ಅರ್ಥಶಾಸ್ತ್ರ ಅಧ್ಯಯನವು ವ್ಯಕ್ತಿಗೆ ಹಾಗೂ ವಾಜಕ್ಕೆ ಅತ್ಯಂತ ಮಹತ್ವದ್ದಾಗಿದೆ. ಅರ್ಥಶಾಸ್ತ್ರದ ಅಧ್ಯಯನದಿಂದ ಈ ಕೆಳಗಿನ ಕಾರ್ಯಗಳಿಗೆ ಸಹಾಯಕವಾಗುವುದು.
• ಅಪರಿಮಿತ ಬಯಕೆಗಳ ಸನ್ನಿವೇಶದಲ್ಲಿ ಸಂಪನ್ಮೂಲಗಳ ಕೊರತೆಯ ಪರಿಗಣಿಸುವುದು.
• ಸಂಪನ್ಮೂಲಗಳ ಉಪಯೋಗದಲ್ಲಿ ಆದ್ಯತೆ ನೀಡಿ ಅವುಗಳಲ್ಲಿ ಸು ಮತ್ತು ಯಾವುದು ಕಡಿಮೆ ಮಹತ್ವವಾದುದು ಎಂದು ಗುರುತಿಸುವುದು;
• ಅಧಿಕ ಮಹತ್ವವಾದುದು ಸಂಪನ್ಮೂಲಗಳ ಉಪಯೋಗದಲ್ಲಿ ಮಿತವ್ಯಯ (ಉಳಿತಾಯ ಮಾಡುವುದು ಮತ್ತು ಸಂಪನ್ಮೂಲ ಗಳನ್ನು ಉಪಯೋಗಿಸುವಲ್ಲಿ ಅಧಿಕ ದಕ್ಷತೆಯ ಮಾರ್ಗಗಳನ್ನು ಹುಡುಕುವುದು:
• ಪ್ರತಿ ವ್ಯಕ್ತಿಯು ತನ್ನ ಕುಟುಂಬ ಮತ್ತು ರಾಷ್ಟ್ರದ ಬಟ್ಟೆಗಾಗಿ ಆರ್ಥಿಕ ಚಟುವಟಿಕೆಯಲ್ಲಿ ತೊಡಗುವುದು
• ಸರ್ಕಾರದ ಆದಾಯಕ್ಕೆ ಕೊಡುಗೆಯನ್ನು ನೀಡುವುದು ಮತ್ತು ಅದಕ್ಕೆ ಅಭಿವೃದ್ಧಿಪರ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವಲ್ಲಿ ಸಹಾಯ ಮಾಡುವುದು:
• ರಾಷ್ಟ್ರದಲ್ಲಿನ ಸಾಮಾಜಿಕ-ಆರ್ಥಿಕ ಸಮಸ್ಯೆಗಳಾದಂತಹ ಬಡತನ, ನಿರುದ್ಯೋಗ, ಹಣದುಬ್ಬರ, ಮುಂತಾದವುಗಳನ್ನು ತಿಳಿಯಲು ಮತ್ತು ಅವುಗಳಿಗೆ ಪರಿಹಾರವನ್ನು ಒದಗಿಸಲು ಪ್ರಯತ್ನಿಸಲು
• ರಾಷ್ಟ್ರದ ನಿರೀಕ್ಷಿತ ಪ್ರಗತಿ ಮತ್ತು ಅಭಿವೃದ್ಧಿಗೆ ಉತ್ತಮ ನೀತಿಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸಲು ಉತ್ತಮ ಮಾರ್ಗಗಳನ್ನು ಸೂಚಿಸಲು
ಆರ್ಥಶಾಸ್ತ್ರ ಅಧ್ಯಯನವು ಜ್ಞಾನವನ್ನು ಹೆಚ್ಚಿಸುವುದಲ್ಲದೇ ಲಾಭದಾಯಕವ ಆಗಿದೆ.- ಎ ಸಿ ಪೀಗೂ
ಆರ್ಥಿಕ ಚಟುವಟಿಕೆಗಳು
ನಾವು ಪ್ರತಿನಿತ್ಯ ಉಪಯೋಗಿಸುವ ಹಲವಾರು ಸರಕು ಮತ್ತು ಸೇವೆಗಳ ಪೂರೈಕೆಯು ಮಿತವಾಗಿದೆ ಮತ್ತು ಅವುಗಳು ಉಚಿತವಾಗಿ ದೊರೆಯುವುದಿಲ್ಲ. ಅವುಗಳನ್ನು ಕೊಳ್ಳಲು ನಾವು ಹಣವನ್ನು ನೀಡಬೇಕು, ಇಂಥ ಸರಕು ಮತ್ತು ಸೇವೆಗಳನ್ನು ಆರ್ಥಿಕ ಸರಕುಗಳು ಮತ್ತು ಸೇವೆಗಳು ಎನ್ನುತ್ತೇವೆ. ನಾವು ನಮ್ಮ ಕೌಲಭ್ಯವನ್ನು ಮತ್ತು ಶ್ರಮವನ್ನು ಉಪಯೋಗಿಸಿ ಹಣವನ್ನು ಗಳಿಸುತ್ತೇವೆ ಹಾಗೂ ಆ ಹಣದಿಂದ ನಮ್ಮ ಬಯಕೆಗಳನ್ನು ತೃಪ್ತಿ ಪಡಿಸಿಕೊಳ್ಳುತ್ತೇವೆ. ನಮ್ಮ ಬಯಕೆಗಳನ್ನು ತೃಪ್ತಿಪಡಿಸಲು, ಹಣ ಮತ್ತು ಸಂಪತ್ತನ್ನು ಗಳಿಸುವುದಕ್ಕೋಸ್ಕರ ನಾವು ಕೈಗೊಳ್ಳುವ ವಿವಿಧ ಚಟುವಟಿಕೆಗಳನ್ನು ಆರ್ಥಿಕ ಚಟುವಟಿಕೆಗಳು ಎನ್ನುತ್ತೇವೆ.
ಈ ಆರ್ಥಿಕ ಚಟುವಟಿಕೆಗಳನ್ನು ನಾಲ್ಕು ವಿಧಗಳಲ್ಲಿ ವರ್ಗಿಕರಿಸಬಹುದು.
I. ಉತ್ಪಾದನೆ: ಸರಕುಗಳು ಮತ್ತು ಸೇವೆಗಳನ್ನು ಉತ್ಪಾದಿಸುವ ಕಾರ್ಯಗಳು, ಉತ್ಪಾದಕ ಚಟುವಟಿಕೆಗಳು, ಉದಾ: ಕೃಷಿ, ಪರುಸಂಗೋಪನೆ, ಮೀನುಗಾರಿಕೆ, ಗಣಿಗಾರಿಕೆ, ಅರಣ್ಯ ಅಭಿವೃದ್ಧಿ, ವಿವಿಧ ಪ್ರಕಾರದ ಕೈಗಾರಿಕೆಗಳು, ಸಾರಿಗೆ, ಸಂಪರ್ಕ, ಇತ್ಯಾದಿ,
II. ಅನುಭೋಗ: ಸರಕುಗಳನ್ನು ಮತ್ತು ಸೇವೆಗಳನ್ನು ಉತ್ಪಾದಿಸುವುದು ಮಾನವರ ಅನುಭೋಗದ ಸಲುವಾಗಿ, ಮಾನವನು ತನ್ನ ಬಯಕೆಗಳನ್ನು ತೃಪ್ತಿಪಡಿಸಲು ಸರಕುಗಳನ್ನು ಮತ್ತು ಸೇವೆಗಳನ್ನು ಕೊಳ್ಳುತ್ತಾನೆ. ಈ ಎಲ್ಲ ಚಟುವಟಿಕೆಗಳನ್ನು ಅನುಭೋಗ ಚಟುವಟಿಕೆಗಳು ಎಂದು ಕರೆಯಲಾಗುತ್ತದೆ.
III. ವಿನಿಮಯ: ಉತ್ಪಾದಕರು ಉತ್ಪಾದಿಸಿದ ಸರಕು ಮತ್ತು ಸೇವೆಗಳನ್ನು ಅನುಭೋಗಿಗಳಿಗೆ ತಲುಪಿಸಲು ಮಾರುಕಟ್ಟೆ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯಲ್ಲಿ ಸರಬಗಳ ಸಂಗ್ರಹ, ಸಾರಿಗೆ, ಮಾ ಕಿ ಮತ್ತು ಕೊಳ್ಳುವಿಕೆ ಕಾರ್ಯಗಳು ಇರುತ್ತವೆ.
IV. ಹಂಚಿಕೆ : ಸರಕುಗಳ ಮತ್ತು ಸೇವೆಗಳ ಉತ್ಪಾದನೆಯಿಂದ ಪಡೆದ ಆದಾಯವನ್ನು ಉತ್ಪಾದನೆಗೆ ಸಹಕಾರ ನೀಡಿದ ಉತ್ಪಾದನಾಂಗಗಳಿಗೆ (ಭೂಮಿ, ಶ್ರಮ, ಬಂಡವಾಳ ಮತ್ತು ಉದ್ಯಮಶೀಲತೆ ಅಥವಾ ಸಂಘಟನೆ) ಹಂಚಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಉತ್ಪಾದನಾಂಗಗಳ ಬೆಲೆಗಳನ್ನು ನಿರ್ಧರಿಸುವ ಕಾರ್ಯಗಳನ್ನು ಒಳಗೊಂಡಿರುತ್ತದೆ. ಸೃಷ್ಟಿಯಾದ ಆದಾಯವನ್ನು ಎಲ್ಲ ಉತ್ಪಾದನಾಂಗಗಳಿಗೆ ಯೋಗ್ಯ ರೀತಿಯಲ್ಲಿ ಹಂಚಲು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಕೆಲವೊಮ್ಮೆ ಹಲವಾರು ಚಟುವಟಿಕೆಗಳು ಆರ್ಥಿಕವಲ್ಲದಿದ್ದರೂ ನಂತರದಲ್ಲಿ ಅವುಗಳು ಆರ್ಥಿಕ ಚಟುವಟಿಕೆಗಳು ಆಗಬಹುದು. ಉದಾಹರಣೆಗೆ: ಒಬ್ಬ ಅಕ್ಷರ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಉಚಿತ ಪಾಠ ನೀಡಿದರೆ ಅದು ಆರ್ಥಿಕ ಚಟುವಟಿಕೆ ಎನಿಸುವುದಿಲ್ಲ. ಆದರೆ, ಅದೇ ಶಿಕ್ಷಕ ಪಾಠ ಹೇಳಲು ಶುಲ್ಕವನ್ನು ವಿಧಿಸಿದರೆ ಅದು ಆರ್ಥಿಕ ಚಟುವಟಿ ಎನಿಸುತ್ತದೆ.
ಸೂಕ್ಷ್ಮ ಮತ್ತು ವಿಶಾಲಾತ್ಮಕ ಅರ್ಥಶಾಸ್ತ್ರ
ಅರ್ಥಶಾಸವ ಮಾನವನ ಆರ್ಥಿಕ ಚಟುವಟಿಕೆಗಳನ್ನು ಅಧ್ಯಯನ ಮಾಡುವುದರಿಂದ ಅದು ಬಹಳ ವಿಶಾಲವಾದ ವಿಷಯವಾಗಿದೆ, ಆದುದರಿಂದ, ವಿವಿಧ ಆರ್ಥಿಕ ಚಟುವಟಿಕೆಗಳನ್ನು ಅಧ್ಯಯನ ಮಾಡಲು, ಅದನ್ನು ಸೂಕ್ಷ್ಮ ಅರ್ಥಶಾಸ್ತ್ರ (ಮೈಕ್ರೋ)’ ಮತ್ತು ‘ವಿಶಾಲಾತ್ಮಕ ಅರ್ಥಶಾಸ್ತ್ರ (ಮ್ಯಾಕ್ರೋ)’ ಎಂದು ಎರಡು ವಿಭಾಗಗಳಾಗಿ ಬಿಂಗಡಿಸಲಾಗಿದೆ.
ಸೂಕ್ಷ್ಮ ಅರ್ಥಶಾಸ್ತ್ರ ಸೂಕ್ಷ್ಮ (ಮೈಕೋ) ಎಂದರೆ ಅತ್ಯಂತ ಚಿಕ್ಕದು ಎಂದಾಗುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರವು ಅತ್ಯಂತ ಚಿಕ್ಕ ಘಟಕಗಳ ಆರ್ಥಿಕ ಚಟುವಟಿಕೆಗಳ ಅಧ್ಯಯನವನ್ನು ಮಾಡುತ್ತದೆ. ನೀವು ಮೊದಲು ಕಲಿತಂತೆ, ಅರ್ಥಶಾಸ್ತ್ರವು ಸರಕುಗಳನ್ನು ಮತ್ತು ಸೇವೆಗಳನ್ನು ಉಪಯೋಗಿಸುವ ಕುರಿತಾದ ನಿರ್ಣಯಗಳನ್ನು ಕೈಗೊಳ್ಳುವುದನ್ನು ಒಳಗೊಂಡಿದೆ. ಸಮಾಜದ ಅತಿ ಚಿಕ್ಕ ಘಟಕಗಳಾದಂತಹ ವ್ಯಕ್ತಿಗಳು, ಕುಟುಂಬಗಳು ಮತ್ತು ವ್ಯವಹಾರ ಸಂಸ್ಥೆಗಳ ಸಂಪನ್ಮೂಲಗಳ ಉಪಯೋಗದ ನಿರ್ಧಾರ ಕೈಗೊಳ್ಳುವಿಕೆಯ ಅಧ್ಯಯನವನ್ನು ಸೂಕ್ಷ್ಮ ಅರ್ಥಶಾಸ್ತ್ರ ಮಾಡುತ್ತದೆ. ಅಂತಹ ಕೆಲವು ನಿರ್ಧಾರಗಳೆಂದರೆ –
(1) ನಿಮ್ಮ ಬಯಕೆಗಳನ್ನು ತೃಪ್ತಿ ಪಡಿಸಲು ನೀವು ವಿವಿಧ ಸರಕುಗಳನ್ನು ಮತ್ತು ಸೇವೆಗಳನ್ನು ಖರೀದಿಸಬೇಕಾಗುತ್ತದೆ. ಯಾವ ಬಯಕೆಯನ್ನು ನೀವು ತೃಪ್ತಿ ಪಡಿಸುವಿರಿ? ನಿರ್ದಿಷ್ಟ ಸರಕು ಅಥವಾ ಸೇವೆಯನ್ನು ಪಡೆಯಲು ಎಷ್ಟು ಬೆಲೆಯನ್ನು ನೀವು ಕೊಡಲು ಇಚ್ಛಿಸುತ್ತೀರಿ? ನೀವು ಎಷ್ಟು ಘಂಟೆಗಳ ಅವಧಿಗೆ ಮತ್ತು ಎಲ್ಲಿ ಕೆಲಸ ಮಾಡಲು ಸಿದ್ಧರಿರುವಿರಿ? ಇತ್ಯಾದಿಗಳ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಒಬ್ಬ ವ್ಯಕ್ತಿಯು ಅನುಭೋಗದಿಂದ ಗರಿಷ್ಠ ತೃಪ್ತಿ ಪಡೆಯಲು ಈ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
(2) ಒಂದು ಉದ್ಯಮ ಸಂಸ್ಥೆಯು ಸರಕುಗಳನ್ನು ಮತ್ತು ಸೇವೆಗಳನ್ನು ಉತ್ಪಾದಿಸುವ ಒಂದು ಉತ್ಪಾದನಾ ಘಟಕವಾಗಿದ್ದು, ಅವು ಉತ್ಪಾದನೆಯ ಪ್ರಮಾಣವನ್ನು ಮತ್ತು ಸರಕು ಅಥವಾ ಸೇವೆಯನ್ನು ಮಾರಾಟ ಮಾಡಲು ಬೆಲೆಯನ್ನು ನಿರ್ಧರಿಸಬೇಕಾಗುತ್ತದೆ. ಕನಿಷ್ಠ ವೆಚ್ಚದಲ್ಲಿ ಉತ್ಪಾದನೆಯನ್ನು ಮಾಡಲು ಉತ್ಪಾದನಾಂಗಗಳ ಮಿಶ್ರಣವನ್ನು ಅದು ನಿರ್ಧರಿಸಬೇಕಾಗುತ್ತದೆ.
(3) ಮಾರುಕಟ್ಟೆಯಲ್ಲಿ ಬೆಲೆಯು ಕೊಳ್ಳುವವರ ಮತ್ತು ಮಾರುವವರ ಪರಸರ ಸಂಬಂಧದಿಂದ ನಿರ್ಧಾರವಾಗುತ್ತದೆ. ಅವರು ಹೇಗೆ ಪರಸ್ಪರ ವ್ಯವಹರಿಸುತ್ತಾರೆ? ಯಾವ ಆಧಾರದ ಮೇಲೆ ಪರಸ್ಪರ ಒಪ್ಪಿಗೆಯಾಗುವ ಬೆಲೆಯನ್ನು ನಿರ್ಧರಿಸುತ್ತಾರೆ? ಎಂಬುದು ಕೂಡ ಸೂಕ್ಷ್ಮ ಅರ್ಥಶಾಸ್ತ್ರದ ವಿಷಯ ವಸ್ತುವಾಗಿದೆ.
ವಿಸಾಲಾತ್ಮಕ ಅರ್ಥಶಾಸ್ತ್ರ : ವಿಶಾಲಾತ್ಮಕ (ಮ್ಯಾಕೋ) ಎಂಬುದು ಒಟ್ಟು ದೊಡ್ಡದು ಎಂದರ್ಥವಾಗುತ್ತಿದೆ. ವ್ಯಕ್ತಿಗೆ ಹೋಲಿಸಿದಾಗ ಸಮಾಜ ಅಥವಾ ರಾಷ್ಟ್ರ ಅಥವಾ ಅರ್ಥ ವ್ಯವಸ್ಥೆಯು ಅತ್ಯಂತ ಬೃಹತ್ತಾದುದು, ಕೆಲವು ನಿರ್ಧಾರಗಳನ್ನು ಅರ್ಥವ್ಯವಸ್ಥೆಯ ಸಮಗ್ರ ಮಟ್ಟದಲ್ಲಿ ಕೈಗೊಳ್ಳಬೇಕಾಗುತ್ತದೆ. ಇಡೀ ಆರ್ಥಿಕ ವ್ಯವಸ್ಥೆಯ ಮಟ್ಟದಲ್ಲಿ ತೆಗೆದುಕೊಂಡ ಆರ್ಥಿಕ ನಿರ್ವಾರಗಳು ವಿಲಾರಾತ್ಮಕ ಅರ್ಥಶಾಸ್ತ್ರದ ವಿಷಯ ವಸ್ತುವಾಗಿವೆ. ಇಡೀ ಆರ್ಥಿಕ ವ್ಯವಸ್ಥೆಯ ಮೇಲೆ ಪ್ರಭಾವ ಉಂಟು ಮಾಡುವಂತಹ ಆರ್ಥಿಕ ನಿರ್ಧಾರಗಳಾದಂತಹ ತೆರಿಗೆಗಳ ಸಂಗ್ರಹ, ಸಾರ್ವಜನಿಕ ಸರಕುಗಳು ಹಾಗೂ ಕಲ್ಯಾಣ ಪರ ಚಟುವಟಿಕೆಗಳ ಮೇಲಿನ ವೆಚ್ಚ ಹಣದುಬ್ಬರದ ನಿಯಂತ್ರಣ, ಆರ್ಥಿಕ ಪ್ರಗತಿಗೆ ಉತ್ತೇಜನ, ಇತ್ಯಾದಿಗಳು ವಿಶಾಲಾತ್ಮಕ ಅರ್ಥ ಶಾಸ್ತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಸಾಮಾನ್ಯವಾಗಿ ಅಂತಹ ನಿರ್ಧಾರಗಳನ್ನು ಸರ್ಕಾರವು ತೆಗೆದುಕೊಳ್ಳುತ್ತದೆ.
ಸೂಕ್ಷ್ಮ ಅರ್ಥಶಾಸ್ತ್ರವು ಒಬ್ಬ ಕೊಳ್ಳುವವ ಮತ್ತು ಮಾಡುವವನಾಗಿ ಒಬ್ಬ ವ್ಯಕ್ತಿಯ ನಡುವಳಿಕೆಗೆ ಸಂಬಂಧಿಸಿದುದು ಆಗಿದೆ. ಒಟ್ಟು ಕೊಳ್ಳುವವನಾಗಿ ವ್ಯಕ್ತಿಯು ಸರಕುಗಳು ಮತ್ತು ಸೇವೆಗಳ ಮೇಲೆ ಮಾಡುವ ವೆಚ್ಚವು ಆತನ/ಅವಳ ಅನುಭೋಗದ ವೆಚ್ಚವಾಗಿರುತ್ತದೆ. ಎಲ್ಲ ವ್ಯಕ್ತಿಗಳ ಅನುಭೋಗ ವೆಚ್ಚವನ್ನು ಒಟ್ಟುಗೂಡಿಸಿದಾಗ ನಮಗೆ ಒಟ್ಟು ಆನುಭೋಗಿ ಬಟ್ಟೆ ದೊರಕುತ್ತದೆ. ಅದೇ ರೀತಿ ಎಲ್ಲ ವ್ಯಕ್ತಿಗಳ ಆದಾಯವನ್ನು ಒಬ್ಬಗೂಡಿಸಿದಾಗ ನಮಗೆ ಒಟ್ಟು ಆದಾಯ ಅಥವಾ ರಾಷ್ಟ್ರೀಯ ಆದಾಯ ದೊರಕುತ್ತದೆ. ಈ ಸಮಗ್ರ ಅಂಶಗಳ -ರಾಷ್ಟ್ರೀಯ ಆದಾಯ, ರಾಷ್ಟ್ರದ ಒಟ್ಟು ಅನುಭೋಗಿ ವೆಚ್ಚ ಇತ್ಯಾದಿಗಳು ವಿಶಾಲಾತ್ಮಕ ಅರ್ಥಶಾಸ್ತ್ರದಲ್ಲಿ ಬರುತ್ತವೆ. ಹಣದುಬ್ಬರ ಅಥವಾ ಬೆಲೆ ಹೆಚ್ಚಳವು ಏಶಾಲಾತ್ಮಕ ಅರ್ಥಶಾಸ್ತ್ರದ ಮತ್ತೊಂದು ಅಂಗವಾಗಿದೆ. ಆದರ ಕಾರಣ, ಪರಿಣಾಮಗಳು ಮತ್ತು ಅದನ್ನು ನಿಯಂತ್ರಿಸುವ ಸಾಧನಗಳನ್ನು ವಿಶಾಲಾತ್ಮಕ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತದೆ. ಅದೇ ರೀತಿ ನಿರುದ್ಯೋಗ, ಆರ್ಥಿಕ ದಳವಣಿಗೆ ಮತ್ತು ಅಭಿವೃದ್ಧಿ, ಇತ್ಯಾದಿಗಳು ಇಡೀ ರಾಷ್ಟ್ರವನ್ನು ರ್ಪಮಿಸುವುದರಿಂದ ಅವು ಕೂಡ ವಿಶಾಲಾತ್ಮಕ ಆರ್ಥಶಾಸದ ಭಾಗವಾಗಿದೆ. ಆದಾಗ್ಯೂ ಎರಡೂ ವಿಭಾಗಗಳು ಮಹತ್ವವಾಗಿವೆ.
ನಿಮಗಿದು ತಿಳಿದಿರಲಿ,
ಸೂಕ್ಷ್ಮ ಅರ್ಥಶಾಸ್ತ್ರವು ಆರಣ್ಯದಲ್ಲಿನ ಒಂದು ಮರದ ಅಧ್ಯಯನ ಮಾಡಿದರೆ ವಿಶಾಲಾಕ್ಷರ ಅರ್ಥಶಾಸವು ಇಡೀ ಆರಣ್ಯದ ಕುರಿತು ಅಧ್ಯಯನ ಮಾಡುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರವು ಆರ್ಥಿಕ ವ್ಯವಸ್ಥೆಯ ಕ್ರಿಮಿಯ ನೋಟವನ್ನು ಒದಗಿಸಿದರೆ ವಿಹಾರಾತ್ಮಕ ಅರ್ಥಉಳ್ಳವು ಆರ್ಥಿಕ ವ್ಯವಸ್ಥೆಯ ಪಕ್ಷಿ ನೋಟವನ್ನು ಒದಗಿಸುತ್ತದೆ.
ಮೂಲ ಆರ್ಥಿಕ ಸಮಸ್ಯೆಗಳು
ಅರ್ಥಶಾಸ್ತ್ರದಲ್ಲಿ ಸಮಸ್ಯೆಗಳು ಸಂಪನ್ಮೂಲಗಳ ಕೊರತೆಯಿಂದ ಉಂಟಾಗುತ್ತವೆ ಹಾಗೂ ಅವು ಸೂಕ್ತ ರೀತಿಯ ಆಯ್ಕೆಗಳನ್ನು ಮಾಡಲು ಒತ್ತಡ ನೀಡುತ್ತವೆ. ಇದು ಸೂಕ್ಷ್ಮ ಮತ್ತು ವಿಶಾಲಾತ್ಮಕ ಮಟ್ಟದ ಎರಡರಲ್ಲೂ ಇರುತ್ತದೆ. ಈ ನಿಟ್ಟಿನಲ್ಲಿ, ಅರ್ಥಶಾಸ್ತ್ರವು ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ಪ್ರಯತ್ನಿಸುತ್ತದೆ.
1. ಏನನ್ನು ಉತ್ಪಾದಿಸಬೇಕು’ ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜವು ಯಾವ ಸರಕುಗಳನ್ನು ಮತ್ತು ಸೇವೆಗಳನ್ನು ಉತ್ಪಾದಿಸಬೇಕು ಎಂಬುದನ್ನು i೯ಯಿಸಬೇಕಾಗುತ್ತದೆ. ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳು ಅಥವಾ ಶಸ್ತ್ರಾಸ್ತ್ರಗಳೋ? ಕೃಷಿ ಸರಕುಗಳೋ ಅಥವಾ ಕೈಗಾರಿಕಾ ಸರಕುಗಳೋ? ಶಿಕ್ಷಣವೋ ಅಥವಾ ಆರೋಗವೋ ಅನುಭೋಗಿ ಸರಕುಗಳನ್ನು ಉತ್ಪಾದಿಸಬೇಕಾ ಅಥವಾ ಯಂತ್ರೋಪಕರಣಗಳನ್ನು ಉತ್ಪಾದಿಸಬೇಕಾಗಿ ಸರುಗಳ ಉತ್ಪಾದನೆಯ ಎಧ ಮತ್ತು ಪ್ರಮಾಣವು ಒಂದು ಕಡೆ ಸಂಪನ್ಮೂಲಗಳ ಲಭ್ಯತೆ ಮತ್ತು ಇನ್ನೊಂದು ಕಡೆ ಜನರ ಅವಶ್ಯಕತೆಗಳ ಮೇಲೆ ಅವಲಂಬಿತವಾಗಿದೆ.
2. ಹೇಗೆ ಉತ್ಪಾದಿಸಬೇಕು? ನಿರ್ಧರಿತ ಸರಕನ್ನು ಉತ್ಪಾದಿಸಲು ಹಲವಾರು ಮಾರ್ಗಗಳಿವೆ. ನಿಶ್ಚಿತ ಪ್ರಮಾಣದ ಸರಕು ಅಥವಾ ಸೇವೆಯನ್ನು ಉತ್ಪಾದಿಸಲು ಉತ್ಪಾದನಾಂಗಗಳ ಮತ್ತು ಸಂಪನ್ಮೂಲಗಳ ವಿವಿಧ ಸಂಯೋಜನೆಗಳನ್ನು ಬಳಸಬಹುದು, ಇದನ್ನು ಉತ್ಪಾದನ ತಂತ್ರಜ್ಞಾನ ಎನ್ನುತ್ತಾರೆ. ಶ್ರಮದ ಹೆಚ್ಚಿನ ಬಳಕೆಯ ತಂತ್ರಜ್ಞಾನ ಅಥವ (ಶ್ರಮ ಸಾಂದ್ರ ತಂತ್ರಜ್ಞಾನ) ಅಥವಾ ಬಂಡವಾಳದ ಹೆಚ್ಚಿನ ಬಳಕೆಯ ತಂತ್ರಜ್ಞಾನ (ಬಂಡವಾಳ ಸಾಂದ್ರ ತಂತ್ರಜ್ಞಾನ) ಗಳಲ್ಲಿ ಯಾವುದನ್ನು ಉಪಯೋಗಿಸಬೇಕು ಎನ್ನುವುದನ್ನು ಸಮಾಜವು ನಿರ್ಧರಿಸಬೇಕಾಗುತ್ತದೆ. ಇದು ಕನಿಷ್ಠ ಉತ್ಪಾದನಾ ವೆಚ್ಚಕ್ಕೆ ಮತ್ತು ಅಸ್ತಿತ್ವದಲ್ಲಿರುವ ಆತ್ಮವಶವಾಗಿದೆ. ಸಂಪನ್ಮೂಲಗಳ ದಕ್ಷ ಉಪಯೋಗಕ್ಕೆ
3. ಯಾರಿಗಾಗಿ ಉತ್ಪಾದಿಸಬೇಕು? ಉತ್ಪಾದಿಸಿದ ಸರಕುಗಳನ್ನು ಯಾರು ಪಡೆಯುತ್ತಾರೆ ಮತ್ತು ಯಾವ ಪ್ರಮಾಣದಲ್ಲಿ ಪಡೆಯುತ್ತಾರೆ. ಇದು ಹಂಚಿಕೆಗೆ ಸಂಬಂಧಪಟ್ಟ ವಿಷಯವಾಗಿದ್ದು ಪ್ರತಿ ವ್ಯಕ್ತಿಯು ಕನಿಷ್ಠ ಪ್ರಮಾಣದ ಸರಕುಗಳನ್ನು ಮತ್ತು ಸೇವೆಗಳನ್ನು ಪಡೆಯುವಂತಿರಬೇಕು. ಉದಾಹರಣೆಗೆ: ಅಪಾರ ಲಭ್ಯತೆ, ಮೂಲ ಶಿಕ್ಷಣ ಅಥವಾ ಪಾಥಮಿಕ ಆರೋಗ್ಯ ಮುಂತಾದವುಗಳು, ಆದುದರಿಂದ ಪ್ರತಿ ಸಮಾಜವೆ ವಿವಿಧ ಕೊರತೆಯಲ್ಲಿರುವ ಸಂಪನ್ಮೂಲಗಳನ್ನು ಮತ್ತು ಸರಕುಗಳು ಹಾಗೂ ಸೇವೆಗಳನ್ನು ಜನರ ಬಳಕೆಗಾಗಿ ಹಂಚಿಕೆ ಮಾಡುವುದನ್ನು ನಿರ್ಣಯಿಸಬೇಕಾಗುತ್ತದೆ.
ಆದುದರಿಂದ, ಅರ್ಥಶಾಸ್ತ್ರ ಅಧ್ಯಯನವು ಸಂಪನ್ಮೂಲಗಳ ಪ್ರಕಲಿತ ಉಪಯೋಗ ಮತ್ತು ಭವಿಷ್ಯದಲ್ಲಿ ಅವುಗಳ ದಕ್ಷ ಉಪಯೋಗಕ್ಕೆ ಯೋಜನೆ ತಯಾರಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಅರ್ಥಶಾಸ್ತ್ರಜ್ಞರು ಸರ್ಕಾರಕ್ಕೆ ಈ ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುತ್ತಾರೆ. ಈ ಮೂಲಕ ವ್ಯಕ್ತಿಗಳ ಮತ್ತು ರಾಜ್ಯದ ಯೋಗಕ್ಷೇಮವನ್ನು ಸುಧಾರಿಸಬಹುದಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