ಮಧ್ಯಕಾಲೀನ ಭಾರತದ ಇತಿಹಾಸ - ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು (2)

 ಆಲಿಘರ್ ಸುಧಾರಣಾ ಚಳವಳಿ

ಹತ್ತೊಂಬತ್ತನೆ ಶತಮಾನದ ಕೊನೆಯ ಭಾಗದಲ್ಲಿ ಮುಸ್ಲಿಂ ಸಮಾಜದಲ್ಲಿ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣಾ ಅಲೆಯು ಪಾರಂಭವಾಯಿತು. ಬ್ರಿಟಿಷರ ವಿರೋಧಿ ಮನೋಧರ್ಮವ 1857ರ ಘಟನೆಯ ನಂತರ ಮುಸ್ಲಿಂ ಸಮುದಾಯದಲ್ಲಿ ವ್ಯಾಪಕವಾಗಿ ಬೆಳೆಯಲು ಆರಂಭಿಸಿತು. ಇದರ ಪರಿಣಾಮವಾಗಿ ಇಂಗ್ಲಿಷ್ ಶಿಕ್ಷಣದಿಂದ ದೂರಾಗ ತೊಡಗಿ ಶಿಕ್ಷಣದ ಅರ್ಪತೆಯಿಂದ ದೊರೆಯಬಹುದಾದ ಅವಕಾಶಗಳನ್ನು ಕಳೆದುಕೊಂಡರು. ಇಂತಹ ಸಂದರ್ಭವನ್ನು ಗ್ರಹಿಸಿದ ಸರ್ ಸಯ್ಯದ ಅಹಮದ್ ಖಾನ್‌ರು ಹೊಸ ಚಳವಳಿಯನ್ನು ರೂಪಿಸಲು ಯತ್ನಿಸಿದರು. 183ರಲ್ಲಿ ಆರಂಭಗೊಂಡ ಮಹಮದನ್ ಲಿಟರು ) ಸೊಸೈಟಿಯ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳಿಗೆ ಚರ್ಚೆಗಳನ್ನು ಮಾಡತೊಡಗಿತು. ಈ ಚರ್ಚೆಗಳಲ್ಲಿ ಉನ್ನತ ಮತ್ತು ಸರ್ ಸಯ್ಯದ್ ಅಹಮದ್ ಖಾನ್ ಸಂಬಂಧಿಸಿದ ಮಧ್ಯಮ ವರ್ಗದ ಮುಸ್ಲಿಮರು ಭಾಗವಹಿಸುವ ಮೂಲಕ ಇಂಗ್ಲಿಷ್ ಶಿಕ್ಷಣದ ಮಹತ್ವವನ್ನು ಆರಿಯತೊಡಗಿದರು, ಸರ್ ಸಯ್ಯದ್ ಅಹಮದ್ ಖಾನ್‌ರ ಪ್ರಯತ್ನಗಳಿಂದ ಹೊಸ ವಿಚಾರಗಳ ಹುಡುಕಾಟದ ಪ್ರಯತ್ನವು ಅಲಿಘರ್ ಚಳವಳಿಯಾಗಿ ರೂಮಗೊಂಡಿತು.

ಸರ್ ಸಯ್ಯದ್ ಅಹಮದ್ ಖಾನ್ ಬದುಕಿನ ಕಾಲಘಟ್ಟ: HT7-1898, ಕುರಾನ್ ಗ್ರಂಥವು ಮಾತ್ರ ಪ್ರಮಾಣೀಕೃತ, ಇಸ್ಲಾಂನ್ನು ಕುರಿತಾದ ಇತರ ಬರಹಗಳು ಕೇವಲ ಆನುಷಂಗಿಕವೆಂದು ಘೋಷಿಸಿದರು. ಕಾಲ ಬದಲಾದಂತೆ ಧರ್ಮವನ್ನು ಅರ್ಥೈಸಿಕೊಳ್ಳುವ ಮತ್ತು ಪರಿಭಾವಿಸುವ ರೀತಿಯೂ ಬದಲಾಗಬೇಕು. ಇಲ್ಲದಿದ್ದರೆ ಧರ್ಮವೆಂಬುದು ಜಡವಾಗುತ್ತದೆ ಎಂದು ಹೇಳಿದರು. ಅಹಮದ್ ಖಾನ್‌ರು ತಮ್ಮ ಇಡಿ ಒದುಕಿನ ಉದ್ದಕ್ಕೂ ಸಂಪ್ರದಾಯ, ಡ್ಯಗಳು, ಆಜಾನ ಮತ್ತು ಅವೈಜ್ಞಾನಿಕ ಮನೋಧರ್ಮದ ವಿರುದ್ಧ ಹೋರಾಡಿದರು.

 ತೆರೆದ ಮನಸ್ಸು ಇಲ್ಲದಿದ್ದರೆ ಯಾವ ಸಾಮಾಜಿಕ ಮತ್ತು ಬೌದ್ಧಿಕ ಪ್ರಗತಿ ಸಾಧ್ಯವಿಲ್ಲವೆಂದರು. ಮುಸ್ಲಿಂ ಸಮುದಾಯದಲ್ಲಿದ್ದ ಪರದಾಪದ್ಧತಿಯನ್ನು ಬೆಂಬಲಿಸಲಿಲ್ಲ. ಮುಸ್ಲಿಂ ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು ಎಂದು ಸಾರಿದರು. ಬಹುಪತ್ನಿತ್ವ ಪದ್ಧತಿಯನ್ನು ಒಪ್ಪಲಿಲ್ಲ. ಈ ಎಲ್ಲ ಅಂಶಗಳು ಅವರ ಹೋರಾಟದ ಭಾಗವಾಗಿದ್ದವು. ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು 1875ರಲ್ಲಿ ಮಹಮದನ್ ಆಂಗ್ಲೋ ಓರಿಯಂಟಲ್ ಕಾಲೇಜನ್ನು ಆಲಿಘರ್‌ನಲ್ಲಿ ಸ್ಥಾಪಿಸಿದರು. ಪಾಶ್ಚಿಮಾತ್ಯ ವಿಜ್ಞಾನ ಮತ್ತು ಸಂಸ್ಕೃತಿ ಕುರಿತು ಚಿಂತನೆಗಳನ್ನು ಹರಡಲು ಈ ಸಂಸ್ಥೆಯನ್ನು ಬಳಸಿದರು. ಈ ಸಂಸ್ಥೆಯೇ ಆನಂತರದಲ್ಲಿ ಆಲಿಫರ್‌ ಮುಸ್ಲಿಂ ವಿಶ್ವವಿದ್ಯಾಲಯವಾಯಿತು.

ಸಯ್ಯದ್ ಅಹಮದ್ ಖಾನ್‌ರವರು ಧಾರ್ಮಿಕ ಸಹಿಷ್ಣುತೆಯನ್ನು ಬೋಧಿಸಿದರು. ಆರಂಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಐಕ್ಯತೆಯನ್ನು ಬಯಸಿದರು. ಹಿಂದೂಗಳು, ಪಾರ್ಸಿಗಳು, ಕ್ರಿಶ್ಚಿಯನ್ನರು, ಆಲಿಘರ್‌ ಕಾಲೇಜನ್ನು ಸ್ಥಾಪಿಸಲು ಉದಾರ ಹಣ ಸಹಾಯ ಮಾಡಿದರು. ಈ ಕಾಲೇಜಿನಲ್ಲಿ ಎಲ್ಲ ಧರ್ಮಿಯರಿಗೂ ಪ್ರವೇಶವಿತ್ತು, ಆಲೀಪರ್ ಅನ್ನು ಕೇಂದ್ರವಾಗಿಟ್ಟುಕೊಂಡು ಸರ್ ಸಯ್ಯದ್ ಅಹಮದ್ ಖಾನ್ ಅವರು ರೂಪಿಸಿದ ಚಳವಳಿಯನ್ನು ಆಲಿಘರ್ ಚಳವಳಿಯೆಂದು ಕರೆಯಲಾಗಿದೆ. 


ರಾಮಕೃಷ್ಣಣ ಮಿಷನ್‌ (ರಾಮಕೃಷ್ಣ ಮಠ) 

ಆಧುನಿಕಕ ಭಾರತದ ಆಧ್ಯಾತ್ಮಿಕ ಒಳಗೆ, ರಾಷ್ಟ್ರೀಯತೆಯ ಎಚ್ಚರ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ರಾಮಕೃಷ್ಣ ಮಿಷನ್ ವಿಶೇಷ ಕೊಡುಗೆಯನ್ನು ನೀಡಿದ, ಸ್ವಾಮಿ ವಿವೇಕಾನಂದರು 1897ರಲ್ಲಿ ಕಲ್ಕತ್ತಾದ ಬಳಿಯ ಬೇಲೂರಿನಲ್ಲಿ ರಾಮಕೃಷ್ಣ ಆಶ್ರಮವನ್ನು ಸ್ಥಾಪಿಸಿದರು. ಹಾಗೆಯೇ ಉತ್ತರಾಂಚಲದ ಆರೋರಾ ಬಳಿಯ ಮಾಯಾವತಿಯಲ್ಲಿ ರಾಮಕೃಷ್ಣ ಮಠವನ್ನು ಸ್ಥಾಪಿಸಿದರು. ರಾಮಕೃಷ್ಣ ಮಠವನ್ನು ಸ್ಥಾಪಿಸಿದ ಉದ್ದೇಶವೆಂದರೆ ಸ್ವಾಮಿ ವಿದೇಕಾನಂದರ ಗುರುಗಳಾದ ರಾಮಕೃಷ್ಣ ಪರಮಹಂಸರ ಚಿಂತನೆ ಮತ್ತು ಆಶಯಗಳನ್ನು ಜನರಿಗೆ ತಲುಪಿಸುವುದು. ರಾಮಕೃಷ್ಣ ಪರಮಹಂಸರು (1836-1886) ಕಾಳಿ ಮಾತೆಯ ಆರಾಧಕರು ಮತ್ತು ಕಲ್ಕತ್ತಾದ ಕಾಳಿಮಂದಿರದಲ್ಲಿ ಅರ್ಚಕರಾಗಿದ್ದರು, ಸನ್ಯಾಸ ಧ್ಯಾನ ಮತ್ತು ಭಕ್ತಿಯ ಮೂಲಕ ಆಧ್ಯಾತ್ಮಿಕ ಮುಕ್ತಿಯನ್ನು ಪಡೆಯಬೇಕೆಂದು ತಮ್ಮ ಬದುಕಿನ ರಾಮಕೃಷ್ಣ ಪರಮಹಂಸ ಉದಾಹರಣೆಯ ಮೂಲಕ ತೋರಿಸಿಕೊಟ್ಟರು, ಎಲ್ಲ ಧರ್ಮಗಳ ಆಶಯವೂ ಇದೇ ಎಂದು ಭಾವಿಸಿದ್ದರು. ದೇವರನ್ನು ಮತ್ತು ಮುಕ್ತಿಯನ್ನು ಆನೇಕ ಮಾರ್ಗಗಳಿವೆ ಎಂದು ನಂಬಿದ್ದರು, ಜತೆಗೆ ಮೂರ್ತಿ ಪೂಜೆ ಅವಶ್ಯಕವೆಂದರು.

ರಾಮಕೃಷ್ಣ ಪರಮಹಂಸರ ಚಿಂತನೆಗಳನ್ನು ಮತ್ತು ತಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಶಯಗಳನ್ನು ಜನರಿಗೆ ತಲುಪಿಸಲು ಸ್ವಾಮಿ ವಿವೇಕಾನಂದರು ಈ ಸಂಘವನ್ನು ಕಟ್ಟಿದರು. ವಿವೇಕಾನಂದರು (1863-1912) ಕಲ್ಕತ್ತಾದಲ್ಲಿ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಭಾರತ ಮತ್ತು ಪಾಶ್ಚಿಮಾತ್ರ ಚಿಂತನಧಾರೆಗಳನ್ನು ಅಭ್ಯಸಿಸಿದರು. ಭಾರತದ ದಾರ್ಶನಿಕತೆಯ ವಿವಿಧ ದೃಷ್ಟಿಕೋಷಗಳನ್ನು ಆಳವಾಗಿ ಅಧ್ಯಯನ ಮಾಡಿದ ನಂತರ ಅವುಗಳ ವಾಹೋನ್ನತಿಯನ್ನು ಭಾರತೀಯರಿಗೆ ಮತ್ತು ಪಾಶ್ಚಿಮಾತ್ರರಿಗೆ ತಿಳಿಸುವ ಕೆಲಸವನ್ನು ಆರಂಭಿಸಿದರು. ಅವರ ಗುರುಗಳು ತೀರಿಕೊಂಡ ನಂತರ ಸುಮಾರು ಐವರ್ಷಗಳ ಕಾಲ ಭಾರತವನ್ನು ಸುತ್ತಾಡಿದರು, ಇದರಿಂದ ಭಾರತದ ಸಾಮಾಜಿಕ ವಾಸ್ತವಿಕ ಅಂಶಗಳನ್ನು ಕಣ್ಣಾರೆ ನೋಡಲು ಸಾಧ್ಯವಾಯಿತು. ಜಾತಿವ್ಯವಸ್ಥೆ ಮತ್ತು ಅದರ ಶೋಷಣೆಯ ಮುಖಗಳು, ಬಡತನ, ಅನಕ್ಷರತೆ, ಅಜ್ಞಾನ ಮುಂತಾದ ಒಡಕುಗಳಿಂದ ತುಂಬಿದ ಭಾರತದ ಸಮಾಜಕ್ಕೆ ಹೊಸ ಶೋಷಣೆ ಮುಕ್ತ ರೂಪವನ್ನು ಕೊಡಬೇಕೆಂದು ತಮ್ಮ ಜೀವಿತಾವಧಿ ಕಾಲದಲ್ಲಿ ಅವಿರತ ಪ್ರಯತ್ನ ಮಾಡಿದರು, ಸಮಾಜ ಸುಧಾರಣೆಗೆ ಸಂಬಂಧಿಸಿದಂತೆ ವಿವೇಕಾನಂದರ ಆಶಯವೆಂದರೆ, ಮೊದಲು ಜನರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಮತ್ತು ಆ ಮೂಲಕ ಅವರೇ ಸುಧಾರಣೆಯನ್ನು ಬಯಸುತ್ತಾರೆ, ಶಾಸನ ರೂಪಿಸುವ ಸಂಸ್ಥೆಗಳು ರೂಪುಗೊಳ್ಳಬೇಕು ಮತ್ತು ಅವುಗಳ ಮುಖಾಂತರ ಸಮಾಜ ಸುಧಾರಣಾ ಕಾನೂನುಗಳು ಜಾರಿಗೊಳ್ಳಬೇಕು ಎಂದು ಬಯಸಿದರು. ಪಾಶ್ಚಿಮಾತರ ಆಂಧಾನುಕರಣೆಯನ್ನು ಬಿಡಬೇಕೆಂದರು. ಧರ್ಮದ ಕರ್ತವ್ಯವೆಂದರೆ ಕತ್ತಲಲ್ಲಿರುವವರಿಗೆ ಬೆಳಕನ್ನು ನೀಡಬೇಕು, ಇಲ್ಲದಿದ್ದರೆ ಅದು ಧರ್ಮವೇ ಅಲ್ಲ ಎಂದರು. ಯಾರ ಆತ್ಮ ಬಡವರಿಗಾಗಿ ಮಿಡಿಯುವುದೋ ಅವನೆ: ಮಹಾತ್ಮ, ಇಲ್ಲದಿದ್ದರೆ ಅದನ್ನು ದುರಾಷ್ಟ್ರ ಎಂದರು. ತಮ್ಮ ಜೀವನದುದ್ದಕ್ಕೂ ಅವರು ಜಾತಿಯತೆಯನ್ನು ಆಸ್ಪಶ್ಯತೆಯನ್ನು ಜಾತಿಮೂಲದಿಂದ ಪ್ರೇರಣೆಗೊಂಡ ಶ್ರೇಷ್ಠತೆಯ ವ್ಯಸನವನ್ನು ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ರೋಷಣೆಯನ್ನು ವಿರೋಧಿಸಿದರು.

ವಿವೇಕಾನಂದರು 1893ರಲ್ಲಿ ಅಮೆರಿಕದ ಚಿಕಾಗೊ ನಗರದಲ್ಲಿ ನಡೆದ ವಿಶ್ವಧಾರ್ಮಿಕ ಸಮ್ಮೇಳನದ ಸಂದರ್ಭದಲ್ಲಿ ಮಾಡಿದ ಭಾಷಣದಿಂದ ಪಾಶ್ಚಿಮಾತ್ರರು ಭಾರತದ ಸಾಂಸ್ಕೃತಿಕ ಹಿರಿಮೆಯನ್ನು ಪರಿಚಯ ಮಾಡಿಕೊಳ್ಳಲು ಸಾಧ್ಯವಾಯಿತು. ಹಾಗೆಯೇ 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಕಾಂಗ್ರೆಸ್ ಆಫ್ ರಿಲಿಜಿಯನ್ಸ್’ ಸಮ್ಮೇಳನದಲ್ಲೂ ಆಮೆರಿಕಾದಲ್ಲಿ ಮಾತನಾಡಿದ ರೀತಿಯಲ್ಲಿ ಮಾತನಾಡಿ ಜನರನ್ನು ಸಮ್ಮೋಹನಗೊಳಿಸಿದರು. ಅವರ ಭಾಷಣಗಳು ಅವರ ರಾಷ್ಟ್ರೀಯತೆಯ ಆಲೋಚನೆಗಳಿಗೆ ಕೈಗನ್ನಡಿಯಾಗಿವೆ. ಆಸಕ್ತಿದಾಯಕ ವಿಷಯವೆಂದರೆ ಅಮೆರಿಕಾದ ಸಮ್ಮೇಳನಕ್ಕೆ ಹೋಗುವ ಮುನ್ನ ಮಹಾರಾಜರಾದ ಹತ್ತನೇ ಚಾಮರಾಜ ಒಡೆಯರ ಅತಿಥಿಯಾಗಿ ಮೈಸೂರಿಗೆ ಬಂದಿದ್ದರು, ಅವರ ಸಲಹೆಯಂತೆ ಅಸ್ಪೃಶ್ಯ ವರ್ಗದ ಮಕ್ಕಳಗೆ ಮಹಾರಾಜರು ಶಾಲೆಗಳನ್ನು ಪ್ರಾರಂಭಿಸಿದರು. ಇವರು ಜ್ಞಾನಯೋಗ, ರಾಜಯೋಗ, ಕರ್ಮಯೋಗ ಮತ್ತು ಭಕ್ತಿಯೋಗಗಳ ಬಗೆಗೆ ಕೃತಿಗಳನ್ನು ರಚಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಇವರ ಆಶೋಚನೆಗಳು ಶಕ್ತಿಯನ್ನು ತುಂಬಿ, ಸ್ವಾತಂತ್ರ್ಯವೆಂದರೆ ಅದು ಸಾಮಾಜಿಕ ಸಮಾನತೆಯೂ ಹೌದು ಎನ್ನುವುದನ್ನು ಸಾರಿದವು.


ಥಿಯೋಸಾಫಿಕಲ್ ಸೊಸೈಟಿ : ಮೂಲತಃ ಈ ಸಂಸ್ಥೆಯನ್ನು ಮೇಡಂ ಭವಾಟ್ ಸೈ ಮತ್ತು ಅಮೆರಿಕನ್ನರಾದ ಕರ್ನಲ್ ಎಚ್.ಎಸ್.ಅಲ್ಕಾಕ್ ಪ್ರಾರಂಭಿಸಿದರು. ಅನಂತರ ಇವರು ಭಾರತಕ್ಕೆ ಬಂದು ಮದರಾಸಿನ ಹತ್ತಿರವಿರುವ ಅಡ್ವಾರ್' ಎಂಬಲ್ಲಿ ಇದರ ಕೇಂದ್ರ ಕಚೇರಿಯನ್ನು 1886ರಲ್ಲಿ ಆರಂಭಿಸಿದರು. ಈ ಸಂಸ್ಥೆಯ ಪ್ರಮುಖ ಉದ್ದೇಶವೆಂದರೆ ವಿವಿಧ ಧರ್ಮಗಳು, ದರ್ಶನಗಳ ಮತ್ತು ವಿಜ್ಞಾನಗಳ ತುಲನಾತ್ಮಕ ಅಧ್ಯಯನ ಮಾಡುವುದು ಮನುಷ್ಯನ ಅಂತರ್ಯದಲ್ಲಿರುವ ಅದಮ್ಯ ಚೇತನ ಶಕ್ತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುವುದು ಇದರ ಮತ್ತೊಂದು ಉದ್ದೇಶವಾಗಿತ್ತು. ಮನುಷ್ಯನಿಗೆ 'ವಿಶ್ವಭಾತೃತ್ವ ರಜೆ ಮುಖ್ಯವಾದದ್ದೆಂದು ಘೋಷಿಸಿತು. ಥಿಯೋಸಾಫಿಕಲ್ ಸೊಸೈಟಿಯು ಹಿಂದು ಧರ್ಮಕ್ಕೆ ಸೇರಿದ ಗ್ರಂಥಗಳಾದ ವೇದಗಳು, ಉನಿಷತ್ತುಗಳು, ಸಾಂಖ್ಯೆಯೋಗ ಮತ್ತು ವೇದಾಂತ ತಾತ್ವಿಕ ಚಿಂತನೆಗಳಿಂದ ತನ್ನ ಮೂಲತತ್ವಗಳನ್ನು ಪಡೆದುಕೊಂಡು ಪ್ರಚುರಪಡಿಸಿತು, ಈ ಸೊಸೈಟಿಯು ಭಾರತದ ಧಾರ್ಮಿಕ ಮತ್ತು ತಾತ್ವಿಕ ಅಥವಾ ದಾರ್ಶನಿಕ ಪರಂಪರೆಗಳನ್ನು ಅಧ್ಯಯನ ಮಾಡುವ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿ ಹಾಗಾಗಿಯೇ ಈ ಸೊಸೈಟಿಯು ನಡೆಸಿದ ಪ್ರಯತ್ನಗಳನ್ನು ಹಿಂದೂ ಧರ್ಮದ ಪುನರುತ್ಥಾನ ಚಳವಳಿ ಎಂದು ಕರೆಯಲಾಗಿದೆ. ಎದೇಶಿಯರೂ ಈ ಚಳವಳಿಯಲ್ಲಿ ಹೆಚ್ಚು ಆಸಕ್ತಿಳದದ್ದನ್ನು ಗಮನಿಸಬಹುವಾಗಿದೆ.

ಐಸ್ ಮಹಿಳೆ ಅನಿಬೆಸೆಂಟರು 1893ರಲ್ಲಿ ಭಾರತಕ್ಕೆ ಬಂದ ನಂತರ ಅಯೋಸಾಫಿಕಲ್ ಸೊಸೈಟಿಯ ಚಳವಳಿಯು ಗಮನಾರ್ಹವಾಗಿ ಬೆಳೆಯತೊಡಗಿತು. ಥಿಯೋಸಾಫಿಕಲ್ ಸೊಸೈಟಿಯ ಅನುಯಾಯಿಯಾಗಿ 1893ರಲ್ಲಿ ಈಕಿ ಭಾರತಕ್ಕೆ ಬಂದರು. ಇವರು 1847ರಲ್ಲಿ ಲಂಡನ್ ನಗರದಲ್ಲಿ ಜನಿಸಿದರು. ಆಂಗ್ಲಿಕನ್‌ ಚಚ 55 ಪಾದ್ರಿಯಾದ ತನ್ನ ಗಂಡನಿಗೆ ವಿಚ್ಛೇದನ ನೀಡಿ 1889ರಲ್ಲಿ ಈ ಸಂಸ್ಥೆಯ ಸಕ್ತಿಯ ಸದಸ್ಯರಾದರು. ಇವು ವೇದಾಂತ ಶಾಸ್ತ್ರದ ಬಗೆಗೆ ವಿಶೇಷ ಜ್ಞಾನವನ್ನು ಹೊಂದಿದ್ದರು. ಐಹಿಕ ಸಂಪತ್ತಿನ ಮೇಲೆ ನಿಂತಿರುವ ಪಶ್ಚಿಮದ ಸಂಸ್ಕೃತಿಗಿಂತ ಆಧ್ಯಾತ್ಮಿಕ ಶಕ್ತಿಯ ಮೇಲೆ ನಿಂತಿರುವ ಭಾರತ ಸಂಸ್ಕೃತಿ ಶ್ರೇಷ್ಟವಾದದ್ದೆಂದು ಪ್ರತಿಪಾದಿಸಿದರು. ಈ ಅರ್ಥದಲ್ಲಿ ಇವರ ಚಳವಳಿಯು ಹಿಂದೂ ಧರ್ಮದ ಪುನರುತ್ಥಾನ ಚಳವಳಿಯಾಗಿತ್ತು. ಇವರು ಹಿಂದು ಮತ್ತು ಬೌದ್ಧ ಧರ್ಮಗಳ ತುಲನಾತ್ಮಕ ಅಧ್ಯಯನವನ್ನು ಮಾಡಿದ್ದರು.

ಇವರ ಪ್ರಮುಖ ಸಾಧನೆಗಳೆಂದರೆ 'ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದರು. ಇದರಿಂದ 'ಶ್ವೇತ ಸರಸ್ವತಿ' ಎಸಿಕೊಂಡರು, ಎಲ್ಲ ವರ್ಗಗಳಿಗೂ ಶಿಕ್ಷಣ ಸಿಗಬೇಕೆಂಬುದು ಅವರ ಆಶಯವಾಗಿತ್ತು. ಇದಕ್ಕೆ ಶಾಲೆಗಳನ್ನು ತೆರೆದರು. 1898ರಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಬನಾರಸ್‌ನಲ್ಲಿ ಪ್ರಾರಂಭಿಸಿದರು. ಮುಂದೆ ಇದೇ ಸಂಸ್ಥೆಯು ಮದನ ಮೋಹನ ಮಾಳವೀಯ ಅವರ ಪ್ರಯತ್ನದಿಂದ 1916ರಲ್ಲಿ ಟಾರಸ್ ಹಿಂದೂ ವಿಶ್ವವಿದ್ಯಾಲಯ'ವಾಗಿ ಪರಿವರ್ತನೆಯಾಯಿತು, ಸಮಕಾಲೀನ ಸಮಸ್ಯೆಗಳನ್ನು ಚರ್ಚೆ ಮತ್ತು ಸಂವಾದಕ್ಕೆ ಈಡು ಮಾಡಲು "ನ್ಯೂ ಇಂಡಿಯಾ' ಮತ್ತು 'ಕಾಮನ್ ಸ್ಟೀಲ್' ಎಂಬ ಪತ್ರಿಕೆಗಳನ್ನು ಪ್ರಾರಂಭಿಸಿದರು. 1916ರಲ್ಲೇ 'ಹೋಮ್ ರೂಲ್ ಲೀಗ್'ನ್ನು ಪ್ರಾರಂಭಿಸಿ ಪಾದರಾಸು ಪ್ರಾಂತ್ಯದಲ್ಲಿ 'ಹೋಂರೂಲ್' ಚಳವಳಿಗೆ ಚಾಲನೆಯನ್ನು ನೀಡಿದರು. ಹೀಗೆ 'ಯೋಸಾಫಿಕಲ್ ಸೊಸೈಟಿ' ಮತ್ತು ಅದರ ಅವಿನಾಭಾಗವಾದ ಆನಿಬೆಸೆಂಟ್ರಿಗೆ 20ನೇ ಶತಮಾನದ ಆರಂಭಿಕ ಕಾಲಘಟ್ಟದ ಭಾರತದಲ್ಲಿ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಸಂವೇದನೆ ರೂಪಿಸಿದ ಕೀರ್ತಿ ಸಲ್ಲಬೇಕು, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಸಕ್ರಿಯವಾಗಿದ್ದ ಆನಿಬೆಸೆಂಟ್ ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಮೊಟ್ಟಮೊದಲ ಮಹಿಳಾ ಅಧ್ಯಕ್ಷೆ ಕೂಡ ಆಗಿದ್ದರು.


ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಂ

ಶ್ರೀ ನಾರಾಯಣಗುರು ಅವರು 1903ರಲ್ಲಿ ಧರ್ಮ ಪರಿಪಾಲನಾ ಯೋಗಂ ಆರಂಭಿಸಿದರು. ಇವರು ಕೇರಳದ ಈಳವು ಎಂಬಲ್ಲಿ ಹುಟ್ಟಿದರು. ಈ ಸಂಘಟನೆಯ ಪ್ರಮುಖ ಉದ್ದೇಶವೆಂದರೆ ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣ. ನಾರಾಯಣಗುರು (1854-1928) ಹಾಗೂ ಅವರ ಒಡನಾಡಿಗಳಾದ ಡಾ|| ಪಲ್ಲು ಮತ್ತು ಕುಮಾರನ್‌ ಆಸನ್‌ರವರು ಈ ಚಳವಳಿಯನ್ನು ಮುನ್ನಡೆಸಿದರು.

ಕೇರಳದ ಸಮಾಜದಲ್ಲೂ ಅತಿ ಜಾತಿ ಅಂತರಗಳ ಸಮಸ್ಯೆಗಳು ವ್ಯಾಪಕವಾಗಿದ್ದು, ಅನೇಕ ಹಿಂದುಳಿದ ಮತ್ತು ದಲಿತ ಸಮುದಾಯಗಳಿಗೆ ಸಾಮಾಜಿಕ ನಿರ್ಬಂಧಗಳನ್ನು ಹೇರಲಾಗಿತ್ತು. ಆ ಕಾಲಘಟ್ಟದಲ್ಲಿ ಈ ಸಮುದಾಯಗಳು ಎಲ್ಲರೂ ಬಳಸಲು ಇದ್ದ ಕೆರೆ ಬಾವಿಗಳಲ್ಲಿ ನೀರನ್ನು ತೆಗೆದುಕೊಳ್ಳಲಾಗುತ್ತಿರಲಿಲ್ಲ. ರಸ್ತೆಗಳ ಮೂಲಕ ಓಡಾಡಲಾಗುತ್ತಿರಲಿಲ್ಲ. ಚಪ್ಪಲಿಗಳನ್ನು ಹಾಕುವಂತಿರಲಿಲ್ಲ. ದೇವಸ್ಥಾನಕ್ಕೆ ಪ್ರವೇಶಿಸುವಂತಿರಲಿಲ್ಲ. ಮಹಿಳೆಯರ ಮೇಲೂ ನಿರ್ಬಂಧಗಳನ್ನು ಹೇರಲಾಗಿತ್ತು.ಇಷ್ಟೇ ಅಲ್ಲದೆ ಶಾಲೆಗಳಿಗೂ ಇವರಿಗೆ ಪ್ರವೇಶವಿರಲಿಲ್ಲ. ಪ್ರಮಾಣದ ಮಾನವ ಹಕ್ಕುಗಳನ್ನು ಪಡೆಯದ ಈ ಸಮುದಾಯಗಳು ಉಸಿರುಗಟ್ಟಿ ಬದುಕಬೇಕಾದ ಇತ್ತು. ಈ ವಿಷಯಗಳನ್ನು ಕೈಗೆತ್ತಿಕೊಂಡು ಶ್ರೀ ನಾರಾಯಣಗುರು ಅವರು ತಮ್ಮ ಧರ್ಮ ಪರಿಪಾಲನಾ ಯೋಗಂ ಮೂಲಕ ಸಾಮಾಜಿಕ ಪ್ರತಿರೋಧದ ಚಳುವಳಿಗಳನ್ನು ಪ್ರಾರಂಭಿಸಿದರು. ಮನುಷ್ಯ ಘನತೆಯಿಂದ ಬದುಕುವ ಸಮಾಜದ ನಿರ್ಮಾಣವೇ ಈ ಸಂಘಟನೆಯ ಉದ್ದೇಶವಾಗಿತ್ತು. ನಾರಾಯಣಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ( one Caste, One Religion And One God For Man) ಎಂಬುದು. ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದು ಸಾರಿದರು. ಕೆಳಸಮುದಾಯಗಳ ಪ್ರವೇಶ ನಿರಾಕರಿಸುತ್ತಿದ್ದ ದೇವಾಲಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದರು.

ನಾರಾಯಣಗುರು ಮತ್ತು ಅವರ (ಬನುಯಾಯಿಗಳು 1924ರಲ್ಲಿ ವೈಕಂ ಸತ್ಯಾಗ್ರಹವೆಂಬ ದಿವ ದೇವಾಲಯ ಪ್ರವೇಶ ಚಳವಳಿಯನ್ನು ನಡೆಸಿದರು. ಇದರಲ್ಲಿ ಗಾಂಧೀಜಿಯವರು ಹಾಗೂ ಆತ್ಮಗೌರವ ಚಳವಳಿಯ ರೂವಾರಿಗಳಾದ ಪೆರಿಯಾರರು ಭಾಗವಹಿಸಿದ್ದರು, ಗುರುವಾಯೂರು ದೇವಾಲಯ ಪ್ರವೇಶ ಚಳವಳಿಯ ಮತ್ತೊಂದು ಮಹತ್ವದ ಘಟನೆ,

ಪೆರಿಯಾರ್

ಇಪತ್ತನೆಯ ಶತಮಾನದ ಆರಂಭದಲ್ಲಿ ಬ್ರಾಹ್ಮಣೇತರ ಚಳವಳಿಯೆಂಬ ಹೊಸ ಬಗೆಯ ಚಳವಳಿ ದಕ್ಷಿಣ ಭಾರತದಲ್ಲಿ ಆರಂಭವಾಯಿತು. ಬಹುಸಂಖ್ಯಾತರಾಗಿದ್ದ ಬ್ರಾಹ್ಮಣೇತರರು ಸರ್ಕಾರಿ ರಂಗದಲ್ಲಿ ಇದ್ದ ಅವಕಾಶಗಳಲ್ಲಿ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಪ್ರಾತಿನಿಧ್ಯ ಸಿಗಬೇಕೆಂದು ಹೋರಾಟವನ್ನು ಆರಂಭಿಸಿದರು. ಕರ್ನಾಟಕವೂ ಸೇರಿದಂತೆ ಎವಿಧ ರಾಜ್ಯಗಳಲ್ಲಿ ಇದೊಂದು ಪ್ರಮುಖ ಚಳವಳಿಯಾಯಿತು. ಬ್ರಾಹ್ಮಣೇತರ ಸಮುದಾಯಗಳು ತಮ್ಮ ಮೇಲೆ ಹೇರಲಾಗಿದ್ದ ಸಾಮಾಜಿಕ ನಿರ್ಬಂಧಗಳನ್ನು ವಿರೋಧಿಸತೊಡಗಿದರು. ಇದಕ್ಕೆ ಪ್ರಮುಖ ಕಾರಣವಾದದ್ದು ಇಂಗ್ಲಿಷ್ ವಿದ್ಯಾಭ್ಯಾಸದ ವಿಸ್ತರಣೆ, ಇದರ ಜೊತೆಗೆ ಬ್ರಿಟಿಷರು 1870ರ ನಂತರ ತಂದ ಜನಗಣತಿ ವರದಿಗಳು, ಬ್ರಾಹ್ಮಣೇತರರಿಗೆ ತಮ್ಮ ಜನಸಂಖ್ಯೆಯ ಆರಿವನ್ನು ತಂದುಕೊಟ್ಟವು. ತಮಿಳುನಾಡಿನಲ್ಲಿ 1916ರಲ್ಲಿ ಪಾರಂಭವಾದ ಜಸ್ಟಿಸ್ ಪಾರ್ಟಿ’ಯ ಈ ಚಳವಳಿಯನ್ನು ಮುನ್ನಡೆಸಿತು.

