ಪ್ರಥಮ ಮಹಾಯುದ್ಧ
1914ಕ್ಕೂ ಹಿಂದೆ ಯುರೋಪಿನ ಪ್ರಬಲ ರಾಷ್ಟ್ರಗಳಾದ ಬ್ರಿಟನ್, ಜರ್ಮನಿ, ಫ್ರಾನ್ಸ್, ಇಟಲಿ, ಆಸ್ಟೋ-ಹಂಗೇರಿಯನ್ ಸಾಮ್ರಾಜ್ಯ ಮತ್ತು ರಷ್ಯಾ ವಸಾಹತುಗಳ ಮೇಲೆ ಹಿಡಿತ ಸಾಧಿಸುವ ಕಾರಣಕ್ಕಾಗಿ ನಿರಂತರವಾದ ಸಂಘರ್ಷದಲ್ಲಿದ್ದವು. ಕೈಗಾರಿಕಾ ಕ್ರಾಂತಿ ಮತ್ತು ನೂತನ ಅವಿಷ್ಕಾರಗಳು ಯುರೋಪಿನ ದೇಶಗಳಲ್ಲಿ ತೀವ್ರವಾದ ಪೈಪೋಟಿಯನ್ನು ಸೃಷ್ಟಿಸಿದವು. ಒಳಗೊಂಡು ಜಗತ್ತಿನ ನೂರಾರು ದೇಶಗಳ ಮಾರುಕಟ್ಟೆಯನ್ನು ಮತ್ತು ಅಲ್ಲಿನ ಸಂಪನ್ಮೂಲವನ್ನು ಕಬಲಿಸಬೇಕೆಂಬ ದುರಾಲೋಚನೆಯಿಂದ ಈ ಯುರೋಪಿಯನ್ ದೇಶಗಳು ವಸಾಹತುವಿನ ಸಂಚನ್ನು ರೂಪಿಸಿದವು. ಈ ಪ್ರಕ್ರಿಯೆಯಲ್ಲಿ ಉಂಟಾದ ಸಂಕೀರ್ಣ ಒಪ್ಪಂದಗಳು ಭೌಗೋಳಿಕ ಗಡಿಗಳ ಸಮಸ್ಸೆಗಳನ್ನು ಜ್ವಲಂತಗೊಳಿಸಿದವು. ಇದು ಯುರೋಪಿನ ಬಲಾಢ್ಯ ದೇಶಗಳ ನಡುವಿನ ಶಕ್ತಿ ಸಮತೋಲನವನ್ನು ಏರುಪೇರು ಮಾಡುತ್ತಿತ್ತು.
ಇದರಿಂದಾಗಿ ಪ್ರತಿಯೊಂದು ಬಲಾಡ್ಯ ಅತಿಯಾದ ಮಿಲಿಟರೀಕರಣವನ್ನು ಮಾಡಿತು. ಅನೇಕ ಮೈತ್ರಿಕೂಟಗಳು ಏರ್ಪಟ್ಟವು. ಅತಿಯವು ನೀತಿಗಳು ಬಲಗೊಂಡವು. ಮೊದಲ ರಾಷ್ಟ್ರೀಯತೆಯು ಅಲ್ಲಲ್ಲಿ ಬೆಳೆಯಿತು. ಸಾಮ್ರಾಜ್ಯವಾದದ ಈ ದೇಶಗಳನ್ನು ಎರಡು ವಿರುದ್ಧ ಬಣಗಳನ್ನಾಗಿ ವಿಭಜಿಸಿತು. ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ಕದನ ಬಾಂಧವ್ಯತ್ರಯ (Triple Entente) ಮೈತ್ರಿಕೂಟ ಎನಿಸಿದರೆ ಜರ್ಮನಿ, ಆಸ್ಟ್ರಿಯಾ-ಹಂಗೇರಿ ಮತ್ತು ಇಟಲಿ ಕದನ ಸೌಹಾರ್ದತ್ರಯ (Triple Alliance) ಮೈತ್ರಿಕೂಟವನ್ನು ರಚಿಸಿಕೊಂಡವು. ಸ್ವಲ್ಪಕಾಲದಲ್ಲೇ ಇಟಲಿ ವಿರೋಧಿ ಬಣಕ್ಕೆ ಸೇರಿಕೊಂಡಿತು. ಯುದ್ಧ ಬೆಳೆದಂತೆಲ್ಲಾ ಗುಂಪುಗಳಲ್ಲಿ ಬದಲಾವಣೆಗಳಾದವು.
ಮೊದಲ ಮಹಾಯುದ್ಧ 1914 ರಿಂದ 1918ರವರೆಗೆ ನಡೆಯಿತು. ಯುದ್ಧ ಪ್ರಾರಂಭವಾಗುವುದಕ್ಕೆ ತಕ್ಷಣದ ಕಾರಣವೆಂದರೆ, ಜುಲೈ 28 ರಂದು ಆಸ್ಟ್ರಿಯಾದ ರಾಜಕುಮಾರ ಆರ್ಕ್‌ಡ್ಯೂಕ್ ಫ್ರಾನ್ಸಿಸ್ ಫರ್ಡಿನೆಂಡ್‌ನ ಹತ್ಯೆಯಾಯಿತು. ಈ ಘಟನೆಯು ಆಸ್ಟ್ರಿಯಾ ಮತ್ತು ಸರ್ಬಿಯಾ ದೇಶಗಳ ನಡುವೆ ತಕ್ಷಣವೇ ಬಿಕ್ಕಟ್ಟನ್ನು ಸೃಷ್ಟಿಸಿತು.
ಯುದ್ಧದ ಪ್ರಾರಂಭದಲ್ಲಿ ಅಮೆರಿಕ ತಟಸ್ಥವಾಗಿತ್ತು. ರಷ್ಯಾ ಜರ್ಮನಿಯ ವಿರುದ್ಧವಾಗಿತ್ತು. ಯುದ್ಧ ಕೊನೆ ಹಂತ ತಲುಪುವಾಗ ಪರಿಸ್ಥಿತಿ ಬದಲಾಯಿತು. ಅಮೆರಿಕವು ಬ್ರಿಟನ್ ಮತ್ತು ಫ್ರಾನ್ಸ್ ಜೊತೆ ಸೇರಿತು. ನವೆಂಬರ್ 1917ರಲ್ಲಿ ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ಸಂಭವಿಸಿ ಜರ್ಮನಿಯೊಂದಿಗೆ ಯುದ್ಧ ನಿಲುಗಡೆ ಒಪ್ಪಂದವನ್ನು ಮಾಡಿಕೊಂಡು ಯುದ್ಧದಿಂದ ಹಿಂದೆ ಸರಿಯಿತು. ಮೈತ್ರಿಬಣದ ದಾಳಿಗಳಿಂದ ಜರ್ಜರಿತವಾದ ಜರ್ಮನಿ ಯುದ್ಧವನ್ನು ಮುಂದುವರಿಸಲಾಗದೆ ಸೋಲೊಪ್ಪಿಕೊಂಡಿತು.
ಮೈತ್ರಿಕೂಟದ 1919ರಲ್ಲಿ ವಿಶೇಷವಾಗಿ ಜರ್ಮನಿಗೆ ಅತ್ಯಂತ ಆವಮಾನಕಾರಿಯಾದ ವರ್ಸೆಲ್ಸ್ ಒಪ್ಪಂದಕ್ಕೆ ಸಹಿ ಹಾಕಿತು. ಅಸ್ಫೋ-ಹಂಗೇರಿ ಮತ್ತು ಆಟೋಮನ್ ಸಾಮ್ರಾಜ್ಯಗಳು ತಮ್ಮ ಅಸ್ತಿತ್ವ ಕಳೆದುಕೊಂಡವು, ಜರ್ಮನಿ ತನ್ನ ಹೆಚ್ಚಿನ ಪ್ರದೇಶಗಳನ್ನು ಕಳೆದುಕೊಂಡಿತು. ಯುರೋಪಿನ ಭೂಪಟವೇ ಬದಲಾಗಿ ಹೋಯಿತು. ಹಲವಾರು ಸಣ್ಣ ಸ್ವತಂತ್ರ ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದವು, ಮುಂದಿನ ದಿನಗಳಲ್ಲಿ ಸಂಭವನೀಯ ಯುದ್ಧಗಳನ್ನು ತಡೆಯುವ ದೃಷ್ಟಿಯಿಂದ ರಾಷ್ಟ್ರಸಂಘ (ಲೀಗ್ ಆಫ್ ನೇಷನ್) 1919ರಲ್ಲಿ ರಚನೆಯಾಯಿತು. ಸೋತ ರಾಷ್ಟ್ರಗಳೊಳಗೆ ಬೆಳೆದ ಅವಮಾನಕರ ಭಾವನೆಗಳು ಉಗ್ರ ರಾಷ್ಟ್ರೀಯತೆಗೆ ಕಾರಣವಾಯಿತು. ಜರ್ಮನಿಯ ಮೇಲೆ ಹೇರಲಾದ ಯುದ್ಧನಷ್ಟ ಪರಿಹಾರ ಮತ್ತು ಇತರ ತೀರ್ಮಾನಗಳು ಅಲ್ಲಿನ ಜನರ ಮೇಲೆ ಪರಿಣಾಮ ಬೀರಿದವು. ನಿರುದ್ಯೋಗ, ಬಡತನ, ಬೆಳವಣಿಗೆ ಕುಶದಿಂದ ಉಂಟಾದ ಅತೃಪ್ತಿಯನ್ನು ಜರ್ಮನ್ ಕೈಗಾರಿಕೋದ್ಯಮಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಂಡರು. ಎರಡನೆಯ ಪ್ರಪಂಚ ಯುದ್ಧಕ್ಕೆ ಕಾರಣವಾದ ಹಿಟ್ಲರ್‌ನಂತರ ಸರ್ವಾಧಿಕಾರಿಯ ಬೆಳವಣಿಗೆಗೆ ಇದು ಸಹಾಯ ಮಾಡಿ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಅಮೆರಿಕದ ಶಸ್ತ್ರಾಸ್ತ್ರ ತಯಾರಿಸುವ ವ್ಯಾಪಾರಸ್ಥರು ಆಪಾರ ಪ್ರಮಾಣದಲ್ಲಿ ಲಾಭವನ್ನು ಮಾಡಿದರು.
ನಿಮಗಿದು ತಿಳಿದಿರಲಿ : ಮೊದಲ ಮಹಾಯುದ್ಧದಲ್ಲಿ ಎರಡೂ ಬಣಗಳ ನಾಗರಿಕರು ಮತ್ತು ಸೈನಿಕರೂ ಸೇರಿದಂತೆ ಸುಮಾರು 1,00,00,000 ಜನ ಸಾಣ ಕಳೆದುಕೊಂಡರು. 2,00,00,000 ಜನ ಗಾಯಗೊಂಡರು ಮತ್ತು 35,00,000 ಜನ ಶಾಶ್ವತವಾಗಿ ಅಂಗವಿಕಲರವರು, ಯಾವುದೇ ಯುದ್ಧದ ರೀತಿಯಲ್ಲಿ ಮೊದಲ ಮಹಾಯುದ್ಧವೂ ಸಹ ಕೆಲವರ ಲಾಭಕ್ಕಾಗಿ ಪೈನೈಟಿಯಿಂದ ನಡೆಯಿತು. ಆದರೆ ಅಪಾರವಾದ ಸವ-ಗೋತ್ರಗಳು ಸಂಭವಿಸಿದವು.
ರಷ್ಯಾ ಕ್ರಾಂತಿ
ರಷ್ಯಾ ಜಗತ್ತಿನ ಉಳಿದ ಎಲ್ಲಾ ದೇಶಗಳಿಗಿಂತಲೂ ವಿಸ್ತೀರ್ಣದಲ್ಲಿ ದೊಡ್ಡದು. 19ನೆಯ ಶತಮಾನದಲ್ಲಿ ರಷ್ಟಾವನ್ನು ಝಾರ್ ದೊರೆಗಳು ಆಳುತ್ತಿದ್ದರು. ಅವರು ತಮ್ಮ ಕೆಳಗಿದ್ದ ಕುಲೀನರು, ಜನ್ಸಾರರು ರೈತರನ್ನು ಮತ್ತು ಬಡವರನ್ನು ತೀವ್ರವಾಗಿ ಶೋಷಿಸುತ್ತಿದ್ದರು. ಸಣ್ಣದಾಗಿ ಬೆಳೆಯುತ್ತಿದ್ದ ಬಂಡವಾಳದಾರರು ಕಾರ್ಮಿಕರನ್ನು ಮತ್ತು ಇತರರನ್ನು ಶೋಷಿಸುತ್ತಿದ್ದರು. ಝಾರ್ ಚಕ್ರವರ್ತಿಗಳ ಆಳ್ವಿಕೆಯಿಂದ ಜನರು ತುಂಬಾ ಬೇಸತ್ತಿದ್ದರು. ಝಾರ್‌ಶಾಹಿಯನ್ನು ರಾಷ್ಟ್ರೀಯತೆಗಳ ಜೈಲು ಎಂದು ಕರೆಯಲಾಗುತ್ತಿತ್ತು. 1915ರಲ್ಲಿ ಜಪಾನ್‌ನಂತಹ ಪುಟ್ಟ ದೇಶ ರಷ್ಯಾವನ್ನು ಸೋಲಿಸಿದ್ದು ದೇಶದೊಳಗೆ ಝಾರ್ ದೊರೆಗಳ ವಿರುದ್ಧ ವ್ಯಾಪಕವಾದ ಪ್ರತಿರೋಧವನ್ನು ಎಬ್ಬಿಸಿತು. ಇದರಿಂದಾಗಿ ಅನೇಕ ದಂಗೆಗಳು ನಡೆದವು. ಕಾರ್ಮಿಕರು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದರು. ಕಾರ್ಖಾನೆಗಳ ಕಾರ್ಮಿಕರು ಮತ್ತು ಹಳ್ಳಿಗಳ ರೈತರು ಶಸ್ತ್ರಗಳನ್ನು ಹಿಡಿದು ಹೋರಾಡಿದರು. ಇದನ್ನು ಝಾರ್‌ನ ಸೈನ್ಯ ನಿರ್ದಯವಾಗಿ ಹತ್ತಿಕ್ಕಿತು. ಇದರ ಅನುಭವದಲ್ಲಿ ಮುಂದೆ ಕ್ಲಾಡಿಮಿರ್ ಇಲಿಚ್ ಲೆನಿನ್ ರೈತರು ಮತ್ತು ಕಾರ್ಮಿಕರಿಗೆ ಕ್ರಾಂತಿಕಾರಿ ಮಾರ್ಗದರ್ಶನವನ್ನು ನೀಡಿದರು. ಇದರಿಂದಾಗಿ ದುಡಿಯುವ ಜನ ಹೋರಾಟಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡರು. ಇದೇ ಸಂದರ್ಭದಲ್ಲಿ ಲೆನಿನ್ ದೇಶ ಭ್ರಷ್ಟನಾಗಿದ್ದನು. ಮುಷ್ಕರಗಳ ತೀವ್ರತೆ ಹೆಚ್ಚಾಗಿ ರಷ್ಯಾದ ಕೊನೆಯ ದೊರೆ ಎರಡನೆಯ ನಿಕೋಲಸ್‌ನು ದೇಶ ತ್ಯಜಿಸಿ ಓಡಿಹೋದನು. ಇದನ್ನೇ 1917ರ 'ಫೆಬ್ರವರಿ ಕ್ರಾಂತಿ' ಎನ್ನುತ್ತಾರೆ. ಅಧಿಕಾರವನ್ನು ಉದಾರವಾದಿಗಳಾದ 'ಮೆನವಿಕ್'ರು ಪಡೆದುಕೊಂಡರು. ಇವರು ರಷ್ಯಾವನ್ನು ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸಿದರು.
ಆ ಕಾಲಕ್ಕೆ ದೇಶಭ್ರಷ್ಟರಾಗಿದ್ದ ಲೆನಿನ್ ವಾಪಸ್ ರಷ್ಯಾಗೆ ಬಂದು ಜನರಿಗೆ ಸರಳವಾದ 'ಶಾಂತಿ, ಆಹಾರ, ಭೂಮಿ' ಎಂಬ ಜನಪರ ಘೋಷಣೆಗಳನ್ನು ನೀಡಿದರು. ಇದಕ್ಕೆ ಕಾರ್ಮಿಕರು ಮತ್ತು ಗ್ರಾಮೀಣ ಬಡವರು ವ್ಯಾಪಕವಾಗಿ ಸ್ಪಂದಿಸಿದರು. ದುಡಿಮೆಗಾರರ ಪಕ್ಷದವರಾದ 'ಬೊಲ್ಕವಿಕ್'ರ ನೇತೃತ್ವದಲ್ಲಿ 1917ರ ಅಕ್ಟೋಬರ್‌ನಲ್ಲಿ ಕ್ರಾಂತಿ ಸಂಭವಿಸಿತು. ಲೆನಿನ್ ಕ್ರಾಂತಿ ಪಡೆಯನ್ನು ಸೇರಿ ಅಕ್ಟೋಬರ್ 1 ರಂದು ರಷ್ಯಾವನ್ನು ಸಮಾಜವಾದಿ ಗಣರಾಜ್ಯ ಎಂದು ಘೋಷಣೆ ಮಾಡಿದರು. ಇದನ್ನೆ ರಷ್ಯಾದ ಅಕ್ಟೋಬರ್ ಕ್ರಾಂತಿ' ಎನ್ನುತ್ತಾರೆ. ಲೆನಿನ್ ರಷ್ಯನ್ ಸರ್ಕಾರದ ಅಧ್ಯಕ್ಷರಾದರು.
ಲೆನಿನ್ ಅಧ್ಯಕ್ಷರಾದ ಕೂಡಲೇ ಎಲ್ಲಾ ಭೂಮಿ ರೈತರಿಗೆ ಸೇರಿದ್ದು ಎಂದು ಘೋಷಿಸಿದರು. ಎಲ್ಲಾ ರಷ್ಯನ್ನರಿಗೂ ಉಚಿತವಾದ ಶಿಕ್ಷಣ, ಕ್ರೀಡೆ, ಆರೋಗ್ಯ, ವಸತಿ ನೀಡುವಂಶ ಆರ್ಥಿಕ ಮತ್ತು ರಾಜಕೀಯ ನೀತಿಗಳನ್ನು ಜಾರಿ ಮಾಡಿದರು. ಕಾರ್ಲ್ ಮಾರ್ಕ್ಸ್‌ನ ವೈಜ್ಞಾನಿಕ ಸಮಾಜವಾದದ ಚಿಂತನೆಯನ್ನು ಪ್ರಾಯೋಗಿಕವಾಗಿ ಮೊದ ಬಾರಿಗೆ ಜಾರಿ ಮಾಡಿದ್ದು ಜೆನ್, ಇದು ಮಾನವಕುಲದ ಇತಿಹಾಸದಲ್ಲಿ ಕಂಡರಿಯದ ಸಾಮಾಜಿಕ ಪದ್ಧತಿಯಾಗಿತ್ತು. 1924ರಲ್ಲಿ ಲೆನಿನ್, ಇದನ್ನು ಬೆಳೆಸುವ ಹಂತದಲ್ಲಿ ನಿಧನರಾದರು,
ನಂತರ ರಷ್ಯಾದ ಅಧ್ಯಕ್ಷನಾದ ಜೋಸೆಫ್ ಸ್ಟಾಲಿಷ್ ರಷ್ಯಾವನ್ನು ಅಮೆರಿಕಕ್ಕೆ ಸವಾಜಾಗುವಂತೆ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದನು. ಈತ ಜಾರಿಗೊಳಿಸಿದ ಪಂಚವಾರ್ಷಿಕ ಯೋಜನೆಗಳು ರಷ್ಯಾದ ಅಭಿವೃದ್ಧಿಯ ಪಥವನ್ನೇ ಬದಲಾಯಿಸಿತು, ರಷ್ಯಾ ಬಾಹ್ಯಾಕಾಶ ವಿಜ್ಞಾನದಲ್ಲಿ ವಿಶ್ವದ ಮೊದಲ ಮಾನವಸಹಿತ ಉಪಗ್ರಹವನ್ನು ಉಡಾವಣೆ ಮಾಡಿತು. ಯೂರಿಗಗಾರಿನ್ ಜಗತ್ತಿನ ಮೊದಲ ಗಗನಯಾತಿಯಾದ, ಭಾರತವು ಸ್ವಾತಂತ್ರ್ಯಾನಂತರ ಪಂಚವಾರ್ಷಿಕ ಯೋಜನೆಗಳ ಮಾದರಿಯನ್ನು ರಾದಿಂದಲೇ ಪಡೆಯಿತು. ಎರಡನೆಯ ಮಹಾಯುದ್ಧದ ನಂತರ ರಷ್ಯಾ ಸಮಾಜವಾದಿ ದೇಶಗಳ ಬಣದ ನಾಯಕತ್ವ ವಹಿಸಿತು. ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ದೇಶಗಳ ವಿಮೋಚನಾ ಹೋರಾಟಗಳಿಗೆ ಬೆಂಬಲವನ್ನು ನೀಡಿತು. ರಷ್ಯಾವನ್ನು ಬಲಿಷ್ಠ ದೇಶವನ್ನಾಗಿಸುವ ಪ್ರಕ್ರಿಯೆಯಲ್ಲಿ ಸ್ಟಾಲಿನ್ ಹಲವಾರು ತಪ್ಪುಗಳನ್ನು ಎಸಗಿದನು, ಸಮಾಜವಾದಿ ಪ್ರಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸ ಸಮರ್ಪಕವಾಗಿ ಆಗಲಿಲ್ಲ. ಪರಿಣಾಮವಾಗಿ ಕಾಂತಿಗೆ ವಿರುದ್ಧವಾದ ಶಕ್ತಿಗಳು ಪ್ರಬಲವಾಗುತ್ತಾ ಬಂದವು. 1985ರಲ್ಲಿ ಗ್ಲಾಸ್‌ನೋಸ್ (Glasnost-ಮುಕ್ತತೆ) ಮತ್ತು 1987ರಲ್ಲಿ ಪರಸೊಯಿಕ (Perestroika ಪುನರ್ ಸಂಘಟನೆ) ಎಂಬ ಹೆಸರಿನಲ್ಲಿ ಸುಧಾರಣೆಗಳನ್ನು ಅಂದಿನ ಸೋವಿಯತ್ ಒಕ್ಕೂಟದ ಅಧ್ಯಕ್ಷರಾದ ಗೋರ್ಬಚೆವ್ ಜಾರಿ ಮಾಡಿದ ನಂತರ ರಷ್ಯಾದಲ್ಲಿ ಸಮಾಜವಾದಿ ವ್ಯವಸ್ಥೆ ಕುಸಿದು ಸೋವಿಯತ್ ಒಕ್ಕೂಟ ವಿಘಟನೆಯಾಯಿತು.
ನಿಮಗಿದು ತಿಳಿದಿರಲಿ :
ವೆರೆಸ್ಟೋಯಿಕಾ ಹಾಗೂ ಗ್ಲಾಸ್‌ನೋಸ್: ಸೋವಿಯತ್ ಕಮ್ಯುನಿಸ್ಟ್ ಪಕ್ಷವು ಮಂಡಿಸಿದ ಸಮಗ್ರ ಸಾಧಾರಣೆಗಳು, ದೇಶದ ಅಭಿವೃದ್ಧಿ ಮತ್ತು ಸಮಾಪ್ರಭುತ್ವದ ಆಲೋಚನೆಯಂತಹ ಪ್ರಸ್ತಾಪಗಳನ್ನು ಗೋರ್ಬಚೆವ್‌ರವರು ಜನತೆಯ ಬಳಿ ಕೊಂಡೊಯ್ಯಲು ಎರಡು ಪದಗಳನ್ನು ಬಳಸಿದರು. ಆ ಪದಗಳೇ ಪರಯಿಕಾ ಮತ್ತು ಗ್ಲಾಸ್‌ನೋಸ್ತ.
ಪೆರೆಸ್ಟೋದಕ ಎಂದರೆ – ‘ಇನರ್ ರಚನೆ’ ಎಂದರ್ಥ
ಗ್ಲಾಸ್ಮೋಸ್ತ ಎಂದರೆ – ‘ಮುಕ್ತ’ ಎಂದರ್ಥ
ಸರ್ವಾಧಿಕಾರಿಗಳು
ಹಿಟ್ಲರ್ : ಮೊದಲ ಮಹಾಯುದ್ಧದ ನಂತರ ಉಂಟಾದ ಪರಿಸ್ಥಿತಿಯು ಜರ್ಮನಿಯಲ್ಲಿ ಹಿಟ್ಲರ್ ಮತ್ತು ಇಟಲಿಯಲ್ಲಿ ಮುಸೊಲಿನಿಯ ಸರ್ವಾಧಿಕಾರಗಳನ್ನು ಅಸ್ತಿತ್ವಕ್ಕೆ ತಂದಿತು. ಹಿಟ್ಲರ್ ಜರ್ಮನಿಯ ಛಾನ್ಸಲರ್ ಆಗಿ, ನಂತರ ಅಧ್ಯಕ್ಷ ಹಿಂಡೆನ್‌ಬರ್ಗ್ ನಿಧನದ ನಂತರ ಸರ್ವಾಧಿಕಾರಿಯಾದನು. ಹಿಟ್ಲರ್ ಮೊವರ್ ಆದನು. ಹಿಟ್ಲರ್ ಪ್ರಾಬಲ್ಯ ಪಡೆಯುವುದರ ವೇಳೆಗೆ ಜರ್ಮನಿಯಲ್ಲಿ ಕಮ್ಯುನಿಸ್ಟರು ಮತ್ತು ಸೋಷಿಯಲಿಸಲು ಬಲಿಷ್ಠರಾಗಿದ್ದರು. ಈ ಹಿನ್ನೆಲೆಯಲ್ಲಿ ಜರ್ಮನ್ ಉದ್ಯಮಿಗಳ ಸಂಪೂರ್ಣ ಸಹಾಯವನ್ನು ಪಡೆದ ಹಿಟ್ಲರ್ ಇವರನ್ನು ದಮನಿಸಿದನು. ಕಾರ್ಮಿಕ ಸಂಘಗಳನ್ನು ರದ್ದುಗೊಳಿಸಿದನು, ರಾಜಕೀಯ ಪಕ್ಷಗಳನ್ನು ನಿಷೇಧಿಸಿದನು. ನಾಜಿ ಪಕ್ಷ ಏಕೈಕ ರಾಜಕೀಯ ಪಕ್ಷವೆಂದು ಘೋಷಿಸಿದನು.
ಯೆಹೂದಿಗಳು ಜಗತ್ತನ್ನು ನಿಯಂತ್ರಿಸುತ್ತಾರೆಂಬ ಭಯ ಮತ್ತು ಊಹಾತ್ಮಕವಾದ ವಿಚಾರಗಳನ್ನು ಬಿತ್ತಿ ಜನರನ್ನು ಭೀತಿಗೊಳಪಡಿಸಿದನು. ಜಗತ್ತಿನಲ್ಲಿ ಜರ್ಮನ್ ಆರ್ಯ ಜನಾಂಗವೇ ಶ್ರೇಷ್ಠವೆಂಬ ಜನಾಂಗ ವಾದವನ್ನು ಮುಂದಿಟ್ಟು ಪ್ರಬಲವಾಗಿ ಬೆಳೆದನು. ಇದೆಲ್ಲವನ್ನೂ ಮಾಡಲು ಹಿಟ್ಲರ್ ಅನುಸರಿಸಿದ್ದು ನಾಜಿವಾದ, ಇದರ ಸಾರಾಂಶವೇನೆಂದರೆ ಜಗತ್ತಿನಲ್ಲಿ ಶ್ರೇಷ್ಠವಾದ ಜನಾಂಗವೆಂದರೆ ಆರ್ಯ ಜರ್ಮನ್ ಜನಾಂಗ ಜಗತ್ತನ್ನು ಅಳ್ವಿಕೆ ಮಾಡಲು ಕೇವಲ ಜರ್ಮನ್ನರು ಮಾತ್ರ ಯೋಗ್ಯರು ಉಳಿದ ಜನಾಂಗಗಳು ಕೇವಲ ಆಳಿಸಿಕೊಳ್ಳಲು ಮಾತ್ರ ಯೋಗ್ಯರು ಜರ್ಮನ್ನರ ಎಲ್ಲಾ ಸಮಸ್ಯೆಗಳಿಗೆ ಯೆಹೂದಿಗಳೇ ಕಾರಣ ಇವರ ಜೊತೆಗೆ ಕಮ್ಯುನಿಸ್ಟರು, ಕ್ಯಾಥೋಲಿಕ್‌ರು, ಸೋಷಿಯಲಿಸ್ಟರು ಕೂಡಾ ಕಾರಣ. ಇವರು ಬದುಕಲು ಯೋಗ್ಯರಲ್ಲ ಈ ರೀತಿಯಾಗಿ ರೂಪುಗೊಂಡ ಉಗ್ರ ರಾಷ್ಟ್ರೀಯವಾದವು ಅತ್ಯಂತ ಅಮಾನುಷವಾಗಿ ಜಾರಿಗೆ ಬಂದಿತು. ಜನಾಂಗೀಯ ದ್ವೇಷವನ್ನು ಪ್ರಸಾರ ಮಾಡಲು ಗೋಬೆಲ್ಸ್’ ಎಂಬ ವಿಶೇಷವಾದ ಮಂತ್ರಿಯನ್ನು ನೇಮಕ ಮಾಡಿದ್ದನು. ಗಲಭೆಗಳನ್ನು ಮಾಡಿ ಜನರಲ್ಲಿ ಭೀತಿಯನ್ನು ಹುಟ್ಟಿಸಲು ‘ಬೂರು ಅರಿಗಿದಳ’ (Brown Shirls) ಎಂಬ ಕಾರ್ಯಪಡೆಯೊಂದನ್ನು ರಚಿಸಿದ್ದನು.
ಈ ನಿಟ್ಟಿನಲ್ಲಿ ಹಿಟ್ಲರ್ ನಡೆಸಿದ ಸಾಮೂಹಿಕ ಕೊಲೆಗಳು ಮತ್ತು ನರಮೇಧಗಳು ಚರಿತ್ರೆಯಲ್ಲಿ ಅತ್ಯಂತ ಕುಖ್ಯಾತಿಯನ್ನು ಪಡೆದಿವೆ. ಒಂದು ಅಂದಾಜಿನ ಪ್ರಕಾರ 6 ಮಿಲಿಯನ್ ಯೆಹೂದಿಗಳನ್ನು, ಕೋಟಿಗೂ ಹೆಚ್ಚು ಇತರೆ ಜನರನ್ನು ಕೊಲ್ಲಿಸಿದನು. ಇವನ ಸಾಮೂಹಿಕ ಕಲೆಗಳನ್ನು ಹೊಲೊಕಾಸ್(Holocaust) ಎಂದು ಕರೆಯಲಾಗಿದೆ. 1935ರಲ್ಲಿ ನ್ಯೂರಂಬರ್ಗ್ ಕಾನೂನುಗಳನ್ನು ಹಿಟ್ಲರ್ ಜಾರಿಗೊಳಿಸಿದನು, ಊಟ, ನೀರು ಯಾವುದನ್ನೂ ನೀಡದೆ ಗುಲಾಮರ ರೀತಿಯಲ್ಲಿ ದುಡಿಸಿಕೊಳ್ಳುವ ‘ಕಾನ್ಸೆಂಟೇಷನ್ ಕ್ಯಾಂಪ್ (Concentration Camps)ಗಳು, ಗಾಳಿ ಬೆಳಕಿಲ್ಲದ ಗ್ಯಾಸ್ ಟೇಂಬರ್‌ಗಳಲ್ಲಿ ಜನರನ್ನು ನೂಕಿ ವಿಷಗಾಳ ಬಿಟ್ಟು ಕೊಲ್ಲುತ್ತಿದ್ದನು. ಇದೇ ಇಲ್ಲದೆ ಸಾಮೂಧೀಕವಾಗಿ ಗುಂಡಿಟ್ಟು ಕೊಲ್ಲುವುದು. (Mass Shooting ಹೀಗೆ ಹಲವು ರೀತಿಗಳಲ್ಲಿ ನರಮೇಧವನ್ನು ನಡೆಸಿದನು. ಈ ರೀತಿಯಾಗಿ ಮಕ್ಕಳೆನ್ನದೆ, ಮಹಿಳೆಯರೆನ್ನದೆ, ಮುದುಕರೆನ್ನದೆ ಎಲ್ಲರನ್ನೂ ಸಾಮೂಹಿಕವಾಗಿ ಕೊಲ್ಲಲು ವಿಶೇಷ ಪಡೆಗಳನ್ನು ರೂಪಿಸಿದನು, ಇಡೀ ಪ್ರಭುತ್ವ ಯಂತ್ರವನ್ನು ನರಮೇಧ ನಡೆಸಲು ಬಳಸಿದರು. ಜಗತ್ತನ್ನೇ ಗೆಲ್ಲಬೇಕೆಂಬ ಮತ್ತು ಜರ್ಮನ್ನರ ಆರ್ಯ ಜನಾಂಗೀಯ ಶ್ರೇಷ್ಠತೆಯನ್ನು ಜಾರಿಗೊಳಿಸಬೇಕೆಂಬ ಮಹತ್ವಾಕಾಂಕ್ಷೆಯ ಎರಡನೆಯ ಮಹಾಯುದ್ಧಕ್ಕೆ ಮುಖ್ಯ ಕಾರಣಗಳಲ್ಲೊಂದಾಯಿತು, ಒಟ್ಲರ್‌ನ ಜನಾಂಗೀಯ ದ್ವೇಷದ ಅಧ್ಯಾಯವು ಯುದ್ಧದಲ್ಲಿ ಅದನ ಸಾವಿನೊಂದಿಗೆ ಅಂತ್ಯವಾಯಿತು.
ಮುಸೋಲಿಸಿ : 20ನೆಯ ಶತಮಾನದ ಆರಂಭದ ಯುರೋಪಿನಲ್ಲಿ ಮೂಡಿಬಂದ ಸಾಮಾಜಿಕ ಚಳವಳಿಗಳು, ಮೊದಲ ಮಹಾಯುದ್ಧದ ದುಷ್ಪರಿಣಾಮಗಳು ಮತ್ತು ರಷ್ಯನ್ ಕ್ರಾಂತಿಯ ಹಿನ್ನೆಲೆಯಲ್ಲಿ ಪ್ರತಿಗಾಮಿ ರಾಜಕೀಯವಾಗಿ ಮುಸೋಲಿನಿಯ ಫ್ಯಾಸಿಸ್ಟ್‌ವಾದ ಬೆಳೆದು ಬಂದಿತು, ಉಗ್ರ ರಾಷ್ಟ್ರೀಯವಾದ, ಪರಕೀಯ ಶಕ್ತಿಗಳ ನಾಶ, ಹಿಂಸೆಯ ವೈಭವೀಕರಣ, ಜನಾಂಗೀಯ ಶ್ರೇಷ್ಠತೆ, ಸಾಮ್ರಾಜ್ಯವಾದದ ವಿಸ್ತರಣೆ, ನರಮೇಧಗಳಿಗೆ ಬೆಂಬಳ, ಇವು ಫ್ಯಾಸಿಸ್ಟ್‌ವಾದದ ಲಕ್ಷಣಗಳಾಗಿದ್ದರೆ,
1922 ರಿಂದ 1943ರವರೆಗೆ ಇಟಲಿಯ ಪ್ರಧಾನಿಯಾಗಿದ್ದ ಮುಸೋಲಿನ ‘ರಾಷ್ಟ್ರೀಯ ಫ್ಯಾಸಿಸ್ಟ ಪಕ್ಷ’ದ ಸ್ಥಾಪಕ, 1925ರಲ್ಲಿ ಇಟಲಿಯಲ್ಲಿ ಪ್ರಜಾಪ್ರಭುತ್ವವನ್ನು ವಿಸರ್ಜನೆ ಮಾಡಿ ಕಾನೂನುಬದ್ಧವಾಗಿಯೇ ಸರ್ವಾಧಿಕಾರವನ್ನು ಪಡೆದುಕೊಂಡನು. ತನ್ನ ಗುಪ್ತ ಪೊಲೀಸರ ಮುಖಾಂತರ ಎಲ್ಲಾ ರಾಜಕೀಯ ವಿರೋಧಿಗಳನ್ನು ನಾಶ ಮಾಡಿದನು. ಕಾರ್ಮಿಕರ ಮುಷ್ಕರಗಳನ್ನು ನಿಷೇಧಿಸಿದನು, ಏಕಪಕ್ಷದ ಸರ್ವಾಧಿಕಾರವನ್ನು ಸ್ಥಾಪಿಸಿದನು. ಹಿಟ್ಲರನ ಜೊತೆಗೂಡಿ ಎರಡನೇ ಯುದ್ಧದಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣನಾದನು. 1945ರಲ್ಲಿ ಇವನನ್ನು ಹತ್ಯೆ ಮಾಡಲಾಯಿತು.
ಎರಡನೆಯ ಮಹಾಯುದ್ಧ
ಮೊದಲ ಮಹಾಯುದ್ಧದ ದುರಂತವನ್ನು, ಸಾವು- ನೋವುಗಳನ್ನು ಮರೆಯುವ ಮುನ್ನವೇ ಎರಡನೆಯ ಮಹಾಯುದ್ದವು. 1939ರ ಸೆಪ್ಟೆಂಬರ್ 1ರಂದು ನಾಜಿ ಜರ್ಮನಿಯು ಪೋಲೆಂಡಿನ ಮೇಲೆ ದಾಳಿ ಮಾಡುವುದರೊಂದಿಗೆ ಪ್ರಾರಂಭವಾಯಿತು. ಎರಡನೇ ಮಹಾಯುದ್ಧವು ಬಹುಶಃ ಮಾನವನ ಚಿಂತೆಯಲ್ಲಿ ನಡೆದಿರಬಹುದಾದ ಯುದ್ಧಗಳಲ್ಲೇ ಅತ್ಯಂತ ಬೃಹತ್ತಾದುದು ಮತ್ತು ಬರ್ಬರವಾದುದು. ಕ್ಕೂ ಹೆಚ್ಚು ದೇಶಗಳು ಈ ಯುದ್ಧದಲ್ಲಿ ನೇರವಾಗಿ ಭಾಗವಹಿಸಿದ್ದವು. ಇದು 1930 ರಿಂದ 1945 ರವರೆಗೂ ನಡೆಯಿತು, ಶ್ರೀಮಂತ ದೇಶಗಳು ಮೊದಲನೆಯ ಮಹಾಯುದ್ಧದಲ್ಲಿ ಹಣ ವ್ಯಯಮಾಡಿದ ಪರಿಣಾಮವಾಗಿ 1930ರ ದಶಕದಲ್ಲಿ ಮಹಾನ್ ಆರ್ಥಿಕ ಕುಸಿತ (Great Depression) ಉಂಟಾಯಿತು. ಇದರಿಂದಾಗಿ ಯುರೋಪ್ ಮತ್ತು ಅಮೆರಿಕದಲ್ಲಿ ಸಂಕಷ್ಟದ ಪರಿಸ್ಥಿತಿಗಳು ನಿರ್ಮಾಣವಾದವು, ಜನರ ಜೀವನಮಟ್ಟ ತೀವ್ರವಾಗಿ ಕುಸಿಯಿತು; ಕೈಗಾರಿಕೆ ಮತ್ತು ಕೃಷಿ ಬೆಳವಣಿಗೆ ಸ್ಥಗಿತವಾಯಿತು. ನಿರುದ್ಯೋಗ ವಿಪರೀತವಾಯಿತು. ಮೊದಲ ಮಹಾಯುದ್ಧದ ಸೋಲು, ಅವಮಾನಕರ ಒಪ್ಪಂದಗಳು, ಅಪಾರವಾದ ನಷ್ಟಗಳ ಹಿನ್ನೆಲೆಯಲ್ಲಿ ಜರ್ಮನಿ ಮತ್ತು ಯುರೋಪಿನ ಹಲವು ದೇಶಗಳಲ್ಲಿ ರಾಷ್ಟ್ರೀಯವಾದದ ಉಗ್ರತೆ ತೀವ್ರಗೊಂಡಿತು. ಜರ್ಮನಿ ಮತ್ತು ಯುರೋಪಿನ ಇತರ ದೇಶಗಳಲ್ಲಿ ಬೃಹತ್ ಕೈಗಾರಿಕೋದ್ಯಮಿಗಳು ಉಗ ರಾಷ್ಟ್ರೀಯತೆಯನ್ನು ಬೆಳಸಲು ದೊಡ್ಡ ಪ್ರಮಾಣದಲ್ಲಿ ಹಣವನ್ನು ನೀಡಿದರು. ಇದನ್ನೇ ಬಳಸಿಕೊಂಡು ಸೇಡಿನ ಮತ್ತು ದುರಭಿಮಾನದ ಚಳವಳಿಗಳು ಬೆಳೆದವು, ಜರ್ಮನಿಯಲ್ಲಿ ಹಿಟ್ಲರ್ ಮತ್ತು ಇಟಲಿಯಲ್ಲಿ ಮುಸೋಲಿನಿಯಂತಹ ಸರ್ವಾಧಿಕಾರಿಗಳು ಬೆಳೆದರು, ಪೂರ್ವ ಏಷ್ಯಾದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಚೀನಾದ ಮೇಲೆ ಜಪಾನ್ ದಾಳಿಗಳನ್ನು ನಡೆಸುತ್ತಿತ್ತು.
ಎರಡನೆಯ ಮಹಾಯುದ್ಧದಲ್ಲಿ ಎರಡು ವಿರುದ್ಧವಾದ ಶತ್ರುಣ (Axis) ಮತ್ತು ಮಿತ್ರಬs(Allies) ರೂಪುಗೊಂಡವು, ಆಕ್ಸಿಸ್ ಬಣದಲ್ಲಿ ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು, ಆಲೀಸ್ ಬಣದಲ್ಲಿ ಬ್ರಿಟಿನ್, ಫ್ರಾನ್ಸ್, ರಷ್ಯಾ ಮುಂತಾದ ದೇಶಗಳು ಇದ್ದವ ಪೋಲೆಂಡಿನ ಮೇಲೆ ಜರ್ಮನಿ ದಾಳಿ ಮಾಡುತ್ತಿದ್ದಂತೆ, ಬ್ರಿಟನ್ ಪೋಲೆಂಡಿನ ಮಿತ್ರ ರಾಷ್ಟ್ರವಾದ್ದರಿಂದ ಜರ್ಮನಿಯ ವಿರುದ್ಧ ಯುದ್ಧ ಸಾರಿತು. ಆದರೆ ವಾಸ್ತವದಲ್ಲಿ ಬ್ರಿಟಿಷ್ ತಕ್ಷಣದಲ್ಲಿ ಪೋಲೆಂಡಿನ ಸಹಾಯಕ್ಕೆ ಧಾವಿಸಲಿಲ್ಲ. ಅದು ಜರ್ಮನಿಯ ವಶವಾಯಿತು. ಇದೇ ಸಂದರ್ಭದಲ್ಲಿ ರಷ್ಯಾದಲ್ಲಿ ಕಮ್ಯುನಿಸ್ಟ್ ವ್ಯವಸ್ಥೆ ಜಾರಿಯಲ್ಲಿ ಇದ್ದುದರಿಂದ ಬಿಟನ್, ಫ್ರಾನ್ಸ್, ಆಮೆರಿಕ ಮುಂತಾದ ದೇಶಗಳು ಹಿಟ್ಲರನು ರಷ್ಯಾದ ಮೇಲೆ ದಾಳಿ ಮಾಡುವುದನ್ನು ಬಯಸುತ್ತಿದ್ದವು. ಇದನ್ನು ಮನಗಂಡ ರಷ್ಯಾ 1939 ಆಗಸ್ಟ್ 24ರಂದು ಜರ್ಮನಿಯ ಜೊತೆ ಯುದ್ಧರಹಿತ ಒಪ್ಪಂದ ಮಾಡಿಕೊಂಡಿತ್ತು. ಹೀಗಾಗಿ ಹಿಟ್ಲರ್ ಮೊದಲು ಪೂರ್ವದ ಬದಲಿಗೆ ಪಶ್ಚಿಮಕ್ಕೆ ವಾಳೆ ಮಾಡಿದನು. ಇಟಲಿಯ ಜೊತೆ ಒಪ್ಪಂದವನ್ನು ಮಾಡಿಕೊಂಡ ಹಿಟ್ಲರ್‌ನು ಡೆನ್ಮಾರ್ಕ್, ನಾರ್ವೆ, ಹಾಲೆಂಡ್ ದೇಶಗಳನ್ನೊಳಗೊಂಡ ಬಹುತೇಕ ಪಶ್ಚಿಮ ಯುರೋಪನ್ನು ತನ್ನ ವಶಕ್ಕೆ ತೆಗೆದುಕೊಂಡನು. 1941ರಲ್ಲಿ ಸೋವಿಯತ್ ರಷ್ಯಾದ ಕಡೆ ಹಿಟ್ಲರ ದೃಷ್ಟಿ ಹರಿಸಿದನು. ಇದರಿಂದ ರಷ್ಯಾ ಯುದ್ಧದಲ್ಲಿ ಭಾಗವಹಿಸಲೇ ಬೇಕಾಯಿತು. ಇದೇ ಸಂದರ್ಭದಲ್ಲಿ ಜಪಾನ್ ಹಿಟ್ಲರ್‌ನ ಬಣವನ್ನು ಸೇರಿಕೊಂಡಿತು. ಪೆಸಿಫಿಕ್ ಸಮುದ್ರದ ಪಶ್ಚಿಮ ಭಾಗದಲ್ಲಿದ್ದ ಅಮೆರಿಕ ಮತ್ತು ಯುರೋಪಿಯನ್ ಪ್ರದೇಶಗಳ ಮೇಲೆ ದಾಳಿ ಮಾಡಿ ಸಾಕಷ್ಟು ಪ್ರದೇಶಗಳನ್ನು ಜಪಾನ್ ಆಕ್ರಮಿಸಿಕೊಂಡಿತು.
ಇಟಲಿ ಮತ್ತು ಜರ್ಮನಿ ಉತ್ತರ ಆಫ್ರಿಕಾದ ಬ್ರಿಟಿಷ್ ವಸಾಹತುಗಳನ್ನು ಮತ್ತು ಸೂಯೆಜ್ ಕಾಲುವೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ಸೋತು. 1942ರಲ್ಲಿ ಸ್ಟಾಲಿನ್‌ಗ್ರಾಡ್ ಯುದ್ಧದಲ್ಲಿ ಜರ್ಮನ್ ಪಡೆಗಳನ್ನು ರಷ್ಯ ಸೋಲಿಸಿತು. ಜರ್ಮ: 1943ರಲ್ಲಿ ಪೂರ್ವ ಯುರೋಪ್‌ನಲ್ಲಿ ಸಾಲು ಸಾಲು ಸೋಲುಗಳನ್ನು ಕಂಡಿತು. ಇದರಲ್ಲಿ ರಷ್ಯಾ ಪ್ರಮುಖ ಪಾತ್ರ ವಹಿಸಿತು, ಮಿತ್ತಡೆಗಳು ಇಟಲಿಯನ್ನು ಆಕ್ರಮಿಸಿದವು, ಜಪಾನ್‌ನನ್ನು ಸೋಲಿಸುವ ಮೂಲಕ ಪಶ್ಚಿಮ ಪೆಸಿಫಿಕ್ ದ್ವೀಪಗಳನ್ನು ಅಮೆರಿಕ ವಾಪಸ್ ಪಡೆಯಿತು. ರಷ್ಯಾದ ಕೆಲವು ಸೈನಿಕರ ಮಹಾನ್ ಮುನ್ನಡೆ ಮತ್ತು ಪಶ್ಚಿಮ ರಾಷ್ಟ್ರಗಳ ದಾಳಿಯಿಂದ, ಜರ್ಮನಿ ಶರಣಾಯಿತು ಮತ್ತು ಬರ್ಲಿನ್ ಚಚನವಾಯಿತು. 1945ರಲ್ಲಿ ಏಟ್ಟರ್ ಅತ್ಮಹತ್ಯೆ ಮಾಡಿಕೊಂಡನು. ಇದರೊಂದಿಗೆ ಯುರೋಪಿನಲ್ಲಿ ಯುದ್ಧ ಕೊನೆಗೊಂಡಿತು. 1945ರಲ್ಲಿ ಜಪಾನಿನ ಹಿರೋಷಿಮಾ ಮತ್ತು ನಾಗಸುಕಿ ಮೇಲೆ ಅಮುಕ ಜರ್ಗ ಮೊಟ್ಟಮೊದಲ ಅಣುವಾಂಬನ್ನು ಹಾಕಿತು. ಇದರಿಂದ ಲಕ್ಷಾಂತರ ಜನ ಹತರಾದರು. ಇವರ ದುಷ್ಪರಿಣಾಮಗಳನ್ನು ಜಪಾನ್ ಇಂದಿಗೂ ಅನುಭವಿಸುತ್ತಿದೆ. 1945 ಆಗಸ್ಟ್ 15ರಂದು ಜಪಾನ್ ಪೂರ್ಣವಾಗಿ ಶರಣಾಯಿತು. ಇದರೊಂದಿಗೆ ಮಿತ್ತ ಬಣ ಯುದ್ಧದಲ್ಲಿ ಸಂಪೂರ್ಣವಾಗಿ ವಿಜಯಿಯಾಯಿತು.
ಮಾನವ ಚರಿತ್ರೆಯಲ್ಲಿ ಅತಿ ಹೆಚ್ಚಿನ ಸಾವು-ನೋವುಗಳನ್ನು ಕಂಡ ಎರಡನೇ ಜಾಗತಿಕ ಯುದ್ಧವು ಜಗತ್ತಿನ ರಾಜಕೀಯ ಮತ್ತು ಸಾಮಾಜಿಕ ಸಂರಚನೆಯನ್ನು ಬದಲಾವಣೆ ಮಾಡಿತು, ರಾಷ್ಟ್ರ ಸಂಘದ ಜಾಗದಲ್ಲಿ ವಿಶ್ವಸಂಸ್ಥೆ ರಚನೆಯಾಯಿತು. ಯುದ್ಧದ ವಿಜಯ ರಾಷ್ಟ್ರಗಳಾದ ಅಮೆರಿಕ ಸಂಯುಕ್ತ ಸಂಸ್ಥಾನ, ಸೋವಿಯತ್ ರಷ್ಯಾ, ಚೀನಾ, ಬ್ರಿಟನ್ ಮತ್ತು ಪಾನ್ ದೇಶಗಳು ವಿಶ್ವಸಂಸ್ಥೆಯ ರಕ್ಷಣಾ ಮಂಡಳಿಯ ಖಾಯಂ ಸದಸ್ಯರಾದರು, ಸೋವಿಯತ್ ರಷ್ಯಾ ಮತ್ತು ಅಮೆರಿಕ ಪರಸ್ಪರ ವಿರೋಧಿಯಾದ ಶಕ್ತಿಶಾಲಿ ದೇಶಗಳಾದವು, ಶೀತಲ ಸಮರಕ್ಕೆ ಇದು ನಾಂದಿಯಾಯಿತು – ಮತ್ತು ಅಕಾದ ವಸಾಹತುಗಳು ಸ್ವಾತಂತ್ರ್ಯ ಪಡೆಯಲು ವಾತಾವರಣ ಪೂರಕವಾಯಿತು. ಬ್ರಿಟನ್, ಫ್ರಾನ್ಸ್ ಮುಂತಾದ ರಾಷ್ಟ್ರಗಳು ತಮ್ಮ ಹಿಡಿತದಲ್ಲಿದ್ದ ಬಹುತೇಕ ವಸಾಹತುಗಳನ್ನು ಕಳೆದುಕೊಂಡವು. ಭಾರತದ ಸ್ವಾತಂತ್ರ್ಯವನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು, ಆಮೆರಿಕ ಅಣ್ವಸ್ತ್ರ ಪ್ರಯೋಗಿಸಿದ್ದರಿಂದ ಬೃಹತ್ ದೇಶಗಳ ನಡುವೆ ಅಣ್ವಸ್ತ್ರ ಬೈಪೋಟಿಗೆ ದಾರಿಯಾಯಿತು.
ಚೀನಾ ಕ್ರಾಂತಿ
ಜಗತ್ತಿನ ಪ್ರಾಚೀನ ನಾಗರಿಕತೆ ಹಾಗೂ ಸುದೀರ್ಘ ಇತಿಹಾಸ ಹೊಂದಿರುವ ದೇಶಗಳಲ್ಲಿ ಚೀನಾ ಕೂಡಾ ಒಂದು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಭಾರತದ ರೀತಿಯಲ್ಲಿ ಚೀನಾ ಪೂರ್ತಿಯಾಗಿ ವಸಾಹತು ದೇಶವಾಗಿರಲಿಲ್ಲ. ಅರೆ ವಸಾಹತು ದೇಶವಾಗಿತ್ತು. ಅಂದರೆ ಸ್ವಲ್ಪ ಭಾಗ ಸ್ವತಂತ್ರವಾಗಿತ್ತು. ಜೊತೆಗೆ ಫ್ರೆಂಚರು, ಜಪಾನೀಯರು ಮುಂತಾದ ಸಾಮ್ರಾಜ್ಯಶಾಹಿಗಳ ಪ್ರಭಾವಕ್ಕೂ ಒಳಗಾಗಿತ್ತು. ಚೀನಾ ಪಾಳೇಗಾರೀ ದೇಶವೂ ಆಗಿತ್ತು. ಅಂದರೆ ದೇಶದೊಳಗೆ ಜಮೀನ್ದಾರರು ಮತ್ತು ಯುದ್ಧಕೋರರ ನಿಯಂತ್ರಣವಿತ್ತು. ಭಾರತದಷ್ಟೂ ಕೈಗಾರಿಕೆಗಳು ಬೆಳೆದಿರಲಿಲ್ಲ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಐಕ್ಯತೆ, ಪ್ರಜಾಪ್ರಭುತ್ವ, ಜೀವನದ ಪ್ರಶ್ನೆಗಳು ಮುಂಚೂಣಿಗೆ ಬಂದವು. 1911ರಲ್ಲಿ ಮಿಂಟಾಂಗ್ ಪಕ್ಷದ ನಾಯಕ ಸನ್ಯಾತ್-ಸೆನ್ ನೇತೃತ್ವದಲ್ಲಿ ಸಾಮ್ರಾಜ್ಯಶಾಹಿ ವಿರೋಧಿಯಾದ ಪ್ರಜಾಪ್ರಭುತ್ವ ಕ್ರಾಂತಿ ನಡೆಯಿತು. ಆದರೆ ಇದು ಪೂರ್ಣವಾಗಿ ಬೆಳೆಯಲಿಲ್ಲ. ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷವು 1925ರಲ್ಲಿ ಪ್ರಾರಂಭವಾಯಿತು. ಹಳ್ಳಿಗಳಲ್ಲಿ ರೈತರ ಚಳವಳಿ ಮತ್ತು ನಗರಗಳಲ್ಲಿ ಕಾರ್ಮಿಕರ ಚಳವಳಿಗಳನ್ನು ಇದು ಬೆಳೆಸಿತು. ಐಕ್ಯ ಚೀನಾ ಕಟ್ಟಬೇಕೆಂದು ಸನ್-ಯಾತ್-ಸೆನ್ ಮತ್ತು ಕಮ್ಯುನಿಸ್ಟ್ ಪಕ್ಷ ಒಟ್ಟಾಗಿ ಕೆಲಸ ಮಾಡಿದವು. ಸನ್ಯಾತ್-ಸೆನ್ ಮರಣದ ನಂತರ ಕ್ಯೋಮಿಂಟಾಂಗ್ ಪಕ್ಷದ ನೇತೃತ್ವ ಷಿಯಾಂಗ್-ಕೈ-ಷೇಕ್ ಎಂಬ ದಮನಕಾರಿಯ ಕೈಗೆ ಹಸ್ತಾಂತರವಾಯಿತು. ಈತ ಸಾಮ್ರಾಜ್ಯಶಾಹಿಗಳ ಜೊತೆ ಸೇರಿ ಕಮ್ಯುನಿಸ್ಟರ ವಿರುದ್ಧ ಅವರ ನೆಲಗಳ ಮೇಲೆ ದಾಳಿ ಮಾಡಿದನು. ಇದರಲ್ಲಿ ಸುಮಾರು 70,000 ಕ್ರಾಂತಿಕಾರಿಗಳು ಕೊಲ್ಲಲ್ಪಟ್ಟರು. ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮಾವೋತ್ಸೆ ತುಂಗನ ನೇತೃತ್ವದಲ್ಲಿ ಚೀನಾದ ಉತ್ತರ ಭಾಗಕ್ಕೆ ಚಾರಿತ್ರಿಕವಾದ ಕಮ್ಯುನಿಸ್ಟರ ದೀರ್ಘ ಪಯಣ (Long March) ನಡೆಯಿತು. ಇದು ಜಗತ್ತಿನ ಮಿಲಿಟರಿ ಕಾರ್ಯವ್ಯೂಹದಲ್ಲೇ ಅತ್ಯಂತ ವಿಶಿಷ್ಟವಾದ ಪ್ರಯೋಗ. ಇದಕ್ಕೆ ಗ್ರಾಮಾಂತರದ ರೈತರಿಂದ ಅಭೂತಪೂರ್ವ ಬೆಂಬಲ ದೊರೆಯಿತು.
ನಿಮಗಿದು ತಿಳಿದಿರಲಿ :
ದೀರ್ಘ ಪಯಣ (Long March) : ಚೀನಾದ ಕಮ್ಯುನಿಸ್ಟ್ ಕ್ರಾಂ ಕಾರಿಗಳ ಮೇಲೆ ಚಿಯಾಂಗ್ ಕೈ-ಷೇಕ್ ನಡೆಸಿದ ದಾಳಿಯಿಂದ ರಕ್ಷಿಸಿಕೊಳ್ಳಲು ಚೀನಾ ಕ್ರಾಂತಿಯ ನಾಯಕ ಮಾವೋ ಸಂಘಟಿಸಿದ ಚಾರಿತ್ರಿಕ ಪಯಣವಿದು. ಆಗ್ನೆಯ ಚೀನಾದ ಜಿಯಾಂಗ್‌ಜಿ ಪ್ರದೇಶದಿಂದ ವಾಯ ಚೀನಾದ ಯೆನಾನ್‌ನ ತುತ್ತತುದಿಗೆ ಸುಮಾರು 10,000 ಕಿ.ಮೀ. ದೂರದವರೆಗೆ ಸುಮಾರು 80,000 ಕ್ರಾಂತಿಕಾರಿ ಸೈನಿಕರನ್ನು ಸ್ಥಳಾಂತರಿಸಿದ ಘಟನೆಯಿದು. ಅಕ್ಟೋಬರ್ 1934ರ ಅಕ್ಟೋಬರ್ 1935ರ ವರೆಗೆ ನಡೆದ ಬೃಹತ್ ಚಾರಣದಲ್ಲಿ ಅಂತಿಮವಾಗಿ ಸುಮಾರು 10,000 ಜನ ಮಾತ್ರ ಉಳಿದಿದ್ದರು. ಮಾನವನ ಸಾಮಾಜಿಕ ಕ್ರಾಂತಿಯ ಚರಿತ್ರೆಯಲ್ಲಿ ಇಷ್ಟು ಸಂಖ್ಯೆಯ ಜನ ಇಷ್ಟೊಂದು ದೂರ ನಡೆದ ಮತ್ತೊಂದು ಘಟನೆಯಿಲ್ಲ. ಹೀಗಾಗಿಯೇ ಇದನ್ನು 'ದೀರ್ಘಪಯಣ' ಎಂದು ಕರೆಯಲಾಗಿದೆ.
ಎರಡನೆಯ ಜಾಗತಿಕ ಯುದ್ಧದ ಸಂದರ್ಭದಲ್ಲಿ ಚೀನಾದ ಪ್ರದೇಶಗಳ ಮೇಲೆ ಜಪಾನ್ ದಾಳಿ ಮಾಡಿತು. ಇದರ ವಿರುದ್ಧ ಹೋರಾಟ ನಡೆಸಲು ಚೀನಾ ಕಮ್ಯುನಿಸ್ಟ್ ಪಕ್ಷ ಮುಂಚೂಣಿಗೆ ಬಂತು. 1945ರಲ್ಲಿ ಜಪಾನ್ ಯುದ್ಧದಲ್ಲಿ ಸೋತಿತು. ಜಪಾನ್ ಹಿಂದೆ ಸರಿದಂತೆಲ್ಲಾ ಆ ಪ್ರದೇಶಗಳನ್ನು ಕಮ್ಯುನಿಸ್ಟ್ ಪಕ್ಷದ ಜನತಾ ವಿಮೋಚನಾ ಸೈನ್ಯವಶಕ್ಕೆ ಪಡೆಯಿತು. ವಶಕ್ಕೆ ಪಡೆದ ಪ್ರದೇಶಗಳಲ್ಲಿ ಭೂಸುಧಾರಣೆ ಘೋಷಣೆ ಮಾಡಿತು. ಅಂದರೆ ಜನರಿಗೆ ಭೂಮಿಯನ್ನು ಹಂಚಿತು. ಇದರಿಂದ ಅಪಾರ ಜನಬೆಂಬಲ ದೊರಕಿತು. ಈ ರೀತಿಯಾಗಿ ಕೆಲವು ಪ್ರದೇಶಗಳು ಷಿಯಾಂಗ್-ಕೈ-ಷೇಕ್‌ನ ಹಿಡಿತದಲ್ಲಿದ್ದರೆ ಹೆಚ್ಚೆಚ್ಚು ಪ್ರದೇಶಗಳನ್ನು ಕಮ್ಯುನಿಸ್ಟ್ ಪಕ್ಷ ವಶಕ್ಕೆ ಪಡೆಯುತ್ತಾ ಹೋಯಿತು. 1949ರಲ್ಲಿ ಅನೇಕ ನಗರಗಳೂ ಇವರ ವಶಕ್ಕೆ ಬಂದವು. ಷಿಯಾಂಗ್-ಕೈ-ಷೇಕ್‌ನು ಸೋತು ತೈವಾನ್‌ಗೆ ಪಲಾಯನ ಮಾಡಿದನು. 1949ರ ಅಕ್ಟೋಬರ್ 1 ರಂದು ಜನತಾ ವಿಮೋಚನಾ ಸೈನ್ಯ ಪ್ರವೇಶಿಸಿತು. ಚೀನಾದಲ್ಲಿ ಪೀಕಿಂಗ್ (ಈಗಿನ ಬೀಜಿಂಗ್) ಜನತಾ ಗಣತಂತ್ರ ಸ್ಥಾಪನೆಯಾಯಿತು. ಮಾವೋತ್ಸೆ ತುಂಗ್ ಅದರ ಅಧ್ಯಕ್ಷನಾದನು.
ಕ್ರಾಂತಿಯ ನಂತರ ಚೀನಾದಲ್ಲಿ ಸಾಮೂಹಿಕ ಕೃಷಿ ಪದ್ಧತಿಯನ್ನು ಜಾರಿಗೊಳಿಸಿದರು.ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ, ಮೊದಲಾದ ಸೌಲಭ್ಯಗಳನ್ನು ನೀಡಿದರು. ಕೈಗಾರಿಕಾ ಬೆಳವಣಿಗೆ ಸಾಧಿಸಲು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ತುಂಬಾ ಮಹತ್ವ ನೀಡಿದರು. 'ಮುನ್ನಡೆಯ ಮಹಾಜಿಗಿತ' (Leap Forward) ಯೋಜನೆಯನ್ನು ಜಾರಿಗೊಳಿಸಲಾಯಿತು. ಖಾಸಗಿ ಆಸ್ತಿಯನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸಿದರು. ಈ ರೀತಿ ಮಾಡುವಾಗ 1966ರಲ್ಲಿ ಜಾರಿಗೆ ತಂದ 'ಸಾಂಸ್ಕೃತಿಕ ಕ್ರಾಂತಿ' (Cultural Revolution) ಹಲವಾರು ತಪ್ಪುಗಳನ್ನು ಮಾಡಿತು. ಇದನ್ನು ಸರಿಪಡಿಸಲು 1979ರಲ್ಲಿ ಅಧಿಕಾರಕ್ಕೆ ಬಂದ ಡೆಂಗ್ ಹಿಯೋಪಿಂಗ್ ಹಲವಾರು ಸುಧಾರಣೆಗಳಿಗೆ ಕಾರಣರಾದರು. ಈ ಹಿನ್ನೆಲೆಯಲ್ಲಿ ಬಂಡವಾಳ ವಾದವನ್ನು ಅರಗಿಸಿಕೊಂಡ ಚೀನಾ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಜಾಗತಿಕ ಶಕ್ತಿಯಾಗಿ ಮುನ್ನುಗುತ್ತಿದೆ.
ಶೀತಲ ಸಮರ
ಎರಡನೆಯ ಮಹಾಯುದ್ಧದ ನಂತರ ಜಾಗತಿಕವಾಗಿ ಎರಡು ಬಣಗಳ ನಡುವೆ ರಾಜಕೀಯ, ಅರ್ಥಿಕ, ಮಿಲಿಟರಿ ಮುಂತಾದ ವಿಷಯಗಳಲ್ಲಿ ಉದ್ಭವಿಸಿದ ನಿರಂತರ ಭಯ, ದ್ವೇಷ, ಅಸೂಯೆ ಮತ್ತು ಆತಂಕದ ಪರಿಸ್ಥಿತಿಯ ಶೀತಲ ಸಮರ, ಅಮೆರಿಕ ಸಂಯುಕ್ತ ಸಂಸ್ಥಾನದ (USA) ಅಂಡವಾಳ ಶಾಹಿ ದೇಶಗಳ ಬಣ ಮತ್ತು ಸೋವಿಯತ್ ರಷ್ಯಾದ (USSR) ಸಮಾಜವಾದಿ ದೇಶಗಳ ಬಣಗಳ ನಡುವಿನ ಅಘೋಷಿತ ಸಮರವೇ ರೀತಲ ಸಮರ, ಮಾನವ ಜನಾಂಗದ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಯಾವುದು – ಬಂಡವಾಳಶಾಹಿಯೋ ಅಥವಾ ಸಮಾಜವಾದವೋ? ಎಂಬುದರ ಆಧಾರದಲ್ಲಿ ತೀವ್ರವಾಗಿ ಬೆಳೆದ ವ್ಯತ್ಯಾಸಗಳು 1917ರಿಂದ ಅಸ್ತಿತ್ವದಲ್ಲಿದ್ದರೂ ತೀವ್ರವಾಗಿ ಪ್ರಕಟಗೊಂಡಿದ್ದು ಎರಡನೇ ಮಹಾಯುದ್ಧದ ನಂತರ ಸೋವಿಯತ್ ರಷ್ಯಾದ ಸಮಾಜವಾದಿ ವ್ಯವಸ್ಥೆ 1989ರಲ್ಲಿ ಕುಸಿಯುವವರೆಗೂ ಪ್ರಬಲವಾಗಿತ್ತು, ಇವೆರಡು ಬಣಗಳನ್ನು ಹೊರತುಪಡಿಸಿ ಭಾರತ, ಈಜಿಪ್ಟ್ ಮುಂತಾದ ದೇಶಗಳ ನೇತೃತ್ವದಲ್ಲಿ ಆಲಿಪ್ತ ಚಳವಳಿ ಪ್ರಾರಂಭವಾಯಿತು.
ಶೀತಲ ಸಮರದಿಂದಾಗಿ ಎರಡು ಬಣಗಳ ನಡುವೆ ಶಾಸ್ತ್ರ ಭೇಟಿ ತೀವ್ರಗೊಂಡಿತು. ಇದರಲ್ಲಿ ಆಮೆರಿಕ ಮೇಲುಗೈ ಸಾಧಿಸಿತು. ಅಮೆರಿಕ ಜಗತ್ತಿನ ತುಂಬೆಲ್ಲಾ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ವ್ಯಾಪಕವಾದ ಒಪ್ಪಂದಗಳಿಗೆ ಮುಂದಾಯಿತು. ಹೆಚ್ಚೆಚ್ಚು ರಾಷ್ಟ್ರಗಳನ್ನು ತಮ್ಮ ವ್ಯಾಪ್ತಿಯಲ್ಲಿಟ್ಟುಕೊಳ್ಳಲು ಮಿಲಿಟು ಮೈತ್ರಿಕೂಟಗಳ ರಚನೆಯಾಯಿತು, ಆಮೆರಿಕದ ನೇತೃತ್ವದಲ್ಲಿ ನ್ಯಾಟೋ (Norti Auntie: Treaty Organisation), Actor (South East Asian Treaty Organisation) (Central East North Treaty Organisation) ಕೂಟಗಳು ರಚನೆಯಾದರೆ, ರಷ್ಯಾ ನೇತೃತ್ವದಲ್ಲಿ ವಾರ್ಸಾಕೂಟ ರಚನೆಯಾಯಿತು. ಅಮೆರಿಕದ ಪ್ರತಿಯೊಂದು ರಾಜ್ಯದಲ್ಲೂ ಬೃಹತ್ ಯುದ್ಧಾಸ್ತಗಳ ಕೈಗಾರಿಕೆಗಳು ಬೆಳೆದವು. ಆಣ್ವಸ್ತ್ರ ಪೈಪೋಟಿ ಹೆಚ್ಚಿತು. ಇದರ ಜೊತೆಗೆ ವಿವಿಧ ದೇಶಗಳಲ್ಲಿ ಸೈನಿಕ ನೆಲೆಗಳ ಸ್ಥಾಪನೆ, ಗೂಢಚರ್ಯೆ ಮತ್ತು ಪ್ರಚಾರ, ಮೈಮ ಸಮರದಂತಹ (Space War) ವಿಜ್ಞಾನ-ತಂತ್ರಜ್ಞಾನದ ಪೈಪೋಟ, ಇವೆಲ್ಲವೂ ಬೆಳೆದವು, ಇಡೀ ಜಗತ್ತೇ ವಿವಿಧ ರೂಪಗಳಲ್ಲಿ ಅಗೋಚರ ಯುದ್ಧದ ಆತಂಕಕ್ಕೆ ಒಳಗಾಯಿತು.
ಕೊರಿಯನ್ ಯುದ್ಧ, ವಿಯಟ್ನಾಂ ಯುದ್ಧ 1956ರ ಸೂಯೆಜ್ ಕಾಲುವೆ ಬಿಕ್ಕಟ್ಟು, 1961ರ ಬರ್ಲಿನ್ ಬಿಕ್ಕಟ್ಟು, 1962ರ ಕನ್ ಕ್ಷಿಪಣಿ ಬಿಕ್ಕಟ್ಟು, ಹೀಗೆ ಹಲವು ಆತಂಕದ ಪರಿಸ್ಥಿತಿಗಳನ್ನು ಶೀತಲ ಸಮರವು ಸೃಷ್ಟಿಸಿತು. ಸುಮಾರು 1985ರವರೆಗೂ ಪರಸ್ಪರ ಅತ್ಯಂತ ತೀವ್ರತೆಯನ್ನು ಕಂಡ ಪೀತಲ ಸಮರದ ನಂತರ ಅಮೆರಿಕದ ಕಡೆ ವಾಲಿತು, ಜಗತ್ತಿನ ಸಂಪನ್ಮೂಲಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಅಮೆರಿಕ ಯಶಸ್ವಿಯಾಗುತ್ತಾ ಬಂದಿತು. ರಷ್ಯಾವು ಆರ್ಥಿಕ ಬಿಕ್ಕಟ್ಟಿಗೆ ಮತ್ತು ಇತರ ಅಂತರಿಕ ಸಂಕಷ್ಟಗಳಿಗೆ ಒಳಗಾಯಿತು, ಶಸ್ತ್ರಾಸ್ತ್ರ ಪೈಪೋಟಿ ಏಕಮುಖವಾಗಿ ಅಮೆರಿಕ ಜಗತ್ತಿನ ಏಕಮಾತ್ರ ಶಕ್ತಿಯುತ ರಾಷ್ಟ್ರವಾಗಿ ತಲೆಯೆತ್ತಿತು
ಬಲಿಷ್ಠ ರಾಷ್ಟ್ರವಾಗಿ ಅಮೆರಿಕಾದ ಉದಯ
ವಿಶ್ವದಾದ್ಯಂತ 1927ರಲ್ಲಿ ಉಂಟಾದ ಆರ್ಥಿಕ ಮಹಾಕುಸಿತದಿಂದಾಗಿ ಅಮೆರಿಕಾದಲ್ಲಿನ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿತ್ತು. ಮೊದಲನೆಯ ಮಹಾಯುದ್ಧದಲ್ಲಿ ಅಮೆರಿಕಾ ಮಿತ್ರರಾಷ್ಟ್ರಗಳಿಗೆ ಸಾಕಷ್ಟು ಆರ್ಥಿಕ ಮತ್ತು ಸೈನಿಕ ಸಹಾಯ ನೀಡಿ ಮಿತ್ರ ರಾಷ್ಟ್ರಗಳ ಗೆಲುವಿಗೆ ಕಾರಣವಾಗಿತ್ತು. 1929 ರಲ್ಲಿ ಅಮೆರಿಕಾದ ಆರ್ಥಿಕ ಬೆಳವಣಿಗೆಯು ಕುಂಠಿತಗೊಂಡಿತು. ಇದರ ಪರಿಣಾಮವಾಗಿ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಉತ್ಪಾದನೆ ಕುಸಿಯಿತು, ಅಲ್ಲದೇ ಗಣಿಗಾರಿಕೆ, ಹಡಗು ಕಟ್ಟುವಿಕೆ, ಉಾಹಕರ ವಸ್ತುಗಳಾದ ಆಟೋಮೊಬೈಲ್ ಮತ್ತು ಗೃಹಬಳಕೆ ವಸ್ತುಗಳ ಉತ್ಪಾದನೆಗೆ ಹಿನ್ನೆಡೆ ಉಂಟಾಯಿತು. ಆರ್ಥಿಕ ಕುಸಿತ ರಾಜಕೀಯ ಬದಲಾವಣೆಗೆ ಸಾಕ್ಷಿಯಾಯಿತು.
ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಜಪಾನ್ ಅಮೆರಿಕಾದ ನೌಕಾನೆ ಪರ್ಲ್‌ಹಾರ್ಟರ್ ಮೇಲೆ ದಾಳಿ ನಡೆಸಿತು. ಇದರಿಂದಾಗಿ ಅಮೆರಿಕಾ ಮಿತರಾಷ್ಟ್ರಗಳ ಪರವಾಗಿ ಯುದ್ಧ ಪವೇಶಿಸುವಂತಾಯಿತು. ಜನತೆಯನ್ನು ಸೈನ್ಯವಾಗಿ ರೂಸ್‌ವೆಲ್ಸ್ ಯುದ್ಧಕ್ಕೆ ಸನ್ನದ್ಧಗೊಳಿಸಿದನು. ಮಹಿಳೆಯರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯಲು ಪ್ರೋತ್ಸಾಹಿಸಿದನು. ಅಮೆರಿಕಾ ಯುದ್ಧದಲ್ಲಿ ಜಯಗಳಿಸಿತು ದ್ವಿತೀಯ ಮಹಾಯುದ್ಧ ನಡೆಯುತ್ತಿರುವಾಗಲೇ ವಿಶ್ವಸಂಸ್ಥೆಯ ಸ್ಥಾಪನೆಗೆ ಸಹಕರಿಸಿ, ಅದರ ಸ್ಥಾಪನೆಗೂ ಕಾರಣವಾಯಿತು. 1945ರ ನಂತರ ಅಮೆರಿಕಾ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಕೀತಲ ಸಮರದ ನಂತರದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನವು ಏಕಮೇವ ಬಲಿಷ್ಠ ರಾಷ್ಟ್ರವಾಗಿ ಬೆಳೆದು ನಿಂತಿದೆ.
ಕಾಮೆಂಟ್ ಪೋಸ್ಟ್ ಮಾಡಿ