ಸ್ವಾತಂತ್ರ್ಯ ಹೋರಾಟದಲ್ಲಿ ಡಾ|| ಬಿ ಆರ್ ಅಂಬೇಡ್ಕರ್


ಸಾಮಾಜಿಕ ಸಮಾನತೆಯಿಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂದು ಡಾ. ಬಿ.ಆರ್. ಅಂಬೇಡ್ಕರ್‌ರವರು ಬಲವಾಗಿ ನಂಬಿದ್ದರು. ಭಾರತದ ಶ್ರೇಣೀಕೃತ ವ್ಯವಸ್ಥೆಯಲ್ಲಿರುವ ಕಟ್ಟಕಡೆಯ ಮನುಷ್ಯನಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ದೊರೆಯದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಅದು ಕೇವಲ ಮರೀಚಿಕೆಯಾಗಿ ಉಳಿಯುತ್ತದೆ ಎಂದು ಅಂಬೇಡ್ಕರ್‌ರವರು ತಿಳಿದಿದ್ದರು. ಅವರು ಭಾರತವನ್ನು ಕೇವಲ ಒಂದು ರಾಜಕೀಯ ಪರಿಕಲ್ಪನೆಯಾಗಿ ಕಾಣದೆ ಅದರ ಒಟ್ಟಾರೆ ಮುಖವನ್ನು ಪರಿಚಯಿಸಿದರು. ಇವರು ಮಾತ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿ ಅದರ ವಿನಾಶಕ್ಕೆ ಹೋರಾಟಗಳನ್ನು. ರೂಪಿಸಿದರು. ಅಸ್ಪೃಶ್ಯರು ಕನಿಷ್ಟ ಮಟ್ಟದ ಅವಕಾಶಗಳಿಂದಲೂ ವಂಚಿತರಾಗಿರುವುದನ್ನು ನಿರೂಪಿಸಲು 'ಹಬ್' ಮತ್ತು 'ಕಾಲಾರಾ' ದೇವಾಲಯ ಚಳವಳಿಗಳನ್ನು ರೂಪಿಸಿದರು. ಇವರು ಮೂರೂ ದುಂಡು ಮೇಜಿನ ಪರಿಷತ್ತಿನ ಸಮಾವೇಶಗಳಲ್ಲಿ ಭಾಗವಹಿಸಿ ನಿಮ್ಮ ವರ್ಗಗಳು ವಿವಿಧ ಬಗೆಯ ಸಂಕೋಲೆಗಳಿಂದ ಬಿಡುಗಡೆ ಪಡೆಯಲು ಬೇಕಾದ ಆಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ಹರಿಜನೋದ್ದಾರೆ ಮತ್ತು ಆಸಶರ ಮುಖಂಡತ್ವಕ್ಕೆ ಸಂಬಂಧಿಸಿದಂತೆ ಗಾಂಧೀಜಿ ಮತ್ತು ಅಂಬೇಡ್ಕರ್‌ರಲ್ಲಿ ಭಿನ್ನಾಭಿಪ್ರಾಯಗಳು ಮೂಡಿದವು, ಅಸ್ಪಶ್ಯರ ರಕ್ಷಣೆಗಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ಬಯಸಿದ್ದು ಗಾಂಧಿ ಮತ್ತು ಅಂಬೇಡ್ಕರರ ನಡುವೆ ವಿವಾದಕ್ಕೂ ಕಾರಣವಾಯಿತು, ಇವರು ಬರೋಡ ಮಹಾರಾಜರಡಿಯಲ್ಲಿ ದಿವಾನರಾಗಿದ್ದರು. ಮುಂಬೈ ಲೆಜಿಸ್ಟ್ರೇಟಿವ್ ಕೌನ್ಸಿಲ್ ಮತ್ತು ನಂತರದಲ್ಲಿ ವೈಸ್‌ರಾಯ್ ಎಕ್ಸಿಕ್ಯೂಟಿವ್ ಕೌನ್ಸಿಲ್‌ನಲ್ಲೂ ಸಹ ಅತ್ಯಂತ ಮುತುವರ್ಜಿಯಿಂದ ಕಾರ್ಯಭಾರವನ್ನು ನಿಭಾಯಿಸಿದರು. ಅಂಬೇಡ್ಕರ್ ಕಾಂಗ್ರೆಸ್ ಪಕ್ಷವನ್ನು ಸೇರಿದ 'ಬಹಿಷ್ಕೃತ ಹಿತಕಾರಣಿ ಸಭಾ" ಎಂಬ ಸಂಘಟನೆಯನ್ನು ಹಾಗೂ ಸ್ವತಂತ್ರ ಕಾರ್ಮಿಕ ಪಕ್ಷ' ಎಂಬ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದರು. 'ಪ್ರಬುದ್ಧ ಭಾರತ', 'ಜನತಾ', 'ಮೂಕನಾಯಕ', 'ಬಹಿಷ್ಕೃತ ಭಾರತ' ಪತ್ರಿಕೆಗಳನ್ನು ಹೊರಡಿಸಿದರು. ಕಮ್ಯುನಿಸ್ಟ್ ಮತ್ತು

ಸಮಾಜವಾದಿ ಧೋರಣೆಗಳಿಂದ ದೂರವೇ ಉಳಿದು ಕೃಷಿ ಕಾರ್ಮಿಕರ ಏಳಿಗೆಗಾಗಿಯೂ ಇವರು ದುಡಿದರು. ಸ್ವತಂತ್ರ ಭಾರತದ ಮುನ್ನೋಟದ ದಿಕ್ಕಚಿಯಾಗಿ ಭಾರತದ ಸಂವಿಧಾನವನ್ನು ರಚಿಸಬೇಕಾಯಿತು, ಸಂವಿಧಾನ ಸಭೆಯ ಅಧ್ಯಕ್ಷರಾಗಿ ಬಾಬು ರಾಜೇಂದ್ರ ಪ್ರಸಾದ್‌ರವರನ ಆಯ್ಕೆ ಮಾಡಲಾಯಿತು. ಮುಂದುವರೆದು, ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಬಿ.ಆರ್.ಅಂಬೇಡ್ಕರ್ ರವರನ್ನು ಸಂವಿಧಾನ ರಚನಾ ಸಮಿತಿಯ ಸರ್ವಾನುಮತದಿಂದ ಆಯ್ಕೆ ಮಾಡಿತು. ಸಂವಿಧಾನದಲ್ಲಿ ಸಮಾನತೆಯನ್ನು ಪ್ರತಿಪಾದಿಸಿ, ಅಸ್ಪೃಶ್ಯತಾ ಆಚರಣೆಯ ವಿರುದ್ಧ ಕಾನೂನಿನ ರಕ್ಷಣೆಯನ್ನು ಒದಗಿಸಿದರು. ಅಸ್ಪೃಶ್ಯತಾ ಆಚರಣೆಯನ್ನು ಅಪರಾಧವೆಂದು ಭಾರತದ ಸಂವಿಧಾನವು ಪರಿಗಣಿಸಿದೆ. ಸ್ವಾತಂತ್ರ್ಯ ಭಾರತದಲ್ಲಿ ಬಿ ಆರ್ ಅಂಬೇಡ್ಕರ್‌ರವರು ಕಾನೂನು ಮಂತ್ರಿಯಾದರು, ಆಧುನಿಕತೆ, ವೈಚಾರಿಕತೆ ಮತ್ತು ಪಾಶ್ಚಾತ್ಯ ವಿದ್ವಾಂಸರಿಂದ ಪ್ರೇರಣೆ ಪಡೆದರೂ ದೇಶೀಯ ಬೇರುಗಳ ಕಡೆಗೆ ಒಲವನ್ನು ಕೊಂದರು. ದೇತಿ ವ್ಯವಸ್ಥೆಯಿಂದ ಬೇಸತ್ತ ಇವರು ಹಿಂದೂ ಧರ್ಮವನ್ನು ತೊರೆದು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ವಿರೋಧಿಸಿದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಾರ್ಕ್ಸ್‌ವಾದವು ಯಾವ ಬದಲಾವಣೆಯನ್ನು ರಕ್ತ ಮತ್ತು ಹಿಂಸೆಯಿಂದ ತರಬಹುದೋ ಅದನ್ನು ಬೌದ್ಧ ಧರ್ಮವು ಶಾಂತಿ ಮತ್ತು ಅಹಿಂಸಾತ್ಮಕವಾಗಿ ತರಬಲ್ಲದು ಎಂದು ಅವರು ನಂಬಿದ್ದರು. ಅವರ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ಇವರಿಗೆ ಮರಣೋತ್ತರವಾಗಿ 'ಭಾರತರತ್ನ'ವನ್ನು ನೀಡಿ ಗೌರವಿಸಿದೆ.

“ಪತಿಕೆಗಳೆಲ್ಲದ ಪಯಕ ರೆಕ್ಕೆಯಿಲ್ಲದ ಪಕ್ಷಿಗಳಂತೆ” – ಬಿ ಆರ್ ಅಂಬೇಡ್ಕರ್


ನಿಮಗಿದು ತಿಳಿದಿರಲಿ :

ಮಹಾರಾಷ್ಟ್ರದ “ಮಹಡ್’ ಎನ್ನುವ ಊರಿನಲ್ಲಿದ್ದ ಕೆರೆಯ ನೀರನ್ನು ಅಸ್ಪೃಶ್ಯರು ಬಳಸುವಂತಿರಲಿಲ್ಲ. ನೀರಿನ ಬಳಕೆಯನ್ನು ಇವನ ಆಸ್ಪತ್ರೆರೂ ಉಪಯೋಗಿಸುವಂತೆ ರೂಪಿಸಿದ ಚಳವಳಿಯನ್ನು ಮೆಹರ್ ಚಳವಳಿಯೆಂದು ಕರೆಯುತ್ತಾರೆ. ಹಾಗೆಯೇ ‘ಕಂಬರಾಂ’ ಎನ್ನುವ ದೇವಾಲಯದಲ್ಲಿ ಉಳಿದೆಡೆಯಲ್ಲಿದ್ದಂತೆ ಆಸ್ಪೃಶ್ಯರಿಗೆ ಆವೇಶವಿರಲಿಲ್ಲ. ಅಲ್ಲಿ ಕೂಡ ಆತ್ಮರರು ದೇವಾಲಯವನ್ನು ಪ್ರವೇಶಿಸುವ ಶಾಂತಿಕಾರಕ ಯೋಜನೆಯನ್ನು ಅಂಬೇಡ್ಕರ್ ಅವರು ರೂಪಿಸುತ್ತಾರೆ. ಆದರೆ ಇವುಗಳು ಜನರಲ್ಲಿ ಜಾಗೃತಿಯನ್ನುಂಟುಮಾಡಿದರೂ ಚಳವಳಿಗಳು ಈ ಕಾಲಘಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಇಂತಹ ಸಮಸ್ಯೆಗಳಿಗೆ ಉನು ಮಾರ್ಗವೆ ಉತ್ತರವೆಂದು ನಂಬಿದ್ದರು.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು