ಆಧುನಿಕ ಸಮಾಜವು ಸಂಕೀರ್ಣ ಮತ್ತು ಶೀಘ್ರಗತಿಯ ಬದಲಾವಣೆಗಳಿಗೆ ಬಳಗಾಗುತ್ತಿರುವುದರಿಂದ ಸಾರ್ವಜನಿಕ ಆಡಳಿತವು ಪ್ರಮುಖ ಸ್ಥಾನವನ್ನು ಹೊಂದಿದೆ. ಸಾರ್ವಜನಿಕ ಆಡಳಿತದಿಂದ ಸಮಾಜಕ್ಕೆ ಆಗುವ ಪ್ರಯೋಜನಗಳ ಅರಿವು ಮತ್ತು ಮಹತ್ತು ದಿನ ದಿನೇ ಹೆಚ್ಚುತ್ತಿದೆ. ಹಾಗಾಗಿ ಸಾರ್ವಜನಿಕ ಆಡಳಿತವು ಮಾನವ ಸಮಾಜವನ್ನು ನಾಗರಿಕ ಸಮಾಜವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಬಗೆಯ ಆಡಳಿತಾತ್ಮಕ ಪ್ರಯೋಗಗಳು ಮಾನವ ಸಮಾಜದಷ್ಟೇ ಪುರಾತನವಾದವು, ಆದರೆ ಸಾರ್ವಜನಿಕ ಆಡಳಿತದ ಅಧ್ಯಯನದ ಬೆಳವಣಿಗೆ ವಿಶೇಷವಾಗಿ ಅಮೆರಿಕಾದಲ್ಲಿ ಸಾರಂಭವಾಯಿತು. ಅಮೆರಿಕಾದ ಮಾಜ ಅಧ್ಯಕ್ಷರಾದ ವುಡೋವಿಲ್ಸನ್‌ರನ್ನು ಸಾರ್ವಜನಿಕ ಆಡಳಿತದ ಪಿತಾಮಹ ಎಂದು ಕರೆಯಲಾಗಿದೆ. ಪ್ರಸ್ತುತ ಸಾರ್ವಜನಿಕ ಆಡಳಿತವು ಎಲ್ಲಾ ರಾಷ್ಟ್ರಗಳಲ್ಲಿ ಒಂದು ಪ್ರಮುಖ ಅಧ್ಯಯನ ವಿಷಯವಾಗಿ ಬೆಳವಣಿಗೆ ಹೊಂದುತ್ತಿದೆ.
‘ಸಾರ್ವಜನಿಕ ಆಡಳಿತ’ ಎಂಬುದು ಆಡಳಿತ ಎಂಬ ವ್ಯಾಪಕ ವ್ಯಾಪ್ತಿಯ ಕ್ಷೇತ್ರದ ಒಂದು ನಿರ್ದಿಷ್ಟ ಭಾಗವಾಗಿದೆ. ಸಾರ್ವಜನಿಕ ಎನ್ನುವ ಪದ ಸರ್ಕಾರಿ (Government) ಎನ್ನುವ ಅರ್ಥ ಸೂಚಿಸುತ್ತದೆ, ಸಾರ್ವಜನಿಕ ಆಡಳಿತ ಎಂಬ ಪದವನ್ನು 1812ರಲ್ಲಿ ಮೊಟ್ಟಮೊದಲ ಬಾರಿಗೆ ಅಲೆಕ್ಸಾಂಡರ್ ಹ್ಯಾಮಿಲ್ಟರು ಬಳಸಿದರು. ಅನಂತರ ಹಲವು ಲೇಖಕರು ತಮ್ಮ ಪರಿಭಾಷೆಯ ಅರ್ಥಗಳಲ್ಲಿ ವ್ಯಾಖ್ಯಾನಿಸಿದ್ದಾರೆ.
1. ವಡೋಪಿನರ ಪ್ರಕಾರ ಕಾನೂನಿನ ಸಮಗ್ರ ಮತ್ತು ಕ್ರಮಬದ್ಧ ಜಾರಿಗೊಳಿಸುವಿಕೆ ಸಾರ್ವಜನಿಕ ಆಡಳಿತವಾಗಿರುತ್ತದೆ.”
2. ಫಿಫ್‌ನ ಪ್ರಕಾರ “ಸಾರ್ವಜನಿಕ ನೀತಿಯನ್ನು ಜಾರಿಗೊಳಿಸುವ ಸಾಮೂಹಿಕ ಯತ್ನದ ಸಂಯೋಜನೆಯ ಸಾರ್ವಜನಿಕ ಆಡಳಿತವಾಗಿರುತ್ತದೆ.
3. ” ಲೂಲ್ ಗುಲಿಕರ ಪ್ರಕಾರ, “ಸಾರ್ವಜನಿಕ ಆಡಳಿತವು ಸರ್ಕಾರ ಕಾರ್ಯಗಳನ್ನು ನಿರ್ವಹಿಸುವ ಕಾರ್ಯಾಂಗ ಶಾಖೆಗೆ ಸಂಬಂಧಿಸಿದೆ.”
ಒಟ್ಟಿನಲ್ಲಿ ಸರ್ಕಾರ ಇಡೀ ವ್ಯವಸ್ಥೆಯ ಸಮಸ್ತ ಕಾರ್ಯಾಚರಣೆಗೆ ಸಂಬಂಧಿಸಿರುತ್ತದೆ. ರಾಜ್ಯದ ದೈನಂದಿನ ವ್ಯವಹಾರಗಳನ್ನು ನಡೆಸಿಕೊಂಡು ಹೋಗುವ ಸರ್ಕಾರದ ಅಂಗವೇ ಸಾರ್ವಜನಿಕ ಆಡಳಿತವಾಗಿರುತ್ತದೆ.
ಪ್ರಾಮುಖ್ಯತೆ
ರಕ್ಷಣಾ ರಾಜ್ಯದಿಂದ ಕಲ್ಯಾಣ ರಾಜ್ಯವಾಗಿ, ಬದಲಾವಣೆ ಆಗುತ್ತಿರುವ ರಾಜ್ಯದ ಸ್ವರೂಪಕ್ಕೆ ತಕ್ಕಂತೆ ಸಾರ್ವಜನಿಕ ಆಡಳತದ ಪ್ರಾಮುಖ್ಯತೆಯು ಹೆಚ್ಚುತ್ತಿದೆ. ಇದರಿಂದಾಗಿ ಸಾರ್ವಜನಿಕ ಆಡಳಿತ ಕ್ಷೇತ್ರವೂ ವಿಸ್ತಾರವಾಗುತ್ತದೆ. ಮಾನವನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಮಾನವ ಸಮಾಜದ ಆಳವು ಮತ್ತು ಉಳಿವು ಸಾರ್ವಜನಿಕ ಆಡಳಿತವನ್ನು ಅವಲಂಬಿಸಿದೆ.
ವ್ಯಕ್ತಿಯು ಹುಟ್ಟಿನಿಂದ ಮರಣದವರೆಗೆ ಸಾರ್ವಜನಿಕ ಆಡಳಿತ ವ್ಯವಸ್ಥೆಗೆ ಒಳಪಟ್ಟಿರುತ್ತಾನೆ. ಇದು ರಾಜ್ಯ ವ್ಯವಸ್ಥೆಯ ಹೃದಯವಾಗಿದೆ. ಸಾರ್ವಜನಿಕ ಆಡಳಿತ ಇಲ್ಲದ ರಾಜ್ಯದ ಕಲ್ಪನೆಯೇ ಅಸಾಧ್ಯವಾಗಿದೆ. ಆದ್ದರಿಂದ ಆಧುನಿಕ ರಾಜ್ಯವನ್ನು ಆಡಳಿತಾತ್ಮಕ ರಾಜ್ಯ ಎಂದು (Acdministrative State) ಪರಿಗಣಿಸಲಾಗಿದೆ. ಕೆಳಕಂಡ ಅಂಶಗಳು ಸಾರ್ವಜನಿಕ ಆಡಳಿತದ ಪ್ರಾಮುಖ್ಯತೆಯನ್ನು ತಿಳಿಸುತ್ತಿವೆ.
1) ಸಾರ್ವಜನಿಕ ಆಡಳಿತವು ಸರ್ಕಾರದ ಆಧಾರ ಸ್ತಂಭವಾಗಿದೆ. ರಾಜ್ಯದಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗವಿಲ್ಲದೆ ಸರ್ಕಾರವಿರಬಹುದು, ಆದರೆ ಆ ಕಾಂಗವಿಲ್ಲದೆ ಸರ್ಕಾರ ಅಥವಾ ರಾಜ್ಯ ಅಸ್ತಿತ್ವದಲ್ಲಿ ಇರಲು ಸಾಧ್ಯವಿಲ್ಲ. ಸಾರ್ವಜನಿಕ ಅಥವಾ ಸರ್ಕಾರದ ನೀತಿಗಳನ್ನು ಕಾರ್ಯಗತಗೊಳಿಸಲು ಆಡಳಿತಾತ್ಮಕ ಯಂತ್ರ ಎಲ್ಲ ರಾಷ್ಟ್ರಗಳಲ್ಲಿಯೂ ಅತ್ಯವಶ್ಯಕವಾಗಿರುತ್ತದೆ. ಹಾಗಾಗಿ ಪಾಲ್ ಆಪಲ್‌ಬಿಯವರು “ಆಡಳಿತವಿಲ್ಲದೆ ಸರ್ಕಾರ ಕೇವಲ ಒಣ ಹರಟೆಯ ಕೂಟವಾಗುವುದೆಂದು” ಅಥವಾಯಪಟ್ಟಿದ್ದಾರೆ.
2) ಸಾರ್ವಜನಿಕ ಹಿತಾಸಕ್ತಿಗಾಗಿ ವಿವಿಧ ಸೇವೆ ಸಲ್ಲಿಸುತ್ತಿದೆ. ಸಾರ್ವಜನಿಕ ಆಡಳಿತ ವ್ಯವಸ್ಥೆಯು ವ್ಯಕ್ತಿಯು ಗರ್ಭದಲ್ಲಿರುವಾಗಿನಿಂದ ಹಿಡಿದು ಅವನ ಮರಣದವರೆಗೂ ಅಗತ್ಯವಾದ ಸೇವೆಗಳನ್ನು ಒದಗಿಸುತ್ತದೆ. ಶಾಂತಿ ಹಾಗೂ ಸಮೃದ್ಧತೆಯನ್ನು ಕಾಪಾಡಿ ಜನರ ಪ್ರಾಣ ಹಾಗೂ ಆಸ್ತಿ ರಕ್ಷಣೆ, ನ್ಯಾಯ ಒದಗಿಸುವುದು, ಶಿಕ್ಷಣ ನೀಡುವುದು, ಉದ್ಯೋಗಾವಕಾಶ ಕಲ್ಪಿಸುವುದು, ಅವಶ್ಯಕ ವಸ್ತುಗಳ ಪೂರೈಸುವುದು, ದೇಶ ಸಂರಕ್ಷಣೆ, ಆರ್ಥಿಕ ಸಮಾನತೆಯನ್ನು ಉಂಟುಮಾಡುವುದು, ಹೀಗೆ ಹಲವು ರೀತಿಯ ಸೇವೆಗಳನ್ನು ಒದಗಿಸುತ್ತದೆ.
3) ಕಾನೂನು ಮತ್ತು ನೀತಿಗಳ ಅನುಷ್ಠಾನ, ಕಾನೂನು ಮತ್ತು ನೀತಿಗಳನ್ನು ಜಾರಿಗೊಳಿಸುವುದರ ಮೂಲಕ ಸಾರ್ವಜನಿಕ ಆಡಳಿತವು ಸಮಾಜದಲ್ಲಿ ಜನರ ಚಟುವಟಿಕೆಗಳನ್ನು ನಿಯಂತ್ರಿಸಿ ಕಾನೂನು ಹಾಗೂ ವ್ಯವಸ್ಥೆಯನ್ನು ಕಾಪಾಡುತ್ತದೆ. ಸಾರ್ವಜನಿಕ ಆಡಳಿತವು ನಿಷ್ಠೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸದಿದ್ದರೆ ಉತ್ತಮ ನೀತಿಗಳ ಗುರಿಗಳು ಕೇವಲ ಕಾಗದದ ಘೋಷಣೆಗಳಾಗಿ ಉಳಿಯುತ್ತದೆ.
4) ಸಾಮಾಜಿಕ ಭದ್ರತೆಯನ್ನು ಕಾಪಾಡಲು ಅಗತ್ಯ ಸಾರ್ವಜನಿಕ ಆಡಳಿತವು ಸಾಮಾಜಿಕ ಭದ್ರತೆಯ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರಗಳು ಬದಲಾವಣೆಯಾದರೂ ಸಾರ್ವಜನಿಕ ಆಡಳಿತ ಶಾಶ್ವತ ವವಸ್ಥೆಯಾಗಿರುವುದರಿಂದ ಇದು ಆಡಳಿತಕ್ಕೆ ಸ್ಥಿರತೆಯನ್ನು ಒದಗಿಸುತ್ತದೆ. ಇದರಿಂದಾಗಿ ಆಡಳಿತದ ಕಾರ್ಯಗಳು ಸುಗಮವಾಗಿ ನಿರ್ವಹಣೆಯಾಗಲು ಸಾಧ್ಯವಾಗುತ್ತದೆ. ಉತ್ತಮ ಆಡಳಿತ ವ್ಯವಸ್ಥೆ ಇಲ್ಲವಾದಲ್ಲಿ ಅತ್ಯಂತ ಪ್ರಬಲ ರಾಷ್ಟ್ರವು ಕುಸಿದು ಬೀಳುತ್ತದೆ. ಉದಾ: ಪ್ರಾಚೀನ ರೋಮ್ ಸಾಮ್ರಾಜ್ಯ ಅಧಃಪತನವಾಗಿರುವುದು. ಸಾರ್ವಜನಿಕ ಆಡಳಿತವು ಸಮಾಜದ ಸಮಸ್ಯೆಗಳನ್ನು ಪರಿಹರಿಸಿ, ಸಮಾಜದಲ್ಲಿ ಒಗ್ಗಟ್ಟು ಹಾಗೂ ಸಾಮರಸ್ಯವನ್ನು ಉಂಟುಮಾಡುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.
5 ಶಾಸಕಾಂಗ ಮತ್ತು ಕಾರ್ಯಾಂಗಕ್ಕೂ ಸಹಾಯ ಮಾಡುತ್ತದೆ. ಸಾರ್ವಜನಿಕ ಆಡಳಿತವು ಶಾಸಕರಿಗ ರೂಪಿಸಿದ ಸಾರ್ವಜನಿಕ ನೀತಿಗಳನ್ನು ಕಾರ್ಯರೂಪಕ್ಕೆ ತರಲು ಸಹಾಯ ಮಾಡುತ್ತದೆ, ಜೊತೆಗೆ ಸರ್ಕಾರಗಳು ತಮ್ಮ ನೀತಿಗಳನ್ನು ರೂಪಿಸಲು ಅಗತ್ಯವಾದ ಅಂಕಿ ಅಂಶಗಳನ್ನು ಹಾಗೂ ಸಲಹೆಗಳನ್ನು ನೀಡುತ್ತದೆ. ಈ ಮೂಲಕ ಆಡಳಿತಾಂಗ ಕೇವಲ ನೀತಿ ಅನುಷ್ಠಾನದ ಜೊತೆಗೆ ನೀತಿ ರಚನಾ ಕಾರ್ಯದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ನಿಯೋಜಿತ ಶಾಸನದಲ್ಲಿ ಆಡಳಿತಾಂಗವು ಶಾಸನಗಳಿಗೆ ಆಗತ್ಯ ವಿವರಗಳನ್ನು ತುಂಬುವ ಮೂಲಕ ಕಾರ್ಯಾಂಗಕ್ಕೆ ಸಹಾಯ ಮಾಡುತ್ತದೆ,
ವ್ಯಾಪ್ತಿ : ಸಾರ್ವಜನಿಕ ಆಡಳಿತದ ವ್ಯಾಪ್ತಿಯ ಕುರಿತು ಚಿಂತಕರಲ್ಲಿ ಭಿನ್ನಾಭಿಪ್ರಾಯಗಳಿವೆ. ವೈಡೋಲ್ಲನ್, ಎಲ್.ಡಿ. ವೈಟ್' ಮುಂತಾದವರು ವ್ಯಾಪಕ ದೃಷ್ಟಿಕೋನವನ್ನು ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ. ಇವರ ಪ್ರಕಾರ ಸರಕಾರದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸಾರ್ವಜನಿಕ ಆಡಳಿತವು ಒಳಗೊಳ್ಳುತ್ತದೆ.
ಲೂಥರ್ ಗುರ್ಲಿ, ಸೈಮನ್ ಮುಂತಾದವರು ಸಂಕುಚಿತ ದೃಷ್ಟಿಕೋನವನ್ನು ಹೊಂದಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಇವರ ಪ್ರಕಾರ ಸಾರ್ವಜನಿಕ ಆಡಳಿತದ ವ್ಯಾಪ್ತಿಯು ಕೇವಲ ಸರ್ಕಾರದ ಅಂಗವಾದ ಕಾರ್ಯಾಂಗದ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಪೋಸ್ಟ್‌ಕಾರ್ಟ್ (POSD CORB) ದೃಷ್ಟಿಕೋನ
ಫರ್ ಗುಲಿಕರು ಸಾರ್ವಜನಿಕ ಆಡಳಿತದ ವ್ಯಾಪ್ತಿಯನ್ನು ಸಕಾರ್ವ” (POSD CORB) ಎಂಬ ಇಂಗ್ಲಿಷ್ ಪದದಲ್ಲಿ ಸೂಚಿಸಿದ್ದಾರೆ. ಇಂಗ್ಲಿಷ್ ಪದದ ಪ್ರತಿಯೊಂದು ಅಕ್ಷರವೂ ಸಾರ್ವಜನಿಕ ಆಡಳಿತದ ಒಂದೊಂದು ಕಾರ್ಯವನ್ನು ಸೂಚಿಸುತ್ತದೆ.
1) P- ಯೋಜನೆ (Planning): ಸರ್ಕಾರಿ ಯಂತ್ರ ಕೈಗೊಳ್ಳಬೇಕಾದ ಕಾರ್ಯಸೂಚಿ, ನಿರ್ವಹಿಸಬೇಕಾಗಿರುವ ಕಾರ್ಯಗಳು ಮತ್ತು ಅವುಗಳನ್ನು ಅನುಷ್ಠಾನಕ್ಕೆ ತರಲು ವಿಧಾನಗಳನ್ನು ಕುರಿತಂತೆ ಸ್ಕೂಲ ರೂಪರೇಷೆಯ ಯೋಜನೆ ಸಿದ್ಧಪಡಿಸುವುದು.
2) O-ಸಂಘಟನೆ (Organisation): ಉದ್ದೇಶಿತ ಸಾಧನೆಗಾಗಿ ಇಲಾಖೆ, ನಿಗಮ, ವಿಭಾಗ, ಉಪವಿಭಾಗ, ಮುಂತಾದ ಆಡಳಿತ ವ್ಯವಸ್ಥೆಯನ್ನು ರೂಪಿ ಮತ್ತು ನಿರ್ವಹಿಸಬೇಕಾದ ಕಾರ್ಯಗಳನ್ನ ವಿವಿಧ ಇಲಾಖೆಗಳಿಗೆ ಹಂಚುವುದು.
3) S ಸಿಬ್ಬಂದಿ ವ್ಯವಸ್ಥೆ (Staffing): ಆಡಳಿತ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಸಿಬ್ಬಂದಿಯ ನೇಮಕ, ತರಬೇತಿ ಹಾಗೂ ಸೇವಾ ನಿಯಮಗಳನ್ನು ನಿರ್ಧರಿಸುವುದು,
4) D-ನಿದೇರ್ಶನ (Direction) : ಸರ್ಕಾರದ ವಿವಿಧ ಇಲಾಖೆಗಳಿಗೆ ಆದೇಶ ಹಾಗೂ ನಿರ್ದೇಶನ ನೀಡುವುದು ಮತ್ತು ತೀರ್ಮಾನ ಕೈಗೊಳ್ಳುವುದು,
5) Co-ಸಂಯೋಜನೆ (Co-ordination): ಸರ್ಕಾರದ ವಿವಿಧ ಇಲಾಖೆಗಳಲ್ಲಿ ಘರ್ಷಣೆ, ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಅವುಗಳ ಕಾರ್ಯಗಳನ್ನು ಸಂಯೋಜನೆಗೊಳಿಸುವುದು
6) R-ವರದಿ (Reporting): ಉನ್ನತಾಧಿಕಾರಿಗಳಿಗೆ ಅಧೀನಾಧಿಕಾರಿಗಳು ವಿವಿಧ ಇಲಾಖೆಗಳ ಕಾರ್ಯ ಚಟುವಟಿಕೆಗಳ ಬಗ್ಗೆ ವರದಿ ಸಲ್ಲಿಸುವುದು ಮತ್ತು ದಾಖಲೆ, ಸಂಶೋಧನೆ ಮತ್ತು ತನಿಖೆಯ ಮೂಲಕ ಶಾಸಕಾಂಗಕ್ಕೆ ವರದಿ ನೀಡುವುದು.
7) B ಆಯವ್ಯಯ (Budgeting): ಹಣಕಾಸಿನ ಯೋಜನೆ, ಆಯವ್ಯಯ, ಆಚಾರ, ಲೆಕ್ಕಪರಿಶೋಧನೆ, ಮುಂತಾದವುಗಳ ನಿರ್ವಹಣೆಯಾಗಿರುತ್ತದೆ.
ಸಾರ್ವಜನಿಕ ಆಡಳಿತದ ವ್ಯಾಪ್ತಿ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದೆ. ಇದು ರಕ್ಷಣಾತ್ಮಕ ಮತ್ತು ನಿಯಂತ್ರಣಾತ್ಮಕ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ನಾಗರಿಕ ಸಮಾಜ ಬೆಳೆದು ಸಾರ್ವಜನಿಕ ಆಡಳಿತದ ವ್ಯಾಪ್ತಿ ವಿಸ್ತರಣೆಯಾಗುತ್ತದೆ. ಜನರ ಅಪೇಕ್ಷೆ ಮತ್ತು ಆಕಾಂಕ್ಷೆಗಳು ಇದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ಮೃತಗೊಳಿಸಿವೆ.
ಕಾಮೆಂಟ್ ಪೋಸ್ಟ್ ಮಾಡಿ