ಕರ್ಣಾಟಕದಲ್ಲಿ ಬ್ರಿಟೀಷ್ ಆಳ್ವಿಕೆಗೆ ಪ್ರತಿರೋಧಗಳು (ಮುಂದುವರಿದ ಭಾಗ)

 ಕಿತ್ತೂರಿನ ಬಂಡಾಯ – ವೀರರಾಣಿ ಚೆನ್ನಮ್ಮ (1824)

ಬ್ರಿಟಿಷರು ತಮ್ಮ ಆಳ್ವಿಕೆಗೆ ವಿರುದ್ಧವಾಗಿದ್ದ ಹೈದರಾಲಿ, ಟಿಪ್ಪ ಮತ್ತು ಮರಾಠರ ಬಲಿಷ್ಠ ಪ್ರತಿರೋಧಕಗಳನ್ನು ಅಡಗಿಸಿದ ನಂತರ ತಮ್ಮ ಅಧಿಕಾರದ ಕ್ರೋಡೀಕರಣಕ್ಕಾಗಿ ಕೆಲವು ಕಾನೂನುಗಳನ್ನು ಜಾರಿಗೆ ತಂದರು. ಅವುಗಳಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬುದು ಒಂದು, ಈ ಕಾನೂನಿನ ವಿರುದ್ಧ ಸಂಘಟಿಸಲ್ಪಟ್ಟ ಸಶಸ್ತ್ರ ಬಂಡಾಯಗಳಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮನ ಹೋರಾಟ ಖ್ಯಾತಿಯನ್ನು ಗಳಿಸಿದೆ.

ಕಿತ್ತೂರು, ಬೆಳಗಾರಿ ಮತ್ತು ಧಾರವಾಡ ಜಿಲ್ಲೆಗಳ ನಡುವೆ ಇರುವ ಊರು ಕಿತ್ತೂರು ಸಂಸ್ಥಾನದ ಮಲ್ಲಸರ್ಜನ ಮರಣಾನಂತರ ಚೆನ್ನಮ್ಮ ಕಿತ್ತೂರಿನ ಆಡಳಿತ ವ್ಯವಹಾರಗಳಲ್ಲಿ ಹೆಚ್ಚು ಆಸಕ್ತಿ ವಹಿಸಿತೊಡಗಿದಳು. ಆತನ ಮರಣಾನಂತರ ಹಿರಿಯ ಮಗ ಶಿವಲಿಂಗರುದ್ರ ಸರ್ಜ ಕಿತ್ತೂರಿನ ಆಡಳಿತವನ್ನು ನಿರ್ವಹಿಸಲು ಪ್ರಾರಂಭಿಸಿದನು. ಆದರೆ ಆತನ ದೈಹಿಕ ಪರಿಸ್ಥಿತಿಗಳಿಂದಾಗಿ ಚೆನ್ನಮ್ಮ ನಿಜವಾದ ಆಡಳಿತಗಾರ ಜವಾಬ್ದಾರಿಯನ್ನು ನಿರ್ವಹಿಸುವಂತಾಯಿತು. ಶಿವಲಿಂಗರುದ್ರ ಸರ್ಜ ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯವನ್ನು ನೀಡಿದ್ದನು. ಇದರಿಂದಾಗಿ ಬ್ರಿಟಿಷರು ಆ ಸಂಸ್ಥಾನವನ್ನು ವಂಶಪಾರಂಪರ್ಯವಾಗಿ ಆತನಿಗೆ ನೀಡಿದ್ದು ಪ್ರತಿಯಾಗಿ ವಾರ್ಷಿಕ ಕಾಣಿಕೆಯನ್ನು ಪಡೆದುಕೊಳ್ಳುವಂತಾಯಿತು. ಈ ಒಪ್ಪಂದ ಥಾವಸ್ ಮನ್ಸೂನ ಕಾಲದಲ್ಲಿ ಜಾರಿಗೊಳಿಸಲ್ಪಟ್ಟಿತು.

ಶಿವಲಿಂಗರುದ್ಧ ಸರ್ಜನ ಮರಣಾನಂತರ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದು ಚೆನ್ನಮ್ಮ ಆಡಳಿತವನ್ನು ನಿರ್ವಹಿಸಲು ಪ್ರಾರಂಭಿಸಿದಳು. ಥ್ಯಾಕರೆ ಆಗ ಧಾರವಾಡದ ಕಲೆಕ್ಟರ್ ಮತ್ತು ಪೊಲಿಟಿಕಲ್ ಏಜೆಂಟನಾಗಿದ್ದನು. ಅವನು ಬಾಂಬೆಯ ಗವರ್ನರನಿಗೆ ದತ್ತಕದ ಬಗ್ಗೆ ವರದಿಯನ್ನು ಸಲ್ಲಿಸಿ ದತ್ತು ಮಕ್ಕಳಿಗೆ ಹಕ್ಕನ್ನು ನೀಡುವುದನ್ನು ನಿರಾಕರಿಸಿ ಕಿತ್ತೂರಿನ ಆಡಳಿತವನ್ನು ವಶಪಡಿಸಿಕೊಳ್ಳಲು ಯತ್ನಿಸಿದನು. ಕಿತ್ತೂರಿನ ಖಜಾನೆ, ಕೋಟೆ, ಕೊಲಗಳ ಸುಪರ್ದಿಯನ್ನು ತನ್ನ ವಶಕ್ಕೆ ತೆಗೆದುಕೊಂಡನು. ಚೆನ್ನಮ್ಮ ಖಜಾನೆ, ಕೋಟೆ ಕೊತ್ತಲಗಳ ಸುಪರ್ದಿಯನ್ನು ತನ್ನ ವಶಕ್ಕೆ ತೆಗೆದುಕೊಂಡನು. ಚೆನ್ನಮ್ಮ ಥ್ಯಾಕರೆಯ ಈ ಪ್ರಯತ್ನಗಳನ್ನು ವಿಫಲಗೊಳಿಸಲು ಯುದ್ಧವನ್ನು ಅನಿವಾರ್ಯವೆಂದು ಬಗೆದಳು. ಬ್ರಿಟಿಷರೂ ತಮ್ಮ ಸೈನ್ಯವನ್ನು ಸಿದ್ಧಮಾಡಲು ಆರಂಭಿಸಿದರು. ಕಿತ್ತೂರಿನ ಸೈನ್ಯ ಬ್ರಿಟಿಷ್ ಸೈನ್ಯದ ಮೇಲೆ ದಾಳಿಮಾಡಿತು. ಈ ದಾಳಿಯಲ್ಲಿ ಥ್ಯಾಕರೆ ಗುಂಡೇಟಿಗೆ ಬಲಿಯಾದ. ಅನೇಕ ಬ್ರಿಟಿಷ್ ಸೈನಿಕರನ್ನು ಸೆರೆಮನೆಗೆ ದೂಡಲಾಯಿತು. ಕಿತ್ತೂರನ್ನು ವಶಪಡಿಸಿಕೊಳ್ಳಲೇಬೇಕೆಂಬ ದೃಢ ನಿರ್ಧಾರದಿಂದ ಬ್ರಿಟಿಷರು ಮತ್ತಷ್ಟು ಸನ್ನದ್ದರಾದರು. ಲೆಫ್ಟಿನೆಂಟ್ ಕರ್ನಲ್ ಡೀಕ್‌ನ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯ ಕಿತ್ತೂರಿಗೆ ಮುತ್ತಿಗೆ ಹಾಕಿತು. ಸೈನಿಕರು ವೀರಾವೇಶದಿಂದ ಹೋರಾಡಿದರು. ಬ್ರಿಟಿಷರ ಸೈನ್ಯದಿಂದ ತಪ್ಪಿಸಿಕೊಂಡ ಚೆನ್ನಮ್ಮನನ್ನು ಸೆರೆಹಿಡಿಯಲಾಯಿತು. ಕಿತ್ತೂರು ಬ್ರಿಟಿಷರ ವಶವಾಯಿತು. ಚೆನ್ನಮ್ಮ ಮತ್ತು ಮೊದಲಾದವರನ್ನು ಬೈಲಹೊಂಗಲ ಕೋಟೆಯ ಸೆರೆಮನೆಯಲ್ಲಿ ಇರಿಸಲಾಯಿತು. ಚೆನ್ನಮ್ಮ ಮರಣ ಹೊಂದಿದರು. ಇಂದಿಗೂ ಕೂಡಾ ನಾಡಿಗೆ ಅವಳು ಆದರ್ಶಪ್ರಾಯಳಾಗಿದ್ದಾಳೆ.

ಸಂಗೊಳ್ಳಿ ರಾಯಣ್ಣ (1829-30)

ಕಿತ್ತೂರಿನ ಚೆನ್ನಮ್ಮನೊಂದಿಗೆ ಸಂಗೊಳ್ಳಿಯ ರಾಯಣ್ಣನ ಹೆಸರು ಅಜರಾಮರ ಮತ್ತು ಆದರ್ಶಪ್ರಾಯವೆನಿಸಿದೆ. ರಾಯಣ್ಣ ವೀರಯೋಧ. ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದನು. ಈತನ ಮನೆತನದವರು ಪರಂಪರೆಯಿಂದಲೂ ಸೈನಿಕರಾಗಿ ಸೇವೆಯನ್ನು ಸಲ್ಲಿಸಿದ್ದರು. ರಾಯಣ್ಣ ಕಿತ್ತೂರಿನ ಯುದ್ಧದಲ್ಲಿ ಚೆನ್ನಮ್ಮನ ಜೊತೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದನು. ಯುದ್ಧದಲ್ಲಿ ಸೆರೆಯಾಳಾಗಿ ಬಂಧಿಸಲ್ಪಟ್ಟು ತರುವಾಯ ಬಿಡುಗಡೆಗೊಂಡನು.

ಈತನ ಬಗ್ಗೆ ಮೌಖಿಕ ಆಕರಗಳು ಲಭ್ಯವಿವೆ. ಅವನು ಸೈನಿಕರನ್ನು ಸಂಘಟಿಸುತ್ತಾ ಸ್ವಾತಂತ್ರ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡನು. ಭೌಗೋಳಿಕವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಗುಪ್ತ ಸಭೆಗಳನ್ನು ನಡೆಸುವ ಮೂಲಕ ತನ್ನ ಮುಂದಿನ ಯೋಜನೆಗಳನ್ನು ರೂಪಿಸಿಕೊಂಡನು. ತಕ್ಷಣದ ಅವನ ಉದ್ದೇಶಗಳು ಯಾವುದೆಂದರೆ ಬ್ರಿಟಿಷರ ಆಡಳಿತ ಯಂತ್ರದ ಪ್ರಮುಖ ಅಂಗವಾಗಿದ್ದ ತಾಲ್ಲೂಕು ಕಛೇರಿಗಳು ಮತ್ತು ಖಜಾನೆಗಳನ್ನು ಲೂಟಿ ಮಾಡುವುದು. ಮೊದಲು ನಂದಗಡ ಮತ್ತು ಖಾನಾಪುರ ತರುವಾಯ ಸಂಪಗಾವಿ ಆತನ ಕಾರ್ಯಾಚರಣೆಗಳ ಸ್ಥಳಗಳಾದವು. ಆತನ ಸೈನ್ಯ ಐನೂರಷ್ಟಿತ್ತು. ಬ್ರಿಟಿಷರ ಸೈನ್ಯಕ್ಕೆ ಸಹಾಯವನ್ನು ನೀಡುತ್ತಿದ್ದ ಹಳ್ಳಿಗರು ಅವನ ಆಕ್ರೋಶಕ್ಕೆ ತುತ್ತಾದರು. ಬ್ರಿಟಿಷರು ರಾಯಣ್ಣನು ರಾಣಿ ಚೆನ್ನಮ್ಮನ ಕುಮ್ಮಕ್ಕಿನಿಂದ ಸೈನಿಕ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾನೆ ಎಂದು ಭಾವಿಸಿದ್ದರು. ಹೀಗಾಗಿ ಚೆನ್ನಮ್ಮನನ್ನು ಬೈಲಹೊಂಗಲದಿಂದ ಕುಸುಗಲ್ಲಿನ ಸೆರೆಮನೆಗೆ ಸ್ಥಳಾಂತರಿಸಿದರು.

ರಾಯಣ್ಣನನ್ನು ಸೆರೆಹಿಡಿಯಲು ಬ್ರಿಟಿಷರು ಒಂದು ಸಂಚನ್ನು ರೂಪಿಸಿದರು, ಕಿತ್ತೂರಿನ ಚೆನ್ನಮ್ಗಳನ್ನು ವಿರೋಧಿಸುತ್ತಿದ್ದ ದೇಸಾಯಿಗಳನ್ನು ಪ್ರಚೋದಿಸಿದರು. ಅಮಲ್ದಾರನಾಗಿದ್ದ ಕೃಷ್ಣರಾಯ ಎಂಬುವವನು ಈ ಸಂಚಿಗೆ ಕೈಜೋಡಿಸಿದನು. ಸಂಚಿಗೆ ಬಲಿಯಾದ ರಾಯಣ್ಣನನ್ನು ಇಂಗ್ಲಿಷ್ ಸೈನ್ಯ ಬಂಧಿಸಿ ಧಾರವಾಡಕ್ಕೆ ತಂದಿತು. ಆತನ ಬಂಧನಾನಂತರ ಆತನ ಸೈನಿಕರು ಶರಣಾಗತರಾದರು. ಮುಖ್ಯ ಅಪರಾಧ ಎಂದು ಘ, 1831ರಲ್ಲಿ ನಂದಗಡದಲ್ಲಿ ಗಲ್ಲಿಗೇರಿಸಲಾಯಿತು, ಆತನ ಆನೇಕ ಅನರು ಜಗಳನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಯಿತು. ಸಂಗೊಳ್ಳಿ ರಾಯಣ್ಣನ ಜೀವನ ಮತ್ತು ದೇಶಪ್ರೇಮವನ್ನು ಕ ಪ್ರದೇಶದ ಲಾವಣೆಗಳು ಇಂದಿಗೂ ಜೀವಂತವಾಗಿವೆ.


ಅಮರ ಸುಳ್ಯ ಬಂಡಾಯ

ಇದು ಮೂಲತಃ ರೈತ ಬಂಡಾಯ ಇದರ ಹಿನ್ನೆಲೆಯನ್ನು 1835-37ರ ಅವಧಿಯಲ್ಲಿ ಕರಾವಳಿ ಮತ್ತು ಕೊಡಗು ಪ್ರಾಂತ್ಯದಲ್ಲಿ ಕಂಡುಬಂದಿದ್ದ ದಂಗೆಗಳಲ್ಲಿ ಗುರುತಿಸಬಹುದಾಗಿದೆ. ಕೊಡಗಿನಲ್ಲಿ ಆಳ್ವಿಕೆಯನ್ನು ನಡೆಸುತ್ತಿದ್ದ ಹಾಲೇರಿ ರಾಜವಂಶದ ಚಿಕ್ಕವೀರರಾಜೇಂದ್ರನನ್ನು ಬ್ರಿಟಿಷರು 1834ರಲ್ಲಿ ಪದಚ್ಯುತಗೊಳಿಸಿ ಅವನನ್ನು ಬೆಂಗಳೂರಿನ ಮೂಲಕ ವೆಲ್ಲೂರಿಗೆ ತರುವಾಯ ಕಾತಿಗೆ ಸಾಗಿಸಿದರು. ಆತನ ಪದಚ್ಯುತಿ ಕೊಡಗಿನಲ್ಲಿ ರಾಜಕೀಯ ಅಸಮಾಧಾನವನ್ನು ಸೃಷ್ಟಿಸಿತು, ಈ ಜಿಲ್ಲೆಯಲ್ಲಿ ಕೊಡಗಿನಲ್ಲಿ ಸ್ವಾಮಿ ಆಪರಾಂಪರ, ಕಲ್ಯಾಣಸ್ವಾಮಿ ಮತ್ತು ಮುಟ್ಟಬಸಪ್ಪ ಸಶಸ್ತ್ರ ಪಿಂಡಾಯವನ್ನು ಸಂಘಟಿಸಿದರು. ಇವರು ಮೂವರು ತಾವು ಕೊಡಗಿನ ಪದಚ್ಯುತ ರಾಜನ ವಂಶದವರೆಂದು ಹೇಳಿಕೊಂಡರು. ಸ್ವಾಮಿ ಅಪರಾಂಪರ ಬಂಡಾಯದ ಮುಖಂಡನಾದನು. 1835ರಲ್ಲಿ ಆತನನ್ನು ಬ್ರಿಟಿಷರು ಸೆರೆಂದು ಬೆಂಗಳೂರಿಗೆ ರವಾನಿಸಿದರು. ಕಲ್ಯಾಣಸ್ವಾಮಿ 1837ರಲ್ಲಿ ಬಂಧಿಸಲ್ಪಟ್ಟನು, ಆತನನ್ನು ಮೈಸೂರಿನ ಸೆರೆಮನೆಯಲ್ಲಿ ಇಡಲಾಯಿತು,

ಪುಟ್ಟಬಸಪ್ಪ: ಕೆಳಕೊಡಗಿನ ಜನರು – ಕಲ್ಯಾಣ ಸ್ವಾಮಿಯ ನಿಧನಾನಂತರ ಬಂಡಾಯವನ್ನು ಮುಂದುವರೆಸಿದರು. ಕೆನರಾ ಪ್ರಾಂತ್ಯದ ಸುಳ್ಯ, ಬೆಳ್ಳಾರೆ ಮತ್ತು ಪುತ್ತೂರು ಮೊದಲಾದ ಸ್ಥಳಗಳು “ಅಮರ ಸುಳ್ಯ' ಬಂಡಾಯದ ಕೇಂದ್ರ ಸ್ಥಳಗಳಾಗಿದ್ದವು. ಸುಳ್ಯದ ರೈತನೋರ್ವ ಕೊಡಗಿನ ಶನಿವಾರಸಂತೆಯ ಪುಟ್ಟಬಸಪ್ಪ ಎಂಬ ರೈತನನ್ನು ಕಲ್ಯಾಣ ಸ್ವಾಮಿಯನ್ನಾಗಿ ಆರಿಸಿದ್ದು ಇವನು ತನ್ನನ್ನು “ಸ್ವಾಮಿ ಅಪರಾಂಪರ” ಕರೆದುಕೊಂಡಿದ್ದು ಸ್ವಾರಸ್ಯಕರ ಮಾತ್ರವಲ್ಲ ಬಂಡಾಯದ ಚಲನಶೀಲತೆಯನ್ನು ಪುಷ್ಟಿಕರಿಸುತ್ತದೆ. ಶೀಘ್ರದಲ್ಲಿಯೇ ಇವನು ಬಂಡಾಯದ ನಾಯಕತ್ವವನ್ನು ವಹಿಸಿಕೊಂಡನು.

ಘಟ್ಟ ಪ್ರದೇಶದಲ್ಲಿ ಈ ಬಂಡಾಯ ಪ್ರಾರಂಭವಾಯಿತು. ಪುಟ್ಟಬಸಪ್ಪ ಬಂಡುಕೋರರನ್ನು ಸಂಘಟಿಸಿ ಜನರನ್ನು ಸಂತೈಸಿದನು. ಬಂಡುಕೋರರ ಸರ್ಕಾರ ಸ್ಥಾಪನೆಯ ನಂತರ ತಂಬಾಕು ಮತ್ತು ಉಪ್ಪಿನ ಮೇಲಿನ ಸುಂಕವನ್ನು ರದ್ದು ಮಾಡಲಾಗುವುದು ಎಂದೂ ಘೋಷಿಸಲಾಯಿತು. ಶ್ರೀಮಂತ ರೈತರು, ಪಾರುಪತ್ತೆಗಾರರು, ಭೂಹಿಡುವಳಿದಾರರಿಗೆ ಆಶ್ವಾಸನೆಗಳನ್ನು ನೀಡಲಾಯಿತು. ಬೆಳ್ಳಾರೆಯಲ್ಲಿದ್ದ ಸರ್ಕಾರಿ ಕಛೇರಿಯನ್ನು ವಶಪಡಿಸಿಕೊಂಡು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿದ್ದು ಬಂಡಾಯದ ಪ್ರಥಮ ಹೆಜ್ಜೆಯಾಗಿದೆ. ಸುಳ್ಯ ಮತ್ತು ಆಸುಪಾಸಿನಲ್ಲಿ ಸಾಮಾನ್ಯ ಜನರಿಗೆ ಕಿರುಕುಳ ನೀಡುತ್ತಿದ್ದ ಅಮಲ್ದಾರನೋರ್ವನ ಹತ್ಯೆ ಪುಟ್ಟಬಸಪ್ಪನ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಇದರಿಂದಾಗಿ ಬಂಡಾಯ ವ್ಯಾಪಕ ಪ್ರಚಾರ ಮತ್ತು ಬೆಂಬಲವನ್ನು ಪಡೆದುಕೊಂಡಿತು.

ಹೋರಾಟಗಾರರು ಪುತ್ತೂರಿನಲ್ಲಿ ಬ್ರಿಟಿಷ್ ಸೈನ್ಯವನ್ನು ಎದುರಿಸಿದ್ದರು. ಇವರ ಉದ್ದೇಶ ಮಂಗಳೂರನ್ನು ವಶಪಡಿಸಿಕೊಳ್ಳುವುದಾದುದರಿಂದ ಬ್ರಿಟಿಷರು ಮಂಗಳೂರನ್ನು ರಕ್ಷಿಸುವ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪುತ್ತೂರಿನಿಂದ ಮಂಗಳೂರಿನ ಕಡೆಗೆ ತೆರಳಿದ ಅವರು ಪಾಣಿಮಂಗಳೂರು ಮತ್ತು ಬಂಟ್ವಾಳದಲ್ಲಿ ಕಾರ್ಯಾಚರಣೆಗಳನ್ನು ನಡೆಸಿದರು. ಬಂಟ್ವಾಳದ ಜೈಲು ಮತ್ತು ಖಜಾನೆ ಲೂಟಿಗೈಯ್ಯಲ್ಪಟ್ಟವು.

ಇದನ್ನು ಹತ್ತಿಕ್ಕಲು ಬ್ರಿಟಿಷರು ಕಣ್ಣಾನೂರು, ತಲ್ಲಿಚೀು ಮತ್ತು ಬಾಂದೆಯ ಸೈನ್ಯವನ್ನು ಅಪೇಕ್ಷಿಸಿದರು. ಇದನ್ನು ಅಂತ ಪುಟ್ಟಸಪ್ಪ ಮತ್ತು ಆತನ ಸಂಗಡಿಗರು ಸುಳ್ಯಕ್ಕೆ ಪಲಾಯನ ಮಾಡಿದರು. ಬ್ರಿಟಿಷ್ ಸೈನ್ಯ ಕೊಡಗಿನಲ್ಲಿ ಸ್ಥಳೀಯರ ಸಹಕಾರದಿಂದ ಆತನನ್ನು ಮತ್ತು ಆತನ ಸಹಚರರನ್ನು ಸೆರೆಹಿಡಿಯಿತು. ಸೆರೆಸಿಕ್ಕಿದ ಪುಟ್ಟಬಸಪ್ಪ, ಲಕ್ಷಪ, ಬಂಗರಸ, ಕೆದಂಬಾಡಿ ರಾಮಯ್ಯಗೌಡರು ಮತ್ತು ಗುಡ್ಡೆಮನೆ ಅಪ್ಪಯ್ಯ ಇವರುಗಳನ್ನು ಗಲ್ಲಿಗೇರಿಸಲಾಯಿತು. ದಂಗೆ ವಿಫಲವಾದರೂ, ಸಮಕಾಲೀನವಾಗಿ ಪ್ರಾಮುಖ್ಯತೆ ಹೊಂದಿತ್ತು ಮತ್ತು ಅದು ಬ್ರಿಟಿಷ್ ವಿರೋಧಿಯಾಗಿತ್ತು ಎಂದು ಹೇಳಬಹುದಾಗಿದೆ.


ಸುರಪುರ ಮತ್ತು ಕೊಪ್ಪಳ ಬಂಡಾಯ

ಸುರಪುರ

ಸುರಪುರ ಈಗಿನ ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ, ಮೊಘಲರ ಚಕ್ರವರ್ತಿ ಔರಂಗಜೇಬನ ಕಾಲದಿಂದಲೂ ಇದು ಪ್ರಾಮುಖ್ಯತೆಯನ್ನು ಪಡೆದಿತ್ತು. ನಿಜಾಮ ಮತ್ತು ಮರಾಠರ ಪೇಶೆಗಳ ಕಾಲದಲ್ಲಿ ಇದು ಒಂದು ಸಾಮಂತ ರಾಜ್ಯವಾಗಿ ಪರಿಣಮಿಸಿತು. ಕಾಲಾನಂತರ ಭೌಗೋಳಿಕ ಪದರಗಳ ಮೇಲಿನ ಹತೋಟಿಯು ಕುಸಿದು ಕೇವಲ ಸೀಮಿತ ಭೌಗೋಳಿಕ ಪ್ರದೇಶದ ಮೇಲೆ ತನ್ನ ರಾಜಕೀಯ ಸ್ವಾಮ್ಯವನ್ನು ಇದು ಪಡೆದುಕೊಂಡಿತು. ವೆಂಕಟಪ್ಪ ನಾಯಕನ ಕಾಲದಲ್ಲಿ ಸುರಪುರ ಬ್ರಿಟಿಷ್ ವಿರೋಧಿ ಬಂಡಾಯದ ಕಿಚ್ಚನ್ನು ಗಳಿಸಿಕೊಂಡಿತು.

ವೆಂಕಟಪ್ಪ ನಾಯಕ: ತನ್ನ ತಂದೆ ಕೃಷ್ಣಪ್ಪನಾಯಕನ ಮರಣಾನಂತರ ಈತನು ಪಟ್ಟಕ್ಕೆ ಬಂದನು. 1834ರಲ್ಲಿ ಜನಿಸಿದ ಇದನ್ನು ತನ್ನ ಅಪ್ರಾಪ್ತ ವಯಸ್ಸಿಗೆ ಪಟ್ಟಕ್ಕೆ ಬಂದನು ಆದರೆ ಕೃಷ್ಣಪ್ಪನಾಯಕನ ಸೋದರನಾಗಿದ್ದ ಪದ್ಮನಾಯಕ ಎಂಬುವವನು ತಗಾದೆ ಮಾಡಲಾಗಿ ಸುರಪುರದ ಆಂತರಿಕ ರಾಜಕೀಯ ಚಟುವಟಿಕೆಗಳು ಕೋಭೆಗೊಂಡವು. ಬ್ರಿಟಿಷರು ಇದರ ಸಂಬಂಧ ಆಸಕ್ತಿ ವಹಿಸಿದರು. 1842ರಲ್ಲಿ ಬ್ರಿಟಿಷರು ಮೆಡೋಸ್ ಟೇಲರ್ ಎಂಬುವನು ಸೊಲಿಟಿಕಲ್ ನಟನನಾಗಿ ನೇಮಿ ಸಂಸ್ಥಾನದ ಮೇಲೆ ತಮ್ಮ ಪರೋಕ್ಷ ಹತೋಟಿಯನ್ನು ಸ್ಥಾಪಿಸಿದರು.

ಟೇಲರ್ ಸುಧಾರಣಾವಾದಿಯೂ ಆಗಿದ್ದು ಸುರಪುರ ಸಂಸ್ಥಾನವನ್ನು ಅಭಿವೃದ್ಧಿಪಡಿಸಿದನು. ದ್ದನಾಯಕನನ್ನು ಸಂಸ್ಥಾನದ ದಿವಾನನಾಗಿ ನೇಮಿಸಿದನು. ಸಂಸ್ಥಾನದಾದ್ಯಂತ ಭೂಸಮೀಕ್ಷೆ ಮಾಡಿಸಿದನು. ಸಂಸ್ಥಾನದ ಆದಾಯ ಹೆಚ್ಚಲು ಈತನ ಅನುಸರಿಸಿದ ನೀತಿಗಳೇ ಕಾರಣಗಳಾಗಿವೆ, ವೆಂಕಟಪ್ಪ ನಾಯಕನಿಗೆ ಸೂಕ್ತವಾದ ಶಿಕ್ಷಣವನ್ನು ಕೊಡಿಸುವ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟನು, 1853ರಲ್ಲಿ ವೆಂಕಟಪ್ಪನಾಯಕ ಅಧಿಕಾರಕ್ಕೆ ಬಂದನು.

ಸುರಪುರ ದಂಗೆ : ಬ್ರಿಟಿಷ್ ಸರ್ಕಾರವು ಸುರುಪುರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿತ್ತು. 1857ರಲ್ಲಿ ಪ್ರಾರಂಭದ ಹೋರಾಟದಲ್ಲಿನ ನಾನಾಸಾಹೇಬನ ಪ್ರತಿನಿಧಿಗಳು ಸುರಪುರದಲ್ಲಿದ್ದಾರೆ ಎಂಬ ಪುಕಾರು ಕಂಡುಬಂದಿತು, ಇದರಿಂದಾಗಿ ಬ್ರಿಟಿಷರು ರಾಜನನ್ನು ಸಂಶಯದಿಂದ ಕಾಣುವಂತಾಯಿತು. ರಾಜನ ಅವಧಿಯಲ್ಲಿನ ಆಡಳಿತದ ಬಗ್ಗೆ ವರದಿ ನೀಡಲು ಬಿಟಿಷ್ ರ್ಕಾರ ಕಾಂಪ್‌ಗೆ ಅಧಿಕಾರಿಯನ್ನು ನೀಟಸಿತು. ಇವನು ರಾಜನು ಆಡಳಿತ ದುರ್ವವಹಾರಗಳಲ್ಲಿ ನಿರತನಾಗಿದ್ದಾನೆ ಎಂಬ ಅಂಶವನ್ನು ವರದಿಯಲ್ಲಿ ಕಾಣಿಸಿ ಹೈದರಾಬಾದ್‌ನ ರೆಸಿಡೆಂಟ್‌ಗೆ ಸಲ್ಲಿಸಿದನು.

ವೆಂಕಟಪ್ಪ ನಾಯಕನನ್ನು ಸಾಮಾನ್ಯವಾಗಿ ಕರ್ನಾಟಕದ ಚರಿತ್ರೆಯಲ್ಲಿ 18577, ಕ್ರಾಂತಿಯ ನಾಯಕನೆಂದೂ ಇತಿಹಾಸಕಾರರು ವರ್ಣಿಸಿದ್ದಾರೆ, 1858ರಲ್ಲಿ ಬ್ರಿಟಿಷ್ ಸೈನ ಸುರಪುರವನ್ನು ಆಕ್ರಮಿಸಿತು, ಯುದ್ಧ ಮುಂದುವರಿಯಿತು. ಬ್ರಿಟಿಷರು ಸುರಪುರ ಕೋಟೆಯನ್ನು ವಶಪಡಿಸಿಕೊಂಡರು. ವೆಂಕಟಪ್ಪ ನಾಯಕನ ಅಂತ್ಯಕ್ಕೆ ಸಂಭಂದಿಸಿದಂತೆ ಅನೇಕ ಗೊಂದಲಗಳಿವೆ.

ಕೊಪ್ಪಳದ ವೀರಪ್ಪ : ಬ್ರಿಟಿಷ್ ವಿರೋಧಿ ಚಳವಳಿ, ಸಶಸ್ತ್ರ ಬಂಡಾಯ ಮತ್ತು ದಂಗೆಗಳಲ್ಲಿ ಕೊಪ್ಪಳದಲ್ಲಿನ ದಂಗೆಯೂ ಸಹ ಪ್ರಮುಖವಾಗಿದೆ. ಕೊಪ್ಪಳ ಮತ್ತು ಸನಿಹದ ಭೌಗೋಳಿಕ ಪ್ರದೇಶಗಳು ಹೈದರಾಬಾದ್ ನಿಜಾಮನ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿದ್ದರೂ ದೌರ್ಜನ್ಯ ಕಂಡುಬಂದಿತ್ತು. ಹೀಗಾಗಿ ಕೊಪ್ಪಳದ ಕೆಲವು ಜಮೀನ್ದಾರರು ಅನಿವಾರ್ಯವಾಗಿ ಬಂಡೆದ್ದರು. ಹೀಗೆ ತಿರುಗಿ ಬಿದ್ದವರಲ್ಲಿ ವೀರಪ್ಪನು ಪ್ರಮುಖನಾದವನು.

ವೀರಪ್ಪ ಜಮೀನ್ದಾರನಾಗಿದ್ದು ಬಂಡೆದ್ದು ಕೊಪ್ಪಳ ಮತ್ತು ಸಾಹದ ಕೋಟೆಗಳನ್ನು ತನ್ನ ಸುಪರ್ದಿಗೆ ವಹಿಸಿಕೊಂಡನು. ವೀರಪ್ಪನ ಈ ಉದ್ದೇಶದ ಮರ್ವಾ ಅಂತ ಅನೇಕ ರೈತರು ಮತ್ತು ಜಾರರು ಆತನೊಂದಿಗೆ ಕೈ ಜೋಡಿಸಿದರು. ನಿಜಾಮರೊಂದಿಗೆ ಸಂಪರ್ಕವನ್ನು ಸಾಧಿಸಿದ ಬ್ರಿಟಿಷರು ವೀರಪ್ಪನ ನೇತೃತ್ವದಲ್ಲಿನ ಬಂಡಾಯವನ್ನು ಸದೆಬಡಿಯಲು ಸೈನ್ಯವನ್ನು ನಿಯೋಜಿಸಿದರು. ಕಡಿಮೆ ಸೈನಿಕರ ಬೆಂಬಲವನ್ನು ಹೊಂದಿದ್ದ ವೀರಷ್ಟೆ ಸತತವಾಗಿ ಹೋರಾಟವನ್ನು ನಡೆಸಿ ಮರಣ ಹೊಂದಿದನು. ಶರುವಾಯ ಬ್ರಿಟಿಷರು ಕೊಪ್ಪಳದ ಕೋಟೆಯನ್ನು ವರಪಡಿಸಿಕೊಂಡರು. ಈ ದಂಗೆಯ ಪ್ರಭಾವ ಅಲ್ಪಾವಧಿಯದ್ದಾಗಿದ್ದರೂ ಅದಕ್ಕೆ ನಾಯಕತ್ವವನ್ನು ನೀಡಿದ ವೀರಪ್ಪ ಒಬ್ಬ ಸಮರ್ಥ ಸಶಸ್ತ್ರ ಹೋರಾಟಗಾರನೇ ಆಗಿದ್ದಾನೆ.


ಹಲಗಲಿಯ ಬೇಡರ ದಂಗೆ

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನಲ್ಲಿ ಪಂಗತಿ ಎಂಬುದು ಒಂದು ಪುಟ್ಟಗ್ರಾಮ ಹಿಂದೆ ಇದು ಮುಧೋಳ ಸಂಸ್ಥಾನದ ಆಳ್ವಿಕೆಗೆ ಒಳಪಟ್ಟಿತು. 1857ರ ಬಂಡಾಯದ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯ ಪ್ರದೇಶದಲ್ಲಿ ರಸಗಳ ಬಳಕೆಯನ್ನು ನಿರ್ಬಂಧಿಸಿ ಕಾನೂಮೋದನ್ನು ಜಾರಿಗೆ ತಂದರು. ಇದನ್ನು ಹಲಗಲಿಗೂ ಸಹ ಅನ್ವಯಿಸಲಾಯಿತು. ಹಲಗಲಿಯ ಬೇಡರು ತಲೆತಲಾಂತರಗಳಿಂದ ಬೇಟೆಯಾಡುವ ಉದ್ದೇಶಕ್ಕೆ ಮುಕ್ತವಾಗಿ ಬಳಸುತ್ತಿದ್ದ ಬಂದೂಕುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ಸಿದ್ಧರಿರಲಿಲ್ಲ. ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬ್ರಿಟಿಷರ ವಿರುದ್ಧ ಸಿಡಿದೆದ್ದರು. ಈ ಹೋರಾಟದಲ್ಲಿ ಹಲಗಲಿಯ ಸುತ್ತಮುತ್ತಲಿನ ಪ್ರದೇಶಗಳಾದ ಮಂಟೂರು, ಬೋದಾನಿ, ಆಲಗುಂಡಿಯ ಬೇಡರು, ಹಲಗಲಿಯ ಬೇಡರೊಂದಿಗೆ ಸೇರಿಕೊಂಡರು. ಇವರ ಬಂಡಾಯವನ್ನು ಹತ್ತಿಕ್ಕಲು ನವೆಂಬರ್‌ನಲ್ಲಿ ಇಂಗ್ಲಿಷರ ಸೇನೆ ಹಲಗಲಿ ಗ್ರಾಮವನ್ನು ತಲುಪಿತು, ಬಂಡಾಯವೆದ್ದ ಬೇಡರನ್ನು ನಿಷ್ಕಾಲುವಾಗಿ, ಅತ್ಯಂತ ದಮನಕಾರಿಯಾಗಿ ಇಂಗ್ಲಿಷರು ಹತ್ತಿಕ್ಕಿದರು. ಬಂಡಾಯಗಾರರನ್ನು ಗಲ್ಲಿಗೇರಿಸುವುದರ ಮೂಲಕ ಈ ಬಂಡಾಯವ ಕೊನೆಗೊಂಡಿತು.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು