ಸಾರ್ವಜನಿಕ ಆಡಳಿತದ ಯಶಸ್ವಿಗೆ ಪರಿಣಾಮಕಾರಿ ಸಿಬ್ಬಂದಿ / ಅಧಿಕಾರಿಗಳು ಅವಶ್ಯಕವಾಗಿರುತ್ತದೆ. ಈ ಸಿಬ್ಬಂದಿ ಅಧಿಕಾರಿಗಳನ್ನು ಕ್ರಮಬದ್ಧ ರೀತಿಯಲ್ಲಿ ಆಯ್ಕೆ ಮಾಡಬೇಕಾಗುತ್ತದೆ. ಆಯ್ಕೆ ಮಾಡುವಲ್ಲಿ ಹಲವಾರು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಈ ಪ್ರಕ್ರಿಯೆಗಳನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ಗಮನಿಸಬಹುದಾಗಿದೆ, ಉತ್ತಮ ಮತ್ತು ದಕ್ಷ ಸಾರ್ವಜನಿಕ ಆಡಳಿತವು ನೇಮಕಾತಿ ಮತ್ತು ಅದರ ವಿಧಾನಗಳನ್ನು ಅವಲಂಬಿಸಿದೆ. ಅರ್ಹ, ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಯನ್ನು ಆಡಳಿತಕ್ಕೆ ನೇಮಿಸಿಕೊಂಡಾಗ ಅವರು ಕ್ರಿಯಾಶೀಲತೆ, ಬುದ್ದಿವಂತಿಕೆ ಮತ್ತು ಸರಿಯಾದ ರೀತಿಯಲ್ಲಿ ಸಾರ್ವಜನಿಕ ಆಡಳಿತವನ್ನು ನಡೆಸಿ ಅಭಿವೃದ್ಧಿಗೆ ಪ್ರಯತ್ನಿಸುತ್ತಾರೆ.
ನೇಮಕಾತಿ ವಿಧಾನವು ಹೆಚ್ಚು ಸಮರ್ಪಕವೂ, ವೈಜ್ಞಾನಿಕವೂ ಆಗಿದ್ದಾಗ ದಕ್ಷ ಸಿಬ್ಬಂದಿ ವರ್ಗವನ್ನು ಹೊಂದಿ
ಸಾರ್ವಜನಿಕ ಆಡಳಿತವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತದೆ. ನೇಮಕಾತಿಯು ಸಿಬ್ಬಂದಿ ಆಡಳಿತದಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ಓ.ಜಿ ಸ್ಟಾಲ್‌ರವರ ಪ್ರಕಾರ ನೇಮಕಾತಿಯು ಸಾರ್ವಜನಿಕ ಸಿಬ್ಬಂದಿ ರಚನೆಯ ಅಡಿಗಲ್ಲಾಗಿರುತ್ತದೆ.
ನೇಮಕಾತಿ ವಿಧಾನಗಳು
ಎ) ನೇರ ನೇಮಕಾತಿ
ಬಿ) ಅ೦ತರಿಕ ನೇಮಕಾತಿ (ಬಡ್ತಿ ಮೂಲಕ ನೇಮಕಾತಿ)
ನೇರ ನೇಮಕಾತಿ : ನೇಮಕಾತಿ ವಿಧಾನಗಳಲ್ಲಿ ನೇರ ನೇಮಕಾತಿ ಜನಪ್ರಿಯ ಹಾಗೂ ವೈಜ್ಞಾನಿಕ ವಿಧಾನವಾಗಿದೆ. ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಿಶ್ಚಿತ ರೀತಿಯಲ್ಲಿ ಆಯ್ಕೆ ಮಾಡುವುದೇ ನೇರ ನೇಮಕಾತಿಯಾಗಿರುತ್ತದೆ. ಈ ಮೂಲಕ ಸೇವೆಗೆ ಸೇರಬೇಕಾದ ಅಭ್ಯರ್ಥಿಗಳು ಕೆಲವು ಸಾಮಾನ್ಯ ಅರ್ಹತೆಗಳನ್ನು ಹಾಗೂ ವಿಶೇಷ ಆರ್ಹತೆಗಳನ್ನು ಹೊಂದಿರಬೇಕು.
ಸರ್ಕಾರಿ ಸೇವೆಯಲ್ಲಿ ಇದ್ದವರಲ್ಲಿ ಅರ್ಹರಾದವರನ್ನು ಮೇಲ್ದರ್ಜೆಯ ಹುದ್ದೆಗಳಿಗೆ ಆಂತರಿಕ ನೇಮಕಾತಿ: ಆಯ್ಕೆ ಮಾಡುವುದೇ ಅಂತರಿಕ ನೇಮಕಾತಿಯಾಗಿರುತ್ತದೆ. ಇಂತಹ ಪದ್ಧತಿಯನ್ನು ಸಾಮಾನ್ಯವಾಗಿ ಎಲ್ಲಾ ರಾಷ್ಟ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಪದ್ಧತಿಯು ಭಾರತದಲ್ಲಿಯೂ ಜಾರಿಯಲ್ಲಿದೆ.
ಕಾಮೆಂಟ್ ಪೋಸ್ಟ್ ಮಾಡಿ