ಆಧುನಿಕ ಭಾರತದ ಇತಿಹಾಸ - ಆಧುನಿಕ ಶಿಕ್ಷಣದ ಆರಂಭ

 

ಭಾರತೀಯರ ಸಾಂಪ್ರದಾಯಿಕ ಶಿಕ್ಷಣವು ನಿರಂತರವಾಗಿ ಚಾಲ್ತಿಯಲ್ಲಿತ್ತು. ಮಧ್ಯಕಾಲೀನ ಸಂದರ್ಭದಲ್ಲಿ ಮುಸ್ಲಿಂ ರಾಜ್ಯವ್ಯವಸ್ಥೆ ನೆಲೆಗೊಂಡ ನಂತರ ಶಿಕ್ಷಣವನ್ನು ನೀಡುವುದರಲ್ಲಿ ಪಾರಂಪರಿಕ ವಿಧಾನದ ಜೊತೆಗೆ ಕೆಲವು ಬದಲಾವಣೆಗಳು ಉಂಟಾದವು, ಮುಂದೆ ಈ ಶಿಕ್ಷಣ ಕ್ರಮದಲ್ಲಿ ಬದಲಾವಣೆ ಉಂಟಾದದ್ದು 18ನೇ ಶತಮಾನದ ಹೊಸ ಬ್ರಿಟಿಷ್ ಆಡಳಿತದ ಕಾಲಘಟ್ಟದಲ್ಲಿ, ಭಾರತದಲ್ಲಿದ್ದ ಐರೋಗ್ಯ ಮತ್ತು ಆಂಗ್ಲೋ-ಇಂಡಿಯನ್ ಸಮುದಾಯಗಳ ಮಕ್ಕಳಿಗೆ ಹೊಸ ಶಾಲೆಗಳು ಪ್ರಾರಂಭವಾದವು. ಆದರೆ, ಈ ಕ್ರಮವು ವಿಸ್ತರಣೆ ಆಗದಿದ್ದುದರಿಂದ ಸ್ಥಳೀಯ ಮಕ್ಕಳಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿಯೆಂದರೆ ವಾರನ್ ಹೇಸ್ಟಿಂಗ್ಸ್ 1781ರಲ್ಲಿ ಅವನು ಕಲ್ಕತ್ತಾ ಮದರಸಾವನ್ನು ಪಾರಂಭಿಸಿದನು. ಜೊನಾಥನ್ ಡೆಂಕನ್ ಎಂಬ ಮತ್ತೊಬ್ಬ ಬಿಟಿಷ್ ವ್ಯಕ್ತಿಯು 1782ರಲ್ಲಿ ಬನರಸ್ಸಿನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದನು. ಆದರೆ ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು ಚಾರ್ಲ್ಸ್ ಗ್ರಾಂಟ್,


1828ರಲ್ಲಿ ವಿಲಿಯಂ ಬೆಂಟಿಂಕನು ಗವರ್ನರ್ ಜನರಲ್ ಆಗಿ ನೇಮಕಗೊಂಡ ನಂತರ ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ಮತ್ತಷ್ಟು ವಿಶೇಷ ಪ್ರೋತ್ಸಾಹ ದೊರೆಯಿತು. ಗವರ್ನರ್ ಜನರಲ್ ಕಾರ್ಯಾರಿಗ ಸಭೆಗೆ ಮೆಕಾಲೆಯನ್ನು ಕಾನೂನು ಸದಸ್ಯರನ್ನಾಗಿ ಬೆಂಟಿಂಕ್‌ನು ನೇಮಕ ಮಾಡಿದನು. ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೇಮಕವಾದ ಸಮಿತಿಗೂ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಯಿತು. 1835 ರಲ್ಲಿ ಇಂಗ್ಲೀಷ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೆಕಾಲೆಯು ಕೊಟ್ಟ ವರದಿಯ ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾಯಿತು. ಅವನ ಯೋಜನೆಯ ಪ್ರಮುಖ ಅಂಶವೆಂದರೆ ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ದಿವಂತಿಕೆಯಲ್ಲಿ ಇಂಗ್ಲಿಷರಾಗುವ" ಹೊಸ ಭಾರತೀಯ ವಿದ್ಯಾವಂತ ವರ್ಗವನ್ನು ಸೃಷ್ಟಿ ಮಾಡುವುದು, ಭಾರತದ ವಿದ್ಯಾಭ್ಯಾಸದ ಕ್ರಮದಲ್ಲಿ ಇಂಗ್ಲಿಷ್ ಭಾಷೆಯು ಮಾಧ್ಯಮವಾಗಿ ಬಳಕೆಯಾಗಲು ಪ್ರಾರಂಭವಾದದ್ದೇ 1830ರ ದಶಕದ ನಂತರ.


ನಂತರದ ಪ್ರಮುಖ ಬೆಳವಣಿಗೆಯೆಂದರೆ ಸರ್ ಚಾರ್ಲ್ ವುಡ್‌ನ (1854) ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಅಂದಿನ ಗವರ್ನರ್ ಜನರಲ್ ಆದ ಲಾರ್ಡ್ ಡಾಲ್‌ಹೌಸಿಯು ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು 1857ರಲ್ಲಿ ಸ್ಥಾಪಿಸಿದನು. ಇಲ್ಲಿಂದ ನಂತರ ಶಿಕ್ಷಣವು ಸಾರ್ವತ್ರಿಕರಣಗೊಳ್ಳತೊಡಗಿತ್ತು.


ಬ್ರಿಟಿಷ್ ಶಿಕ್ಷಣದ ಪರಿಣಾಮಗಳು


1. ಭಾರತೀಯರು ಆಧುನಿಕತೆ, ಜಾತ್ಯತೀತತೆ, ಪ್ರಜಾಪ್ರಭುತ್ವ, ವೈಜ್ಞಾನಿಕ ಆಲೋಚನಾ ಕ್ರಮದ ಜೊತೆಗೆ ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.


2. ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯ ರಚನೆಗಳಗೆ ಪ್ರೋತ್ಸಾಹ ದೊರೆಯಿತು. ಇದರಿಂದ ವಿದ್ಯಾವಂತ ವರ್ಗದ ಆಲೋಚನಾ ಕ್ರಮದಲ್ಲೂ ಏಕತೆಯ ಸ್ವರೂಪವನ್ನು ಕಾಣುತ್ತೇವೆ.


3. ವೃತ್ತ ಪತ್ರಿಕೆಗಳು ಹುಟ್ಟಿ ಬೆಳೆಯತೊಡಗಿದವು, ವಿಶೇಷವಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ಪತ್ರಿಕೆಗಳಲ್ಲಿ ಸರ್ಕಾರದ ನೀತಿಗಳನ್ನು ವಿಮರ್ಶಿಸುವ ಮೂಲಕ ಭಾರತೀಯರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯ ಬೆಳೆಯಲು ಸಾಧ್ಯವಾಯಿತು,


4. ಹೊಸ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಹುಟ್ಟಿಕೊಂಡವು.


5. ಜೆ.ಎಸ್.ಎಲ್, ರೂಸೋ, ಮಾಂಟೆಸ್ಕೊ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆಯನ್ನು ತಂದವು,


6. ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಗಳ ಪ್ರಭಾವ ಭಾರತೀಯರ ಮೇಲೂ ಆಯಿತು,


7. ಭಾರತೀಯರು ತಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಹೀಗೆ ಭಾರತದಲ್ಲಿ ಜಾರಿಗೊಂಡ ಪಾಶ್ಚಾತ್ಯ ವಿದ್ಯಾಭ್ಯಾಸದ ಕ್ರಮದಿಂದ ಸೃಷ್ಟಿಯಾದ ಅಭಿರುಚಿ ಮತ್ತು ಆಲೋಚನೆಗಳು ಭಾರಶದಲ್ಲಿ ಹೊಸ ಹೊಸ ತಲೆಮಾರುಗಳನ್ನು ಸೃಷ್ಟಿಸುತ್ತಾ ಹೋಯಿತು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು