ಕಲ್ಯಾಣದ ಚಾಲುಕ್ಯರು (973-1126)


🔹 ಇವರು *ರಾಷ್ಟ್ರಕೂಟರ ಸಾಮಂತರಾಗಿದ್ದರು*


🔸 ಸ್ಥಾಪಕರು= *2ನೇ ತೈಲಪ*


🔹 ರಾಜಧಾನಿ= *ಕಲ್ಯಾಣ*( ಬಿದರ್)/ ಮಾನ್ಯಖೇಟ. 


🔸 ರಾಜಲಾಂಛನ= *ನಂದಿ*


🔹2ನೇ ತೈಲಪನನ ಮೊದಲ ಹೆಸರು= *ತ್ರೈಲೋಕ ಮಲ್ಲ* 


🔸 ಎರಡನೇ ತೈಲಪನು ರಾಷ್ಟ್ರಕೂಟರ *ಮೂರನೇ ಕೃಷ್ಣನ ಸೇನಾನಿ ಯಾಗಿದ್ದನು.*


🔹 ಎರಡನೇ ತೈಲಪನು *ರಾಷ್ಟ್ರಕೂಟರ 2ನೇ ಕರ್ಕನನ್ನು ಸೋಲಿಸಿ  ಅಧಿಕಾರಕ್ಕೆ ಬಂದನು* 


🔸 ಎರಡನೇ ತೈಲಪನ ಸಾಮಂತ ಅರಸರು👇

1) *ಸವದತ್ತಿಯ ರಟ್ಟರು*. 

2) *ಕಲಬುರ್ಗಿಯ ಸಿಂದರು*

3) ಕೊಂಕಣ *ಶಿಲಾಹಾರ*

4) ಹಾನಗಲ್ಲದ *ಕದಂಬರು*

5) *ಗೋವೆಯ ಕದಂಬರು ಮತ್ತು ದೇವಗಿರಿಯ ಸೇವುಣರು*


🔸992 ರಲ್ಲಿ ಚೋಳರ *ಒಂದನೇ ರಾಜರಾಜ ಚೋಳನನ್ನು ಸೋಲಿಸಿ ಅವನಿಂದ 150ಆನೆ ಗಳನ್ನು ಪಡೆದುಕೊಂಡನು*, 


🔸 ಚೋಳರ ರಾಜ ರಾಜ ಚೋಳ ಮತ್ತು ರಾಜೇಂದ್ರ ಚೋಳನ ಹಿಮ್ಮೆಟ್ಟಿಸಿದವನು= *ಸತ್ಯಾಶ್ರಯ ಇರುವ ಬೆಡಂಗ*


🔹 ಸತ್ಯಾಶ್ರಯ ಇರುವ ಬೆಡಂಗನಿಗೆ ಇದ್ದ ಮೊದಲ ಹೆಸರು= *ಸತ್ತಿಗ*


🔸 ಸತ್ಯಾಶ್ರಯ ಇರುವ ಬೇಡಂಗನಿಗೆ  ಇದ್ದ ಬಿರುದುಗಳು= *ಅಕಳಂಕ ಚರಿತ, ಇರಿವಬೆಡಂಗ, ಸಾಹಸಭೀಮ,*


🔹 ಸತ್ಯಾಶ್ರಯ ಇರುವ ಬೆಡಂಗನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ= *ರನ್ನ* 


🔸2ನೇ ಜಯಸಿಂಹನ ಬಿರುದುಗಳು= *ಜಗದೇಕಮಲ್ಲ, ಮಲ್ಲಿಕಾ ಮೋದ, ವಿಕ್ರಮ ಸಿಂಹ*


🔹 ಎರಡನೇ ಜಯಸಿಂಹನ ಆಸ್ಥಾನದಲ್ಲಿದ್ದ ಕವಿ= *ವಾದಿರಾಜ*


🔸1048 ರಲ್ಲಿ ಬೀದರಿನ ಕಲ್ಯಾಣಕ್ಕೆ  ರಾಜಧಾನಿ ವರ್ಗಾಯಿಸಿದವರು= *ಒಂದನೇ ಸೋಮೇಶ್ವರ*


🔹1054 ರಲ್ಲಿ ಕೊಪ್ಪಂ ಕಾಳಗದಲ್ಲಿ ಚೋಳರ ರಾಜಾಧಿರಾಜ ಚೋಳನನ್ನು ಸೋಲಿಸಿ "ಒಂದನೇ ಸೋಮೇಶ್ವರನು" ಕಟ್ಟಿಸಿದ ದೇವಾಲಯ= *ಅಮೃತೇಶ್ವರ ದೇವಾಲಯ*


🔸 ಒಂದನೇ ಸೋಮೇಶ್ವರನ ಬಿರುದುಗಳು= *ಮಹಮಲ್ಲ, ತ್ರೈಲೋಕ ಮಲ್ಲ*


🔹 ಕಲ್ಯಾಣ ಚಾಲುಕ್ಯರಲ್ಲಿ  ಅತ್ಯಂತ ಶ್ರೇಷ್ಠ ದೊರೆ= *6ನೇ ವಿಕ್ರಮಾದಿತ್ಯ*


🔸 6ನೇ ವಿಕ್ರಮಾದಿತ್ಯನು ಅಧಿಕಾರಕ್ಕೆ ಬಂದ ನೆನಪಿಗಾಗಿ *ಕ್ರಿ. ಶ 1076 ಫೆಬ್ರವರಿ 26 ಚಾಲುಕ್ಯ ವಿಕ್ರಮ ಶಕೆ ಆರಂಭವಾಯಿತು,* 


🔹 ಲಕ್ಷ್ಮೀಶ್ವರ ಶಾಸನದಲ್ಲಿ 6ನೇ ವಿಕ್ರಮಾದಿತ್ಯನ ಕುರಿತು👇

 *ಸಾಗರದ ವರೆಗಿನ ಭೂಮಿಯಲ್ಲಿನ ಬಂಡೆದ್ದ ದೊರೆಗಳ ಬೇರನ್ನು ಕಿತ್ತಿ ಗಲಗಲಿ ಹರಿದು ನೀರಿನಲ್ಲಿ ಬಿಸುಟದ ಈ ಪೃಥ್ವಿಯನ್ನು ನಿಷ್ಕಳಂಕವಾಗಿ ಮಾಡಿದನೆಂದು* ಹೇಳಲಾಗಿದೆ, 


🔹 6ನೇ ವಿಕ್ರಮಾದಿತ್ಯನ ದಂಡನಾಯಕ= *ದಂಡಾಧೀಶ*


🔸 ಆರನೇ ವಿಕ್ರಮಾದಿತ್ಯನ ಸಾಧನೆಗಳು👇


◻️1085 ರಲ್ಲಿ *ಪಲ್ಲವರಿಂದ ಕಂಚಿಯನ್ನು  ಗೆದ್ದನು*


◻️1088 ರಲ್ಲಿ ಉತ್ತರದ ಪರಮಾರ ದೊರೆ *ಉದಯಾದಿತ್ಯ ನನ್ನು ಸೋಲಿಸಿದ*


◻️1100 ರಲ್ಲಿ ಶಿಲಾಹಾರರ ಅರಸ *ಬೋಜನನ್ನು ಸೋಲಿಸಿದ*


◻️1118 ರಲ್ಲಿ *ಕನ್ನೆಗಾಲ ಕದನ ದಲ್ಲಿ ವಿಷ್ಣುವರ್ಧನನ್ನು ಸೋಲಿಸಿದ*


◻️ *ಕುಲತುಂಗ ಚೋಳ ನನ್ನು ಸೋಲಿಸಿದನು*


◻️ *ಗೋವಾದ ಕದಂಬರು ಮತ್ತು ಕರಾಡದ ಶಿಲಾಹಾರರು ದಂಗೆಗಳು ಹತ್ತಿಕ್ಕಿದ*


◻️ ಶ್ರೀಲಂಕದ ಅರಸ *ವಿಜಯ ಬಾಹುವಿನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದನು.* 


◻️ 6ನೇ ವಿಕ್ರಮಾದಿತ್ಯನ ಬಿರುದು= *ತ್ರಿಭುವನಮಲ್ಲ, ಪೆರ್ಮಾಡಿದೇವ*


🔹 ಆರನೇ ವಿಕ್ರಮಾದಿತ್ಯನ ಗುರು= *ವಿಜ್ಞಾನೇಶ್ವರ*


🔸 ಆರನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಕವಿಗಳ= *ಬಿಲ್ಹಣ, ವಿಜ್ಞಾನೇಶ್ವರ,*


🔹 ಬಿಲ್ಹಣನ ಕೃತಿ= *ವಿಕ್ರಮಾಂಕದೇವಚರಿತ*

( ಈ ಕೃತಿಯಲ್ಲಿ ವಿಕ್ರಮಾದಿತ್ಯನ ರಾಜ್ಯ *ರಾಮರಾಜ್ಯ* ಎಂದು ಹೊಗಳಿದ್ದಾನೆ.)


🔸 ವಿಜ್ಞಾನೇಶ್ವರ= *ಭೂತಕಾಲದಲ್ಲಿ ಕಲ್ಯಾಣ ದಂತ ರಾಜಧಾನಿ ಹಿಂದಿಲ್ಲ,  ಮುಂದಿರದು,  ವಿಕ್ರಮಾರ್ಕ ನಂತ ಅರಸನನ್ನು ಕಂಡಿಲ್ಲ ಕೇಳಿಲ್ಲ ಎಂದಿದ್ದಾರೆ*, 


🔹 ಕಲ್ಯಾಣ ಚಾಲುಕ್ಯರಲ್ಲಿ ಶಾಂತಿಪ್ರಿಯ ಅರಸ= *ಮೂರನೇ ಸೋಮೇಶ್ವರ*


🔸 ಮೂರನೇ ಸೋಮೇಶ್ವರನ ಬಿರುದುಗಳು= *ತ್ರಿಭುವನಮಲ್ಲ, ಭೂಲೋಕ ಮಲ್ಲ, ಸರ್ವಜ್ಞ ಚಕ್ರವರ್ತಿ,*


🔹1157 ರಲ್ಲಿ ಕಲಚೂರಿ ಮನೆತನದ ಅರಸ ಎರಡನೇ ಬಿಜ್ಜಳ *ಕಲ್ಯಾಣವನ್ನು* ವಶಪಡಿಸಿಕೊಂಡಾಗ ಆಳುತ್ತಿದ್ದ ಅರಸ= *ಮೂರನೇ ತೈಲಪ* 


🔸 ಕಲ್ಯಾಣದ ಚಾಲುಕ್ಯರ ಕೊನೆಯ ದೊರೆ= *ನಾಲ್ಕನೇ ಸೋಮೇಶ್ವರ*


 📖ಕಲ್ಯಾಣ ಚಾಲುಕ್ಯರ *ಸಾಹಿತ್ಯ*👇


✍️ ರನ್ನ= *ಗದಾಯುದ್ಧ* ( ಸಾಹಸಭೀಮವಿಜಯ) *ಅಜಿತನಾಥಪುರಾಣ, ಪರಶುರಾಮ ಚರಿತೆ*


✍️ ಎರಡನೇ ಚಾವುಂಡರಾಯ= *ಲೋಕೋಪಕಾರ*


✍️ ಶ್ರೀಧರಾಚಾರ್ಯ= *ಜಾತಕತಿಲಕ* ಮತ್ತು *ಚಂದ್ರಪ್ರಭ ಚರಿತ*


( "ಜಾತಕತಿಲಕ" *ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥ*)


✍️ ಎರಡನೇ ನಾಗವರ್ಮ= *ಕಾವ್ಯಾವಲೋಕನ*


✍️ ಕನ್ನಡದ ಮೊದಲ ಶಬ್ದಕೋಶ= *ಅಭಿದಾನ ವಸ್ತುಕೋಶ*


✍️ ಬ್ರಹ್ಮಶಿವ= *ಸಮಯ ಪರೀಕ್ಷೆ*


✍️ ದುರ್ಗಸಿಂಹ= *ಪಂಚತಂತ್ರ*


✍️ ಚಂದ್ರರಾಜ= *ಮದನತಿಲಕ* ( ಕಾಮಶಾಸ್ತ್ರದ ಬಗ್ಗೆ)


✍️ ಶಾಂತಿನಾಥ= *ಸುಕುಮಾರ ಚರಿತೆ*


✍️ ಕೀರ್ತಿವರ್ಮ= *ಗೋವೈದ್ಯ*


✍️ ನಯಸೇನ= *ಧರ್ಮಾಮೃತ*


✍️ ವಿಜ್ಞಾನೇಶ್ವರ= *ಮಿತಕ್ಷರ ನ್ಯಾಯ ಸಂಹಿತೆ*( ಹಿಂದೂ ಕಾನೂನು ಸಂಹಿತೆ)


✍️ ಎರಡನೇ ಜಗದೇಕಮಲ್ಲ= *ಸಂಗೀತ ಚೂಡಾಮಣಿ*

( ಸಂಸ್ಕೃತ)


✍️ ನಾಗಚಂದ್ರ= *ಮಲ್ಲಿನಾಥ ಪುರಾಣ,*  ಮತ್ತು *ರಾಮಚಂದ್ರ ಚರಿತ ಪುರಾಣ*( ಇವುಗಳನ್ನು ಅಭಿನವ ಪಂಪ ಎನ್ನುವರು)


 🌸ಕಲ್ಯಾಣಿ ಚಾಲುಕ್ಯರ *ಕಲೆ ಮತ್ತು ವಾಸ್ತುಶಿಲ್ಪ*👇


🔸 ಇವರು *ವೇಸರ ಶೈಲಿಯನ್ನು* ಬಳಸುತ್ತಿದ್ದರು, 


🛕 ಕಲ್ಯಾಣ ಚಾಲುಕ್ಯರ ಪ್ರಮುಖ ದೇವಾಲಯಗಳು👇


🛕 ಕುಕನೂರು= *ಕಲ್ಲೇಶ್ವರ ದೇವಾಲಯ, ನವ ಲಿಂಗೇಶ್ವರ ದೇವಾಲಯ,* 


🛕 ಹಾವೇರಿ= *ಸಿದ್ದೇಶ್ವರ ದೇವಾಲಯ*


🛕 ಹಾನಗಲ್ಲು= *ತಾರಕೇಶ್ವರ,  ಗಣಪತಿ ದೇವಾಲಯ*, 


🛕 ಡಂಬಳ= *ದೊಡ್ಡ ಬಸವೇಶ್ವರ ದೇವಾಲಯ*


🛕 ಲಕ್ಷ್ಮೇಶ್ವರ= *ಶಂಕರ್ ಬಸದಿ. ಸೋಮೇಶ್ವರ ದೇವಾಲಯ*


🛕 ಲಕ್ಕುಂಡಿ= *ಬ್ರಹ್ಮ ಜಿನಾಲಯ, ಕಾಶಿ ವಿಶ್ವೇಶ್ವರ*


🛕 ಅಬ್ಬಲೂರು= *ಬ್ರಹ್ಮೇಶ್ವರ ದೇವಾಲಯ*


🛕 ಬಳ್ಳಿಗಾವೆ= *ಕೇದಾರೇಶ್ವರ ಮತ್ತು ತ್ರಿಪುರಾಂಬಕ ದೇವಾಲಯ*


🛕 ಇಟಗಿ= ಮಹಾದೇವ ದೇವಾಲಯವನ್ನು 1112 ರಲ್ಲಿ *ಮಹಾದೇವ* ಎಂಬವನು ಕಟ್ಟಿಸಿದ. ಇದನ್ನು *ದೇವಾಲಯಗಳ ಚಕ್ರವರ್ತಿ ಎನ್ನುವರು*( ಇದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಇಟಗಿ ಎಂಬಲ್ಲಿದೆ,)

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು