ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು. ಇವರ ಆಡಳಿತದ ಬಗ್ಗೆಯೂ ಕೂಡಾ ಜನರಲ್ಲಿ ಅಸಮಾಧಾನವಿತ್ತು. ಈ ಅಸಮಾಧಾನವು 1857ರಲ್ಲಿ ಮಹಾಪ್ರತಿಭಟನೆಯ ರೂಪದಲ್ಲಿ ಸ್ಫೋಟಿಸಿತ್ತು. ಇದನ್ನು ಕೆಲವು ಭಾರತೀಯ ಇತಿಹಾಸಕಾರರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆದರೆ, ಇಂಗ್ಲಿಷ್ ಇತಿಹಾಸಕಾರರು ಇದೊಂದು ಸಿಪಾಯಿ ದಂಗೆ’ ಮಾತ್ರ ಎಂದಿದ್ದಾರೆ.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣಗಳು:
ರಾಜಕೀಯ ಕಾರಣಗಳು: ಬ್ರಿಟಿಷರು ಜಾರಿಗೆ ತಂದಿದ್ದ ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಯಿಂದಾಗಿ ಹಲವು ದೇಶೀಯ ರಾಜರು ತಮ್ಮ ರಾಜ್ಯಗಳನ್ನು ಕಳೆದುಕೊಳ್ಳಬೇಕಾಯಿತು. ಈ ನೀತಿಯಿಂದಾಗಿ ಸತಾರ, ಜೈಪುರ, ಝಾನ್ಸಿ, ಉದಯಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು ಡಾಲ್‌ಹೌಸಿಯು ತಂಜಾವೂರು ಮತ್ತು ಕರ್ನಾಟಿಕ್ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದುಪಡಿಸಿದನು. ಮಾಪಲ್ ಚಕ್ರವರ್ತಿ, ಔದ್ನ ನವಾಬ ಮೊದಲದ ರಾಜರುಗಳನ್ನು ಇಂಗ್ಲಿಷರು ಅಧಿಕಾರದಿಂದ ಪದಚ್ಯುತಗೊಳಿಸಿದರು. ಪರಿಣಾಮವಾಗಿ ಅವರನ್ನು ಅವಲಂಬಿಸಿದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು. ಇದು ಬ್ರಿಟಿಷರ ವಿರುದ್ಧದ 1857ರ ಪ್ರತಿಭಟನೆಗೆ ಪ್ರೇರಕವಾಯಿತು.
ಆರ್ಥಿಕ ಕಾರಣಗಳು: ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಭಾರತದ ಕರಕುಶಲತ ಮತ್ತು ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು. ಇಂಗ್ಲೆಂಡ್ ಕೇವಲ ವ್ಯಾಪಾರಿ ರಾಷ್ಟ್ರವಾಗಿರದೆ, ಕೈಗಾರಿಕೆಗಳ ಕಾರ್ಯಾಗಾರವಾಯಿತು. ಭಾರತದಲ್ಲಿದ್ದ ಕರಕುಶಲರರು ನಿರುದ್ಯೋಗಿಗಳಾದರು. ವಿಶೇಷವಾಗಿ ಬಟ್ಟೆ ಮತ್ತು ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿ ನೇಕಾರಿಕೆ ವೃತ್ತಿಯವರು ಉದ್ಯೋಗ ಕಳೆದುಕೊಂಡರು. ಗೃಹಕ್ಕೆಗಾರಿಕೆಗಳು ಇದೇ ಬಗೆಯ ತೀವ್ರ ಆರ್ಥಿಕನಷ್ಟ ಅನುಭವಿಸಿ ಶಿಥಿಲಗೊಂಡವು, ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ಇಂಗ್ಲಿಷರು ದುಬಾರಿ ಸುಂಕವನ್ನು ಹೇರಿದರು. ಜಮೀನ್ದಾರಿ ಪದ್ಧತಿಯಿಂದಾಗಿ ಸರ್ಕಾರ ಮತ್ತು ರೈತನ ಮಧ್ಯೆ ಇದ್ದ ಮಧ್ಯವರ್ತಿ ಜಮೀನ್ದಾರನು ಕೃಷಿಕರನ್ನು ಶೋಷಿಸುತ್ತಿದ್ದರು, ಕಂದಾಯ ವಸೂಲಿ ಮಾಡಲು ತಾಲ್ಲೂಕುದಾರರಿಗೆ ನೀಡಿದ್ದ ಹಕ್ಕುಗಳನ್ನು ಹಿಂಪಡೆಯಲಾಯಿತು. ಇನಾಂ ಆಯೋಗ ನೇಮಿತಿ ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು. ಇದರಿಂದಾಗಿ ಕೃಷಿಕರು ತೀವ್ರವಾಗಿ ಅವಮಾನ ಮತ್ತು ಆರ್ಥಿಕಸಂಕಷ್ಟ ಅನುಭವಿಸಿದರು. ಇದೂ ಕೂಡ ರೈತರ ಪ್ರತಿಭಟನೆಗೆ ಕಾರಣವಾಯಿತು,
ಆಡಳಿತಾತ್ಮಕ ಕಾರಣಗಳು ಇಂಗ್ಲಿಷರು ಹೊಸ ನಾಗರಿಕ ಮತ್ತು ಅಪರಾಧ ಕಾಯ್ದೆಗಳನ್ನು ಜಾರಿಗೆ ತಂದರು. ಕಾನೂನಿನಲ್ಲಿ ಪಕ್ಷಪಾತ ಮತ್ತು ಭಾರತೀಯರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು. ಅಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಯಿತು. ಇಂಗ್ಲಿಷ್ ನ್ಯಾಯಾಧೀಶರು ಬಹುತೇಕವಾಗಿ ಇಂಗ್ಲಿಷರ ಪರವಾಗಿ ನ್ಯಾಯದಾನ ನೀಡುತ್ತಿದ್ದರು. ಹೊಸ ಕಾನೂಮುದುರಿಗೆ ಹಂದಿಯು ನಿಷಿದ್ಧವಾಗಿತ್ತು.
ಸೈನಿಕ ಕಾರಣಗಳು: ಬ್ರಿಟಿಷರ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿಯು ಗಂಭೀರವಾಗಿತ್ತು. ಅಂಗಸೈ ನಿಕರಿಗಿದ್ದ ಸ್ಥಾನಮಾನ, ವೇತನ, ಬಡ್ತಿ ಅವಕಾಶಗಳು ಭಾರತೀಯ ಸಿಪಾಯಿಗಳಿಗೆ ಇರಲಿಲ್ಲ, ಉರತೀಯಸೈ ನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.
ದಂಗೆಯ ತಕ್ಷಣದ ಕಾರಣ
ಇಂಗ್ಲಿಷ್ ಸೇನೆಯಲ್ಲಿದ್ದ ಹೆಚ್ಚಿನ ಪ್ರಮಾಣದ ಭಾರತೀಯ ಸಿಪಾಯಿಗಳು ತಾವೆಲ್ಲರೂ ಒಂದಾಗಿ ಹೋರಾಡಿದರೆ ಇಂಗ್ಲಿಷರನ್ನು ಭಾರತದಿಂದ ಓಡಿಸಬಹುದು ಎಂಬ ಅವಿಶ್ವಾಸವನ್ನು ಹೊಂದಿದ್ದರು. ಈ ಸನ್ನಿವೇಶದಲ್ಲಿ ಸೈನಿಕರಿಗೆ 'ರಾಯಲ್' ಎನ್‌ಫೀಲ್ಡ್' ಎಂಬ ನವೀನ ಬಂದೂಕುಗಳನ್ನು ನೀಡುತ್ತಿದ್ದರು. ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ - ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ಸಂಬ ಮತ್ತು ಶ ವದಂತಿ ಹಬ್ಬಿತ್ತು. ಹಿಂದುಗಳಿಗೆ ಹಸು ಪವಿತ್ರವಾದರೆ, ಮುದುರಿಗೆ ಹಂದಿಯು ನಿಷಿದ್ಧವಾಗಿತ್ತು.ಈ ವದಂತಿಯು ದಂಗೆಗೆ ತಕ್ಷಣದ ಕಾರಣವಾಯಿತು.
ಬ್ಯಾರಕ್‌ಪುರದಲ್ಲಿನ ಸೈನಿಕ ಪಡೆಯಲ್ಲಿ ಹೆಚ್ಚಿದ ಈ ವದಂತಿಯು ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಸೈನಿಕರಿಗೆ ತುಪಾಕಿಯನ್ನು ಹಲ್ಲಿನಿಂದ ಕಟ್ಟಿ ತೆಗೆಯುವಂತೆ ಇಂಗ್ಲಿಷರು ಆದೇಶಿಸಿದಾಗ ಇದನ್ನು ತಿರಸ್ಕರಿಸಿ ಮೇಲಾಧಿಕಾರಿಗಳ ವಿರುದ್ಧ ಬ್ಯಾರಕಪುರದ ಸೈನಿಕರು ಬಂಡಾಯವೆದ್ದರು. ಇದೇ ಸಂದರ್ಭದಲ್ಲಿ ಮಲಗಲ ಪಾಂಡೆ ಎಂಬ ಸೈನಿಕನು ಬ್ರಿಟಿಷ್ ಸೈನ್ಯದ ಅಧಿಕಾರಿಯೊಬ್ಬನನ್ನು ಕೊಂದನು. ಇದರ ಪರಿಣಾಮವಾಗಿ ಮಂಗಲಪಾಂಡೆಯನ್ನು ಬಂಧಿಸಿ ವಿಚಾರಗೊಳಪಡಿಸಿ ಗಲ್ಲಿಗೇರಿಸಲಾಯಿತು.
ದಂಗೆಯ ಹರಡುವಿಕೆ : ಮೀರತ್ ಬ್ರಿಟಿಷರ ಪ್ರಬಲ ಸೇನಾ ನೆಲೆಯಾಗಿತ್ತು, ಇಲ್ಲಿಯೂ ಕೂಡಾ ಇಂಗ್ಲಿಷರು ಭಾರತೀಯ ಸೈನಿಕರಿಗೆ ತುಪಾಕಿಗಳನ್ನು ಬಳಸಲು ಆದೇಶಿಸಿದಾಗ ಭಾರತೀಯ ಸೈನಿಕರು ಅದನ್ನು ನಿರಾಕರಿಸಿದರು. ಆಗ ಸಪಾಯಗಳನ್ನು ಬಂಧಿಸಲಾಯಿತು. ಇದರಿಂದಾಗಿ ಮೀರತ್‌ನಲ್ಲಿ ದಂಗ ಉಂಟಾಯಿತು. ಪರಿಣಾಮವಾಗಿ ಸೈನಿಕರು ಸೆರಮನೆಗೆ ನುಗ್ಗಿ ಈಗಾಗಲೇ ಬಂಧಿತರಾಗಿದ್ದ ಭಾರತೀಯ ಸಿಪಾಯಿಗಳನ್ನು ಬಿಡುಗಡೆಗೊಳಿಸಿದರು. ಇದು ಸ್ವಾತಂತ್ರ ಸಂಗ್ರಾಮದ ಬೀಜಾಂಕುರಕ್ಕೆ ನಾಂದಿಯಾಯಿತು. ನಂತರ ಸೈನಿಕರ ಗುಂಪು ಮೀರತ್‌ನಿಂದ ದೆಹಲಿಗೆ ತಲುಪಿತು. ಅವರು ಕೆಂಪುಕೋಟೆಗೆ ನುಗ್ಗಿ ಮೊಘಲ್ ದೊರೆ ಎರಡನೇ ಬಹುದೂರ ಷಾನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು. ಹಲವಾರು ಭಾಗಗಳಿಂದ ಪ್ರತಿಭಟನಾ ನಿರತ ಸಿಪಾಯಿಗಳು ದೆಹಲಿಗೆ ತಲುಸಿದರು. ಇದರಿಂದಾಗಿ ಪ್ರತಿಭಟನೆಯು ತೀವ್ರ ಸ್ವರೂಪ ತಾಳಿತು, ಕಾಚಿನಂತೆ ಪ್ರತಿಭಟನೆಯು ದೆಹಲಿ, ಕಾನ್ಸುರ ಮತ್ತು ಝಾನ್ಸಿಗಳಲ್ಲಿ ಹರಡಿತು.
ಕಾಯ್ದಿರದಲ್ಲಿ ನಾನಾ ಸಾಹೇಬನು ಸಿಡಿದೆದ್ದನು. ಈತನಿಗೆ ತಾಕ್ಕಾ ಟೋಪೆಯು ಸಹಾಯಕನಾಗಿದ್ದನು. ಝಾನ್ಸಿಯಲ್ಲಿ ರಾಣಿ ಲಕ್ಷ್ಮಿ ಬಾಯಿಯ ನಾಯಕತ್ವದಲ್ಲಿ ಡಂಗೆ ಉಂಟಾಯಿತು. ಕಾನುರ ಬ್ರಿಟಿಷರ ವಶವಾದ ನಂತರ ತಾತ್ಯಾಟೋಪೆಯು ಝಾನ್ಸಿರಾಣಿಯ ಸಹಾಯಕ್ಕೆ ಬಂದನು.
ಪ್ರತಿಭಟನೆಯ ಲವಿನಲ್ಲಿಯೂ ಉಂಟಾಯಿತು. ಆದರೆ ಅಂತಿಮವಾಗಿ ಆ ಇಂಗ್ಲಿಷರ ವಶವಾಯಿತು. ಇಲ್ಲಿಂದ ಸಂಗ್ರಾಮವು ಯಮುನಾ ನದಿಯ ದಕ್ಷಿಣಕ್ಕೆ ಪಟ್ಟಿತು. ಇದರಿಂದಾಗಿ ಝಾನ್ಸಿಯಲ್ಲಿನ ಸಿಪಾಯಿಗಳು ಪ್ರಭಾವಿತರಾದರು. ಮತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದ ಕೆರಳಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯು ಇಂಗ್ಲಿಷರ ವಿರುದ್ಧ ಯುದ್ಧ ಸಾರಿದಳು. ಯುದ್ಧ ಮಾಡಿ ಗ್ವಾಲಿಯರ್‌ನ್ನು ವಶಕ್ಕೆ ಪಡೆದಳು. ಮತ್ತೊಮ್ಮೆ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಶೌರ್ಯದಿಂದ ಹೋರಾಟ ರಾಣಿಯು ಅಸುನೀಗಿದಳು, ಇಂದಿಗೂ ರಾಣಿಯು ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದಲ್ಲಿ ಹೆಮ್ಮೆಯ ಸ್ಥಾನವನ್ನು ಹೊಂದಿದ್ದಾಳೆ.
ದಂಗೆಯ ವಿಫಲತೆಗೆ ಕಾರಣಗಳು :
1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಹಲವಾರು ಝಾನ್ಸಿ ರಾಣಿ ಲಕ್ಷ್ಮಿಬಾಯಿ ಕಾರಣಗಳಿಂದ ವಿಫಲವಾಯಿತು. ಇದು ಇಡೀ ಭಾರತವನ್ನು ವ್ಯಾಪಿಸಿದ ರಂಗೆಯಾಗಿರಲಿಲ್ಲ. ಇದು ದೇಶದ ಬಿಡುಗಡೆಗಾಗಿ ನಡೆದದಕ್ಕಿಂತ ರಾಜರ ರಾಣಿಯರ ಸಹಿತಾಸಕ್ತಿ ಹಾಗೂ ಪುಗಳಿಗಾಗಿ ನಡೆದಿತ್ತು. ಇದು ಯೋಜಿತ ದ೦ಗೆಯಾಗಿರದ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು. ಬ್ರಿಟಿಷ್ ಸೈನಿಕರಲ್ಲಿನ ಒಗಟ್ಟು ಮತ್ತು ಭಾರತೀಯ ಸೈನಿಕರಲ್ಲಿದ್ದ ಭಿನ್ನತೆಯು ದಂಗೆಯ ವಿಫಲತೆಗೆ ಕಾರಣವಾಗಿದೆ. ದಂಗೆಗೆ ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥಿತ ಸಂಘಟನೆಯ ಕೊರತೆ ಇತ್ತು. ಹಾಗೆಯೇ ಭಾರತೀಯರಲ್ಲಿ ಯುದ್ಧ ತಂತ್ರ ಸೈನಿಕ ಪರಿಣತಿ, ಸೂಕ್ತ ಸೇನಾ ನಾಯಕತ್ವ ಮತ್ತು ಶಿಸ್ತು ಮುಂತಾದವುಗಳ ಕೊರತೆ ಇತ್ತು. ಹೋರಾಟಗಾರರಲ್ಲಿ ನಿಶ್ಚಿತ ಗುರಿ ಇರಲಿಲ್ಲ. ಹಲವಾರು ದೇಶಿಯ ಸಂಸ್ಥಾನಗಳ ರಾಜರು ಬ್ರಿಟಿಷರಿಗೆ ತೋರಿದ ನಿಷ್ಠೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ. ನಿಪಾಯಿಗಳು ಮಾಡಿದಂತಹ ಲೂಟಿ, ದರೋಡೆ ಮೊದಲಾದ ಗಂಭೀರವಾದ ತಪ್ಪುಗಳಿಂದಾಗಿ ಜನರ ವಿಶ್ವಾಸ ಕಕಳೆದುಕೊಂಡರು
ದಂಗೆಯ ಪರೀಕಾಮಗಳು :
ಈಸ್ಟ್ ಇಂಪಿಯಾ ಕಂಪನಿಯ ಆಡಳಿತ ಕೊನೆಗೊಂಡು ಬ್ರಿಟಿಷ್ ಸಾಮಾಜಿಗೆ ಆಡಳಿತವು ವರ್ಗಾವಣೆಗೊಂಡಿತು. ಭಾರತದ ವ್ಯವಹಾರವನ್ನು ಬ್ರಿಟಿಷ್ ಪಾರ್ಲಿಮೆಂಟಿನ ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಒಪ್ಪಿಸಲಾಯಿತು. 1858ರಲ್ಲಿ ಬ್ರಿಟನ್ ರಾಣಿಯು ಒಂದು ಪೋಷಣೆ ಹೊರಡಿಸಿದರು. ಅದರಲ್ಲಿ ಈ ಕೆಳಗಿನ ಅಂಶಗಳನ್ನು ಪಪ್ರಸ್ತಾಪಿಸಲಾಗಿತ್ತು
1. ಕಂಪನಿಯು ಬೇಕೀಯ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಂಗೀಕರಿಸಲಾಯಿತು.
2. ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು.
3. ಭಾರತೀಯರಿಗೆ ಸುಭದ ಸರ್ಕಾರವನ್ನು ನೀಡುವುದು.
4. ಕಾನೂನಿನ ಮುಂದೆ ಸಮಾನತೆ
5. ಧಾರ್ಮಿಕ ಸಹಿಷ್ಣುತೆಯೊಂದಿಗೆ ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.
ಭಾರತೀಯರ ಪ್ರೀತಿ, ಪಂಬಲ. ವಿಶ್ವಾಸವಿಲ್ಲದಿದ್ದರೆ ನಾವು ಶಾಂತಿಯಿಂದ ಆಳ್ವಿಕೆ ಮಾಡಲು ಸಾಧ್ಯವಿಲ್ಲವೆಂಬುದನ್ನು ಬ್ರಿಟಿಷರು ಅರಿತರು. ಬ್ರಿಟಿಷರ ಬಗೆಗೆ ಇದ್ದ ಭಾರತೀಯರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಮಾರ್ಗೋಪಾಯಗಳನ್ನು ಸೃಷ್ಟಿಸಿಕೊಳ್ಳದಿದ್ದುದು ಇದಕ್ಕೆ ಕಾರಣವೆಂದು ಆಟಿಸಲು ಮನಗಂಡರು, ಹೀಗಾಗಿ ಈ ಘಟನೆಯ ನಂತರ ಹಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರನ್ನು ಒಳಗೊಳ್ಳುವ’ (Policy of assotlation) ನೀತಿಯನ್ನು ಜಾರಿಗೊಳಿಸಿದರು. ಇದು ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕೂಚಿಯನ್ನು ನೀಡಿತು. ಭಾರತೀಯರು ಮುಂದೆ ಹೋರಾಟದ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳುವ ಅನಿವಾರ್ಯತೆಯನ್ನು ಕಂಡುಕೊಂಡರು.
ಕಾಮೆಂಟ್ ಪೋಸ್ಟ್ ಮಾಡಿ