🌎 ಸೌರಮಂಡಲದ ಗ್ರಹಗಳು


☄️ *ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟು ಗ್ರಹಗಳು ಸೂರ್ಯನ ಸುತ್ತಲೂ ಅಂಡಾಕಾರದ ಪಥದಲ್ಲಿ ಗಡಿಯಾರದ ದಿಕ್ಕಿಗೆ ವಿರುದ್ಧವಾಗಿ ಚಲಿಸುತ್ತವೆ*,


☄️ *ಸೌರವ್ಯೂಹದಲ್ಲಿ ಈ ಮುಂಚೆ "ಒಂಬತ್ತು" ಗ್ರಹಗಳು ಇದ್ದವು 2006ರಲ್ಲಿ ಜೆಕ್ ಗಣರಾಜ್ಯದ ಪ್ರೇಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಎಂಬ ಗ್ರಹವನ್ನು ತೆಗೆದುಹಾಕಿ, ಈಗ ಪ್ರಸ್ತುತ 8 ಗ್ರಹಗಳಿವೆ*, 


 ☄️ *ಎಂಟು ಗ್ರಹಗಳು*👇


1) *ಬುಧ ಗ್ರಹ*

2) *ಶುಕ್ರ ಗ್ರಹ*, 

3) *ಭೂಮಿ ಗ್ರಹ*, 

4) *ಮಂಗಳ ಗ್ರಹ,*

5) *ಗುರು ಗ್ರಹ* 

6) *ಶನಿ ಗ್ರಹ*, 

7) *ಯುರೇನಸ್ ಗ್ರಹ*

8) *ನೆಪ್ಚೂನ್ ಗ್ರಹ*


1}☄️ *ಬುಧ ಗ್ರಹ* (Mercury)


🌞 *ಸೂರ್ಯನಿಗೆ ಸಮೀಪವಾದ ಗ್ರಹ, ಮತ್ತು ಸೌರಮಂಡಲದಲ್ಲಿ ಅತ್ಯಂತ ಚಿಕ್ಕದಾದ ಗ್ರಹವಾಗಿದೆ*. 


🌞 *ಸೂರ್ಯನಿಗೆ ಅತಿ ಸಮೀಪ ವಾಗಿರುವ ದಿಂದ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹವಾಗಿದೆ*, 


🌞 *ಬುಧ ಗ್ರಹವು ಕಂದು ಬಣ್ಣದಿಂದ ಕೂಡಿದೆ*, 


🌞 *ಈ ಗ್ರಹಕ್ಕೆ ಗುರುತ್ವಾಕರ್ಷಣೆ ಕಡಿಮೆ ಇರುವುದರಿಂದ ಯಾವುದೇ ಉಪಗ್ರಹ ಹೊಂದಿರುವುದಿಲ್ಲ*, 

=====================


2}☄️ *ಶುಕ್ರ ಗ್ರಹ*(venus)


▪️ *ಈ ಶುಕ್ರ ಗ್ರಹವನ್ನು ಭೂಮಿಯ ಅವಳಿ ಗ್ರಹ ಎಂದು ಕರೆಯುತ್ತಾರೆ*, 


▪️ *ಸೌರವ್ಯೂಹದಲ್ಲಿ ಪರಿಭ್ರಮಣ( ಸೂರ್ಯನ ಸುತ್ತ) ಅವಧಿಗಿಂತ ಅಕ್ಷ ಭ್ರಮಣದ ( ತನ್ನ ಸುತ್ತ) ಅವಧಿ ಹೆಚ್ಚು ಹೊಂದಿರುವ ಗ್ರಹವಾಗಿದೆ*, 


▪️ *ಅತಿ ಹೆಚ್ಚು ಇಂಗಾಲದ ಡೈಯಾಕ್ಸೈಡ್ ಮತ್ತು ಸಲ್ಪೂರಿಕ್ ಆಮ್ಲ ಹೊಂದಿರುವುದರಿಂದ ಇದನ್ನು ಹಸಿರುಮನೆಯ ಗ್ರಹ ಎಂದು ಕರೆಯುತ್ತಾರೆ*, 


▪️ *ಇದು ಅತ್ಯಂತ ಪ್ರಕಾಶಮಾನವಾದ ಗ್ರಹ, ಮುಂಜಾನೆ ನಕ್ಷತ್ರ, ಬೆಳ್ಳಿಚುಕ್ಕಿ, ಮತ್ತು ರೈತನ ನಕ್ಷತ್ರ ಎಂದು ಕರೆಯುತ್ತಾರೆ*, 


▪️ *ಈ ಶುಕ್ರ ಗ್ರಹಕ್ಕೆ ಯಾವುದೇ ಉಪಗ್ರಹ ಗಳಿಲ್ಲ, ಇದನ್ನು ಹಳದಿ ಗ್ರಹ ಎಂದು ಸಹ ಕರೆಯುತ್ತಾರೆ*.

=====================

3}☄️ *ಭೂಮಿ*(Earth}


🔹 *ಭೂಮಿಯು ಸೂರ್ಯನಿಗೆ ಮೂರನೇ ಸಮೀಪವಾದ ಗ್ರಹವಾಗಿದೆ*, 


🔹 *ಭೂಮಿ ಅತ್ಯಂತ ಭಾರವಾದ ಗ್ರಹ ಮತ್ತು ಅತಿ ಹೆಚ್ಚು ನೀರನ್ನು ಒಳಗೊಂಡಿರುವುದರಿಂದ ಇದನ್ನು ಜಲಾವೃತ ಗ್ರಹ ಎಂದು ಕರೆಯುತ್ತಾರೆ*, 


🔹 *ಭೂಮಿಯು ಜೀವರಾಶಿ ಮತ್ತು ವೈವಿಧ್ಯಮಯ ಸಸ್ಯಗಳಿಂದ ಕೂಡಿದ ಸೌರವ್ಯೂಹದ ಸುಂದರ ಗ್ರಹ'ಮತ್ತು ಜೀವಂತ ಗ್ರಹ ಎಂದು ಕರೆಯುತ್ತಾರೆ*, 


🔹 *ಭೂಮಿಯು ಗಾತ್ರದಲ್ಲಿ 5ನೇ ದೊಡ್ಡ ಗ್ರಹವಾಗಿದ್ದು ನೀಲಿ ಬಣ್ಣದಿಂದ ಕೂಡಿದೆ*, 


🔹 *ಭೂಮಿಯ ಅಕ್ಷ ಭ್ರಮಣ ಅವಧಿ 23 ಗಂಟೆ 56 ನಿಮಿಷ O.4 ಸೆಕೆಂಡ್ ಇದನ್ನು ನಾಕ್ಷತ್ರಿಕ ದಿನ ಎಂದು ಕರೆಯುತ್ತಾರೆ*, 


🔹 *ಭೂಮಿಯು ಪರಿಭ್ರಮಣ ಅವಧಿ 365 ದಿನ 5ಘಂಟೆ 48 ನಿಮಿಷ, ಇದನ್ನು ನಾಕ್ಷತ್ರಿಕ ವರ್ಷ ಎಂದು ಕರೆಯುತ್ತಾರೆ*, 


🔹 *ಭೂಮಿಯ ಒಟ್ಟು70.8% ನೀರು 29.2% ರಷ್ಟು ಭೂ ಭಾಗವಿದೆ*, 


🔹 ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ *ಚಂದ್ರ*


🔹 *ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಎಂಟು ನಿಮಿಷಗಳು ಬೇಕಾಗುತ್ತೆ, ಅದೇ ರೀತಿ ಚಂದ್ರನ ಬೆಳಕು ಭೂಮಿಯನ್ನು ತಲುಪಲು 1.3 ಸೆಕೆಂಡ್ ಬೇಕು*,

=====================

4} ☄️ *ಮಂಗಳ ಗ್ರಹ* (Mars)


🔸 *ಸೂರ್ಯನಿಗೆ 4ನೇ ಸಮೀಪವಾದ ಗ್ರಹವಾಗಿದ್ದು, ಇದು ಹೆಚ್ಚಾಗಿ ಕಬ್ಬಿನ ಆಕ್ಸೈಡ್ ಹೊಂದಿರುವುದರಿಂದ ಇದು ಕೆಂಪುಬಣ್ಣವನ್ನು ಹೊಂದಿದೆ*,


🔸 *ಈ ಗ್ರಹಣ ರೋಮನ್ನರ ಯುದ್ಧದೇವತೆ, ಅಂಗಾರಕ, ಕುಜಗ್ರಹ ಎಂದು ಸಹ ಕರೆಯುತ್ತಾರೆ*,  


🔸 ಮಂಗಳ ಗ್ರಹವು *ಫೋಬೋಸ್* ಮತ್ತು *ಡಿಮೋಸ್* ಎಂಬ ಎರಡು ಉಪಗ್ರಹಗಳನ್ನು ಹೊಂದಿದೆ, 


🔸 *ಮಂಗಳ ಗ್ರಹದ ಹೊರಮೈ ಹಲವಾರು ಜ್ವಾಲಮುಖಿ ಪರ್ವತಗಳಿಂದ ಕೂಡಿದೆ*. 


🔸 ಇಸ್ರೋ ಬಾಹ್ಯಾಕಾಶ ಸಂಸ್ಥೆಯು 2013ರಲ್ಲಿ ಮಂಗಳಗ್ರಹಕ್ಕೆ, *ಮಾರ್ಸ್ ಆರ್ಬಿಟಲ್ ಮಿಷನ್* ಎಂಬ ಉಪಗ್ರಹವನ್ನು ಉಡಾಯಿಸಿತು,

=====================


5) ☄️ *ಗುರು ಗ್ರಹ*


🌷 *ಸೂರ್ಯನಿಗೆ 5ನೇ ಸಮೀಪವಾದ ಗ್ರಹ ಮತ್ತು ಸೌರಮಂಡಲದ ಅತ್ಯಂತ ದೊಡ್ಡ ಗ್ರಹ*, 


🌷 *ಶುಕ್ರಗ್ರಹದ ನಂತರ ಅತಿ ಹೆಚ್ಚು ಪ್ರಜ್ವಲಿಸುವ ಎಡನೇ ಗ್ರಹವಾಗಿದೆ*, 


🌷 *ಈ ಗುರು ಗ್ರಹ ಸೌರಮಂಡಲದಲ್ಲಿ ಅತಿ ಕಡಿಮೆ ಅಕ್ಷಭ್ರಮಣ ಅವಧಿಯನ್ನು ಹೊಂದಿರುವ ಗ್ರಹ* (9ಘಂಟೆ 50ನಿಮಿಷ )


🌷 *ಸೌರವ್ಯೂಹದಲ್ಲಿ ಅತಿ ಹೆಚ್ಚು ನೈಸರ್ಗಿಕ ಉಪಗ್ರಹಗಳನ್ನು ಹೊಂದಿರುವ ಗ್ರಹ*, 


🌷 ಗುರುಗ್ರಹದ ಪ್ರಮುಖ ಉಪಗ್ರಹಗಳು *ಗ್ಯಾನಿಮೇಡ್*, *ಐಓ*, *ಯುರೋಪ್*, ಮತ್ತು *ಕ್ಯಾಲಿಸ್ಟೊ*, ಇವುಗಳನ್ನು ಗೆಲಿಲಿಯೋ ಗುರುತಿಸುವುದರಿಂದ ಗೆಲಿಲಿಯೋ ಉಪಗ್ರಹಗಳ ಎಂದು ಸಹ ಕರೆಯುತ್ತಾರೆ, 


🌷 *ಗ್ಯಾನಿಮೇಡ್* ಎಂಬ ಉಪಗ್ರಹವು ಸೌರಮಂಡಲದಲ್ಲಿ ಅತಿದೊಡ್ಡ ಉಪಗ್ರಹವಾಗಿದೆ,


 🌷 *ಗುರುಗ್ರಹದ ಕೆಲವು ಉಪಗ್ರಹಗಳು ಗುರುಗ್ರಹದ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ*. 

=====================

6)☄️ *ಶನಿ ಗ್ರಹ*(Saturn)


🔅 *ಶನಿಗ್ರಹವು ಸೌರಮಂಡಲದಲ್ಲಿ ಎರಡನೇ ದೊಡ್ಡ ಗ್ರಹವಾಗಿದೆ*, 


🔅 *ಶನಿಗ್ರಹವು ಸುತ್ತಲೂ ಬಳೆಗಳನ್ನು ಹೊಂದಿದೆ*,


🔅 *ಶನಿಗ್ರಹವು ಸೌರಮಂಡಲದಲ್ಲಿಯೇ ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ*,


🔅 ಶನಿಗ್ರಹದ ಪ್ರಮುಖ ಉಪಗ್ರಹ *ಟೈಟಾನ್*


🔅 ಶನಿಗ್ರಹವು ಆಕಾಶಕಾಯಗಳಲ್ಲಿ ಉಂಗುರಗಳಿಂದ ಕೂಡಿದೆ, ಈ ಗ್ರಹವು ಉಂಗುರಗಳ ವ್ಯವಸ್ಥೆ ಹೊಂದಿದೆ ಎಂದು (1655ರಲ್ಲಿ )ತಿಳಿಸಿದರು *ಕ್ರಿಶ್ಚಿಯನ್ ಹೇಗೇನ್ಸ್* ಅವರು. ನಂತರ1675ರಲ್ಲಿ *ಕ್ಯಾಸಿನೊ* ಅವರು ಈ ಗ್ರಹದ ಉಂಗುರಗಳು ಬಿಡಿಬಿಡಿಯಾಗಿ ವೆ, ಮತ್ತು ಮಂಜುಗಡ್ಡೆ ಅಂತ ವಸ್ತುಗಳಿಂದ ನಿರ್ಮಾಣವಾಗಿದೆ ಎಂದು ಹೇಳಿದರು, 


🔅 *ಶನಿ ಗ್ರಹ ಸೌರಮಂಡಲದಲ್ಲಿಯೇ ಅತಿಸುಂದರ ಗ್ರಹವಾಗಿದೆ*, 

=====================

7)☄️ *ಯುರೇನಸ್ ಗ್ರಹ* (Urenus)


👉 *ಸೂರ್ಯನಿಗೆ 7ನೇ ಸಮೀಪವಾದ ಗ್ರಹ*, 


👉 *ಯುರೇನಸ್ ಗ್ರಹ ಶುಕ್ರ ಗ್ರಹ ದಂತೆ ಗಡಿಯಾರ ದಿಕ್ಕಿಗೆ ಚಲಿಸುತ್ತದೆ*, 


👉 *ಯುರೇನಸ್ ಗ್ರಹದ ಉಪಗ್ರಹಗಳಿಗೆ ಶೇಕ್ಸ್ಪಿಯರ್ ನ ನಾಟಕದ ಪಾತ್ರದ ಹೆಸರನ್ನು ಈಡಲಾಗಿದೆ*.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು