ರಾಷ್ಟ್ರೀಯತೆಯ ಉದಯ :
ಸ್ವಾತಂತ್ರ್ಯ ಹೋರಾಟದ ಭಾರತದ ಚರಿತ್ರೆಯಲ್ಲಿ ಅತ್ಯಂತ ಮಹತ್ವಜೂರ್ಣ ಮತ್ತು ಚಲನಶೀಲ ಅಧ್ಯಾಯ ರಾಷ್ಟ್ರೀಯತೆ ಎಂಬ ಪರಿಕಲ್ಪನೆ 9ನೆಯ ಶತಮಾನದ ಕೊನೆಯ ಭಾಗದಲ್ಲಿ ತೀವ್ರವಾಗಿ ಬೆಳೆಯತೊಡಗಿತು. ವಿದೇಶಿಯರ ವಿರುದ್ಧ ಹೋರಾಡುವ ಪ್ರಯತ್ನಗಳನ್ನು ರಾಜ ಪ್ರಭುತ್ವಗಳು ಅನೇಕ ಭಾರಿ ಕಾಣುತ್ತೇವೆ. ಆದರೆ ಆದಕ್ಕಿದ್ದ ಕಾರಣಗಳು ಅವರ ವಾದ ಆಡಿದ್ದರು. ಈ ಮೊದಲು -ಸ್ವಹಿತಾಶಕ್ತಿಗಳು ಮಾತ್ರ ವಿದೇಶಿ ಸಾಮ್ರಾಜ್ಯ ಶಕ್ತಿಗಳ ವಿರುದ್ಧ ಹೋರಾಟ ಮಾಡಿದ ಕಾರಣದಿಂದ ಪ್ರಯತ್ನಗಳನ್ನು ರಾಷ್ಟ್ರೀಯ ಹೋರಾಟದ ಆರಂಭಿಕ ಕುರುಹುಗಳು ಎನ್ನಬಹುದು.
19ನೇ ಶತಮಾನದ ಉತ್ತರಾರ್ಧದಲ್ಲಿ ಸಾರಿಗೆ ಮತ್ತು ಇಂಗ್ಲಿಷ್ ಶಿಕ್ಷಣದ ವಿಸ್ತರಣೆ, ಪತ್ರಿಕೋದ್ಯಮ, ಸಾಂಸ್ಕೃತಿಕ ಸಂಘಟನೆಗಳ ಹುಟ್ಟು ಮುಂತಾದ ಬೆಳವಣಿಗೆಗಳನ್ನು ಕಾಣುತ್ತೇವೆ. ಆದರೆ ಬರಗಾಲಗಳು ಮತ್ತು ಬ್ರಿಟಿಷ್ ಆರ್ಥಿಕ ನೀತಿಗಳು ಸೃಷ್ಟಿಸಿದ ಬಿಕ್ಕಟ್ಟುಗಳಿಂದ ಜನರು ನಲುಗಿದರು. ಈ ಪರಿಣಾಮಗಳಿಂದ ಬ್ರಿಟಿಷ್ ವಿರೋಧಿ ಆಕ್ರೋಶವನ್ನು ಭಾರತೀಯರು ವ್ಯಕ್ತಪಡಿಸಲು ಪ್ರಾರಂಭಿಸಿದರು. ಈ ಕಾಲಘಟ್ಟದಲ್ಲಿ ನಡೆದ ರೈತ ಮತ್ತು ಬುಡಕಟ್ಟು ಹೋರಾಟಗಳು ಇದಕ್ಕೆ ಸಾಕ್ಷಿ ವಿವಿಧ ಬಗೆಯ ಸಂಕಷ್ಟಗಳಿಗೆ ಬಳಗಾದ – ಭಾರತೀಯರು 1857ರ ಸಂದರ್ಭದಲ್ಲಿ ಬಿಷರ ವಿರುದ್ಧ ನಿರ್ಕಾಯಕ ಲತೆಯಲ್ಲೇ ತಮ್ಮ ಪ್ರತಿರೋಧವನ್ನು ತೋರಿ ಪ್ರಥಮ ಭಾರತೀಯ ಸಂಗ್ರಾಮಕ್ಕೆ ಕಾರಣರಾದರು. ಇದರ ಪರಿಣಾಮ 1858ರಲ್ಲಿ ಬ್ರಿಟನ್ನಿನ ಸರ್ಕಾರವು ಘೋಷಣೆಯೊಂದನ್ನು ಹೊರಡಿಸಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಕೊನೆಗೊಳಸಿ, ನೇರವಾಗಿ ಬ್ರಿಟಿಷ್ ಸರ್ಕಾರದ ಆಡಳಿತವನ್ನು ಬ್ರಿಟನ್ನಿನ ರಾಣಿಯ ಹೆಸರಿನಲ್ಲಿ ಜಾರಿಗೊಳಿಸಿತು. ಭಾರತೀಯರು ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗುವ ಕಾನೂನುಗಳನ್ನು 1861ರ ಕಾಯ್ದೆಯ ಮೂಲಕ ಆರಂಭಿಸಿದರು. ಇದೆಲ್ಲದರ ಪರಿಣಾಮವಾಗಿ ಇಂಗ್ಲಿಷನ್ನು ಕಲಿತ ಹೊಸ ವಿದ್ಯಾವಂತ ವರ್ಗ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸುವ ಮತ್ತು ಜನರ ಜೊತೆ ಹಂಚಿಕೊಳ್ಳುವ ಪ್ರಯತ್ನವನ್ನು ಮಾಡಿದ್ದರಿಂದ ರಾಷ್ಟ್ರೀಯತೆ ಒಂದು ಆಶಯವಾಗಿ ಸ್ಪಷ್ಟ ರೂಪ ಪಡೆಯಿತು. ಇದರ ಮುಂದುವರಿದ ಸಾಂಸ್ಥಿಕ ರೂಪವೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಭಾರತವು 1857ರ ಪ್ರಥಮ ಸ್ವಾತಂತ್ರ ಸಂಗ್ರಾಮರ ಘಟನೆಯ ನಂತರ ರಾಜಕೀಯ ಪರ್ವವನ್ನು ಕಾಣಲಾರಂಭಿಸಿತು. ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿದ್ದ ಅನೇಕ ಹೊಸ ಸಂಘಟನೆಗಳು ವಿದ್ಯಾವಂಶ ಭಾರತೀಯರ ನೇತೃತ್ವದಲ್ಲಿ ಪ್ರಾರಂಭವಾದವು. 'ದ ಹಿಂದೂ ಮಳ' 'ದ ಈಸ್ಟ್ ಇಂಡಿಯನ್ ಅಸೋಸಿಯೇಷನ್' 'ಪೂನಾ ಸಾರ್ವಜನಿಕ ಸಭಾ' ಮತ್ತು 'ದ ಇಂಡಿಯನ್ ಅಸೋಸಿಯೇಷನ್ ಮುಂತಾದವು ಪ್ರಮುಖವಾಗಿದ್ದು, ಪತ್ರಿಕೆಗಳು ಬ್ರಿಟಿಷ್ ಸರಕಾರದ ಧೋರಣೆಗಳನ್ನು ವಿರೋಧಿಸತೊಡಗಿದವು. ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ವರ್ಣಾಕ್ಯೂಟರ್ ಪ್ರೆಸ್ ಕಾಯ್ದೆಯನ್ನು ಬ್ರಿಟಿಷ್ ಸರಕಾರ ಲಾರ್ಡ ಬಿಟ್ಟಿನ್ನರ ಕಾಲದಲ್ಲಿ ಜಾರಿಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸಿನಂತಹ ರಾಷ್ಟ್ರೀಯ ಸಂಘಟನೆಯ ಹುಟ್ಟು ಅನಿವಾರ್ಯವಾಯಿತು. ಭಾರತದ ರಾಜಕೀಯ ದಿಕ್ಕನ್ನು ಬದಲಿಸಿದ 'ಭಾರತ ರಾಷ್ಟ್ರೀಯ ಕಾಂಗ್ರೆಸ್' ಡಿಸೆಂಬರ್ 1885ರಲ್ಲಿ ಜಾಂಬೆ ನಗರದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಹುಟ್ಟಿಕೊಂಡಿತು. ಅದರ ಮೊದಲ ಅಧ್ಯಕ್ಷರು ಡಬ್ಲ್ಯುಸಿ, ಬ್ಯಾನರ್ಜಿ, ಈ ಸಂಘಟನೆಯ ಹುಟ್ಟಿನ ಹಿನ್ನೆಲೆಯಲ್ಲಿ ಅವಿರತ ಪ್ರಯತ್ನ ನಡೆಸಿದವರು ನಿವೃತ್ತ ಬ್ರಿಟಿಷ್ ನಾಗರಿಕ ಸೇವಾಧಿಕಾರಿ ಎ.ಓ.ಹ್ಮಂ ಅವರು ಬಾಂಬೆ, ಮದರಾಸು ಮತ್ತು ಕಲ್ಕತ್ತಾ ಕೇಂದ್ರಗಳಲ್ಲಿದ್ದ ರಾಜಕೀಯ ನಾಯಕರನ್ನು ಭೇಟಿಮಾಡಿ, ಅವರುಗಳ ಜೊತೆಗೆ ಸಾರ್ವಜನಿಕ ಹಿತಾಸಕ್ತಿಯುಳ್ಳ ವಿಷಯಗಳನ್ನು ಚರ್ಚಿಸಿದರು. ಇದರ ಫಲವೆ: ಕಾಂಗ್ರೆಸ್ ಸಂಸ್ಥೆಯ ಸ್ಥಾಪನೆ, ಆರಂಭಿಕ ಸಭೆಯಲ್ಲಿಯೇ ಕಾಂಗ್ರೆಸ್ ತನ್ನ ಪ್ರಮುಖ ಉದ್ದೇಶ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸಿ ಬೆಳೆಸುವುದು ಎಂದು ಸಾರಿತು, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಹುಮುಖ ಧಾರೆಗಳನ್ನು ಹೊಂದಿದ್ದ ಭಾರತೀಯರಲ್ಲಿ ಅವುಗಳಲ್ಲಿ ಐಕ್ಯತೆಯನ್ನು ಸಾಧಿಸಲು ಹಂತಹಂತವಾಗಿ ಪ್ರಯತ್ನಿಸಿತು. ಆ ಕಾಲಘಟ್ಟದ ರಾಷ್ಟ್ರೀಯ ನಾಯಕರಿಗೂ ಈ ಬದ್ಧತೆ ಇತ್ತು.
ದೇಶೀ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸಿ ಆ ಮೂಲಕ ರಾಜಕೀಯ ಸಮಸ್ಯೆಗಳ ಚರ್ಚೆ ಆರಂಭಿಸಿತು. ಇದರಿರವಾಗಿ ರಾಜಕೀಯ ಸಮಸ್ಯೆಗಳು ಮತ್ತು ವಿಚಾರಗಳು ಜನರ ಮನಮುಟ್ಟಿದವು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಲವರ್ಧನೆಯನ್ನು ಗಮನಿಸಿದ ಬ್ರಿಟಿಷರು ತಮ್ಮ ಒಡೆದು ಆಳುವ ನೀತಿಯನ್ನು ಜಾರಿಗೆ ತಂದರು. ಹಿಂದೂ-ಮುಸ್ಲಿಮರನ್ನು ಬೇರ್ಪಡಿಸುವ ರಾಜಕೀಯ ತಂತ್ರಗಾರಿಕೆಯನ್ನು ಜಾರಿಯಲ್ಲಿ ತರುವ ಪ್ರಯತ್ನ ಪ್ರಾರಂಭಿಸಿದರು. ಆದರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಪಟ್ಟಂತೆ ರವಾನಾತ್ಮಕವಾದ ಕಾರ್ಯತಂತ್ರಗಳನ್ನು ರೂಪಿಸಿತು.
19ನೆಯ ಶತಮಾನದ ಕೊನೆಯ ಭಾಗದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ರಾಜಕೀಯ ಭಿನ್ನಮತ ಕಾಣಿಸಿಕೊಂಡಿತು. ಕಾರ್ಯತಂತ್ರ, ನಂಬಿಕೆಗಳು ಸೈದ್ಧಾಂತಿಕತೆ ಮತ್ತು ಹೋರಾಟದ ಮಾದರಿಗಳಿಂದಾಗಿ ಆವರುಗಳನ್ನು ಮಂದಗಾಮಿಗಳು ಮತ್ತು ತೀವ್ರವಾದಿಗಳೆಂದು ಗುರುತಿಸುತ್ತಾರೆ.
ಮಂದಗಾಮಿಗಳು
ಸಾಂಪ್ರದಾಯಕವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾರಂಭದ ಇಪ್ಪತ್ತು ವರ್ಷಗಳನ್ನು ಮಂದಗಾಮಿ ಯುಗ ಎನ್ನುತ್ತಾರೆ. ಮಂದಗಾಮಿಗಳಲ್ಲಿ ಡಬ್ಲ್ಯುಸಿ ಬ್ಯಾನರ್ಜಿ, ಎಂ.ಜಿ. ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಿಳ ಇವರುಗಳನ್ನು ಪ್ರಮುಖವಾಗಿ ಗುರುತಿಸಬಹುದು. ಮಂದಗಾಮಿಗಳು ಬ್ರಿಟಿಷ್ ಆಳ್ವಿಕೆ ಮತ್ತು ನ್ಯಾಯಪರತೆಯಲ್ಲಿ ನಂಬಿಕೆ ಇಟ್ಟಿದ್ದರು. ಸಾಂವಿಧಾನಿಕ ಚೌಕಟ್ಟಿನೊಳಗೆ ಪ್ರಾರ್ಥನೆ ಮತ್ತು ಮನವಿಗಳ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಿದ್ದರು. ಮಂದಗಾಮಿಗಳು ಜನರಲ್ಲಿ ರಾಜಕೀಯ ಎಚ್ಚರವನ್ನು ತರುವ ಪ್ರಯತ್ನ ಮಾಡಿದರು, ಇವರು ಭಾರತೀಯರಿಗೆ ಸಲ್ಲಬೇಕಾದ ನ್ಯಾಯವನ್ನು ಕುರಿತು ಸಭೆಗಳನ್ನು ನಡೆಸಿ, ಚರ್ಚಿಸಿ, ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದರು. ದೇಶದ ಕೈಗಾರಿಕೆಗಳ ಅಭಿವೃದ್ಧಿ, ಸೈನಿಕ ವೆಚ್ಚ ಕಡಿಮೆ ಮಾಡುವುದು, ಉತ್ತಮ ಶಿಕ್ಷಣ ಕೊಡುವುದು, ಬಡತನದ ಬಗ್ಗೆ ಅಧ್ಯಯನ ಮತ್ತು ಪರಿಹಾರ ಕಾರ್ಯಕ್ರಮಗಳನ್ನು ಬ್ರಿಟಿಷ್ ಸರ್ಕಾರ ಕೈಗೊಳ್ಳಬೇಕೆಂದು ಒತ್ತಾಯಿಸುವುದು ಇವೇ ಮೊದಲಾದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಿಂದಾದ ದುಷ್ಪರಿಣಾಮಗಳನ್ನು ಮೊಟ್ಟಮೊದಲನೆಯ ಬಾರಿಗೆ ಮಂದಗಾಮಿಗಳು ಕೂಲಂಕಷವಾಗಿ ಅವಲೋಕಿಸುವ ಪ್ರಯತ್ನ ಮಾಡಿದರು, ಭಾರತದ ಸಂಪತ್ತು ಯಾವ ರೀತಿಯಲ್ಲಿ ಇಂಗ್ಲೆಂಡಿಗೆ ಸೋರಿ ಹೋಗುತ್ತಿದೆ ಎಂಬುದನ್ನು ಅಂಕಿ ಅಂಶಗಳೊಂದಿಗೆ ಅವರು ವಿವರಿಸಿದರು. ಬಾದಾಬಾಯಿ ನವರೋಜಿಯವರು. ಅವರು ಅದನ್ನು ಸಂಪತ್ತಿನ ಸೋರುವಿಕೆ ಸಿದ್ಧಾಂಶ' (Drain Theory) ಎಂದು ಕರೆದರು. ಆಮದನ್ನು ಹೆಚ್ಚಿಸಿ ರಫ್ತನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂದಾಯ ಉಂಟಾಗಿ ದೇಶದ ಸಂಪತ್ತು ಇಂಗ್ಲೆಂಡಿಗೆ ಹರಿಯಲು ಕಾರಣವಾಯಿತೆಂದು ಅವರು ಪ್ರತಿಪಾದಿಸಿದರು, ಬ್ರಿಟಿಷ್ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾದ ಹಿನ್ನೆಲೆಯಲ್ಲಿ ಅಪಾರವಾದ ಸಂಪತ್ತು ಬ್ರಿಟನ್ನಿಗೆ ಪರೋಕ್ಷವಾಗಿ ಹರಿದು ಹೋಗುತ್ತಿತ್ತು ಎಂಬುದನ್ನು ಅವರು ವಿವರವಾಗಿ ವಿಶ್ಲೇಷಿಸಿ, ಜನರ ಮುಂದಿಟ್ಟರು, ದಾದಾಬಾಯಿ ನವರೂಜಿಯವರಂತೆ ಆರ್. ಸಿ. ರತ್ ಆವರೂ ತಮ್ಮ ಕೃತಿಗಳ ಮೂಲಕ ಭಾರತದ ಸಂಪತ್ತನ್ನು ಬ್ರಿಟಿಷರು ಬಂದು ಮಾಡಿದ ರೀತಿಯನ್ನು ಕಾಲವನ್ನು ಉದಾರ ರಾಷ್ಟ್ರವಾದದ (Libreal Nationalisim) ಕಾಲವೆಂದು ಹೇಳಲಾಗಿದೆ. 1885ರಿಂದ 1905ರ ನಡುವಿನ ಕಾಲಘಟ್ಟವನ್ನು ಮಂದಗಾಮಿಗಳ ಯುಗ ಎಂದು ಚರಿತ್ರಕಾರರು ಗುರುತಿಸಿದ್ದಾರೆ. -ಸಿದರು. ಮಂದಗಾಮಿಗಳು.
ತೀವ್ರವಾದಿಗಳು
ಮಂದಗಾಮಿಗಳ ಬ್ರಿಟಿಷರ ಬಗೆಗಿನ ಮೃದುಧೋರಣೆಯಿಂದ ಕಾಂಗ್ರೆಸಿಗರಲ್ಲೇ ಅಸಂತೃಷ್ಟರಾಗಿದ್ದ ಇನ್ನೊಂದು ಗುಂಪು ಇವರನ್ನು 'ರಾಜಕೀಯ ಭಿಕ್ಷುಕರು' ಎಂದು ಕರೆದರು. ಮಂದಗಾಮಿಗಳ ಮೃದುಧೋರಣೆಯನ್ನು ಟಿಕೆ ಮಾಡುತ್ತಾ, ತೀವವಾದ ಬುವುಗಳನ್ನು ಪ್ರತಿಪಾದಿಸುತ್ತಾ ಬಂದ ಬಣವನ್ನು ತೀವವಾದಿಗಳಿಂದ ಗುರುತಿಸಲಾಗಿದೆ. ಅರಬಿಂದೋ ಘೋಷ್, ಬಿಪಿನ್‌ಚಂದ್ರ ಪಾಲ್, ಲಾಲ ಜಪತ ರಾಯ್ ಮತ್ತು ಬಾಲಗಂಗಾಧರ ತಿಲಕ್ ಮುಂತಾದವರು ಈ ಬಣದ ಪ್ರಮುಖರಾಗಿದ್ದರು. ಸಂವಿಧಾನಾತ್ಮಕ ಕಾಯ್ದೆಗಳ ಮೂಲಕ ಭಾರತೀಯರಿಗೆ ಶಾಸನ ಸಭೆಗಳಿಗೆ ನಾಮನಿರ್ದೇಶನ ಮಾಡುವ ಮೂಲಕ ಮಹದುಪಕಾರ ಮಾಡುತ್ತಿದ್ದೇವೆಂಬ ಬ್ರಿಟಿಷರ ಧೋರಣೆಯನ್ನು ಬಲವಾಗಿ ವಿರೋಧಿಸಿದರು.
ಬಂಗಾಳದ ವಿಭಜನೆ : ಬಂಗಾಳವು ತೀವ್ರ ಸ್ವರೂಪದ ಬ್ರಿಟಿಷ್ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರವಾಗಿತ್ತು. ಇದನ್ನು ಹತ್ತಿಕ್ಕಲು ವೈಸ್‌ರಾಯ್ ಲಾರ್ಡ್ ಕರ್ಜನನು ಆಡಳಿತಾತ್ಮಕ ನೆಪವನ್ನು ಮುಂದಿಟ್ಟುಕೊಂಡು ಬಂಗಾಳ ವಿಭಜನೆಯ ಯೋಜನೆಯನ್ನು ರೂಪಿಸಿದರು. ವಾಸ್ತವವಾಗಿ ಬಂಗಾಳ ಪ್ರಾಂತ್ಯವೂ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಸಾಂದ್ರತೆಯನ್ನು ಹೊಂದಿತ್ತು. ಪೂರ್ವ ಭಾಗದಲ್ಲಿ ಮುಸ್ಲಿಮರು ಹಾಗೂ ಪಶ್ಚಿವಾದಲ್ಲಿ ಹಿಂದೂಗಳು ಹೆಚ್ಚಾಗಿದ್ದರು. ಜನಗಣತಿಯ ವರದಿಯಿಂದ ಈ ಅಂಶವನ್ನು ತಿಳಿದ ಬ್ರಿಟಿಷ್ ಸರ್ಕಾರವು ಈ ಪ್ರಾಂತ್ಯದ ಭೌಗೋಳಿಕ ವೈಶಾಲ್ಯಕೆಯನ್ನು ನೆಪವಾಗಿಸಿಕೊಂಡು ಬಂಗಾಳವನ್ನು 1915ರಲ್ಲಿ ವಿಭಜಿಸಿದರು. ಹೀಗೆ ಸಮುದಾಯಗಳ ನಡುವೆ ಕಂದಕವನ್ನುಂಟುಮಾಡಿ ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ಕುಗ್ಗಿಸುವ ಸಂಚನ್ನು ರೂಪಿಸಿದನು.
ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ 1915ರ ಬಂಗಾಳ ವಿಭಜನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸಿತು. ಆದರೆ ಬಂಗಾಳಿ ಭಾಷೆಯು ಮುಸ್ಲಿಂ ಮತ್ತು ಹಿಂದೂ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಾಗಿ ಪರಿಣಮಿಸಿತು, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಸಾಧಿಸಲು ರಕ್ಷಾಬಂಧನ ಕಾರ್ಯಕ್ರಮವನ್ನು ಹಟ್ಟುಕೊಳ್ಳಲಾಗಿತ್ತು. ಬಂಗಾಳದ ವಿಭಜನೆಯ ವಿರುದ್ಧ ದೇಶದಾದ್ಯಂತ ಪ್ರತಿರೋಧಗಳು ವ್ಯಕ್ತವಾದವು, ಪ್ರತಿರೋಧದ ಒಂದು ಬಗೆಯಾಗಿ ಸ್ವದೇಶಿ ಚಳವಳಿಯನ್ನು ಪ್ರಾರಂಭಿಸಲಾಯಿತು. ಇದನ್ನು ದೇಶದಾದ್ಯಂತ ಕೊಂಡೊಯ್ದವರು ತೀವ್ರವಾದಿಗಳು, ವಿದೇಶಿ ವಸ್ತುಗಳು ಮತ್ತು ಅದನ್ನು ಪ್ರೋತ್ಸಾಹಿಸುವ ಸಂಸ್ಥೆಗಳನ್ನು ಬಹಿಷ್ಕರಿಸಲು ಸ್ವದೇಶಿ ಆಂದೋಲನಕ್ಕೆ ಕರೆ ನೀಡಿದರು. ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅವರು ಭಾರತೀಯರನ್ನು ಪ್ರೇರೇಪಿಸಿದರು. ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಂಗಾಳದ ವಿಭಜನೆಯನ್ನು IIರಲ್ಲಿ ಬ್ರಿಟಿಷ್ ಸರ್ಕಾರವು ಹಿಂಪಡೆಯಿತು
ತಿಲಕರು ‘ಸ್ವರಾಜ್ಯವು ನನ್ನ ಜನ್ಮ ಸಿದ್ಧ ಹಕ್ಕು; ಅದನ್ನು ಪಡೆದೇ ತೀರುವೆ’ ಎಂದು ಘೋಷಿಸುವ ಮೂಲಕ ಬಹುಸಂಖ್ಯಾತ ಭಾರತೀಯರ ಮನದಾಳದ ಭಾವನೆಯನ್ನು ಹೊರಹಾಕಿದರು. ಪೂರ್ಣ ಸ್ವರಾಜ್ಯವನ್ನು ಪಡೆಯುವುದು ತೀವ್ರವಾದಿಗಳ ಗುರಿಯಾಗಿತ್ತು. ಇವರು ಸ್ವಾತಂತ್ರ್ಯ ಹೋರಾಟಕ್ಕೆ ಜನಸಾಮಾನ್ಯರನ್ನು ಸಂಘಟಿಸುವ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳ ಮೂಲಕ ಜನರನ್ನು ಸಂಘಟಿಸಿ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಅವರನ್ನು ಸಜ್ಜುಗೊಳಿಸಿದರು. ಗಣೇಶ, ಶಿವಾಜಿ, ದುರ್ಗಾ ಮುಂತಾದ ಉತ್ಸವಗಳ ಮೂಲಕ ಜನರನ್ನು ಹೋರಾಟಕ್ಕೆ ಪ್ರೇರೇಪಿಸಿದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ 1906ರಲ್ಲಿ ಪ್ರತ್ಯೇಕ ಮುಸ್ಲಿಂ ಆಸ್ಮಿತೆಯನ್ನು ರೂಪಿಸಿಕೊಳ್ಳುವ 'ಮುಸ್ಲಿಂ ಲೀಗ್' ಹುಟ್ಟಿಕೊಂಡಿತು. ತಿಲಕರು ಮರಾಠಿ ಭಾಷೆಯಲ್ಲಿ 'ಕೇಸರಿ' ಮತ್ತು ಇಂಗ್ಲಿಷ್ ಭಾಷೆಯಲ್ಲಿ 'ಮರಾಠ' ಪತ್ರಿಕೆಗಳನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಬಳಸಿಕೊಂಡರು. ಈ ಪತ್ರಿಕೆಗಳ ಮೂಲಕ ಜನಸಾಮಾನ್ಯರನ್ನು ರಾಷ್ಟ್ರೀಯ ಹೋರಾಟಕ್ಕೆ ಪ್ರೇರೇಪಿಸಿದರು. ಅವರ ಕ್ರಾಂತಿಕಾರಕ ಬರವಣಿಗೆಗಳು ಜನರನ್ನು ಕೆರಳಿಸಿದವು.ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರವು ತಿಲಕರನ್ನು ಬಂಧಿಸಿತು. ಜೈಲಿನಲ್ಲಿಯ ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ತಿಲಕರು 'ಗೀತಾರಹಸ್ಯ' ಗ್ರಂಥವನ್ನು ರಚಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ತೀವ್ರತೆಯನ್ನು ತಂದುಕೊಟ್ಟರು.
ಕ್ರಾಂತಿಕಾರಿಗಳು
ಕ್ರಾಂತಿಕಾರಿಗಳು ಪೂರ್ಣ ಸ್ವಾತಂತ್ರ್ಯದ ಕನಸನ್ನು ಕಂಡಿದ್ದರು. ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹಿಂಸಾತ್ಮಕ ಮಾರ್ಗದಿಂದ ಮಾತ್ರ ಭಾರತದಿಂದ ಓಡಿಸಬಹುದೆಂದು ಅವರು ಬಲವಾಗಿ ನಂಬಿದ್ದರು. ಇವರುಗಳು ರಹಸ್ಯಸಂಘಗಳ ಮೂಲಕ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿ ಹಣಕಾಸು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯದೊಂದಿಗೆ ಕ್ರಾಂತಿಕಾರಿಗಳಿಗೆ ತರಬೇತಿ ನೀಡಿದರು. ಇಂಗ್ಲೆಂಡಿನಲ್ಲಿ ‘ಲೋಟಸ್ ಮತ್ತು ಡಾಗರ್’ ಎನ್ನುವ ಗುಪ್ತ ಸಂಘಟನೆ ಹುಟ್ಟಿತು ಅದರ ಮೂಲಕ ಅಲ್ಲಿದ್ದ ಅರಬಿಂದೋ ಘೋಷ್ ಮುಂತಾದ ಕ್ರಾಂತಿಕಾರಿಗಳು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಒತ್ತಾಸೆಯನ್ನು ನೀಡಿದರು. ಹಾಗೆಯೇ ಅಮೆರಿಕದಲ್ಲಿ ಪ್ರಾರಂಭವಾದ ‘ಗಧರ್’ ಕಾಂತಿಕಾರಿ ಸಂಘಟನೆಯನ್ನು ಹೆಸರಿಸಬಹುದು, ಹಾಗೆಯೇ ಭಾರತದಲ್ಲಿದ್ದ ‘ಅನುಶೀಲನ ಸಮಿತಿ’ ಮತ್ತು ‘ಅಭಿನವ ಭಾರತ’ ರಹಸ್ಯ ಸಂಘಟನೆಗಳು ಮುಖ್ಯವಾದವು. ಇವರು ತಮ್ಮ ಗುರಿ ಸಾಧನೆಗಾಗಿ ಬಾಂಬುಗಳು ಮತ್ತು ಬಂದೂಕುಗಳ ಪ್ರಯೋಗ ಮಾಡಿದರು. ಸರ್ಕಾರವು ಇವರನ್ನು ಹತ್ತಿಕ್ಕುವ ಸರ್ವ ಪ್ರಯತ್ನವನ್ನು ಮಾಡಿತು, ಕ್ರಾಂತಿಕಾರಿಗಳನ್ನು ಕೊಲೆ ಸಂಚಿನ ಆರೋಪದ ಮೇಲೆ ಬಂಧಿಸಿ, ಅವರುಗಳನ್ನು ತಪ್ಪಿತಸ್ಥರನ್ನಾಗಿ ಗುರುತಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಈ ಸಂದರ್ಭದಲ್ಲಿ ಅನೇಕರನ್ನು ಗಲ್ಲಿಗೇರಿಸಲಾಯಿತು, ವಿ.ಡಿ, ಸಾವರ್ಕರ್, ಅರಬಿಂದೋ ಘೋಷ್, ಅಶ್ವಿನಿಕುಮಾರದತ್ತ, ರಾಜನಾರಾಯಣ ಬೋಸ್, ರಾಜಗುರು, ಚಾಪೆಕರ್ ಸಹೋದರರು, ವಿಷ್ಣು, ಚಂಬೂಕರ್, ರಾಮ್‌ಜಿ ಕೃಷ್ಣವರ್ಮ, ರಾಸ್ ಬಿಹಾರಿ ಬೋಸ್, ಮ್ಯಾಡಮ್ ಕಾಮಾ, ಖುದಿರಾಮ್ ಬೋಸ್, ರಾಮಪ್ರಸಾದ ಬಿಸ್ಮಿಲ್, ಅಶ್ವಮಿಲ್ಲಾಖಾನ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಜತಿನ್ ದಾಸ್-ಇವರುಗಳು ಕ್ರಾಂತಿಕಾರಿಗಳಲ್ಲಿ ಪ್ರಮುಖರಾಗಿದ್ದರು.
ಕಾಂತಿಕಾರಿಗಳು `ಬ್ರಿಟಿಷ್ ಆಡಳಿತ ವ್ಯವಸ್ಥೆಗೆ ಧಕ್ಕೆ ತರುವ ಮೂಲಕ ತಂತವಾಗಿ ಸ್ವಾತಂತ್ರ್ಯವನ್ನು ತಂದು ಕೊಡುವ ಅವರ ತೀವ್ರವಾದ ಕನಸು ನನಸಾಗಲಿಲ್ಲ. ಆದಾಗ್ಯೂ ರಾಷ್ಟ್ರೀಯ ಆಂದೋಲನಕ್ಕೆ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದರು. ತೀವ್ರವಾದಿಗಳಾಗಿದ್ದ ಹಲವು ನಾಯಕರು ಮುಂದಿನ ದಿನಗಳಲ್ಲಿ ಕಂತಿಕಾರಿಗಳಾಗಿ ತಮ್ಮ ಹೋರಾಟವನ್ನು ಮುಂದುವರಿಸಿದರು. ಅವರುಗಳಲ್ಲಿ ಅರಂದೂ ಘೋಷರು ಪ್ರಮುಖರಾದರು. ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳಲ್ಲಿ ಕ್ರಾಂತಿಕಾರಿಗಳ ಹಂತ ಅನೇಕ ಕಾರಣಗಳಿಗಾಗಿ ವಿಶೇಷವಾದದ್ದು.
ಕಾಮೆಂಟ್ ಪೋಸ್ಟ್ ಮಾಡಿ