1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ತಾತ್ಕಾಲಿಕ ಸರ್ಕಾರ ರಚನೆಯಾಯಿತು. ಮೌಂಟ್ ಬ್ಯಾಟಿನ್ ಭಾರಶದ ಗವರ್ನರ್ ಜನರಲ್ ಆದರು, ಜವಾಹರಲಾಲ್ ನೆಹರೂರವರು ಭಾರತದ ಪ್ರಧಾನ ಮಂತ್ರಿಯಾಗಿ ಸರ್ಕಾರವನ್ನು ರಚಿಸಿದರು. 1950ರ ಜನವರಿ 26ರಂದು ಭಾರತದ ಸಂವಿಧಾನ ಜಾರಿಯಾಯಿತು. ಸಂವಿಧಾನ ಜಾರಿಯಾದ ನಂತರ ಡಾ. ಬಾಬು ರಾಜೇಂದ್ರ ಪ್ರಸಾದ್‌ರವರು ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರಾದರು. ಸಂವಿಧಾನವು ಭಾರತವನ್ನು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯವೆಂದು ಘೋಷಿಸಿತು. ಮುಂದೆ ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು “ಜಾತ್ಯತೀತ’ ಮತ್ತು ‘ಸಮಾಜವಾದಿ’ ಎಂಬ ಎರಡು ಅಂಶಗಳನ್ನು 1970ರಲ್ಲಿ ಸೇರಿಸಲಾಯಿತು. ಭಾರತ ಸರ್ಕಾರವು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಿತು, ಭಾರತ ಸಂಸದೀಯ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿತು.
ನಿಮಗಿದು ತಿಳಿದಿರಲಿ
ಸಂಸದೀಯ ಪ್ರಜಾಪ್ರಭುತ್ವ : ಜಗತ್ತಿನ ಹಲವು ಸಂವಿಧಾನಗಳನ್ನು ಅನುಭವಗಳನ್ನು ಅಭ್ಯಾಸ ನಡೆಸಿದ ಸಂವಿಧಾನ ರಚನಾ ಸಮಿತಿಯು, ಜನದಿಂದ ಆಯ್ಕೆಯಾದ ಸಂಸದರಿಂದ ಕೂಡಿದ ಸಂಸತ್ತು ಶ್ರೇಷ್ಟ ಮತ್ತು ಅಂತಿಮವಾಗಿರಬೇಕೆಂದು ಅಭಿಪ್ರಾಯಪಟ್ಟು ಸಂಸದೀ ತ್ವವನ್ನು ಜಾರಿಗೆ ತಂದಿತು.
ದೇಶೀಯ ಸಂಸ್ಥಾನಗಳ ವಿಲೀನೀಕರಣ
ಬಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿ 562 ಸಂಸ್ಥಾನಗಳಿದ್ದವು. ಬ್ರಿಟಿಷರು ದೇಶ ವಿಭಜನೆಯನ್ನು ಮಾಡಿದ್ದರೆ ಜೊತೆಯಲ್ಲೇ ಕ ಸಂಸ್ಥಾನಗಳ ಮುಂದೆ ಮೂರು ಅವಕಾಶಗಳನ್ನು ತೆರೆದಿಟ್ಟರು. ಒಂದು, ಭಾರತ ಒಕ್ಕೂಟಕ್ಕೆ ಸೇರಬಹುದು, ಎರಡನೆಯದು, ಪಾಕಿಸ್ತಾನಕ್ಕೆ ಸೇರಬಹುದು, ಮೂರನೆಯದು, ಯಾವುದೇ ದೇಶಕ್ಕೂ ಸೇರ್ಪಡೆಯಾಗದೆ ಸ್ವತಂತ್ರವಾಗಿರಬಹುದಾಗಿತ್ತು. ಈ ಹಿನ್ನೆಲೆಯಲ್ಲಿ 1947ರ ಎಲೀನ ಕಾಯ್ದೆಯ ಪ್ರಕಾರ ಭಾರತ ಸರ್ಕಾರ ಎಲ್ಲಾ ದೇಶೀಯ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಆಹ್ವಾನ ನೀಡಿತು. ಈ ರೀತಿ ವಿಲೀನಗೊಂಡವರಿಗೆ ಪ್ರತಿಯಾಗಿ ರಾಜ್ಯಾದಾಯವನ್ನು ಆಧರಿಸಿ ರಾಜಧನವನ್ನು ನಿಗದಿಪಡಿಸಿತು. ಜೊತೆಗೆ ಕೆಲವೊಂದು ಸವಲತ್ತು ಮತ್ತು ಸ್ಥಾನಮಾನಗಳನ್ನು ಸಹ ಇವರಿಗೆ ನೀಡಲಾಯಿತು, ಮುಂದೆ 1971ರಲ್ಲಿ ಈ ರಜಧನ ಮತ್ತು ಇತರ ಸ್ಥಾನಮಾನಗಳನ್ನು ಸರ್ಕಾರ ರದ್ದುಗೊಳಿಸಿತು. ಸಂಸ್ಥಾನಗಳು ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿ ಜುನಾವಡ್, ಹೈರಾಬಾದ ಮತ್ತು ಜಮ್ಮು ಕಾಶ್ಮೀರ, ಈ ಮೂರು ಸಂಸ್ಥಾನಗಳು ತೀವ್ರ ಪ್ರತಿರೋಧವನ್ನು ತೋರಿದರ, ‘ಉಕ್ಕಿನ ಮನುಷ್ಯ’ ಎಂದು ಖ್ಯಾತಿಯಾಗಿದ್ದ ಭಾರತದ ಪಥಮ ಗೃಹಮಂತ್ರಿ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ಭಾರತದ ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸುವ ಕಾರ್ಯಭಾರವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.
ಹೈದರಾಬಾದ್ ಈ ಸಂಸ್ಥಾನವು ನಿಜಾಮನ ಅಧೀನದಲ್ಲಿತ್ತು, ಈತನು ಸ್ವತಂತ್ರವಾಗುಳಿಯುವ ಉದ್ದೇಶದಿಂದ ಭಾರತಕ್ಕೆ ಸೇರಲು ನಿರಾಕರಿಸಿದರು. ಇದೇ ಸಂದರ್ಭದಲ್ಲಿ ಮುಸ್ಟರ ನೇತೃತ್ವದಲ್ಲಿ ತೆಲಂಗಾಣ ರೈತರ ಸಶಸ್ತ್ರ ಹೋರಾಟವು ನಿಜಾಮ ಮತ್ತು ಜಮೀನ್ದಾರರ ವಿರುದ್ಧ ನಡೆಯುತ್ತಿತ್ತು. ನಿಜಾಮನ ಕೂಡ ಪಡೆಯಾದ ರಜಾಕರ ಬಗೆಗೆ ಜನತೆಯಲ್ಲಿ ವ್ಯಾಪಕ ಪ್ರತಿರೋಧವಿತ್ತು. ಆಗ ಭಾರತ ಸರ್ಕಾರ ಸೈನ್ಯವನ್ನು ಕಳುಹಿಸಿ ನಿಜಾಮನನ್ನು ಸೋಲಿಸಿ ಹೈದರಾಬಾದ್ ಸಂಸ್ಥಾನವನ್ನು 1948ರಲ್ಲಿ ಭಾರತದೊಂದಿಗೆ ವಿಲೀನಗೊಳಿಸಲಾಯಿತು, ಸರದಾರ ಪಟೇಲರು ದೃಢಮನಸ್ಸಿನಿಂದ ಈ ಬಿಕ್ಕಟ್ಟಿಗೆ ಪರಿಹಾರ ನೀಡಿದರು.
ಜುನಾಘಡ್ : ಇದರ ನವಾಬನು ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಇಚ್ಚಿಸಿ ಬಲೀಕರಣ ಕಾನೂನಿಗೆ ಸಹಿ ಹಾಕಿದನು. ಆಗ ಪಜೆಗಳು ಆತನ ವಿರುದ್ಧ ಬೀದಿಗಿಳಿದರು. ಇದನ್ನು ಎದುರಿಸಲಾಗದೆ ನವಾಜನು ರಾಜ್ಯ ಬಿಟ್ಟು ಪಲಾಯನ ಮಾಡಿದನು. ಅಲ್ಲಿನ ದಿವಾನ ಭಾರತ ಸರ್ಕಾರಕ್ಕೆ ಮಾಡಿದ ಮನವಿಯನ್ನು ಆಧರಿಸಿ ಸೈನ್ಯವನ್ನು ಕಳುಹಿಸಿ ಶಾಂತಿ ಸ್ಥಾಪನೆ ಮಾಡಲಾಯಿತು. 1949ರಲ್ಲಿ ಜುನಾಗಡ್ ಭಾರತ ಒಕ್ಕೂಟಕ್ಕೆ ಸೇರ್ಪಡೆಯಿತು.
ಜಮ್ಮು-ಕಾಶ್ಮೀರ : ಜಮ್ಮು-ಕಾಶ್ಮೀರಿನ ರಾಜನಾಗಿದ್ದ ಪರಿಸಿಂಗ್‌ನ್ನು ಸ್ವತಂತ್ರವಾಗುಳಿಯಲು ನಿರ್ಧರಿಸಿದ್ದನು ಜಮ್ಮು ಕಾಶ್ಮೀರವು ಭಾರತಕ್ಕೆ ಸೇರಿ ಬಡಬಹುದೆಂಬ ಅಂಶಕದಿಂದ ಪಾಕಿಸ್ತಾನವು ಕಾಶ್ಮೀರ ಕಣಿವೆಯ ಮುಸ್ಲಿಂ ಬುಡಕಟ್ಟು ಜನರು ದಾಳಿ ಮಾಡುವಂತೆ ಪ್ರಚೋದಿಸಿತು, ಪಾಕಿಸ್ತಾನ ಸೇನೆಯ ದಂಬಲಿತ ಪರಾಣ ಬುಡಕಟ್ಟು ಜನಾಂಗವು ಭಾರತದ ಪ್ರದೇಶಕ್ಕೆ ನುಗ್ಗಲು ಪ್ರಯತ್ನಿ, ಸಾಕಷ್ಟು ಪ್ರದೇಶವನ್ನು ಆಕ್ರಮಿಸಿತು, ಹರಿಸಿಂಗ್ ಭಾರತದ ಒಕ್ಕೂಟಕ್ಕೆ ಸೇರಲು ಸಮ್ಮತಿಸದ ಭಾರತೀಯ ಸೇನೆ ಅಲ್ಲಿಗೆ ಪ್ರವೇಶಿಸುವಂತಿರಲಿಲ್ಲ. ಆ ಸಂದರ್ಭದ ಗಂಭೀರತೆಯನ್ನು ಅರಿತ ರಾಜ ಹರಿಸಿಂಗನು ಆಕ್ಟೋಬರ್ 1947ರಲ್ಲಿ ಭಾರತದಲ್ಲಿ ಕಾಶ್ಮೀರವನ್ನು ವಿಲೀನಗೊಳಿಸಲು ಸಹಿಯನ್ನು ಹಾಕಿದನು. ನಂತರ ಭಾರತ ಸೇನೆಯು ಪಾಕಿಸ್ತಾನ ಬೆಂಬಲಿತ ಪಡೆಯನ್ನು ಓಮೆಟಿಸಿತು. ಇದೇ ಸಂದರ್ಭದಲ್ಲಿ ಈ ವಿಷಯವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಲಾಯು, ಆದರೆ, ಕಾಶ್ಮೀರದ ಒಂದು ಭಾಗ ಪಾಕಿಸ್ತಾನದ ಮರದಲ್ಲಿ ಉಳಿಯು, ಅದರ ವಿರುದ್ಧ ಭಾರತವು ವಿಶ್ವಸಂಸ್ಥೆಗೆ ದೂರು ಸಲ್ಲಿಸಿತು. ವಿಶ್ವಸಂಸ್ಥೆ ಕದನ ವಿರಾಮದ ಆದೇಶವನ್ನು ಜನವರಿ 1, 1949 ರಂದು ನೀಡಿತು. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯವ್ಯ ಪ್ರದೇಶವನ್ನು ಪಾಕ್ ಆಕ್ರಮಿತ ಪ್ರದೇಶ’ವೆಂದು ಈಗಲೂ ಕರೆಯಲಾಗುತ್ತದೆ, ಬೇರೆಲ್ಲಾ ಸಂಸ್ಥಾನಗಳ ವಿಲೀನಕ್ಕಿಂತ ಕಾಶ್ಮೀರದ ವಿಲೀನವು ವಿಶಿಷ್ಟವಾಗಿದೆ. ಪಾಂಡಿಚೇರಿ : ಸ್ವಾತಂತ್ರ್ಯದ ನಂತರದಲ್ಲಿ ಫ್ರೆಂಚ್‌ರು ತಮ್ಮ ವಸಾಹತುಗಳಾದ ಪಾಂಡಿಚೇರಿ, ಕಾರೈಕಲ್, ಮಾಜಿ ಮತ್ತು ಚಂದ್ರನಗರಗಳ ಮೇಲಿನ ಹಿಡಿತವನ್ನು ಮುಂದುವರಿಸಿದ್ದರು. ಇವು ಭಾರತಕ್ಕೆ ಸೇರಬೇಕೆಂದು ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ 1954ರಲ್ಲಿ ಈ ಪ್ರದೇಶಗಳು ಭಾರತಕ್ಕೆ ಸೇರ್ಪಡೆಗೊಂಡವು. 1963ರಲ್ಲಿ ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು.
ಗೋವಾ : ಪೋರ್ಚುಗೀಸರ ವಸಾಪಶುವಾಗಿ ಮುಂದುವರಿದ ಗೋವಾವನ್ನು, ಭಾರತಕ್ಕೆ ಸೇರಿಸಬೇಕೆಂದು ನಿರಂತರವಾದ ಚಳವಳಿ ನಡೆಯಿತು. ಗೋವಾವನ್ನು ತೆರವುಗೊಳಿಸಬೇಕೆಂದು ಆದೇಶ ನೀಡಿದರೂ ಬಗ್ಗದ ಪೋರ್ಚುಗೀಸರು, ಆಫ್ರಿಕಾ ಮತ್ತು ಯುರೋಪಿನಿಂದ ಹೆಚ್ಚಿನ ಸೈನ್ಯವನ್ನು ತರಿಸಿಕೊಂಡು ಚಳವಳಿಯನ್ನು ದಮನ ಮಾಡಿ ಅಧಿಕಾರವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸಿದರು. 1955ರಲ್ಲಿ ಭಾರತದ ವಿವಿಧ ಭಾಗಗಳಿಂದ ಸತ್ಯಾಗ್ರಹಿಗಳು ಒಂದು ಗೋವಾದಿಂದ ವಸಾಹತುಶಾಹಿಗಳು ತೊಲಗಬೇಕೆಂದು ವಿಮೋಚನಾ ಹೋರಾಟ ಪ್ರಾರಂಭಿಸಿದರು. 1961ರಲ್ಲಿ ಭಾರತದ ಸೈನ್ಯ ಮಧ್ಯೆ ಪ್ರವೇಶಿಸಿ ಗೋವಾವನ್ನು ವಶಪಡಿಸಿಕೊಂಡಿತು. 1987ರವರೆಗೂ ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ನಂತರ ರಾಜ್ಯವಾಯಿತು.
ಭಾಷಾವಾರು ರಾಜ್ಯಗಳ ರಚನ
ಸ್ವಾತಂತ್ರ, ಹೋರಾಟದ ಸಂದರ್ಭದಲ್ಲಿಯ ಪ್ರಾರಂಭವಾದ ಈ ಹೋರಾಟ ಭಾರತ ಸ್ವತಂತ್ರಗೊಂಡ ನಂತರವೂ ಮುಂದುವರದ ಪ್ರಮುಖವಾದ ಪ್ರಜಾಸತ್ತಾತ್ಮಕ ಚಳವಳಿಯಾಗಿದೆ. ಜನರಿಗೆ ಉತ್ತಮವಾದ ಆಡಳಿತವನ್ನು ನೀಡಲು ಜನರ ಭಾಷೆಯನ್ನು ಆಧರಿಸಿದ ಭೌಗೋಳಿಕ ಗಡಿಗಳನ್ನು ಗುರುತಿಸಬೇಕೆಂಬ ಒತ್ತಾಯ ತೀವ್ರವಾಗಿತ್ತು. ಬ್ರಿಟಿಷ್ ಮತ್ತು ದೇಯ ಸಂಸ್ಥಾನಗಳೆರಡರಲ್ಲೂ ಜನರಾಡುವ ಭಾಷೆಯಲ್ಲಿ ಆಡಳಿತ ನಡೆಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾಷಾವಾರು ರಾಜ್ಯಗಳನ್ನು ರಚಿಸಬೇಕೆಂಬ ಕೂಗು ತೀವವಾಗಿತ್ತು. ವಿಶಾಲಾಂದ ರಾಜ್ಯ ರಚಿಸಬೇಕೆಂದು ಆ೦ಧ್ರಮಹಾಸಭಾದ ನೇತೃತ್ವದಲ್ಲಿ 1952ರಲ್ಲಿ ಪಟ್ಟಿ ಶ್ರೀರಾಮುಲು 58 ದಿನಗಳ ಉಪವಾಸ ಸತ್ಯಾಗ ನಡೆಸಿ ಆಸುನೀಗಿದ ನಂತರ ಈ ಬೇಡಿಕೆ ತೀವ್ರ ಸ್ವರೂಪವನ್ನು ಪಡೆಯಿತು. ಇದರ ಪರಿಣಾಮವಾಗಿ ಮೊದಲ ಭಾಷಾವಾರು ರಾಜ್ಯವಾಗಿ 1953ರಲ್ಲಿ ಆಂಧ್ರಪ್ರದೇಶ ರಚನೆಯಾಯಿತು. 1953ರಲ್ಲಿ ಸರ್ಕಾರವು ರಾಜ್ಯ ಮನರ್ವಿಂಗಡಣಾ ಆಯೋಗವನ್ನು ರಚಿಸಿತು. ಇದರಲ್ಲಿ ಫಜಲ್ ಅಲಿ ಅಧ್ಯಕ್ಷರಾಗಿ, ಕೆ.ಎಂ.ಳೆರ್ ಮತ್ತು ಹೆಚ್.ಎನ್.ಕುಂಜು ಸದಸ್ಯರಾಗಿದ್ದರು. ಈ ಆಯೋಗದ ವರದಿಯಂತೆ 1956ರಲ್ಲಿ ರಾಜ್ಯ ಪುನರ್ವಿಂಗಡಣೆ, ಕಾನೂನು ಜಾರಿಗೆ ಬಂದಿತು. ಈ ಕಾನೂನಿನ ಪ್ರಕಾರ ಅಂದು ದೇಶದಲ್ಲಿ 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ರಚನೆಯಾದವು.
ಕನ್ನಡ ಮಾತನಾಡುವ ಪ್ರದೇಶಗಳು ಹಲವು ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿದ್ದವು. ಅಕ್ಟೋಬರ್ 24, 1947ರಲ್ಲಿ ಮೈಸೂರು ರಾಜ್ಯವಾಯಿತು. ಇತರೆ ಕನ್ನಡ ಭಾಷಾ ಪ್ರದೇಶಗಳನ್ನು ಒಟ್ಟುಗೂಡಿಸುವ ಬೇಡಿಕೆಯಿಟ್ಟು 'ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು' ನೇತೃತ್ವದಲ್ಲಿ ಚಳವಳಿ ನಡೆಯಿತು. ಅಂತಿಮವಾಗಿ 1956 ನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯ'ವು ಅಸ್ತಿತ್ವಕ್ಕೆ ಬಂದಿತು. ಮುಂದೆ 1973ರಲ್ಲಿ ಕರ್ನಾಟಕ' ಎಂದು ಮರುನಾಮಕರಣ ಮಾಡಲಾಯಿತು. ಇಂದು ಭಾರತದಲ್ಲಿ ಒಟ್ಟು 28 ರಾಜ್ಯಗಳು ಮತ್ತು ದೆಹಲಿಯ ಸೇರಿದಂತೆ 9 ಕೇಂದ್ರಾಡಳಿತ ಪ್ರದೇಶಗಳು ಇವೆ.
ಕಾಮೆಂಟ್ ಪೋಸ್ಟ್ ಮಾಡಿ