ಆಧುನಿಕ ಭಾರತದ ಇತಿಹಾಸ - ಸಂವಿಧಾನಾತ್ಮಕ ಬೆಳವಣಿಗೆ

 

ಭಾರತದಲ್ಲಿ ಬ್ರಿಟಿಷ್ ಆಡಳಿತ ಬೆಳೆದಂತೆ ಸಮಸ್ಯೆಗಳೂ ಕೂಡ ಬೆಳೆದವು, ಸಮಸ್ಯೆಗಳ ನಿವಾರಣೆಗಾಗಿ ಆಡಳಿತ ಕ್ಷೇತ್ರದಲ್ಲಿ ಸುಧಾರಣೆ ತರುವ ಅಗತ್ಯತೆಯೂ ಇತ್ತು, ಈ ಸುಧಾರಣೆಗಳು ಭಾರತೀಯರ ಬೇಡಿಕೆಗಳಿಗೆ ಸ್ಪಂದಿಸುವಂತಿರಬೇಕಿತ್ತು. ಆಗ ಬ್ರಿಟಿಷರು ಕಾಲಕಾಲಕ್ಕೆ ವಿವಿಧ ನಿಯಮಗಳನ್ನು ಕಾಯ್ದೆಯ ರೂಪದಲ್ಲಿ ಜಾರಿಗೆ ತರುವ ಪ್ರಯತ್ನ ನಡೆಸಿದರು. ಈ ರೀತಿಯ ಕಾಯ್ದೆಗಳು ಭಾರತದ ಸಾಂವಿಧಾನಿಕ ಬೆಳವಣಿಗೆಗೆ ಸಹಕಾರಿಯಾದವು, ಈ ಕಾಯ್ದೆಗಳಲ್ಲಿ ಕೆಲವನ್ನು ತಿಳಿಯೋಣ.

ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯ ಅವಧಿಯಲ್ಲಿ ಜಾರಿಗೊಂಡ ಕಾಯ್ದೆಗಳು (1773-1858)

1773ರ ರೆಗ್ಯುಲೇಟಿಂಗ್ ಕಾಯ್ದೆ

1765ರಲ್ಲಿ ಜಾರಿಗೊಂಡ ಜವಾನಿ ಹಕ್ಕಿನ ನಂತರ ಕಂಪನಿ ಅಧಿಕಾರಿಗಳು ಅವರಿತ ದುರಾಸೆಗೆ ಒಳಗಾಗಿ ಅಧಿಕಾರವನ್ನು ತಮ್ಮ ವೈಯಕ್ತಿಕ ಶ್ರೀಮಂತಿಕೆಯನ್ನು ಹೆಚ್ಚುಪಡಿಸಿಕೊಳ್ಳಲು ಒಳಸಿಕೊಂಡರು, ಭ್ರಷ್ಟಾಚಾರ ವಿಪರೀತವಾಯಿತು. ಇಂಗ್ಲೆಂಡಿನ ಶಾಸನ ಸಭೆಯ ಸದಸ್ಯನಾದ ಎಡ್ಕಂಡ್ ಬರ್ಕ್‌ನು ವಾರ್ಷಿಕವಾಗಿ ಈಸ್ಟ್ ಇಂಡಿಯಾ ಕಂಪನಿಯಿಂದ ಬಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು ಅಪರಾಧ ತೆರಿಗೆ’ ಎಂದು ತೀಕ್ಷೆವಾಗಿಯ’ ಟೀಕಿಸಿದನು. ಕಂಪನಿ ಅಧಿಕಾರಿಗಳು ಭಾರತದಲ್ಲಿ ನಡೆಸುತ್ತಿರುವ ಆನೈತಿಕ ವ್ಯವಹಾರಗಳು ಗೊತ್ತಿದ್ದರೂ ಯಾವುದೇ ಕ್ರಮವನ್ನು ಜರುಗಿಸದೆ ಸುಮ್ಮನಿದ್ದುದೇ ಅವನು ಹೀಗೆ ಹೇಳಲು ಕಾರಣವಾಗಿತ್ತು. ಇವರು ಸಂಪಾದಿಸಿದ ಹಣದ ಪ್ರಮಾಣ ಎಷಿತಂದರೆ ಇಂದಿನ ರಾಜಕೀಯ ವ್ಯವಸ್ಥೆಯನ್ನು ಬಡುಮೇಲ ಮಾಡಬಹುವನ್ನುವ ಆತಂಕ ಇಂಗ್ಲೆಂಡಿನಲ್ಲಿ ಅನೇಕರಿಗಿತ್ತು. ಈ ಹಿನ್ನೆಲೆಯಲ್ಲಿ ಆಗಲೇಟಿಂಗ್ ಕಾಯ್ಕ 1773ರಲ್ಲಿ ಜಾರಿಗೊಂಡಿತು.

ಕಾಯ್ದೆಯ ಪ್ರಮುಖ ಲಕ್ಷಣಗಳು

1. ಈ ಕಾಯ್ದೆಯು ಜಾರಿಗೆ ಬರುವ ಪೂರ್ವದಲ್ಲಿ ಬ್ರಿಟಿಷರ ಅಧೀನದಲ್ಲಿದ್ದ ಪಾಂತ್ಯಗಳನ್ನು ಮೂರು ಪ್ರೆಸಿಡೆನ್ಸಿಗಳು ವಿಂಗಡಿಸಲಾಗಿತ್ತು. ಅವುಗಳೆಂದರೆ ಬಂಗಾಳ, ಮುಂಬಯಿ ಮತ್ತು ಮದರಾಸು ಬ್ರೆಸಿಡೆನ್ಸಿಗಳು, ಅವುಗಳು ಪ್ರತ್ಯೇಕವಾಗಿಯೂ ಮತ್ತು ಸ್ವತಂತವಾಗಿಯೂ ಕಾರ್ಯನಿರ್ವಹಿಸುತ್ತಿದ್ದವು. ಈ ಕಾಯ್ದೆಯ ಪ್ರಕಾರ ಬಂಗಾಳದ ತೊಡೆಯು ಉಳಿದ ಎರಡು ಪ್ರೆಸಿಡೆನ್ಸಿಗಳ ಮೇಲೆ ಅಧಿಕಾರವನ್ನು ಪಡೆಯಿತು.

2. ಬಂಗಾಳದ ಗವರ್ನರನು ಮೂರು ಪ್ರೆಸಿಡೆನ್ಸಿಗಳಗೆ ಗವರ್ನರ್ ಜನರಲ್ ಆದನು

3. ಗವರ್ನರ್ ಜನರಲ್ಲನಿಗೆ ಬಾಂಬೆ ಮತ್ತು ಮದರಾಸು ಪಡೆಗಳಿಗೆ ನಿರ್ದೇಶಿಸುವ, ನಿಯಂತ್ರಿಸುಆದನ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈ ಕಾನೂನು ನೀಡಿತು.

4. ಬಂಗಾಳ ಸರ್ಕಾರದ ಮತ್ತು ಇಂಗ್ಲೆಂಡಿನ ನಿರ್ದೇಶಕ ಮಂಡಳಿಯ (Court of Directories) .ಪೂರ್ವಾನುಮತಿಯಿಲ್ಲದೆ ಬಾಂಬೆ ಮತ್ತು ಮದರಾಸು ಸರ್ಕಾರಗಳು ಯಾರ ಮೇಲೂ ಯುದ್ಧ ಘೋಷಿಸುವಂತಿಲ್ಲ ಅಥವಾ ಶಾಂತಿ ಸಂಧಾನವನ್ನು ನಡೆಸುವಂತಿಲ್ಲ. ನೀರ ತುರ್ತಾದ ಸಂದರ್ಭಗಳಲ್ಲಿ ಮಾತ್ರ ಇಂತಹ ನಿಬಂಧನೆಗಳಿಂದ ವಿನಾಯಿತಿ ಇತ್ತು.

5. ಕಲ್ಕತ್ತಾದಲ್ಲಿ ಈ ಕಾಯ್ದೆಯ ರೆಗೆ “ಸುಪ್ರೀಂಕೋರ್ಟ್ ಅನ್ನು ಸ್ಥಾಪಿಸಲಾಯಿತು, ಈ ಕೇಂದ್ರ ನ್ಯಾಯಾಲಯದಲ್ಲಿ ಒಬ್ಬರು ಮುಖ್ಯ ನ್ಯಾಯಾಧೀಶರು ಮತ್ತು ಮೂರು ಜನ ಸಾಮಾನ್ಯ ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದರು.

ಹೀಗೆ ರೆಗ್ಯುಲೇಟಿಂಗ್ ಕಾಯ್ದೆ, ತನ್ನ ಹೆಸರೇ ಸೂಚಿಸುವಂತೆ ಕಂಪನಿಯನ್ನು ಒಳಗೊಂಡಂತೆ ಒಟ್ಟಾರೆ ಭಾರತದಲ್ಲಿನ ಬ್ರಿಟಿಷ್ ಆಡಳಿತ ವ್ಯವಸ್ಥೆಯನ್ನು ಇಂಗ್ಲೆಂಡಿನ ಸರ್ಕಾರದ ಅಧೀನಕ್ಕೆ ತರುವ ಬಹುದೊಡ್ಡ ನಿರ್ಣಯವಾಗಿತ್ತು.


1784ರ ಏಟ್ಸ್ ಇಂಡಿಯಾ ಕಾಯ್ದೆ:

1773ರ ರೆಗ್ಯುಲೇಟಿಂಗ್ ಕಾಯ್ದೆಯಲ್ಲಿ ಕೆಲವು ಅನಿಶ್ಚಿತತೆಗಳು ಇದ್ದು, ಇವುಗಳನ್ನು ನಿವಾರಿಸುವುದರ ಜೊತೆಗೆ ಬ್ರಿಟಿಕ್ ಸರ್ಕಾರದ ಅಧಿಕಾರವನ್ನು ಮತ್ತು ಕಂಪನಿ ಸರ್ಕಾರಕ್ಕಿದ್ದ ಅಧಿಕಾರದ ಮಿತಿಗಳನ್ನು ಸ್ಪಷ್ಟಪಡಿಸುವುದೇ ಈ ಕಾಯ್ದೆಯ ಪ್ರಮುಖ ಉದ್ದೇಶ, ಇಂಗ್ಲೆಂಡ್‌ನ ಸರ್ಕಾರ ಈ ಕಾಯ್ದೆಯಲ್ಲಿ ಹೊಸ ನಿಬಂಧನೆಗಳನ್ನು ಹೇರುವುದರ ಮೂಲಕ ಭಾರತದಲ್ಲಿ ಕಂಪ ಸರ್ಕಾರವನ್ನು ನಿರ್ಣಾಯಕವಾಗಿ ನಿಯಂತ್ರಿಸಿತು.

ಮತ್ತೊಂದು ಪ್ರಮುಖ ಅಂಶವೆಂದರೆ ನಿಯಂತ್ರಣ ಮಂಡಳಿ’ (Boari ol Control) ಎನ್ನುವ ಆರು ಜನ ಕಮಿಷನರ್‌ಗಳನ್ನೊಳಗೊಂಡ ಹೊಸ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಈ ಹಿಂದೆ ಇದ್ದ ನಿರ್ದೇಶನ’ ಮಂಡಳಿಯು (Court of Directors ಜಾಗದಲ್ಲಿ ನಿಯಂತ್ರಣ ಮಂಡಳಿ (Board of Coural) ಹುಟ್ಟಿಕೊಂಡಿತು.

ಈ ಮಂಡಳಿಯು ನಾಗರಿಕ, ಮಿಲಿಟರಿ, ಕಂದಾಯದ ವಿಷಯಗಳಲ್ಲಿ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವ ಅಧಿಕಾರವನ್ನು ಪಡೆದಿತ್ತು. ಇಂಗ್ಲೆಂಡಿನಲ್ಲಿ ನಿರ್ದೇಶಕ ಮಂಡಳಿ (Court (f Directors) ಮತ್ತು ನಿಯಂತ್ರಣ ಮಂಡಳಿ (Bhard of Contml) ಎರಡೂ ಜಾರಿಯಲ್ಲಿದ್ದವು.

ಭಾರತೀಯರು ತಮ್ಮ ಸಾರ್ವಭೌಮತ್ವವನ್ನು ಬ್ರಿಟಿಷ್ ರಾಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆಯೇ ವಿನಃ ಅವರದಃ ಸ್ವಂತ ಹಲ್ಲ” ಎಂದು ಈ ಕಾಯ್ದೆಯಲ್ಲಿ ಹೇಳುವ ಮೂಲಕ ಭಾರತೀಯರ ರಾಜಕೀಯ ಹಕ್ಕುಗಳನ್ನು ನಿರ್ಣಾಯಕವಾಗಿ ಮೊಟಕುಗೊಳಿಸಿತು. ಈ ಕಾಯ್ದೆಯು ಭಾರತದಲ್ಲಿದ್ದ ಕಂಪನಿಯ ಅಧೀನದ ಪ್ರದೇಶ (The British Possessions ಗಳಿಗೆ ಇಂಗ್ಲೆಂಡಿನ ಸರ್ಕಾರವೇ ಅಂತಿಮ ಸಾರ್ವಭೌಮನೆಂದು ಘೋಷಿಸಿತು.


ಚಾರ್ಟರ್ ಕಾಯ್ದೆಗಳು

ಚಾರ್ಟರ್ ಕಾಯ್ದೆಗಳ ಪ್ರಮುಖ ಉದ್ದೇಶ ಭಾರತದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಪರವಾನಗಿ (permit)ಯನ್ನು ವಿಸ್ತರಿಸುವುದು. 1793, ISI3, 1833 ಮತ್ತು 1853ರಲ್ಲಿ ಚಾರ್ಟರ್ ಕಾಯ್ದೆಗಳನ್ನು ಜಾರಿಗೆ ತರಲಾಯಿತು, ಪಕೀ 20 ವರ್ಷಕ್ಕೊಮ್ಮೆ ಕಂಪನಿಗೆ ಪರವಾನಗಿಯನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಇಂಗ್ಲೆಂಡಿನ ಸರ್ಕಾರ ತೆಗೆದುಕೊಂಡ ಹೊಸ ನೀತಿಗಳನ್ನು ಈ ಕಾಯ್ದೆಗಳಲ್ಲಿ ಸೇರಿಸಲಾಯಿತು. ಈ ನಾಲ್ಕು ಕಾಯ್ದೆಗಳಲ್ಲಿ 1811ರ ಮತ್ತು 1833ರ ಕಾಯ್ದೆಗಳು ವಿವಿಧ ಕಾರಣಗಳಿಂದ ಪ್ರಮುಖವಾದವು.


1813ರ ಚಾರ್ಟರ್ ಕಾಯ್ದೆ:

1. ಈ ಕಾಯ್ದೆಯು ಈಸ್ಟ್ ಇಂಡಿಯಾ ಕಂಪನಿಗೆ ಮುಂದಿನ 20 ವರ್ಷಗಳು ಭಾರತದಲ್ಲಿರುವ ಅಧಿಕಾರವನ್ನು ನೀಡಿತು. ಈ ಕಾಯ್ದೆಯು ಜಾರಿಗೊಳ್ಳುವ ಪೂರ್ವದಲ್ಲಿ ಭಾರತದಲ್ಲಿ ವ್ಯಾಪಾರ ಮಾಡುವ ಅಧಿಕಾರವನ್ನು ಕಂಪನಿಗೆ ಮಾತ್ರವಲ್ಲದೆ ಇಚ್ಛೆಯುಳ್ಳವರೆಲ್ಲರಿಗೂ ನೀಡಬೇಕೆಂದು ಹೋರಾಟ ನಡೆಯಿತು. ಈ ಹಿನ್ನೆಲೆಯಲ್ಲಿ ಇಚ್ಚೆಯಿದ್ದವರೆಲ್ಲರಿಗೂ ಈ ಕಾಯ್ದೆಯು ಅವಕಾಶವನ್ನು ಮುಕ್ತವಾಗಿಸಿತು. ಇದರ ಪರಿಣಾಮವಾಗಿ ಮುಕ್ತ ವ್ಯಾಪಾರದ ಹೊಸ ಶಕೆ ಆರಂಭಗೊಂಡಿತು.

2. ಅನುಮತಿ ಮತ್ತು ಪರವಾನಿಗೆಯ ಹೊಸ ಕಾಲ ಆರಂಭವಾಯಿತು. 3. ಇನ್ನು ಮುಂದೆ ಗವರ್ನರ್ ಜನರಲ್ ಮತ್ತು ಸೇವೆಯ ಮಹಾಮುಸ್ಮರನ್ನು (commander In chief) ನಿರ್ದೇಶಕ ಮಂಡಳೆಯು ನೇಮಿಸುವ ಅಧಿಕಾರವನ್ನು ಹೊಂದಿತು.

3. ಚರ್ಚ್‌ಗಳಿಗೆ ಭಾರತಕ್ಕೆ ಪ್ರವೇಶಿಸುವ ಅಧಿಕೃತ ಅವಕಾಶವನ್ನು ನೀಡಲಾಯಿತು. ಭಾರತೀಯರಲ್ಲಿ ಹೊಸ ಜ್ಞಾನವನ್ನು ಪಸರಿಸುವ, ಅವರ ನೈತಿಕ ಮತ್ತು ಧಾರ್ಮಿಕ ಬದುಕನ್ನು ಎತ್ತರಿಸುವ ಜವಾಬ್ದಾರಿಯನ್ನು ಮಿಶನರಿ ಸಂಸ್ಥೆಗಳು ವಹಿಸಿಕೊಳ್ಳಬೇಕು ಎಂಬ ನಿರ್ದೇಶನವನ್ನು ನೀಡಲಾಯಿತು, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ರೈಸ್ತ ಮಿಶನರಿಗಳು ಭಾರತಕ್ಕೆ ಬರತೊಡಗಿದರು. ಕ್ರೈಸ್ತ ಧರ್ಮದ ಪ್ರಚಾರ ಮತ್ತು ಇಂಗ್ಲಿಷ್ ವಿದ್ಯಾಭ್ಯಾಸದ ವಿಸ್ತರಣೆ ಹೆಚ್ಚಾಯಿತು.

ಈ ಮೇಲಿನ ಕಾರಣಗಳಿಂದ 1813ರ ಚಾರ್ಟರ್ ಕಾಯ್ದೆಯು ಚಾರಿತ್ರಿಕವಾದದ್ದು.


1833ರ ಚಾರ್ಟರ್ ಕಾಯ್ದೆ:

ಈ ಕಾಯ್ದೆಯು ಅನುಷ್ಠಾನಕ್ಕೆ ಬರುವ ಪೂರ್ವದಲ್ಲಿ ಭಾರತದ ಒಟ್ಟು ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶವೂ ಈ ಕಾಯ್ದೆಯ ಅನುಷ್ಟಾನದ ಹಿನ್ನೆಲೆಯಾಗಿತ್ತು ಈಸ್ಟ್ ಇಂಡಿಯಾ ಕಂಪೆನಿಗೆ ಮುಂದಿನ 20 ವರ್ಷದ ಪರವಾನಿಗೆಯನ್ನು ನೀಡಲಾಯಿತು. ಈ ಪ್ರಮುಖ ಅಂಶಗಳೆಂದರೆ,

1. ಬಂಗಾಳದ ಗವರ್ನರ್ ಜನರಲ್ ನನ್ನು ಭಾರತದ ಜನರಲ್ ಆಗಿ ನಾಮಕರಣ ಮಾಡಲಾಯಿತು.

2. ಭಾರತದ ಎಲ್ಲ ವ್ಯಾಪಾರಿ ಸರಕುಗಳನ್ನು ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವ ಅಧಿಕಾರವನ್ನು ಗವರ್ನರ್ ಜನರನು ಪಡೆದನು.

3. ದೇಶಿ ಸಂಸ್ಥಾನಗಳ ಜೊತೆಗೆ ಯುದ, ಶಾಂತಿ ಮತ್ತು ರಾಜತಾಂತ್ರಿಕ ಸಂಬಂಧವ ಎಲ್ಲ ವಿಷಯಗಳನ್ನು ಬಂಗಾಳದ ಕೇಂದ್ರ ಸರ್ಕಾರವೇ ತೀರ್ಮಾನಿಸುವ ಹಕ್ಕನ್ನು ಹೊಂದಿತ್ತು.

4. ಗವರ್ನರ್ ಜನರಲ್‌ನ ಕಾರ್ಯಾಂಗ ಸಭೆಯಲ್ಲಿ ಉಳಿದ ಸದಸ್ಯರ ಜೊತೆ ಗವರ್ನರ್ ಜನರಲ್‌ನಿಗೆ ಯಾವುದಾದರೂ ವಿಷಯದ ಮೇಲೆ ಒಮ್ಮತ ಮೂಡದಿದ್ದಾಗ ಅವನು ಬಹುಮತದ ನಿರ್ಣಯವನ್ನು ತಿರಸ್ಕರಿಸಲು ಇದ್ದ ಕಾರಣಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕಾಯಿತು.

5. ಧರ್ಮ, ಬಣ್ಣ ಮತ್ತು ಹುಟ್ಟಿನ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ. ಎನ್ನುವುದನ್ನು ಈ ಕಾಯ್ದೆಯು ನಿರ್ದೇಶಿಸಿತು.

6. ಗವರ್ನರ್ ಜನರಲ್‌ನ ಕಾರ್ಯಾಂಗ ಸಭೆಗೆ ನ್ಯಾಯಾಂಗ ಪುಣಿತವನ್ನು ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಬೇಕಾಯಿತು

7. ಎಲ್ಲ ಬ್ರಿಟಿಷ್ ವ್ಯಾಪಾರಿ ಕಂಪನಿಗಳಿಗೆ ಭಾರತಕ್ಕೆ ಬರಲು ಮುಕ್ತ ಪರವಾನಗಿಯನ್ನು ನೀಡಲಾಯಿತು,


ಈ ಕಾಯ್ದೆಯ 1830ರ ದಶಕದ ಭಾರತದ ಆಂತರಿಕ ಮತ್ತು ಇಂಗ್ಲೆಂಡಿನಲ್ಲಿದ್ದ ವಿವಿಧ ರಾಜಕೀಯ ವಿದ್ಯಮಾನಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ.


 ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆಯಲ್ಲಿ ಜಾರಿಗೊಂಡ ಕಾಯ್ದೆಗಳು (1858-1947)

ಈಸ್ಟ್ ಇಂಡಿಯಾ ಕಂಪನಿಯ ದುರಾಡಳಿತ ಹಾಗೂ ಭಾರತ ವಿರೋಧಿ ಕಾಯ್ದೆಗಳಿಂದಾಗಿ 1857ರಲ್ಲಿ ಸಿಪಾಯಿ ದಂಗೆ ಸಂಭವಿಸಿತು. ಇದರಿಂದಾಗಿ ಕಂಪನಿಯ ಆಡಳಿತವು ಬ್ರಿಟನ್ ರಾಣಿಗೆ ಹಸ್ತಾಂತರವಾಯಿತು.

ಈ ಅವಧಿಯಲ್ಲಿ ಜಾರಿಗೆ ಬಂದ ಪ್ರಮುಖ ಕಾಯಗಳೆಂದರೆ ಭಾರತ ಸರ್ಕಾರದ ಕಾಯ 1858 1861, 1892, 1909, 1919 ಮತ್ತು 1935ರ ಕಾಯ್ದೆಗಳು, ಭಾರತದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ರೂಪತಾಳೆದ ರಾಜಕೀಯ ಬೆಳವಣಿಗೆಗಳ ಹಿನ್ನಲೆಯಲ್ಲಿ ಮೇಲೆ ತಿಳಿಸಿದ ಪ್ರತಿ ಕಾಯ್ದೆಯ ಚಾರಿತ್ರಿಕ ಪ್ರಾಮುಖ್ಯತೆಯನ್ನು ಅರ್ಥೈಸಿಕೊಳ್ಳಬೇಕು.


ಭಾರತ ಸರ್ಕಾರದ ಕಾಯ್ದೆ – 1858

ಈ ಕಾಯ್ದೆಯನ್ನು 1857ರ ಸೈನಿಕ ಮತ್ತು ನಾಗರಿಕ ಕಾಂತಿಯ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಬ್ರಿಟಿಷ್ ಭಾರತವು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆಗೆ ಒಳಪಡುವಂತಾಯಿತು. ನವಂಬರ್ 1. 1858ರಂದು ಬ್ರಿಟಿಷ್ ರಾಣಿ ವಿಕ್ಟೋರಿಯಾ ಒಂದು ಘೋಷಣೆ ಹೊರಡಿಸಿ, ತಮ್ಮ ಆಡಳಿತದ ಅವಧಿಯಲ್ಲಿ ಭಾರತದ ಎಲ್ಲ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಘೋಷಿಸಿದರು. ಈ ಕಾಯ್ದೆಯ ಪ್ರಮುಖ ಅಂಶಗಳೆಂದರೆ,

1. ಈಸ್ಟ್ ಇಂಡಿಯಾ ಕಂಪನಿಯ ಮಾನ್ಯತೆ ರದ್ದುಗೊಳಿಸಿ ಭಾರತವನ್ನು ರಾಣಿಯವರ ಆಡಳಿತಕ್ಕೆ ವರ್ಗಾಯಿಸಲಾಯಿತು

2. ಗವರ್ನರ್ ಜನರಲ್ ಹುದ್ದೆಯ ಪದನಾಮವನ್ನು ಬದಲಾಯಿಸಿ 'ವೈಸ್‌ರಾಯ್" ಎಂಬ ಪದನಾಮವನ್ನು ನೀಡಿದರು. ವೈಸರಾಯ್ ಆಗಿ “ಲಾರ್ಡ್ ಕ್ಯಾನಿಂಗ್ ನೇಮಕಗೊಂಡರು.

3. “ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯನ್ ಸ್ಥಾನವನ್ನು ಬ್ರಿಟಿಷ್ ಸೃಷ್ಟಿಸಿತು. ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರಾಗಿದ್ದ ಇವರು ಭಾರತದ ಆಡಳಿತವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದರು.

4. ಇವರಿಗೆ ಸಹಾಯ ಮಾಡಲು 15 ಸದಸ್ಯರನ್ನೊಳಗೊಂಡ ಭಾರತದ ಮಂಡಳಿ ಅಸ್ತಿತ್ವಕ್ಕೆ ಬಂದಿತು.


1861ರ ಭಾರತೀಯ ಪರಿಷತ್ ಕಾಯ್ದೆ (1861)

ಈ ಕಾಯ್ದೆ 1897ರ ಘಟನೆಯ ನಂತರ ಜಾರಿಗೊಂಡ ಪ್ರಮುಖ ಕಾಯೆಯಾಗಿದೆ. ಈ ಕಾಯ್ದೆಯ ಮೂಲಕ ಭಾರತೀಯರಿಗೆ ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಸ್ಥಾನವನ್ನು ಕಲ್ಪಿಸಲಾಯಿತು. ಭಾರತೀಯರು ಬ್ರಿಟಿಷರ ಬಗೆಗೆ ತಿಳಿದಿರುವ ಅಭಿಪ್ರಾಯಗಳನ್ನು ತಿಳಿಯಲು ಭಾರತೀಯರಿಗೆ ಪ್ರಾತಿನಿ ನೀಡಲಾಯಿತು. ಇದನ್ನು ಇಂಗ್ಲೀಷಿನಲ್ಲಿ “Policy of Amertion’ ಎಂದು ಕರೆಯುತ್ತಾರೆ.

ಈ ಕಾಯ್ದೆಯ ಪ್ರಮುಖ ಅಂಶಗಳು

1. ವೈಸರಾಯ್ ಕೌನ್ಸಿಲ್‌ಗೆ ಭಾರತೀಯರನ್ನು ಅಧಿಕಾರೇತರ ಸದಸ್ಯರಾಗಿ ನಾಮಕರಣ ಮಾಡಲಾಯಿತು,

2. ತುರ್ತು ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಅಧಿಕಾರವನ್ನು ಗವರ್ನರ್ ಜನರಲ್‌ಗೆ ನೀಡಲಾಯಿತು.


1892 ರ ಭಾರತೀಯ ಪರಿಷತ್ ಕಾಯ್ದೆ

ಈ ಕಾಯ್ದೆಯು 1861 ಕಾಯ್ದೆಯ ಮುಂದುವರಿದ ಕಾಯ್ದೆಯಾಗಿದೆ. 1892ರ ಕಾಯ್ದೆಯ ಭಾರತೀಯರಿಗಿದ್ದ ಶಾಸನ ಸಭೆಗಳ ಪ್ರಾತಿನಿಧ್ಯವನ್ನು ಮತ್ತಷ್ಟು ವಿಸ್ತರಿಸಿತು. ಕಾಂಗ್ರೆಸ್ ಸಂಘಟನೆಯು ಬ್ರಿಟಿಷರ ಆಡಳಿತದ ಬಗ್ಗೆ ತಳೆದ ವಿಮರ್ಶಾತ್ಮಕ ನಿಲುವಿನ ಹಿನ್ನೆಲೆಯಲ್ಲಿ ಭಾರತೀಯರ ಪ್ರಾತಿನಿಧ್ಯವನ್ನು ಹೆಚ್ಚಿಸಲಾಯಿತು.

ಈ ಕಾಯ್ದೆಯ ಪ್ರಮುಖ ಅಂಶಗಳು

1. ಕೇಂದ್ರ ಹಾಗೂ ಪ್ರಾಂತೀಯ ಶಾಸನ ಸಭೆಗಳಲ್ಲಿ ಹೆಚ್ಚುವರಿ ಸದಸ್ಯರ ಸಂಖ್ಯೆಯನ್ನು ಅಧಿಕಗೊಳಿಸಲಾಯಿತು.

2. ಸಭೆಯ (ಆಜಿ ಸ್ಟೇಟಿವ್ ಕೌನ್ಸಿಲ್) ಅಧಿಕಾರವನ್ನು ಹೆಚ್ಚಿಸಿ ಅವುಗಳಲ್ಲಿ ಬಜೆಟ್, ಬಗ್ಗೆ ಚರ್ಚಿಸುವ ಅಧಿಕಾರವನ್ನು ನೀಡಲಾಯಿತು.

3. ಆರು ದಿನಗಳ ಮುಂಚೆ ಮುನ್ಸೂಚನೆ ನೀಡಿ ಸಾರ್ವಜನಿಕ ಆಸಕ್ತಿಯ ವಿಷಯಗಳ ಬಗ್ಗೆ ಸರಕಾರವನ್ನು ಪ್ರಶ್ನಿಸುವ ಹಕ್ಕನ್ನು ನೀಡಲಾಯಿತು.


1909 ಭಾರತೀಯ ಪರಿಷತ್ ಕಾಯ್ದೆ

ಈ ಕಾಯ್ದೆಯನ್ನು ‘ಮಿಂಟೋ ಮಾರ್ಲೆ ಸುಧಾರಣಾ ಕಾಯ್ದೆ’ ಎಂತಲೂ ಕರೆಯುವರು, ಏಕೆಂದರೆ, ಲಾರ್ಡ್ ಮಿಂಟೋ ಭಾರತದ ವೈಸ್‌ರಾಯ್‌ ಆಗಿದ್ದರು. ಲಾರ್ಡ್ ಮಾರ್ಲೆ ಭಾರತದ ಸಕ್ರೆಟರಿ ಆಫ್ ಸ್ಟೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬ್ರಿಟಿಷರು ಭಾರತೀಯರನ್ನು ಒಡೆದು ಆಳಲು ಈ ಕಾಯ್ದೆಯನ್ನು ಬಳಸಿಕೊಂಡರು.

ಈ ಕಾಯ್ದೆಯ ಪ್ರಮುಖ ಅಂಶಗಳು

1. ಕೇಂದ್ರ ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 16 60ಕ್ಕೆ ರಿಂದ ಹೆಚ್ಚಿಸಲಾಯಿತು.

2. ಪ್ರಾಂತ್ಯಗಳಲ್ಲೂ ಶಾಸನ ಸಭೆಗಳ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಲಾಯಿತು.

3. ಮೊದಲ ಬಾರಿಗೆ ಚುನಾವಣೆ ಮೂಲಕ ಶಾಸನ ಆಯ್ಕೆಯಾಗಲು ಅವಕಾಶ ನೀಡಲಾಯಿತು.

4. ಮುಸ್ಲಿಂರಿಗೆ ಪ್ರತ್ಯೇಕ ರಾಜಕೀಯ ನೀಡುವ “ಪ್ರತ್ಯೇಕ ಚುನಾವಣಾ ಮತಗಟ್ಟೆ” ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.


ಭಾರತ ಸರ್ಕಾರದ ಕಾಯ್ದೆ – 1919

ಈ ಕಾಯ್ದೆಯನ್ನು ಮಾಂಟೆಗೋ ಚೆಮ್ಸ್‌ಫರ್ಡ್ ಸುಧಾರಣಾ ಕಾಯ್ದೆ ಎಂತಲೂ ಕರೆಯುವರು. ಮೊದಲನೆಯ ಮಹಾಯುದ್ಧ (1914-1918) ದ ಸಂದರ್ಭದಲ್ಲಿ ಭಾರತೀಯರನ್ನು ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಭಾಗವಹಿಸಲು ಪ್ರೇರೇಪಿಸಿದ ಹಿನ್ನಲೆಯಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ಮಾಂಟೆಗೋ ಅವರು ಬ್ರಿಟನ್ನಿನ ಸಂಸತ್ತಿನಲ್ಲಿ 20.8.1917 ರಂದು ಮಾಡಿದ ಘೋಷಣೆಯ ಹಿನ್ನಲೆಯಲ್ಲಿ ಈ ಕಾಯ್ದೆ ರೂಪುಗೊಂಡಿತು. ಮಾಂಟೆಗೋ ಅವರು ‘ಭಾರತೀಯರಿಗೆ ಹಂತ ಹಂತವಾಗಿ ಜವಾಬ್ದಾರಿ ಸರಕಾರವನ್ನು ನೀಡುವುದೇ ಬ್ರಿಟಿಷ್ ಸರಕಾರದ ಗುರಿ’ ಎಂದು ಘೋಷಿಸಿದರು. ಭಾರತದ ವೈಸರಾಯ್ ಆಗಿದ್ದ ಚೆಮ್ಸ್‌ಫರ್ಡ್ ಅವರೂ ರಾಜಕೀಯ ಸುಧಾರಣೆಗಳಿಗೆ ಧ್ವನಿಗೂಡಿಸಿದರು. ಪರಿಣಾಮವಾಗಿ 1919ರಲ್ಲಿ ಭಾರತೀಯ ಪರಿಷತ್ ಕಾಯ್ದೆ ಜಾರಿಗೆ ಬಂದಿತು.

ಈ ಕಾಯ್ದೆಯ ಪ್ರಮುಖ ಅಂಶಗಳು

1. ಕೇಂದ್ರದಲ್ಲಿ ದ್ವಿಸದನ ಶಾಸಕಾಂಗ (Bi-Cameral) ರಚನೆಗೆ ಅವಕಾಶ ನೀಡಲಾಯಿತು. ಅವುಗಳೆಂದರೆ, ಶಾಸಕಾಂಗ ಸಭೆ (ಕೆಳಮನೆ) ಮತ್ತು ರಾಜ್ಯಗಳ ಪರಿಷತ್ತು (ಮೇಲ್ಮನೆ) ರಚಿಸಲಾಯಿತು.

2. ಪ್ರಾಂತ್ಯಗಳಲ್ಲಿ “ದ್ವಿಸರಕಾರ” (Dyarchy) ಪದ್ಧತಿಗೆ ಅವಕಾಶ ನೀಡಲಾಯಿತು.

3. ಭಾರತಕ್ಕೆ ಒಬ್ಬ ಹೈಕಮಿಷನರ್‌ರನ್ನು ನೇಮಕ ಮಾಡಲಾಯಿತು.

4. ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಭರವಸೆ ನೀಡಲಾಯಿತು.

5. ಕೇಂದ್ರದ ಬಜೆಟ್‌ನಿಂದ ಪ್ರಾಂತ್ಯಗಳ ಬಜೆಟನ್ನು ಬೇರ್ಪಡಿಸಲಾಯಿತು.

6. “ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಮುಸ್ಲಿಂ, ಸಿಖ್, ಆಂಗ್ಲೋ ಭಾರತೀಯರು ಮತ್ತು ಯುರೋಪಿಯನ್‌ರಿಗೆ ವಿಸ್ತರಿಸಲಾಯಿತು.


1935ರ ಭಾರತ ಸರ್ಕಾರದ ಕಾಯ್ದೆ

ಭಾರತದ ಸಂವಿಧಾನ ರಚನೆಗೆ ಈ ಕಾಯ್ದೆಯು ಬುನಾದಿಯಾಗಿದೆ. ಈ ಕಾಯ್ದೆಯು ರೂಪುಗೊಳ್ಳಲು ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ತಯಾರಾದ 1928ರ ವರದಿಯು ಮುಖ್ಯವಾಗಿದೆ. ಸಂವಿಧಾನದ ಬಹುತೇಕ ಅಂಶಗಳು ಈ ಕಾಯ್ದೆಯನ್ನೇ ಆಧರಿಸಿ ರಚಿಸಲಾಗಿದೆ. ಈ ಕಾಯ್ದೆಯು ಭಾರತಕ್ಕೆ ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚಿಸಲು ಅವಕಾಶ ನೀಡಿತು. ಇದು ಬ್ರಿಟಿಷ್ ಭಾರತ ಪ್ರಾಂತ್ಯಗಳಿಗೆ ಮಾತ್ರ ಅನ್ವಯವಾಗದೇ ದೇಶಿಯ ಸಂಸ್ಥಾನಗಳಿಗೂ ಅನ್ವಯವಾಗುವ ಅಂಶಗಳನ್ನು ಒಳಗೊಂಡಿದ್ದಿತು.

ಈ ಕಾಯ್ದೆಯ ಪ್ರಮುಖ ಅಂಶಗಳು

1. ಬ್ರಿಟಿಷ್ ಪ್ರಾಂತ್ಯಗಳ, ದೇಶಿಯ ಸಂಸ್ಥಾನಗಳು ಹಾಗೂ ಆಶ್ರಿತ ರಾಜರನ್ನೊಳಗೊಂಡ ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶ ನೀಡಿತು.

2. ಕೇಂದ್ರದಲ್ಲಿ “ದ್ವಿ ಸರಕಾರ”ವನ್ನು (Dyarchy) ಸ್ಥಾಪಿಸಲಾಯಿತು.

3. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಆ ಅವಕಾಶ ನೀಡಿತು.

4. ಪ್ರಾಂತ್ಯಗಳಲ್ಲಿ “ದ್ವಿ ಸರಕಾರ” ಪದ್ಧತಿಯನ್ನು ಸ್ವಾಯತ್ತತೆ ನೀಡಲಾಯಿತು.

5. ಭಾರತದಲ್ಲಿ ಫೆಡರಲ್ ಕೋರ್ಟ್” ಸ್ಥಾಪನೆಗೆ ಅವಕಾಶ ನೀಡಲಾಯಿತು.


ಭಾರತದ ಸಂವಿಧಾನ ಬೆಳವಣಿಗೆಯ ಗುರುತಿಸುವಾಗ ವಿವಿಧ ಕಾಲಘಟ್ಟಗಳಲ್ಲಿ ಆದ ರಾಜಕೀಯ ಬೆಳವಣಿಗೆಗಳು ಕಾಯ್ದೆಯ ಪ್ರಕಟವಾಗಿರುವುದನ್ನು ನಾವು ಗ್ರಹಿಸಬೇಕು. ಬ್ರಿಟಿಷ್ ವಸಾಹತುಶಾಹಿ ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಈ ಕಾಯ್ದೆಗಳು ಜಾರಿಗೆ ಬಂದದ್ದರಿಂದ ಬ್ರಿಟಿಷರ ಹಿತಾಸಕ್ತಿಗಳು ಈ ಕಾಯ್ದೆಗಳಲ್ಲಿ ಸೇರಿಕೊಂಡಿರುವಂತೆಯೆ ಭಾರತೀಯರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದ ಆಶೋತ್ತರಗಳ ಸಂಘರ್ಷದ ಫಲಿತಗಳು ಇವುಗಳಲ್ಲಿವೆ ಎಂಬುದನ್ನು ನಾವು ಗಮನಿಸಲೇಬೇಕಾದ ಸಂಗತಿಯಾಗಿದೆ.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು