ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಭಾರತ)


ಧೈಯ.  सेवा परमो धर्म:

ಧೈಯ (ಕನ್ನಡ).  Service Before Self

ಸ್ಥಾಪನೆ.    7 December 1954

ಪ್ರಕಾರ.     Military Academy

ಸ್ಥಳ.    Khadakwasla, ಮಹಾರಾಷ್ಟ್ರ, India

ಆವರಣ.   7,015 acres (28.39 km²)

ಅಂತರ್ಜಾಲ ತಾಣ.  nda.nic.in

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯು ಭಾರತೀಯ ಸೈನ್ಯ ಸೇವೆಗಳ ಜಂಟಿ ಸೇವಾ ಅಕಾಡೆಮಿಯಾಗಿದ್ದು, ಇಲ್ಲಿ ಮೂರೂ ಸೈನ್ಯ ವಿಭಾಗಗಳಾದ ಭೂ ಸೇನೆ, ನೌಕಾ ಸೇನೆ ಮತ್ತು ವಾಯು ಸೇನೆಯ ಕೆಡೆಟ್‌ಗಳಿಗೆ ಅವರು ಸೇವಾ ಅಕಾಡೆಮಿಗಳಿಗೆ ಪೂರ್ವ ನಿಯೋಜಿತ ತರಬೇತಿಗಳಿಗೆ ತೆರಳುವ ಮೊದಲು ತರಬೇತಿಯನ್ನು ನೀಡಲಾಗುತ್ತದೆ. ಇದು ಮಹಾರಾಷ್ಟ್ರದ ಪುಣೆ ಬಳಿಯ ಖಡಕ್‌ವಾಸ್ಲಾದಲ್ಲಿದೆ.
ಅಕಾಡೆಮಿಯು ಪ್ರಾರಂಭವಾದಾಗಿನಿಂದ ಪ್ರತಿ ಪ್ರಮುಖ ಸಂಘರ್ಷಗಳಲ್ಲಿ ಭಾರತೀಯ ಸೈನ್ಯವನ್ನು ಕಾರ್ಯಾಚರಣೆಗೆ ಕರೆದಾಗಲೆಲ್ಲಾ ಎನ್‌ಡಿಎ ಹಳೆಯ ವಿದ್ಯಾರ್ಥಿಗಳು ಯುದ್ಧದಲ್ಲಿ ಮಂಚೂಣಿಯಲ್ಲಿದ್ದು ಹೋರಾಡಿದ್ದಾರೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳಲ್ಲಿ 3 ಪರಮ ವೀರ ಚಿಕ್ರ ಮತ್ತು 9 ಅಶೋಕ ಚಕ್ರ ಸ್ವೀಕೃತರಿದ್ದಾರೆ
ಅಕಾಡೆಮಿಯ ಮೂರು ಹಳೆಯ ವಿದ್ಯಾರ್ಥಿಗಳಿಗೆ ಪರಮ ವೀರ ಚಕ್ರವನ್ನು ಪ್ರದಾನ ಮಾಡಲಾಗಿದೆ.

☘ಕ್ಯಾಪ್ಟನ್ ಗುರ್ಬಚನ್ ಸಿಂಗ್ ಸಲೇರಿಯಾ, ಮರಣೋತ್ತರ, 1 ಗೂರ್ಖಾ ರೈಫಲ್ಸ್, ಕಾಂಗೋ, 1961

☘2ನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್, ಮರಣೋತ್ತರ, 17 ಪೂನಾ ಹಾರ್ಸ್, 1971 ರ ಭಾರತ-ಪಾಕಿಸ್ತಾನ ಯುದ್ಧ

☘ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಮರಣೋತ್ತರ, 11 ಗೂರ್ಖಾ ರೈಫಲ್ಸ್, ಕಾರ್ಗಿಲ್ ಯುದ್ಧ, 1999

2010 ರ ವರೆಗೆ ಅಕಾಡೆಮಿಯ ಒಂಬತ್ತು ಹಳೆಯ ವಿದ್ಯಾರ್ಥಿಗಳಿಗೆ ಅಶೋಕ ಚಕ್ರವನ್ನು ಪ್ರದಾನ ಮಾಡಲಾಗಿದೆ.
ಮಹಾವೀರ ಚಕ್ರ 31, ವೀರ ಚಕ್ರ 152, ಕೀರ್ತಿ ಚಕ್ರ 33.ಶೌರ್ಯ ಚಕ್ರ 122

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು