ರಾಜ್ಯಶಾಸ್ತ್ರವು ಒಂದು ಸಮಾಜ ವಿಜ್ಞಾನ, ಇದು ಮಾನವನ ಜೀವನದ ರಾಜಕೀಯ ಚಟುವಟಿಕೆಗಳಿಗೆ ಮತ್ತು ರಾಜ್ಯದ ರೂಪರೇಷಗಳಿಗೆ ಸಂಬಂಧಿಸಿದ್ದಾಗಿದೆ. ಇದು ರಾಜ್ಯ ಮತ್ತು ಸರ್ಕಾರಕ್ಕೂ ಸಂಬಂಧಿಸಿದೆ. ರಾಜ್ಯದ ಉಗಮ ಲಕ್ಷಣ ಹಾಗೂ ರಾಜಕೀಯ ಸಂಸ್ಥೆಗಳ ಅಧ್ಯಯನ ಮಾಡುತ್ತದೆ. ರಾಜ್ಯದ ಬಗೆಗಿನ ಆಧ್ಯಯನವೇ ರಾಜ್ಯಶಾಸ್ತ್ರದ ಮುಖ್ಯ ವಿಷಯವಾಗಿದೆ.
ರಾಜ್ಯಶಾಸ್ತ್ರದ ಮೂಲವನ್ನು ನಾವು ಗ್ರೀಸ್ ದೇಶದಲ್ಲಿ ಕಾಣಬಹಲು, ಕರಿಗಿಂತಲೂ ಮೊದಲು ಈಜಿಪ್ಟಿಯನ್ನರು, ಬೆಬಿಲೋನಿಯರು, ಪರ್ಷಿಯನ್ನರು, ಭಾರತೀಯರು ಹಾಗೂ ಚೀನಿಯರು ‘ರಾಜನೀತಿಗೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳನ್ನು ವ್ಯಕ್ತಪಡಿಸಿದ್ದರೂ ಸಹ ಅವರು ರಾಜ್ಯಶಾಸ್ತ್ರವನ್ನು ಒಂದು ಕ್ರಮಬದ್ಧ ಅಧ್ಯಯನವನ್ನಾಗಿ ಅಭಿವೃದ್ಧಿಪಡಿಸಲಿಲ್ಲ. ಕೊಟ್ಟವರೇ ಗೀಕರು. ರಾಜ್ಯಶಾಸ್ತ್ರಕ್ಕೆ ಒಂದು ಸ್ವತಂತ್ರ ವಿಜ್ಞಾನದ ಸ್ಥಾನಮಾನ
ಗ್ರೀಕ್ ತತ್ವಜ್ಞಾನಿಗಳಾದ ಸಾಕ್ರೆಟೀಸ್ ಮತ್ತು ಆತನ ರ ಪ್ಲೇಟೊ ರಾಜ್ಯಶಾಸ್ತ್ರದ ಚಿಂತಕರಾಗಿದ್ದರು. ಪ್ಲೇಟೋ: ತನ್ನ ರಿಪಬ್ಲಿಕ್’ ಎಂಬ ಮಹಾಕೃತಿಯಲ್ಲಿ ಪ್ರಥಮ ಬಾರಿಗೆ ರಾಜ್ಯ ಮತ್ತು ಸರ್ಕಾರದ ಸ್ವರೂಪ ಮತ್ತು ಕರ್ತವ್ಯಗಳ ಬಗ್ಗೆ ಚರ್ಚಿಸಿದ್ದಾರೆ. ಆದರೆ ಗ್ರೀಸ್ ದೇಶದ ಮತ್ತೊಬ್ಬ ದಾರ್ಶನಿಕ ಅರಿಸ್ಟಾಟಲನಿಗೆ ರಾಜ್ಯಶಾಸ್ತ್ರದ ‘ಪಿತಾಮಹ’ ಎಂದು ಗೌರವ ನೀಡಲಾಗಿದೆ, ಏಕೆಂದರೆ, ಅರಿಸ್ಟಾಟಲ್ ರಾಜ್ಯಶಾಸ್ತ್ರ ಅಧ್ಯಯನವನ್ನು ಕ್ರಮಬದ್ಧಗೊಳಿಸಿ ರಾಜ್ಯಶಾಸ್ತ್ರಕ್ಕೆ ತಳಪಾಯ ಹಾಕಿದ ಪ್ರಥಮ ಚಿಂತಕರೆನಿಸಿದ್ದಾರೆ. ಅರಿಸ್ಟಾಟಲ್ ರಾಜ್ಯಶಾಸ್ತ್ರವನ್ನು ಕುರಿತು ಪ್ರಪಂಚದಲ್ಲಿಯೇ ಪ್ರಥಮ ಗಂಭ ಪಾಲಿಟೆಕ್’ ಎಂಬ ಕೃತಿಯನ್ನು ರಚಿಸಿದನು. ಈ ಕೃತಿಯಲ್ಲಿ ರಾಜ್ಯದ ಉಗಮ, ಬೆಳವಣಿಗೆ ಮತ್ತು ಕಾರ್ಯಗಳ ಬಗ್ಗೆ ಚರ್ಚಿಸಲಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರ’ ದಲ್ಲಿಯೂ ರಾಜಕೀಯ ನೀತಿಗಳ ಬಗ್ಗೆ ಬಹಳಷ್ಟು ವಿವರಗಳಿವೆ.
ಪ್ರಾಚೀನ ಗೀಕರು ರಾಜ್ಯದ ಸಮಸ್ತ ಚಟುವಟಿಕೆಗಳಿಗೂ ಅನ್ವಯಿಸಿ ಪಾಲಿಟಿಕ್ಸ್ (ರಾಜಕಾರಣ) ಎಂಬ ಪದವನ್ನು ಬಳಸುತ್ತಿದ್ದರು. ‘ಪಾಲಿಟಿಕ್ಸ್’ ಎಂಬ ಪದ ನಗರ ರಾಜ್ಯ’ (City – State) ಎಂಬ ಅರ್ಥವುಳ್ಳ ಮೂಲ ಪೀಕ್ ಪದವಾದ ‘ಪೊಲಿಸ್” (Plis) ಎಂಬುದರಿಂದ ಹುಟ್ಟಿ ಬಂದಿದೆ. ಗೀಕರಿಗೆ ನಗರವೆ ರಾಜ್ಯವಾಗಿತ್ತು ಮತ್ತು ನಗರ ರಾಜ್ಯದ ಆಡಳಿತದ ಅಧ್ಯಯನವೆ: ರಾಜಕಾರಣವಾಗಿದ್ದಿತು. ಆಧುನಿಕವಾಗಿ ತಜ್ಞರು ರಾಜ್ಯಶಾಸ್ತ್ರ ಎಂದು ಕರೆದಿದ್ದಾರೆ.
ರಾಜ್ಯಶಾಸ್ತ್ರವು (ಪೊಲಿಟಿಕಲ್‌ಸೈನ್) ರಾಜ್ಯದ ಮೂಲ, ಬೆಳವಣಿಗೆ, ಸ್ವರೂಪ, ಆಡಳಿತ ಪದ್ಧತಿ, ರಾಜ್ಯದ ಉರವ್ಯಾಪ್ತಿ, ಪೌರರ ಹಕ್ಕು ಬಾಧ್ಯತೆಗಳು ಮುಂತಾದ ವಿಷಯಗಳನ್ನು ಕುರಿತು ಅಧ್ಯಯನ ಮಾಡುತ್ತದೆ. ರಾಜ್ಯಶಾಸ್ತ್ರವು ರಾಜ್ಯದ ಎಲ್ಲ ಮುಖಗಳ ಅಧ್ಯಯನವಾಗಿದೆ.
ರಾಜ್ಯಶಾಸ್ತ್ರವು ರಾಜ್ಯದ ಭೂತ, ವರ್ತಮಾನ ಹಾಗೂ ಭವಿಷ್ಯದ ರಾಜಕೀಯ ಸಂಸ್ಥೆಗಳು, ರಾಜಕೀಯ ಕಾರ್ಯಗಳು ಹಾಗೂ ರಾಜಕೀಯ ಸಿದ್ಧಾಂತಗಳ ಅಧ್ಯಯನವಾಗಿರುತ್ತದೆ. ರಾಜ್ಯ ಸರ್ಕಾರ ಮತ್ತು ಮಾನವನ ರಾಜಕೀಯ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ವಿಷಯವೇ ರಾಜ್ಯಶಾಸ್ತ್ರವೆಂದು ಸಾಮಾನ್ಯವಾಗಿ ಹೇಳಬಹುದು.
ರಾಜ್ಯಶಾಸ್ತ್ರದ ಪ್ರಾಮುಖ್ಯತ
ಪ್ರಸ್ತುತ ಯುಗದಲ್ಲಿ ರಾಜ್ಯಶಾಸ್ತ್ರದ ಜ್ಞಾನವು ಪತಿಯೊಬ್ಬರಿಗೂ ಅತ್ಯಂತ ಅವಶ್ಯಕವಾದುದ್ದಾಗಿದೆ. ರಾಜ್ಯವೊಂದರ ಅಭಿವೃದ್ಧಿ ಮತ್ತು ಪ್ರಗತಿಯು ಅಲ್ಲಿನ ಜನಗಳ ಅಲೋಚನೆ, ಜ್ಞಾನ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ.
ರಾಜ್ಯಶಾಸ್ತ್ರವು ರಾಜ್ಯವೊಂದರ ಉಗಮ ಮತ್ತು ದೆವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ರಾಜ್ಯದ ಕಾರ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ಮತ್ತು ವಿವಿಧ
ಸರ್ಕಾರಗಳು ತೊಡಗಿಸಿಕೊಂಡಿರುವುದರ ಬಗ್ಗೆ ಮಾಹಿತಿಯನ್ನು ರಾಜ್ಯಶಾಸ್ತ್ರವು ಒದಗಿಸುತ್ತದೆ, ರಾಜ್ಯಶಾಸ್ತ್ರವು ಚಕ್ರಾಧಿಪತ್ಯ, ಸಮಾನತೆ, ನ್ಯಾಯ, ಸ್ವಾತಂತ್ರ್ಯ, ಉತ್ತಮ ಸರ್ಕಾರ, ಯುದ್ಧ ಮತ್ತು ಶಾಂತಿ ಇತ್ಯಾದಿ ಪರಿಕಲ್ಪನೆಗಳ ಉಗಮ ಮತ್ತಾ ಬೆಳವಣಿಗೆ ಬಗ್ಗೆ ಮಾಹಿತಿ ಒದಗಿಸುತ್ತದೆ.
# ರಾಜ್ಯಶಾಸ್ತ್ರವು ರಾಜ್ಯ ಮತ್ತು ಸರ್ಕಾರಗಳ ರಚನೆ ಮತ್ತು ಕಾರ್ಯಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ರಾಜ್ಯಶಾಸ್ತ್ರವು ಸರ್ಕಾರದ ಭೂತ ಮತ್ತ ವರ್ತಮಾನ ಕಾಲದ ಚಟುವಟಿಕೆಗಳ ಬೆಳಕಿನಡಿಯಲ್ಲಿ ಭವಿಷ್ಯದ ಚಟುವಟಿಕೆಗಳನ್ನು ಯೋಜಿಸಲು ಸಹಕರಿಸುವುದರ ಜೊತೆಗೆ ಆಧುನಿಕ ಕಲ್ಯಾಣ ರಾಜ್ಯದ ಸ್ಥಾಪನೆಗೆ ಸಹಾಯಕವಾಗುತ್ತದೆ.
# ರಾಜ್ಯಶಾಸ್ತ್ರವು ರಾಜ್ಯದ ಸಂವಿಧಾನ ಮತ್ತು ಕಾನೂನುಗಳ ಬಗೆಗಿನ ಜ್ಞಾನವನ್ನು ಒದಗಿಸುತ್ತದೆ. ರಾಜ್ಯಶಾಸ್ತ್ರವು ಸರ್ಕಾರದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಮತ್ತು ಅವುಗಳ ಕಾರ್ಯಗಳ ಬಗ್ಗೆ ತಿಳುವಳಿಕೆ ನೀಡುತ್ತದೆ.
ರಾಜ್ಯಶಾಸ್ತ್ರವು ಸಾಮಾನ್ಯ ಜನರಲ್ಲಿ ರಾಜಕೀಯ ಪ್ರಜೆಯನ್ನು ಜಾಗೃತಗೊಳಿಸುವುದರ ಮೂಲಕ ಸರ್ಕಾರ ಮತ್ತು ಜನಪದಿಗಳು ಜಾಗೃತವಾಗಿಯೂ ಮತ್ತು ಸಕ್ರಿಯವಾಗಿ ಇರುವಂತೆ ನೋಡಿಕೊಳ್ಳುತ್ತದೆ.
ರಾಜ್ಯಶಾಸ್ತ್ರದ ಜ್ಞಾನವೇ ಉತ್ತಮ ನಾಯಕರು ಮತ್ತು ಸಮಾಜಸೇವಕರುಗಳು ಜನರ ಸಮಸ್ಯೆಗಳನ್ನು ತಿಳಿದು ಪರಿಣಾಮಕಾರಿಯಾದ ಪರಿಹಾರ ಕ್ರಮಗಳನ್ನು ಅನುಸರಿಸಲು ಸಹಾಯಕವಾಗುತ್ತದೆ.
ರಾಜ್ಯಶಾಸ್ತ್ರದ ಜ್ಞಾನದ ಉತ್ತಮ ನಾಯಕರುಗಳನ್ನು ಮತ್ತು ಉತ್ತಮ ನಾಗರಿಕರನ್ನು ಸೃಷ್ಟಿಸುವಲ್ಲಿ ಸಹಕರಿಸುತ್ತದೆ.
ರಾಜ್ಯಶಾಸ್ತ್ರವು ರಾಜಕೀಯ ಸಂಸ್ಥೆಗಳಾದಂತಹ ರಾಜಕೀಯ ಪಕ್ಷಗಳು, ಒಕ್ಕೂಟಗಳು, ಸ್ಥಳೀಯ ಸಂಸ್ಥೆಗಳು ಇತ್ಯಾದಿಗಳನ್ನು ತಿಳಿಯಲು ಸಹಾಯಕವಾಗುತ್ತವೆ. ಜನರು ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಪೂರಕವಾಗುವ ತತ್ವ ಹಾಗೂ ನೀತಿಗಳನ್ನು ಪ್ರೋತ್ಸಾಹಿಸಲು ರಾಜ್ಯಶಾಸ್ತ್ರವು ನೆರವಾಗುತ್ತದೆ.
ರಾಜ್ಯಶಾಸ್ತ್ರವು ಅಂತಾರಾಷ್ಟ್ರೀಯ ಸಂಬಂಧಗಳ ಬಗೆಗಿನ ಜ್ಞಾನವನ್ನು ನೀಡುವುದರ ಜೊತೆಗೆ ವಿಶೇಷವಾಗಿ ದೇಶದೇಶಗಳ ನಡುವಿನ ಯುದ್ಧಗಳ ಬಗ್ಗೆ ಹಾಗೂ ಶಾಂತಿ ಮತ್ತು ಸಹಕಾರದ ಮಹತ್ವವನ್ನು ತಿಳಿಸುತ್ತದೆ.
ಈ ಮೇಲಿನ ಎಲ್ಲಾ ಕಾರಣಗಳಿಂದಾಗಿ ರಾಜ್ಯಶಾಸ್ತ್ರದ ಅಧ್ಯಯನವು ರಾಜ್ಯವೊಂದರ ಅವಶ್ಯಕತೆ, ಉತ್ತಮ ರಾಜ್ಯಾಡಳಿತ, ನಾಯಕರುಗಳ ಪಾತ್ರ ಹಾಗೂ ಪ್ರಜೆಗಳ ಭಾಗವಹಿಸುವಿಕೆಯ ಸ್ಪಷ್ಟ ಅರಿವನ್ನುಂಟುಮಾಡುತ್ತದೆ, ರಾಜ್ಯಶಾಸ್ತ್ರವು ಪ್ರಜೆಗಳೆಲ್ಲರೂ ಉತ್ತಮ, ಜವಾಬ್ದಾರಿಯುತ, ಸುಸಂಸ್ಕೃತ ಮತ್ತು ಕ್ರಿಯಾಶೀಲ ನಾಗರಿಕರಾಗುವಂತೆ ಸಹಕರಿಸುತ್ತದೆ. ರಾಜ್ಯಶಾಸ್ತ್ರದ ಜ್ಞಾನವು ನ್ಯಾಯಯುತ, ಶಾಂತ, ಪ್ರಗತಿದಾಯಕ ಮತ್ತು ಸುಖಿ ರಾಜ್ಯವನ್ನು ಸಂಸ್ಥಾಪಿಸುವಲ್ಲಿ ಮಹತ್ತರ ಕೊಡುಗೆಯನ್ನು ನೀಡುವುದರ ಮೂಲಕ ಸಹಸ್ರ ಸಹಸ್ರ ಸಂಖ್ಯೆಯ ಜನರ ಕನಸನ್ನು ನನಸಾಗಿಸುತ್ತದೆ.
ಕಾಮೆಂಟ್ ಪೋಸ್ಟ್ ಮಾಡಿ