ಜಸ್ಟೀಸ್ ಪಾರ್ಟಿಯ ಮೂಲಕ ಬ್ರಾಹ್ಮಣೇತರ ಚಳವಳಿಯು ಹೊಸರೂಪವನ್ನು ಪಡೆಯಿತು. ಇದು ಹೆಚ್ಚು ಕ್ರಾಂತಿಕಾರಕವಾದ ಹೆಜ್ಜೆಯಾಗಿತ್ತು. ಆ ಹೊಸರೂಪವೇ ಇ.ವಿ. ರಾಮಸ್ವಾಮಿ ನಾಯ್ಕರ್ ಅವರ ನೇತೃತ್ವದಲ್ಲಿ ಆರಂಭಗೊಂಡ ‘ಆತ್ಮಗೌರವ ಚಳವಳಿ’ (Self Respect Movement). . 1925ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರಬಂದ ರಾಮಸ್ವಾಮಿಯವರು 1926ರಲ್ಲಿ ಸೆಲ್ಫ್ ರೆಸ್ಪೆಕ್ಸ್ ಲೀಗ್ ಅನ್ನು ಆರಂಭಿಸಿದರು. ಇವರನ್ನು ಜನರು ಪ್ರೀತಿಯಿಂದ ಪೆರಿಯಾರ್ (ಹಿರಿಯರು) ಎಂದು ಕರೆದರು. ಪೆರಿಯಾರ್ ತಮಿಳುನಾಡಿನ ಈರೋಡಿನಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ವರ್ಣಾಶ್ರಮ ಧರ್ಮದ ಪರವಾಗಿ ಕಾಂಗ್ರೆಸ್ ಇದೆ ಎಂದು ಅದಕ್ಕೆ ಪರ್ಯಾಯವಾದ ದ್ರಾವಿಡ ಚಳವಳಿಯೆಂಬ ಜನಾಂಗೀಯ ಪರಿಕಲ್ಪನೆ ಕೇಂದ್ರಿತ ಚಳವಳಿ ಯನ್ನು ರೂಪಿಸತೊಡಗಿದರು. ಆರ್ಯ, ಬ್ರಾಹ್ಮಣ ಎನ್ನುವ ಜನಾಂಗೀಯ ಶ್ರೇಷ್ಠತೆಯನ್ನು ಸಾರುವ ಆಲೋಚನೆಗಳನ್ನು ಇಡಿಯಾಗಿ ತಿರಸ್ಕರಿಸಿದರು. ತಮಿಳುಭಾಷೆಯನ್ನು ದ್ರಾವಿಡರ ಭಾಷೆಯೆಂದರು. ಸಂಸ್ಕೃತ ಭಾಷೆ ಮತ್ತು ಸಾಹಿತ್ಯವನ್ನು ವಿರೋಧಿಸಿದರು. ಮತ್ತೊಂದು ಪ್ರಮುಖ ಅಂಶವೆಂದರೆ ರಾಮಾಯಣ ಮಹಾಕಾವ್ಯದಲ್ಲಿ ಬರುವ ರಾವಣನನ್ನು ದ್ರಾವಿಡರ ನಾಯಕನೆಂದು ಬಿಂಬಿಸಿ, ರಾಮನನ್ನು ವೈದಿಕ ವರ್ಗದ ದೇವರೆಂದು ತಿರಸ್ಕರಿಸಿದರು. ಬನಾರಸ್ಸಿನಲ್ಲಿ ಆದ ಕಹಿ ಅನುಭವಗಳಿಂದ ಮತ್ತಷ್ಟು ವ್ಯಗ್ರರಾದ ಪೆರಿಯಾರರು ಸಂಸ್ಕೃತ ಭಾಷೆ ಮತ್ತು ರಾಮಾಯಣದ ರಾಮ ಮತ್ತು ರಾವಣರನ್ನು ತಿಕ ಸಂಕೇತಗಳನ್ನಾಗಿ ಪರಿವರ್ತಿಸಿ, ರಾವಣ ಪರಂಪರೆಯನ್ನು ವೈಭವೀಕರಿಸಿದರು. ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆಯ ಆಶಯವನ್ನು ಎತ್ತಿಹಿಡಿದರು. 1924ರಲ್ಲಿ ಕೇರಳದ ವೈಕಂನಲ್ಲಿ ಅಸ್ಪಶ್ಯರಿಗೆ ದೇವಾಲಯದ ಪ್ರವೇಶದ ಹಕ್ಕಿನ ಹೋರಾಟದಲ್ಲಿ ಭಾಗವಹಿಸಿದ್ದರು. 1939ರಲ್ಲಿ ಜಸ್ಟೀಸ್ ಪಕ್ಷದ ಅಧ್ಯಕ್ಷರಾದರು. “ದ್ರಾವಿಡ ಕಳಗಂ” ಎಂಬ ಸಂಘಟನೆಯನ್ನು ಹುಟ್ಟುಹಾಕಿದರು. 'ರಿವೋಲ್ಡ್' ಪತ್ರಿಕೆಯನ್ನು ಹುಟ್ಟುಹಾಕಿದರು. ಇಂದಿಗೂ ತಮಿಳುನಾಡಿನ ರಾಜಕೀಯ ಕ್ಷೇತ್ರಗಳಲ್ಲಿ ಪೆರಿಯಾರರು ಸೈದ್ಧಾಂತಿಕ ಸಂಕೇತವಾಗಿ ಉಳಿದಿದ್ದಾರೆ. ಅಲ್ಲಿನ ರಾಜಕೀಯ ಪಕ್ಷಗಳು 'ದ್ರಾವಿಡ' ಎನ್ನುವ ಹೆಸರನ್ನು ತಮ್ಮ ಪಕ್ಷಗಳ ಹೆಸರಿನಲ್ಲಿ ಉಳಿಸಿಕೊಂಡಿರುವುದೇ ಇದಕ್ಕೆ ದೊಡ್ಡ ಸಾಕ್ಷಿ. ಸಿ. ಅಯೋಥಿದಾಸ್ ಪಂಡಿತ್, ಟಿ.ಎಂ.ನಾಯರ್ ಮುಂತಾದವರು ಆರಂಭಿಸಿ ಸೈದ್ಧಾಂತಿಕವಾಗಿ ರೂಪಿಸಿದ ಬ್ರಾಹ್ಮಣೇತರ ಚಳವಳಿಯನ್ನು ಪೆರಿಯಾರರು ಸಾಂಸ್ಕೃತಿಕ ಚಳವಳಿಯನ್ನಾಗಿ ಪರಿವರ್ತಿಸಿದರು. ಎಲ್ಲ ಬಗೆಯ ಶೋಷಣೆಗಳಿಂದ ಮುಕ್ತವಾಗಿ, ಜಾತಿ, ಲಿಂಗ ಅಸಮಾನತೆಗಳಿಂದ ಹೊರಬಂದು 'ಸರ್ವಧರ್ಮಸಹಿಷ್ಣತೆಯ' ಸಮಾಜ ರೂಪುಗೊಳ್ಳಬೇಕು ಎನ್ನುವುದೇ ಅವರ ಬದುಕಿನ ಧೈಯವಾಗಿತ್ತು.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು