(ಸ್ಥಳೀಯವಾಗಿ ಸಿಂಧು ಎಂದು ಕರೆಯಲ್ಪಡುತ್ತದೆ) ಏಷ್ಯಾದಲ್ಲೇ ಅತ್ಯಂತ ಉದ್ದದ ನದಿಗಳಲ್ಲಿ ಒಂದಾಗಿದೆ. ಇದು ಪಾಕಿಸ್ತಾನದ ಉದ್ದದ ನದಿ ಮತ್ತು ರಾಷ್ಟ್ರೀಯ ನದಿಯಾಗಿದೆ
🌺ಸಿಂಧೂ ನದಿಯ ಉಗಮ🌺
ಸಿಂಧೂ ನದಿ ಪಾಕಿಸ್ತಾನ ಮತ್ತು ಉತ್ತರ ಉತ್ತರ ಭಾರತದಲ್ಲಿ ಹರಿಯುವ ಒಂದು ಪ್ರಮುಖ ನದಿ. ಟಿಬೆಟ್ಟಿನ ಪ್ರಸ್ಥಭೂಮಿಯಲ್ಲಿರುವ ಮಾನಸ ಸರೋವರದ ಹತ್ತಿರ ಉಗಮಿಸುವ ಈ ನದಿ ಕಾಶ್ಮೀರದ ಮೂಲಕ ಉತ್ತರ ಪಾಕಿಸ್ತಾನಕ್ಕೆ ಹರಿದು, ನಂತರ ದಕ್ಷಿಣ ಮುಖಕ್ಕೆ ತಿರುಗಿ ಇಡಿ ಪಾಕಿಸ್ತಾನದ ಉದ್ದಕ್ಕೆ ಹರಿದು, ಕರಾಚಿ ನಗರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಇದು 2,000 ಮೈಲಿ (3,200 ಕಿ.ಮೀ. ಉದ್ದದ ಜಗತ್ತಿನ ಅತೀ ಉದ್ದದ ನದಿಗಳಲ್ಲಿ ಒಂದಾಗಿದೆ. ಇದರ ಒಟ್ಟು ಜಲಾನಯನ ಪ್ರದೇಶ 4,50,000 ಚದರ ಮೈಲಿ (11,65,000 ಚದರ ಕಿ.ಮೀ.), ಇದರಲ್ಲಿ 1,75,000 ಚದರ ಮೈಲಿ (4,53,000 ಚದರ ಕಿ.ಮೀ) ಪ್ರದೇಶ ಹಿಮಾಲಯದ ಶ್ರೇಣಿಗಳು ಮತ್ತು ಹಿಂದೂ ಕುಶ್ ಮತ್ತು ಕಾರಕೋರಂ ಶ್ರೇಣಿಯ ಬೆಟ್ಟದ ತಪ್ಪಲಲ್ಲಿ ಇರುವುದು
ಐದು ಪ್ರಮುಖ ನದಿಗಳು ಪೂರ್ವ ಭಾಗದಲ್ಲಿ ಸಿಂಧೂ ನದಿ ಸೇರುತ್ತವೆ. ಅವು ಝೀಲಂ, ಚೆನಾಬ್ ರವಿ, ಬಿಯಾಸ್,ಮತ್ತು ಸಟ್ಲೆಜ್; ಪಕ್ಕದಲ್ಲಿ ಈ 3 ಸಣ್ಣ ನದಿಗಳು - ಸೋನ್, ಹ್ಯಾರೋ ಮತ್ತು ಸೋನ್ ಸಹ ಸಿಂಧೂಗೆ ಸೇರುವುದು
ಸಿಂಧೂ ನದಿಯ ಒಟ್ಟು ಹಿನ್ನೀರಿನ ಪ್ರದೇಶವು 3,74,700 ಚದರ ಮೈಲಿ. ಇದರಲ್ಲಿ ಸುಮಾರು 56% ಅಂದರೆ 2,04,300 ಚದರ ಮೈಲಿ ಪಾಕಿಸ್ತಾನದಲ್ಲಿದೆ
🌀 ಸಿಂಧೂ ನದಿಯ ಉಪನದಿಗಳು
🌹ಬಿಯಾಸ್ ನದಿ
🌹ಚೆನಾಬ್ ನದಿ
🌹ಗಾರ್ ನದಿ
🌹ಗಿಲ್ಗಿಟ್ ನದಿ
🌹ಗೋಮಾಲ್ ನದಿ
🌹ಹುನ್ಜ ನದಿಯ
🌹ಝೀಲಂ ನದಿ
🌹ಕಾಬೂಲ್ ನದಿ
🌹ಕುನಾರ್ ನದಿ
🌹ಕುರ್ರಂ ನದಿ
🌹ಪಂಚನದ್ ನದಿ
🌹ರಾವಿ ನದಿ
🌹ಶೈಯೊಕ್ ನದಿ
🌹ಸೋನ್ ನದಿ
🌹ಸುರು ನದಿಯ
🌹ಸಟ್ಲೆಜ್ ನದಿ
🌹ಸ್ವಾತ್ ನದಿ
🌹ಜನಸ್ಕಾರ್ ನದಿ
🌹 ಜೋಅಬ್ ನದಿ
ಕಾಮೆಂಟ್ ಪೋಸ್ಟ್ ಮಾಡಿ