ಆಧುನಿಕ ಭಾರತದ ಇತಿಹಾಸ - ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

 

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಆರಂಭದಲ್ಲಿ ಕೇವಲ ಕಂಪನಿಯಾಗಿ ತನ್ನ ವಾಣಿ ಹಿತಾಸಕ್ತಿಗಳನ್ನು ಮಾತ್ರ ಪೂರೈಸಿಕೊಳ್ಳುವ ಕೆಲಸ ಮಾಡಿತು, ನೂರಾರು ರಾಜಮನೆತನಗಳಲ್ಲಿ ಹಂಚಿಹೋಗಿದ್ದ ಭಾರತದ ಪರಿಸ್ಥಿತಿಯನ್ನು ಅವಲೋಕಿಸಿದ ಬ್ರಿಟಿಷರು ಈ ಪರಿಸ್ಥಿತಿಯನ್ನು ತಮ್ಮ ರಾಜಕೀಯ ಏಳಿಗೆಗೆ ಬಳಸಿಕೊಂಡರು. ಪರಸ್ಪರ ಕಚ್ಚಾಡುತ್ತಿದ್ದ ರಾಜರ ನಡುವೆ ಒಡೆದು ಆಳುವ ನೀತಿಯನ್ನು ಬಳಸಿಕೊಂಡು ಅವರೆಲ್ಲರನ್ನೂ ಕ್ರಮೇಣ ತಮ್ಮ ಅಧೀನಕ್ಕೆ ತೆಗೆದುಕೊಂಡರು. ಆಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ‘ಸಂಧಾನ’ ಮತ್ತು ‘ಯುದ್ಧ’ಗಳ ಮಾರ್ಗಗಳನ್ನು ಸಮರ್ಥವಾಗಿ ಬಳಸಿಕೊಂಡರು.

ವಿವಿಧ ಉಪಾಯಗಳನ್ನು ಬಳಸಿ ಭಾರತವನ್ನು ರಾಜಕೀಯವಾಗಿ ತಮ್ಮ ಅಧೀನಕ್ಕೆ ತೆಗೆದುಕೊಂಡ ನಂತರ ಅದನ್ನು ಶಾಶತ್ವವಾಗಿ ತಮ್ಮಲ್ಲಿ ಹೇಗೆ ಉಳಿಸಿಕೊಳ್ಳಬೇಕೆನ್ನುವುದನ್ನು ಆಲೋಚಿಸತೊಡಗಿದರು. ಭಾರತ ಒಂದು ದೇಶವರಿಬ ಸಾಮೂಹಿಕ ಕಲ್ಲನೆಯ ಇರದ ಆ ಸಂದರ್ಭದಲ್ಲಿ ಅದು ವಿವಿಧ ರಾಜ್ಯದ ಆಡಳಿತದಲ್ಲಿ ಹರಿದು ಹಂಚಿ ಹೋಗಿತ್ತು. ವಿವಿಧ ಕಾರಣಗಳಿಂದ ಅನೇಕ ರಾಜ್ಯಗಳನ್ನು ಒಂದುಗೂಡಿಸಿ ಬ್ರಿಟಿಷರು ಏಕರೂಪ ರಾಜಕೀಯ ವ್ಯವಸ್ಥೆಗೆ ಮತ್ತು ಏಕರೂಪ ಆಡಳಿತ ವ್ಯವಸ್ಥೆಗೆ ಒಳಪಡಿಸಿದರು. ಶಿಕ್ಷಣ, ನ್ಯಾಯಾಂಗ ವ್ಯವಸ್ಥೆ, ಭೂ ಕಂದಾಯ, ವ್ಯಾಪಾರ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಹೊಸ ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಅವರು ಕಟ್ಟಿದ ರಾಜ್ಯ ವ್ಯವಸ್ಥೆಗೆ ಏಕರೂಪವನ್ನು ನೀಡುವಲ್ಲಿ ಸಫಲರಾದರು. ಈ ಬಗೆಯ ಆಡಳಿತವನ್ನು ರೂಪಿಸುವಾಗ ತಮ್ಮ ಆರ್ಥಿಕ ಹಿತಾಸಕ್ತಿಯನ್ನು ಸಂರಕ್ಷಿಸಿಕೊಳ್ಳುವುದನ್ನು ಮರೆಯಲಿಲ್ಲ. ಈ ನಿಟ್ಟಿನಲ್ಲಿ ಕಂಪನಿಯು ಆಡಳಿತದ ಕ್ಷೇತ್ರದಲ್ಲಿ ವಿವಿಧ ಪ್ರಯೋಗಗಳನ್ನು ಜಾರಿಗೊಳಿಸಿತು.


ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ

ನಾಗರೀಕ ಸೇವೆಗಳು : ಲಾರ್ಡ್ ಕಾರ್ನ್‌ವಾಲೀಸರು ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆತಂದನು, ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರ ನಡೆಸುವ ಸಲುವಾಗಿ ನೌಕರರನ್ನು ನೇಮಕ ಮಾಡಿಕೊಳ್ಳುವ ಪದ್ಧತಿಯನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿತ್ತು, ಕಂಪನಿಯು ಈ ನೌಕರರಿಗೆ ಖಾಸಗಿಯಾಗಿ ವ್ಯಾಪಾರ ಮಾಡಿಕೊಳ್ಳಲು ಅನುಮತಿ ನೀಡಿತ್ತು. ಈ ಅವಕಾಶವನ್ನು ಬಳಸಿಕೊಂಡ ನೌಕರರು ಆನೈತಿಕ ಮಾರ್ಗಗಳಲ್ಲಿ ಹe ಸಂಪಾದಿಸಿ ಕಡುಭ್ರಷ್ಟರಾದರು. ಇದನ್ನು ತಡೆಯುವ ಸಲುವಾಗಿ 1773ರಲ್ಲಿ ಇಂಗ್ಲೆಂಡಿನ ಸರಕಾರವು ರೆಗ್ಯುಲೇಟಿಂಗ್ ಕಾಯ್ದೆಯನ್ನು ಭಾರತದಲ್ಲಿ ಜಾರಿಗೊಳಿಸಿತು, ಕಾಯ್ದೆಯ ಹೆಸರೇ ಸೂಚಿಸುವಂತೆ ಅದರ ಉದ್ದೇಶ ನಿಯಂತ್ರಣವನ್ನು ಹೇರುವುದು.

1801ರಲ್ಲಿ ನಾಗರಿಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣವನ್ನು ನೀಡಲು ಕಲ್ಕತ್ತಾದಲ್ಲಿ ಕೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದನು, ಆದರೆ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರು ಇದಕ್ಕೆ ಬೆಂಬಲ ನೀಡಲಿಲ್ಲ. ಇದರ ಪರಿಣಾಮವೆಂದರೆ 1853ರವರೆಗೆ ನಾಗರೀಕ ಸೇವೆಯ ಎಲ್ಲಾ ನೇಮಕಾತಿಗಳನ್ನು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರೇ ಮಾಡಿದರು. 1857ರ ನಂತರ ನಾಗರಿಕ ಸೇವೆಗೆ ಮಾಡುವ ಎಲ್ಲಾ ನೇಮಕಾತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಗಬೇಕೆಂಬ ತೀರ್ಮಾನವಾಯಿತು, ಇದರಿಂದ ಭಾರತಿಯರಿಗೆ ಹೆಚ್ಚಿನ ಪ್ರಯೋಜನವಾಗಲಿಲ್ಲ. ಜೊತೆಗೆ ಬ್ರಿಟಿಷರು ಭಾರತೀಯರ ಸಾಮರ್ಥ್ಯವನ್ನು ಅನುಮಾನಿಸಿ ನೋಡಿದರು. ಕಾರ್ನ್‌ವಾಲೀಸನು “ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ” ಎಂದು ಪ್ರತಿಪಾದಿಸಿದನು. ಇದರಿಂದಾಗಿ ಕೆಳದರ್ಜೆಯ ಉದ್ಯೋಗಗಳನ್ನು ಮಾತ್ರ ಭಾರತೀಯರಿಗೆ ನೀಡಲಾಯಿತು.


ನ್ಯಾಯಾಂಗ ವ್ಯವಸ್ಥೆ : ಮೊಘಲರಿಂದ ಬ್ರಿಟಿಷರಿಗೆ ಹಂತಹಂತವಾಗಿ ಅಧಿಕಾರ ಹಸ್ತಾಂತರದ ಸಂಕ್ರಮಣ ಕಾಲದಲ್ಲಿ ಹೊಸ ನ್ಯಾಯಂಗ ವ್ಯವಸ್ಥೆಯು ಭಾರತದಲ್ಲಿ ಬೇರು ಬಿಡಲು ಆರಂಭಿಸಿತು. 1764 ಬಕ್ಸಾರ್ ಕದನದ ನಂತರ ಮೊಘಲ್ ಚಕ್ರವರ್ತಿ ಅಲಂನು ವಿವಾಣ ಹಕ್ಕೆಂಬ ಕಂದಾಯ ವಸೂಲಾತಿ ಹಕ್ಕನ್ನು ಬ್ರಿಟಿಷರಿಗೆ ನೀಡಿದನು. ಬಂಗಾಳದ ಪ್ರಾಂತ್ಯದಲ್ಲಿ ದ್ವಿ ಆಡಳಿತ ಜಾರಿಗೆ ಬಂದಿತು. ಇದನ್ನು ದ್ವಿ ಸರ್ಕಾರ ಎಂತಲೂ ಕರೆಯುತ್ತಾರೆ. ಇದರ ಪ್ರಕಾರ ಕಂದಾಯ ವಸೂಲಾತಿ, ನಾಗರಿಕ ಅಪರಾಧ ನ್ಯಾಯ ನಿರ್ವಹಣಾ ವ್ಯವಸ್ಥೆಯನ್ನು ಭಾರತೀಯ ಅಧಿಕಾರಿಗಳಿಗೆ ನೀಡಲಾಯಿತು. ವಸೂಲಾದ ಕಂದಾಯದ ನಿರ್ವಹಣಾ ಆಡಳಿತವನ್ನು ಬ್ರಿಟಿಷರು ತಮ್ಮ ಬಳಿಯೇ ಇಟ್ಟುಕೊಂಡರು. ಕ್ರಮೇಣ ಬ್ರಿಟಿಷರು ಹೆಚ್ಚು ಕೇಂದ್ರೀಕೃತ ನ್ಯಾಯಾಂಗ ಪದ್ಧತಿಯನ್ನು ಜಾರಿಗೆ ತರಬೇಕೆಂದು ನಿರ್ಧರಿಸಿದರು. ಈ ಹೆಜ್ಜೆಯಿಂದ ಬ್ರಿಟಿಷರು ಮೊಘಲರ ಅಧಿಕಾರವನ್ನು ಹಿಂದಕ್ಕೆ ಸರಿಸಿ ತಾವೇ ಸಾರ್ವಭೌಮರಾಗತೊಡಗಿದರು. ಇದನ್ನು ಹೊಸ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತರುವುದರ ಮೂಲಕ ಸಾಧಿಸಿದರು.

1772ರಲ್ಲಿ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ವಾರನ್ ಹೇಸ್ಟಿಂಗ್ಸ್‌ನು ಜಾರಿಗೆ ತಂದ ಹೊಸ ಯೋಜನೆಯ ಪ್ರಕಾರ ಪ್ರತಿ ಜಿಲ್ಲೆಯು ಎರಡು ಬಗೆಯ ನ್ಯಾಯಾಲಯಗಳನ್ನು ಹೊಂದಿರಬೇಕಿತ್ತು. ಅವುಗಳೆಂದರೆ : ‘ದಿವಾನಿ ಅದಾಲತ್’ ಎಂಬ ನಾಗರೀಕ ನ್ಯಾಯಾಲಯಗಳು ಮತ್ತು ‘ಫೌಜದಾರಿ ಅದಾಲತ್’ ಎಂಬ ಅಪರಾಧ ನ್ಯಾಯಾಲಯಗಳು. ಇಲ್ಲಿ ನಾಗರೀಕ ನ್ಯಾಯದಾನದ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂ ಹಿಂದೂ ಶಾಸ್ತ್ರಗ್ರಂಥಗಳ ಪ್ರಕಾರ ಮತ್ತು ಮುಸ್ಲಿಮರಿಗೆ ಷರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು. ಅಪರಾಧ ಪ್ರಕರಣಗಳಿಗೆ ಬಂದಾಗ ಎಲ್ಲರಿಗೂ ಇಸ್ಲಾಂ ಕಾನೂನುಗಳ ಅನುಸಾರ ವಿಚಾರಣೆ ನಡೆಸಲಾಗುತ್ತಿತ್ತು. ಕ್ರಮೇಣ ಬ್ರಿಟಿಷ್ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಅಪರಾಧ ಕಾನೂನುಗಳಲ್ಲಿ ಬದಲಾವಣೆ ತರಲಾಯಿತು. ನಾಗರಿಕ ನ್ಯಾಯಾಲಯಗಳು ಯೂರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅಪರಾಧ ನ್ಯಾಯಾಲಯಗಳು ‘ಕಾಜಿ’ಗಳ ಅಧೀನದಲ್ಲಿದ್ದರೂ ಯುರೋಪಿಯನ್ನರ ಮೇಲ್ವಿಚಾರಣೆಯಲ್ಲಿಯೇ ಕಾರ್ಯನಿರ್ವಹಿಸಬೇಕಾಗಿತ್ತು.


ಪೊಲೀಸ್ ವ್ಯವಸ್ಥೆ : ಆಂತರಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊತ್ತಿರುವ ವರ್ಗವೆ ಪೊಲೀಸರು. ಲಾರ್ಡ್ ಕಾರ್ನ್‌ವಾಲೀಸನು ಪ್ರಥಮತಃ ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆಅಧೀನದಲ್ಲೂ, ಹಳ್ಳಿಗಳು ‘ಚೌಕಿದಾರ’ರ ಅಧೀನದಲ್ಲೂ ಇರುವಂತೆ ಮಾಡಿದನು. ಕೊತ್ವಾಲರುಗಳು ಹಳ್ಳಿಗಳ ಮಟ್ಟದಲ್ಲಿ ಕಳ್ಳತನ, ಅಪರಾಧಗಳು, ದರೋಡೆಗಳ ನಿಯಂತ್ರಣದ ಜವಾಬ್ದಾರಿಯನ್ನು ಹೊತ್ತಿದ್ದರು.

1770ರ ದಶಕದಲ್ಲಿ ಭೀಕರ ಕ್ಷಾಮಭೀತಿಯಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ವಿಷಮಗೊಳ್ಳತೊಡಗಿತು. ಇದರ ಪರಿಣಾಮವಾಗಿ ಇಡೀ ಪೊಲೀಸ್ ವ್ಯವಸ್ಥೆಯನ್ನು ಬ್ರಿಟಿಷ್ ಅಧಿಕಾರಿಗಳ ಅಧೀನಕ್ಕೊಳಪಡಿಸಲಾಯಿತು .

1781ರಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್‌ಗಳನ್ನು ನೇಮಕ ಮಾಡುವ ಪದ್ಧತಿ ಜಾರಿಗೊಂಡಿತು, ಪೊಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್‌ಗಳ ಅಧೀನಕ್ಕೊಳಪಟ್ಟರು. ಪೊಲೀಸ್ ವ್ಯವಸ್ಥೆಯು ನಿರಂತರ ಬದಲಾವಣೆಗೆ ಒಳಗಾಯಿತು. 1861ರಲ್ಲಿ ಪೊಲೀಸ್ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಈ ಕಾಯ್ದೆಯ ಕಾನೂನು ಮತ್ತು ಸುವ್ಯವಸ್ಥೆ ಆಡಳಿತಕ್ಕೆ ಮುಖ್ಯ ಅಡಿಪಾಯ, ಆದರೆ ಅಧಿಕಾರಿಗಳ ನೇಮಕಾತಿಯಲ್ಲಿ ಭಾರತೀಯರಿಗೆ ಅವಕಾಶವಿರಲಿಲ್ಲ. 1912ರ ಪೊಲೀಸ್ ಕಮಿಷನ್ ಕಾಯ್ದೆಯ ವಿದ್ಯಾರ್ಹತೆಯನ್ನು ಪಡೆದವರನ್ನು ಅಧಿಕಾರಿ ಹುದ್ದೆಗೆ ನೇಮಿಸುವ ಅವಕಾಶವನ್ನು ಕಲ್ಪಿಸಿತು. ಇಷ್ಟಾದರೂ ಭಾರತೀಯರ ಬಗೆಗೆ ಇದ್ದ ತಾರತಮ್ಯ ಕಡಿಮೆಯಾಗಲಿಲ್ಲ.


ಸೈನ್ಯ ವ್ಯವಸ್ಥೆ: ಬ್ರಿಟಿಷರ ಕಾಲದ ಆಡಳಿತ ವ್ಯವಸ್ಥೆಯಲ್ಲಿ ಸೈನ್ಯವು ಆಧಾರಸ್ತಂಭವಾಗಿತ್ತು, ಭಾರತೀಯರನ್ನೇ ಸೈನ್ಯದಲ್ಲಿ ಸೇರಿಸಿಕೊಂಡು ಅವರ ನೆರವಿನಿಂದಲೇ ಬ್ರಿಟಿಷರು ಭಾರತವನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡರು. ಸೈನ್ಯದ ಶಕ್ತಿಯನ್ನು ಬಳಸಿಕೊಂಡು ಭಾರತದ ಒಳಗಡೆಯ ತಮ್ಮ ವಿರೋಧ ಶಕ್ತಿಗಳಿಂದ ಮತ್ತು ವಿದೇಶಿ ಶಕ್ತಿಗಳಿಂದ ತಮ್ಮ ಸಾಮ್ರಾಜ್ಯವನ್ನು ರಕ್ಷಿಸಿಕೊಂಡರು. ಅಧಿಕಾರಿಗಳು ಬ್ರಿಟಿಷರೇ ಆಗಿದ್ದರು. ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆಯೆಂದರೆ ಸುಬೇದಾರ್‌ ಸ್ಥಾನ, ಬಹುತೇಕ ಭಾರತೀಯ ಸೈನಿಕರು ಕೂಲಿ ಸೈನಿಕರಾಗಿದ್ದರು. 1857ರ ಘಟನೆಯ ನಂತರ ಪೀಲ್ ಎಂಬುವವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಶಿಫಾರಸುಗಳನ್ನು ಬ್ರಿಟಿಷ್ ಸರಕಾರ ಪಡೆಯಿತು, ಈ ಶಿಫಾರಸುಗಳ ಆಧಾರದ ಮೇಲೆ ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲಾಯಿತು.


ಭೂಕಂದಾಯ ನೀತಿಗಳು

ಬ್ರಿಟಿಷರು ಬಂಗಾಳ ಬಾಂತ್ಯವನ್ನು ತಮ್ಮ ಕೇಂದ್ರವಾಗಿಟ್ಟುಕ ಈಸ್ಟ್ ಇಂಡಿಯಾ ಕಂಪನಿ ಬ್ರಿಟಿಷ್ ಸರ್ಕಾರಕ್ಕೆ ವಾರ್ಷಿಕವಾಗಿ ನಾಲ್ಕು ಲಕ್ಷ ಪೌಂಡ್ ಗಳನ್ನ ಪಾವತಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಕಂಪೆನಿಯು ತನ್ನ ಆರ್ಥಿಕ ಹಿತಸಾಕ್ಷಿಗಳನ್ನು ಸುಸ್ತಿರಾಗೊಳಿಸಬೇಕಾಗಿತ್ತು. ಇದರಿಂದಾಗಿ ಹೊಸ ಬಗೆಯ ಕಂದಾಯ ನೀತಿಗಳನ್ನು ಜಾರಿಗೊಳಿಸಿದರು.

ಖಾಯಂ ಜಮೀನ್ದಾರಿ ಪದ್ಧತಿ ಕಂದಾಯದ ಹಣವನ್ನು ಪಡೆಯಲು ಲಾರ್ಡ್ ಕಾರ್ನ್‌ವಾಲೀಸನ್ನು 1793ರಲ್ಲಿ ಬಂಗಾಳ ಮತ್ತು ಆಹಾರ ಪ್ರಾಂತ್ಯಗಳಲ್ಲಿ ಹೊಸ ಕಂದಾಯ ಪದ್ಧತಿಯನ್ನು ಜಾರಿಗೊಳಿಸಿದನು. ಇದನ್ನು ಖಾಯಂ ಜಮೀನ್ದಾರಿ ಪದ್ಧತಿ ಎಂದು ಕರೆಯಲಾಯಿತು. ಈ ಪದ್ಧತಿಯಲ್ಲಿ ಜಮಿನಾರನು ಭೂಮಾಲೀಕನಾದನು. ಈ ಹೊಸ ಯೋಜನೆಯ ಪ್ರಕಾರ ಜಮೀನಾರನು ಪ್ರತಿವರ್ಷವೂ ನಿರ್ದಿಷ್ಟ ದಿನಕ್ಕೆ ಮೊದಲೇ ಅವನು ಒಪ್ಪಿಕೊಂಡಿದ್ದ ಕಂದಾಯದ ಮೊತ್ತವನ್ನು ಸರಕಾರಕ್ಕೆ ಸಲ್ಲಿಸಬೇಕಿತ್ತು, ಭೂಮಾಲೀಕನಿಗೆ ಈ ಪದ್ಧತಿಯಿಂದ ಹೆಚ್ಚಿನ ಲಾಭವಾಯಿತು. ಏಕೆಂದರೆ ಸರಕಾರಕ್ಕೆ ಸಲ್ಲಿಸಬೇಕಾದ ಹಣದ ಮೊತ್ತಕ್ಕಿಂತ ಹೆಚ್ಚಿಗೆ ವಸೂಲು ಮಾಡಿದ ಹಣವನ್ನು ಅವನೇ ಇಟ್ಟುಕೊಳ್ಳಬಹುದಾಗಿತ್ತು. ಬರಗಾಲ (ಅನಾವೃಷ್ಟಿ) ಅಥವಾ ವಿಪರೀತ ಮಳೆ ಅತಿವೃಷ್ಟಿಯ ಕಾರಣದಿಂದ ಕಂದಾಯವನ್ನು ವಸೂಲಿ ಮಾಡಲು ಸಾಧ್ಯವಾಗದೆ ಸರಕಾರಕ್ಕೆ ಸಲ್ಲಿಸಬೇಕಾದ ಹಣದ ಮೊತ್ತವನ್ನು ಸಲ್ಲಿಸಲಾಗದಿದ್ದರೆ, ಬ್ರಿಟಿಷ್ ಸರಕಾರವೂ ಭೂಮಿಯ ಬಡೆತನವನ್ನು ಅವನಿಂದ ಕಸಿದುಕೊಳ್ಳುತ್ತಿತ್ತು, ಈ ಪದ್ಧತಿಯಿಂದ ಬ್ರಿಟಿಷರಿಗೆ ಮತ್ತು ಜಮೀನ್ದಾರರಿಗೆ ಲಾಭವಾಯಿತೇ ವಿನಃ ರೈತರಿಗಾಗಲಿಲ್ಲ. ಬ್ರಿಟಿಷರು ತಮಗೆ ನೆರವಾಗುವ ಹೊಸ ಸಾಮಾಜಿಕ ವರ್ಗವಾದ ಜಮೀನ್ದಾರರನ್ನು ಸೃಷ್ಟಿ ಮಾಡಿದರು. ರೈತರು, ರೈತ ಕೂಲಿಕಾರ್ಮಿಕರು ಜಮೀನ್ದಾರರ ಭೂಮಿಯಲ್ಲಿ ಕೆಲಸ ಮಾಡಲು ನಿರಂತರ ಅವಕಾಶಗಳೂ ಸಿಗದೆ ಬಹುಮುಖಿ ಶೋಷಣೆಗೆ ಒಳಗಾದರು ಅತಂತ್ರ ಸ್ಥಿತಿಯಲ್ಲೇ ಬದುಕನ್ನು ಕಳೆಯತೊಡಗಿದರು. ಈ ಪದ್ಧತಿಯು ಕ್ರಮೇಣ ಒರಿಸ್ಸಾ, ಆಂಧ್ರ ಮತ್ತು ವಾರಣಾಸಿ ಪ್ರಾಂತ್ಯಗಳಿಗೆ ವಿಸ್ತರಣೆಯಾಯಿತು. ಚಾರ್ಲ್ಸ್ ಮೆಟಕಾಫ್ ಹೇಳುವಂತೆ ಬ್ರಿಟಿಷ್ ಭೂಕಂದಾಯ ನೀತಿಗಳಿಂದ “ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು.


ಮಹಲ್ದಾರಿ ಪದ್ಧತಿ : ಉತ್ತರ ಪ್ರದೇಶ, ಮಧ್ಯಪ್ರದೇಶದ ಅನೇಕ ಭಾಗಗಳಲ್ಲಿ, ಪಂಜಾಬ್ ಮತ್ತು ದೆಹಲಿ ಪ್ರಾಂತ್ಯಗಳಲ್ಲಿ ಮಹಲ್ಲುಗಳೇ ಸಾಮೂಹಿಕ ಒಪ್ಪಂದಗಳನ್ನು ಮಾಡಿಕೊಂಡು, ಸರಕಾರಕ್ಕೆ ತೆರಿಗೆಯನ್ನು ಸಲ್ಲಿಸುವ ಪದ್ಧತಿಯನ್ನು ಜಾರಿಗೆ ತರಲಾಯಿತು. ಈ ಪದ್ಧತಿಯನ್ನು ಆರ್.ಎಂ. ಬರ್ಡ್ ಮತ್ತು ಜೇಮ್ಸ್ ಥಾಮನ್ ಪ್ರಯೋಗಿಸಿದರು. ‘ಮಹಲ್’ ಎಂದರೆ ತಾಲ್ಲೂಕು, ಎಂದರ್ಥ, ಪಾಂಶದಿಂದ ಪ್ರಾಂತ್ಯಕ್ಕೆ ಈ ಪದ್ಧತಿಯ ಅನುಷ್ಠಾನದಲ್ಲಿ ವ್ಯತ್ಯಾಸಗಳಿದ್ದವು. ದೊಡ್ಡ ಮತ್ತು ಸ ಪ್ರಮಾಣದ ಜಮೀನ್ದಾರರು ಈ ಈ ಪದ್ಧತಿಯ ಭಾಗವಾಗಿದ್ದರು. ಕಂಪನಿಯ ಸರ್ಕಾರದ ಅಧಿಕಾರಿಗಳು ಜಮೀನಿನಲ್ಲಿ ಆಗುವ ಉತ್ಪಾದನೆಗಿಂತಲೂ ಹೆಚ್ಚಿನ ಮೊತ್ತದ ವಾರ್ಷಿಕ ಪಾವತಿಗಳನ್ನು ನಿರ್ಧರಿಸಿದ್ದರಿಂದ ಅನೇಕ ಜಮೀನ್ದಾರರು ತಮ್ಮ ಭೂಮಾಲಿಕತ್ವವನ್ನು ಕಳೆದುಕೊಂಡರು. ಅವರನ್ನೇ ನೆಚ್ಚಿ ಬದುಕುತ್ತಿದ್ದ ಸಣ್ಣ ಕೃಷಿಕರು, ಕೃಷಿ ಕೂಲಿಕಾರರು ನಿರ್ಗತಿಕರಾದರು.


ರೈತವಾರಿ ಪದ್ಧತಿ : ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಬಾರಮಹಲ್ ಪ್ರಾಂತ್ಯದಲ್ಲಿ 1792ರಲ್ಲಿ ಅಲೆಕ್ಸಾಂಡರ್ ಡೀಡ್ ಎನ್ನುವವನು ಜಾರಿಗೊಳಿಸಿದನು. ಈ ಪದ್ಧತಿಯನ್ನು ರಾಮಸ್ ಮನೆ ಮದರಾಸು ಮತ್ತು ಮೈಸೂರು ಪ್ರಾಂತ್ಯಗಳಲ್ಲಿ 180ರ ನಂತರ ಜಾರಿಗೊಳಿಸಿದನು. ಈ ಕಾಲಘಟ್ಟದಲ್ಲಿಯೇ ಈ ಪ್ರಾಂತ್ಯಗಳ ಬಹುತೇಕ ಭಾಗಗಳನ್ನು ಕಂಪನಿಯ ಆಡಳಿತಕ್ಕೆ ಒಳಪಟ್ಟಿದ್ದು ಮುಖ್ಯ ಕಾರಣವಾಗಿತ್ತು. ಈ ಪದ್ಧತಿಯ ಪ್ರಕಾರ ಸರಕಾರ ಮತ್ತು ರೈತನ ನಡುವ ನೇರ ಸಂಪರ್ಕವನ್ನು, ಕಲಿಸಲಾಯಿತು, ಭೂಮಿ ಉಳುಮೆ ಮಾಡುತ್ತಿದ್ದವನನ್ನು ಅದರ ಮಾಲೀಕನೆಂದು ಸರ್ಕಾರ ಮಾನ್ಯಮಾಡಿತು. ಅವನೇ ನೇರವಾಗಿ ತಾನು ಕೃಷಿ ಭೂಮಿಯಲ್ಲಿ ಪಡೆದ ಉತ್ಪನ್ನದ ಶೇಕಡ 50ರಷ್ಟು ಭಾಗವನ್ನು ಕಂದಾಯದ ರೂವದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಯಿತು, ಕಂದಾಯವನ್ನು 3) ವರ್ಷಗಳ ಅವಧಿಗೆ ಎಂದು ನಿರ್ಧರಿಸಲಾಯಿತು. ನಂತರ ಅದನ್ನು ಪರಾಮರ್ಶೆಗೂ ಒಳಪಡಿಸಬಹುದಾಗಿತ್ತು,

ಸಣ್ಣ ರೈತರಿಗೆ ತಮ್ಮ ಆಧೀನದಲ್ಲಿದ್ದ ಭೂಮಿ ಮೇಲಿನ ಹಕ್ಕನ್ನು ನೀಡಿತ್ತಾದರೂ, ಭೂಕಂದಾಯವನ್ನು ಈ ಪದ್ಧತಿಯು ಹೆಚ್ಚಿನ ವಾರ್ಷಿಕ ಮೊತ್ತಕ್ಕೆ ನಿಗದಿಪಡಿಸಿಂಂದ ರೈತರು ಸಂಕಷ್ಟಗಳಿಗೆ ಒಳಗಾದರು. ಕಂದಾಯ ವಸೂಲು ಮಾಡುವ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಿದ್ದರು. ಬೆಳೆಗಳು ಸರಿಯಾಗಿ ಫಸಲು ನೀಡದ ಸಂದರ್ಭದಲ್ಲಿ ರೈತರು ಹೆಣದ ಲೇವಾದೇವಿಗಾರರಿಂದ (Money Lend) ಸಾಲ ತೆಗೆದುಕೊಂಡು, ಮರುಪಾವತಿಸಲಾಗದೆ ಅವರಿಗಿದ್ದ ಸಣ್ಣ ಪುಟ್ಟ ಜಮೀನನ್ನು ಮಾರಾಟಮಾಡುವಂತಾಯಿತು, ರೈತರ ಒಳಿತಿಗಾಗಿ ರೈತವಾರಿ ಪದ್ಧತಿಯನ್ನು ಜಾರಿಗೊಳಸಲಾಗಿದೆ ಎಂದು ಬ್ರಿಟಿಷ್ ಸರ್ಕಾರ ಹೇಳಿದರೂ, ಗರಿಷ್ಠ ಪ್ರಮಾಣದ ರೈತರು ಸಾಲದ ಸುಳಿಗೆ ಸಿಲುಕಿದ್ದು ಈ ಪದ್ಧತಿಯಿಂದಲೇ ಎನ್ನುವುದು ವಿಪರ್ಯಾಸ.


ಬ್ರಿಟಿಷರ ಕಂದಾಯ ನೀತಿಯ ಪರಿಣಾಮಗಳು:

1. ನಿಜವಾದ ರೈತರನ್ನು ಶೋಷಿಸುವ ಹೊಸ ಸಾಮಾಜಿಕ ವರ್ಗವಾದ ಜಮೀನ್ಸಾರಿ ಸಮುದಾಯ ಸೃಷ್ಟಿಯಾಯಿತು.

2. ಜಮೀನಾರರ ಶೋಷಣೆಗೆ ಒಳಗಾದ ರೈತರು, ವಿವಿಧ ಬಗೆಯ ಸಂಕಷ್ಟಗಳಿಗೆ ಒಳಗಾದರು. ಕಮೇಣ ನಿರ್ಗತಿಕರಾದರು.

3. ಭೂಮಿ ಮಾರಾಟದ ವಸ್ತುವಾಯಿತು. ಇದನ್ನು ಪರಭಾರ (Mortgage) ಮಾಡಿ ಹಣವನ್ನು ಸಾಲವಾಗಿ ಪಡೆಯಬಹುದಾಗಿತ್ತು.

4. ಅನೇಕ ಜಮೀನ್ದಾರರೂ ಕೂಡ ಕಂದಾಯವನ್ನು ಸಲ್ಲಿಸುವ ಸಲುವಾಗಿ ತಮ್ಮ ಜಮೀನನ್ನು ಅರಚಾರ ಮಾಡಿದರು.

5. ಕೃಷಿ ಕ್ಷೇತ್ರವು ವಾಣಿಜೀಕರಣಗೊಂಡು, ಇಂಗ್ಲೆಂಡಿನಲ್ಲಾದ ಕೈಗಾರಿಕೀಕರಣದಿಂದ ಅಲ್ಲಿನ ಕೈಗಾರಿಕೆಗಳಿಗೆ ಬೇಡಿದ ಕಚ್ಚಾವಸ್ತುಗಳನ್ನೇ ಬೆಳೆಯಬೇಕಾಯಿತು.

6. ಹಣದ ಲೇವಾದೇವಿಗಾರರು ಬಲಿಷ್ಠರಾಗತೊಡಗಿದರು.



0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು