ಗ್ರೇಟ್ ಇಂಡಿಯನ್ ಬಸ್ಟರ್ಡ್


(Cholistan desert)

👉ಇದು ಪಾಕಿಸ್ತಾನದಲ್ಲಿದೆ.

‘👉ಗ್ರೇಟ್ ಇಂಡಿಯನ್ ಬಸ್ಟರ್ಡ್’ ರಾಜಸ್ಥಾನದ ರಾಜ್ಯ ಪಕ್ಷಿಯಾಗಿದ್ದು, ಇದನ್ನು ಭಾರತದ ಅತ್ಯಂತ ತೀವ್ರವಾಗಿ ಅಳಿವಿನಂಚಿನಲ್ಲಿರುವ (CR) ಪಕ್ಷಿ ಎಂದು ಪರಿಗಣಿಸಲಾಗಿದೆ.

👉ರಾಜಸ್ಥಾನದಲ್ಲಿರುವ ‘ಹೆಬ್ಬಕ್ಕಗಳ’ ಸಂಖ್ಯೆಯು 100 ಕ್ಕಿಂತ ಕಡಿಮೆಯಿದ್ದು ಜಾಗತಿಕವಾಗಿ ಅವುಗಳ ಒಟ್ಟು ಸಂಖ್ಯೆಯ 95% ಆಗಿದೆ.

👉1994 ರಲ್ಲಿ, ‘ಗ್ರೇಟ್ ಇಂಡಿಯನ್ ಬಸ್ಟರ್ಡ್’ ಅಥವಾ ಹೆಬ್ಬಕ್ಕ ಗಳನ್ನು ನಿಸರ್ಗ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿನ ಅಂತರಾಷ್ಟ್ರೀಯ ಒಕ್ಕೂಟವು (International Union for Conservation of Nature-IUCN) ‘ಅಳಿವಿನಂಚಿನಲ್ಲಿರುವ’ ಪಕ್ಷಿ ಪ್ರಭೇದ ಎಂದು ವರ್ಗೀಕರಿಸಿತು, ಆದರೆ ಈ ದೊಡ್ಡ ಪಕ್ಷಿಗಳ ಉಳಿವಿಗೆ ಉಂಟಾಗುತ್ತಿರುವ ನಿರಂತರ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಈ ಪ್ರಭೇದವನ್ನು  2011 ರಲ್ಲಿ  “ತೀವ್ರವಾಗಿ ಅಳಿವಿನಂಚಿನಲ್ಲಿರುವ” ವಿಭಾಗದಲ್ಲಿ ಸೇರಿಸಲಾಯಿತು.

👉ರಾಜಸ್ಥಾನದ ವನ್ಯಜೀವಿ ಅಧಿಕಾರಿಗಳು, ಸುದೀರ್ಘ ಚರ್ಚೆಯ ನಂತರ, 2019 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿಸಲ್ಪಟ್ಟ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’ ಅನ್ನು ರಾಜಸ್ಥಾನದ ಡಸರ್ಟ್ ನ್ಯಾಷನಲ್ ಪಾರ್ಕ್ (DNP) ನಲ್ಲಿ ಕ್ಯಾಪ್ಟಿವ್ ಬ್ರೀಡಿಂಗ್ (ಮಾನವರ ಆರೈಕೆಯಲ್ಲಿ ಈ ಪಕ್ಷಿಗಳ ಸಂತಾನೋತ್ಪತ್ತಿ) ಮಾಡಲು ಡೆಹ್ರಾಡೂನ್‌ ಮೂಲದ ವನ್ಯಜೀವಿ ಸಂಸ್ಥೆಗೆ  ಅನುಮತಿ ನೀಡಿದ್ದಾರೆ.

👉ಇವುಗಳನ್ನು, ಕಾಡು ಪ್ರಾಣಿಗಳ ವಲಸೆ ಪ್ರಭೇದಗಳ ಸಂರಕ್ಷಣಾ ಸಮಾವೇಶ (CMS) ಮತ್ತು CITES ನ ಅನುಸೂಚಿ 1 ರಲ್ಲಿ ಸೇರಿಸಲಾಗಿದೆ.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು