ಆಧುನಿಕ ಭಾರತದ ಇತಿಹಾಸ - ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ

 

ದಕ್ಷಿಣ ಭಾರತದಲ್ಲಿ ರಾಜಕೀಯ ನಿಯಂತ್ರಣ ಸಾಧಿಸಿದ ಬ್ರಿಟಿಷರು 18ನೆಯ ಶತಮಾನದ ದ್ವಿತೀಯಾರ್ಧದಲ್ಲಿ ಸಂಪದ್ಭರಿತ ಬಂಗಾಳ ಪ್ರಾಂತ್ಯದ ಮೇಲೆ ಪೂರ್ಣ ನಿಯಂತ್ರಣ ಸಾಧಿಸಲು ಮುಂದಾದರು.ಕೃಷಿ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಬಂಗಾಳ ಪ್ರಾಂತ್ಯವು ಸಮೃದ್ಧ ಬೆಳವಣಿಗೆ ಹೊಂದಿತ್ತು. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಈ ಪ್ರಾಂತ್ಯದಿಂದ ಅಪಾರ ಲಾಭವನ್ನೂ ಗಳಿಸುತ್ತಿತ್ತು. 1727ರಲ್ಲಿ ಮೊಗಲ್ ದೊರೆ ಫಾರೂಕ್ ತಿಯಾರನು ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ಕಂಪನಿಗೆ ನೀಡಿದ ‘ದಸ್ಯಕ್’ಗಳ (ಪರವಾನಿಗೆ) ಅವರ ಲಾಭಕ್ಕೆ ಕಾರಣವಾಗಿತ್ತು. ಆದರೆ ಕಂಪನಿಗೆ ಸೀಮಿತವಾಗಿದ್ದ ಈ ದಸ್ತಕಗಳನ್ನು ಕಂಪನಿಯ ನೌಕರರು ತಮ್ಮ ಖಾಸಗಿ ವ್ಯಾಪಾರ-ವ್ಯವಹಾರಕ್ಕಾಗಿ ದುರುಪಯೋಗ ಪಡಿಸಿಕೊಳ್ಳತೊಡಗಿದರು. ಇದರಿಂದ ಬಂಗಾರ ಸರ್ಕಾರಕ್ಕೆ ಅಪಾರ ನಷ್ಟ ಉಂಟಾಗುತ್ತಿತ್ತು. ಆದ್ದರಿಂದ ಮುರ್ಷಿದ್ ಅಲಿ ಖಾನ್‌ನಿಂದ ಆಲಿವರ್ಧಿಖಾನ್‌ವರೆಗಿನ ಎಲ್ಲ ನವರೂ ದನ ದುರುಪಯೋಗವನ್ನು ವಿರೋಧಿಸುತ್ತಿದ್ದರು. ಮುಂದೆ ಇದೇ ವಿಚಾರವು ನವಾಡಿ ಮತ್ತು ಕಂಪನಿಯ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು. ಇದರ ಪರಿಣಾಮವಾಗಿಯೇ ಭಾರತದ ಇತಿಹಾಸಕ್ಕೆ ಹೊಸ ತಿರುವನ್ನು ಕೊಟ್ಟಿ ಅತ್ಯಂತ ಮಹತ್ವಪೂರ್ಣವಾದ ಎರಡು ಯುದ್ಧಗಳು ನಡೆದವು, ಅವುಗಳ ಸ್ಥಾನ ಮತ್ತು ಬಕ್ಸಾರ್ ಕದನಗಳು,

ನಿಮಗಿದು ತಿಳಿದಿರಲಿ : ದಸ್ತರ್ಕ್ ಯಾವುದೇ ತೆರಿಗೆ ಇಲ್ಲದೆ, ಸರಕುಗಳ ಆಮದು ಮತ್ತು ರಫ್ತು ಮಾಡಲು ಹಾಗೂ ಸರಕುಗಳ ಸಾಗಾಣೆ ಮಾಡಲು ಬೇಕಾದ ಪರವಾನಿಗೆ ಪತ್ರ

ಪ್ಲಾಸಿ ಕದನ (1757) : ಬಂಗಾಳದ ನವಾಬನಾದ ಅಭಿವರ್ದಿ ಖಾನನು 1956ರಲ್ಲಿ ನಿಧನನಾದನು. ನಂತರ ಅವನ ಮೊಮ್ಮಗನಾದ ಸಿರಾಜ್-ಉದ್-ದೌಲನು ಅಧಿಕಾರಕ್ಕೆ ಬಂದನು. ಯುವ ನವಾಬನಾದ ಸಿರಾಜ್-ಉದ್-ದೌಲನಿಗೂ ಮತ್ತು ಬ್ರಿಟಿಷರಿಗೂ 1757ರಲ್ಲಿ ಇತಿಹಾಸ ಪ್ರಸಿದ್ಧ ಪ್ಲಾಸಿ ಕದನ ನಡೆದಿತು.

ಕಾರಣಗಳು:

1. ದಸ್ತಕ್ಗಳ ದುರುಪಯೋಗ : ಕಂಪನಿಯ ವ್ಯಾಪಾರಕ್ಕಾಗಿ ನೀಡಿದ ‘ದಸ್ತಕ್’ಗಳನ್ನು ಬ್ರಿಟಿಷ್ ನೌಕರರು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಸಿರಾಜನನ್ನು ಕೆರಳಿಸಿತು.ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದದ್ದು

2. ಅನುಮತಿ ಇಲ್ಲದೆ ಕೋಟೆಯ ದುರಸ್ಥಿ : ಬ್ರಿಟಿಷರು ಪಂಚರ ಭಯದಿಂದ ಕಲ್ಕತ್ತಾದ ಕೋಟೆಯನ್ನು ಬಲಪಡಿಸಿ, ಫಿರಂಗಿಗಳನ್ನು ಪಟ್ಟರು ಅನುಮತಿ ಪಡೆಯದ ಕೋಟೆಯನ್ನು ದುರಸ್ತಿ ಮಾಡಿಸಿದ್ದರಿಂದ ಫಿರಂಗಿಗಳನ್ನು ತೆಗೆದು ಹಾಕಲು ಸಿರಾಜ್ ಸೂಚಿಸಿದನಾದರೂ ಅವರು ಪಾಲಿಸಲಿಲ್ಲ. ಇದರಿಂದ ಸಿರಾಜನು ಆಕ್ರೋಶಗೊಂಡನು

3. ಕಚ್ಚುಕೋಣೆ ದುರಂತ : ಆಗ ಸಿರಾಜನು ಮೊರ್ಚ್: ವಿಲಿಯಂ ಕೋಟೆಯನ್ನು ಸುಲಭವಾಗಿ ಗದ್ದು ಕೆಲವರನ್ನು ಸೆರೆಹಿಡಿದನು, ಸಿರಾಜನು ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯೊಂದರಲ್ಲಿ ಬಂಧಿಸಿಟ್ಟನು, ಅವರಲ್ಲಿ 123 ಮಂದಿ ಅಸುನೀಗಿದರು ಎಂಬುದಾಗಿತ್ತು ಇದನ್ನು ಕಪ್ಪುಕೋಣೆಯ ದುರಂತ ಎಂದು ಕರೆಯಲಾಗಿದೆ. ಈ ಸುದ್ದಿ ಕೇಳಿ ರಾಬರ್ಟ್ ಡ್ರೈವ್ ಉಗ್ರ ಕೋಪದಲ್ಲಿ ಬಲಿಷ್ಠ ಸೇನೆಯೊಂದಿಗೆ ಬಂಗಾಳಕ್ಕೆ ಬಂದನು.

ಮೊದಲು ನವಾಬನ ವಿರೋಧಿಗಳಾದ ಮಾಣಿಕ್‌ಚಂದ್, ಓಮೀಚಾಂ ಜಗತ್ಸೇಫ್ (ಬಂಗಾಳದ ಲೇವಾದೇವಿಗಾರ) ಮೊದಲಾದ ಶ್ರೀಮಂತರನ್ನು ತನ್ನತ್ತ ಸೆಳೆದುಕೊಂಡನು. ನಂತರ ಸಿರಾಜನ ಸೇನಾಪತಿಯಾದ ಮೀರ್ ಜಾಫರನಿಗೆ ನವಾಬನನ್ನಾಗಿ ಮಾಡುವ ಆಮಿಷವೊಡ್ಡಿ ಯುದ್ಧದಲ್ಲಿ ತಟಸ್ಥವಾಗಿಡಲು ರಾಜ್ಯವನ್ನು ಒಪ್ಪಿಸಿದನು. ಇದರಿಂದ ಧೈರ್ಯಗೊಂಡ ರಾಬರ್ಟ್ ಕೈವನು 1757 ಜೂನ್ 23 ರಂದು ಸಿರಾಜ್-ಉದ್ ದೌಲನ ಮೇಲೆ ಕದನ ಸಾರಿದನು ಪ್ಲಾಸಿ ಎಂಬಲ್ಲಿ ನಡೆದ ಕದನದಲ್ಲಿ ವನು ಯೋಜಿಸಿದಂತೆಯೇ ಎಲ್ಲವೂ ನಡೆಯಿತು, ಯುದ್ಧ ಭೂಮಿಯಿಂದ ತಪ್ಪಿಸಿಕೊಂಡ ಸಿರಾಜ್-ಉದ್-ದೌಲನನ್ನು ಸೆರೆಹಿಡಿದು ಕೊಲ್ಲಲಾಯಿತು,

ಪರಿಣಾಮಗಳು :

1. ಈ ಯುದ್ಧವ ಭಾರತೀಯರಲ್ಲಿದ್ದ ಅನೈಕ್ಯತೆ, ಅಸಂಘಟನೆ ಮತ್ತು ಈ ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು,

2. ಏರ್ ಜಾಫರ್ ಬಂಗಾಳದ ನವಾಬನಾದನು.

3. ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು

4. ಸಿರಾಜನು ಕಲ್ಕತ್ತಾದ ಮೇಲೆ ನಡೆಸಿದ ಆಕ್ರಮಣಕ್ಕೆ ಪರಿಹಾರವಾಗಿ ಮೀರ್ ಜಾಫರ ಹದಿನೇಳು ಕೋಟಿ ವಿಪತ್ತು ಲಕ್ಷ ರೂಪಾಯಿಗಳನ್ನು ನೀಡಿದನು.

ಒಟ್ಟಾರೆ, ಮೀರ್ ಜಾಫರನ್ನು ಕಂಪನಿ ಮತ್ತು ನೌಕರರ ಕೈಗೊಂಬೆಯಾಗುವ ಮೂಲಕ ನಿರಂತರ ಶೋಷಣೆಗೆ ಒಳಗಾದನು. ಇದರಿಂದ ನವಾಬನ ಬೊಕ್ಕಸ ಬಡಾಯಿತೇ ವಿನಃ ಧನ ಪಿಶಾಚಿಗಳಾದ ಕಂಪನಿಯ ಅಧಿಕಾರಿಗಳ ಕೃಷಿ ಮಾತ್ರ ತೀರಲಿಲ್ಲ. ಪರಿಣಾಮವಾಗಿ ಬ್ರಿಟಿಷರು ಮೀರ್ ಜಾಫರ್ ಅಸಮರ್ಥನೆಂದು ಬಿಂಬಿಸಿ ಅವನನ್ನು ನವಾಬ ಸ್ಥಾನದಿಂದ ಪದಚ್ಯುತಗೊಳಿಸಿ ಅವನ ಅಳಿಯನಾದ ಮೀರ್ ಖಾಸಿಂನನ್ನು ಬಂಗಾಳದ ನವಾಬನೆಂದು ನೇಮಿಸಿದರು.

ಬಕ್ಸಾರ್ ಕದನ (1764) : ಮೀರ್ ಬಾಸಿಂ ಒಬ್ಬ ಸಮರ್ಥ ಆಡಳತಗಾರ, ಈತನು ಸಹ ಆರಂಭದಲ್ಲಿ ಕಂಪನಿಗೆ ನಿಷ್ಠೆಯಿಂದಿದ್ದನು. ಎರಡು ಲಕ್ಷ ಪೌಂಡ್ ಹಣದ ಜೊತೆಗೆ ಕೆಲವು ಪ್ರದೇಶಗಳನ್ನು ಕಂಪನಿಗೆ ಬಿಟ್ಟುಕೊಟ್ಟನು. ಆದರೆ, ಶೀಘ್ರವೇ ಮೀರ್ ಖಾಸಿ ತನ್ನನ್ನು ಸ್ವತಂತ್ರ ರಾಜನೆಂದು ಭಾವಿಸಿದನು. ದಸ್ತಕ್‌ನ ದುರ್ಬಳಕೆಯನ್ನು ಪರಿಶೀಲಿಸಿ ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತ ಎಂದು ಘೋಷಿಸಿದನು. ಇದರಿಂದಾಗಿ ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಡನೆ ನೇರ ಸ್ಪರ್ಧೆಗಿಳಿದರು, ಪರಿಣಾಮ, ಬ್ರಿಟಿಷರ ವ್ಯಾಚಾರಕ್ಕೆ ಭಾರಿ ಹೊಡೆತ ಬಿದ್ದಿತು. ಬ್ರಿಟಿಷರಿಗೆ ನವಾಬನನ್ನು ವಿರೋಧಿಸಲು ಇದಿಷ್ಟೆ ಸಾಕಿತ್ತು. ಅವರು ಮೀರ್ ಖಾಸಿಂನನ್ನು ಇಳಿಸಿ ಮತ್ತೆ ಮೀರ್ ಜಾಫರ್‌ನನ್ನು ನವಾಬನಾಗಿ ಮಾಡಿದರು. ಬ್ರಿಟಿಷರ ಕುಟಿಲತೆಯನ್ನೆಲ್ಲ ಅರಿತಿದ್ದ ಮಿರ್ ಖಾಸಿಮನು ಬ್ರಿಟಿಷರ ವಿರುದ್ಧ ಸಂಘಟನಾತ್ಮಕ ಹೋರಾಟಕ್ಕೆ ಮುಂದಾದನು, ಭಾರತೀಯ ವ್ಯಾಪಾರಿಗಳು ಮತ್ತು ವಿವಿಧ ಕಸುಬುದಾರರು ಅವನ ಬೆಂಬಲಕ್ಕೆ ನಿಂತರು, ಈ ನಿಟ್ಟಿನಲ್ಲಿ ಮುಂದುವರೆದ ಮೀರ್ ಬಾಮನು ಮೊಗಲ್ ದೊರೆ ಎರಡನೇ ಪ ಅಲಂ’ ಮತ್ತು ಔದ್‌ನ ನವಾಬ ‘ಸುಜ್-ಉರ್-ಮೇ ಕೊಂದಿಗೆ ಒಪ್ಪಂದ ಮಾಡಿಕೊಂಡನು. ಪರಿಣಾಮವಾಗಿ, ‘ಮೀರ್ ಖಾಸಿ’ ನೇತೃತ್ವದ ಮೂರೂ ಸಂಯುಕ್ತ ಸೇನೆಗಳು “ಪೆಕ್ಟರ್ ಮನೋ’ ನೇತೃತ್ವದ ಬ್ರಿಟಿಷ್ ಸೇನೆಯನ್ನು 1764ರಲ್ಲಿ ‘ಬಕರ್” ಎಂಬಲ್ಲಿ ಮುಖಾಮುಖಿಯಾದವೊ ಅಂತಿಮವಾಗಿ ಯುದ್ಧದಲ್ಲಿ ಮೀರ್ ಖಾಸಿಂ ಸೋತು ಪಲಾಯನ ಮಾಡಿದರೆ, ಈ ಆಲಂ ಶರಣಾಗತನಾದನು, ಬ್ರಿಟಿಷ್ ಶಕ್ತಿಗೆ ತಡೆಯೊಡ್ಡುವ ಈ ಒಕ್ಕೂಟದ ಪ್ರಯತ್ನ ಸಂಪೂರ್ಣ ವಿಫಲವಾಯಿತು.

ಪರಿಣಾಮಗಳು :

1. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ‘ಜವಾನಿ’ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು

2. ಷಾ ಆಲದ ವಾರ್ಷಿಕ 20 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು.

3. ಔದ್‌ನ ನವಾಬನಾದ ಮುಜ್-ಉದ್-ದೌಲನು ಕಂಪನಿಗೆ ಯುದ್ಧನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.

4. ಬರ್‌ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು.

ಅಂತಿಮವಾಗಿ ಬಕ್ಸರ್ ಕದನವು ಬ್ರಿಟಿಷರು ಬಂಗಾಳ, ಬಿಹಾರ ಮತ್ತು ಒರಿಸ್ಸಾದ ನಿಜವಾದ ಒಡೆಯರೆಂದು ದೃಢೀಕರಿಸಿತು ಹಾಗೂ ಔದ್ ಕೂಡ ಅವರ ಅಧೀನದಲ್ಲಿ ಉಳಿಯುವಂತಾಯಿತು. 1765ರಲ್ಲಿ ರಾಬರ್ಟ್ ಕೈವನು ಬಂಗಾಳದಲ್ಲಿ ‘ದ್ವಿ ಪ್ರಭುತ್ವ’ ಪದ್ಧತಿಯನ್ನು ಜಾರಿಗೆ ತಂದನು. ಈ ಪದ್ಧತಿಯಂತೆ ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದರು ಆದರೆ, ನವಾಬನು ಆಡಳಿತ, ನ್ಯಾಯ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು. ಹೀಗೆ ಬ್ರಿಟಿಷರು ತಮ್ಮ ವಾಣಿಜ್ಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಭಾರತದಲ್ಲಿ ರಾಜಕೀಯ ಪರಮಾಧಿಕಾರವನ್ನು ಸ್ಥಾಪಿಸಿದರು.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು