ಕೇಂದ್ರ ಲೋಕಸೇವಾ ಆಯೋಗವು ಸಂವಿಧಾನದ ವಿಧಿ 3150 ಅಡಿಯಲ್ಲಿ ಸ್ಥಾಪಿತವಾಗಿರುವ ಸಂವಿಧಾನಾತ್ಮಕ ಆಯೋಗವಾಗಿರುತ್ತದೆ. ಈ ಆಯೋಗದಲ್ಲಿ ಒಬ್ಬರು ಅಧ್ಯಕ್ಷರು ಮತ್ತು 10 ಜನ ಸದಸ್ಯರು ಇರುತ್ತಾರೆ. ಇವರುಗಳನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಸದಸ್ಯರುಗಳ ಅಧಿಕಾರಾವಧಿಯ ನೇಮಕವಾದ ದಿನಾಂಕದಿಂದ ಆರು ವರ್ಷಗಳ ಅವಧಿಗೆ ಅಥವಾ ಅವರಿಗೆ ವರ್ಷ ವಯಸ್ಸಿನವರೆಗೆ ಅವಕಾಶವಿದ್ದು, ಇವುಗಳಲ್ಲಿ ಯಾವುದು ಮೊದಲು ಅದನ್ನು ಪರಿಗಣಿಸಿ ಸದಸ್ಯತ್ವದ ಅವಧಿಯನ್ನು ಅಂತ್ಯಗೊಳಿಸಲಾಗುತ್ತದೆ. ರಾಷ್ಟ್ರಪತಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ದುರ್ನಡತೆಯ ಆಧಾರದ ಮೇಲೆ ವಡಾ ಮಾಡುವ ಅಧಿಕಾರ ಹೊಂದಿರುತ್ತಾರೆ. ಆಯೋಗ ಶಾಸಕಾಂಗ ಮತ್ತು ಕಾರ್ಯಾಂಗಗಳ ಹಸ್ತಕ್ಷೇಪದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಆಯೋಗದಲ್ಲಿ ಕಾರ್ಯದರ್ಶಿಯವರು ಇರುತ್ತಾರೆ, ಪ್ರಸ್ತುತ ದೆಹಲಿಯಲ್ಲಿ ಆಯೋಗದ ಕಛೇರಿ ಇದೆ.
ಕಾರ್ಯಗಳು
ಸಂವಿಧಾನದ 32ನೇ ವಿಧಿಯು ಕೆಳಕಂಡ ಕಾರ್ಯಗಳನ್ನು ನಿರ್ವಹಿಸಲು ಸೂಚಿಸಿದೆ.
1. ಎ ಮತ್ತು ಬಿ ವೃಂದದ ಸೇವೆಗಳಿಗೆ ನೇಮಕ ಮಾಡಲು ಪಕ್ಷಿಗಳನ್ನು ನಡೆಸುವುದು.
2. ನೇರ ನೇಮಕಾತಿಗೆ ಸಂದರ್ಶನಗಳನ್ನು ನಡೆಸುವುದು.
3. ಸೇವಾ ಹುದ್ದೆಗಳಿಗೆ ಬಡ್ತಿ ಮತ್ತು ವರ್ಗಾವಣೆಗೆ ಅನುಸರಿಸಬೇಕಾದ ತತ್ವಗಳ ಬಗ್ಗೆ ಸಲಹೆ ನೀಡುವುದು.
4. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿರುವ ಅಧಿಕಾರಿಗಳ ವರ್ತನೆಯ ಮೇರೆಗೆ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.
5. ರಾಷ್ಟ್ರಪತಿಗಳ ಸೂಚನೆ ಅನ್ವಯ ಯಾವುದೇ ವಿಷಯಗಳಿಗೆ ಸರ್ಕಾರಕ್ಕೆ ಸಲಹೆ ನೀಡುವುದು.
ಆಯೋಗವು ರಾಷ್ಟ್ರಮಟ್ಟದಲ್ಲಿ ಸಿವಿಲ್ ಸೇವೆ, ತಾಂತ್ರಿಕ ಸೇವೆ, ವೈದ್ಯಕೀಯ ಸೇವೆ, ಅರಣ್ಯ ಸೇವೆ ಮತ್ತು ರಕ್ಷಣಾ ಸೇವೆಗಳಿಗೆ ಸಂಬಂಧಿಸಿದಂತೆ ನೇಮಕಾತಿಗಾಗಿ ಸರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ. ಇವುಗಳಲ್ಲಿ ಸಿವಿಲ್ ಸರ್ವಿಸ್‌ಗಾಗಿ ನಡೆಸುವ ಪರೀಕ್ಷೆಯು ಮಹತ್ವದ್ದಾಗಿರುತ್ತದೆ. ಐ.ಎ.ಎಸ್. (ಭಾರತೀಯ ಆಡಳಿತ ಸೇವೆ), ಎ.ಪಿ.ಎಸ್. (ಭಾರತೀಯ ಪೊಲೀಸ್ ಸೇವೆ), ಐ.ಎಫ್.ಎಸ್. (ಭಾರತೀಯ ವಿದೇಶಿ ಸೇವೆ), ಐ.ಆರ್.ಎಸ್. (ಭಾರತೀಯ ಕಂದಾಯ ಸೇವೆ), ಐ.ಎ.ಎ.ಎಸ್. (ಭಾರತೀಯ ಲೆಕ್ಕ ಮತ್ತು ಪರಿಶೋಧನಾ ಸೇವೆ) ಪರೀಕ್ಷೆಗಳು ಮುಖ್ಯವಾಗಿರುತ್ತವೆ. ಸಾಮಾನ್ಯವಾಗಿ ಈ ಪರೀಕ್ಷೆಗಳನ್ನು ಮೂರು ಹಂತದಲ್ಲಿ ನಡೆಸುತ್ತವೆ.
1. ಪೂರ್ವಭಾವಿ ಪರೀಕ್ಷೆ
2. ಮುಖ್ಯ ಪರೀಕ್ಷೆ
3. ವ್ಯಕ್ತಿತ್ವ ಪರೀಕ್ಷೆ
ಕಾಮೆಂಟ್ ಪೋಸ್ಟ್ ಮಾಡಿ