ವಿಶ್ವ ತಾಯಂದಿರ ದಿನ - ಮೇ 2ನೇ ರವಿವಾರ

🌷 ವಿಶ್ವ ತಾಯಂದಿರ ದಿನ; ಅಮ್ಮನಿಗೊಂದು ಶುಭಕೋರಿ
==========================
ಭೂಮಿಯ ಮೇಲೆ ದೇವರು ಇರಲಾಗುವುದಿಲ್ಲವೆಂದು ತಾಯಿಯನ್ನು ಇರಿಸಿದ್ದಾನೆ ಎಂಬ ಮಾತು ಅದೆಷ್ಟೋ ಸಲ ಹೌದು ಎನ್ನುವಂತೆ ಸಾಕ್ಷ್ಯವಾಗಿ ಸಿಗುತ್ತಲೇ ಇರುತ್ತದೆ. ಅಂತಹ ತಾಯಿಯ ಪ್ರೀತಿಯನ್ನು ಎಂದಿಗೂ ಮರಳಿಸಲು ಸಾಧ್ಯವೇ ಇಲ್ಲ. ಆ ಮಹಾನ್ ತಾಯಿಯನ್ನು ನೆನೆಯಲು ಇಂತಹುದೇ ದಿನ ಎಂದು ಹೇಳಲಾಗದು ಆದರೂ ಅಮ್ಮನ ಮೇಲಿನ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶವೂ ಇದೆ. ಹೌದು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ವಿಶ್ವದ ಹಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಜೀವಮಾನವಿಡಿ ಮುದ್ದಾಡಿ, ಪ್ರೀತಿಸಿ ಜೀವನ ಕಲಿಸುವ ತಾಯಿಗೆ ಏನೇ ಮಾಡಿದರೂ ಅದು ಕಡಿಮೆಯೇ
=================
👉 ತಾಯಂದಿರ ದಿನವನ್ನೇಕೆ ಆಚರಿಸುತ್ತಾರೆ?
============
ತಾಯಿಯನ್ನು ಪೂಜಿಸಲು, ಪ್ರೀತಿಸಿ, ಊಡುಗರೆ ನೀಡಲು ಯಾವುದೇ ವಿಶೇಷ ದಿದ ಅಗತ್ಯವಿಲ್ಲ. ಆದರೆ ಇಂದು ನಾವು ಯಾವುದ್ಯಾವುದೋ ದಿನಗಳನ್ನು ಆಚರಿಸಿ ಸಂಭ್ರಮಿಸುವಾಗ ಹೆತ್ತ ತಾಯಿಗಾಗಿ ವರ್ಷದಲ್ಲಿ ಒಂದು ದಿನವನ್ನು ಮೀಸಲಿಡುವುದರಲ್ಲಿ ಯಾವುದೇ ತಪ್ಪಿಲ್ಲ. ಈ ದಿನದಂದು ತಾಯಿಗೆ ನಿಮ್ಮ ಪ್ರೀತಿಯನ್ನು ನೀಡಿ ಸಹಿ ಜೊತೆ ಅಮ್ಮನಿಗೆ ಉಡುಗರೆಯನ್ನು ನೀಡಲಾಗುತ್ತದೆ. ಹಾಗೇಯೆ ಸಾಂಕೇತಿಕವಾಗಿ ಆಚರಿಸುತ್ತಾರೆ. ಆದರೆ ಈ ಆಚರಣೆಯನ್ನು ಒಂದೊಂದು ದೇಶದಲ್ಲಿ ಒಂದೊಂದು ದಿನದಮದು ಆಚರಿಸಲಾಗುತ್ತದೆ. ಅಂತೆಯೇ ಲಂಡನ್ನಿನಲ್ಲಿ ಮಾರ್ಚ ತಿಂಗಳ ನಾಲ್ಕನೇ ಭಾನುವಾರದಂದು, ಗ್ರೀಸ್ ದೇಶದಲ್ಲಿ ಫೆಬ್ರವರಿ ಎರಡರಂದು ಆಚರಿಸುತ್ತಾರೆ. ಭಾರತ ಸೇರಿದಂತೆ ಹಲವಾರು ದೇಶಗಲ್ಲಿ ತಾಯಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ಆಚರಿಸಲಾಗುತ್ತದೆ. 
=================
👉 ತಾಯಂದಿರ ದಿನ ಎಂಬ ಆಚರಣೆ ಶುರುವಾಗಿದ್ದು ಹೇಗೆ?
=================
ತಾಯಂದಿರ ದಿನ 1908 ರಲ್ಲಿ ಅಮೇರಿಕಾದಲ್ಲಿ ಶುರುವಾಗಿತ್ತು. ಅಮೇರಿಕಾದ ಶಾಂತಿ ಕಾರ್ಯಕರ್ತೆ ಆಗಿದ್ದಂತಹ ಅನಾ ಜಾರ್ವಿಸ್ ತನ್ನ ತಾಯಿಯನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಿದ್ದರು ಎಂದರೆ ಜಾರ್ವಿಸ್ ಮದುವೆಯೇ ಆಗಿರಲಿಲ್ಲ. ಅನಾ ತಾಯಿ 1095ರಲ್ಲಿ ಮರನ ಹೊಂದಿದರು. ತನ್ನ ತಾಯಿಯ ಮೇಲಿನ ಪ್ರಿತಿಯನ್ನು ವ್ಯಕ್ತಪಡಿಸಲು ಆ ದಿನವನ್ನು ಆಯಕೆ ಮಾಡಿಕೊಂಡಿದ್ದರು. ಬಳಿಕ ಈ ದಿನವನ್ನು ವಿಶ್ವದ ಕೆಲವೆಡೆ ತಾಯಂದಿರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿರು.
===============
👉 ಏಕೆ 2ನೇ ಭಾನುವಾರವೇ ಆಚರಿಸುತ್ತಾರೆ?
=============
ಮೇ 9ನೇ 1914ರಂದು ಅಮೇರಿಕಾದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಬೇಕು ಎಂದು ಕಾನೂನನ್ನು ಜಾರಿಗೆ ತಂದರು. ಈ ಕಾನೂನು ಜಾರಿ ಮಾಡಿದ ನಂತರ ಅಮೇರಿಕಾ, ಭಾರತ ಹಾಗೂ ಪ್ರಪಂಚದ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ರವಿವಾರದಂದು ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.
=========

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು