ರಾಷ್ಟ್ರದ ಸುಖ ಶಾಂತಿಗೆ, ಐಕ್ಯತೆಗೆ ಹಾಗೂ ಅಭಿವೃದ್ಧಿಗೆ ಕಾನೂನು ಸುವ್ಯವಸ್ಥೆ ಅತ್ಸವಶ್ಯಕವಾಗಿದೆ. ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಸಮಾಜದ ಇಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆಯು ಅತಿ ಮುಖ್ಯ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.
'ಕಾನೂನು" ಮತ್ತು ಸುವ್ಯವಸ್ಥೆ' ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಆವಿಭಾಜ್ಯವಾಗಿದೆ. ಸರ್ವರ ಸಂರಕ್ಷಣೆಗೆ ಕಾನೂನಿನ ಆಡಳಿತ ಅಗತ್ಯವಾಗಿರುತ್ತದೆ. ಸಂವಿಧಾನದ ೪ನೇ ಅನುಸೂಚಿಯ ರಾಜ್ಯಪಟ್ಟಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ತಿಳಿಸಲಾಗಿದೆ. ಹಾಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ದೇಶನ ನೀಡುವ ಸಂವಿಧಾನಾತ್ಮಕ ಅಧಿಕಾರವನ್ನು ಹೊಂದಿದೆ.
ಕೇಂದ್ರದ ಪಾತ್ರ
ಕಾನೂನು ಮತ್ತು ಸುವ್ಯವಸ್ಥೆಂಬನ್ನು ಉಾಡಲು ಕೇಂದ್ರ ಸರ್ಕಾರದ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಸಂವಿಧಾನದ ಹಲವು ವಿಧಿಗಳಲ್ಲಿ ತಿಳಿಸಲಾಗಿದೆ. ಉದಾ-ಸಂವಿಧಾನದ 355ನೇ ವಿಧಿ ಪ್ರಕಾರ ಬಾಹ್ಯ ದಾಳಿಯಿಂದ ರಾಜ್ಯಗಳನ್ನು ರಕ್ಷಿಸುವುದು, ಸಂವಿಧಾನದ 356ನೇ ವಿಧಿಯನ್ವಯ ರಾಜ್ಯದಲ್ಲಿ ಸಂವಿಧಾನಾತ್ಮಕ ಆಡಳಿತ ವಿಫಲವಾದಾಗಿ ರಾಜ್ಯ ತುರ್ತು ಪರಿಸ್ಥಿತಿ ಅಥವಾ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸುವುದು.
ಸಾರ್ವಜನಿಕ ಭದ್ರತೆ ಒಡಗಿಸಲು ಕೇಂದ್ರ ಗೃಹ ಮಂತ್ರಾಲಯವು ಅರಸೈನಿಕ ಪಡೆಗಳನ್ನು ಹೊಂದಿದ್ದು, ಅವುಗಳ ಮೂಲಕ ಆಡಳಿತ ಮತ್ತು ನಿಯಂತ್ರಣದ ಜವಾಬ್ದಾರಿಯನ್ನು ಹೊಂದಿದೆ. ಅವುಗಳೆಂದರೆ
1) ಕೇಂದ್ರ ಮೀಸಲು ಪೊಲೀಸ್ ಪಡೆ (CRPF) : 5 ಪಡೆಯು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬ, ದಂಗೆಗಳನ್ನು ಹತ್ತಿಕ್ಕಲು ಹಾಗೂ ದೇಶದ ಯಾವುದೇ ಭಾಗ ಪ್ರಕೃತಿ ವಿಕೋಪಕ್ಕೆ ಒಳಗಾದಾಗ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತದೆ.
2) ಗಡಿಭದ್ರತಾ ಪಡೆ (BSF) : ಗಡಿ ಭಾಗಗಳಲ್ಲಿ ಅಪರಾಧಿ ಕೃತ್ಯಗಳನ್ನು ತಡೆಗಟ್ಟಲು ರಚಿಸಲಾಗಿದೆ. ದೇಶದ ಗಡಿಗಳಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಬಹುದು. ಗಸ್ತು ತಿರುಗುವುದು ಮತ್ತು ಗಡಿಪ್ರದೇಶದ ಜನರಿಗೆ ಹಾಗೂ ಅವರ ಆಸ್ತಿಗೆ ರಕ್ಷಣೆಯನ್ನೊದಗಿಸುವುದು ಗಡಿಭದ್ರತಾ ಪಡೆಯ ಕಾರ್ಯವಾಗಿದೆ.
3) ರೈಲ್ವೆ ರಕ್ಷಣಾ ಪಡೆ : ರೈಲ್ವೆಗಳಲ್ಲಿನ ಅಪರಾಧಗಳನ್ನು ತಡೆಗಟ್ಟುವುದು, ಅವುಗಳ ತನಿಖೆ ನಡೆಸುವುದು, ರೈಲ್ವೆ ಆಸ್ತಿ, ಹಳೆ ಮೊದಲಾದವುಗಳನ್ನು ರಕ್ಷಿಸುತ್ತದೆ.
4) ಕೇಂದ್ರಿಯ ಉದ್ದಿಮ ಸಂರಕ್ಷಣಾ ಪಡೆ (CISF) : ಸಾರ್ವಜನಿಕ ವಲಯದಲ್ಲಿನ ಭಾರತ ಸರ್ಕಾರದ ಬೃಹತ್ ಕೈಗಾರಿಕೆ ಉದ್ದಿಮೆಗಳಿಗೆ ರಕ್ಷಣೆ ಸುತ್ತವೆ. ಈ ಪಡೆಯನ್ನು ವಿಮಾನ ನಿಲ್ದಾಣದ ಸಂರಕ್ಷಣೆಗಾಗಿಯೂ ಬಳಸಿಕೊಳ್ಳಲಾಗುತ್ತದೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆಯಲ್ಲಿ ಕೇಂದ್ರ ಸರ್ಕಾರವು ಸಂಯೋಜನಾ ಕಾರ್ಯ ಮತ್ತು ವಿಶೇಷ ಹೊಣೆಗಾರಿಕೆಯನ್ನು ನಿರ್ವಹಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕೇಂದ್ರ ಸರ್ಕಾರ ಹೊಂದಿರುವ ಅಧಿಕಾರ, ಜವಾಬ್ದಾರಿ, ತಜ್ಞ ಸೇವೆ ಮುಂತಾದವುಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುರಲ್ಲಿ ರಾಜ್ಯ ಸರ್ಕಾರಗಳಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ.
ರಾಜ್ಯದ ಪಾತ್ರ-ರಾಜ್ಯ ಪೊಲೀಸ್ ವ್ಯವಸ್ಥೆ
ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರಗಳ ಪ್ರಾಥಮಿಕ ಜವಾಬ್ದಾರಿಯಾಗಿದೆ ತಮ್ಮ ಜವಾಬ್ದಾರಿಯ ನಿರ್ವಹಣೆಗಾಗಿ ರಾಜ್ಯಗಳು ಕಾರ್ಯನಿರ್ವಹಣಾ ವರ್ಗ ಮತ್ತು ಸಲಹಾ ವರ್ಗಗಳಿಂದ ಕೂಡಿದ ಪೊಲೀಸ್ ಸಂಘಟನೆಯನ್ನು ಹೊಂದಿದೆ.
ರಾಜ್ಯಗಳಲ್ಲಿ ಪೊಲೀಸ್ ಪಾತೆಯು ಗೃಹಮಂತ್ರಿಯ ಅಧೀನದಲ್ಲಿರುತ್ತದೆ. ಗೃಹಮಂತ್ರಿಯು ಪೊಲೀಸ್ ಆಡಳಿತಕ್ಕೆ ಸಂಬಂಧಪಟ್ಟ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಗೃಹ ಇಲಾಖೆಯ ಕಾರ್ಯದರ್ಶಿಯ ಭಾರತೀಯ ಆಡಳಿತ ಸೇವಾ ಹಂತದ ಅಧಿಕಾರಿಯಾಗಿದ್ದು ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಇವರು ಗೃಹಮಂತ್ರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಸಲಹೆ ಮತ್ತು ಸಹಾಯ ನೀಡುತ್ತಾರೆ. ಗೃಹ ಇಲಾಖೆಯು ಪೊಲೀಸ್ ಆಡಳಿತದ ಮೇಲ್ವಿಚಾರಣೆ ಮತ್ತು ಸಂಯೋಜನೆ ಕಾರ್ಯವನ್ನು ನಿರ್ವಹಿಸುತ್ತದೆ.
ರಾಜ್ಯ ಪೊಲೀಸ್ ಸಂಘಟನೆ ರಚನೆ ಕೆಳಗಿನಂತಿದೆ.
• ಗೃಹಸಚಿವರು/ಗೃಹ ಕಾರ್ಯದರ್ಶಿ
• ಪೊಲೀಸ್ ಮಹಾನಿರ್ದೇಶಕರು (DGP) (ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರು)
• ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ADGP)
• ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (DIGP)
• (ವಲಯ ಕಛೇರಿಯ ಮುಖ್ಯಸ್ಥರು)
• ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (SP) (ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ)
• ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DySP) (ಉಪವಿಭಾಗ ಕಛೇರಿ ಮುಖ್ಯಸ್ಥರು)
• ಇನ್ಸ್‌ಪೆಕ್ಟರ್ ಆಫ್ ಪೊಲೀಸ್ (CPI) (ವೃತ್ತ ಕಛೇರಿಯ ಮುಖ್ಯಸ್ಥರು)
• ಸಬ್‌ಇನ್ಸ್‌ಪೆಕ್ಟರ್ ಆಫ್ ಪೊಲೀಸ್ (PSI)
• ಅಸಿಸ್ಟಂಟ್ ಸಬ್‌ಇನ್ಸ್‌ಪೆಕ್ಟರ್ ಆಫ್ ಪೊಲೀಸ್ (ASI)
• ಹೆಡ್ ಕಾನ್ಸ್‌ಟೇಬಲ್
• ಪೊಲೀಸ್ ಕಾನ್ಸ್‌ಟೇಬಲ್
ಪೊಲೀಸ್ ವ್ಯವಸ್ಥೆ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ ಹಾಗೂ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಕಾಮೆಂಟ್ ಪೋಸ್ಟ್ ಮಾಡಿ