ಕೇಂದ್ರ ಹಂತದಲ್ಲಿ ಕೇಂದ್ರ ಲೋಕಸ ಆಯೋಗವಿರುವಂತೆಯೇ ರಾಜ್ಯ ಹಂತದಲ್ಲಿ ರಾಜ್ಯ ಲೋಕಸೇವಾ ಆಯೋಗ ಸಂವಿಧಾನದ ನಿರ್ದೇಶನದನ್ವಯ ಅಸ್ತಿತ್ವದಲ್ಲಿರುತ್ತದೆ. ಇದನ್ನು ಕರ್ನಾಟಕದಲ್ಲಿ ಕರ್ನಾಟಕ ಲೋಕಸೇವಾ ಆಯೋಗವೆಂದು ಕರೆಯುತ್ತಾರೆ. ಇದು ದಿನಾಂಕ 8-5-1951ರಲ್ಲಿ ಸ್ಥಾಪಿಸಲ್ಪಟ್ಟಿತು.
ಆಯೋಗವು ಒಬ್ಬರು ಅಧ್ಯಕ್ಷರು ಮತ್ತು 9 ಜನ ಸದಸ್ಯರುಗಳನ್ನು ಒಳಗೊಂಡಿರುತ್ತದೆ. ಇವರುಗಳನ್ನು ರಾಜ್ಯಪಾಲರು ನೇಮಿಸುತ್ತಾರೆ. ಇವರುಗಳ ಅಧಿಕಾರಾವಧಿಯು ನೇಮಕದಿಂದ ಆರು ವರ್ಷಗಳು ಅಥವಾ ಅವರುಗಳ 62ನೇ ವಯಸ್ಸಿನವರೆಗೆ ಇದ್ದು ಇವುಗಳಲ್ಲಿ ಪ್ರಥಮವಾಗುವುದನ್ನು ಪರಿಗಣಿಸಲಾಗುತ್ತದೆ, ಆಯೋಗವು ಬೆಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುತ್ತದೆ. ಮೈಸೂರು, ಬೆಳಗಾವಿ, ಕಲಬುರಗಿ ಮತ್ತು ಶಿವಮೊಗ್ಗಗಳಲ್ಲಿ ಪ್ರಾಂತೀಯ ಕಛೇರಿಗಳನ್ನು ಹೊಂದಿರುತ್ತದೆ.
ಕಾರ್ಯಗಳು :
1. ಸರ್ಕಾರಿ ಸೇವೆಗೆ ಪತ್ರಾಂಕಿತ ಅಧಿಕಾರಿಗಳು ಮತ್ತು ಆದಶಾಂಕಿತ ಸಿಬ್ಬಂದಿಗಳನ್ನು, ಸರ್ಧಾತ್ಮಕ ಪರೀಕ್ಷೆಗಳು ಹಾಗೂ ಸಂದರ್ಶನಗಳ ಮೂಲಕ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ನೇಮಾಕಾತಿ ನಿಯಮಗಳು ಹಾಗೂ ಸಂಬಂಧಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಮೇರೆಗೆ ಆಯ್ಕೆ ಮಾಡುವುದು, ಉದ ಉಪವಿಭಾಗಾಧಿಕಾರಿ, ಆರಕ್ಷಕ ತಹಶೀಲ್ದಾರಲು, ಇತ್ಯಾದಿ ಹುದ್ದೆಗಳು,
2. ಆಯುಕ್ತರು, ನೇರವಾಗಿ ನೇಮಕಗೊಳ್ಳುವ ಅಭ್ಯರ್ಥಿಗಳ ಸಂದರ್ಶನ ನಡೆಸುವುದು.
3. ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ಇಲಾಖಾ ಪರೀಕ್ಷೆಗಳನ್ನು ನಡೆಸುವುದು,
4. ಶಿಸ್ತು ಮತ್ತು ಪೂರ್ವಾನ್ವಯ ಪಕರಣಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.
5. ಕೇಂದ್ರ ಲೋಕಸೇವಾ ಆಯೋಗದ ರಾಜ್ಯದಲ್ಲಿ ನಡೆಸುವ ವಿವಿಧ ಪರೀಕ್ಷೆಗಳ ಸಮನ್ವಯ ಕಾರ್ಯ ನಿರ್ವಹಿಸುವುದು.
ಕಾಮೆಂಟ್ ಪೋಸ್ಟ್ ಮಾಡಿ