ಭಾರತ ಮತ್ತು ಯುರೋಪಿನ ನಡುವೆ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಸಂಬಂಧಗಳು ಏರ್ಪಟ್ಟಿದ್ದವು. ಪ್ರಮುಖವಾಗಿ ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು, ಜೀರಿಗೆ, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಮುಂತಾದ ಉತ್ಪನ್ನಗಳಿಗೆ ಯುರೋಪಿನಲ್ಲಿ ಅಪಾರ ಬೇಡಿಕೆ ಇತ್ತು. ಮಧ್ಯಕಾಲದಲ್ಲೂ ಯುರೋಪ್, ಭಾರತ ಮತ್ತು ಇತರ ಏಷ್ಯಾದ ದೇಶಗಳ ನಡುವೆ ವ್ಯಾಪಾರ ಮುಂದುವರೆಯಿತು, ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಪೂರ್ವ ರೋಮನ್ (ಬೈಜಾಂಟಿಯಂ) ಸಾಮ್ರಾಜ್ಯದ ರಾಜಧಾನಿಯಾದ ಕಾನ್‌ಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು. ಅಲ್ಲಿಂದ ಇಟಲಿಯ (ರೋಮನ್ ಸಾಮ್ರಾಜ್ಯದ ಭಾಗ) ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಲ್ಲಿ ಮಾರುತ್ತಿದ್ದರು. ಹೀಗೆ ಕಾನ್‌ಸ್ಟಾಂಟಿನೋಪಲ್ ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗುವ ಮೂಲಕ ಯೂರೋಪಿನ ವ್ಯಾಪಾರದ ಹೆಬ್ಬಾಗಿಲೆಂದೇ ಪರಿಗಣಿಸಲ್ಪಟ್ಟಿತು. ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಅರಬ್ಬರು ಏಕಸ್ವಾಮ್ಯ ಸಾಧಿಸಿದ್ದರೆ, ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಇಟಲಿಯ ವರ್ತಕರು ಏಕಸ್ವಾಮ್ಯ ಸಾಧಿಸಿದ್ದರು. ಏಷ್ಯಾದ ಸರಕುಗಳು ಇಟಲಿಯ ವರ್ಶಕರಿಗೆ ಒಳ್ಳೆಯ ಲಾಭವನ್ನು ತಂದು ಕೊಡುತ್ತಿದ್ದವು.
ಕಾನ್ ಸ್ಟಾಂಟಿನೋಪಲ್ ನಗರದ ವಶ : ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್ ಸ್ಟಾಂಟಿನೋಪಲ್ ಮೂಲಕ ನಡೆಯುತ್ತಿತ್ತು. 1453 ಆಟೋಮಾನ್ ಚರ್ಕರು ನಗರದ ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. ಇದರಿಂದಾಗಿ ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೊದವು. ಹೊಸದಾಗಿ ಸಿಕ್ಕ ಅವಕಾಶದಿಂದ ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸತೊಡಗಿದರು. ಪರಿಣಾಮವಾಗಿ ವರ್ತಕರಿಗೆ ಈ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ. ಇದೇ ವೇಳೆ ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್, ಪೋರ್ಚುಗಲ್ ಮೊದಲಾದ ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾಷಿಕರನ್ನು ಪ್ರೋತ್ಸಾಹಿಸಲಾರಂಭಿಸಿದರು. ಇದಕ್ಕೆ ಪೂರಕವಾಗಿ ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ,, ಅಸ್ಟ್ರೋಲೊಬ್ (ನಕ್ಷತ್ರ ಉನ್ನತಿ ಮಾನ), ಸಿಡಿಮದ್ದು, ಮೊದಲಾದವುಗಳು ನೆರವಿಗೆ ಬಂದವು.
ಭಾರತಕ್ಕೆ ಹೊಸ ಜಲಮಾರ್ಗ : ಲಿಸ್ಬನ್ ನಿಂದ ಹೊರಟ ಪೋರ್ಚುಗಲ್ ನಾವಿಕ ವಾಸ್ಕೊಡಗಾಮನು 1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್’ ಎಂಬಲ್ಲಿಗೆ ಬಂದು ತಲುಪಿದನು. ಈ ಮೂಲಕ ಭಾರತ ಹಾಗೂ ಯೂರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದನು. ವಾಸ್ಕೋಡಗಾಮನು ಕಂಡುಹಿಡಿದ ಈ ಜಲಮಾರ್ಗವು ಸುಮಾರು ವರ್ಷಗಳ ಕಾಲ ಭಾರತ ಮತ್ತು ಯುರೋಪ್ ನಡುವಿನ ವ್ಯಾಪಾರ ಮಾರ್ಗವಾಗಿ ಮಾರ್ಪಟ್ಟಿತು. ಹೀಗೆ ಭಾರತದೊಂದಿಗೆ ಮರುವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ ಪೋರ್ಚುಗೀಸರು ಮೊದಲಿಗರಾದರು.
ಯುರೋಪಿನ ವ್ಯಾಪಾರಿ ಕಂಪನಿಗಳು
ಪೋರ್ಚುಗೀಸರ ಯಶಸ್ವಿ ಪ್ರಯತ್ನಗಳಿಂದ ಪ್ರೇರಣೆಗೊಂಡ ಯುರೋಪಿನ ಡಚ್ ಇಂಗ್ಲಿಷ್ ಮತ್ತು ಫ್ರೆಂಚ್ ವ್ಯಾಪಾರಿ ಕಂಪನಿಗಳು ಭಾರತಕ್ಕೆ ಬಂದರು. ಈ ಬೆಳವಣಿಗೆಯು ವಸಾಹತುರಾಷ್ಟ್ರವಾಗಿ ಪರಿವರ್ತನೆಗೊಂಡ ಭಾರತವಲ್ಲದೆ ಅದನ್ನು ವಸಾಹತುವಾಗಿ ಪರಿವರ್ತಿಸಿದ ಯೂರೋಪಿಯನ್ ರಾಷ್ಟ್ರಗಳ ಚರಿತ್ರೆಯನ್ನು ನಿರ್ಣಾಯಕವಾಗಿ ಬದಲಿಸಿತು.
ಪೋರ್ಚುಗೀಸರು: ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟಮೊದಲ ಯುರೋಪಿಯನ್ನರು ಪೋರ್ಚುಗೀಸರೇ ಮತ್ತು ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಕೂಡ ಪೋರ್ಚುಗೀಸರೇ ಆಗಿದ್ದಾರೆ. ವಾಸ್ಕೋಡಗಾಮನ ನಂತರ ಫೋರ್ಚುಗೀಸರ ಮೊಟ್ಟಮೊದಲ ವೈಸರಾಯ್ ಆಗಿ ಫ್ರಾನ್ಸಿಸ್ಕೊ ಡಿ ಅಲ್ಮೇಡ ಭಾರತಕ್ಕೆ ಬಂದನು. ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ನೀಲಿ ನೀರಿನ ನೀತಿ’ (Blue Water Policy)ಯನ್ನು ಜಾರಿಗೆ ತಂದನು. ಅಲೇಡಾ ನಂತರ ಬಂದ ಆಲೋನ್ನೊ-ಡಿ-ಅಲ್ಬುಕರ್ಕ್ ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ. ಇವನು ಸಾಮಾನ್ಯ ಶಕ (ಸಾ.ಶ.) 1510ರಲ್ಲಿ ಬಿಜಾಪುರದ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡು ಪೋರ್ಚುಗೀಸರ ಆಡಳಿತ ಕೇಂದ್ರವಾಗಿ ಪರಿವರ್ತಿಸಿದನು. ಮುಂದೆ ಒಂದು ಶತಮಾನ ಕಾಲ ಭಾರತದ ವ್ಯಾಪಾರದ ಮೇಲೆ ಪ್ರಶ್ನಾತೀತ ಏಕಸ್ವಾಮ್ಯವನ್ನು ಹೊಂದಿದ್ದ ಪೋರ್ಚುಗೀಸರು, ಡಚ್ ಮತ್ತು ಇಂಗ್ಲಿಷರ ಆಗಮನದ ನಂತರ ರಾಜಕೀಯವಾಗಿ ಕಳೆಗುಂದಿದರು.
ಡಚ್ಚರು : ಡಚ್ಚರು ಹಾಲೆಂಡ್ ಅಥವಾ ನದರ್‌ಲ್ಯಾಂಡ್ ದೇಶದವರು. ಇವರು ಪೂರ್ವದೇಶಗಳಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಸಾ.ಶ. 1602ರಲ್ಲಿ ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿಕೊಂಡು ಭಾರತ ಮತ್ತು ಜಾವ, ಸುಮಾತ್ರ, ಇಂಡೋನೇಷಿಯ ಮೊದಲಾದ ಸಾಂಬಾರು ಪ್ರಸಿದ್ಧ ದ್ವೀಪಗಳಿಗೆ ಪವೇರಿಸಿದರು. ಭಾರತದಲ್ಲಿ ಸೂರತ್, ಬೊಚ್, ಕ್ಯಾಂಬೆ, ಕೊಚ್ಚಿನ್, ನಾಗಪಟ್ಟಣ, ಮಚಲೀಪಟ್ಟಣ, ಚಿನ್ಸೂರ್ ಮೊದಲಾದ ಕಡೆಗಳಲ್ಲಿ ತಮ್ಮ ಕೋಠಿಗಳನ್ನು ಸ್ಥಾಪಿಸಿಕೊಂಡರು. ಆ ಮೂಲಕ ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದರು. ಮುಂದೆ ಭಾರತಕ್ಕೆ ಬಂದ ಇಂಗ್ಲಿಷರು ಮತ್ತು ಫ್ರೆಂಚರ ಪೈಹೋಟೆಯನ್ನು ಹೆದರಿಸಲಾರದೆ ಸಾಂಬಾರು ದ್ವೀಪಗಳಿಗೆ ಮಾತ್ರ ಸೀಮಿತಗೊಂಡರು.
ನಿಮಗಿದು ತಿಳಿದಿರಲಿ : ಕೋಠಿಗಳು ವ್ಯಾಪಾರಿ ವಸ್ತುಗಳ ದಾಸ್ತಾನುಗಳು ಅಥವಾ ಮಳಗೆಗಳಾಗಿದ್ದವು. ಕೋಯ ಸುತ್ತ ತಮ್ಮ ರಕ್ಷಣೆಗಾಗಿ ಎತ್ತರದ ಕಡೆಗೋಡೆಗಳನ್ನು ಕಟ್ಟಿಕೊಂಡರು.
ಇಂಗ್ಲಿಷರು : ಇಂಗ್ಲೆಂಡಿನ ಎಲಿಜಬೆತ್ ರಾಣಿಯು ಸಾ.ಶ. 1600 ಡಿಸೆಂಬರ್ 31ರಂದು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಪೂರ್ವದೇಶಗಳೊಂದಿಗೆ ವ್ಯಾಪಾರ ನಡೆಸಲು 15 ವರ್ಷಗಳ ಪರವಾನಗಿ ನೀಡಿದಳು, ಈ ಕಂಪನಿಯು 1613ರಲ್ಲಿ ಔಪಚಾರಿಕವಾಗಿ ವ್ಯಾಪಾರವನ್ನು ಆರಂಭಿಸಿತು. ಕಂಪನಿಗೆ ಮೊಗಲ್ ಸಾಮ್ರಾಟನಾದ ಜಹಾಂಗೀರನು ಸೂರತ್‌ನಲ್ಲಿ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆ (Fectory Warehouses) ಯನ್ನು ತೆರೆಯಲು ಫರ್ಮಾನ ನೀಡಿದನು. 1617ರಲ್ಲಿ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್‌ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಸರ್. ಥಾಮಸ್ ರೋ ಬಂದನು. ಇವನು ಜಹಾಂಗೀರನಿಂದ ಮೊಘಲ್ ಸಾಮ್ರಾಜ್ಯದ ಕೆಲವೆಡೆಗಳಲ್ಲಿ ಫ್ಯಾಕ್ಟರಿಗಳನ್ನು ಸ್ಥಾಪಿಸಲು ಅನುಮತಿ ಪಡೆದರು. ಅದರಂತೆ ಇಂಗ್ಲಿಷರು ಆಗ್ರಾ, ಅಹಮದಾಬಾದ್ ಮತ್ತು ಬ್ರೋಚ್‌ಗಳಲ್ಲಿ ಫ್ಯಕ್ತರಿಗಳನ್ನು ಸ್ಥಾಪಿಸಿದರು. ಇಂಗ್ಲಿಷರು 1639ರಲ್ಲಿ ಚಂದ್ರಗಿರಿಯ ರಾಜನಿಂದ ಮದ್ರಾಸ್‌ನಲ್ಲಿ ಭೂಮಿಯನ್ನು ಪಡೆದು ಸೆಂಟ್ ಜಾರ್ಜ್ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದರು. ಮುಂದೆ ಇಂಗ್ಲೆಂಡಿನ ರಾಜಕುಮಾರ ಎರಡನೇ ಚಾರ್ಲ್ಸ್ನು ಬಾಂಬೆಯನ್ನು 1668ರಲ್ಲಿ ಕಂಪನಿಗೆ ವಾರ್ಷಿಕ 10 ಪೌಂಡಾಗಳ ಬಾಡಿಗೆಗೆ ವಹಿಸಿಕೊಟ್ಟನು. ಬ್ರಿಟಿಷರು 1690ರ ದಶಕದಲ್ಲಿ ಬಂಗಾಳದ ರಾಜ್ಯಪಾಲನಿಂದ ಹೂಗ್ಲಿ ನದಿ ದಂಡೆಯ ಮೇಲೆ ಸ್ತುತಿ, ಕಲ್ಕತ್ತ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ಮೊರ್ಟ್ ವಿಲಿಯಂ ಎಂಬ ಕೋಟೆಯನ್ನು ಕಟ್ಟಿದರು. ಇದರ ಸುತ್ತ ಕಲ್ಕತ್ತಾ ನಗರ ಬೆಳೆಯಿತು, 17ನೆಯ ಶತಮಾನದ ಅಂತ್ಯದ ವೇಳೆಗೆ ಇಂಗ್ಲಿಷರು ಮದ್ರಾಸ್, ಬಾಂಬೆ ಮತ್ತು ಕಲ್ಕತ್ತೆಗಳನ್ನು ತಮ್ಮ ಪ್ರೆಸಿಡೆನ್ಸಿ ಕೇಂದ್ರಗಳನ್ನು ಮಾಡಿಕೊಂಡರು. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷರು ಕಲ್ಕತ್ತಾವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ತಮ್ಮ ಆಧೀನದಲ್ಲಿದ್ದ ಪ್ರದೇಶಗಳಲ್ಲಿ ತಮ್ಮದೇ ನಾಗರಿಕ ಮತ್ತು ಅಪರಾಧ ಕಾನೂನುಗಳನ್ನು (Civil and Criminal Proceduse Cocles) ಜಾರಿಗೆ ತಂದರು.
ಫ್ರೆಂಚರು : ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು 1664ರಲ್ಲಿ ಸರ್ಕಾರಿ ಒಡೆತನದ ಕಂಪನಿಯಾಗಿ ಆರಂಭವಾಯಿತು. ಇದು 1968ರಲ್ಲಿ ತನ್ನ ಪ್ರಪ್ರಥಮ ವಾಸ್ತಸುಮಳಗೆ(ಕೋಟಿ)ಯನ್ನು ಸೂರತ್‌ನಲ್ಲಿ ಆರಂಭಿಸಿತು. ನಂತರ ಮಚಲಿಪಟ್ಟಣ, ಚಂದ್ರನಗರ, ಮಾಹಿ, ಕಾರೈ ಕಲ್ಲು, ಕಾಶಿಮ್ ಬಜಾರ್, ಬಾಲಸೂರ್ ಗಳನ್ನು ತಮ್ಮ ಕೇಂದ್ರಗಳಾಗಿ ಮಾಡಿಕೊಂಡರು. ಪಂಚರು 1674ರಲ್ಲಿ ವಾಲಿಕೊಂಡಪುರಂನ ಸ್ಥಳೀಯ ಮುಸ್ಲಿ ಅಧಿಕಾರಿಯಿಂದ ಒಂದು ಹಳ್ಳಿಯನ್ನು ಪಡೆದರು. ಕ್ರಮೇಣ ಇದನ್ನ ದೊಡ್ಡ ವ್ಯಾಪಾರ ಕೇಂದ್ರವಾಗಿ ಮಾರ್ಪಡಿಸಿ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಅದೇ ಪುದುಚೇರಿ ಅಥವಾ ಪಾಂಡಿಚೇರಿ. ಇದು ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿಯಾಗಿತ್ತು. 1746ರಲ್ಲಿ ಪಾಂಡಿಚೇರಿಯ ಗವರ್ನರ್ ಆಗಿ ಬಂದ ಡೂಪ್ಲೆ ಎಂಬ ಮಹತ್ವಾಕಾಂಕ್ಷಿ ಅಧಿಕಾರಿಯು ದಕ್ಷಿಣ ಭಾರತದಲ್ಲಿ ಪಂಚರ ಅಧಿಪತ್ಯವನ್ನು ಸ್ಥಾಪಿಸಲು ಹವಣಿಸಿದನು. ಇದು ಇಂಗ್ಲಿಷರೊಡನೆ ಸಂಘರ್ಷಕ್ಕಿಳಿದು ಕಾರ್ನಾಟಕ ಯುದ್ಧಗಳಿಗೆ ಕಾರಣವಾಯಿತು.
ಕಾಮೆಂಟ್ ಪೋಸ್ಟ್ ಮಾಡಿ