ತರಬೇತಿ

 

ಸಾರ್ವಜನಿಕ ಸಿಬ್ಬಂದಿಯ ದಕ್ಷತೆಯು ಅವರು ಪಡೆದಿರುವ ತರಬೇತಿ ಮಟ್ಟವನ್ನು ಅವಲಂಬಿಸಿರುತ್ತದೆ. ಆಧುನಿಕ ರಾಜ್ಯದ ಆಡಳತ ಕಾರ್ಯಗಳು ಕ್ಲಿಷ್ಟವಾಗಿರುವುದರಿಂದ ಅಭ್ಯರ್ಥಿಗಳು ತಾವು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ಸರಿಯಾದ ತಿಳುವಳಿಕೆ ಪಡೆಯಲು ತರಬೇತಿ ಅವಶ್ಯಕವಾಗಿದೆ. ವ್ಯವಸ್ಥಿತವಾದ ತರಬೇತಿಯಿಂದ ಮಾತ್ರ ನೌಕರರನ್ನು ತಮ್ಮ ದಕ್ಷ, ಕಾರ್ಯನಿರ್ವಹಣೆಗೆ ಅಗತ್ಯವಾದ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ನಿರ್ದಿಷ್ಟ ಕಾರ್ಯನಿರ್ವಹಿಸಲು ಅಗತ್ಯವಾದ ಜ್ಞಾನ ಹಾಗೂ ಪರಿಣಿತಿಯನ್ನು ಅಭಿವೃದ್ಧಿಪಡಿಸಿಕೊಳ್ಳುವುದೆ ತರಬೇತಿಯಾಗಿರುತ್ತದೆ. ತರಬೇತಿಯು ಉದ್ಯೋಗಿಗಳಿಗೆ ತಾವು ನಿರ್ವಹಿಸಬೇಕಾಗಿರುವ ಕಾರ್ಯಗಳ ಬಗ್ಗೆ ಶಾತ್ವಿಕವಾಗಿ, ಪ್ರಾಯೋಗಿಕವಾಗಿ, ಆರಿವು ಮತ್ತು ಜ್ಞಾನವನ್ನು ನೀಡುತ್ತದೆ. ಸಾರ್ವಜನಿಕ ಆಡಳಿತದಲ್ಲಿ ತರಬೇತಿಗೆ ವಿಶಿಷ್ಟ ಸ್ಥಾನವಿದೆ, ನಿರಂತರವಾಗಿ ಹೊಸ ಕ್ಲಿಷ್ಟ ಮತ್ತು ತಾಂತ್ರಿಕ ಕಾರ್ಯಗಳನ್ನು ನಿರ್ವಹಿಸಬೇಕಾಗಿರುವುದರಿಂದ ಆಧುನಿಕ ಸರ್ಕಾರದಲ್ಲಿ ತರಬೇತಿಯ ಪ್ರಾಮುಖ್ಯತೆ ಹೆಚ್ಚುತ್ತಿದೆ. ತರಬೇತಿಯು ನಿರಂತರವಾದ ಪ್ರಕ್ರಿಯೆಯಾಗಿರುತ್ತದೆ.


ತರಬೇತಿಯ ವಿಧಗಳು

ತರಬೇತಿಯ ವಿಧಾನ, ಅವಧಿ, ಹಂತ, ತರಬೇತಿ ನೀಡುವ ಸಂಸ್ಥೆ ಮತ್ತು ಉದ್ದೇಶಗಳನ್ನು ಆಧರಿಸಿ ತರಬೇತಿಯನ್ನು ಮುಖ್ಯವಾಗಿ 5 ವಿಧಗಳಾಗಿ ವಿಂಗಡಿಸಲಾಗಿದೆ.

I) ಔಪಚಾರಿಕ ಮತ್ತು ಅನೌಪಚಾರಿಕ ತರಬೇತಿ: ನೌಕರರು ಕಾರ್ಯ ನಿರ್ವಹಿಸಬೇಕಾದ ಕಾರ್ಯಕ್ಕೆ ಪೂರ್ವಭಾವಿಯಾಗಿ ಸಿದ್ಧಪಡಿಸಿದ ಕ್ರಮಬದ್ಧ ಯೋಜನೆಗಳಿಂದ ಪಡೆದು, ಕಾರ್ಯ ನಿರ್ವಹಿಸುವುದು ಔಪಚಾರಿಕ ಶರಬೇತಿಯಾಗಿರುತ್ತದೆ. ತರಬೇತಿಯನ್ನು ಪರಿಣಿತರ ಮಾರ್ಗದರ್ಶನದಲ್ಲಿ ನೀಡಲಾಗುವುದು ಅನೌಪಚಾರಿಕ ತರಬೇತಿ ಎಂದರೆ, ನೌಕರರು ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಪಡೆಯುವ ತರಬೇತಿಯಾಗಿರುತ್ತದೆ. ನೌಕರರು ಈ ತರಬೇತಿಯನ್ನು ತಮ್ಮ ದೈನಂದಿನ ಕಛೇರಿ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಪಡೆಯುತ್ತಾರೆ.

ii) ನೌಕರಿ ಪೂರ್ವ ಮತ್ತು ನೌಕರಿ ಆರಂಭೋತ್ತರ ತರಬೇತಿ: ಕೌಳಂ ಪೂರ್ವ ತರಬೇತಿಯು ಭಾವಿ ಉದ್ಯೋಗಿಗಳನ್ನು ಸಾರ್ವಜನಿಕ ಸೇವೆಗಾಗಿ ತಯಾರು ಮಾಡುತ್ತವೆ. ನೌಕರಿಗೆ ಸೇರುವ ಮೊದಲೇ ಆ ನೌಕರಿಗೆ ಪೂರಕವಾದ ತರಬೇತಿಯನ್ನು ನಿಗದಿಪಡಿಸಲಾಗಿರುತ್ತದೆ, ಉದಾ ಬಿ.ಇಡಿ, ತರಬೇತಿಯು ಕಡ್ಡಾಯವಿರುತ್ತದೆ. ಢಶಾಲಾ ಶಿಕ್ಷಕರಾಗಲು ನೌಕರಿ ಆರಂಭೋತ್ತರ ತರಬೇತಿಯು ಹುದ್ದೆಗೆ ಆಯ್ಕೆಯಾದವರಿಗೆ ನೀಡುವ ತರಬೇತಿಯಾಗಿರುತ್ತದೆ. ತರಬೇತಿಯ ಉದ್ದೇಶವೂ ಹೊಸ ಅಭ್ಯರ್ಥಿಗಳಿಗೆ ಹೆಚ್ಚಿನ ನೈಪುಳ್ಳುತ ಮತ್ತು ಕೌಶಲ್ಯತೆಯನ್ನು ನೀಡುವುದಾಗಿದೆ. ಈ ರೀತಿಯ ತರಬೇತಿಯನ್ನು ಸಾಮಾನ್ಯ ಬುನಾದಿ ತರಬೇತಿ ಎಂದು ನೀಡುತ್ತಾರೆ. 

Iii) ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿ : ಅಜಾದರಿ ತರಬೇತಿಯು ನಾಲ್ಕರಿಂದ ಆರು ವಾರಗಳ ಕಾಲಾವಧಿಗೆ ನೀಡುವ ತರಬೇತಿಯಾಗಿರುತ್ತದೆ. ಉದಾ: ಲೋಕಸೇವಾ ಆಯೋಗದಿಂದ ಆಯ್ಕೆಯಾದ ವೈದ್ಯರುಗಳಿಗೆ ಆರು ವಾರಗಳ ಕಾಲದ ತರಬೇತಿ ನೀಡಲಾಗುತ್ತದೆ. ತರಬೇತಿ ನಿರಂತರ ಸ್ವರೂಪದ್ದಾಗಿದ್ದು ಆದರೆ ಅವಧಿಯು ಒಂದರಿಂದ ಎರಡು ವರ್ಷಗಳ ಕಾಲ ನೀಡಿದರೆ ದೀರ್ಘಾವಧಿ ತರಬೇತಿಯಾಗಿರುತ್ತದೆ, ಉದಾ: ಅಖಿಲ ಭಾರತ ಸೇವೆಗಳಿಗೆ ಆಯ್ಕೆಯಾದವರಿಗೆ ನೀಡುವ ತರಬೇತಿಯಾಗಿರುತ್ತದೆ.

iv) ಇಲಾಖಾ ಮತ್ತು ಕೇಂದ್ರೀಯ ತರಬೇತಿ : ತನ್ನ ಇಲಾಖೆಗೆ ನೇಮಕ ಹೊಂದುವ ಅಭ್ಯರ್ಥಿಗಳಿಗೆ ಇಲಾಖೆ ನೀಡುವ ತರಬೇತಿಯು ಇಲಾಖಾ ತರಬೇತಿಯಾಗಿರುತ್ತದೆ. ಉದಾ: ಪೊಲೀಸ್ ಇಲಾಖೆಯ ತರಬೇತಿ ಕೇಂದ್ದೀಯ ಸಂಸ್ಥೆಯೊಂದು ತರಬೇತಿ ನೀಡಿದರೆ ಅದು ಕೇಂದ್ರೀಯ ತರಬೇತಿಯಾಗಿರುತ್ತದೆ. ಉದಾ: ಮನ್ಸೂರಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಸಂಸ್ಥೆ ನಿಡುವ ತರಬೇತಿ.

 v) ಪರಿಣಿತ ತರಬೇತಿ ಮತ್ತು ಹಿನ್ನೆಲೆ ತರಬೇತಿ : ತರಬೇತಿಯ ಉದ್ದೇಶವು ಅಭ್ಯರ್ಥಿಯ ಅಭ್ಯತೆಯನ್ನು ಕಾರ್ಯಕೌಶಲ್ಯವನ್ನು ಹೆಚ್ಚಿಸುವುದಾಗಿದ್ದರೆ ಅದನ್ನು ಪರಿಣಿತ ತರಬೇತಿ ಎಂದು ಕರೆಯಲಾಗುತ್ತದೆ. ಉದಾ: ಪ್ರೌಢಶಾಲೆ ಶಿಕ್ಷಕರಿಗೆ ಬಿ.ಇಡಿ, ಶಿಕ್ಷಣ ತರಬೇತಿ ಕಡ್ಡಾಯ ಮಾಡಲಾಗಿದೆ. ತರಬೇತಿಯ ಕೆಲವು ಸಾಮಾನ್ಯ ವಿಷಯಗಳ ಕುರಿತು ತಿಳುವಳಿಕೆ ನೀಡುವುದಾದರೆ ಹಿನ್ನೆಲೆ ತರಬೇತಿಯಾಗಿರುತ್ತದೆ, ಉದಾ-ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ನೀಡಲಾಗುವ ತರಬೇತಿಯಾಗಿರುತ್ತದೆ.

ಸರ್ಕಾರಿ ನೌಕರರಿಗೆ ಅಧಿಕಾರಿಗಳಿಗೆ ಸೇವೆಗೆ ಸೇರಿದ ನಂತರ ವೃತ್ತಿಪರ ದಕ್ಷತೆಯನ್ನು ಹೆಚ್ಚಿಸಲು ಆಗಿಂದಾಗ್ಗೆ ಸೇವಾವಧಿಯ ತರಬೇತಿಗಳನ್ನು ನೀಡುತ್ತಲೇ ಇರುತ್ತದೆ. ಇದಕ್ಕಾಗಿಯೇ, ಜಿಲ್ಲಾ ಪಂತದಲ್ಲಿ ತರಬೇತಿ ಕೇಂದ್ರಗಳಿವೆ. ರಾಜ್ಯ ಹಂತದಲ್ಲಿಯು ತರಬೇತಿ ಕೇಂದ್ರಗಳಿವೆ.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು