ಭಾರತದ ವಿಭಜನೆ


ಸ್ವಾತಂತ್ರ್ಯ ಚಳವಳಿಯ ಉದ್ದಕ್ಕೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಖಂಡ ರಾಷ್ಟ್ರದ ಕಲ್ಪನೆಯನ್ನು ಹೊಂದಿತ್ತು. ಆದರೆ ಮಹಮದ್ ಆಲಿ ಜಿನ್ನಾ ಅವರು ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮಂಡಿಸುತ್ತಲೇ ಇದ್ದರು. 1941ರಲ್ಲಿ ನಡೆದ ಮುಸ್ಲಿಂ ಲೀಗ್‌ನ ಲಾಹೋರ್ ಅಧಿವೇಶನದಲ್ಲಿ ಜಿನ್ನಾ ಹಿಂದೂ ಮತ್ತು ಮುಸ್ಲಿಮರು ಒಂದು ದೇಶವಾಗಲು ಸಾಧ್ಯವೇ ಇಲ್ಲ ಎಂದು ಘೋಷಿಸಿದರು. ಎರಡನೆಯ ಮಹಾಯುದ್ಧ ಮುಗಿದು ಬ್ರಿಟನ್‌ನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿತು. ಇದು ಭಾರತದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸಲು ಕ್ರಮ ಕೈಗೊಂಡಿತು. ಇದು ಕ್ಯಾಬಿನೆಟ್ ನಿಯೋಗವನ್ನು ಭಾರತಕ್ಕೆ ಸ್ವಯಂ ಅಧಿಕಾರವನ್ನು ನೀಡುವ ಕುರಿತು ಚರ್ಚಿಸಲು ಕಳುಹಿಸಿತು. ಈ ನಿಯೋಗವು ಕಾಂಗ ಮತ್ತು ಮುಸ್ಲಿಂ ಲೀಗ್‌ನೊಂದಿಗೆ ಚರ್ಚಿಸಿತು. ಭಾರತಕ್ಕೆ ಫೆಡರಲ್ ಮಾದರಿ ಸರ್ಕಾರವನ್ನು ಸೂಚಿಸಿತು ಸಂವಿಧಾನ ರಚನಾ ಸಭೆ ಕರೆಯುವುದಾಗಿ ಮತ್ತು ಮಧ್ಯಂತರ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸಲು ೨ಫಾರಸ್ಸು ಮಾಡಿತು. ಆದರೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಮಧ್ಯಂತರ ಸರ್ಕಾರ ರಚಿಸುವ ವಿಚಾರದಲ್ಲಿ ಭಿನ್ನತೆ ಉಂಟಾಯಿತು. ದಿನಕ್ಕೆ (Direct ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರಕ್ಕಾಗಿ 1946ರ ಆಗಸ್ಟ್ 16 ರಂದು ನೇರ ಕಾರ್ಯಾಚರಣೆ Action Day) ಕರೆ ನೀಡಿತು. ಇದರಿಂದ ದೇಶಾದ್ಯಂತ ಕೋಮುಗಲಥಗಳು ನಡೆದವು: ಡಾ. ಬಾಬು ರಾಜೇಂದ್ರ ಪ್ರಸಾದ್‌ ಅಧ್ಯಕ್ಷತೆಯಲ್ಲಿ ಸೇರಿದ ಸಂವಿಧಾನ ಸಭೆಯಲ್ಲಿ ಮುಸ್ಲಿಂ ಲೀಗ್ ಭಾಗವಹಿಸಲಿಲ್ಲ. ಹಿಂದು ಮತ್ತು ಮುಸ್ಲಿಂ ವಿಭಜನೆಯನ್ನು ಸೃಷ್ಟಿಸುವ ಆಸಕ್ತಿಯನ್ನು ಬ್ರಿಟಿಷ್‌ರು ಹೊಂದಿದ್ದರು. ಬಂಗಾಳ ವಿಭಜನೆ, 1909ರ ಕಾಯ್ದೆಯ ಅನುಷ್ಠಾನದ ಸಂದರ್ಭಗಳಲ್ಲಿ ಬ್ರಿಟಿಷರು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳನ್ನು ಮಾಡಿದ್ದನ್ನು ಇಲ್ಲಿ ಕಾಣಬಹುದು. ಹಾಕಿದ ವಿಭಜನೆಯ ಬೇರುಗಳು ದೇಶ ವಿಭಜನೆಯಲ್ಲಿ ಸಾವಸಾನವಾಯಿತು.

ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಸಂಬಂಧ ತೀರ ಹದಗೆಟ್ಟಿತ್ತು. ಈ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಶೀಘ್ರವಾಗಿ ಅಧಿಕಾರವನ್ನು ಹಸ್ತಾಂತರಿಸುವುದಾಗಿ ತಿಳಿಸಿ, 1946ರ ಮಾರ್ಚ್‌ನಲ್ಲಿ ಲಾರ್ಡ್ ಮೌಂಟ್ ಬ್ಯಾಟಿನ್‌ ಅವರನ್ನು ಭಾರತಕ್ಕೆ ವೈಸ್‌ರಾಯ್ ಆಗಿ ಕಳುಹಿಸಿತು, ಬ್ಯಾಟನ್‌ರವರು ಗಾಂಧೀಜಿ, ಜಿನ್ನಾ ಮತ್ತಿತರ ನಾಯಕರೊಂದಿಗೆ ಮಾತುಕತೆ ನಡೆಸಿ ಭಾರತವನ್ನು ವಿಭಜಿಸುವ ಯೋಜನೆಯನ್ನು ರೂಪಿಸಿದರು. 1947ರ ಜುಲೈನಲ್ಲಿ ಭಾರತ ಸ್ವಾತಂತ್ರ, ಮಸೂದೆಯು ಕಾಯ್ದೆಯ ರೂಪವನ್ನು ಪಡೆಯಿತು. ಕಾಯ್ದೆಯನ್ವಯ 1947ರ ಆಗಸ್ಟ್ 15ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಪ್ರತ್ಯೇಕ ರಾಷ್ಟ್ರಗಳು ಉದಯಿಸಿದವು, ಬ್ಯಾಡ್ ಕ್ಲಿಪ್ ಆಯೋಗವು ಈ ದೇಶಗಳ ಗಡಿಗಳನ್ನು ಗುರುತಿಸಿತು. ಪಂಡಿತ್ ಜವಾಹರಲಾಲ್ ನೆಹರುರವರು ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

1948ರ ಜನವರಿ 31ರಂದು ಪ್ರಾರ್ಥನಾ ಸಭೆ ನಡೆದು ಹೋಗುತ್ತಿದ್ದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹರಿಕಾರ ಗಾಂಧೀಜಿಯವರನ್ನು ನಾಥೋರಾಮ್ ಗಡ್ಡೆ ಎಂಬುವವನು ಹತ್ಯೆ ಮಾಡಿದನು. ಭೌತಿಕವಾಗಿ ಗಾಂಧೀಜಿಯವರನ್ನು ಕೊನೆಗಾಣಿಸಿದರೆ ಅವರ ಸಮಾನತೆಯ ಆಶಯಗಳು, ಮಾನವೀಯ ಸಂವೇದನೆಗಳು, ಭಾವೈಕ್ಯತೆಯ ಕನಸುಗಳು, ಮನುಕುಲದ ಆದರ್ಶಗಳಾಗಿ ಉಳಿದಿವೆ.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು