ಕನ್ನಡ ವರ್ಣಮಾಲೆಯಲ್ಲಿ 3 ವಿಧ
1. ಸ್ವರಗಳು
2.ವ್ಯಂಜನಗಳು
3. ಯೋಗವಾಹಗಳು
1. ಸ್ವರಗಳು : ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಸ್ವರಗಳು ಎನ್ನುವರು. ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿವೆ
ಅವುಗಳು: ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ
ಐ & ಔ ಗಳನ್ನು ಸಂಧ್ಯಾಕ್ಷರಗಳು ಎಂತಲೂ ಕರೆಯುತ್ತಾರೆ
ಏಕೆಂದರೆ: ಅ + ಯ್ = ಐ
ಅ + ವ್ = ಔ
ಸ್ವರಗಳಲ್ಲಿ 3 ಪ್ರಕಾರಗಳಿವೆ
1. ಹೃಸ್ವಸ್ವರ
2. ದೀರ್ಘಸ್ವರ
3. ಪ್ಲುತಸ್ವರ
1. ಹೃಸ್ವ ಸ್ವರ: ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹೃಸ್ವ ಸ್ವರ ಎನ್ನುವರು.
ಮಾತ್ರಾ ಕಾಲ ಎಂದರೆ ಒಂದು ಅಕ್ಷರವನ್ನು ಉಚ್ಛರಿಸಲು ತೆಗೆದುಕೊಳ್ಳುವ ಸಮಯ
ಕನ್ನಡದಲ್ಲಿ 6 ಹೃಸ್ವ ಸ್ವರಗಳಿವೆ ಅವು: ಅ, ಇ, ಉ, ಋ, ಎ, ಒ
2. ದೀರ್ಘಸ್ವರ:ಎರಡು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಸ್ವರಗಳಿಗೆ ದೀರ್ಘಸ್ವರ ಎನ್ನುವರು. ಕನ್ನಡದಲ್ಲಿ ಏಳು ದೀರ್ಘಸ್ವರ ಗಳಿವೆ.
ಅವುಗಳು: ಆ, ಈ, ಊ, ಏ, ಐ, ಓ, ಔ
3.ಪ್ಲುತಸ್ವರ:ಮೂರು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತಸ್ವರ ಎನ್ನುವರು.
ಉದಾಹರಣೆ :ದೇವರೇss.ಅಯ್ಯೋss
2.ವ್ಯಂಜನಗಳು :ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವೆಂಜನಗಳು ಎನ್ನುವರು.ಕನ್ನಡದಲ್ಲಿ 34 ವ್ಯಂಜನಗಳಿವೆ.
ಅವುಗಳು: ಕ್, ಖ್, ಗ್.......
ವ್ಯಂಜನಗಳಲ್ಲಿ ಎರಡು ಪ್ರಕಾರಗಳಿವೆ.
1.ವರ್ಗಿಯ ವ್ಯಂಜನ
2.ಅವರ್ಗೀಯ ವ್ಯಂಜನ
ವರ್ಗಿಯ ವ್ಯಂಜನ : 'ಕ್' ದಿಂದ 'ಮ್' ವರೆಗಿನ ವ್ಯಂಜನಗಳನ್ನು ವರ್ಗಿಯ ವ್ಯಂಜನ ಎನ್ನುವರು.
ಕ್ ಖ್ ಗ್ ಗ್ ಙ್
ಚ್ ಛ್ ಜ್ ಜ್ ಞ್
ಟ್ ಠ್ ಡ್ ಢ್ ಣ್
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್
ವರ್ಗಿಯ ವ್ಯಂಜನ ದಲ್ಲಿ ಮೂರು ಪ್ರಕಾರಗಳಿವೆ
1.ಅಲ್ಪಪ್ರಾಣ
2.ಮಹಾಪ್ರಾಣ
3.ಅನುನಾಸಿಕ
1.ಅಲ್ಪಪ್ರಾಣ :ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಅಲ್ಪಪ್ರಾಣ ಎನ್ನುವರು.ಒಟ್ಟು 10 ಅಲ್ಪಪ್ರಾಣ ಅಕ್ಷರಗಳಿವೆ.
ಅವುಗಳು : ಕ್, ಚ್, ಟ್, ತ್, ಪ್
ಗ್, ಜ್, ಡ್, ದ್, ಬ್
2.ಮಹಾಪ್ರಾಣ :ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಮಹಾಪ್ರಾಣಗ ಎನ್ನುವರು.10 ಮಹಾಪ್ರಾಣ ಅಕ್ಷರಗಳಿವೆ.
ಅವುಗಳು : ಖ್, ಛ್, ಠ್, ಥ್, ಫ್
ಘ್, ಝ್, ಢ್, ಧ್, ಭ್
3.ಅನುನಾಸಿಕಗಳು :ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಅನುನಾಸಿಕ ಅಕ್ಷರಗಳು ಎನ್ನುವರು.ಕನ್ನಡದಲ್ಲಿ ಒಟ್ಟು 5 ಅನುನಾಸಿಕಗಳು ಇವೆ.
ಅಕ್ಷರಗಳನ್ನು ಉಚ್ಚರಿಸುವಾಗ ಅವು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದರ ಆಧಾರದ ಮೇಲೆ ವರ್ಗೀಯ ವ್ಯಂಜನಗಳನ್ನು ವರ್ಗೀಕರಿಸಲಾಗಿದೆ.
1. ಕ್, ಖ್, ಗ್, ಘ್, ಜ್:ಈ ಅಕ್ಷರಗಳು ಕಂಠದಲ್ಲಿ ಹುಟ್ಟುತ್ತವೆ ಆದ್ದರಿಂದ ಈ ಅಕ್ಷರಗಳನ್ನು ಕಂಠ್ಯಾಕ್ಷರ ಎನ್ನುವರು.
2. ಚ್, ಛ್, ಜ್, ಝ್, ಞ್ :ಈ ಅಕ್ಷರಗಳು ತಾಲುವಿನಲ್ಲಿ ಹುಟ್ಟುತ್ತವೆ ಆದ್ದರಿಂದ ಈ ಅಕ್ಷರಗಳನ್ನು ತಾಲವ್ಯ ಅಕ್ಷರಗಳು ಎನ್ನುವರು.
3. ಟ್, ಠ್, ಡ್ , ಢ್, ಣ್:ಈ ಅಕ್ಷರಗಳು ಮೂರ್ದ ಬಾಯಿಯ ಮೇಲ್ಭಾಗವನ್ನು ಸ್ಪರ್ಶಿಸಿ ಉಚ್ಚರಿಸಲಾಗುತ್ತದೆ ಆದ್ದರಿಂದ ಅವುಗಳನ್ನು ಮೂರ್ದ ನ್ಯ ಅಕ್ಷರಗಳು ಎನ್ನುವರು.
4. ತ್, ಥ್, ದ್, ಧ್, ನ್:ಈ ಅಕ್ಷರಗಳು ಹುಟ್ಟುವ ಸ್ಥಳ ಹಲ್ಲುಗಳ ಬಳಿ ಇವುಗಳನ್ನು ದಂತ್ಯಾಕ್ಷರಗಳು ಎನ್ನುವರು.
5. ಪ್, ಫ್, ಬ್, ಭ್, ಮ್:ಈ ಅಕ್ಷರಗಳು ತುಟಿಗಳ ಸಹಾಯದಿಂದ ಉಚ್ಚರಿಸಲು ಪಡುವುದರಿಂದ ಇವುಗಳನ್ನು ಓಷ್ಟ್ಯಕ್ಷರಗಳು ಎನ್ನುವರು.
2.ಅವರ್ಗೀಯ ವ್ಯಂಜನ :ವರ್ಗಗಳಾಗಿ ವಿಭಜಿಸಲು ಸಾಧ್ಯವಿಲ್ಲದ ಅಕ್ಷರಗಳನ್ನು ಅವರ್ಗೀಯ ವ್ಯಂಜನ ಎನ್ನುವರು.
ಅವುಗಳು : ಯ್, ರ್, ಲ್, ವ್, ಶ್, ಷ್, ಸ್ , ಹ್, ಳ್
3.ಯೋಗವಾಹಗಳು : 'ಯೋಗ' ಎಂದರೆ ಸಂಬಂಧ ವಾಹ ಎಂದರೆ 'ಹೊಂದಿದ ' ಎಂದರ್ಥ.
ಯಾವುದಾದರೂ ಒಂದು ಅಕ್ಷರದ ಸಂಬಂಧದಿಂದಲೇ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನುವರು.ಇವುಗಳಿಗೆ ಸ್ವತಂತ್ರವಾದ ಉಚ್ಛಾರವಿಲ್ಲ.ಕನ್ನಡದಲ್ಲಿ ಎರಡು ಯೋಗವಾಹಗಳು ಇವೆ.
o= ಅನುಸ್ವಾರ & : = ವಿಸರ್ಗ
ಕಾಮೆಂಟ್ ಪೋಸ್ಟ್ ಮಾಡಿ