ಜವಾಹರಲಾಲ್ ನೆಹರು
ಇವರು ಹೊಮ್ ರೂಲ್ ಚಳವಳಿಯೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರವೇಶಿಸಿದರು. 1921ರಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನೆಹರುರವರು. 1929ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಲಾಹೋರ್ ಅಧಿವೇಶನ ಅಧಿವೇಶನದ ಅಧ್ಯಕ್ಷರಾಗಿದ್ದರು. ಈ ಅಧಿವೇಶನದಲ್ಲಿ ಸಂಪೂರ್ಣ ಸ್ವ ರಾಜ್ಯದ ಗುರಿಯನ್ನು ಘೋಷಿಸಲಾಯಿತು, ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಹಿಂದೆ ಪಡೆದದ್ದರಿಂದ ನೆಹರುರವರು ನಿರಾಸೆಯನ್ನು ವ್ಯಕ್ತಪಡಿಸಿದ್ದರು.
ಸಹರೂರವರ ಚಿಂತನೆಗಳು ರಾಜಕೀಯ ಚಟುವಟಿಕೆಗಳ ಹೊಸ ತಿರುವನ್ನು ನೀಡಿದವು. ಇವರು ಕಮ್ಯೂನಿಸ್ಟರ ಸಿದ್ಧಾಂತಗಳಿಂದ ಪ್ರಭಾವ ಹೊಂದಿದ್ದರು. ಪರಿಣಾಮವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಎಡಪಂಥಿಯ ಆಶಯಗಳು ಪಬಲವಾದವು.
ನೆಹರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 49ನೆಯ ಅಧಿವೇಶನದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದ ಸಾಮ್ರಾಜ್ಯಶಾಹಿ ಯದ್ಧದಿಂದ ದೂರವೇ ಉಳಿಯಬೇಕು ಎಂದು ಸಾರಿದರು. ‘ಚರಕ’ ಮತ್ತು ‘ಹರಿಜನ’ ಚಳವಳಿಗಳು ಆರ್ಥಿ ಪರಿಣಾಮಕಾರಿಯಲ್ಲವೆಂದು ಇವರು ವಾದಿಸಿದರು. ಈ ಅಧಿವೇಶನದಲ್ಲಿ ಗಾಂಧೀಜಿಯವರ ಚಿಂತನೆಗಳಂದ ದೂರ ಸರಿದಂತೆ ಇವರು ಕಂಡುಬಂದರು. ಆದರೂ ಗಾಂಧೀಜಿಯವರ ಬಗೆಗೆ ಅವರ ಗೌರವ ಕಡಿಮೆಯಾಗಲಿಲ್ಲ. ವಿವಿಧ ಬೌದ್ಧಿಕ ಧಾರೆಗಳಿಂದ ಪ್ರಭಾವಿತಗೊಂಡಿದ್ದ ನೆಹರು ಅವುಗಳನ್ನು ಸಮನ್ವಯಗೊಳಿಸಿಕೊಳ್ಳುವ ಮೂಲಕ ಸಮಷ್ಟಿ ಪ್ರಜ್ಞೆಯನ್ನು ಪ್ರತಿಪಾದಿಸಿದರು. ಈ ದೃಷ್ಟಿಕೋನವನ್ನು ಅವರು ಪ್ರತಿಪಾದಿಸಿದ ವಿದೇಶಾಂಗ ನೀತಿಯಾದ ‘ಅಲಿಪ್ತತಿ’ ಮಿಶ್ರ ಆರ್ಥಿಕ ವ್ಯವಸ್ಥೆಗಳಲ್ಲಿ ನಾವು ಸ್ಪಷ್ಟವಾಗಿ ಗ್ರಹಿಸಬಹುದು. 50ನೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ನೆಹರುರವರು ತಮ್ಮ ಸಮಾಜವಾದಿ ಹಾಗೂ ಕಮ್ಯುನಿಸ್ಟ್ ವಿಚಾರಗಳ ಬಗ್ಗೆ ಮೃದು ಧೋರಣೆಯನ್ನು ತಳೆದರು. ‘ಕಾಂಗ್ರೆಸ್ ಇಂದು ಭಾರತದಲ್ಲಿ ಪೂರ್ಣ ಪ್ರಜಾಪ್ರಭುತ್ವಕ್ಕಾಗಿ ನಿಂತಿದೆ. ಹಾಗೂ ಪ್ರಜಾಪ್ರಭುತ್ವಕ್ಕಾಗಿಯೇ ಹೋರಾಡುತ್ತದೆಯೇ ಹೊರತು ಸಮಾಜವಾದಕ್ಕಲ್ಲ’ ಎಂದರು.
ಕೈಗಾರಿಕೀಕರಣ ಮತ್ತು ನವಭಾರತದ ಶಿಲ್ಲಿಯಾಗಿ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ನೆಹರುರವರನ್ನು ನಾವು ಕಾಣುತ್ತೇವೆ. ಉಕ್ಕಿನ ಮನುಷ್ಯ’ ಎಂದು ಖ್ಯಾತಿಯಾಗಿದ್ದ ಭಾರತದ ಮೊದಲ ಗೃಹಮಂತ್ರಿಗಳಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಭಾರತದ ಅನೇಕ ದೇಶಿ ಸಂಸ್ಥಾನಗಳ ವಿಲೀನಿಕರಣಕ್ಕೆ ನೆಹರು ಅವರು ಕಾರಣರಾದರು. ನಂತರ ಭಾವಾರು ಪ್ರಾಂತ್ಯಗಳ ರಚನೆಯ ಮೂಲಕ ಭಾರಶಕ್ತಿ ವಿವಿಧತೆಯನ್ನು ಒಪ್ಪುವ ತಾತ್ವಿಕ ತಳಹದಿಯನ್ನು ಹಾಕಿದರು. ಬಂಡವಾಳ ಹಾಗೂ ಸಮಾಜವಾದಿ ತತ್ವಗಳನ್ನೊಳಗೊಂಡ ಮಿಶ್ರ ಆರ್ಥಿಕ ನೀತಿಯು ನೆಹರು ಅವರ ಆಧುನಿಕ ಭಾರತದ ಅಭಿವೃದ್ಧಿಯ ಮೈಲಿಗಲ್ಲಾಯಿತು, ಬೃಹತ್ ಕೈಗಾರಿಕೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು. ಸ್ವಾತಂತ್ರ್ಯ ನಂತರ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಯ ಕನಸನ್ನು ಕಂಡರು. ವಿಶೇಷವಾಗಿ ಪಂಚವಾರ್ಷಿಕ ಯೋಜನೆಯ ಮೂಲಕ ಮೂಲಭೂತ ಮತ್ತು ಬೃಹತ್ ಕೈಗಾರಿಕೀಕರಣಕ್ಕೆ ಚಾಲನೆಯನ್ನು ನೀಡಿದರು. ಭಾರತವು ಅಣುಶಕ್ತಿಯನ್ನು ಹೊಂದಬೇಕೆನ್ನುವ ಆಶಯದಿಂದ ಎಚ್.ಜಿ.ಬಾಬಾ ಅವರ ನೇತೃತ್ವದಲ್ಲಿ ಭದ್ರ ತಳಹದಿಯನ್ನು ರೂಪಿಸಿದರು. ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಭಾರತವು ಬಣಗಳ ಧಕೃತ ವ್ಯವಸ್ಥೆಯಿಂದ ವಿಮುಕ್ತಗೊಂಡು ಅಲಿಪ್ತ ನೀತಿಯನ್ನು ಪ್ರತಿಪಾದಿಸಿತು. ಪಂಚಶೀಲ ತತ್ವಗಳ ಆಧಾರದ ಮೇಲೆ ಶಕ್ತಿ ರಾಜಕಾರಣದಿಂದ ದೂರವೇ ಉಳಿದು ಶಾಂತಿ ಸಹಬಾಳ್ವೆಯ ಸೂತ್ರಗಳನ್ನು ಅನುಷ್ಟಾನಕ್ಕೆ ತರಲು ಕಾರಣರಾದರು. 1964ರಲ್ಲಿ ಇವರು ನಿಧನ ಹೊಂದಿದರು.
ಮಹಮದ್ ಆಲಿ ಜಿನ್ನಾ
ಮಹಮದ್ ಅಲಿ ಜಿನ್ನಾರವರು 1906ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಹಾಗೂ ದಾದಾಬಾಯಿ ನವರೋಜಿಯವರ ಖಾಸಗಿ ಕಾರ್ಯದರ್ಶಿಯಾಗಿಯೂ ಕೆಲಸವನ್ನು ನಿರ್ವಹಿಸಿದ್ದರು. ತಿಲಕರ ವಿರುದ್ಧದ ಮೊಕದ್ದಮೆಗಳ ಸಂದರ್ಭದಲ್ಲಿ ಅವರ ಪರವಹಿಸಿದ್ದರಿಂದ, ಇದು ಜಿನ್ನಾರವರಿಗೆ ಆಶೀವ ಪ್ರಶಂಸೆಯನ್ನು ತಂದುಕೊಟ್ಟಿತು. ಇವರು ಹೋಂ ರೂಲ್ ಲೀಗ್‌ನ್ನು ಸೇರಿದರು. 1916ರ ಆನೇಕ ಸಮಾವೇಶಗಳಲ್ಲಿ ಹಿಂದೂ ಮತ್ತು ಮಹಮದೀಯರ ನಡುವಿನ ಬಾಯ, ಅಗತ್ಯವನ್ನು ತಿಳಿಸಿದರು. ಮುಸ್ಲಿಂಪರ ರಾಜಕಾರಣಿ ಎಂದು ಬಿಂಬಿತವಾಗಿದ್ದರಿಂದ ಬ್ರಿಟಿಷರ ಬಳುವಳಿಯನ್ನು ಜಿನ್ನಾ ಅವರು ವಿರೋಧಿಸಿದರು, ರೌಲತ್ ಕಾಯ್ದೆಯನ್ನು ವಿರೋಧಿಸಿ ಅವರು ತಮ್ಮ ಕೇಂದ್ರಿಯ ಶಾಸನ ಸಲಹಾ ಸಮಿತಿಗೆ ರಾಜೀನಾಮೆ ನೀಡಿದರು. ದುಂಡು ಮೇಜಿನ ಸಮಿತಿಗಳಲ್ಲಿ ಜಿನ್ನಾ ತಾನೊಬ್ಬ ರಾಷ್ಟ್ರೀಯವಾದಿ ಮುಲ್ಲಾನನೆಂದು ಘೋಷಿಸಿಕೊಂಡರು. 1937ರ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸಮ್ಮಿಶ್ರ ಸರ್ಕಾರವನ್ನು ರೂಪಿಸಲು ವಿಫಲವಾದಾಗ ಜೆನ್ನಾ ತನ್ನ ಕಾರ್ಯಕತ್ರವನ್ನು ಬದಲಾಯಿಸಿಕೊಂಡರು. ಬ್ರಿಟಿಷರು ಸ್ವಾತಂತ್ರ್ಯ ನೀಡುವ ಸಂದರ್ಭ ಹತ್ತಿರವಾದಂತೆ ಜಿನ್ನಾರವರು ಪಾಕಿಸ್ತಾನದ ಬೇಡಿಕೆಯನ್ನು ವಿವಿಧ ರೀತಿಯಲ್ಲಿ ತೀವ್ರಗೊಳಿಸಿದರು. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಸಮಯದಲ್ಲಿ ದೇಶವನ್ನು ವಿಭಜಿಸಿ ಪಾಕಿಸ್ತಾನವನ್ನು ಪಡೆದರು.
ಕಾಮೆಂಟ್ ಪೋಸ್ಟ್ ಮಾಡಿ