ಪರ್ವತ ಮಣ್ಣು :-
- ಕೊಳೆತ ಜೈವಿಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಈ ಮಣ್ಣು ಹೊಂದಿದೆ
- ಇದು ಸಾರಜನಕ ಮತ್ತು ಸಾವಯಾವ ಅವಶೇಷಗಳನ್ನು ಹೆಚ್ಚಾಗಿ ಹೊಂದಿದೆ
- ಹಿಮಾಲಯದ ಪಾದ ಬೆಟ್ಟಗಳು, ಬಿಹಾರ, ಜಮ್ಮು ಕಾಶ್ಮೀರ, ಉತ್ತರಕಾಂಡ, ಪಶ್ಚಿಮ ಬಂಗಾಳ ಮತ್ತು ಪರ್ವತ ಪ್ರದೇಶಗಳಲ್ಲಿ ಕಂಡು ಬರುತ್ತದೆ
> ಪ್ರಮುಖ ಬೆಳೆಗಳು:-
ಕಾಫಿ, ಚಹಾ, ಸಾಂಬಾರು ಪದಾರ್ಥ ಮತ್ತು ಹಣ್ಣು
ಮರುಭೂಮಿಯ ಮಣ್ಣು :-
ಅತೀ ಕಡಿಮೆ ಮಳೆ ಅಧಿಕ ಉಷ್ಣಾಂಶ ಪ್ರದೇಶದಲ್ಲಿ ಈ ಮಣ್ಣು ಉತ್ಪತ್ತಿಯಾಗುತ್ತದೆ. ಕಣಗಳ ನಡುವೆ ಅಧಿಕ ರಂದ್ರತೆ ಇರುವುದರಿಂದ ನೀರು ನಿಲ್ಲದೆ ಬಸಿದು ಹೋಗುತ್ತದೆ ಮತ್ತು ಬೇಗ ಸಾಂದ್ರತೆ ಕಡಿಮೆಯಾಗುತ್ತದೆ
- ಭಾರತದ ವಾಯು ಭಾಗದ ರಾಜಸ್ಥಾನ, ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ , ಪಶ್ಚಿಮದ ಗುಜರಾತಿನ ಕಛ್ ಭಾಗದಲ್ಲಿ ಕಂಡು ಬರುತ್ತದೆ
> ಪ್ರಮುಖ ಬೆಳೆಗಳು :-
ಸಜ್ಜೆ, ಖರ್ಜೂರ
> ಜಂಬಿಟ್ಟಿಗೆ ( ಲ್ಯಾಟರೈಟ್) ಮಣ್ಣು :-
ಮಣ್ಣು ವಾರ್ಷಿಕವಾಗಿ 200 ಸೆಂ.ಮೀ ಗಿಂತ ಹೆಚ್ಚು ಮಳೆ ಬೀಳುವ ಹಾಗೂ ಅಧಿಕ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಕಂಡುಬರುತ್ತದೆ
- ಅಧಿಕ ಮಳೆಯಿಂದ ಮಣ್ಣಿನ ಲವಣಾಂಶಗಳು ತೊಳೆಸಲ್ಪಟ್ಟು ಕೇವಲ ಕಬ್ಬಿಣದ ಆಕ್ಸೈಡ್ ಮತ್ತು ಅಲ್ಯುಮಿನಿಯಂ ಮಾತ್ರ ಮೇಲ್ಪದರದಲ್ಲಿರುತ್ತದೆ . ಇದರಿಂದಾಗಿ ಈ ಮಣ್ಣು ಕೆಂಪು ಬಣ್ಣದಲ್ಲಿರುತ್ತದೆ
- ಜಂಬಿಟ್ಟಿಗೆ ಮಣ್ಣು ಫಲವತ್ತತೆ ಕಡಿಮೆ ಇದೆ. ಈ ಮಣ್ಣು ಪಶ್ಚಿಮ ಘಟ್ಟಗಳು, ವಿಂಧ್ಯ ಪರ್ವತ, ಸಾತ್ಪುರ ಬೆಟ್ಟಗಳು, ಮತ್ತು ರಾಜಪುರ್ ಬೆಟ್ಟಗಳಲ್ಲಿ ಕಂಡು ಬರುತ್ತದೆ
> ಪ್ರಮುಖ ಬೆಳೆಗಳು :-
ಕಾಫಿ, ಟೀ, ಮತ್ತು ತೋಟಗಾರಿಕೆ ಬೆಳೆಗಳು
ಕೆಂಪು ಮಣ್ಣು :-
ಸ್ಪಟಿಕ ಶಿಲೆಗಳ ಶೀತಲೀಕರಣದಿಂದ ಉತ್ಪತ್ತಿಯಾಗಿದೆ
- ದಕ್ಷಿಣ ಭಾರತದಲ್ಲಿ ಕಂಡು ಬರುವಂತಹ ಮಣ್ಣಾಗಿದೆ
- ಈ ಮಣ್ಣು ಕೆಂಪಾಗಿರಲು ಕಾರಣ ಕಬ್ಬಿಣದ ಆಕ್ಸೈಡನ್ನು ಒಳಗೊಂಡಿರುತ್ತದೆ
- ದಕ್ಷಿಣದಲ್ಲಿ ಕನ್ಯಾಕುಮಾರಿಯಿಂದ ಉತ್ತರದಲ್ಲಿ ಮಧ್ಯಪ್ರದೇಶದ ಝಾನ್ಸಿವರೆಗೆ ವಿಸ್ತಾರವಾಗಿದೆ
- ಪಶ್ಚಿಮದಲ್ಲಿ ಗುಜರಾತಿನ ಕಛ್ ನಿಂದ ಜಾರ್ಖಂಡ್ ದ ರಾಜ್ ಮಹಲ್ ವರೆಗೆ ವ್ಯಾಪಿಸಿದೆ
> ಪ್ರಮುಖ ಬೆಳೆಗಳು :-
ರಾಗಿ, ಹೋಗೆಸೊಪ್ಪು, ಎಣ್ಣೆಕಾಳು, ಭತ್ತ, ಕಬ್ಬು ಮತ್ತು ಹತ್ತಿ
ಕಪ್ಪು ಮಣ್ಣು :-
ಇದು ಬಸಾಲ್ಟ್ ಶಿಲೆಗಳ ಶೀತಲೀಕರಣದಿಂದ ಉಂಟಾಗಿದೆ
- ಇದನ್ನು ರೇಗೂರ್ ಮಣ್ಣು ಎಂದು ಕರೆಯುತ್ತಾರೆ. ಈ ಮಣ್ಣು ಹತ್ತಿ ಬೆಳೆಗೆ ಸೂಕ್ತವಾಗಿದೆ
- ಇದರಲ್ಲಿನ ಜೇಡಿಮಣ್ಣಿನ ಕಣಗಳು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತವೆ.
- ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಕರ್ನಾಟಕದಲ್ಲಿ ಕಂಡುಬರುತ್ತದೆ
- ಮಣ್ಣಿನಲ್ಲಿ ಕಬ್ಬಿಣ,ಸುಣ್ಣ ಮತ್ತು ಮ್ಯಾಗ್ನೀಷಿಯಂ ಕಾರ್ಬೊನೇಟ್ ಗಳು ಅಧಿಕ ಪ್ರಮಾಣದಲ್ಲಿರುತ್ತವೆ
> ಪ್ರಮುಖ ಬೆಳೆಗಳು :-
ಹತ್ತಿ, ಜೋಳ, ಈರುಳ್ಳಿ, ಎಣ್ಣೆಕಾಳು, ಮೆಣಸಿನಕಾಯಿ, ಹೊಗೆಸೊಪ್ಪು
👉 ಮೆಕ್ಕಲು ಮಣ್ಣು :-
ನದಿಯು ಹೊತ್ತು ತಂದ ಮಣ್ಣಾಗಿದ್ದು, ಇದು ಫಲವತ್ತಾಗಿದೆ
> ಮೆಕ್ಕಲು ಮಣ್ಣಿನ ಎರಡು ವಿಧಗಳು
- ಭಂಗರ್:- ಪುರಾತನ ಕಾಲದ ಮೆಕ್ಕಲು ಮಣ್ಣು
- ಖದರ್:- ಇತ್ತೀಚಿನ ಅವಧಿಯ ಮೆಕ್ಕಲು ಮಣ್ಣು
* ಭಾರತದಲ್ಲಿ ಅತಿ ಹೆಚ್ಚು ವಿಸ್ತಾರ ಪ್ರದೇಶದಲ್ಲಿ ಕಂಡುಬರುವ ಮಣ್ಣಾಗಿದೆ
* ಗಂಗಾ, ಯಮುನಾ, ಸಿಂಧೂ ನದಿ ಬಯಲು ಪ್ರದೇಶದಲ್ಲಿ ಕಂಡುಬರುತ್ತದೆ
> ಪ್ರಮುಖ ಬೆಳೆಗಳು :-
ಗೋದಿ, ಬತ್ತ, ಕಬ್ಬು ಹತ್ತಿ ಮತ್ತು ಸೆಣಬು
ಕಾಮೆಂಟ್ ಪೋಸ್ಟ್ ಮಾಡಿ