾಗಿದ್ದು, ಪ್ರದೇಶದಲ್ಲಿ ನಡೆಯುತ್ತಿದ್ದ ಜಾತ್ರೆ, ಉತ್ಸವ, ಬಯಲಾಟ, ಮೊಹರು ಉತ್ಸವಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನತೆಗೆ ಸ್ಫೂರ್ತಿಯ ಸೆಲೆಯಾಗುತ್ತಿದ್ದರು. ಮೊಹರಂ ಹಿನ್ನೆಲೆಯ ಚಾರಿತ್ರಿಕ ಸಂಗತಿಗಳನ್ನು ಅನುಸರಿಸಿ ರಿವಾಯತ್ ನಡೆಸುವ ಮೂಲಕ ರಿವಾಯತ್ ಸಾಹಿತ್ಯದ ಹರಿಕಾರರಾದರು.

ಪುರಂದರದಾಸರು (ಸುಮಾರು 1484-1564)

ದಾಸರೆಂದರೆ ಪುರಂದರದಾಸರಯ್ಯ ಎಂದು ಗುರುಗಳಾದ ವ್ಯಾಸರಾಯರಿಂದ ಪ್ರಶಂಸೆಗೆ ಪಾತ್ರವಾಗಿರುವ ಪುರಂದರದಾಸರು ವೈಷ್ಣವ ಭಕ್ತಿ ಪಾರಮ್ಯದ ಹರಿ ಸಂಕೀರ್ತನಗಳ ಮುಖಾಂತರ ಕನ್ನಡ ಸಾಹಿತ್ಯ, ಕರ್ನಾಟಕ ಸಂಗೀತಕ್ಕೆ ಮೌಖಿಕ ಕೊಡುಗೆ ನೀಡಿ, ‘ಕರ್ನಾಟಕ ಸಂಗೀತ ಪಿತಾಮಹ’ ಎಂದೇ ಹೆಸರಾಗಿದ್ದಾರೆ.

ಪುರಂದರರು ಇಂದು ಮಹಾರಾಷ್ಟ್ರದಲ್ಲಿರುವ ಪುರಂದರಘಡ ಆಗರ್ಭ ಶ್ರೀಮಂತ ವರ್ತಕ ಕುಟುಂಬದಲ್ಲಿ ಜನಿಸಿದರು. ವರದಪ್ಪನಾಯಕ ಮತ್ತು ಲಕ್ಷ್ಮಿ ದೇವಿ ಇವರ ತಂದೆ ತಾಯಿಗಳು, ಇವರ ಪೂರ್ವಾಶ್ರಮದ ಹೆಸರು ಸೀನಪನಾಯಕ, ಚಿನ್ನದ ವ್ಯಾಪಾರ ಮಾಡುತ್ತಿದ್ದ ಸಿನವಿನಾಯಕ ಕಟ್ಟು ನಿಟ್ಟಿನ ವ್ಯವಹಾರಸ್ಥರಾಗಿದ್ದರು ಮುಂದೆ ತಮ್ಮ ಸತಿ ಸರಸ್ವತಿಭಾಯಿಯ ಒತ್ತಾಸೆಯಿಂದ ಮನಪರಿವರ್ತನೆಗೊಂಡು ಪುರಂದರದಾಸರಾಗಿ ಆಧ್ಯಾತ್ಮದತ್ತ ಸಾಗಿದರು.

ಮಾಧ್ವಮತದ ಪ್ರಚಾರವನ್ನು ತಮ್ಮ ಕೀರ್ತನೆಗಳ ಮೂಲಕ ಕೈಗೊಂಡ ಪುರಂದರದಾಸರು ಆನೇಕ ಪವಿತ್ರ ಕ್ಷೇತ್ರಗಳನ್ನು ಸುತ್ತಿದರು. ತಿರುಪತಿ, ಶ್ರೀರಂಗಪಟ್ಟಣ, ಅರು, ಉಡುಪಿ, ಕಂಚಿ, ಕನಕಾಚಲ, ಕಾಫಿ, ಕುಂಭಕೋಣ, ಕೂಡಲಿಪುರ, ಹಸ್ತಿಗಿರಿ, ಕಾಳಹಸ್ತಿ, ಶಿಶೈಲ, ಘಟಿಕಾಚಲ, ಗದಗ, ಪಂಢರಪುರ, ಬೇಲೂರು, ಮನ್ನೂರು, ಮಳೂರು, ಮೇಲುಕೋಟೆ, ಹಂಪಿ, ಹರಿಹರ, ಮುಂತಾದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಪುರಂದರದಾಸರು ನಸಾಮಾನ್ಯರಿಗೆ ಭಕ್ತಿ ಮಾರ್ಗವನ್ನು ಬೋಧಿಸಿದರು.

ಪುರಂದರದಾಸರು ತಮ್ಮ ಸಂಕೀರ್ತನೆಗಳಲ್ಲಿ ಮುಖ್ಯವಾಗಿ ವೈಷ್ಣವ ಪಾರಮ್ಯ-ಪ್ರಪಕ್ತಿಯ ಜೊತೆಗೆ ಸಾಮಾಜಿಕ ಕಳಕಳಿ, ಡಾಂಭಿಕ ಭಕ್ತಿಯ ವಿಡಂಬನೆ, ಜೀವನ ತತ್ರಗಳ ಕುರಿತಾಗಿ ಅಭಿವ್ಯಕ್ತಿಪಡಿಸಿರುವುದನ್ನು ಕಾಣಬಹುದು. ಅವರು ಜಾತಿ ಮತಗಳನ್ನು ಎಂಡಿಸಿದರು. ಯಾಗ ಯತ್ನಗಳನ್ನು ತಿರಸ್ಕರಿಸಿ, ಮೂಢ ನಂಬಿಕೆಗಳನ್ನು ಅಲ್ಲಗಳೆದರು. ತೋರಿಕೆಯ ಭಕ್ತಿಯನ್ನು ತಿರಸ್ಕರಿಸಿದ ಅವರು ಅಂತರಿಕ ಹುಡುಕಾಟಕ್ಕೆ, ಆತ್ಮಶೋದನೆಗೆ ಪ್ರಾಮುಖ್ಯತೆಯನ್ನು ಕೊಟ್ಟರು. ಅಂತರಂಗ ಶುದ್ಧಿಯಾಗದೆ ಬಹಿರಂಗ ಶುದ್ಧಿ ವ್ಯರ್ಥವೆಂದು ತಿಳಿಸಿದರು. ಮನವ ತೊಳೆಯದೆ ಮಲವ ತೊಳೆಯುವುದರಿಂದೇನು ಪ್ರಯೋಜನವೆಂದು ಪ್ರಶ್ನಿಸಿದರು. ನೀರಿನಲ್ಲಿ ಕುಳಿತು ಧ್ಯಾನ ಮಾಡುವ ಡಾಂಭಿಕರನ್ನು ಬಕಪಕ್ಷಿಗಳಿಗೆ ಹೋಲಿಸಿದರು. ಮನದಲ್ಲಿ ದೃಢಭಕ್ತಿಯಿಲ್ಲದೆ ತನುವ ನೀರೊಳಗದ್ದುವುದು ವ್ಯರ್ಥವೆಂದು ಸ್ಪಷ್ಟಪಡಿಸಿದರು.

“ಈಸಬೇಕು ಇದ್ದು ಜೈಸಬೇಕು: ಮಾನವ ಜನ್ಮ ದೊಡ್ಡದು. ಇದನ್ನು ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ” ಎಂಬಂತಹ ಜೀವನ ತತ್ವಜ್ಞಾನವನ್ನು ನೀಡಿ ಪೌರುಷವಾದವನ್ನು ಹಾಸುಹೊಕ್ಕಾಗಿಸಿ, ಎಲ್ಲರ ಮನಮನಗಳಲ್ಲಿ ಭಿತ್ತಿ ಬೆಳಸಿದರು. ಪುರಂದರ ಒಂದೊಂದು ಸಂಕೀರ್ತನೆಯೂ ಮನುಜ ಕುಲಕ್ಕೆ ಜ್ಞಾನ ದೀವಿಗೆಗಳಾಗಿ ಮನುಷ್ಯ ಬದುಕನ್ನು ಸಾರ್ಥಕವಾಗಿಸುವ ಬತ್ತದ ಸೆಲೆಯಾಯಿತು. ಅವರ ಜ್ಞಾನದ ಈ ಭಂಡಾರವೆಲ್ಲ ಕನ್ನಡದ ಪುರಂದರೋಪನಿಷತ್ತಾಗಿ “ದಾಸರೆಂದರೆ ಪುರಂದರ ದಾಸರಯ್ಯ” ಎಂಬಂತಹ ಖ್ಯಾತಿಗೆ ಕಾರಣವೂ ಆಯಿತು.

ಕನಕದಾಸರು

ಜೀವಪ್ಪ ಮತ್ತು ಬಚ್ಚಮ್ಮ ಕನಕರ ತಂದೆ ತಾಯಿಗಳು ಶ್ರೀ ವೈಷ್ಣವ ಮತಾನುಯಾಯಿಗಳಾಗಿದ್ದರು ತನಗೆ ಜನಿಸಿದ ಓರ್ವನೇ ಪುತ್ರನಿಗೆ ತನ್ನ ಕುಲದೈವ ವೆಂಕಟಪತಿಯ ಹೆಸರಿಡಬೇಕೆಂದು ತಿಮ್ಮಪ್ಪನೆಂಬುದಾಗಿ ನಾಮಕರಣ ಮಾಡಿದರು.

ಒಮ್ಮೆ ತಿಮ್ಮಪ್ಪನಿಗೆ ಭೂಗತವಾಗಿದ್ದ ಅಪಾರ ಧನರಾಶಿಯು ಕರಗತವಾದುದ್ದನ್ನು ನೋಡಿ ಅದೃಷ್ಟವಂತನೆಂದು ಅವನನ್ನು ಜನರು ಕನಕನೆಂದೇ ಕರೆದರು. ಕನಕರು ತಮಗೆ ದೊರೆತ ದ್ರವ್ಯವನ್ನು ದುರ್ವಿನಿಯೋಗ ಮಾಡದ ಕಾಗಿನೆಲೆಯಲ್ಲಿ ಪ್ರಸಿದ್ಧ ಆದಿಕೇಶವ ದೇವಾಲಯವನ್ನು ನಿರ್ಮಿಸಿದರೆಂದು ಹೇಳಲಾಗಿದೆ.

ಬಾಡ ಮತ್ತು ಬಂಕಾಪುರದ ಸ್ಥಳೀಯ ನಾಯಕನಾಗಿದ್ದ ಕನಕರ ಚಿಕ್ಕಂದಿನಿಂದಲೂ ಯುದ್ಧ ಪ್ರವೀಣನಾಗಿದ್ದರು. ಒಮ್ಮೆ ಯುದ್ಧ ರಂಗದಲ್ಲಿ ತೀವ್ರವಾಗಿ ಗಾಯಗೊಂಡ ಕನಕರು ಅಧಿಕಾರದ ಹಾಗೂ ಒಟ್ಟಾರೆ ಬದುಕಿನ ಅನಿಶ್ಚಿತತೆಯ ಬಗೆಗೆ ಜಿಗುಪ್ಪೆಯನ್ನು ತಳೆದು, ಲೌಕಿಕ ಸುಖವನ್ನು ತ್ಯಜಿಸಿ ವಾಸಮಾರ್ಗವನ್ನು ಅನುಸರಿಸಿ ಕನಕದಾಸರಾದರೆಂದು ಪ್ರತೀತಿಯೊಂದು ಹೇಳುತ್ತದೆ.

ಒಬ್ಬ ಭಕ್ತಿ ಸಂತರಾಗಿ ಕನಕದಾಸರು ಅಂದಿನ ಸಮಾಜದಲ್ಲಿದ್ದ ಮೇಲು-ಕೀಳು, ಉಚ್ಚ-ನೀಚ ಪರಿಭಾವನೆಯನ್ನು ಹೋಗಲಾಡಿಸಲು ಹೋರಾಡಿದ್ದಾರೆ. ಡಾಂಭಿಕ ಭಕ್ತಿಯನ್ನು ತೆಗಳಿದ್ದಾರೆ. ನೈಜ ಭಕ್ತಿಮಾರ್ಗದಿಂದ ಜನರು ದೈವಸಾನಿದ್ಯವನ್ನು ಪಡೆಯಬಹುದೆಂದು ಬೋಧಿಸಿದ್ದಾರೆ. ಭಕ್ತಿ ಮಾರ್ಗದ ಸರಳತೆಯನ್ನು ತೋರಿಸಿದ್ದಾರೆ. ಮುಖ್ಯವಾಗಿ ದೈವಸಾಕ್ಷಾತ್ಕಾರಕ್ಕೆ ಉತ್ತಮ ಜಾತಿಯಲ್ಲಿ ಹುಟ್ಟಿರಬೇಕೆನ್ನುವ ಅರ್ಹತೆಯನ್ನು ಪ್ರತಿಪಾದಿಸುತ್ತಿದ್ದ ಪುರೋಹಿತ ವರ್ಗಗಳನ್ನು ತಮ್ಮ ಕೀರ್ತನೆಗಳ ಮೂಲಕ ಒಡೆದುಹಾಕಿದ್ದಾರೆ.

ಕನಕದಾಸರು ಒಬ್ಬ ಭಕ್ತಿ ಕವಿಯೂ ಆಗಿದ್ದು ಅಸಂಖ್ಯ ಸಂಕೀರ್ತನೆಗಳ ಜೊತೆಗೆ ಆನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅವುಗಳು ಮೋಹನತರಂಗಿಣಿ, 'ನಳಚರಿತೆ', 'ರಾಮಧಾನ್ಯ ಚರಿತೆ’ ಮತ್ತು 'ಹರಿಭಕ್ತಿಸಾರ' ಮುಖ್ಯವಾದವುಗಳಾಗಿವೆ.

ಭಕ್ತಿಚಳವಳಿಯ ಪರಿಣಾಮಗಳು

ಹಿಂದೂಗಳು ಮತ್ತು ಮುಸ್ಲಿಂ ಸಮುದಾಯಗಳಲ್ಲಿದ್ದ ಮೌಡ್ಯಾಚರಣೆಗಳ ಅರ್ಥಹೀನತೆಯನ್ನು ಸಾರುವುದು ಹಿಂದೂ ಮತ್ತು ಮುಸಲ್ಮಾನರಲ್ಲಿ ಮಧುರ ಬಾಂಧವ್ಯವನ್ನು ಉಂಟು ಮಾಡುವುದು ಭಕ್ತಿ ಪಂಥದ ಎರಡು ಮುಖ್ಯ ಉದ್ದೇಶಗಳಾಗಿದ್ದು, ಹಿಂದೂ ಮಾಜದಲ್ಲಿನ ಅನೇಕ ನ್ಯೂನತೆಗಳನ್ನು ಸುಧಾರಕರು ನಿವಾರಿಸಿದರು. ಭಾರತದ ಪ್ರಾದೇಶಿಕ ಭಾಷೆಗಳು ವಿಕಾಸಗೊಂಡವು, ಅವರು ದೇಶಿ ಭಾಷೆಗಳಲ್ಲಿ ಬರೆದು ಅವುಗಳ ಬೆಳವಣಿಗೆಗೆ ಸಹಾಯ ಮಾಡಿದರು. ಈ ಚಳವಳೆಯು ಭಾರತೀಯ ಸಂಸ್ಕೃತಿಯ ವಿಕಾಸಕ್ಕೆ ಕಾರಣವಾಗಿ ಬಹುಸಂಸ್ಕೃತಿಗಳ ಸಂಗದು ಎಂಬ ಹೆಗ್ಗಳಿಕೆಯನ್ನು ಭಾರತಕ್ಕೆ ತಂದುಕೊಟ್ಟಿದೆ.

ನಿಮಗಿದು ತಿಳಿದಿರಲಿ :

ಭಕ್ತಿ ಪಂಥದಲ್ಲಿ ಸಂತರು ಮಾಡುವ ಭಾಷೆಯಲ್ಲಿಯೇ ಕೀರ್ತನೆಗಳನ್ನು ಹಾಗೂ ಭಜನೆಗಳನ್ನು ರಚಿಸಿದರು. ಇದರಿಂದಾಗಿ ಭಾರತೀಯ ಭಾಷೆಗಳಲ್ಲಿ ದಹಿಸಿ ಸಾಹಿತ್ಯ ಅಭಿವೃದ್ಧಿಗೊಂಡಿತು. ಹಿಂದಿಯಲ್ಲಿ ಸೂರದಾಸರು “ಸೂರ್ ಸಾಗರ್ ನ, ತುಳಸೀದಾಸರು “ರಾಮಚರಿತ ಮಾನಸವನ್ನು ರಚಿಸಿದರೆ, ಮರಾಠಿಯಲ್ಲಿ ಅಭಂಗಗಳೆಂಬ ಕೀರ್ತನೆಗಳ ಜೊತೆಗೆ ಜ್ಞಾನದೇವರ “ಜಾನೇಶಂ” ಕಾವ್ಯವ ರಚನೆಯಾದವು.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು