ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಅರ್ಥಕ್ಕೆ ಅನುಗುಣವಾಗಿ ಕುಡಿದರೆ ಅದನ್ನು ಸಂಧಿಯೆನ್ನುವರು.
ಸಂಧಿಕಾರ್ಯ ಮಾಡುವಾಗ ಬರುವ ಮೊದಲನೆಯ ಪದವನ್ನು ಪೂರ್ವಪದವೆಂದೂ ಎರಡನೇ ಪದವನ್ನು ಉತ್ತರ ಪದವೆಂದೂ ಕರೆಯುವರು.
ಸಂಧಿಯಲ್ಲಿ ಎರಡು ಪ್ರಕಾರಗಳಿವೆ.
1.ಸ್ವರಸಂಧಿ
2.ವ್ಯಂಜನ ಸಂಧಿ
1.ಸ್ವರದ ಮುಂದೆ ಸ್ವರವು ಬಂದು ಸಂಧಿ ಆದರೆ ಅದನ್ನು ಸ್ವರ ಸಂಧಿಯೆನ್ನುವರು.
ಲೋಪ ಸಂಧಿ ,ಆಗಮ ಸಂಧಿ, ಸವರ್ಣದೀರ್ಘ ಸಂಧಿ ,ಗುಣ ಸಂಧಿ, ವೃದ್ಧಿ ಸಂಧಿ ಸಂಧಿ ಇವುಗಳನ್ನು ಸ್ವರಸಂಧಿ ಎಂತಲೂ ಕರೆಯುವರು.
ಸ್ವರ ಸಂಧಿ ಗೆ ಉದಾಹರಣೆ :
1.ಊರು +ಊರು=ಊರೂರು
ಉ + ಊ = ಉ
2.ನಾವು +ಎಲ್ಲ =ನಾವೆಲ್ಲ
ಉ + ಎ = ಎ
2.ವ್ಯಂಜನ ಸಂಧಿ :ಸಂಧಿಯಾಗುವಾಗ ಸ್ವರದ ಮುಂದೆ ವ್ಯಂಜನ, ವ್ಯಂಜನದ ಮುಂದೆ ಸ್ವರ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದರೆ ಅದನ್ನು ವ್ಯಂಜನ ಸಂಧಿ ಎನ್ನುವರು.
ಉದಾ:
ಪೂರ್ವಪದ+ಉತ್ತರಪದ=ಸಂಧಿಪದ
ಹುಲಿ +ತೊಗಲು =ಹುಲಿದೊಗಲು
ಇ + ತ್ = ದ್ (ತ್> ದ್)
ಷಟ್ +ಆನನ =ಷಡಾನನ
ಟ್ + ಆ = ಡ್ (ಟ > ಡ್)
ಸಂಧಿಯಲ್ಲಿ ಪ್ರಮುಖವಾಗಿ ಎರಡು ಪ್ರಕಾರಗಳಿವೆ.
1.ಕನ್ನಡ ಸಂಧಿ
2.ಸಂಸ್ಕೃತ ಸಂಧಿ
1.ಕನ್ನಡ ಸಂಧಿ :ಕನ್ನಡ ಪದಗಳು ಎರಡರ ನಡುವೆ ಸಂಧಿ ನಡೆದರೆ ಅದನ್ನು ಕನ್ನಡ ಸಂಧಿ ಎನ್ನುವರು.
ಕನ್ನಡ ಸಂಧಿಯಲ್ಲಿ ಮೂರು ಪ್ರಕಾರಗಳಿವೆ.
1.ಲೋಪ ಸಂಧಿ
2.ಆಗಮ ಸಂಧಿ
3.ಆದೇಶ ಸಂಧಿ
1.ಲೋಪ ಸಂಧಿ :ಸಂಧಿಕಾರ್ಯ ನಡೆದಾಗ ಒಂದು ಅಕ್ಷರವೂ ಬಿಟ್ಟು ಹೋದರೆ ಅದನ್ನು ಲೋಪ ಸಂಧಿ ಎನ್ನುವರು.
ಸ್ವರದ ಮುಂದೆ ಸ್ವರ ಬಂದು ಸಂಧಿಯಾಗುವಾಗ ಪೂರ್ವಪದದ ಸ್ವರವು ಲೋಪವಾದರೆ ಅದನ್ನು ಲೋಪ ಸಂಧಿ ಎನ್ನುವರು.
ಉದಾ: ನಾಡು + ಎಲ್ಲ = ನಾಡೆಲ್ಲ
ಉ + ಎ = ಎ
ಊರು + ಇಂದ = ಊರಿಂದ
ಉ + ಇ = ಇ
2.ಆಗಮ ಸಂಧಿ :ಸಂಧಿಕಾರ್ಯ ನಡೆದಾಗ ಒಂದು ಅಕ್ಷರವೂ ಹೊಸದಾಗಿ ಸೇರಿದರೆ ಅದನ್ನು ಆಗಮ ಸಂಧಿ ಎನ್ನುವರು.
ತರ ಮುಂದೆ ಸ್ವರ ಬಂದು ಸಂಧಿಯಾಗುವಾಗ ಸಂಧಿ ಪದದಲ್ಲಿ 'ಯ'ರವಾಗಲಿ 'ವ'ಕಾರ ವಾಗಲಿ ಆಗಮ ವಾಗಿ ಬಂದರೆ ಅದನ್ನು ಆಗಮ ಸಂಧಿ ಎನ್ನುವರು.
ಉದಾ: ಗಾಳಿ + ಅನ್ನು = ಗಾಳಿಯನ್ನು
ಇ + ಅ = ಯ
ಮರ + ಅನ್ನು = ಮರವನ್ನು
ಅ + ಅ = ವ
3.ಆದೇಶ ಸಂಧಿ :ಸಂಧಿಕಾರ್ಯ ನಡೆದಾಗ ಒಂದು ಅಕ್ಷರವೂ ಹೋಗಿ ಮತ್ತೊಂದು ಅಕ್ಷರವು ಬಂದರೆ ಅದನ್ನು ಆದೇಶ ಸಂಧಿ ಎನ್ನುವರು.
ಸಂಧಿಕಾರ್ಯ ನಡೆದಾಗ ಉತ್ತರ ಪದದ ಆದಿಯಲ್ಲಿರುವ ಸ್ಥಾನದಲ್ಲಿ ಬೇರೊಂದು ವ್ಯಂಜನ ಬಂದು ಸೇರಿದರೆ ಅದನ್ನು ಆದೇಶ ಸಂಧಿ ಎನ್ನುವರು.
'ಕ' 'ತ' 'ಪ' ಗಳಿಗೆ 'ಗ' 'ದ' 'ಬ' ಆದೇಶವಾಗಿ ಬಂದರೆ ಅದು ಆದೇಶ ಸಂಧಿ ಆಗುತ್ತದೆ.
ಉದಾ:ಮಳೆ +ಕಾಲ=ಮಳೆಗಾಲ
ಎ + ಕ್ = ಗ್ (ಕ್> ಗ್)
ಮೈ + ತೊಳೆ =ಮೈದೊಳೆ
ಐ + ತ್ = ದ್ (ತ್ > ದ್)
ಪ್ರಕೃತಿಭಾವ :ಸ್ವರದ ಮುಂದೆ ಸ್ವರ ಬಂದು ಸಂಧಿಯಾಗದೆ ಹಾಗೆಇದ್ದರೆ ಅದನ್ನು ಪ್ರಕೃತಿಭಾವ ಎನ್ನುವರು.
ಉದಾ:ಓಹೋ +ಅಜ್ಜ =ಓಹೋಅಜ್ಜ
ಓ + ಅ
ಅಕ್ಕ + ಇತ್ತಬಾ=ಅಕ್ಕಇತ್ತಬಾ
ಅ + ಇ
ಸಂಸ್ಕೃತ ಸಂಧಿ
ಸಂಸ್ಕೃತ ಸಂಧಿ :ಸಂಸ್ಕೃತ ಪದಗಳು ಎರಡರ ನಡುವೆ ಸಂಧಿಕಾರ್ಯ ನಡೆದರೆ ಅದನ್ನು ಸಂಸ್ಕೃತ ಸಂಧಿ ಎನ್ನುವರು. ಅದರಲ್ಲಿ 7 ಪ್ರಕಾರಗಳಿವೆ.
1.ಸವರ್ಣದೀರ್ಘ ಸಂಧಿ
2.ಗುಣಸಂಧಿ
3.ವೃದ್ಧಿ ಸಂಧಿ
4. ಯಣ್ ಸಂಧಿ
5.ಜಸ್ತ್ವ ಸಂಧಿ
6. ಶ್ಚುತ್ವ ಸಂಧಿ
7.ಅನುನಾಸಿಕ ಸಂಧಿ
1.ಸವರ್ಣದೀರ್ಘ ಸಂಧಿ :ಸವರ್ಣ ಸ್ವರಗಳು ಒಂದರ ಮುಂದೆ ಒಂದು ಬಂದಾಗ ಅವೆರಡರ ಸ್ಥಳದಲ್ಲಿ ಅದೇ ಜಾತಿಯ ದೀರ್ಘಸ್ವರವು ಆದೇಶವಾಗಿ ಬಂದರೆ ಅದನ್ನು ಸವರ್ಣದೀರ್ಘ ಸಂಧಿ ಎನ್ನುವರು.
ಸವರ್ಣದೀರ್ಘ ಸಂಧಿ ಯಲ್ಲಿ 'ಆ', 'ಈ ' , 'ಊ'ಆದೇಶವಾಗಿ ಬರುತ್ತವೆ.
ಉದಾ:ಪೂಣ೯+ಆನಂದ=ಪೂರ್ಣಾನಂದ
ಅ + ಆ = ಆ
ರವಿ + ಇಂದ್ರ =ರವೀಂದ್ರ
ಇ + ಇ = ಈ
ಗುರು+ಉಪದೇಶ=ಗುರೂಪದೇಶ
ಉ + ಉ = ಊ
2.ಗುಣಸಂಧಿ : ಅ,ಆ ಕಾರಗಳ ಮುಂದೆ ಇ, ಈ ಕಾರಗಳು ಬಂದಾಗ 'ಏ'ಕಾರವು ಅ, ಆ ಕಾರಗಳ ಮುಂದೆ ಉ, ಊ ಕಾರಗಳು ಬಂದಾಗ 'ಓ'ಕಾರವು ಅ, ಆ ಕಾರಗಳ ಮುಂದೆ ಋ ಕಾರ ಬಂದಾಗ 'ಅರ್' ಕಾರವು ಆದೇಶವಾಗಿ ಬಂದರೆ ಅದನ್ನು ಗುಣ ಸಂಧಿ ಎನ್ನುವರು.
ಉದಾ: ಸುರ+ ಇಂದ್ರ =ಸುರೇಂದ್ರ
ಅ + ಇ = ಏ
ಸೂರ್ಯ+ಉದಯ=ಸೂರ್ಯೋದಯ
ಅ + ಉ = ಓ
ಮಹಾ + ಋಷಿ =ಮಹರ್ಷಿ
ಆ + ಋ = ಅರ್
3.ವೃದ್ಧಿ ಸಂಧಿ : ಅ,ಆ ಕಾರಗಳ ಮುಂದೆ ಏ'ಐ ಕಾರಗಳು ಬಂದಾಗ 'ವ' ಆಕಾರವು ಅ,ಆ ಕಾರಗಳ ಮುಂದೆ ಓ, ಔ ಕಾರಗಳು ಬಂದಾಗ 'ಔ' ಕಾರವು ಆದೇಶವಾಗಿ ಬಂದರೆ ಅದನ್ನು ವೃದ್ಧಿಸಂಧಿ ಎನ್ನುವರು.
ಉದಾ: ಭಾವ + ಐಕ್ಯ =ಭಾವೈಕ್ಯ
ಅ + ಐ = ಐ
ದಿವ್ಯ +ಔಷಧಿ =ದಿವ್ಯಔಷಧಿ
ಅ + ಔ = ಔ
4.ಯಣ್ ಸಂಧಿ :ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಸಂಧಿ ಪದದಲ್ಲಿ ಯ, ರ, ವ ಅಕ್ಷರಗಳು ಆದೇಶವಾಗಿ ಬಂದರೆ ಅದನ್ನು ಯಣ್ ಸಂಧಿ ಎನ್ನುವರು.
ಉದಾ: ಅತಿ + ಅಂತ =ಅತ್ಯಂತ
ಇ + ಅ = ಯ
ಅಣು + ಅಸ್ತ್ರ = ಅಣ್ವಸ್ತ್ರ
ಉ + ಅ = ವ
ಭಾತೃ + ಅಂಶ = ಭಾತೃಂಶ
ಅ + ಅ = ರ
ಜಸ್ತ್ವ ಸಂಧಿ:ಪೂರ್ವಪದದ ಕೊನೆಯಲ್ಲಿ ವರ್ಗದ ಪ್ರಥಮ ಅಕ್ಷರಗಳಿದ್ದು ಉತ್ತರ ಪದದ ಮೊದಲಿಗೆ ಯಾವುದೇ ವರ್ಣ ಬಂದರು ಸಂಧಿ ಪದದಲ್ಲಿ ವರ್ಗದ ಮೂರನೆಯ ಅಕ್ಷರ ಆದೇಶವಾಗಿ ಬಂದರೆ ಅದನ್ನು ಜಸ್ತ್ವಸಂಧಿ ಎನ್ನುವರು.
ಕ ಯಾವುದೇ ಗ
ಚ ಜ
ಟ ವರ್ಣ ಡ
ತ ದ
ಪ ಬಂದರೂ ಬ
ಉದಾ: ವಾಕ್ + ಈಶ = ವಾಗೀಶ
ಕ್ + ಈ = ಗ್ (ಕ್ > ಗ್)
ವಾಕ್ + ದೇವಿ =ವಾಗ್ದೇವಿ
ಕ್ + ದ್ = ಕ್ (ಕ್ > ಗ್)
ಸತ್ + ಭಾವ =ಸದ್ಭಾವ
ತ್ + ಬ್ = ಬ್(ತ್ > ಬ್)
ಸತ್ + ಆನಂದ =ಸದಾನಂದ
ತ್ + ಆ = ದ್ (ತ್> ದ್)
ಷಟ್ + ಅಂಗ = ಷಡಂಗ
ಟ್ + ಅ = ಡ್ (ಟ್ > ಡ್)
ಅಪ್ + ದ = ಅಬ್ದ
ಪ್+ದ್ = ಬ್(ಪ್> ಬ್)
ಅಚ್ + ಅಂತ = ಅಜಂತ
ಚ್ + ಅ = ಜ್(ಚ್ > ಜ್)
6. ಶ್ಚುತ್ವ ಸಂಧಿ :ಪೂರ್ವಪದದ ಕೊನೆಯಲ್ಲಿ 'ಸ'ಕಾರವಾಗಲಿ 'ತ'ವರ್ಗವಾಗಲಿ ಇದ್ದು ಉತ್ತರಪದದ ಮೊದಲಿಗೆ ಕ್ರಮವಾಗಿ 'ಶ' ಕಾರವಾಗಲಿ 'ಚ'ಕಾರವಾಗಲಿ ಬಂದು ಸಂಧಿಯಾಗುವಾಗ ಸಂಧಿ ಪದದಲ್ಲಿ 'ಶ' , 'ಚ' ಕಾರಗಳು ಆದೇಶವಾಗಿ ಬರುತ್ತದೆ.
'ಸ', 'ತ', 'ಶ', 'ಚ' = 'ಶ', 'ಚ'
ಉದಾ: ಶರತ್ + ಚಂದ್ರ = ಶರಚ್ಛಂದ್ರ
ತ್ + ಚ್ = ಚ
ಮನಸ್ + ಶುದ್ಧಿ = ಮನಶ್ಶುದ್ಧಿ
ಸ್+ ಶ್ = ಶ
ಸತ್ + ಜನ = ಸಜ್ಜನ
ತ್ + ಜ್ = ಜ
7. ಅನುನಾಸಿಕ ಸಂಧಿ :ಪೂರ್ವಪದದ ಕೊನೆಯಲ್ಲಿ ವರ್ಗದ ಪ್ರಥಮ್ ಅಕ್ಷರಗಳಿದ್ದು ಅವುಗಳಿಗೆ ಅನುನಾಸಿಕಗಳು ಪರವಾದರೆ ಆಯಾ ವರ್ಗದ ಅನುನಾಸಿಕ ಅಕ್ಷರಗಳು ಆದೇಶವಾಗಿ ಬಂದರೆ ಅದನ್ನು ಅನುನಾಸಿಕ ಸಂಧಿ ಎನ್ನುವರು.
ಕ ಙ
ಚ ಅನುನಾಸಿಕಗಳು ಞ
ಟ ಣ
ತ ಪರವಾದರೆ ನ
ಪ ಮ
ಉದಾ: ವಾಕ್ + ಮಯ = ವಾಙಮಯ
ಕ್ + ಮ್=ಙ
ಸತ್ + ಮಾನ = ಸನ್ಮಾನ
ತ್ + ಮ್ = ನ
ಷಟ್ + ಮುಖ= ಷಣ್ಮುಖ
ಟ + ಮ್ = ಣ
😊 ಮುಕ್ತಾಯ😊
ಕಾಮೆಂಟ್ ಪೋಸ್ಟ್ ಮಾಡಿ