ವಾಕ್ಯಗಳಲ್ಲಿ ಅನೇಕ ಶಬ್ದಗಳು ಇರುತ್ತವೆ ಆ ಶಬ್ದಗಳಿಗೆ ನಾವು ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದೇವೆ.
ಉದಾ:ನಾನು ಶಾಲೆಗೆ ಹೋಗುತ್ತೇನೆ.
ನಕುಲನು ಚೆನ್ನಾಗಿ ಅಭ್ಯಾಸವನ್ನು ಮಾಡುವನು.
ಈ ವಾಕ್ಯಗಳಲ್ಲಿ 'ನಾನು', ' ಶಾಲೆ', 'ನಕುಲ', 'ಅಭ್ಯಾಸ' ಇವು ನಾಮಪದಗಳು.
ನಾಮಪದ:ವ್ಯಕ್ತಿ, ವಸ್ತು ,ಪ್ರಾಣಿ,ಪಕ್ಷಿ ಮುಂತಾದವುಗಳ ಹೆಸರುಗಳನ್ನು ಸೂಚಿಸುವ ಶಬ್ದಗಳಿಗೆ ನಾಮಪದ ಎನ್ನುವರು.
ನಾಮಪ್ರಕೃತಿ :ನಾಮಪದದ ಮೂಲರೂಪ ವಾಗಿದ್ದು ಕ್ರಿಯೆಯ ಅರ್ಥವನ್ನು ಕೊಡದೆ ಇರುವ ಶಬ್ದಗಳಿಗೆ ನಾಮಪ್ರಕೃತಿ ಎನ್ನುವರು.
ಉದಾ:ಶಾಲೆ,ಮನೆ,ದೇಶ ಇತ್ಯಾದಿಗಳು.
ನಾಮ ಪ್ರಕೃತಿಯಲ್ಲಿ ಎಂಟು ಪ್ರಕಾರಗಳಿವೆ.
1.ವಸ್ತುವಾಚಕ 5.ಪರಿಮಾಣವಾಚಕ
2.ಗುಣವಾಚಕ 6.ಸರ್ವನಾಮ
3.ಸಂಖ್ಯಾವಾಚಕ 7.ಭಾವನಾಮ
4.ದಿಗ್ವಾಚಕ 8.ಸಂಖ್ಯೆಯ ವಾಚಕ
1.ವಸ್ತುವಾಚಕ :ಸ್ಥಳ, ವಸ್ತು, ವ್ಯಕ್ತಿ, ಪ್ರಾಣಿ ಇತ್ಯಾದಿಗಳ ಹೆಸರುಗಳನ್ನು ವಸ್ತುವಾಚಕ ಎನ್ನುವರು.
ವಸ್ತುವಾಚಕ ದಲ್ಲಿ ಎರಡು ಪ್ರಕಾರಗಳಿವೆ.
1.ಚೇತನ ವಸ್ತು
2.ಆ ಚೇತನ ವಸ್ತು
1.ಚೇತನ ವಸ್ತು :ಜೀವವಿರುವ ಮತ್ತು ಚಲನೆಯುಳ್ಳ ವಸ್ತುಗಳಿಗೆ ಚೇತನ ವಸ್ತು ಎನ್ನುವರು.
ಉದಾ:ಮನುಷ್ಯ,ಪ್ರಾಣಿ,ಪಕ್ಷಿ ಇತ್ಯಾದಿ.
2.ಅಚೇತನ ವಸ್ತು :ನಿರ್ಜೀವ ಮತ್ತು ಚಲನೆಯಿಲ್ಲದ ವಸ್ತುಗಳಿಗೆ ಅಚೇತನ ವಸ್ತುಗಳು ಎನ್ನುವರು.
ಉದಾ:ಟೇಬಲ್,ಪೆನ್ನು,ಪುಸ್ತಕ ಇತ್ಯಾದಿ.
ವಸ್ತುವಾಚಕ ದಲ್ಲಿ 3 ಪ್ರಕಾರಗಳು ಇವೆ.
1.ರೂಢನಾಮ
2.ಅಂಕಿತನಾಮ
3.ಅನ್ವರ್ಥಕ ನಾಮ
1 .ರೂಢನಾಮ :ಬಹುಕಾಲದಿಂದ ರೂಢಿಯಲ್ಲಿರುವ ಒಂದೇ ಜಾತಿಯ ವಸ್ತುಗಳು ಹಾಗೂ ಪ್ರಾಣಿಗಳ ಹೆಸರುಗಳಿಗೆ ರೂಢನಾಮ ಎನ್ನುವರು.
ಉದಾ:ಪರ್ವತ,ನದಿ ,ಊರು, ದೇಶ ಇತ್ಯಾದಿ.
2.ಅಂಕಿತನಾಮ :ವ್ಯವಹಾರಕ್ಕಾಗಿ ಇಟ್ಟುಕೊಂಡಿರುವ ಹೆಸರುಗಳನ್ನು ಅಂಕಿತನಾಮ ಎನ್ನುವರು.
ಉದಾ:ಬೂದಿಹಾಳ ,ಕೋವಳ್ಳಿ, ಬೀಳಗಿ , ಬಾಗಲಕೋಟೆ ಇತ್ಯಾದಿ.
3. ಅನ್ವರ್ಥಕ ನಾಮ :ವಸ್ತುಗಳ ಗುಣಕ್ಕೆ ಅನುಗುಣವಾಗಿ ಬಂದ ಹೆಸರುಗಳನ್ನು ಅನ್ವರ್ಥಕನಾಮ ಎನ್ನುವರು.
ಉದಾ:ವಿಜ್ಞಾನಿ,ಶಿಕ್ಷಕ,ಕುರುಡ,ಕುಂಟ ಇತ್ಯಾದಿ.
2.ಗುಣವಾಚಕ :ವಸ್ತು, ವ್ಯಕ್ತಿ ಮುಂತಾದವುಗಳ ಸ್ವಭಾವಗಳನ್ನು ತಿಳಿಸುವ ಶಬ್ದಗಳಿಗೆ ಗುಣವಾಚಕ ಎನ್ನುವರು.
ಉದಾ:ರಾಧಾ ಜಾಣ ಹುಡುಗಿ.
ಇದರಲ್ಲಿಹುಡುಗಿ ಎಂಬುದು ವಸ್ತುವಾಚಕ ವಾಗಿದೆ.'ಜಾಣ' ಎಂಬುದು ರಾಧಾ ಎಂಬ ಹುಡುಗಿಯ ಗುಣವನ್ನು ತಿಳಿಸುತ್ತದೆ.
ಗುಣವಾಚಕ ವಸ್ತುವಾಚಕ ಗಳೊಂದಿಗೆ ವಿಶೇಷಣ ವಿಶೇಷ್ಯಸಂಬಂಧವನ್ನು ಹೊಂದಿರುತ್ತದೆ ಅಂದರೆ ಗುಣವಾಚಕ ವು ಯಾವ ಶಬ್ದಕ್ಕೆ ಅನ್ವಯಿಸುವುದೊ ಆ ಶಬ್ದವನ್ನು ವಿಶೇಷ್ಯವಸ್ತುವಾಚಕ ಎನ್ನುವರು.
ವಸ್ತುವಿನ ಗುಣವನ್ನು ವಿವರಿಸುವ ಶಬ್ದಕ್ಕೆ ವಿಶೇಷಣ ಗುಣವಾಚಕ ಎನ್ನುವರು.
3.ಸಂಖ್ಯಾವಾಚಕ :ಸಂಖ್ಯೆಯನ್ನು ಹೇಳುವ ಶಬ್ದಗಳನ್ನು ಸಂಖ್ಯಾವಾಚಕ ಎನ್ನುವರು.
ಉದಾ: 10 , 3 , 9 ಇತ್ಯಾದಿಗಳು.
4.ದಿಗ್ವಾಚಕ :ದಿಕ್ಕುಗಳ ಹೆಸರುಗಳನ್ನು ಹೇಳುವ ಪದಗಳಿಗೆ ದಿಗ್ವಾಚಕಗಳು ಎನ್ನುವರು.
ಉದಾಹರಣೆ :ತೆಂಕಣ ,ಬಡಗಣ , ಪೂವ೯ಇತ್ಯಾದಿ.
5.ಪರಿಮಾಣವಾಚಕ :ವಸ್ತುಗಳ ಸಾಮಾನ್ಯ ಗಾತ್ರ ,ತೂಕ,ಅಳತೆ &ಪರಿಮಾಣ ಇತ್ಯಾದಿಗಳನ್ನು ಸೂಚಿಸುವ ಪದಗಳಿಗೆ ಪರಿಮಾಣವಾಚಕ
ಉದಾಹರಣೆ :ಅವಳಿಗೆ ಒಂದಿಷ್ಟು ಹಣ ಕೊಡು.
ಇದರಲ್ಲಿ 'ಒಂದಿಷ್ಟು ' ಎಂಬ ಪದವು ಪರಿಮಾಣವಾಚಕ ವಾಗಿದೆ.
6.ಸರ್ವನಾಮ :ನಾಮಪದಗಳ ಬದಲಾಗಿ ಬಳಸುವ ಶಬ್ದಗಳಿಗೆ ಸರ್ವನಾಮ ಎನ್ನುವರು.
ಸರ್ವನಾಮ ಗಳಲ್ಲಿ 3 ಪ್ರಕಾರಗಳಿವೆ
1.ಪುರುಷಾರ್ಥಕ ಸರ್ವನಾಮ
2.ಪ್ರಶ್ನಾರ್ಥಕ ಸರ್ವನಾಮ
3.ಆತ್ಮಾರ್ಥಕ ಸರ್ವನಾಮ
1.ಪುರುಷಾರ್ಥಕ ಸರ್ವನಾಮ :
2.ಪ್ರಶ್ನಾರ್ಥಕ ಸರ್ವನಾಮ :ಯಾರು ,ಯಾವುದು,ಎಲ್ಲಿ,ಏನು ,ಯಾವಾಗಮುಂತಾದವುಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನುವರು.
3.ಆತ್ಮಾರ್ಥಕ :ಸರ್ವನಾಮ :ನಾನು,ನನ್ನ ,ನಮ್ಮ , ನಮಗೆಮುಂತಾದವುಗಳನ್ನು ಆತ್ಮಾರ್ಥಕ ಸರ್ವನಾಮ ಎನ್ನುವರು.
7.ಭಾವನಾಮ :ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ ಪದಗಳಿಗೆ ಭಾವನಾಮ ಎನ್ನುವರು.
ಉದಾ: 1.ಬಿಳಿ ಇದರ ಭಾವ=ಬಿಳುಪು
2.ನೋಡು ಇದರ ಭಾವ =ನೋಟ
8.ಸಂಖ್ಯೆಯ ವಾಚಕ :ಸಂಖ್ಯೆಯಿಂದ ಕೂಡಿರುವ ವಸ್ತುಗಳಿಗೆ ಸಂಖ್ಯೆಯ ವಾಚಕ ಎನ್ನುವರು.
ಉದಾ: ಐವರು ,ಮೂವರು ,ಇಬ್ಬರು ಇತ್ಯಾದಿ.
ಐದು +ಜನರು = ಐವರು
ಮೂರು+ ಜನರು =ಮೂವರು
ಎರಡು + ಜನರು =ಇಬ್ಬರು
🌟ಮುಕ್ತಾಯ🌟
ಕಾಮೆಂಟ್ ಪೋಸ್ಟ್ ಮಾಡಿ