ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್


ಮೂಲತಃ ಓದಿಸ್ಸಾದ ಕಟಕ್ಕಿನವರು. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸರ ಚಿತ್ರವು ಒಂದು ಬಟ್ಟ ಮೈಲಿಗಲ್ಲು, ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ (ICS) ನಾಲ್ಕನೇ ಬ್ಯಾಂಕ್ ಗಳಿಸಿದ್ದರೂ, ದೇಶಾಭಿಮಾನದಿಂದಾಗಿ ಬ್ರಿಟಿಷ್ ಸರ್ಕಾರದ ಪ್ರತಿಷ್ಠಿತ ಹುದ್ದೆಯನ್ನು ತ್ಯಜಿಸಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು, ಇವರು ‘ನೇತಾಜಿ ಎಂದು ಜನಪ್ರಿಯರಾದರು.

ಗಾಂಧೀಜಿಯವರ ಸೌಮ್ಯ ಹೋರಾಟಕ್ಕೆ ಪರ್ಯಾಯವಾಗಿ ರ ದಶಕದ ಪ್ರಾರಂಭದಲ್ಲಿ ವಿದೇಶದಲ್ಲಿ ನೆಲೆಗೊಂಡ ಭಾರತೀಯರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡುವ ಪ್ರಯತ್ನದಲ್ಲಿದ್ದರು. ಇವರು ವಿವಿಧ ದೇಶಗಳ ನಗರಗಳಾದ ಏಯನ ಬರ್ಲಿನ್, ರೋಮ್, ಇಸ್ತಾಂಬುಲ್ ಮುಂತಾದ ಕಡೆಗಳಲ್ಲಿ ಪ್ರವಾಸ ಬೆಳೆಸಿ ಕಾಯಾಡಿಗೆ ತಮ್ಮ ಬೆಂಬಲವನ್ನು ನೀಡಲು ಪ್ರೇರೇಪಿಸಿದರು. ಯುರೋಪಿನಲ್ಲಿ ಉದಯಿಸಿದ ಕಮ್ಯುನಿಸ್ಟ್ ಮತ್ತು ಸಮಾಜವಾದಿ ಅಲೆಯು ಭಾರತದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಕೂಡಾ ಬದಲಾವಣೆಗೆ ಒಳಪಡಿಸಿತು. ಕಾಂಗ್ರೆಸ್‌ನ ಒಳಗೂ ಸಹ ಸರವಾಗಿ ಸಮಾಜವಾದಿ ಎಡಪಂಥೀಯತೆ ಗೋಚರಿಸತೊಡಗಿತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ 1934ರ ವೇಳೆಗೆ ಜವಾಹರಲಾಲ್ ನೆಹರು ಮತ್ತು ಸುಭಾಷ್ ಚಂದ್ರ ಬೋಸರು ಕಾಂಗ್ರೆಸ್ ಪಕ್ಷದ ಒಳಗಡೆಯ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಹರಿಪರ, ಅಧಿವೇಶನದಲ್ಲಿ ಗಾಂಧೀಜಿ ಬೆಂಬಲದೊಂದಿಗೆ ಬೋಸರು ಅಧ್ಯಕ್ಷರಾದರು. ಬ್ರಿಟಿಷರ ಯುದ್ಧನೀತಿ ತಯಾರಿಗೆ ಸಂಬಂಧಿಸಿದಂತೆ ಮೃದು ಧೋರಣೆಯನ್ನು ಹೊಂದಿದ್ದ ಗಾಂಧೀಜಿ ಮತ್ತು ಬ್ರಿಟಿಷರ ವಿರುದ್ಧ ಕಠಿಣ ಧೋರಣೆ ಹೊಂದಿದ್ದ ಸುಭಾಷರ ನಡುವೆ ಬಾಂಧವ್ಯದಲ್ಲಿ ಬಿರುಕು ಮೂಡಿತು. ಗಾಂಧೀಜಿಯವರು ಅಂತಾರಾಷ್ಟ್ರೀಯ ನೆರವನ್ನು ಈ ಸಂದರ್ಭದಲ್ಲಿ ಕೋರದೆ ಇದ್ದದ್ದನ್ನು ಆಕ್ಷೇಪಿಸಿದರು. 1938ರ: ಕಾಂಗ್ರೆಸ್‌ನ ಹರಿಣರ ಅಧಿವೇಶನದಲ್ಲಿ ಸುಭಾಷ್ ಚಂದ್ರ ಬೋಸರು ಗಾಂಧೀಜಿಯವರ ವಿರೋಧದ ನಡುವೆಯೂ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಗೊಂಡರು. ನಂತರದ ದಿನಗಳಲ್ಲಿ ಗಾಂಧೀಜಿ ಮತ್ತು ಯೋಸರ ಜಿನ್ನಾಭಿಪ್ರಾಯಗಳು ತೀವ್ರಗೊಂಡವು, ಕಾಂಗ್ರೆಸ್‌ನ ಒಳಗಿದ್ದು ಬ್ರಿಟಿಷರನ್ನು ತೀವ್ರವಾಗಿ ಒಮೆಟ್ಟಿಸಬೇಕನ್ನುವ ಸುಭಾಷ್ ಚಂದ್ರ ಬೋಸ್‌ರವರ ಕಾರ್ಯ ಚಟುವಟಿಕೆಗೆ ಹಿನ್ನಡೆಯುಂಟಾಯಿತು. ಸುಭಾಷ್ ಚಂದ್ರ ಬೋಸರು ಕಾಂಗ್ರೆಸ್‌ನ ಚಟುವಟಿಕೆಗಳು ಮತ್ತು ಗಾಂಧೀಜಿಯವರ ಕಾರ್ಯವಿಧಾನದಿಂದ ಬೇಸರಗೊಂಡು ಕಾಂಗ್ರೆಸ್ ನಿಂದ ಹೊರಬಂದು ಫಾರ್ವರ್ಡ್ ಬ್ಲಾಕ್ ಎಂಬ ಹೊಸ ಪಕ್ಷವನ್ನು ಕಟ್ಟಿದರು. ಇದು ಉಂಗ್ರೆಸ್‌ನ ಒಳಗೆ ಇದ್ದು, ಪ್ರಗತಿಪರ ಮತ್ತು ತೀವ್ರತರ ಆಶಯಗಳನ್ನು ಹೊಂದಿತ್ತು, ಬ್ರಿಟಿಷರ ಯುದ್ಧ ತಯಾರಿಯನ್ನು ಹಾಗೂ ಜಾಗತಿಕ ಯುದ್ಧದಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಸುಭಾಷರು ವಿರೋಧಿಸಿದರು. ಪರಿಣಾಮವಾಗಿ ಬ್ರಿಟಿಷ್ ಸರ್ಕಾರವು ಸುಭಾಷ್ ಚಂದ್ರ ಬೋಸರನ್ನು ಬಂಧಿಸಿತು.

ಬ್ರಿಟಿಷ್ ವಿರೋಧಿ ಶಕ್ತಿಗಳೊಡಗೂಡಿ ಬ್ರಿಟಿಷರ ವಿರುದ್ಧ ಹೋರಾಡಲು ಬಯಸಿ ಅವರು ಗೃಹಬಂಧನದಿಂದ ತಪ್ಪಿಸಿಕೊಂಡು ಜರ್ಮನಿಗೆ ತೆರಳಿದರು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ಇವರಿಗೆ ಎಲ್ಲಾ ಸಹಾಯವನ್ನು ನೀಡುವ ಭರವಸೆಯನ್ನು ವ್ಯಕ್ತಪಡಿಸಿದನು. ದೋಸರು ಜರ್ಮನಿಯಲ್ಲಿ ಭಾರತೀಯ ಯುದ್ಧ ಕೈದಿಗಳನ್ನು ಸಂಘಟಿಸಿದರು. 'ಆಜಾದ್ ಹಿಂದ್ ರೇಡಿಯೋ' ಮೂಲಕ ತಮ್ಮ ಭಾಷಣಗಳನ್ನು ಭಾರತೀಯರಿಗೆ ಪ್ರಸಾರ ಮಾಡಿದರು. ಯುದ್ಧದಲ್ಲಿ ಜಪಾನಿನ ಯಶಸ್ಸನ್ನು ತಿಳಿದು ಅದರ ಸಹಾಯದಿಂದ ಭಾರತದ ಬಿಡುಗಡೆಯ ಸಾಧ್ಯತೆಗೆ ಸಂಬಂಧಿಸಿದಂತೆ ಭಾರತೀಯರನ್ನು ಸಂಘಟಿಸಿದ್ದ ರಸ್ ಬಿಹಾರಿ ಬೋಸ್‌ ಜೊತೆಗೆ ಸುಭಾಷರು ಕೈಜೋಡಿಸಿದರು. ರಾಸ್ ಬಿಹಾರಿ ಬೋಸ್‌ರವರು ಟೋಕಿಯೋದಲ್ಲಿ ಸ್ಥಾಪಿಸಿದ ಇಂಡಿಯನ್ ಮಡಿಪೆಂಡೆನ್ಸ್ ಲೀಗ್’ನ ಸೇನಾವಿಭಾಗವನ್ನು 'ಭಾರತೀಯ ರಾಷ್ಟ್ರೀಯ ಸೇನೆ (INA) ಎಂದು ಕರೆಯುತ್ತಿದ್ದರು. ನಂತರದ ದಿನಗಳಲ್ಲಿ ಐ.ಎನ್.ಎ. ಯ ಮುಖಂಡತ್ವವನ್ನು ಸುಭಾಷ್ ಚಂದ್ರ ಬೋಸ್‌ರವರಿಗೆ ವಹಿಸಿದರು. ಸುಭಾಷ್ ಚಂದ್ರ ಬೋಸರು ಈ ಸಂದರ್ಭದಲ್ಲಿ 'ದೆಹಲಿ ಚಲೋ'ಗೆ ಕರೆಯನ್ನು ನೀಡಿದರು. 'ನನಗೆ ರಕ್ತಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿಸುತ್ತೇನೆ' ಎಂಬ ಕರೆಯನ್ನಿತ್ತರು, ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಝಾನ್ಸಿ ರೆಜಿಮೆಂಟ್ ಎಂಬ ವಿಭಾಗವೂ ಇತ್ತು. ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಈ ರೆಜಿಮೆಂಟಿನ ನೇತೃತ್ವವನ್ನು ವಹಿಸಿದ್ದರು.

ಸುಭಾಷರು ರಂಗೂನಿನ ಮೂಲಕ ಬ್ರಿಟಿಷರ ಕೈಯಲ್ಲಿದ್ದ ದೆಹಲಿಯನ್ನು ವಶಪಡಿಸಿಕೊಳ್ಳಲು ಯುದ್ಧ ತಂತ್ರವನ್ನು ರೂಪಿಸಿದರು, ಆ ಹೊತ್ತಿಗೆ ಭಾರತದಿಂದ ಐಎನ್.ಐ ಗೆ ಸೇರ್ಪಡೆಯಾದ ಸಾವಿರಾರು ಯೋಧರು ದೆಹಲಿಯನ್ನು ಆಕ್ರಮಿಸಲು ತಯಾರಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸುಭಾಷರ ಆದೇಶದಂತೆ ಸದಸ್ಯ ಹೋರಾಟವನ್ನು ಅವರು ಬರ್ಮಾದ ಗಡಿಯಲ್ಲಿ ಆರಂಭಿಸಿದರು. ಬ್ರಿಟಿಷರು ಮತ್ತು ಐಎನ್.ಎ ನಡುವೆ ತೀವ್ರವಾದಂತಹ ಯುದ್ಧ ನಡೆದಿದ್ದ ಸಂದರ್ಭದಲ್ಲಿ ಸುಭಾಷರು ಆಕಸ್ಮಿಕವಾಗಿ ವಿಮಾನ ಅಪಘಾತದಲ್ಲಿ ಮಡಿದರು. ಬರ್ಮಾದ ಉಧಾನಿ ರಂಗೂನ್ ಬ್ರಿಟಿಷರ ವಶವಾದ್ದರಿಂದ ಐ.ಎನ್.ಎ ಸೈನಿಕರನ್ನು ಬ್ರಿಟಿಷರು ಬಂಧಿಸಿದರು. ನಂತರದ ದಿನಗಳಲ್ಲಿ ಗಾಂಧೀಜಿಯವರು ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ನಾಯಕರೆಲ್ಲರೂ ಐ.ಎನ್.ಎ ಸೈನಿಕರನ್ನು ಬಂಧಮುಕ್ತ ಮಾಡುವಲ್ಲಿ ಶಮಿಸಿದರು.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು