ಅರ್ಥಶಾಸ್ತ್ರದ ಅರ್ಥ

ನಮ್ಮ ದೈನಂದಿನ ಜೀವನದಲ್ಲಿ ನಾವು ವಿವಿಧ ವಸ್ತುಗಳನ್ನು ಬಳಕೆ ಮಾಡುತ್ತೇವೆ. ಅವುಗಳನ್ನು ‘ಸರಕುಗಳು ಮತ್ತು ಸೇವೆಗಳು’ ಎಂದು ಕರೆಯುತ್ತೇವೆ, ಸರಕುಗಳು ಭೌತಿಕ ಮತ್ತು ಗೋಚರಿಸುವ ವಸ್ತುಗಳಾಗಿದ್ದು ಅವು ಆಹಾರ , ಬಟ್ಟೆ, ಪುಸ್ತಕ, ಸೈಕಲ್, ಫೋನ್, ಟಿಎ, ಇತ್ಯಾದಿಗಳಾಗಿರುತ್ತವೆ. ಇನ್ನೊಂದೆಡೆ, ಸೇವೆಗಳು ಅಗೋಚರಗಳಾಗಿದ್ದು ಅವುಗಳು ಕೂಡ ನಮಗೆ ಬಳಕೆಗೆ ಅಗತ್ಯವಿರುವವು, ವಿದ್ಯುಚ್ಛಕ್ತಿ, ಸಾರಿಗೆ, ಶಿಕ್ಷಣ, ವೈದ್ಯಕೀಯ, ಹೊಲಿಗೆ, ಸಂಗೀತ, ಮೊಬೈಲ್ ಮತ್ತು ಅಂತರ್ಜಾಲ ಸೇವೆ ಇತ್ಯಾದಿಗಳು ನಾವು ಬಳಕೆ ಮಾಡುವ ಸಾಮಾನ್ಯ ಸೇವೆಗಳಾಗಿವೆ. ಸರಕುಗಳನ್ನು ಮತ್ತು ಸೇವೆಗಳನ್ನು ಬಳಕೆ ಮಾಡುವವರನ್ನು ‘ಗ್ರಾಹಕರು’ ಹಾಗೂ ಸರಕುಗಳನ್ನು ಮತ್ತು ಸೇವೆಗಳನ್ನು ಉತ್ಪಾದಿಸುವವರನ್ನು ಉತ್ಪಾದಕರು’ ಎನ್ನುತ್ತೇವೆ. ಈ ಸರಕುಗಳನ್ನು ಮತ್ತು ಸೇವೆಗಳನ್ನು ನಾವು ಇರುವ ಸ್ಥಳದಲ್ಲಿ ಲಭ್ಯವಾಗುವಂತೆ ಮಾಡುವ ಸಾರಿಗೆದಾರರಿಗೆ, ವ್ಯಾಪಾರಸ್ಥರಿಗೆ ಮತ್ತು ಅಂಗಡಿಕಾರರಿಗೆ ವಿತರಕರು’ ಎನ್ನಲಾಗುತ್ತದೆ.

ಅಗತ್ಯವಾದ ಸರಕುಗಳನ್ನು ಮತ್ತು ಸೇವೆಗಳನ್ನು ನಾವು ನಿಗದಿಪಡಿಸಿದ ‘ಬೆಲೆ’ ನೀಡಿ ಕೊಂಡುಕೊಳ್ಳುತ್ತೇವೆ ಇದು ಹಣದ ರೂಪದಲ್ಲಿ ವ್ಯಕ್ತಪಡಿಸಿದ ಸರಕು ಅಥವಾ ಸೇವೆಗಳ ಮೌಲ್ಯವಾಗಿದೆ. ಅಂದರೆ ನಮ್ಮ ದೈನಂದಿನ ಜೀವನದಲ್ಲಿ ಅಗತ್ಯವಿರುವ ವಿವಿಧ ಸರಕುಗಳನ್ನು ಮತ್ತು ಸೇವೆಗಳನ್ನು ಕೊಳ್ಳಲು ನಮಗೆ ಹಣ ಬೇಕು, ಹಾಗಾದರೆ, ಹಣವನ್ನು ಹೇಗೆ ಪಡೆಯುವುದು? ಅದಕ್ಕಾಗಿ ನಾವೆಲ್ಲರೂ ಉದ್ಯೋಗದಲ್ಲಿ ತೊಡಗುತ್ತೇವೆ. ಅಥವಾ ಉದ್ಯೋಗಿಗಳಾಗುತ್ತವೆ. ‘ಉದ್ಯೋಗ’ದಿಂದ ನಾವು ‘ಆದಾಯವನ್ನು ಪಡೆಯುತ್ತೇವೆ. ನಾವು ನಮ್ಮ ವೆಚ್ಚ ಮಾಡಿದಾಗ ಅದು ಉತ್ಪಾದಕರ ಮತ್ತು ವಿತರಕರ ಆದಾಯವಾಗಿರುತ್ತದೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ‘ಸರ್ಕಾರ’ದ ಜವಾಬ್ದಾರಿಯಾಗಿದ್ದು, ಅದು ಅಂತರಿಕ ಮತ್ತು ಬಾಹ್ಯ ಭದ್ರತೆಯ ಜೊತೆಗೆ ಉತ್ತಮ ರಸ್ತೆಗಳು, ವಿದ್ಯುಚ್ಛಕ್ತಿಯಂತಹ ಮೂಲ ಸೌಲಭ್ಯಗಳನ್ನು ಒದಗಿಸುತ್ತದೆ. ಸರಕಾರವು ತಾನು ಒದಗಿಸುವ ಸರಕುಗಳಿಗೆ ಮತ್ತು ಸೇವೆಗಳಿಗೆ ತೆರಿಗೆಗಳನ್ನು ವಿಧಿಸುತ್ತದೆ.

ಆದುದರಿಂದ, ಒಂದು ಸಾಮಾನ್ಯ ದಿನದಲ್ಲಿ ಪ್ರತಿಯೊಬ್ಬ ಉತ್ಪಾದಕರ, ವಿತರಕರ, ಗ್ರಾಹಕರ ಮತ್ತು ಸರ್ಕಾರದ ನಡುವಿನ ಪರಸ್ಪರ ಸಂಬಂಧ ಕಂಡು ಬರುತ್ತದೆ. ಈ ಪ್ರತಿಯೊಬ್ಬರ ಆದಾಯ ಗಳಿಕೆ ಮತ್ತು ವೆಚ್ಚ ಮಾಡುವ ಕಾರ್ಯವು ಆರ್ಥಿಕ ಚಟುವಟಿಕೆಯ ಮೂಲ ಅಂಶವಾಗಿದೆ. ಅರ್ಥಶಾಸ್ತ್ರವನ್ನು ವ್ಯಕ್ತಿಗಳ ಇಂತಹ ಆರ್ಥಿಕ ಚಟುವಟಿಕೆಗಳ ಅಧ್ಯಯನವನ್ನು ಮಾಡುವ ವಿಷಯ ಅಥವಾ ಉತ್ಪಾದನೆ, ವಿತರಣೆ ಮತ್ತು ಸರಕು ಸೇವೆಗಳ ಬಳಕೆ ಕುರಿತು ಅಭ್ಯಸಿಸುವ ವಿಜ್ಞಾನವೆಂದು ವರ್ಣಿಸಬಹುದಾಗಿದೆ.
ಆದರೆ ಒಂದು ಮಹತ್ವದ ಸಂಗತಿಯೆಂದರೆ, ಇವು ಬಯಸುವ ಎಲ್ಲ ಸರಕು ಮತ್ತು ಸೇವೆಗಳನ್ನು ಹೊಂದಲು ಸಾಧ್ಯವಿಲ್ಲ. ಏಕೆಂದರೆ, ಅವುಗಳನ್ನು ಕೊಳ್ಳಲು ಬೇಕಾದ ಹಣವು ಮಿತವಾಗಿದೆ ಅಥವಾ ಕೊರತೆಯಲ್ಲಿದೆ. ಹಿಗಿದ್ದಾಗ, ಅತ್ಯಗತ್ಯವಾದುದನ್ನು ಮೊದಲು ಆಯ್ಕೆ ಮಾಡಿ ಕಡಿಮೆ ಅಗತ್ಯವಾದುದರ ಬಳಕೆಯನ್ನು ಮುಂದೂಡಲಾಗುತ್ತದೆ. ಆದುದರಿಂದ, ಆಹಾರವು ಚಲನಚಿತ್ರಕ್ಕಿಂತ ಹೆಚ್ಚು ಮಹತ್ವವಾದುದು; ಟ್ರ್ಯಾಕ್ಟರನ್ನು ಕೊಳ್ಳುವುದಕ್ಕಿಂತ ಬೀಜಗಳನ್ನು ಮತ್ತು ರಸಗೊಬ್ಬರಗಳನ್ನು ಕೊಳ್ಳುವುದು ಹೆಚ್ಚು ಮಹತ್ವವಾದುದು ಇತ್ಯಾದಿ, ಈ ರೀತಿಯಾದ ಬಯಕೆಗಳನ್ನು ಹೆಚ್ಚು ಅಥವಾ ಕಡಿಮೆ ಮಹತ್ವದ್ದು ಎಂದು ವರ್ಗೀಕರಿಸುವುದನ್ನು ಆದ್ಯತೆ ನೀಡುವುದು ಎನ್ನುತ್ತೇವೆ, ಆದ್ಯತೆ ನೀಡಿದ ಬಯಕೆಗಳನ್ನು ತೃಪ್ತಿ ಪಡಿಸಲು ಹೆಚ್ಚಿನ ಸಂಪನ್ಮೂಲ (ಹಣ) ವನ್ನು ನಾವು ವಿನಿಯೋಗಿಸುತ್ತೇವೆ. ಆದುದರಿಂದ, ಸಂಪನ್ಮೂಲದ ಕೊರತೆಂದಿದ್ದಾಗ ನಾವು ಹೆಚ್ಚು ಅಗತ್ಯವುಳ್ಳ ಬಯಕೆಗಳನ್ನು ಆಯ್ಕೆ ಮಾಡುತ್ತೇವೆ ಅಥವಾ ಅವುಗಳ ಮಹತ್ವದ ಆಧಾರದ ಮೇಲೆ ಪಟ್ಟಿ ಮಾಡುತ್ತೇವೆ. ಆದ್ದರಿಂದ ಕೊರತೆ ಮತ್ತು ಆಯ್ಕೆಗಳು ನಾವೆಲ್ಲರೂ ಎದುರಿಸುವ ಮೂಲಭೂತ ಸಮಸ್ಯೆಗಳಾಗಿದ್ದು ಅವು ಅರ್ಥಶಾಸ್ತ್ರದ ಪ್ರಮುಖ ಸಮಸ್ಯೆಗಳೂ ಆಗಿವೆ.

ನಿಮಗಿದು ತಿಳಿದಿರಲಿ ! ನಿಮ್ಮ ಹತ್ತಿರ ರೂ.20 ಇಡೆ ಅನ್ನೋಣ, ನಮ್ಮ ಶಿಕ್ಷಕರು ಒಂದು ಪುಸ್ತಕವನ್ನು ಕೊಳ್ಳಲು ಹೇಳಿದ್ದಾರೆ. ನೀವು ಇತ್ತೀಚಿನ ಚಲನಚಿತ್ರವನ್ನು ನೋಡಲು ಇಚ್ಛಿಸಿರುತ್ತೀರಿ, ತಲೆನೋವಿಗೆ ಔಷಧ ಕೊಳಲು ಬಯಸುತ್ತೀರಿ, ನೀವೆ ಮನೆಗೆ ಹೋಗಬೇಕು ಮತ್ತು ನೀವು ಪ್ರಸಿದಿದ್ದೀರಿ ಕೊಡ, ಕೈಯಲ್ಲಿರುವ ರೂ.20ರಿಂದ ಎಲ್ಲ ಆಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯ ಆಗ ನೀವು ಯಾವ ಬಯಕೆಯನ್ನು ಮೊದಲು ತೃಪ್ತಿ ಪಡಿಸಿಕೊಳ್ಳುತ್ತೀರಿ, ನಂತರದಲ್ಲಿ ಯಾವುದು ಎಂಬುದರ ಆಯ್ಕೆ ಮಾಡುತ್ತಿಲ್ಲ. ಅಂದರೆ, ನೀವು ಮೊದಲಿಗೆ ಏನನ್ನಾದರೂ ತಿನ್ನುತ್ತಿದ್ದು, ಕೆಲವ ಮಾತ್ರೆಗಳನ್ನು ಕೊಳ್ಳುತ್ತೀರಿ ಮತ್ತು ನಂತರದಲ್ಲಿ ಮನೆಗೆ ಹೋಗಲು ಹಣ ಖರ್ಚು ಮಾಡುವಿರಿ ಮತ್ತು ಪುಸ್ತಕಗಳನ್ನು ಕೊಳ್ಳುವುದನ್ನು ಹಾಗೂ ಚಲನಚಿತ್ರ ನೋಡುವುದನ್ನು ಮುಂದೂಡುತ್ತಿರಿ. ಇದನ್ನೇ ಆದ್ಯತೆ ನೀಡುವುದು ಮತ್ತು ಅದಕ್ಕಾಗಿ ನಮ್ಮ ಬಳಿಯಿರುವ ಸಂಪನ್ಮೂಲವನ್ನು (ರೂ.20) ವಿನಿಯೋಗಿಸುವುದು ಆಗಿದೆ.

“ಅರ್ಥಶಾಸ್ತ್ರವು ಜನರು ತಮ್ಮ ಅಪರಿಮಿತವಾದ ಬಯಕೆಗಳನ್ನು ತೃಪ್ತಿಪಡಿಸಲು ಮಿತವಾಗಿರುವ ಅಥವಾ ಕೊರತೆಯಲ್ಲಿರುವ ಸಂಪನ್ಮೂಲದ ಉಪಯೋಗವನ್ನು ಹೇಗೆ ಮಾಡುತ್ತಾರೆ ಎಂದು ಪರಿಶೀಲಿಸುವ ಸಮಾಜ ವಿಜ್ಞಾನವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತದೆ, ಅರ್ಥಶಾಸ್ತ್ರವನ್ನು ವಿವಿಧ ರೀತಿಗಳಲ್ಲಿ ವ್ಯಾಖ್ಯಾನಿಸಿದ್ದರೂ, ಮೇಲಿನ ವ್ಯಾಖ್ಯೆಯು ಅರ್ಥಶಾಸ್ತ್ರದ ಮೂಲ ಸಮಸ್ಯೆಯನ್ನು ವಿವರಿಸುತ್ತದೆ.

“ಸಂಪತ್ತನ್ನು ಅಧ್ಯಯನ ಮಾಡುವ ವಿಷಯವೇ ಅರ್ಥಶಾಸ” – ಆಡಂ ಸ್ಮಿತ್ (171) (ಅರ್ಥಶಾಸ್ತ್ರದ ಪಿತಾಮಹ)
“ಜನರ ಸಾಮಾನ್ಯ ಜೀವನದ ವ್ಯವಹಾರವನ್ನು ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿದೆ” – ಆಶೆಡ್ ಮಾರ್ಷ (1890)
“ ವಿವಿಧ ಉಪಯುಕ್ತಗಳನ್ನು ಹೊಂದಿರುವ ಕೊರತೆಯಲ್ಲಿರುವ ಸಂಪನ್ಮೂಲಗಳ ಮತ್ತು ಮಾನವನ ಅಪರಿಕ ಬಯಕೆಗಳ ನಡುವಿನ ಸಂಬಂಧವಾಗಿ ಮಾನವನ ನಡವಳಿಕೆಯನ್ನು ಅಧ್ಯಯನ ಮಾಡುವ ವಿಜ್ಞಾನವೇ ಅರ್ಥಶಾಸ್ತ್ರ”- ಲಿಯೋನಿಲ್ ರಾಬಿನ್ಸ (1932).

“ವಿವಿಧ ಸಮಾಜಗಳು ಕೊರತೆಯಲ್ಲಿರುವ ಸಂಪನ್ಮೂಲಗಳನ್ನು ಬಳಸಿ ಉಪಯುಕ್ತ ಸರಕುಗಳನ್ನು ಉತ್ಪಾದಿಸಿ ಅವುಗಳನ್ನು ಜನರಲ್ಲಿ ಹೇಗೆ ವಿತರಿಸುತ್ತವೆ ಎಂಬುದನ್ನು ಅಭ್ಯಸಿಸುವ ವಿಷಯವೇ ಅರ್ಥಶಾಸ್ತ್ರ” ಪಾಲ್.ಎ. ಸಾಮ್ಯೂಯೆಲಸನ್ (1948).

‘ಅರ್ಥಶಾಸ್ತ್ರ’ವು ಎಕನಾಮಿಕ್ಸ್ ಎಂಬ ಇಂಗ್ಲಿಷ್ ಪದದ ಕನ್ನಡ ರೂಪವಾಗಿದ್ದು, ಆ ಪದವು ಗ್ರೀಕ್ ಪದ ಓಕೋಸ್’ ಅಂದರೆ ಕುಟುಂಬ’ ಮತ್ತು ‘ ನೆಮೊಸ್’ ಅಂದರೆ ನಿರ್ವಹಣೆ ಎಂಬ ಪದಗಳಿಂದ ಬಂದಿದೆ. ಆದುದರಿಂದ, ಅರ್ಥಶಾಸ್ತ್ರವು “ಕುಟುಂಬ ನಿರ್ವಹಣೆ’ ಎಂಬುದನ್ನು ಸೂಚಿಸುತ್ತದೆ ಮತ್ತು ಆದು ಕುಟುಂಬದ ಮೂಲ ಅಗತ್ಯಗಳನ್ನು ತೃಪ್ತಿಪಡಿಸಲು ಮತ್ತು ಕುಟುಂಬದ ಪ್ರಗತಿಗೆ ಲಭ್ಯವಿದ್ದ ಸಂಪನ್ಮೂಲಗಳನ್ನು ಉಪಯೋಗಿಸುವುದನ್ನು ಒಳಗೊಂಡಿದೆ. ಇದೇ ನಿಯಮವನ್ನು ಇಡೀ ಸಮಾಜಕ್ಕೆ ಅನ್ವಯಿಸಿದಾಗ, ಜನರ ಮೂಲ ಅಗತ್ಯಗಳನ್ನು ತೃಪ್ತಿಪಡಿಸಲು ಮತ್ತು ಆರ್ಥಿಕ ಸಮೃದ್ಧಿಗೆ ಸಮಾಜವು ಹೇಗೆ ತನ್ನ ಸಂಪನ್ಮೂಲಗಳನ್ನು ಉಪಯೋಗಿಸುತ್ತದೆ ಎಂಬುದು ಅರ್ಥಶಾಸ್ತ್ರದ ಮೂಲ ಅಧ್ಯಯನ ವಿಷಯವಾಗುತ್ತದೆ. ವಿವಿಧ ಆರ್ಥಿಕ ಚಟುವಟಿಕೆಗಳ ಸಂಘಟನೆಯುನ್ನು ‘ಆರ್ಥಿಕ ವ್ಯವಸ್ಥೆ’ ಎನ್ನಲಾಗುತ್ತದೆ.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು