ಬ್ರಿಟಿಷರು ಕಾರ್ನಾಟಿಕ್ ಯುದ್ಧಗಳ ಮೂಲಕ ಭಾರತದಲ್ಲಿ ಯಾವುದೇ ಯುರೋಪ್ ದೇಶಗಳು ತಮ್ಮ ಎದುರಾಳಗಳಾಗಿ ನಿಲ್ಲದಂತೆ ಮಾಡಿದರು. ಪ್ಲಾಸಿ ಮತ್ತು ಬಕ್ಲರ್ ಕವನಗಳ ಮೂಲಕ ಬಂಗಾಳ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು, 1765ರ ಹೊತ್ತಿಗೆ ಬಹುತೇಕ ಪೂರ್ವ ಭಾಗದ ಭಾರತದ ಮೇಲೆ ಪ್ರಭುತ್ವ ಸ್ಥಾಪಿಸಿದರು. ಆದರೆ ಭಾರತದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಮೈಸೂರು ಮತ್ತು ಮರಾಠ ಸಾಮ್ರಾಜ್ಯ ಪ್ರಭಲರಗಿದ್ದ ಕಾರಣ ಅವರ ಆಟಾಟೋಪ ಬಂಗಾಳ ಮತ್ತು ಬೊಂಬಾಯಿಗೆ ಸಿಮೀತಗೊಂಡಿತ್ತು.
ಬ್ರಿಟಷರ ಮುಂದಿನ ವಿಸ್ತರಣಾ ನೀತಿಗೆ ಅಡ್ಡಿಯಾಗಿದ್ದವರು ಮರಾಠ ಪೇಶ್ವಗಳು ಮತ್ತು ಮೈಸೂರು ಸಂಸ್ಥಾನದಲ್ಲಿ ಅಧಿಕಾರಕ್ಕೆ ಬಂದ ಹೈದರಾಲಿ ಮತ್ತು ಅವನ ಮಗ ಟಿಪ್ಪುಸುಲ್ತಾನ್. ಇವರ ನಂತರ ವಾಯವ್ಯ ಭಾರತದಲ್ಲಿ ಸಿಖ್ಖರು ಪ್ರಭಲ ವಿರೋಧಿಗಳಾಗಿದ್ದರು. ಹತ್ತೊಂತ್ತನೆಯ ಶತಮಾನದ ಆರಭದ ದಶಕದಲ್ಲಿ ಪ್ರವರ್ಧಮಾನಕ್ಕೆ ಬಂದ ರಣಜಿತ್ ಸಿಂಗನು ಸಿಬ್ಬರನ್ನು ಸಂಘಟಿಸುವಲ್ಲಿ ಯಶಸ್ವಿಯಾದನು. ಬ್ರಿಟಿಷರು ಭಾರತದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಹತ್ತೊಂಬತ್ತನೇ ಶತಮಾನದ ಮಧ್ಯಂತರದವರೆಗೂ ಮೇಲಿಂದ ಮೇಲೆ ಅನೇಕ ಯುದ್ಧಗಳನ್ನು ಕೈಗೊಂಡರು. ಅಂತೆಯೇ ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಉಪಾಯವಾಗಿಯು ಭಾರತಿಯ ರಾಜ್ಯಗಳನ್ನು ಕಬಳಿಸಿದರು. ಈ ಅವಧಿಯಲ್ಲಿ ಬ್ರಿಟೀಷರು ಭಾರತದ ದಕ್ಷಿಣ, ಪಶ್ಚಿಮ ಮತ್ತು ವಾಯವ್ಯ ಭಾಗಗಳಲ್ಲಿ ನಡೆಸಿದ ಯುದ್ಧಗಳಲ್ಲಿ ಮೂರು ಆಂಗ್ಲೋ-ಮರಾಠ ಯುದ್ಧಗಳು, ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳು ಮತ್ತು ಎರಡು ಆಂಗ್ಲೋ-ಸಿಖ್‌ಯುದ್ಧಗಳೂ ಸೇರಿವೆ.
ಆಂಗ್ಲೋ-ಮರಾಠ ಯುದ್ಧಗಳು
ಮೊದಲ ಆಂಗ್ಲೋ-ಮರಾಠ ಯುದ್ಧ (1775-1782): ಬಕ್ಸಾರ್ ಕದನದಲ್ಲಿ ಸೋತು ಐಟಿಷರ ಆಶ್ರಯದಲ್ಲಿದ್ದ ಮೊಗಲ್ ಚಕ್ರವರ್ತಿ ಎರಡನೇ ಷಾ ಆಲಂನನ್ನು ಮರಾಠರು ಕರೆತಂದು ಮು ದೆಹಲಿಯ ಸಿಂಹಾಸನದಲ್ಲಿ ಕುಳ್ಳಿರಿಸಿದರು. ಚಕ್ರವರ್ತಿಯು ಮೊದಲು ಬ್ರಿಟಿಷರಿಗೆ ನೀಡಿದ್ದ ಕೋರ ಮತ್ತು ಅಲಹಾಬಾದ್‌ಗಳನ್ನು ಮರಾಠರಿಗೆ ಕೊಟ್ಟನು. ಇದರಿಂದ ಮರಾಠರು ಮತ್ತು ಬ್ರಿಟಿಷರ ನಡುವೆ ವೈರತ್ವವು ಮನೆಮಾಡಿತು, ಮರಾಾರ ಬಲಿಷ್ಠ ಬೇರೆ ಮಾಧವರಾವ್ ಇದೇ ಸಮಯದಲ್ಲಿ ತೀರಿಕೊಂಡಿದ್ದು ಮರಾಠರಿಗ ತುಂಬಲಾರದ ನಷ್ಟವಾಯಿತು. ಪೇಳ್ವೆಯ ಅವನ ತಮ್ಮ ನಾರಾಯಣರಾಯನು ಬಂದನಾದರೂ ಅವನನ್ನು ಅವನ ಚಿಕ್ಕಪ್ಪ ರಘೋಬ(ರಘುನಾಥರಾವ್ ಕೊಲೆ ಮಾಡಿದನು. ಇದರಿಂದ ಪೇಳ್ವೆಯ ಸ್ಥಾನಕ್ಕೆ ಕಲಪ ಏರ್ಪಟ್ಟಿತು. ನಾನ ಪಡ್ನವೀಸ್ ನೇತೃತ್ವದಲ್ಲಿ ಸತ್ವ ಸ್ಥಾನಾಕಾಂಕ್ಷಿಯಾದ ರಥೋಟನ ಬದಲು ನಾರಾಯಣರಾಯನ ಮಗ ಎರಡನೇ ಮಾಧವರಾವ್‌ಗೆ ಮರಾಠ ಒಕ್ಕೂಟವು ಪಟ್ಟಕಟ್ಟಿತು. ಮರಾಠ ಮನೆತನಗಳಿಂದ ನಿರೀಕ್ಷಿತ ಬೆಂಬಲ ಸಿಗದ ರಘೋಬನು ಬ್ರಿಟಿಷರ ಬೆಂಬಲ ಕೂಡಿದನು. ಬಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು. ಬ್ರಿಟಿಷರು ಮತ್ತು ಮರಾಠ ಒಕ್ಕೂಟಗಳ ನಡುವೆ 1775-1982ರವರೆಗೆ ನಡೆದ ದೀರ್ಘ ಯುದ್ಧದಲ್ಲಿ ಮರಾಠರು ಪ್ರಾರಂಭಿಕ ಯಶಸ್ಸನ್ನು ಸಾಧಿಸಿದರೂ, ಅಂತಿಮವಾಗಿ ಅಹಮದಾಬಾದ್‌ನ್ನು ಕಳೆದುಕೊಂಡರು. ಮರಾಠ ಒಕ್ಕೂಟ ಯುದ್ಧ ಮುಂದುವರೆಸಲಾಗದೆ ಬ್ರಿಟಿಷರೊಂದಿಗೆ ಸಾಲ್‌ಬಾಯ್ ಒಪ್ಪಂದವನ್ನು ಮಾಡಿಕೊಂಡಿತು. ಎರಡನೇ ಮಾಧವರಾವನನ್ನು ಪೇಳ್ವೆಯಾಗಿ ನೇಮಸಲಾಯಿತುಸಲಾಯಿತು.
ಲಾರ್ಡ್ ವೆಲ್ಲೆಸಿ (1798-1805) ಮತ್ತು ಸಹಾಯಕ ಸೈನ್ಯ ಪದ್ಧತಿ: ಬರ್ಡ್ ವೆಲ್ಲೆಸ್ಲಿಯು ಗವರ್ನರ್ ಜನರಲ್ ಆಗಿ ಬಂದ ನಂತರ ಭಾರತದಲ್ಲಿ ಐಟಿಷರ ಸಾಮಾಜ್ಯ ವಿಸ್ತರಣೆಯು ದೊಡ್ಡ ಪ್ರಮಾಣದಲ್ಲಾಯಿತು. ಇವನ ಆಗಮನದ ಹೊತ್ತಿಗೆ ಬಲಿ ಮರಾಠ ಮತ್ತು ಮೈಸೂರು ರಾಜ್ಯಗಳು ದುರ್ಬಲಗೊಂಡಿದ್ದು ವಿಸ್ತರಣು ನಿತಿಗೆ ಅನುಕೂಲಕರವಾಗಿತ್ತು. ಈ ಗುರಿಯನ್ನು ಸಾಧಿಸಲು ಅವನು ಮೂರು ವಿಧಾನಗಳನ್ನು ಅನುಸರಿಸಿದನು, ಅವುಗಳೆಂದರೆ: ಸಹಾಯಕ ಸೈನ್ಯ ಪದ್ಧತಿ, ಹೊಸ ರಾಜ್ಯಗಳ ಮೇಲೆ ಯುದ್ಧಗಳು ಮತ್ತು ಈಗಾಗಲೇ ಕಂಪನಿಯ ಆಧೀನಕ್ಕೆ ಒಳಪಟ್ಟಿರುವ ಉಜ್ಜುಗಳನ್ನು ನೇರ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವುದು. ಸಹಾಯಕ ಸೈನ್ಯ ಪದ್ಧತಿ: ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಸಲುವಾಗಿ ಸಹಾಯಕ ಸೈನ್ಯ ಪದ್ಧತಿ ಎಂಬ ನೀತಿಯನ್ನು ಜಿಲ್ಲೆಯು 1798ರಲ್ಲಿ ಜಾರಿಗೆ ತಂದನು. ಸಹಾಯಕ ಸೈನ್ಯ ಪದ್ಧತಿಯು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪು ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನಿಕ ಒಪ್ಪಂದವಾಗಿದೆ.
ಸಹಾಯಕ ಸೈನ್ಯ ಪದ್ದತಿಯ ನಿಬಂಧನೆಗಳು:
1. ಭಾರತೀಯ ರಾಜನ ಬ್ರಿಟಿಷ್ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು.
2. ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು, ಇಲ್ಲದೆ ನಿರ್ದಿಷ್ಟ ಕಂದಾಯ ಪ್ರದೇಶವನ್ನು ಬಿಟ್ಟುಕೊಡಬೇಕು.
3. ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟನನ್ನು ನೇಮಿಸಿಕೊಳ್ಳಬೇಕು.
4. ಬ್ರಿಟಿಷರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.
5. ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ ಅಥವಾ ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ್ ಜನರಲ್‌ನ ಸಮ್ಮತಿ ಬೇಕು,
6. ಇದಕ್ಕೆ ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಅಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.
ಈ ನೀತಿಯಿಂದ ಬ್ರಿಟಿಷರ ಸೈನಿಕ ನಿರ್ವಹಳ ಸುಲಭವಾಯಿತು ಮತ್ತು ಭಾರತೀಯ ರಾಜ್ಯಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು. ಭಾರತೀಯ ರಾಜ್ಯಗಳನ್ನು ಆರ್ಥಿಕವಾಗಿ ತೀವ್ರ ಶೋಷಣೆಗೆ ಗುರಿಪಡಿಸಲಾಯಿತು. ಈ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ರಾಜ್ಯ ಹೈದರಾಬಾದ್ ಸಂಸ್ಥಾನ, ಅನಂತರ ಮೈಸೂರು, ಔದ್, ತಂಜಾವೂರು, ಮರಾಠಿ, ಆರ್ಕಾಟ್ ಪ, ಬಿರಾರ್, ಗ್ವಾಲಿಯರ್ ಮೊದಲಾದ ರಾಜ್ಯಗಳು ಈ ಒಪ್ಪಂದಕ್ಕೆ ಒಳಪಟ್ಟಿದ್ದವು.
ಎರಡನೇ ಆಂಗ್ಲೋ-ಮರಾಠ ಯುದ್ಧ (1803-1805): ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷ ಈ ಯುದ್ಧಕ್ಕೆ ಕಾರಣವಾಯಿತು. ಹೋಸ್ಟರ್ ಮನೆತನದ ಯಶವಂತರಾವ್ ಒಂದು ಕಡೆಯಾದರೆ ಸಿಂಧಿಯಾ ಮನೆತನದ ದೌಲತ್ ರಾವ್ ಹಾಗೂ ವೆಚ್ಚ ಎರಡನೆ ಬಾಜಿರಾವ್ ಇನ್ನೊಂದು ಕಡೆಗಿದ್ದರು. 1802ರಲ್ಲಿ ಹೋಲ್ಡರ್ ಸೈನ್ಯದ ಸಿಂಧಿಯಾ ಮತ್ತು ಪೇಳ್ವೆಯ ಸೈನ್ಯವನ್ನು ಸೋಲಿಸಿ, ಪೇಶ್ವ ಬ್ರಿಟಿಷರ ಸಹಾಯ ಯಾಚಿಸಿದರು. ಉರ್ಡ್ ವೆಲ್ಲೆಸ್ತಿಗೆ ಮರಾಠರ ಅಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ಸಿಕ್ಕಿತು, ವೇಶೈಯು ವೆಸ್ನಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು. ಬೇಶ್ವಯು- ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ್ದನ್ನು ವಿರೋಧಿಸಿ ಹೋಡ್ಕ, ಭೋಂಸ್ಕ, ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಿದರು. 1803-1805ರವರೆಗೆ ಮರಾಠ ಮನೆತನಗಳ ಸೇನೆಯನ್ನು ಜಿಲ್ಲೆಯು ಅನೇಕ ಯುದ್ಧಗಳಲ್ಲಿ ಮಣಿಸಿದನು. ಆದರೆ ಅವನ ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು. ಇದರಿಂದ ತೀವ್ರ ಟೀಕೆಗೆ ಒಳಗಾದ ವೆಲ್ಲೆಕ್ರಿಯು ತನ್ನ ಹುದ್ದೆಗೆ ರಾಜಿನಾಮ ನೀಡಿ ಸ್ವದೇಶಕ್ಕೆ ಮರಳಿದನು. ಇದರಿಂದ ಆ ಪ್ರದೇಶದಲ್ಲಿ ತಾತ್ಕಾಲಿಕ ಶಾಂತಿ ನೆಲೆಸಿತು.
ಮೂರನೇ ಆಂಗ್ಲೋ-ಮರಾಠ ಯುದ್ಧ (1817-1818): ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದವು. ಪೇಶ್ವ ಕೂಡ ಬ್ರಿಟಿಷರ ನಿಯಂತ್ರಣದಿಂದ ಮುಕ್ತಗೊಳ್ಳಲು ಹವಣಿಸುತ್ತಿದ್ದನು. 1817ರಲ್ಲಿ ಬೇರೆಯು ಪೂನಾದಲ್ಲಿ ಬ್ರಿಟಿಷ್ ಕಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು. ನಾಗಪುರದ ಅಪ್ಪಾಸಾಹೇಬ ಮತ್ತು ಮಲ್ಲಾರರಾವ್ ಹೋಲ್ಡರ್ ಕೂಡ ಬ್ರಿಟಿಷರ ವಿರುದ್ಧ ಎದ್ದು ಸೋತರು. ಅಂತಿಮವಾಗಿ ಪೇಶ್ವ ಎರಡನೇ ಬಾಜರಾಯನು ಬ್ರಿಟಿಷರ ವಿರುದ್ಧ 1818ರಲ್ಲಿ ಕೋರೆಗಾವ ಮತ್ತು ಆ ಯುದ್ಧಗಳಲ್ಲಿ ಸೋತು ಶರಣಾದನು, ಪ್ರತಿಷರು ಪೇಶ್ವ ಪದವಿಯನ್ನು ರದ್ದುಗೊಳಿಸಿ ರಾಜರಾಯನಿಗೆ ವಿಶ್ರಾಂತಿ ವೇತನ ನೀಡಿದರು. ಬದಲಿಗೆ ಶಿವಾಜಿಯ ವಂಶಸ್ಥ ಪ್ರತಾಪಸಿಂಹನನ್ನು ಸಣ್ಣ ರಾಜ್ಯ ಸಕಾರಾದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಸಂಪ್ರದಾಯಕ ಮುಖಂಡನಾಗಿಸುವ ಮೂಲಕ ಮರಾಠರ ಪ್ರತಿರೋಧವನ್ನು ನಿಗ್ರಹಿಸಿದರು.
ಬ್ರಿಟಿಷ್ ಅಧಿಕಾರದ ಕ್ರೋಡೀಕರಣ (1818-1857): ಬ್ರಿಟಿಷರು 1818 ಅಂದ 1857ರವರೆಗೆ ಅಖಂಡ ಭಾರತವನ್ನು ಗೆಲ್ಲುವ ಕಾರ್ಯವನ್ನು ರ್ಪಗೊಳಿಸಿದರು. ಈ ಅವಧಿಯಲ್ಲಿ ಪಂಜಾಬ್, ಸಿಂದ್, ಔಫ್ ಮೊದಲಾದ ಪ್ರಮುಖ ರಾಜ್ಯಗಳನ್ನಲ್ಲದೆ ಅನೇಕ ಸಣ್ಣಪುಟ್ಟ ರಾಜ್ಯಗಳನ್ನೂ ಆಕ್ರಮಿಸಿದರು.
ಆಂಗ್ಲೋ-ಸಿಖ್ ಯುದ್ಧಗಳು: 1839ರಲ್ಲಿ ರಣಜಿತ್ ಸಿಂಗನು ಮರಣ ಹೊಂದಿದ ನಂತರ ಪಂಪಾಟಿನಲ್ಲಿ ರಾಜಕೀಯ ಅರಾಜಕತೆ ತಲೆ ಎತ್ತಿತು, 1809 ‘ನಿರಂತರ ಮೈತಿ ಒಪ್ಪಂದ’ವನ್ನು ಉಲ್ಲಂಘಿಸಿ ಬೆಂಜಾಟನ್ನು ಆಕ್ರಮಿಸಲು ಬ್ರಿಟಿಷರು ರೂಪಿಸಿದರು. 1845ರ ಡಿಸೆಂಬರ್ ನಲ್ಲಿ ಬ್ರಿಟಿಷರಿಗೂ ಪಂಜಾಬ್ ಸಂಚ ಸೈನ್ಯಕ್ಕೂ ಯುದ್ಧ ಆರಂಭವಾಯಿತು, ವಿದೇಶಿಯರಿಂದ ಇರಬಹುದಾದ ಆಪಾಯವನ್ನಂತ ಹಿಂದೂ, ಮುಸಲ್ಮಾನ ಹಾಗೂ ಸಿಬ್ಬರೆಲ್ಲರೂ ಒಂದಾಗಿ ಶೌರ್ಯವನ್ನು ಮೆರೆದರು, ಆದರೆ ಕೆಲವು ದೇಶದ್ರೋಹಿ ನಾಯಕರಿಂದ ಸೋಪಬೇಕಾಯಿತು. ಆ ವಮಾನಕರ ಲಾಹೋರ್ ಒಪ್ಪಂದಕ್ಕೆ 1846ರಲ್ಲಿ ಸ ಹಾಕದೇಕಾಯಿತು. ಅಂದಿನಿಂದ ಬ್ರಿಟಿಷ್ ರೆಸಿಡೆಂಟನು ಪರಿಚಾಲಿನ ನಿಜವಾದ ಆಡಳಿತಗಾರನಾದನು, ಹೀಗೆ ಪಂಜಾಬ್ ಬ್ರಿಟಿಷ್ ಆಶ್ರಿತ ರಾಜ್ಯವಾಯಿತು.
1848ರಲ್ಲಿ ಪಂಜಾಬಿನ ಮೇಲೆ ನೇರ ಬ್ರಿಟಿಷ್ ಆಳ್ವಿಕೆಯನ್ನು ಹೇರಲು ಹೊರಟಾಗ ಪಂಜಾಬಿಗಳು ಪ್ರತಿಭಟಿಸಿದರು. ಈ ಪ್ರತಿಭಟನೆಗಳ ನೇತೃತ್ವವನ್ನು ‘ಚಟ್ಟಾರ್ ಸಿಂಗ್ ಅಟ್ಟಾರಿವಾಲ’ ಮತ್ತು ‘ಮೂಲರಾಜ್’ ಅವರು ಕ್ರಮವಾಗಿ ಲಾಹೋರ್ ಮತ್ತು ಮುಲ್ತಾನ್‌ಗಳಲ್ಲಿ ವಹಿಸಿದ್ದರು. ಮತ್ತೆ ಪಂಜಾಬಿಗಳಿಗೆ ಸೋಲಾಯಿತು. ಅಂತಿಮವಾಗಿ ಲಾರ್ಡ್ ಡಾಲ್‌ಹೌಸಿಯು ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡನು.
ಡಾಲ್ ಹೌಸಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ: 1848ರಲ್ಲಿ ಭಾರತಕ್ಕೆ ಗವರ್ನರ್ ಜನರಲ್ ಆಗಿ ಬಂದ ಡಾಲ್‌ಹೌಸಿಯು ಭಾರತದ ಎಲ್ಲ ದೇಶಿಯ ಸಂಸ್ಥಾನಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸುವ ಅಂತಿಮ ಪ್ರಯತ್ನವನ್ನು ನಡೆಸಿದ, ಡಾಲ್‌ಹೌಸಿಯು ತನ್ನ ವಿಸ್ತರಣಾ ನೀತಿಯನ್ನು ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯ ಮೂಲಕ ಸಾಧಿಸಿದರು. ಈ ನೀತಿಯ ಪ್ರಕಾರ: ‘ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪತ್ರಗೆ ಉತ್ತರಾಧಿಕಾರಶದ ಪಕ್ಕಿರಲಿಲ್ಲ, ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳಲಾಗುತ್ತಿತ್ತು. ಈ ನೀತಿಗೆ ಒಳಪಟ್ಟಿ ರಾಜ್ಯಗಳಲ್ಲಿ ಸಕಾರ, ಜೈಫಲ್, ಸಂಬಲ್‌ಪುರ್, ಉದಯಪುರ್, ಝ, ನಾಗಪುರ ಮೊದಲಾದಗಳು ಪ್ರಮುಖವಾದವುಗಳಾಗಿದೆ. ಈ ರಾಜ್ಯಗಳ ರಾಜರಿಗೆ ಮಕ್ಕಳಿಲ್ಲದಿರುವುದನ್ನು ಮೊದಲೇ ಅರಿತಿದ್ದ ಬ್ರಿಟಿಷ್ ಗೌರರ್ ಜನರಲ್ನು ಈ ನೀತಿಯನ್ನು ರಾಜಕೀಯ ಆಸ್ತವಾಗಿ ಜಾರಿಗೊಳಿಸಿದನು.
ಡಾಲ್ ಹೌಸಿಯ ತಡೆಯಿಲ್ಲದ ರಾಜ್ಯಾಕ್ರಮಣದ ನಡೆಯಿಂದ ಭಾರತೀಯ ರಾಜರು ಮಾತ್ರವಲ್ಲ, ಅವರ ಬಗೆಗೆ ಸಹಾನುಭೂತಿಯುಳ್ಳ ಜನವರ್ಗವು ಕೂಡ ಬ್ರಿಟಿಷರ ವಿರುದ್ಧ ಮರೆತು ನಿಂತಿತು. ಮಡುಗಟ್ಟಿದ ಆಕ್ರೋಶ ಮತ್ತು ರಾಜಾಭಿಮಾನದ ಕಿಚ್ಚು ಬ್ರಿಟಿಷ್ ಪ್ರಭುತ್ವದ ವಿರುದ್ಧ ಬಂಡೇಳುವಂತೆ ಮಾಡಿತು. ಇದರ ಪರಿಣಾಮವಾಗಿಯೇ 1857ರ ಸಿಪಾಯಿ ದಂಗೆ ಸ್ಫೋಟಗೊಂಡಿತ್ತು.
ನಿಮಗೆ ತಿಳಿದಿರಲಿ
ರಣಜಿತ್ ಸಿಂಗ್ : 1780ರಲ್ಲಿ ಜನಿಸಿದ ರಣಜಿತ್ ಸಿಂಗನು ಸಿದ್ದರ ಮಿಸ್(ಒಕ್ಕೂಟಗಳಲ್ಲಿ ಒಂದಾದ ಸುಖರ್ ಚಾಕೀಯ ಎಸ್‌ನ ನಾಯಕ, ಮಹಾಂಗಳ ಮಗ ಹತ್ತನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡನು. ಅವನು ಸಣ್ಣ ಪ್ರದೇಶದ ಒಕ್ಕೂಟದ ನಾಯಕನಾಗಿದ್ದರು. ಉರುಲಿನ ಜಮಾನನ ಭಾರತದ ಮೇಲೆ ದಂಡಯಾತ್ರೆ ಕೈಗೊಂಡಾಗ ರಣಜಕನು ಅವನಿಗೆ ಸಲ್ಲಿಸಿದ ಸೇವೆಗೆ ಮೆಚ್ಚಿ ‘ರಾಜಾ’ ಎಂಬ ಪದವಿಯೊಂದಿಗೆ ಲಾಹೋರಿನ ರಾಜ್ಯಪಾಲರಾಗಿ ನೇಮಕಗೊಂಡನು. ಆಗ ಅವನಿಗೆ ಹತ್ತೊಂಬತ್ತು ವರ್ಷ, ನಂತರ ವಿಸ್ಮಯಕಾರಿ ರೀತಿಯಲ್ಲಿ ಸಾಗಿ ಬೆಳೆದ 13 ಸಮುದಾಯದ ಮೇಲೆ ಸಂಪೂರ್ಣ ಪರಮಾಧಿಕಾರ ಪಡೆಯುವುದೇ ಅವನ ಪರಮ ಧೈಯವಾಗಿತ್ತು, ಸನ್ ನದಿಯ ಸಮ ಭಾಗಗಳ ಎಲ್ಲ ಸಿಖ್ ಪ್ರಮುಖರನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಪಂಜಾಬಿನಲ್ಲಿ ತನ್ನದೇ ಸ್ವಂತ ರಾಜ್ಯ ಸ್ಥಾಪಿಸಿದ. 1809ರಲ್ಲಿ ಅಮೃತಸರದಲ್ಲಿ, ಇಂತವರೊಡನೆ ನಿರಂತರ ಮೈತ’ ಒಪ್ಪಂದಕ್ಕೆ ಸಹಿಹಾಕಿದನು, ಯುರೋಪಿಯನ್ ಮಾದರಿಯಲ್ಲಿ ಕ್ಷೇತ್ರವನ್ನು ಸಂಘಟಿಸಿ ತರಬೇತುಗೊಳಿಸಿದನು. ಇವನ ಸೈನ್ಯ ಕೇವಲ ಅಂಗೆ ಸೀಮಿತಗೊಂಡಿರದ ಗೂರ್ಖಾಗಳು, ಬಿಹಾರಿಗಳು, ರ್ಪಣರು, ಮುಸಲ್ಮಾನರಿಂದ ಕೂಡಿತ್ತು. ಲಾಹೋರಿನಲ್ಲಿ ಫಿರಂಗಿಗಳನ್ನು ತಯಾರಿಸಲು ಎರಕ ಹೊಯ್ಯುವ ಕಾರ್ಖಾನೆಯನ್ನು ತೆರೆದರು. ಅಂದಿನ ಕಾಲದಲ್ಲಿದ್ದ ಭಾರತೀಯ ರಾಜರ ಸೈನ್ಯಗಳಲ್ಲಿಯೇ ರಣಜಿತ್ ಸಿಂಗನ ಚೈನ್ ಅತ್ಯುತ್ತಮವಾಗಿತ್ತು. ಜಾತ್ಯತೀತ ಮನೋಭಾವದವನೂ, ಉದಾರ ಹೃದಯಿಯೂ ಆದ ರಣಜಿತ್ ಸಿಂಗನು ಸಿಖ್ ಗುರುಗಳನ್ನಲ್ಲದೆ ಹಿಂದೆ ಮತ್ತು ಮುಸಲ್ಮಾನ ಗುರುಗಳನ್ನೂ ಶೋಷಿಸುತ್ತಿದ್ದನು. ಎಲ್ಲ ಧರ್ಮಿಯರೂ ಅವನ ಆಡಳಿತದ ಉನ್ನತ ಸ್ಥಾನದಲ್ಲಿದ್ದರು. ಪ್ರಟಿಷರನ್ನು ಎದುರು ಹಾಕಿಕೊಳ್ಳದೆ ಸಿ ರಾಜ್ಯವನ್ನು ರಕ್ಷಿಸುವಲ್ಲಿ ಯಶಸ್ವಿಯಾದನು ಅದೇ ರೀತಿ ಬ್ರಿಟಿಷರು ವಾಯುವದ ಭಾಗದಿಂದ ನಡೆಯಬಹುದಾದ ಸಂಭಾಸ್ಯೆ ದಾಳಿಗಳನ್ನು ತಡೆಯಲು ರಜಿತ್ ಸಿಂಗನ ರಾಜ್ಯದಂತದ ರಕ್ಷಣಾ ರಾಜ್ಯವೊಂದರ (ಬಲ ಸ್ಟೇಟ್) ಅವಶ್ಯಕತೆ ಇತ್ತು. ಒಟ್ಟಾರೆ, ಸ್ವತಂತ್ರ ರಾಜ್ಯವೊಂದನ್ನು ಕಟ್ಟಿ ಕೊನೆಯವರೆಗೂ ಸ್ವತಂತ್ರವಾಗಿಯೇ ಆ 1879ರಲ್ಲಿ ರಣಜಿತ್ ಸಿಂಗ್ ನಿಧನ ಹೊಂದಿದನು.
ಕಾಮೆಂಟ್ ಪೋಸ್ಟ್ ಮಾಡಿ