ಭಾರತೀಯ ರಾಷ್ಟ್ರೀಯ ಹೋರಾಟದಲ್ಲಿ ಮಾತ್ರ TLಧಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ, ಇವರು ರಾಷ್ಟ್ರೀಯ ಹೋರಾಟದಲ್ಲಿ ‘ಗಾಂಧಿಯ ಮಾರು’ ಅಥವಾ ಗಾಂಧಿ ವಿಧಾನವನ್ನು ರೂಪಿಸಿದವರು. 1920-47ರ ಅವಧಿಯಲ್ಲಿ ಗಾಂಧಿಯ ವಿಚಾರಗಳು ಅವರ ಹೋರಾಟದ ಸೈದ್ಧಾಂತಿಕ ತಳಹದಿಯನ್ನು ರೂಪಿಸಿದ ಕಾರಣ ಹಾಗೂ ಅವರ ಹೋರಾಟದ ಮಾದರಿ ಭಾರತದ ರಾಷ್ಟ್ರೀಯ ಹೋರಾಟದ ದಿಕ್ಕನ್ನು ಗಣನೀಯವಾಗಿ ರೂಪಿಸಿದ್ದರಿಂದ ಈ ಅವಧಿಯನ್ನು ಗಾಂಧೀಯುಗವೆಂದೂ ಕರೆಯುತ್ತೇವೆ.
ಆರಂಭಿಕ ಜೀವನ ಮತ್ತು ಬೆಳವಣಿಗೆ
ದಾವು ಎಂದು ಪ್ರೀತಿಯಿಂದ ಕರೆಯಲ್ಪಡುವ ಮೋಹನದಾಸ್ ಕರಮಚಂದ್ ಗಾಂಧಿ 1869 ಅಕ್ಟೋಬರ್ 2ರಂದು ಈಗಿನ ಗುಜರಾತ್‌ನ ಕಾಥವಾಡ್ ಜಿಲ್ಲೆಯ ಪೋರ್‌ಬಂದರ್‌ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ ಗಾಂಧಿ, ರಾಜಕೋಟ್ ಸಂಸ್ಥಾನದ ದಿವಾನರಾಗಿದ್ದರು. ತಾಯಿ ಕಲಿಬಾಯಿ ಇವರು ಗಾಂಧೀಜಿಯವರ ಮೇಲೆ ದಟ್ಟವಾದ ನೈತಿಕ ಪ್ರಭಾವ ಬೀರಿದ್ದರು. ಆರಂಭಿಕ ಶಿಕ್ಷಣವನ್ನು ಫೋರ್‌ಬಂದರ್‌ನಲ್ಲಿಯ ಮುಗಿಸಿದ ಗಾಂಧಿಯವರು 1888ರಲ್ಲಿ ಇಂಗ್ಲೆಂಡ್‌ನಲ್ಲಿ ಕಾನೂನು ಅಧ್ಯಯನ ಮಾಡಲು ಹೋಗಿ “ಬಾಲ್ ಆಫ್ ಲಾ ಮುಗಿಸಿ ಮತ್ತೆ ಭಾರತಕ್ಕೆ ವಾಪಸ್ಸಾದರು. 1893ರಲ್ಲಿ ದಾದಾ ಅಬ್ದುಲ್ಲಾ ಮತ್ತು ಕಂಪನಿಯ ವಕಾಲತ್ತು ವಹಿಸಲು ದಕ್ಷಿಣ ಆಫ್ರಿಕಾದ ‘ನಟಾಲ್’ಗೆ ಹೋದರು. ಇಲ್ಲಿ ಗಾಂಧಿ ಐ ಮೂರು ತಿಂಗಳು ಇರಬೇಕಾಗಿದ್ದವರು ಸುಮಾರು ಮುಂದಿನ 21 ವರ್ಷಗಳನ್ನು ಕಳೆದರು. ಮುಖ್ಯವಾಗಿ ಅಲ್ಲಿನ ಕಲಯರ ಮತ್ತು ಭಾರತೀಯರ ಬಗೆಗೆ ಅಲ್ಲಿನ ಬ್ರಿಟಿಷ್ ಸರ್ಕಾರ ತೋರಿದ್ದ ಅಸಹನೀಯ ವರ್ಣಭೇದ ನೀತಿ (Aparthied) ಮತ್ತು ಜನಾಂಗೀಯ ತಾರಕವಾದ ನೀತಿಯನ್ನು ವಿರೋಧಿಸಿದರು. ಈ ಹೋರಾಟದ ಮೂಲಕ ಗಾಂಧೀಜಿಯವರು 'ಸಾಗಹ' ಎನ್ನುವ ಹೊಸ ಸಾಮಾಜಿಕ ಆವಿಷ್ಕಾರವನ್ನು ಮಾಡಿ ಆದರ ನೀತಿ ನಿರೂಪಣೆಯನ್ನು ಸೃಷ್ಟಿಸಿದರು. ಆನೇಕ ಆಫ್ರಿಕನ್ನರಿಗೆ ಇರುವ ಹೆಮ್ಮೆಯೆಂದರೆ ನೀವು ಏನ ಆಗಿರದ ಗಾಂಧಿಯನ್ನು ಕಳುಹಿಸಿದರೆ, ನಾವು ನಿಮಗೆ ಈ ಗಾಂಧಿಯನ್ನು ಕೊಟ್ಟೆವು' ಎಂಬುದು.
ನಿಮಗಿದು ತಿಳಿದಿರಲಿ
ಅಫ್ರಿಕಾದಲ್ಲಿ ಗಾಂಧಿ ಮೊತ್ತ ಮೊದಲ ಬಾರಿಗೆ ನಾಯಿ, ಅಹಿಂಸಿ ತಾಗಳ ಆಧಾರದಲ್ಲಿ ಹೋರಾಟ | ರೂಪಿಸಿದರು. ನಕಾರ ಇಂಡಿಯನ್ ಕಾಂಗ್ರೆಸ್ ಎನ್ನುವ ಸಂಸ್ಥೆಯನ್ನು ಕಟ್ಟಿದರು. ಗಾಂಧಿ ಮೊತ್ತ ಮೊದಲ ಜಾರಿಗೆ ‘ಇಂಡಿಯನ್ ಒಪಿನಿಯನ್’ ಎಂಬ ಪತ್ರಿಕೆಯನ್ನು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ಮತ್ತು ಜನರ ಅಭಿಪ್ರಾಯವನ್ನು ರೂಪಿಸಲು ಸಾರಂಭಿಸಿದರು. ಗಾಂಧಿ ತಮ್ಮ ಹೋರಾಟವನ್ನು ಇನ್ನೂ ತೀವ್ರಗೊಳಿಸಲು ಪ್ಯಾಸಿವ್ ರೆಸಿಸೆನ್ಸ್ ಆರ್ಗನೈಸೇಶನ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಸಪ್ಪಾಗ್ರ ಮತ್ತು ಹೋರಾಟದ ತರಬೇತಿಯನ್ನು ರೂಪಿಸಲು ಗಾಂಧಿ ಆಫ್ರಿಕಾದಲ್ಲಿ ‘ಜೋನಿಕ್ಸ್’ ಮತ್ತು ‘ಚಾಲ್ಸ್ಟಾಯ್ ಫಾಮ್’ಗಳೆಂಬ ಆಶ್ರಮಗಳನ್ನು ಸ್ಥಾಪಿಸಿದರು. ಗಾಂಧಿಯ ಮಿತ್ರ ಕ್ಯಾಲೆನ್‌ಬಾಕ್ಸ್, ಪತ್ನಿ ಕಸ್ತೂರ ಬಾ, ಮಕ್ಕಳು ಮತ್ತು ಮಿತ್ತರು ಸೇರಿದಂತೆ ಅನೇಕ ಭಾರತೀಯರು RCH ರಾಟಗಳಲ್ಲಿ ಹಗಲು ನೀಡಿದ್ದರು. ಕೊನೆಗೂ ಈ ರೀತಿಯ ಯೋಈಟಗಳಿಂದ ಒತ್ತಡವನ್ನು ಅನುಭವಿಸಿ ಬ್ರಿಟಿಷ್ ಸರ್ಕಾರವು ದಕ್ಷಿಣ ಆಫ್ರಿಕಾದ ಕಪ್ಪು ಜನರ ಮತ್ತು ಭಾರತೀಯರ ವಿರುದ್ಧದ ಎಲ್ಲಾ ನಿಷೇಧ ಮತ್ತು ಬಂಧದ ಕಾನೂನುಗಳನ್ನು ವಾಪಸ್ ಪಡೆಯಿತು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಒಮ್ಮೆ ದರ್ಬಾನಂದ ಏಟೋರಿಯಾ ನಡುವೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಥಮ ದರ್ಜೆ ಟಿಕೆಟ್ ಹೋದಿದ್ದರೂ ಬಲವಂತವಾಗಿ ರೈಲಿನ ಬೆಳೆಯ ಅಧಿಕಾರಿಯು ಗಾಂಧೀಜಿಯನ್ನು ಆ ದೋಗಿಯಿಂದ ಹೊರಹಾಕಿದರು. ದಕ್ಷಿಣ ಆಫ್ರಿಕಾದ ಕಾಲೋನಿಗಳಲ್ಲಿ ವಾಸಿಸುತ್ತಿದ್ದ ಭಾರತೀಯರ ಬವಣೆಯನ್ನು ಅನುಭವದಿಂದ ಕಂಡುಕೊಳ್ಳಲು ಸಾಧ್ಯವಾಯಿತು. ಇಂಗ್ಲೆಂಡಿಗಿಂತಲೂ ತೀವ್ರ ಸ್ವರೂಪದ ಅನಾಂಗೀಯ ಬೇಧ-ಭಾವ ಮತ್ತು ಹಿರಸ್ಕಾಂಗಳು, ದಕ್ಷಿಣ ಆಫ್ರಿಕಾದಲ್ಲಿ ಆಚರಣೆಯಲ್ಲಿವೆ ಎಂದು ಅವರ ದಾಖಲಿಸಿದ್ದಾರೆ. ದಕ್ಷಿಣ ಆಫ್ರಿಕಾದ ಸುಧೀರ್ಘ ಯುದ್ಧದ ನಂತರ ಗಾಂಧಿ 1915ರಲ್ಲಿ ಭಾರತಕ್ಕೆ ಬಂದರು.
ಭಾರತದಲ್ಲಿ ಗಾಂಧಿ-ಆರಂಭದ ಹೋರಾಟಗಳು
ಭಾರತಕ್ಕೆ ಬಂದ ಗಾಂಧಿ ತಮ್ಮ ರಾಜಕೀಯ ಗೋಖಲೆಯವರ ಮಾರ್ಗದರ್ಶನದ ಮೇರೆಗೆ ಇಲ್ಲಿಯ ಜನರ ಬದುಕು, ಸಮಾಜ ಮತ್ತು ಆ ಹೊತ್ತಿನ ಸಾಮಾಜಿಕ ವಾಸ್ತವಗಳನ್ನು ತಿಳಿಯುವ ಸಲುವಾಗಿ ರೈಲಿನ ಮೂರನೆ ದರ್ಜೆಯ ಬೊಗಿಯಲ್ಲಿಯೇ ಭಾರತ ದರ್ಶನವನ್ನು ಮಾಡಿದರು. 1916ರಲ್ಲಿ ಅವರು ಅಹಮದಾಬಾದ್‌ನಲ್ಲಿ ಸಬರಮತಿ ಆಶ್ರಮವನ್ನು ಸ್ಥಾಪಿಸುವ ಮೂಲಕ ತಮ್ಮ ಹೋರಾಟಕ್ಕೆ ಒಂದು ಸಾಂಸ್ಥಿಕ ರೂಪವನ್ನು ಕೊಟ್ಟರು, ರೈತರ, ದಲಿಹರ, ಬುಡಕಟ್ಟು ಜನರ, ಕಾರ್ಮಿಕರ, ಬಡಜನರ ಸಂಕಷ್ಟ ಮತ್ತು ಸಮಸ್ಯೆಗಳನ್ನು ಆಲಿಸಿದರು. 1917ರಲ್ಲಿ ಗಾಂಧಿ ಮಹಾರದ ಚಂಪಾರಣ್ಯದಲ್ಲಿ, ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ ‘ಚಂಪಾರಣ್ಯ ಚಳವಳಿ’ ಆರಂಭಿಸಿ, ಬ್ರಿಟಿಷ್ ಸರ್ಕಾರ ಮಣಿಯುವಂತೆ ಮಾಡಿದರು. 1918ರಲ್ಲಿ ಅಹಮದಾಬಾದ್‌ನ ಹತ್ತಿ ಗಿರಣಿಯ ಕಾರ್ಮಿಕರ ಸಂಬಳ ಹೆಚ್ಚಿಸುವ ಸಲುವಾಗಿ ಅವರ ಜತೆಗೂಡಿ ಚಳವಳಿ ಆರಂಭಿಸಿ ಯಶಸ್ಸು ಪಡೆದರು. ಇದೇ ವರ್ಷ ಗುಜರಾತ್‌ನ ಖೇಡಾ ಎಂಬಲ್ಲಿ ನಡೆದ ರೈತರ ಮೇಲಿನ ತೆರಿಗಸಂಬಂಧಿತ ಮೊರಾಟವೂ ಶೂ ಯಶಸ್ವಿಯಾಯಿತು. ಈ ಎಲ್ಲಾ ಹೋರಾಟಗಳಲ್ಲೂ ಗಾಂಧಿ ಸತ್ಯ, ಆಹಿಂಸೆ ಮತ್ತು ಸತ್ಯಾಗ್ರಹದ ಮಾರ್ಗವನ್ನು ಪರಿಚಯಿಸಿ ಪ್ರಯೋಗಿಸಿದರು. ಈ ಜೊತೆಗೆ ಭಾರತೀಯ ಜನಸಾಮಾನ್ಯರ ಜೊತೆಗೆ ಸಂವಾದವನ್ನು ಪಾರಂಜಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ಸ್ವರೂಪವನ್ನು ಜನಮುಖಿಯಾಗಿ ಬದಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಮಹಾತ್ಮ ಗಾಂಧೀಜಿಯವರ ಪ್ರವೇಶದಿಂದಾಗಿ ಸ್ವಾತಂತ್ರ್ಯ ಚಳವಳಿಯ ಹೊಸ ಆಯಾಮವನ್ನು ನಡೆಯಿತು. ಗಾಂಧೀಜಿಯವರು ತಮ್ಮ ಹೋರಾಟದಲ್ಲಿ ಪರೋಕ್ಷ ಪ್ರತಿರೋಧ’, ‘ಅಹಿಂಸೆ’ ಮತ್ತು ‘ಸತ್ಯಾಗ್ರಹವನ್ನು’ ಹೋರಾಟದ ಪ್ರಮುಖ ತಂತಗಳನ್ನಾಗಿ ಬಳಸಿಕೊಂಡರು. ತಮ್ಮ ಸಿದ್ಧಾಂತಗಳನ್ನು ಅವರು ‘ಹರಿಜನ್’ ಮತ್ತು ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದರು.
ನಿಮಗಿದು ತಿಳಿದಿರಲಿ :
ಗಾಂಧೀಜಯ ಪವೇಶದೊಂದಿಗೆ ಹೊಸ ಕಾಂಗ್ರೆಸ್ ತನ್ನ ಸದಸ್ಯತ್ವವನ್ನು ಎಲ್ಲರಿಗೂ ಮುಕ್ತಗೊಳಿಸಿ, ಜನಸಾಮಾನ್ಯರ ಸಂಘಟನೆಯನ್ನಾಗಿಸಿ, ಸಂಘವು ತೆಗೆದುಕೊಳ್ಳುವ ತೀರ್ಮಾನಗಳನ್ನು ಒತ್ತಾಯಿಸಲು ಅಸಹಕಾರ ಮತ್ತು ಸವಿನಯ ಕಾನೂನುಭಂಗ ಚಳವಳಿಯ ಕಾರ್ಯತಂತ್ರ ರೂಪಿಸಿತು. ಅದು ಸಾಮಾಜಿಕ ಉನ್ನತಿಗಾಗಿ ಅಂಚಿನ ಸಮುದಾಯಗಳನ್ನು ವಾಹಿನಿಗೆ ತರಲು ರಜನಾತ್ಮಕ ಕಾರ್ಯಕ್ರಮಗಳನ್ನು ಸೂಚಿಸಿತು. ತಮ್ಮ ಕಾರ್ಯಾಚರಣೆಯನ್ನು ನೆರವೇರಿಸಲು ಒಂದು ಕೋಟಿ ರೂಪಾಯಿ ಬಂಡವಾಳರ ಶಿಲಕ ಸ್ವರಾಜ್ಯ ಫಂಡ್ ನ್ನು ಪ್ರಾರಂಭಿಸಿದ್ದು ಹೀಗೆ ಮಹಾತ್ಮ ಗಾಂಧೀಜಿಯ ಪವೇಶದೊಂದಿಗೆ ಕಾಂಗ್ರೆಸ್‌ನಲ್ಲಿ ಸಂಪೂರ್ಣ ಬದಲಾವಣೆಯನ್ನು ಕಾಣಬಹುದು. ಈ ಎಲ್ಲಾ ಕಾರಣಳಿಂದ ಈ ಕಾಲವನ್ನು ಗಾಂಧಿ ಯುಗವೆಂದು ಕರೆಯಲಾಗಿದೆ.
ಗಾಂಧಿ ಹೋರಾಟದ ಅಂತಃಸತ್ವದ ಸಾಧನಗಳು
ಸತ್ಯಾಗ್ರಹ: ಗಾಂಧೀಜಿಯವರ ಹೋರಾಟದ ಬಹುಮುಖ್ಯವಾದ ವಿಧಾನವೇ ಸತ್ಯಾಗ್ರಹ, ಸತ್ಯಾಗ್ರಹ ಎನ್ನುವ ಪದದ ಅರ್ಥ, ಸತ್ಯವನ್ನು ಆಗ್ರಹಿಸುವುದು ಅಥವಾ ಒತ್ತಾಯಿಸುವುದೇ ಆಗಿದೆ. ಆಫ್ರಿಕಾದಲ್ಲಿ ಗಾಂಧಿ ಕಂಡುಕೊಂಡು ಬಳಸಿದ ಈ ಆಸೆ ಅವರಿಗೆ ನೈತಿಕ ಶಕ್ತಿಯ ರೂಪವಾಗಿದೆ. ಸತ್ಯಾಗ್ರಹವು ಅಹಿಂಸೆಯನ್ನು ಆಧರಿಸಿದ್ದಾ, ತಪ್ಪು, ಹಿಂಸೆ ಮತ್ತು ಅಸತ್ವವನ್ನು ಹಾದಿಂಡಿತವಾಗಿ ನಿರಾಕರಿಸುವ ಕ್ರಮವೂ ಆಗಿದೆ ಈ ಅಸ್ತವನ್ನು ಭಾರತದ ರಾಷ್ಟ್ರೀಯ ಹೋರಾಟದಲ್ಲಿ ನಿರಂತರವಾಗಿ ಬಳಸಿದರು. ಇದು ಒಂದು ದೊಡ್ಡ ಸಾಮಾಜಿಕ ಅನ್ವೇಷಣೆಯಾಗಿದೆ.
ಆಹಿಂಸೆ: ಗಾಂಧೀಜಿಯ ಹೋರಾಟದ ಮೂಲಭೂತ ಆಶಯ ಆಸೆಯಾಗಿದೆ. ಸಶಸ್ತ್ರ ಬಲಪ್ರಯೋಗದ ವಿರುದ್ಧ ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಮುಲಾಮುಖಿಯಾಗಬೇಕೆಂದು ಅವರ ಸವಾಲು, ಬ್ರಿಟಿಷ್ ವರ್ಷದ ಆಯುಧಗಳಾದ ಮಿಲಿಟರಿ, ಪೊಲೀಸ್, ಕಾನೂನು ಮುಂತಾದವುಗಳ ವಿರುದ್ಧ ಸತ್ಯ ಆಹಿಂಸೆ, ಉಪವಾಸವೆಂಬ ಮಾತೃತ್ವದ ಮಾಂತ್ರಿಕತೆಯ ಆಯುಧಗಳನ್ನು ಬಳಸಿ ಅವರನ್ನು ಮಣಿಸಿದ್ದು ಹೋರಾಟದ ಚಾರಿತ್ರಿಕ ಸಂದೇಶವಾಗಿದೆ.
ಹಿಂದೂ-ಮುಸ್ಲಿಂ ಏಕತೆ: ಭಾರತೀಯ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಗಾಂಧಿ ಪ್ರತಿಪಾದಿಸಿದ ವ್ಯಕ್ತಿಯೆಂದರೆ ಗಾಂಧಿ, ಈ ಸಮುದಾಯಗಳ ನಡುವೆ ಏಕತೆಯಿಲ್ಲದಿದ್ದರೆ ಭಾರತ ಸ್ವಾತಂತ್ರ್ಯ ಸಾಧಿಸುವುದು ಮತ್ತು ಭವಿಷ್ಯದಲ್ಲಿ ರಾಷ್ಟ್ರವಾಗಿ ಬಾಳುವುದು ಕಷ್ಟವೆಂದೇ ಅವರ ನಂಬಿಕೆಯಾಗಿತ್ತು. ಹಿಂದೂ ಮತ್ತು ಮುಸ್ಲಿಮರು ಭಾರತಮಾತೆಯ ಎರಡು ಕಣ್ಣುಗಳೆಂದೂ ಗಾಂಧಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು 1919ರ ಸಂದರ್ಭದಲ್ಲಿ ಖಿಲಾಪತ್ ಚಳವಳಿಗೆ ಕಾಂಗ್ರೆಸ್ ಸಂಘಟನೆಯಿಂದ ಬೆಂಬಲವನ್ನು ವ್ಯಕ್ತಪಡಿಸಿದರು.
ಈ ಭೂಮಿ ಎಲ್ಲರ ಅಗತ್ಯಗಳನ್ನು ದೊರೈಸಬಲ್ಲದೇ ಹೊರತು ಅವರ ದುರಾಸೆಯನ್ನಲ್ಲ. – ಗಾಂಧೀಜಿ
ಅಸಹಕಾರಚಳವಳಿಯನ್ನು ಪ್ರೇರೆಪಿಸಿದ ಸನ್ನಿವೇಶಗಳು
ಜಲಿಯನ್ ವಾಲಾಭಾಗ್ ಹತ್ಯಾಕಾಂಡ: ಬ್ರಿಟಿಷ್ ಸರಕಾರ ರೌಟಿಸ್ ಕಾಯ್ದೆಯನ್ನು ಮಾರ್ಚ್ 1919ರಲ್ಲಿ ಜಾರಿಗೆ ತಂದಿತು. ಇದರ ಮೂಲಕ ಬ್ರಿಟಿಷರು ಭಾರತೀಯ ರಾಷ್ಟ್ರೀಯವಾದಿಗಳನ್ನು ನಿಯಂತ್ರಿಸಲು ಪ್ರಾರಂಭಿಸಿದರು. ಈ ಕಾಯ್ದೆಯಡಿಯಲ್ಲಿ ಯಾವುದೇ ವ್ಯಕ್ತಿಯನ್ನು ವಿಚಾರಣೆ ಇಲ್ಲದೆ ಬಂಧಿಸಿ ಕೋರ್ಟ್‌ನ ಮೂಲಕ ಅಪರಾಧಿ ಎಂದು ನಿರ್ಣಯಿ ಶಿಕ್ಷೆ ವಿಧಿಸಬಹುದಿತ್ತು. ಇದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಸಭೆ ಸೇರುವುದನ್ನು ಸಂಘಟನೆ ಮಾಡುವುದನ್ನು ಮತ್ತು ಮುಕ್ತವಾಗಿ ಅಭಿವ್ಯಕ್ತಿಸುವ ಸ್ವಾತಂತ್ರ್ಯವನ್ನೂ ಕಿತ್ತುಕೊಂಡಿತ್ತು. ಗಾಂಧಿ ಇದನ್ನು ಪ್ರತಿಭಟಿಸುವ ಸಲುವಾಗಿ, ‘ಸತ್ಯಾಗಹ ಸಭಾ’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಹೋರಾಟವನ್ನು ಆರಂಭಿಸಿದರು. ಬೃಹತ್ ಸಭೆ, ಮೆರವಣಿಗೆ, ಬಹಿಷ್ಕಾರ ಮುಂತಾದ ವೈವಿಧ್ಯಮಯ ರಾಜಕೀಯ ಕಾರ್ಯವಿಧಾನಗಳನ್ನು ಇದರ ಮೂಲಕ ಕೈಗೊಳ್ಳಲಾಯಿತು.
ಜಲಿಯನ್‌ವಾಲಾಭಾಗ್ ಹತ್ಯಾಕಾಂಡ
ಬ್ರಿಟಿಷ್ ಸರಕಾರವು ರೌಲತ್ ಕಾಯ್ದೆಯ ಅನುಷ್ಠಾನದ ವಿರುದ್ಧದ ಪ್ರತಿಭಟನೆಗಳನ್ನು ದಮನಿಸಲು ನಿರ್ಧರಿಸಿತು. ಗಾಂಧಿ 1919 ಮಿಲ್ ೧ರಂದು ಒಂದು ಬೃಹತ್ ಸರಕಾರಕ್ಕೆ ಕರೆ ನೀಡಿದರು. ಪಂಜಾಬಿನಲ್ಲಿ ಡಾ| ಫಕುದ್ದೀನ್, ಡಾ|| ಸತ್ತಪಾಲ ಮುಂತಾದವರನ್ನು ಬಂಧಿಸಲಾಯಿತು. ಸದನ್ನು ವಿರೋಧಿಸಲು 1919 ಏಪ್ರಿಲ್ 13ರಂದು ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಜನರು ಬೈಸಾಕಿ ಹಬ್ಬದಂದು ಪ್ರತಿಭಟನಾ ಸಭೆ ಸೇರಿದರು. ಅಮೃತಸರದ ಪ್ರಾಧಿಕಾರಿ ಜನರಲ್ ಡಯರ್ ಅಲ್ಲಿ ನೆರೆದ ಜನರ ಮೇಲೆ ಹತ್ತು ನಿಮಿಷಗಳ ಅನಾಹತ ಗುಂಡಿನ ದಾಳಿ ನಡೆಸಿದ ಕಾರಣ ಸುಮಾರು 150 ಜನರು ಸತ್ತು ಸಾವಿರಾರು ಜನರು ಗಾಯಗೊಂಡರು. ಈ ಘಟನೆಯು ಗಾಂಧೀಜಿಯನ್ನು ಸೇರಿದಂತೆ ಅನೇಕ ಭಾರತೀಯರನ್ನು ಶೋಕತಪ್ತರನ್ನಾಗಿಸಿತು. ಈ ಘಟನೆಯ ನಂತರ ಪಂಜಾಬ್‌ನಲ್ಲಿ ಸೈನಿಕ ಆಡಳಿತ ಜಾರಿಗೊಳಿಸಲಾಯಿತು. ಈ ಹತ್ಯಾಕಾಂಡವನ್ನು ವಿರೋಧಿಸಿ ರವೀಂದ್ರನಾಥ ಠಾಗೋರ್ ತಮ್ಮ ನೈಟ್‌ಹುಡ್ ಪದವಿಯನ್ನು ಬ್ರಿಟಿಷ್ ಸರ್ಕಾರಕ್ಕೆ ವಾಪಾಸ್ ಮಾಡಿದರು. ಗಾಂಧಿ, ಅಸಹಕಾರ ಚಳವಳಿಯನ್ನು ಆರಂಭಿಸಲು ಈ ಪ್ರಕರಣವೂ ಕಾರಣವಾಯಿತು. ಮುಖ್ಯ ಭಾರತೀಯ ಹೋರಾಟಗಾರರನ್ನು ಹತ್ಯೆಗೈದ ಮೈಕಲ್-ಪಿ-ಡಯರ್‌ನನ್ನು ಭಾರತದ ಕ್ರಾಂತಿಕಾರಿ ಉಧಮ್ ಸಿಂಗ್‌ನು ಹತ್ಯೆ ಮಾಡಿದನು.
ಖಿಲಾಫತ್ ಚಳುವಳಿ
ಟರ್ಕಿಯ ಸುಲ್ತಾನರು ಮುಸ್ಲಿಮರ ಧಾರ್ಮಿಳ ಮುಲಿಂಡರೂ ಆಗಿದ್ದು, ಖಲೀಫರೆಂದು ಕರೆಸಿಕೊಳ್ಳುತ್ತಿದ್ದರು, ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಬಿಲಿತರ ಮೇಲೆ ನಡೆಯುತ್ತಿದ್ದ ಬ್ರಿಟಿಷರ ದೌರ್ಜನ್ಯವನ್ನು ಖಂಡಿಸಿ ಮುಸ್ಲಿಮರು ಜಗತ್ತಿನಾದ್ಯಂತ ಪ್ರತಿಭಟಿಸಿದರು. ಅಂತೆಯೇ ಮಹಮರ್ ಅಲಿ ಮತ್ತು ಶೌಕತ್ ಅಲಿ ಸಹೋದರರು ಭಾರತದಲ್ಲಿ ಟರ್ಕರ ಪರವಾದ ವಿಲಾಫತ್ ಚಳವಳಿಯನ್ನು 1911ರಲ್ಲಿ ಪ್ರಾರಂಭಿಸಿದರು. ಒಂದೂ ಮುಸ್ಲಿಮರು ಒಗ್ಗಟ್ಟಾಗಿ ಬ್ರಿಟಿಷರ ವಿರುದ್ಧ ಬಂಡೆದ್ದರೆ ಮಾತ್ರ ಬಿಪರು ಒಮ್ಮೆಟ್ಟುತ್ತಾರೆ ಎನ್ನುವುದು ಗಾಂಧೀಜಿಯವರ ನಂಬಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಸ್ಲಿಮರ ಸಹಭಾಗಿತ್ವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಬಹಳ ಮುಖ್ಯ ಎಂದು ಗಾಂಧೀಜಿ ಭಾವಿಸಿದ್ದರು. ಪರಿಣಾಮವಾಗಿ ಗಾಂಧೀಜ ಬಿಲಾಫತ್ ಚಳವಳಿಗೆ ತಮ್ಮ ಬೆಂಬಲವನ್ನು ನೀಡಿದರು. ಈ ಚಳವಳಿಯು ಹಿಂದೂ ಮುಸ್ಲಿಮರು ಒಂದುಗೂಡಿ ನಡೆಸಿದ ರಾಷ್ಟ್ರವ್ಯಾಪಿ ಆಂದೋಲನವಾಗಿದೆ. ಅನೇಕ ರಾಷ್ಟ್ರೀಯ ನಾಯಕರು ಮತ್ತು ಕಾಂಗ್ರೆಸ್ ಸಂಘಟನೆಯು ಖಿಲಾಫತ್ ಚಳವಳಿಯ ಬೆಂಬಲಕ್ಕೆ ನಿಂತಿತು.
ಅಸಹಕಾರ ಚಳವಳಿ
1920 ಸೆಪ್ಟೆಂಬರ್ 4ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಲ್ಕತ್ತಾದ ವಿಶೇಷ ಅಧಿವೇಶನದಲ್ಲಿ ಅಸಹಕಾರ ಚಳವಳಿ ಆರಂಭಿಸಲು ಗೊತ್ತುವಳಿಯೊಂದನ್ನು ಅನುಮೋದಿಸಿತು. ಅಹಿಂಸೆಯ ಮೂಲಕ ಸರಾಜ್‌ಗಳಿಕೆ, ಬಿಟಿಷರ ನಿರ್ದಯಿ ಆಡಳಿತದ ವಿಕೃತ ಸ್ವರೂಪನು ಜನರಿಗೆ ಪರಿಚಯಿಸುವುದು ಹಾಗೂ ಮುಖ್ಯವಾಗಿ ಜಲಿಯನ್ ವಾಲಾವಾಗ್ ಹತ್ಯಾಕಾಂಡದಂತಹ ಘಟನೆಗಳು ಭವಿಷತ್ತಿನಲ್ಲಿ ನಡೆಯದಂತೆ ವಿರೋಧಿಸುವುದು, ಬಿಟಿಷ್ ಆಡಳಿತವನ್ನು ಸಂಪೂರ್ಣ ವಿರೋಧಿಸುವುದು ಪ್ರಮುಖ ಗುರಿಯಾಗಿತ್ತು, ಅದರೊಂದಿಗೆ ರೆ೬ಶ್ ಕಾಯ್ದೆಯನ್ನು ಬ್ರಿಟಿಷ್ ಸರಕಾರ ಹಿಂತೆಗೆದುಕೊಳ್ಳುವುದು ಮತ್ತು ಹೊಸ ರಾಜಕೀಯ ಸುಧಾರಣೆಗಳನ್ನು ಜಾರಿಗೊಳಿಸುವ ಮೂಲಕ ಸ್ವರಾಜ್ಯವನ್ನು ಭಾರತಕ್ಕೆ ನೀಡಬೇಕೆಂಬುದು ಪ್ರಮುಖ ಬೇಡಿಕೆಯಾಗಿತ್ತು.
ಅಸಹಕಾರ ಚಳವಳಿಯ ಪ್ರಮುಖ ಕಾರ್ಯಕ್ರಮಗಳು
1. ಶಾಲಾ ಕಾಲೇಜುಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸುವುದು.
2. I99ರ ಕಾಯ್ದೆಯನ್ವಯ ಪ್ರಾಂತೀಯ ಶಾಸನ ಸಭೆಗಳಿಗೆ ನಡೆಯುವ ಚುನಾವಣೆಯನ್ನು ಬಹಿಷ್ಕರಿಸುವುದು.
3. ಬ್ರಿಟಿ ನೀಡಿರುವ ಗೌರವ ಪದವಿಗಳನ್ನು ಮತ್ತು ಸ್ಥಾನಗಳನ್ನು ನಾಪಸ್ಸು ಬಪ್ಪುದು.
4. ಸ್ಥಳೀಯ ಸಭೆಗಳಿಗೆ ನಾಮನಿರ್ದೇಶನಗೊಂಡ ಸದಸ್ಯರು ರಾಜಿನಾಮೆ ನೀಡುವುದು.
5. ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಬಹಿಷ್ಕರಿಸುವುದು,
6. ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು.
ಇವುಗಳ ಜೊತೆಗೆ ಅಸಹಕಾರ ಚಳವಳಿಯ ಇತರ ಪ್ರಮುಖ ಕಾರ್ಯ ಯೋಜನೆಗಳೆಂದರೆ ಕೈಮಗ್ಗ ನೇಕಾರಿಕೆಯನ್ನು ಉತ್ತೇಜಿಸುವುದು ಮತ್ತು ಬಾವಿಯನ್ನು ತಯಾರಿಸುವುದು, ರಾಷ್ಟ್ರೀಯ ಶಾಲೆಗಳನ್ನು ತೆರೆಯುವುದು, ಹಿಂದೂ ಮತ್ತು ಮುಸ್ಲಿಂರ ನಡುವೆ ಐಕ್ಯತೆಯನ್ನು ಸಾಧಿಸುವುದು. ಅಸ್ಪಶ್ಯತೆಯನ್ನು ಹೋಗಲಾಡಿಸುವುದು ಮತ್ತು ಮಹಿಳೆಯರನ್ನು ಶೋಚನೀಯ ಸ್ಥಿತಿಯಿಂದ ಪಾರು | ಮಾಡಿ ಅವರಲ್ಲಿ ಸಬಲೀಕರಣವನ್ನು ತರುವುದು.
ಅಸಹಕಾರ ಚಳವಳಿಯ ಸಂದರ್ಭದಲ್ಲಿ ಆದ ಪ್ರಮುಖ ಬೆಳೆವಣಿಗೆಗಳು
1. ದೇಶಬಂಧು ಚಿತ್ತರಂಜನ್ ದಾಸ್, ಮೋತಿಲಾಲ್ ನೆಹರೂ, ರಾಜೇಂದ್ರ ಪ್ರಸಾದ್ ಮೊದಲಾದ ಹಿರಿಯ ವಕೀಲರು ತಮ್ಮ ವಕೀಲ ವ್ಯಕ್ತಿಯನ್ನು ಬಿಟ್ಟರು.
2. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ತೊರೆದರು.
3. ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸದೆ ಕಾಂಗ್ರೆಸ್ 1919ರ ಕಾಯ್ದೆಯ ಅಡಿಯಲ್ಲಿ ಪಾಂತ್ಯಗಳಿಗೆ ನಡೆದ ಚುನಾವಣೆಯನ್ನು ಬಹಿಷ್ಕರಿಸಿತು.
4. ಕಾತಿ ವಿದ್ಯಾಪೀಠ, ಗುಜರಾತ್ ವಿದ್ಯಾಪೀಠ, ಬಿಹಾರ ವಿದ್ಯಾಪೀಠ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ರಾಷ್ಟ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲಾಯಿತು.
5. ರವಿಂದನಾಥ ಠಾಗೂರರು ತಮ್ಮ ನೈಟ್ ವುಡ್' ಪದವಿಯನ್ನು ಬ್ರಿಟಿಷ್ ಹಿಂದಿರುಗಿಸಿದರು.
6. ಸರ್ಕಾರಕ್ಕೆ ಮಹಿಳೆಯರೂ ಸೇರಿದಂತೆ ಜನಸಾಮಾನ್ಯರು ಕಾಂಗ್ರೆಸ್ ಹೋರಾಟಕ್ಕೆ ದೇಣಿಗೆ ನೀಡಿದರು. ಬದೇಶಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಮುಂದೆ ಮುಷ್ಕರ ನಡೆಸಲಾಯಿತು. ವಿದೇಶಿ ಬಟ್ಟೆಗಳನ್ನು ಸುಡಲಾಯಿತು.
7. 1921ರಲ್ಲಿ ಪ್ರಿನ್ಸ್ ಆಫ್ ವೇಲ್ ರಾಜಕುಮಾರ ಬರುವ ಕಾರ್ಯಕ್ರಮವನ್ನು ವಿರೋಧಿಸಲಾಯಿತು,
ಅಸಹಕಾರ ಚಳವಳಿಯ ಪರಿಣಾಮಗಳು: ಈ ಚಳವಳಿಯ ಪ್ರಮುಖ ಉದ್ದೇಶಗಳು ಕೈಗೂಡದಿದ್ದರೂ ಕೆಲವು ಗಂಭೀರ ಪರಿಣಾಮಗಳನ್ನು ಸೃಷ್ಟಿಸಿತು, ಪ್ರಮುಖವಾಗಿ ರಾಷ್ಟ್ರೀಯ ಹೋರಾಟ ಜನರ ಹೋರಾಟವಾಗಿ ರೂಪಾಂತರವಾಯಿತು, ಕಾಂಗ್ರೆಸ್ ಪ್ರದೇಶ ಚಳವಳಿಯು ಕ್ರಾಂತಿಕಾರಕ ಆಯಾಮಗಳನ್ನು ಪಡೆಯಿತು. ಹಿಂದೂ ಮುಸ್ಲಿಂ ಭ್ರಾತೃತ್ವವನ್ನು ತಾತ್ಕಾಲಿಕವಾಗಿಯಾದರೂ ಸೃಷ್ಟಿಸಿತು. ರಾಷ್ಟ್ರೀಯ ಹೋರಾಟ, ನಗರಗಳನ್ನು ದಾಟಿ ಗ್ರಾಮಾಂತರ ಪ್ರದೇಶಗಳಿಗೂ ಹಬ್ಬಲು ಪ್ರಾರಂಭಿಸಿತು. ಅಸ್ಪಶ್ಯತೆ ನಿವಾರಣೆ, ಮಹಿಳೆಯರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರದೇಶ ಮುಂತಾದವು ಗಮನಿಸಲೇಬೇಕಾದ ಪರಿಣಾಮಗಳಾಗಿದೆ.
ಚೌರಿ ಚೌರ ಘಟನೆ : ಘಟ. 5, 1922ರಂದು ಉತ್ತರ ಪ್ರದೇಶದ ಗೋರಕ್ ಪರ ಜಿಲ್ಲೆಯ ಚೌ ಚೌರ ಎಂಬಲ್ಲಿ ಸುಮಾರು 3000 ರೈತರನ್ನೊಳಗೊಂಡ ದೊಡ್ಡ ಗುಂಡು ಪೊಲೀಸ್ ಸ್ಟೇಷನ ಮುಂದೆ ಸೇರಿತು, ಅವರ ಪ್ರಮುಖ ಉದ್ದೇಶ ಮದ್ಯದ ಅಂಗಡಿಯ ಮುಂದೆ ಮುಷ್ಕರ ನಡೆಸುತ್ತಿದ್ದ ಕಾಂಗ್ರೆಸ್ ಹೋರಾಟಗಾರರನ್ನು ತಿಳಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರತಿರೋಧವನ್ನು ವಾಪಡಿಸುವುದು, ವನ್ನು ಸಹಿಸದ ಜೊಸರು ಅಲ್ಲಿ ನೆರೆದಿದ್ದವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಇದು ಜನರನ್ನು ಕೆರಳಿಸಿತು. ಅವರು ಪೊಲೀಸ್ ವೇಷಣೆಗೆ ಬೆಂಕಿ ಇಟ್ಟರು. ಇದರಿಂದಾಗಿ ಒಳಗಡೆ ಇದ 22 ಪೊಲೀಸರು ಸಜೀವವಾಗಿ ಸುಟ್ಟುಹೋದರು, ಮರ ಕಡೆಗಳಲ್ಲಿಯೂ ಈ ಬಗೆಯ ಹಿಂಸಾತ್ಮಕ ಘಟನೆಗಳು ನಡೆದವು ಪರಿಸಿ ಪಿಯ ಗಂಭೀರತೆಯನ್ನು ಅಂಶ ಗಾಂಧೀಜಿಯವರು ಜನರಿಗೆ ಇನ್ನೂ ಆ ಹಿಂಸಾತ್ಮಕ ಹೋರಾಟಕ್ಕೆ ಬೇಕಾದ ಸಿದ್ದತೆ ಮತ್ತು ನೈತಿಕ ಶಕ್ತಿಯ ಕೊರತೆ ಇದೆ ಎಂದು ಭಾವಿಸಿದರು. ಹೀಗಾಗಿ ಫೆಬ್ರವರಿ 12, 1922ರಂದು ಆಸಕರ ಹೋರಾಟವನ್ನು ಹಿಂತೆಗೆದುಕೊಂಡರು. ಗಾಂಧೀಜಿಯವರು ಜನರನ್ನು ಪ್ರಚೋದಿಸುತ್ತಿದ್ದಾರೆ ಎನ್ನುವ ಆರೋಪದಡಿ ಮಾರ್ಚ್ 10, 1922ರಂದು ಅವರನ್ನು ಬಂಧಿಸಿ 6 ವರ್ಷಗಳ ಕಾರಾಗೃಹ ವಾಸಕ್ಕೆ ಬಿಟಿಷರು ಕಳುಹಿಸಿದರು. ಆದರೆ ಅವರನ್ನು ಅನಾರೋಗ್ಯದ ಕಾರಣದಿಂದ ಎರಡು ವರ್ಷಗಳ ನಂತರ “ಜೈಲಿನಿಂದ ಬಿಡುಗಡೆ ಮಾಡಲಾಯಿತು ಗಾಂಧೀಜಿಯವರ ಈ ತೀರ್ಮಾನದಿಂದ ರಾಜಕೀಯ ಶೂನ್ಯತೆ ಸೃಷ್ಟಿಯಾಯಿತು,
ಸ್ವರಾಜ್ ಪಕ್ಷ: ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡಿದ್ದ ಪರಿಣಾಮ ಕಾಂಗ್ರೆಸ್ಸಿನಲ್ಲಿ ಉತ್ಸಾಹವನ್ನು ಕುಂದಿಸಿತು. ಸಿ ಅರ್ ದಾಸ್ ಮತ್ತು ಮೋತಿಲಾಲ್ ನೆಹರೂ ಅವರು ಶಾಸನಸಭೆಗಳನ್ನು ಬಹಿಷ್ಕರಿಸುವುದನ್ನು ಕೊನೆಗೊಳಿಸಿ ಅವುಗಳಿಗೆ ಪ್ರವೇಶ ಮಾಡಬೇಕೆಂದು ವಾದಿಸಿದರು. ಶಾಸನ ಸಭೆಗಳನ್ನು ಪ್ರವೇಶಿಸಿ ಅಲ್ಲಿಯೇ ಕಲಾಪಗಳಿಗೆ ಅಡ್ಡಿಯುಂಟು ಮಾಡಬೇಕು. ಇದರಿಂದ ಸ್ವಾತಂತ್ರ್ಯ ಚಳವಳಿ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದು ವಾದಿಸಿದರು. ಸೆಪ್ಟೆಂಬರ್ 1923ರಲ್ಲಿ ಸಿ.ಆರ್.ಟಿ.ಸ ಮತ್ತು ಮೋತಿಲಾಲ್ ನೆಹರೂರಿಂದ ಸ್ವರಾಜ್ ಪಕ್ಷ ಸ್ಥಾಪಿತವಾಯಿತು. ಆದ ವರ್ಷ ಅಬ್ದುಲ್ ಕಲಾಂ ಆಪಾದ್ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸರಾಜ್ ಪಕ್ಷದವರು ಚುನಾವಣೆಯಲ್ಲಿ ಸರ್ಧಸಲು ಒಪ್ಪಿಗೆಯನ್ನು ಪಡೆಯಲಾಯಿತು. ನವೆಂಬರ್ 1923ರಲ್ಲಿ ನಡೆದ ಚುನಾವಣೆಯಲ್ಲಿ ಸ್ವರಾಜ್ ಪಕ್ಷದವರು 101 ಸ್ಥಾನಗಳ ಪೈಕಿ 42 ಸ್ಥಾನಗಳನ್ನು ಗೆದ್ದರು.
ನಾಗರಿಕ ಕಾಯ್ದೆ ಭಂಗ ಚಳವಳಿಯು ಆರಂಭವಾಗಲು ಕಾರಣವಾದ ಸನ್ನಿವೇಶಗಳು:
1927ರಲ್ಲಿ ಬ್ರಿಟಿಷ್ ಸರ್ಕಾರವು ಸೈಮನ್ ಕಮಿಷನ್ ಅನ್ನು ನೇಮಿಸಿತು. 1919ರಲ್ಲಿ ಜಾರಿಗೊಂಡ ಭಾರತ ಸರ್ಕಾರ ಕಾಯ್ದೆಯ (ಮಾಂಟೆಗೂ ಚೇಮ್ ಫರ್ಡ್ ಕಾಯ) ಅನುಷ್ಠಾನ ಮತ್ತು ಅದರ ಪರಿಣಾಮಗಳನ್ನು ವಿಮರ್ಶಿಸುವ ಸಲುವಾಗಿ ಫೆಬ್ರವರಿ 3, 1928ರಂದು ಸೈಮನ್ ಕಮಿಷನ್ ಭಾರತಕ್ಕೆ ಬಂದಾಗ ಸೈಮನ್ ಮದಾಸ ಮುಂತಾದ ಕಡೆ ಬಂದ್ ಆಚರಿಸಲಾಯ, ಲಾಹೋರ್‌ನಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಲಾಲಾ ಲಜಪತರಾಯ್ ಮೇಲೆ ರಾಜಾರ್ಜ್ ಮಾಡಿದ ಕಾರಣ ಅವರು ಮರಣ ಹೊಂದಿದರು. ಇದರಿಂದ ಭಾರತದಲ್ಲಿ ರಾಷ್ಟ್ರೀಯ ಹೋರಾಟ ಇನ್ನೂ ತೀವ್ರವಾಯಿತು.
ಬ್ರಿಟಿಷ್ ಸರಕಾರವು ಭಾರತೀಯರಿಗೆ ಪರೋಕ್ಷವಾದ ಸವಾಲೊಂದನ್ನು ಎಸೆಯಿತು. ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ್ತು ಸಮುದಾಯಗಳಿಗೆ ಒಪ್ಪಿತವಾಗುವ ಸಂವಿಧಾನವೊಂದನ್ನು ರೂಪಿಸುವ ವಿಷಯಕ್ಕೆ ಸಂಬಂಧಿಸಿದ ವರದಿಯೊಂದನ್ನು ಸಿದ್ಧಪಡಿಸುವುದೇ ಆ ಪರೋಕ್ಷ ಸಾ. ಈ ಹಿನ್ನೆಲೆಯಲ್ಲಿ 1928ರಲ್ಲಿ ಮೊರಾಲ್ ನೆಹರೂರವರ ಆಧ್ಯತೆಯಲ್ಲಿ ಸಮಿತಿಯೊಂದು ರಚಿತವಾಗಿ ನೆಹರು ವರದಿ ಸಿದ್ಧಗೊಂಡಿತು. ಗಾಂಧಿ ಕೂಡಾ ನಹರೂ ಸಮಿತಿಯನ್ನು ಶ್ಲಾಘಿಸಿದರು. ನೆಹರೂ ವರದಿಯು ಭಾರತಕ್ಕೆ ಡೊಮಿನಿಯನ್ ಸ್ಟೇಟಸ್ ಜೊತೆಗೆ ಫೆಡರಲ್ ರಾಜ್ಯ ವ್ಯವಸ್ಥೆ, ಅಲ್ಪಸಂಖ್ಯಾತರಿಗೆ ಇದ್ದ ಪ್ರತ್ಯೇಕ ಮತಕ್ಷೇತ್ರಗಳ ಕೊನೆ, ಬ್ರಿಟಿಷ್ ಪ್ರಾಂತ್ಯಗಳನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆ, ಭಾರತೀಯರಿಗೆ ಮೂಲಭೂತ ಹಕ್ಕುಗಳನ್ನು ನೀಡುವುದು, ಭಾರತಕ್ಕೆ ಜನತಾಂತ್ರಿಕ ಪ್ರಜಾಪ್ರಭುತ್ವವನ್ನು ತರುವುದು ಮುಂತಾದವುಗಳನ್ನು ಶಿಫಾರಸು ಮಾಡಿತು. ನಂತರ ಬ್ರಿಟಿಷ್ ಲೇಬರ್ ಪಕ್ಷದ ಪ್ರಧಾನಿ ರಾಮ್: ವಾಕ್ ಡೊನಾಲ್ಡ್ ವೈಸ್‌ರಾಯ್ ಲಾರ್ಡ್ ಇರಿನ್ ಅವರ ಜೊತೆ ಮಾತುಕತೆ ನಡೆಸಿ ಭಾರತಕ್ಕೆ ಡೊಮಿನಿಯನ್ ಸ್ಟೇಟಸ್ ಅನ್ನು ನೀಡುವುದು ಪರಿಶೀಲಿಸುವುದಾಗಿ ಪಷಿಸಿದನು.
ನಂತರದಲ್ಲಿ ಆದ ಮುಖ್ಯ ಬೆಳವಣಿಗೆಯೆಂದರೆ 10205 ಕಾಹೋರ್ ಕಾಂಗ್ರೆಸ್ ಅಧಿವೇಶನ ಸಮಾವೇಶಗೊಂಡಿದ್ದು, ಈ ಸಮ್ಮೇಳನವು ಭಾರತೀಯ ರಾಷ್ಟ್ರೀಯ ಹೋರಾಟಕ್ಕೆ ಮತ್ತಷ್ಟು ತೀವ್ರತೆಯನ್ನು ತಂದುಕೊಟ್ಟಿತು. ಜವಾಹರಲಾಲ್ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಹೋರಾಟದ ಪರವಾಗುರಿಯಾದ 'ಪೂರ್ಣ ಸ್ವರಾಜ್ ಅನ್ನು ಆಂಕರಿಸಲಾಯಿತು. 1930, ಜನವರಿ 26 ಅನ್ನು ಸ್ವಾತಂತ್ರ ದಿನವೆಂದು ಘೋಷಿಸಲಾಯಿತು. ಈ ಅವಶನವು ಬಿಟಿಷರ ವಿರುದ್ಧ ಹಮ್ಮಿಕೊಳ್ಳಲಾಗುವ ಕಾನೂನುಭಂಗ ಚಳವಳಿಯ ಪೂರ್ಣ ಜವಾಬ್ದಾರಿಯನ್ನು ಗಾಂಧೀಜಿಯವರಿಗೆ ವಹಿಸಿತು, ಆ ಚಾರಿತ್ರಿಕ ದಿನದ ಮಹತ್ವವನ್ನು ಎತ್ತಿ ಹಿಡಿಯಲೆಂದೇ ಸ್ವಾತಂತ್ರ್ಯ ಭಾರತದ ಸಂವಿಧಾನವನ್ನು ಜನವರಿ 26, 1950 ರಂದು ಅಂಗೀಕರಿಸಿದ್ದು.
ಸವಿನಯ ಕಾನೂನುಭಂಗ ಚಳವಳಿ
1930 ಫೆಬ್ರವರಿಯಲ್ಲಿ ಕಾಂಗ್ರೆಸ್ ಕಾರಕಾರಿ ಸಮಿತಿಯು ಸಬರ್‌ಮತಿಯಲ್ಲಿ ಸಭೆ ಸೇರಿ ಕಾನೂನುಭಂಗ ಚಳವಳಿಯನ್ನು ಹಮ್ಮಿಕೊಳ್ಳಲು ನಿರ್ಣಯಿಲಾಯಿತು. ಗಾಂಧಿ: ಮಾರ್ಚ್ 2, 1930 ರಂದು ಹನ್ನೊಂದು ಅಂಶಗಳುಳ್ಳ ಬೇಡಿಕೆಗಳ ಪತ್ರವನ್ನು ವೈಸ್‌ರಾಯ್‌ಗೆ ಬಂದರು. ಒಂದು ವೇಳೆ ಸರ್ಕಾರ ಇದಕ್ಕೆ ತಪ್ಪಿದ, ತೆರಿಗೆ ನಿರಾಕರಣೆಯ ಜತೆ ನಾಗರಿಕ ಕಾನೂನುಭಂಗ ಚಳವಳಿಯನ್ನು ಆರಂಭಿಸುವುದಾಗಿ ಗಾಂಧಿ ಘಸಿದರು. ವೈಸ್ ರಾಯ್ ಈ ಪತ್ರದ ಮನವಿಗಳನ್ನು ತಿರಸ್ಕರಿಸಿದ ಕಾರಣದಿಂದ 1931 ಮಾರ್ಚ್ 12ರಂದು ಅನುಯಾಯಿಗಳೊಂದಿಗೆ ಸಬರಮತಿ ಆಶ್ರಮದಿಂದ ಗುಜರಾತ್‌ನ ಕಡಲತೀರ ದಂಡಿಯ ವರೆಗೆ ಸುಮಾರು 375 ಕಿ ಮೀ ದೂರವನ್ನು ಕ್ರಮಿಸಿದರು. ಏಪ್ರಿಲ್ 1ರಂದು ಗಾಂಧಿ ವಂಡಿಯನ್ನು ತಲುಪಿ ಬ್ರಿಟಷರು ಹೇಅಂಗೀಕರಿಸಿದ್ದು ಉಪ್ಪನ್ನು ತಯಾರಿಸುವ ಮೂಲಕ ಉಪ್ಪಿನ ಕಾನೂನನ್ನು ಮುರಿದರು, ಅರೆಕ ಈ ಚಳವಳಿಯಲ್ಲಿ ಬಹಳ ಪ್ರಸಿದ್ಧವಾಯಿತು, ಸಾವಿರಾರು ಜನರು ಗಾಂಧೀಜಿಯವರ ಕರೆಗೆ ಸ್ಪಂದಿಸಿ, ಚಳವಳಿಯಲ್ಲಿ ಭಾಗವಹಿಸಿದರು. ಉಪ್ಪಿನ ಸತ್ಯಾಗ್ರಹದ ನಂತರ ಏಪ್ರಿಲ್ 1ರಿಂದ 3ರ ವರೆಗೆ ರಾಷ್ಟ್ರೀಯ ಚಳವಳಿ ಸಪ್ತಾಹವನ್ನು ಆಚರಿಸಿದರು.
ಕಾನೂನುಭಂಗ ಚಳವಳಿಯಲ್ಲಿ ಗಾಂಧೀಜಿಯವರೊಂದಿಗೆ ಭಾಗವಹಿಸಿದ ವಿಜಯಲಕ್ಷ್ಮಿ, ಪಂಡಿತ್, ಕಮಲಾ ನೆಹರೂ, ವಲ್ಲಭಬಾಯಿ ಪಟೇಲ್, ರಾಜಗೋಪಾಲಚಾರಿ, ಬಾಬು ರಾಜೇಂದ್ರಪ್ರಸಾದ್ ಮೊದಲುಗೊಂಡು, ಸಾವಿರಾರು ಜನರನ್ನು ಆಟಿಷರು ಬಂಧಿಸಿದರು. ಈ ಚಳವಳಿಯ ದೇಶದ ನಾನಾ ಭಾಗಗಳಲ್ಲಿ ವ್ಯಾಪಿಸಿತು.
ನಿಮಗಿದು ತಿಳಿದಿರಲಿ
1. ಸಬರಮತಿಯಿಂದ ದಂಡಿಯವರೆಗೆ ನಡೆದ ತಂಡದಲ್ಲಿ ಕರ್ನಾಟಕದ 18 ವರ್ಷದ ತರು ಮೈಲಾರ ಮಹಾದೇವಪ್ಪ ಸಹ ಇದ್ದದ್ದು ಇದರ ವಿಶೇಷ
2. ಕರ್ನಾಟಕ ಕಾಂಗ್ರೆಸ್ ಕೂಡ ಆರ್, ಆರ್, ದಿವಾಕರ್, ಜಲಗಿ ಹನುಮಂತರಾಯರು, ಗಂಗಾಧರ ದೇಶಪಾಂಡೆ, ಹರ್ಡಿಕರ್ ಮಂಜಪ್ಪ ಮತ್ತು ಕಾರ್ನಾಡು ಸದಾಶಿವರಾಯರನ್ನೊಳಗೊಂಡ ಸತ್ಯಾಗ್ರಹ ಸಮಿತಿಯನ್ನು ರಚಿಸಿ ಕಾರವಾರ ಜಿಲ್ಲೆಯ ಅಂಕೋಟ ತಾಲೂಕಿನಲ್ಲಿ ಉಪಿನ ಸತ್ಯಾಗ್ರಹ ಪ್ರಾರಂಬಿಸಿತು.
ಇದರ ನಡುವೆ ಈ ಹಿಂದೆ ಪ್ರಸ್ತಾಪಿಸಿದಂತೆ ಲಂಡನ್ನಿನಲ್ಲಿ ಭಾರತೀಯ ಜನಪ್ರತಿನಿಧಿಗಳ ಸಮಾವೇಶವನ್ನು 1930ರಲ್ಲಿ ಕರೆಯಲಾಯಿತು. ಮೊದಲನೆಯ ದುಂಡು ಮೇಜಿನ ಪರಿಷತ್ ಸಮಾವೇಶ. ಇದರಿಂದ ಭಾರತೀಯರನ್ನು ಹೊರತುಪಡಿಸಿ ಸರ್ಕಾರ ಏಕಮುಖವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೆಂಬುದು ವ್ಯಕ್ತವಾಯಿತು. ಈ ಸಮಾವೇಶದಲ್ಲಿ ಮೊಟ್ಟಮೊದಲನೆಯ ಬಾರಿಗೆ ಅಸ್ಪಶ್ಯ ಸಮುದಾಯವನ್ನು ಪ್ರತ್ಯೇಕವಾಗಿ ಪ್ರತಿನಿಧಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು. ಈ ಸಮಾವೇಶದಲ್ಲಿ ಭಾಗವಹಿಸಲು ಆ ಸಂದರ್ಭದಲ್ಲಿ ಬಂಧಿತರಾಗಿದ್ದ ಗಾಂಧೀಜಿ ಮತ್ತು ಹಲವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನು ಬಿಡುಗಡೆಗೊಳಿಸಲಾಯಿತು. ಆದರೆ ಕಾಂಗ್ರೆಸ್ ಮತ್ತು ಗಾಂಧೀಜಿಯವರು ಈ ಸಮಾವೇಶದಲ್ಲಿ ಭಾಗವಹಿಸಲು ನಿರಾಕರಿಸಿದರು. ಈ ಸಮಾವೇಶದಲ್ಲಿ ದೇಶಿಯ ಸಂಸ್ಥಾನದ ಪ್ರತಿನಿಧಿಗಳು, ವಿವಿಧ ಸಮುದಾಯದ ಮುಖಂಡರುಗಳಾಗಿದ್ದ ಡಾ. ಬಿ ಆರ್ ಅಂಬೇಡ್ಕರ್, ಎಂ.ಆರ್. ಜಯಕರ್, ತೇಜಬಹದ್ದೂರ್ ಸಪ್ಪು, ಮಹಮದ್ ಅಲಿ ಜಿನ್ನಾ, ಶ್ರೀನಿವಾಸ್ ಶಾಸ್ತ್ರಿ ಮೊದಲಾದವರು ಭಾಗಹಿಸಿದ್ದರು. ಡೊಮಿನಿಯನ್ ಸ್ಟೇಟಸ್, ಜವಾಬ್ದಾರಿಯುತ ಸರ್ಕಾರ ಮತೀಯ ಪ್ರಾತಿನಿಧ್ಯಗಳನ್ನು ಕುರಿತಂತೆ ಈ ಸಮಾವೇಶದಲ್ಲಿ ಸಮ್ಮತಿಸಲಾಯಿತು. ಭಾರತದ ರಾಷ್ಟ್ರೀಯ ಕಾಂಗ್ರೆಸ್ ಮೊದಲನೆಯ ದುಂಡು ಮೇಜಿನ ಪರಿಷತ್ತಿನ ಸಮಾವೇಶದಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಸಮಾವೇಶವು ಪೂರ್ಣಗೊಳ್ಳಲಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮನವೊಲಿಸಿ ದುಂಡು ಮೇಜಿನ ಸಮಾವೇಶದ ಉದ್ದೇಶವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಗಾಂಧಿ ಮತ್ತು ವೈಸರಾಯ್ ಇರ್ವಿನ್ ನಡುವೆ ಒಪ್ಪಂದವೊಂದು ಮಾರ್ಚ್ 1931ರಲ್ಲಿ ಜರುಗಿತು. ಇದನ್ನು ಗಾಂಧೀ-ಇರ್ವಿನ್ ಒಪ್ಪಂದ ಎಂದು ಕರೆಯುತ್ತಾರೆ. ಪರಿಣಾಮವಾಗಿ ಕಾಂಗ್ರೆಸ್ ಪಕ್ಷವು ಸವಿನಯ ಕಾನೂನುಭಂಗ ಚಳವಳಿಯನ್ನು ನಿಲ್ಲಿಸಿ ಎರಡನೆಯ ದುಂಡುಮೇಜಿನ ಪರಿಷತ್ತಿನ ಸಮಾವೇಶದಲ್ಲಿ ಭಾಗವಹಿಸಲು ನಿರ್ಧರಿಸಿತು. ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್‌ರವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಎರಡನೆಯ ದುಂಡು ಮೇಜಿನ ಸಮಾವೇಶದಲ್ಲಿ ಅಂಬೇಡ್ಕರ್‌ರವರು ಅಸ್ಪೃಶ್ಯರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡುವ ಪ್ರಸ್ತಾಪ ಮುಂದಿಟ್ಟರು. ಈ ಪ್ರಸ್ತಾಪವನ್ನು ಗಾಂಧೀಜಿಯವರು ಒಪ್ಪಲಿಲ್ಲ. ಇದರಿಂದ ಗಾಂಧೀಜಿ ಮತ್ತು ಅಂಬೇಡ್ಕರ್‌ರವರ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಉಂಟಾಯಿತು. ಹೀಗಾಗಿ ಎರಡನೆಯ ದುಂಡು ಮೇಜಿನ ಪರಿಷತ್ತು ಸಮಾವೇಶ ಕೂಡ ಯಾವುದೇ ತೀರ್ಮಾನವಿಲ್ಲದೆ ಮುಕ್ತಾಯಗೊಂಡಿತು. ಆದರೆ ಬ್ರಿಟಿಷ್ ಸರ್ಕಾರವು ಅಸ್ಪೃಶ್ಯರನ್ನು ಪ್ರತ್ಯೇಕ ಮತಕ್ಷೇತ್ರವಾಗಿ ಪರಿಗಣಿಸುವುದಾಗಿ ಘೋಷಿಸಿತು. ಇದರಿಂದಾಗಿ ಆ ವರ್ಗಕ್ಕೆ ನೀಡುವ ಪ್ರತ್ಯೇಕ ಮತಕ್ಷೇತ್ರಕ್ಕೆ ಸಂಬಂಧಿಸಿದ ‘ಮತೀಯ ಮಸೂದೆಗೆ 1932ರಲ್ಲಿ ಚಾಲ್ತಿ ನೀಡಿದರು. ಇದನ್ನು ವಿರೋಧಿಸಿ ಮಹಾತ್ಮ ಗಾಂಧೀಜಿಯವರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ ಅಂಬೇಡ್ಕರ್ ಅವರ ಮನವೊಲಿಸುವ ಪ್ರಯತ್ನಗಳು ನಡೆದವು. ಇದರ ಫಲವಾಗಿ ಪೂನಾ ಒಪ್ಪಂದವಾಯಿತು. ಇದರ ಪ್ರಕಾರ ಪ್ರತ್ಯೇಕ ಮತಕ್ಷೇತ್ರದ ಬದಲಾಗಿ ಸಾಮಾನ್ಯ ಮತಕ್ಷೇತ್ರಗಳಲ್ಲಿಯೇ ಕೆಲವು ಕ್ಷೇತ್ರಗಳನ್ನು ಅಸ್ಪಶ್ಯರಿಗೆ ಮೀಸಲಿಡಲಾಯಿತು. ಅಂತಹ ಕಡೆಗಳಲ್ಲಿ ಅಸ್ಪೃಶ್ಯ ಪ್ರತಿನಿಧಿ ಎಲ್ಲಾ ಜನರ ಪ್ರತಿನಿಧಿಯಾಗಿರುತ್ತಿದ್ದರು. ಪ್ರತ್ಯೇಕ ಮತಕ್ಷೇತ್ರಕ್ಕೆ ಬದಲಾಗಿ ಕೆಲವು ಕ್ಷೇತ್ರಗಳು ಆಸ್ಪಶೃರಿಗಾಗಿ ನಿಮ್ಮ ವರ್ಗಗಳಿಗೆ ಕಾಡಿರಿಸಲ್ಪಟ್ಟವು.
ಬ್ರಿಟಿಷ್ ಸರ್ಕಾರವು ಕೇಂದ್ರದಲ್ಲಿ ಒಕ್ಕೂಟ ಸ್ವರೂಪದ ಸರ್ಕಾರ ರಾಜ್ಯಗಳಲ್ಲಿ ಪ್ರಾಂತೀಯ ಸರ್ಕಾರವನ್ನು ರಚಿಸಲು ಸೂಚಿಸಿತು. ಈ ಹಿನ್ನೆಲೆಯಲ್ಲಿ ಮೂರನೆಯ ದುಂಡು ಮೇಜಿನ ಪರಿಷತ್ತಿನ ಸಮಾವೇಶವನ್ನು 932ರಲ್ಲಿ ಕರೆಯಿತು. ಸರ್ಕಾರವು ಪ್ರಸ್ತಾಪಿಸಿದ ವ್ಯವಸ್ಥೆಯನ್ನು ಧಿಕ್ಕರಿಸಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲಿಲ್ಲ. ದುಂಡು ಮೇಜಿನ ಪರಿಷತ್ತುಗಳ ಪರಿಣಾಮವಾಗಿ ಬ್ರಿಟಿಷ್ ಸರ್ಕಾರವು 1935ರ ಭಾರತ ಸರ್ಕಾರ ಶಾಸನವನ್ನು ಜಾರಿಗೊಳಿಸಿತು. ಈ ಶಾಸನವು ಭಾರತ ಒಕ್ಕೂಟ ರಚನೆ ಮತ್ತು ಪ್ರಾಂತೀಯ ಸ್ವಾಯತ್ತತೆಯ ಅವಕಾಶಗಳನ್ನು ಕಲ್ಪಿಸಿತ್ತು. ಭಾರತೀಯರಿಗೆ ರಾಜಕೀಯ ಹಕ್ಕುಗಳು ದೊರೆತವು. ಇದರಿಂದಾಗಿ ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್ ಚುನಾವಣೆಯಲ್ಲಿ ಸ್ಪರ್ಧಿಸಿದವು ಕಾಂಗ್ರೆಸ್ ಬಹುಮತ ಪಡೆದು ಒಕ್ಕೂಟ ಸರ್ಕಾರವನ್ನು ರಚಿಸಿತು. ಈ ವೇಳೆಗೆ ಎರಡನೆಯ ಮಹಾಯುದ್ಧ ಆರಂಭಗೊಂಡಾಗ ಯುರೋಪಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾರತದ ವೈಸ್‌ರಾಂ ಏಕಪಕ್ಷೀಯವಾಗಿ ಭಾರತದ ಪರವಾಗಿ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದನು. ಇದನ್ನು ಕಾಂಗ್ರೆಸ್ ಪ್ರತಿಘು ಮಂತ್ರಿ ಮಂಡಲದಿಂದ ಹೊರಬಂದಿತು, ವೈಸರಾಯನ ತೀರ್ಮಾನವನ್ನು ವಿರೋಧಿಸಿ ಗಾಂಧೀಜಿ ವೈಯಕ್ತಿಕ ಸತ್ಯಾಗ್ರಹ ಸಾರಿದರು. ಆಗ ಭಾರತೀಯರನ್ನು ತೃಪ್ತಿಪಡಿಸಲು ಸ್ಟಾಫರ್ಡ್ ಕಿಪ್ ಅವರನ್ನು ಸಂಧಾನಕ್ಕಾಗಿ ಕಳುಹಿಸಲಾಯಿತು.
ಕ್ವಿಟ್ ಇಂಡಿಯಾ ಚಳವಳಿ (1942):
ಬ್ರಿಟಿಷ್ ಸರ್ಕಾರವು ಭಾರತೀಯ ನಾಯಕರೊಂದಿಗೆ ಸಂಧಾನಕ್ಕಾಗಿ ಕಳುಹಿಸಿದ್ದ ಸ್ಟಾಫರ್ಡ್ ಕ್ಲಿಪ್ ಆಯೋಗವು 1942ರಲ್ಲಿ ಕೆಲವು ಸಲಹೆಗಳನ್ನು ಭಾರತೀಯರ ಮುಂದಿಟ್ಟಿತು. ಈ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡುವುದು, ಅದಕ್ಕಾಗಿ ಸಂವಿಧಾನ ರಚಿಸಲು ಸಭೆ ಕರೆಯುವುದು. ಹೊಸ ಸಂವಿಧಾನದಲ್ಲಿ ಭಾರತ ವಕ್ಕೂಟವನ್ನು ಸೇರುವ ಅಥವಾ ಬೇಡುವ ಸ್ವಾತಂತ್ರ್ಯ ವನ್ನು ಸಂಬಂಧಿಸಿದ ರಾಜ್ಯಗಳಿಗೆ ಬಿಡುವಂತಹ ಸಲಹೆಗಳನ್ನು ನೀಡಿತು. ಸಲಹೆಗಳನ್ನು ಕಾಂಗ್ರೆಸ್ ಒಪ್ಪದ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿತು. 'ಬಿಟಿಷರೇ ಭಾರತ ಬಿಟ್ಟು ತೊಲಗಿ' ಎನ್ನುವುದು ಕ್ವಿಟ್ ಇಂಡಿಯಾ ಚಳವಳಿಯ ಆಶಯವಾಗಿತ್ತು. ಗಾಂಧೀಜಿಯವರು ದೇಶಬಾಂಧವರಿಗೆ ಮಾಡು ಇಲ್ಲವೇ ಮಡಿ' ಎನ್ನುವ ಕರೆ ನೀಡಿದರು. ಈ ಕರೆ ನೀಡಿದ ಹಿನ್ನೆಲೆಯಲ್ಲಿ ಗಾಂಧೀಜಿ, ನೆಹರು, ರಾಜೇಂದ್ರಪ್ರಸಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ಆಚಾರ್ಯ ಕೃಪರ್ಲಾ, ಕಸ್ತೂರಬಾ ಗಾಂಧಿ ಮೊದಲಾದ ನಾಯಕರನ್ನು ಬ್ರಿಟಿಷ್ ಸರ್ಕಾರವು ಬಂದಿಸಿ ಜೈಲಿನಲ್ಲಿಟ್ಟಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬತೇಕ ಈರುರದು. ಬಂಧನದಲ್ಲಿದ್ದ ಕಾರಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸೇತರ ಸಂಘಟನೆಗಳು ಮುಖ್ಯ ಭೂಮಿಕೆಯಲ್ಲಿದ್ದವು. ಹೊಸನಾಯಕರುಗಳ ಉದಯಕ್ಕೆ ಈ ಹೋರಾಟ ಎಡೆ ಮಾಡಿಕೊಟ್ಟಿತು. ಈ ಸಂದರ್ಭದಲ್ಲಿ ಚಳವಳಿಯ ನೇತೃತ್ವವನ್ನು ಜಯಕಾಶ್ ನಾರಾಯಣರವರು ವಹಿಸಿಕೊಂಡರು. ಇವರು ಕಾಂಗ್ರೆಸ್‌ನ ಸಮಾಜವಾದಿ ಬಳಿದ ಪ್ರಮುಖ ನಾಯಕರಾಗಿದ್ದರು, ಇವರು ತಮ್ಮ ಬೆಂಬಲಿಗರೊಡನೆ ದೇಶದ ವಿವಿಧೆಡೆಯಲ್ಲಿ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ತೊಡಗಿದರು. ಸಮಾಜವಾದಿಗಳು 'ದಿ ಫೀಡಂ ಸ್ವಗಲ್ ಪಂಟ್' ಎಂಬ ದಾಖಲೆ (Document) ಮೂಲಕ ತಮ್ಮ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತಂದರು. ಈ ಮೂಲಕ ಅವರು ಕಾರ್ಮಿಕರಿಗೆ ತರಬೇತಿಯನ್ನು ಜನತೆಗೆ ಹೋರಾಟದಲ್ಲಿ ಭಾಗವಹಿಸಲು ಕರೆಯನ್ನಿತ್ತರು, ಹಣವನ್ನು ಕ್ರೋಡಿಕರಿಸಿದರು. ಈ ಮೂಲಕವಾಗಿ ದಿಕ್ಕೆಟ್ಟ ಹೋರಾಟಕ್ಕೆ ದಿಕ್ಕು ಕೊಟ್ಟವರು ಇವರೇ. ಕುತೂಹಲದ ಸಂಗತಿಯೆಂದರೆ ಇದೇ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವು ಭಾರತದ ಗಡಿಯ ಹೊರಗೂ ಪ್ರಾರಂಭವಾಯಿತು. ಈ ದಿಸೆಯಲ್ಲಿ ಸುಭಾಷ್‌ಚಂದ್ರ ಬೋಸ್‌ರವರ ಪ್ರಯತ್ನ ಆದ್ವಿತೀಯವಾದದ್ದು 1937ರ ಚುನಾವಣೆಗಳ ನಂತರ ಸರ್ಕಾರದ ಪಾಲ್ಗೊಳ್ಳುವಿಕೆಯಲ್ಲಿ ಮುಸ್ಲಿಂ ಲೀಗನ್ನು ಸರ್ಕಾರ ರಚನೆಯಿಂದ ಕೈಬಿಡಲಾಗಿತ್ತು. 1979ರಲ್ಲಿ ಭಾರತ ಸರ್ಕಾರವು ಏಕಮುಖವಾಗಿ ಎರಡನೆಯ ಮಹಾಯುದ್ದಕ್ಕೆ ಭಾರತವನ್ನು ಭಾಗಿ ಮಾಡಿದ ಸಂದರ್ಭದಲ್ಲಿ ಮಂತ್ರಿಮಂಡಲದಲ್ಲಿದ್ದ ಕಾಂಗ್ರೆಸಿಗರೆಲ್ಲರು ಹೊರಬಂದಾಗ ಮುಸ್ಲಿಂ ಲೀಗ್ 'ವಿಮುಕ್ತಿ ದಿವಸ'ವನ್ನು ಆಚರಿಸಿತು ಹೀಗಾಗಿ ಮುಸ್ಲಿಂ ಲೀಗ್ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಭಾಗವಹಿಸಲಿಲ್ಲ. ಅದು ಭಾರತದ ವಿಭಜನೆಯ ಪ್ರಸ್ತಾಪವನ್ನು ಮುಂದಿಟ್ಟಿತು.
ರೈತರು ಮತ್ತು ಕಾರ್ಮಿಕರ ಪ್ರತಿಭಟನೆ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗಳು ಕೂಡ ಪ್ರಮುಖವಾಗಿದೆ. ಈ ಸಂಘಟನೆಗಳಲ್ಲಿ ಕೆಲವು ರಾಷ್ಟ್ರೀಯ ಕಾಂಗ್ರೆಸ್‌ನಿಂದ ಪ್ರಭಾವಿತವಾಗಿದ್ದರೆ, ಇನ್ನು ಕೆಲವು ಸಂಘಟನೆಗಳು ಮಾರ್ಕ್‌ವಾದದಿಂದ ಪ್ರಭಾವಿತವಾಗಿದ್ದವು, ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಜಮೀನಾರರು ಮತ್ತು ಯುರೋಪಿಯನ್ ಪ್ಲಾಂಟರ್‌ಗಳ ವಿರುದ್ಧ ರೈತರು ಹಲವಾರು ಕಡೆ ದಂಗೆ ನಡೆಸಿದರು. ಚಂಪಾರಣ್ಯ ಜಿಲ್ಲೆಯಲ್ಲಿ ನೀಲಿ ಬೆಳೆಯುವುದನ್ನು ವಿರೋಧಿಸಿದರು. ಭೂಕಂದಾಯದ ವಿರುದ್ಧ ಹರತಾಳ ನಡೆಸಿದರು. ಗಾಂಧೀಜಿಯವರು ಸತ್ಯಾಗ್ರಹದ ಮೂಲಕ ಬ್ರಿಟಿಷ್ ಅಧಿಕಾರಿಗಳ ಮನವೊಲಿಸಿ ತೆರಿಗೆ ರದ್ದುಗೊಳಿಸಿದರು.
ರಾಷ್ಟ್ರೀಯ ಹೋರಾಟದ ಭಾಗವಾಗಿ ರೈತರನ್ನು ಸಂಘಟಿಸುವ ಪ್ರಯತ್ನವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಾಡಿತು. ಚಂಪಾರಣ್ಯ, ಖೇಡಾ, ಮೊದಲಾದ ಪ್ರದೇಶಗಳ ರೈತರ ಕಾರ್ಯ ಚಟುವಟಿಕೆಗಳಲ್ಲಿ ಗಾಂಧೀಜಿಯವರ ಪ್ರಭಾವವಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಭಾವದಿಂದ ತೇಭಾಗ, ಮಲಬಾರ್ ಮೊದಲಾದೆಡೆ ಶೋಷಣೆಗೊಳಗಾಗಿದ್ದ ರೈತರು ತೀವ್ರವಾಗಿ ಜಮೀನ್ದಾರರು ಹಾಗೂ ಬ್ರಿಟಿಷರ ವಿರುದ್ಧ ಬಂಡೆದ್ದರು. ಅಸಹಕಾರ ಆಂದೋಲನ, ಕರ ನಿರಾಕರಣೆ, ಕ್ವಿಟ್ ಇಂಡಿಯಾ ಚಳವಳಿಗಳಲ್ಲಿ ರೈತರ ಸಮಸ್ಯೆಗಳು ಬೆರೆತವು, ಹಲವಾರು ಹೋರಾಟಗಳು ಎಡಪಂಥಿಯ ವಿಚಾರಧಾರಗಳಿಂದ ರಚನೆಗೊಂಡ ಕಿಸಾನ್ ಸಭಾದಡಿಯಲ್ಲಿ ಸಂಘಟಿತವಾದವು, ಹೋರಾಟಗಳು ಕೆಲವೊಮ್ಮೆ ಕಾಂಗ್ರೆಸ್‌ನೊಂದಿಗೆ ಮತ್ತು ಕೆಲವೊಮ್ಮೆ ಕಾಂಗ್ರೆಸ್ ವಿರುದ್ಧವಾದ ನಿಲುವನ್ನು ಹೊಂದುತ್ತಿದ್ದವು, ತೆಲಂಗಾಣದ ರೈತ ಹೋರಾಟವು ಜಮಿನ್ದಾರರು ಹಾಗೂ ನಿಜಾಮನ ರಜಾಕರ ವಿರುದ್ಧ ಪ್ರತಿಭಟಿಸಿತು. ಬಂಗಾಳದ ರೈತರು ಜಮೀನ್ದಾರರ ಶೋಷಣೆ ವಿರುದ್ಧ ದಂಗೆ ಎದ್ದರು. ಮಹಾರಾಷ್ಟ್ರದಲ್ಲಿ ರೈತರು ಕಡಿಮೆ ಕೂಲಿ ವಿರುದ್ಧ ಚಳವಳಿ ನಡೆಸಿದರು.
ಕಾರ್ಮಿಕ ಬಂಡಾಯ
ಕಾರ್ಮಿಕರ ಹೋರಾಟಪ್ಪ 1827ರಲ್ಲಿ ಕಲ್ಕತ್ತದಲ್ಲಿ ಆರಂಭವಾಯಿತು. ಸು, ಬರಣಿ ಕಾರ್ಮಿಕರು, ರೈಲ್ವೆ ಕೂಲಿಗಳು ತಮ್ಮ ಬೇಡಿಕೆಗಳಿಗಾಗಿ ಸಂಘಟಕರಾಗತೊಡಗಿದರು. ರೈಲ್ವೆ ಕೂಲಿಗಳು ನಿಲ್ದಾಣದಲ್ಲಿ ಮುಷ್ಕರ ನಡೆಸಿ ಹೆಚ್ಚಿನ ಲಿಗಾಗಿ ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು ಕಲ್ಕತ್ರದಲ್ಲಿ ಪ್ರಿಂಟರ್ ಯೂನಿಯನ್ ನವರು ಮತ್ತು ಬಾಂಬೆ ಬಟ್ಟೆ ಗಿರಣಿಯ ಕಾರ್ಮಿಕರು ರಾಷ್ಟ್ರೀಯ ಜಾಗೃತಿ ಉಂಟು ಮಾಡಿದರು. ಮದಾಸ್‌ನಲ್ಲಿ ಲೇಬರ್ ಯೂನಿಯನ್ ಸ್ಥಾಪನೆಗೊಂಡಿತು. ನಂತರದಲ್ಲಿ ಕಾರ್ಮಿಕ ಸಂಘಟನೆಗಳು ಸ್ಥಾಪನೆಗೊಂಡವು, ಕಾಂಗ್ರೆಸ್, ಕಾರ್ಮಿಕ ಸಂಘಟನೆಗಳ ಇಂತಹ ಚಳವಳಿಗೆ ಬೆಂಬಲ ನೀಡಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಕಾರ್ಮಿಕರ ಪಾತ್ರವು ಅನನ್ಯವಾದದ್ದು.
ಬುಡಕಟ್ಟು ಬಂಡಾಯಗಳು
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಜಾರಿಗೆ ಕಂದಾಯ ಮತ್ತು ಅರಣ್ಯ ನೀತಿಗಳು ಬುಡಕಟ್ಟು ದಂಗೆಗಳಿಗೆ ನೇರವಾಗಿ ಪ್ರೇರಣೆಯಾದವು. ಬಂಡಾಯಗಳಲ್ಲಿ ಸಂತಾಲರ ದಂಗ, ಕೋಲರ ದಂಗೆ ಮತ್ತು ಮುಂಡ ಚಳವಳಿ ಪ್ರಮುಖವಾಗಿವೆ. ಕರ್ನಾಟಕದಲ್ಲಿ ಹಲಗಲಿಯ ಬೇಡರ ಬಂಡಾಯವು ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ.
ಸಂತಾಲ ಬುಡಕಟ್ಟು ದಂಗೆಯನ್ನು ಭಾರತದ ಆದ್ಯ ಹೋರಾಟ ಎಂದು ಗುರುತಿಸಲಾಗಿದೆ. ಈ ಬುಡಕಟ್ಟು ಜನರನ್ನು ಬಂಗಾರೆ, ಮತ್ತು ಒರಿಸ್ಸಾದ ಗುಡ್ಡಗಾಡು ಪ್ರದೇಶಗಳಲ್ಲಿ ಗುರುತಿಸಬಹುದು, ಬ್ರಿಟಿಷರು ಜಾರಿಗೆ ತಂದ ಖಾಯಂ ಜಮೀನ್ಸಾರಿ ಪದ್ಧತಿಯಿಂದ ಈ ಬುಡಕಟ್ಟು ಜನರು ನಿರ್ಗತಿಕರಾದರು. ತಾವು ಶ್ರಮಪಟ್ಟು ಕೃಷಿಯೋಗ್ಯವನ್ನಾಗಿ ಪರಿವರ್ತಿಸಿದ ಭೂಮಿ ಬುಡಕಟ್ಟು ಜನರಿಂದ ಜಮೀನ್ದಾರರ ಕೈಸೇರಿತು, ಬಂಗಾಳಿ ಜಮೀನ್ದಾರರು, ಲೇವಾದೇವಿಗಾರರು ಮತ್ತು ಕಂಪನಿ ಸರ್ಕಾರವು ಸಂತಾಲರ ನೇರ ಶೋಷಣೆಗೆ ಕಾರಣರಾದರು. ಸಂತಾಲರ ಶಾಂತಿಪ್ರಿಯತೆ ಮತ್ತು ಸಭ್ಯತೆಯನ್ನು ಕಂಪು ಸರ್ಕಾರವು ಶೋಷಣೆಗೆ ಉಪಯೋಗಿಸಿಕೊಂಡಿತು. ಇದರಿಂದ ಅಸಮಾಧಾನಗೊಂಡ ಸಂತಾಲರು ರಹಸ್ಯ ಸಭೆಗಳನ್ನು ನಡೆಸಿ ಜಮೀನ್ದಾರರು ಮತ್ತು ಲೇವಾದೇವಿಗಾರರನ್ನು ಲೂಟಿಪಾಡಲು ನಿರ್ಧರಿಸಿದರು. ಬ೦ಗೆಂದು ಬಾರಹತ್, ಬಾಗಕಪುರ್ ಮತ್ತು ರಾಜಮಹಲ್‌ಗಳಲ್ಲಿ ತೀವ್ರವಾಯಿತು. ಪರಿಣಾಮವಾಗಿ ಬುಡಕಟ್ಟು ಜನರು ಅವರ ಶತ್ರುಗಳನ್ನು ಹತ್ಯೆ ಮಾಡಿದರು. ಇದರಿಂದಾಗಿ ಅನೇಕ ಜಮೀನ್ದಾರರು ಮತ್ತು ಲೇವಾದೇವಿದಾರರು ಪಲಾಯನ ಮಾಡಿದರು. ಸಂತಾಲರ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರು ಸೈನ್ಯವನ್ನು ಬಳಸಿಕೊಂಡರು, ಸಂತಾಲಲ ದಂಗೆಯು ಕೊನೆಗೊಂಡರೂ ಆದರ ಸ್ಫೂರ್ತಿಯು ಮುಂದಿನ ಅನೇಕ ಹೋರಾಟಗಳಿಗೆ ಪ್ರೇರಣೆಯಾಯಿತು. ಇದೇ ಬಗೆಯಲ್ಲಿ ಕೋಲರು ಮತ್ತು ಮುಂಡರು ಬ್ರಿಟಿಷರು ಮತ್ತು ಜಮೀರರ ವಿರುದ್ಧ ಹೋರಾಟಗಳನ್ನು ಮಾಡಿದರು.
ಕಾಮೆಂಟ್ ಪೋಸ್ಟ್ ಮಾಡಿ