🍀 SAARC - ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ 🍀
★ (ಸೌತ್ ಏಷಿಯನ್ ಅಸೋಸಿಯೇಶನ್ ಫಾರ್ ರೀಜನಲ್ ಕೋ-ಆಪರೇಶನ್- ಸಾರ್ಕ್ : The South Asian Association for Regional Cooperation - SAARC),
★ ಎಂಟು ದಕ್ಷಿಣ ಏಷ್ಯಾ ರಾಷ್ಟ್ರಗಳು ಸೇರಿ ರಚಿಸಿಕೊಂಡಿರುವ ಒಂದು ಅಂತರರಾಷ್ಟ್ರೀಯ ಪ್ರಾದೇಶಿಕ ಸಂಘಟನೆಯಾಗಿದ್ದು, ೧೯೮೫ ರಲ್ಲಿ ಸ್ಥಾಪನೆಯಾಗಿದೆ.
★ ಸಾಮೂಹಿಕ ಸ್ವಾವಲಂಬನೆಗೆ ಒತ್ತು ನೀಡುವುದರ ಜೊತೆಗೆ ಆರ್ಥಿಕ, ಸಾಮಾಜಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಾಧಿಸುವಲ್ಲಿ ಪರಸ್ಪರರಿಗೆ ನೆರವಾಗುವುದು ಈ ಸಂಘಟನೆಯ ಮೂಲ ಉದ್ದೇಶ.
★ ಭಾರತ, ಮಾಲ್ಡೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಹಾಗೂ ನೇಪಾಳಗಳು ಸ್ಥಾಪಕ-ಸದಸ್ಯ ರಾಷ್ಟ್ರಗಳು.
★ ಅಫ್ಘಾನಿಸ್ತಾನವು ನವದೆಹಲಿಯಲ್ಲಿ ನಡೆದ ಸಂಘಟನೆಯ ೧೪ನೇ ಶೃಂಗಸಭೆಯಲ್ಲಿ ದಿನಾಂಕ ಏಪ್ರಿಲ್ ೩, ೨೦೦೭ ರಂದು ೮ನೇ ಸದಸ್ಯ ರಾಷ್ಟ್ರ ವಾಗಿ ಸಂಘಟನೆಗೆ ಸೇಪ೯ಡೆಗೊಂಡಿತು.
★ ಸಂಘಟನೆಯ ಕೇಂದ್ರ ಕಛೇರಿಯು ನೇಪಾಳದ ರಾಜಧಾನಿ ಕಠ್ಮಂಡು ವಿನಲ್ಲಿದೆ.
ಕಾಮೆಂಟ್ ಪೋಸ್ಟ್ ಮಾಡಿ