ಸ್ವತಂತ್ರ್ಯ ಭಾರತದ ಇತಿಹಾಸ

 

1947 ಆಗಸ್ಟ್ 15 ಭಾರತದ ಪಾಲಿಗೆ ಸಂಭ್ರಮದ ಜೊತೆಗೆ ಸಂಕಟದ ಸಂದರ್ಭವೂ ಆಗಿತ್ತು, ಸ್ವಾತಂತ್ರ್ಯವೆಂಬುದು ಆಸಂಖ್ಯೆ ಹುತಾತ್ಮರ ತ್ಯಾಗ ಮತ್ತು ಬಲಿದಾನಗಳ ಫಲವಾಗಿತ್ತು, ದೇಶ ವಿಭಜನೆಯ ಹೊಸ ಸವಾಲುಗಳನ್ನು ಸೃಷ್ಟಿಸಿತು. ಈ ಸವಾಲುಗಳನ್ನು ಹೊಸ ಸರಕಾರ ಹೇಗೆ ಎದುರಿಸಿತು ಎಂದು ಆರಿಯುವ ಮೊದಲು ಅದು ಸೃಷ್ಟಿಸಿದ ಪರಿಣಾಮಗಳನ್ನು ಅವಲೋಕಿಸಬೇಕು.

ಮೊದಲನೆಯದಾಗಿ, ದೇಶ ವಿಭಜನೆಯು ಹೊಸ ಸಂಕಟಗಳನ್ನು ಸೃಷ್ಟಿಸಿತು, ದೇಶವು ಮತೀಯ ಗಲಭೆಗಳ ದಳುರಿಯಿಂದ ನಲುಗಿತ್ತು. ಎರಡೂ ಹೊಸರಾಷ್ಟ್ರಗಳಿಂದ ಮಿಲಿಯಗಟ್ಟಲೆ ಜನ ತಮ್ಮ ಹೊಸ ಬದುಕಿನ ಭರವಸೆಗಾಗಿ ತಮ್ಮ ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಳ್ಳಲಾರಂಭಿಸಿದರು. ಭಾರತಕ್ಕೆ ಬಂದ ನಿರಾತ್ತಿತರಿಗೆ ಊಟ ಮತ್ತು ಅವರಿಗೆ ಬೇಕಾದ ಮೂಲಭೂತ ಅಗತ್ಯಗಳನ್ನು ಪೂರೈಸುವುದೇ ದೊಡ್ಡ ಸಮಸ್ಯೆಯಾಯಿತಾ ಪಾಕಿಸ್ತಾನಕ್ಕೆ ಹೋದವರಿಗಿಂತ ಭಾರತಕ್ಕೆ ಬಂದವರ ಸಂಖ್ಯೆ ಗಣನೀಯವಾಗಿತ್ತು.

ಎರಡನೆಯದಾಗಿ, ದೇಸಿ ಸಂಸ್ಥಾನಗಳ ಬಲಿನೀಕರಣ ಬಹಳ ದೊಡ್ಡ ಸಮಸ್ಯೆಯಾಗಿತ್ತು, ಸುಮಾರು 562 ದೇಶಿ ಸಂಸ್ಥಾನಗಳಲ್ಲಿ ಬಹುತೇಕ ಸಂಸ್ಥಾನಗಳು, ಆರಂಭಿಕ ಹಿಂಜರಿಕೆಯೊಂದಿಗೆ ಅನಿವಾರ್ಯವಾಗಿ ಭಾರತದ ಒಕ್ಕೂಟವನ್ನು ಸೇರಲೇಬೇಕಾಯಿತು. ಅವರ ಉತ್ತರದಲ್ಲಿ ಕಾಶ್ಮೀರ, ಜುನಾಘಡ ಮತ್ತು ದಕ್ಷಿಣದಲ್ಲಿ ಹೈದರಾಬಾದ್ ಸಂಸ್ಥಾನಗಳು ವಿಲೀನೀ ಪ್ರಕ್ರಿಯೆಗೆ ಸುಲಭವಾಗಿ ಒಳಗಾಗಲಿಲ್ಲ. ಸರದಾರ್‌ ವಲ್ಲಭವಾಯಿ ಪಟೇಲರು ಇದನ್ನು ಸವಾಲಾಗಿ ಸ್ವೀಕರ ಯಶಸ್ಸನ್ನು ಪಡೆದರು. ಈ ಮೂಲಕ ದೇಶದ ಆಂತರಿಕ ಸುಭದ್ರತೆಯನ್ನು ಕಾಪಾಡಲಾಯಿತು. ಇದರ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವ ಹೊಸ ಪ್ರಕ್ರಿಯೆಗೂ ಚಾಲನೆಯನ್ನು ನೀಡಲಾಯಿತು.

ಮೂರನೆಯದಾಗಿ, ವಿಭಜನೆಯು ಭಾರತದ ಅರ್ಥವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಿತ್ತು. ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ ವಲಯಗಳನ್ನು ಸನರ್ ಪರಿಶೀಲಿಸಿ ಅವುಗಳಿಗೆ ಸ್ಥಿರತೆಯನ್ನು ತಂದುಕೊಡಬೇಕಾಗಿತ್ತು. ಈ ಕ್ಷೇತ್ರಗಳ ಮೇಲೆ ಅವಲಂಬಿತವಾಗಿದ್ದ ಸಮುದಾಯಗಳಿಗೆ ಹೊಸ ನೀತಿಗಳನ್ನು ಜಾರಿಗೊಳಿಸುವ ಮೂಲಕ ಭರವಸೆಯನ್ನು ಸೃಷ್ಟಿಸಬೇಕಾಗಿತ್ತು. ಏಕೆಂದರೆ ವಸಾಹತುಶಾಹಿ ಶಕ್ತಿಯು ಸುಮಾರು ಎರಡೂವರೆ ಶತಮಾನಗಳ ಅವಧಿಯಲ್ಲಿ ಭಾರತದ ಸಂಪನ್ಮೂಲಗಳನ್ನು ನಿರಂತರವಾಗಿ ಶೋಷಿಸಿತು. ದಾದಾಬಾಯಿ ನವರೋಜಿಯವರು ತಮ್ಮ ‘ಸೋರಿಕೆಯ ಸಿದ್ಧಾಂತ’ದಲ್ಲಿ ಈ ವಿಷಯಗಳನ್ನು ಕೂಲಂಕುಷವಾಗಿ ಚರ್ಚಿಸಿದ್ದಾರೆ.

ನಾಲ್ಕನೆಯದಾಗಿ, ಭಾರತವು ತನ್ನ ಸಂವಿಧಾನವನ್ನು ಹೊಸದಾಗಿ ರೂಪಿಸಿಕೊಳ್ಳುವ ಮತ್ತೊಂದು ಸವಾಲಿತ್ತು. ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಕಾನೂನುಗಳ ಅಡಿಯಲ್ಲಿ ಭಾರತವು ಸ್ಥಿರತೆಯನ್ನು ಕಂಡುಕೊಳ್ಳುವುದರ ಜೊತೆಗೆ ಒಂದು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಉದಯವಾಗಬೇಕಾಗಿತ್ತು, ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಂವಿಧಾನ ಕರಡು ಸಮಿತಿಯು ಭಾರತಕ್ಕೆ ಕರಡು ಸಂವಿಧಾನವನ್ನು ರೂಪಿಸಿಕೊಟ್ಟಿತು. ಇದನ್ನು ಸಂವಿಧಾನ ರಚನಾ ಸಭೆಯು ಸ್ವೀಕರಿಸುವ ಮೂಲಕ ವಿಶಿಷ್ಟ ಸಂವಿಧಾನವನ್ನು ನೀಡಿತು. ಇದರ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಸಂಸ್ಥೆಗಳು ಬಲಗೊಳ್ಳಲು ಸಾಧ್ಯವಾಯಿತು.

ಐದನೆಯದಾಗಿ, ಭಾರತವು ದೀರ್ಘ ಹೋರಾಟದ ಮೂಲಕ ಪಡೆದ ಸ್ವಾತಂತ್ರವನ್ನು ನೆರೆಯ ಶತ್ರುಗಳಿಂದ ಕಾಪಾಡಿಕೊಳ್ಳಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಿಕೊಳ್ಳಲು ಬೇಕಾದ ಮಾರ್ಗಗಳನ್ನು ಕಂಡುಕೊಳ್ಳತೊಡಗಿತು. ಇಂದು ಭಾರತದ ಮಿಲಿಟು ಶಕ್ತಿಯು ಜಗತ್ತಿನ ಯಾವ ಮಿಲಿಟರಿ ಶಕ್ತಿಗೂ ಕಡಿಮೆಯಿಲ್ಲ. ಈ ಶಕ್ತಿಯ ಆರಂಭಿಕ ಹೆಜ್ಜೆಗಳನ್ನು ಅವಶ್ಯಕವಾಗಿ ನಾವು ಮನಗಾಣಬೇಕು.

ಆರನೆಯದಾಗಿ, ಭಾರತವ ಜಾತಿ ಮತ್ತು ಲಿಂಗ ಸಂಬಂಧಿ ಸ್ವರೂಪದ ಅಸಮಾನತೆಗಳ ಸಮಾಜವಾದದ್ದರಿಂದ ಅವುಗಳಿಗೆ ಸಮಾನತೆಯ ಅಶಯಗಳ ಅಡಿಯಲ್ಲಿ ಸಬಲೀಕರಣದ ಹೊಸ ಮಾರ್ಗವೊಂದನ್ನು ಕಂಡುಕೊಳ್ಳುವ ಅನಿವಾರ್ಯತೆ ಇತ್ತು. ಇದರ ಜೊತೆಗೆ ಹೊಸ ಹಣಕಾಸು ವ್ಯವಸ್ಥೆ, ವಿದೇಶಾಂಗ ನೀತಿಯ ಸ್ವರೂಪ ಮುಂತಾದ ಗುರುತರ ಸ್ವರೂಪದ ಸವಾಲುಗಳನ್ನು ಎದುರಿಸಬೇಕಾಗಿತ್ತು. ಈ ಎಲ್ಲ ಸವಾಲುಗಳಿಗೆ ಹೊಸದಾಗಿ ರೂಪುಗೊಂಡ ಭಾರತವು ಮುಖಾಮುಖಿಯಾಗಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಕ್ರಮೇಣ ಕಟ್ಟಿಕೊಂಡಿತು. ಮತೀಯ ಗಲಭೆಗಳು

ಜಗತ್ತಿನ ಚರಿತ್ರೆಯಲ್ಲಿ ಯುದ್ಧಗಳಲ್ಲಿ ಹೆಚ್ಚಿನ ಜನರು ಮತೀಯ ಸಂಘರ್ಷಗಳಲ್ಲಿ ಕಳೆದುಕೊಂಡರು ಎನ್ನುವ ಮಾತಿದೆ. ಇಂದಿಗೂ ಕೂಡ ಧಾರ್ಮಿಕ ನೆಲೆಯಲ್ಲಿ ನಡೆಯುವ ಸಂಘರ್ಷಗಳು ಎಲ್ಲ ಸಮಾಜಗಳಲ್ಲೂ ನಿರಂತರ ಆತಂಕಗಳನ್ನು ಸೃಷ್ಟಿಸುತ್ತಿವೆ. ಚಾರಿತ್ರಿಕವಾಗಿ ಭಾರತ ದೇಶದ ಅನುಭವವು ಇದಕ್ಕಿಂತ ಭಿನ್ನವಾಗಿಲ್ಲ.

ಭಾರತವು ಬಹುಧರ್ಮಗಳ ರಾಷ್ಟ್ರ ಬೆರೆ, ಕಾಲಪಟ್ಟಗಳಲ್ಲಿದ್ದ ರಾಜಕೀಯ ಕಾರಣಗಳಿಂದ ವಿದೇಶಿಯರ ಆಕ್ರಮಣಗಳಿಗೆ ಒಳಗಾದ ಕಾರಣದಿಂದ ಬಹುಧರ್ಮಿಯರ ರಾಷ್ಟ್ರವಾಗಲೇಬೇಕಾದ ಚಾರಿತ್ರಿಕ ಅನಿವಾರ್ಯ ಭಾರತಕ್ಕೆ ಬಂತು. ಈ ಭಿನ್ನತೆಗಳು ಬ್ರಿಟಿಷರ ಆಡಳಿತದ ಕಾಲಘಟ್ಟದಲ್ಲಿ ಅವರು ಅನುಸರಿಸಿದ 'ಒಡೆದು ಆಳುವ ನೀತಿಯಿಂದ ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಿ ರಾಜಕೀಯ ಆಯಾಮಗಳನ್ನು ಪಡೆದುಕೊಂಡವು. ಮತೀಯ ಸಂಘರ್ಷದ ಬೀಜಗಳು ಕೊನೆಗೆ ಮತೀಯವಾದವನ್ನು ಸೃಷ್ಟಿಸಿದವು. ಸೃಷ್ಟಿಯಾದ ಸಂಘರ್ಷಗಳಲ್ಲಿ ಹಿಂದೂಗಳು ಮತ್ತು ಮುಸ್ಲಿಂರ ನಡುವಿನ ಸಂಘರ್ಷಗಳು ಅನೇಕ ಹೀಗೆ ದುರಂತಗಳನ್ನು ಸೃಷ್ಟಿಸಿದವು. ಸ್ವಾತಂತ್ರ್ಯದ ಹೋರಾಟದ ಕಾಲಘಟ್ಟದಲ್ಲಿ 'ಹಿಂದೂ' ಮತ್ತು 'ಮುಸ್ಲಿಂ' ಎಂಬ ಪ್ರತ್ಯೇಕ ಆಸ್ತಿತೆಗಳು ಹುಟ್ಟಿಕೊಂಡು ಬೆಳೆಯತೊಡಗಿದವು. ಇದರ ಪರಿಣಾಮ 1947ರಲ್ಲಿ ಭಾರತ ಸ್ವಾತಂತ್ರ್ಯವಾದಾಗ, ವಿಶೇಷವಾಗಿ ಉತ್ತರಭಾರತವು ಹಿಂದೆಂದೂ ಕಾಣದ ಮತೀಯ ಗಲಭೆಗಳಿಗೆ ಸಾಕ್ಷಿಯಾಯಿತು. ಲಕ್ಷಾಂತರ ಜನ ಹಿಂದೂಗಳು ಮತ್ತು ಮುಸ್ಲಿಮರು ಈ ಕೋಮುದಳ್ಳುರಿಯಲ್ಲಿ ಸುಟ್ಟು ಕರಕಲಾಗಿ ಹೋದರು. ಕೆಲವೇ ತಿಂಗಳುಗಳಲ್ಲಿ ಐದು ಲಕ್ಷ ಜನರು ಹತ್ಯೆಗೀಡಾದರು ಹಾಗೂ ಸಾವಿರಾರು ಕೋಟೆಗಳು, ಆಸ್ತಿಪಾಸಆಚರಿಸಿ ನಷ್ಟಕ್ಕೆ ಈಡಾದವು. ಭಾರತವು ತಾನು ಪಡೆದ ಸ್ವಾತಂತ್ರ್ಯವನ್ನು 15-08-1947ರಂದು ದೆಹಲಿಯಲ್ಲಿ ಆಚರಿಸಿಿ ಗಲಭೆಗೊಳಗಾದ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳುವುದರಲ್ಲಿ ಮಗ್ನರಾಗಿದ್ದರು.

ಸ್ವಾತಂತ್ರ್ಯಾನಂತರ ಭಾರತದ ಮೊದಲ ಪ್ರಧಾನಿಯವರಾದ ಜವಹರ್ ಲಾಲ್ ನೆಹರು ಅವರಿಗೆ ಇದು ಅತ್ಯಂತ ದೊಡ್ಡ ಸವಾಲಾಗಿತ್ತು. 'ನೆಹರೂ ಅವರು ಆದ್ಯತೆಯ ಮೇರೆಗೆ ತಮ್ಮ ಎಲ್ಲಾ ಆಡಳಿತಾತ್ಮಕ ಮತ್ತು ರಾಜಕೀಯ ಶಕ್ತಿಯನ್ನು ಬಳಸಿ ಕೆಲವೇ ತಿಂಗಳುಗಳಲ್ಲಿ ಕೋಮುಗಲಭೆಗಳನ್ನು ನಿಯಂತ್ರಣಕ್ಕೆ ತಂದರು. ಕೋಮುದಳ್ಳುರಿಯ ಭಯಾನಕ ದೃಶ್ಯಗಳು ನೆವರು ಅವರನ್ನು ಜಾತ್ಯತೀತ ರಾಜ್ಯದ ನಿರ್ಮಾಣಕ್ಕೆ ಪ್ರೇರೇಪಿಸಿದವು. ಭಾರತವು ಜಾತ್ಯತೀತ ರಾಷ್ಟ್ರವಾಗಿ ತನ್ನ ಸಂವಿಧಾನಾತ್ಮಕ ಆಶಯಗಳನ್ನು ಅಳವಡಿಸಿಕೊಳ್ಳಲು ಈ ಹಿನ್ನೆಲೆ ಬಹುತೇಕ ಕಾರಣವಾಯಿತು. ಪ್ರತ್ಯೇಕ ರಾಷ್ಟ್ರವಾಗಿ ಪಾಕಿಸ್ತಾನದ ಹುಟ್ಟನ್ನು ಖಾನ್ ಅಬ್ದುಲ್ ಗಫಾರ್ ಖಾನ್, ಮೌಲಾನ ಆಬುಲ್ ಕಲಾಂ ಮುಂತಾದವರು ವಿರೋಧಿಸಿದರೂ ಅದನ್ನು ತಡೆಯಲಾಗಲಿಲ್ಲ.

ಇಂದಿಗೂ ಕೋಮು ಸಂಘರ್ಷಗಳು ಮುಂದುವರೆದಿವೆ, ಕೋಮು ಸಂಘರ್ಷಕ್ಕೆ ಅಂತರಾಷ್ಟ್ರೀಯ ಆಯಾಮಗಳು ಇವೆ. ಭಾರತದ ಸಂವಿಧಾನವು ಧರ್ಮವನ್ನು ಪ್ರತಿ ವ್ಯಕ್ತಿಯ ಖಾಸಗಿ ವಿಷಯವನ್ನಾಗಿಸಿದೆ. ಧರ್ಮ ನಿರಪೇಕ್ಷತೆಯ ತಳಹದಿಯಲ್ಲಿ ದೇಶ ಬೆಳೆಯಬೇಕು ಮತ್ತು ಮುನ್ನಡೆಯಬೇಕು ಎನ್ನುವುದೇ ಭಾರತ ಸಂವಿಧಾನದ ಆಶಯ. ಈ ಅರೆಯವನ್ನು ಎಲ್ಲ ಭಾರತೀಯರು ಆರಿಬ ಬಾಳಬೇಕಾಗಿದೆ.


ನಿರಾಶ್ರಿತರ ಸಮಸ್ಯೆ

ದೇಶವಿಭಜನೆಯ ಕಾಲದಿಂದ ನಿರಾಶ್ರಿತರ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. 1947ರಲ್ಲಿ ಸ್ವಾತಂತ್ರ್ಯ ಬಂದ ಸಂದರ್ಭದಲ್ಲೇ ಅನೇಕ ಮಿಲಿಯನ್ ಜನರು ಭಾರತ ಮತ್ತು ಪಾಕಿಸ್ತಾನದ ನಡುವೆ ತಮ್ಮ ಮುಂದಿನ ಬದುಕಿನ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನಮಾಡಿದರು. ತಮ್ಮ ತಮ್ಮ ಹುಟ್ಟಿ ಬೆಳೆದ ಊರುಗಳನ್ನು ಬಿಟ್ಟು ಅನೇಕರು ತಮ್ಮ ಧರ್ಮಿಯರೇ ಬಹುಸಂಖ್ಯಾತರಿರುವ ದೇಶದ ಕಡೆ ಮುಖಮಾಡಿದರು. ಭಾರತಕ್ಕೆ ಬಂದ ನಿರಾಶ್ರಿತರ ಸಂಖ್ಯೆ 6 ಲಕ್ಷ ಮಿಲಿಯನ್ ನಿರಾಶ್ರಿತರ ಸಮಸ್ಯೆಯ ಸ್ವಾತಂತ್ರೋತ್ತರ ಭಾರತದ ಚರಿತ್ರೆಯಲ್ಲಿ ಗಂಭೀರವಾದ ಸಮಸ್ಯೆಯಾಗಿ ಬೆಳೆಯುತ್ತಾ ಹೋಯಿತು, ಪತ್ತಿಮ ಪಾಕಿಸ್ತಾನದಿಂದ ಬಂದ ನಿರಾಶ್ರಿತರ ಸಮಸ್ಯೆಗಳನ್ನು ಬಹುತೇಕ 1951 ರ ವೇಳೆಗೆ ಪರಿಹರಿಸಲಾಯಿತು.

ಆದರೆ ಪೂರ್ವ ಪಾಕಿಸ್ತಾನದಿಂದ (ಇಂದಿನ ಬಾಂಗ್ಲಾದೇಶ) ಬರಲಾರಂಭಿಸಿದ ನಿರಾಶ್ರಿತರ ಸಂಖ್ಯೆಯು ಅನೇಕ ವರ್ಷಗಳ ಕಾಲ ಮುಂದುವರೆಯಿತು. ಬಂಗಾಳ ಪ್ರಾಂಶಕ್ಕೆ ಹೊಂದಿಕೊಂಡಂತಿದ್ದ ಪೂರ್ವ ಪಾಕಿಸ್ತಾನವು ಸ್ವಾತಂತ್ರ್ಯಾನಂತರ ಕೋಮುದಳ್ಳುರಿಯನ್ನು ಎದುರಿಸಬೇಕಾಯಿತು. ಇದರ ಪರಿಣಾಮವಾಗಿ 1971ರ ವರೆಗೂ ನಿರಾಶ್ರಿತರು ವಲಸೆ ಬರುತ್ತಿದ್ದರು. ಭಾರತವು ಬೆಂಬಲಿಸಿದ 1971ರ ಬಾಂಗ್ಲಾ ವಿಮೋಚನಾ ಯುದ್ಧದ ಪರಿಣಾಮವಾಗಿ ಸುಮಾರು 10 ಲಕ್ಷ ನಿರಾಶ್ರಿತರು ಭಾರತಕ್ಕೆ ಬಂದರು. ಭಾರತ ಸರಕಾರ ಮತ್ತು ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ ಮತ್ತು ತ್ರಿಪುರ ರಾಜ್ಯ ಸರಕಾರಗಳು ಈ ನಿರಾಶ್ರಿತರಿಗೆ ಅವಶ್ಯಕವಾದ ಅನುಕೂಲಗಳನ್ನು ಕಲ್ಪಿಸುವುದರ ಮೂಲಕ ಅವರು ಭಾರತದಲ್ಲಿ ತಮ್ಮ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಸಹಾಯಮಾಡಿದವು. "ವಾಂಗ್ಲಾದಿಂದ ಬಂದ ಬಹುತೇಕ ನಿರಾಶ್ರಿತರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿದ್ದುದರಿಂದ ಬಂಗಾಳದಲ್ಲಿ ಮಾತ್ರ ನೆಲೆಯೂರಲು ಪ್ರಯತ್ನಿಸಿದರು. ಇದರ ಪರಿಣಾಮ ಪಶ್ಚಿಮ ಬ೦ಗಾಳದ ಪ್ರದೇಶಗಳು ಹೆಚ್ಚು ಜನಸಂಖ್ಯೆಯ ಒತ್ತಡಕ್ಕೆ ಒಳಗಾದವು. ಭಾರತವೇ 1960ರ ದಶಕದ ಉತ್ತರಾರ್ಧ ಮತ್ತು 1970ರ ದಶಕದ ಮೊದಲಾರ್ಧದಲ್ಲಿ ತಾನೇ ದೊಡ್ಡ ಆರ್ಥಿಕ ಸಂಕಷ್ಟಗಳಿಗೆ ಒಳಗಾಗಿತ್ತು ಬರಗಾಲಗಳು ನಮ್ಮ ಆರ್ಥಿಕ ಸ್ಥಿತಿಯನ್ನು ಅಲುಗಾಡಿಸಿದ್ದರೂ, ನಿರಾಶ್ರಿತರ ಸಮಸ್ಯೆಗಳನ್ನು ಮಾನವೀಯ ನೆಲೆಯಲ್ಲಿ ನೋಡಿ ಪರಿಹಾರಗಳನ್ನು ನೀಡಲಾಯಿತು. ನಿರಾಶ್ರಿತರ ಬೃಹತ್ ಸಂಖ್ಯೆ ಮತ್ತು ಸಮಸ್ಯೆಗಳು ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ನೇತ್ಯಾತ್ಮಕ ಪರಿಣಾಮಗಳನ್ನು ಉಂಟುಮಾಡಿದ್ದರೂ, ಭಾರತವು ಮಾನವೀಯತೆಯನ್ನು ಬಿಟ್ಟುಕೊಡಲಿಲ್ಲ.

ನೆಹರು ಅವರ ಉಲದಿಂದಲೇ ಟಿಬೆಟ್ ನಿಂದ ಅನೇಕ ಜನರು ನಿರಾಶಿತರಾಗಿ ಭಾರತಕ್ಕೆ ಬಂದಿದ್ದಾರೆ, ಅಂದಾಜಿನ ಪ್ರಕಾರ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಟಿಬೆಟಿಯನ ನಿರಾಶ್ರಿತರು ಭಾರತದಲ್ಲಿದ್ದಾರೆ, 1960 ರ ದಶಕದಲ್ಲಿ ಅಂದಿನ ಮೈಸೂರು ಸರಕಾರ ಮೈಸೂರು ಜಿಲ್ಲೆಯ ಬೈಲಕುಪ್ಪೆ ಎಂಬಲ್ಲಿ ಟಿಬೆಟಿಯನ್ ನಿರಾಶ್ರಿತರಿಗಾಗಿ ಸುಮಾರು 3000 ಎಕರೆಗಳ ಜಮೀನನ್ನು ಮಂಜೂರು ಮಾಡಿತು. ಇಂದು ಇದೇ ಊರು ವಲಸೆ ಬಂದ ಟಿಬೆಟಿಯನ್ನರ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಇವರ ಬರುವಿಕೆಯಿಂದ ಭಾಷೆ ಮತ್ತು ಪ್ರದೇಶಗಳನ್ನು ಮೀರಿದ ಸಾಂಸ್ಕೃತಿಕ ಬಹುತ್ವವು ಮತ್ತಷ್ಟು ವಿಸ್ತೃತವಾಗಿ ಬೆಳೆಯಿತು.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು