👉ಭಾರತದ ಮಹಾನ್ ವಿಜ್ಞಾನಿ ಸಿ.ವಿ.ರಾಮನ್ ಅವರು ಫೆಬ್ರುವರಿ 28 ರ 1928 ರಲ್ಲಿ ‘ಬೆಳಕಿನ ಪರಿಣಾಮ’ವನ್ನು ಕಂಡುಹಿಡಿದ ದಿನದ ಸ್ಮರಣೆಗಾಗಿ ಈ ದಿನವನ್ನು ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ. ಬರಿಗಣ್ಣಿಗೆ ಕಾಣುವ ಬೆಳಕು ಬಿಳಿಯಾಗಿದ್ದರೂ ಅದರಲ್ಲಿ ಏಳು ಬಣ್ಣಗಳು ಇರುತ್ತವೆ ಎಂಬುದನ್ನು ಪ್ರಯೋಗದಿಂದ ತೋರಿಸಿದ್ದರು ಎಂದು ತಿಳಿಸಿದರು.
👉ರಾಷ್ಟೀಯ ವಿಜ್ಞಾನ ದಿನ ಇತಿಹಾಸ:
1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್ (ಎನ್ಸಿಎಸ್ಟಿಸಿ) ಭಾರತ ಸರ್ಕಾರಕ್ಕೆ ಫೆಬ್ರವರಿ 28 ರಂದು ಮನವಿಯನ್ನು ಸಲ್ಲಿಸಿತ್ತು, ಎನ್ಸಿಎಸ್ಟಿಸಿ ಯ ಮನವಿಯನ್ನು ಒಪ್ಪಿದ ಅಂದಿನ ಸರ್ಕಾರ ಪ್ರತಿ ವರ್ಷ ಫೆ.28 ಅನ್ನು ರಾಷ್ಟೀಯ ದಿನವನ್ನಾಗಿ ದೇಶಾದ್ಯಂತ ಆಚರಿಸುವಂತೆ ಘೋಷಿಸಿತು. ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28, 1987 ರಂದು ಆಚರಿಸಲಾಗಿತ್ತು ತದನಂತರ ಈ ಆಚರಣೆ ಜಾರಿಯಲ್ಲಿದೆ.
👉ಇದೇ ಸಾಧನೆಗಾಗಿ ಅವರಿಗೆ 1930ನೇ ಇಸವಿಯಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್ ಪುರಸ್ಕಾರವೂ ಹೌದು.
👉National Science Day 2021 Theme
ಭವಿಷ್ಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಮಾಹಿತಿ ಸಂವಹನ: ಶಿಕ್ಷಣದಲ್ಲಿ ಬಳಕೆಯಾಗುವ ಕೌಶಲ ಮತ್ತು ನೈಪುಣ್ಯತೆಗಳ ಮೇಲೆ ಇವುಗಳ ಪರಿಣಾಮ
“Future of STI: Impacts on Education, Skills and Work
ಕಾಮೆಂಟ್ ಪೋಸ್ಟ್ ಮಾಡಿ