ಅರ್ಥ ವ್ಯವಸ್ಥೆಯ ಆರ್ಥ

 ಅರ್ಥ ವ್ಯವಸ್ಥೆಯು ಸಮಾಜದಲ್ಲಿನ ಆರ್ಥಿಕ ಚಟುವಟಿಕೆಗಳ ಸಂಘಟನೆಯ ಸ್ವರೂಪವನ್ನು ತೋರಿಸುತ್ತದೆ. ನೀವು ಕಲಿತಿರುವಂತೆ, ಲಭ್ಯವಿರುವ ಕೊರತೆಯ ಸಂಪನ್ಮೂಲಗಳ ಚೌಕಟ್ಟಿನಲ್ಲಿ ಸರಕು ಸೇವೆಗಳನ್ನು ಖರೀದಿಸಿ ಬಯಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ, ಆದಾಯ ಹೊಂದಲು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತೀರಿ. ಅರ್ಥವ್ಯವಸ್ಥೆಯಲ್ಲಿ ಜನರು ತೊಡಗಿಕೊಂಡ ಆರ್ಥಿಕ ಚಟುವಟಿಕೆಗಳ ಸ್ವರೂಪ ಮತ್ತು ಮಟ್ಟದ ಆಧಾರದ ಮೇಲೆ, ಅವರ ಆದಾಯವು ಭಿನ್ನವಾಗಿರುತ್ತದೆ. ಕೆಲವು ಚಟುವಟಿಕೆಗಳಲ್ಲಿ (ಉದಾ: ತಂತ್ರಾಂಶ (ಸಾಫ್ಟ್‌ವೇರ್‌) ಅಭಿವೃದ್ಧಿ) ಆದಾಯವು ಅಧಿಕವಾಗಿರುತ್ತದೆ. ಅಲ್ಲದೇ ಮತ್ತು ತೀವ್ರವಾಗಿ ಹೆಚ್ಚಳವಾದರೆ ಕೃಷಿಯಂಥ ಚಟುವಟಿಕೆಗಳಲ್ಲಿ ಆದಾಯವು ಕಡಿಮೆ ಇದ್ದು ಮಂದಗತಿಯಲ್ಲಿ ಹೆಚ್ಚಾಗುತ್ತದೆ. ಆದುದರಿಂದ, ರಾಷ್ಟ್ರಗಳಲ್ಲಿ ಇರುವ ಚಟುವಟಿಕೆಗಳ ದೆಶೆಯಿಂದಾಗಿ, ಅವು ಹೆಚ್ಚಿನ ಆದಾಯ ಹೊಂದಿ ವೇಗವಾಗಿ ಅಥವಾ ಕಡಿಮೆ ಆದಾಯ ಹೊಂದಿ ನಿಧಾನವಾಗಿ ಬೆಳೆಯುತ್ತವೆ. ವೇಗವಾಗಿ ಬೆಳೆಯುತ್ತಿರುವ ಚಟುವಟಿಕೆಗಳನ್ನು ಹೊಂದಿರುವ ಅರ್ಥವ್ಯವಸ್ಥೆಗಳು ಉಳಿದ ರಾಷ್ಟ್ರಗಳಿಗಿಂತ ವೇಗವಾಗಿ ಬೆಳೆದು ಅಭಿವೃದ್ಧಿಯನ್ನು ಹೊಂದುತ್ತವೆ. ಸಂಪನ್ಮೂಲಗಳ ಒಡೆತನದ ಆಧಾರದ ಮೇಲೆಯೂ ಅರ್ಥವ್ಯವಸ್ಥೆಗಳನ್ನು ವಿಂಗಡಿಸಲಾಗುತ್ತದೆ. ಸಂಪನ್ಮೂಲಗಳು ಖಾಸಗಿ ಒಡೆತನ ಅಥವಾ ಸಾಮೂಹಿಕ ಒಡೆತನದಲ್ಲಿ ಇರಬಹುದು. ಅರ್ಥವ್ಯವಸ್ಥೆಗಳನ್ನು ಆಡಳಿತಾತ್ಮಕ ಘಟಕಗಳ ಆಧಾರದ ಮೇಲೆಯೂ ವಿಂಗಡಿಸಲಾಗುತ್ತದೆ. ಅಂದರೆ ಗ್ರಾಮ ಅರ್ಥವ್ಯವಸ್ಥೆ, ಜಿಲ್ಲಾ ಅರ್ಥವ್ಯವಸ್ಥೆ, ರಾಜ್ಯ ಅರ್ಥವ್ಯವಸ್ಥೆ (ಉದಾ: ಕರ್ನಾಟಕ) ಮತ್ತು ರಾಷ್ಟ್ರ ಅರ್ಥವ್ಯವಸ್ಥೆ (ಉದಾ: ಭಾರತ)ಗಳು ಇದ್ದು ಅವು ವಿವಿಧ ಮಟ್ಟದ ಅಭಿವೃದ್ಧಿ ಹೊಂದಿರಬಹುದಾಗಿದೆ. ಆದುದರಿಂದ ಅರ್ಥವ್ಯವಸ್ಥೆಯನ್ನು ಮತ್ತು ಅದರ ಅಭಿವೃದ್ಧಿ ಮಟ್ಟವನ್ನು ವೀಕ್ಷಿಸಲು ಹಲವಾರು ಮಾರ್ಗಗಳಿವೆ.

ಅರ್ಥ : ಮಾನವನ ಬಯಕೆಗಳನ್ನು ಈಡೇರಿಸಲು ರಚಿಸಿದ ಮಾನವ ನಿರ್ಮಿತ ಒಂದು ಸಂಘಟನೆ ಎಂದು ಅರ್ಥವ್ಯವಸ್ಥೆಯನ್ನು ವಿವರಿಸಬಹುದು. ಎ.ಜೆ.ಬ್ರೌನ್‌ರವರ ಪ್ರಕಾರ ಜನರಿಗೆ ಜೀವನೋಪಾಯ ಅವಕಾಶಗಳನ್ನು ದೊರಕಿಸಲು ನಿರ್ಮಿಸಿದ ವ್ಯವಸ್ಥೆಯು ಅರ್ಥವ್ಯವಸ್ಥೆಯಾಗಿದೆ. ಜೀವನೋಪಾಯ ಗಳಿಸಲು ವ್ಯಕ್ತಿಯು ವಿವಿಧ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ ಎಂಬುದನ್ನು ನೀವು ಗಮನಿಸಿರಬಹುದು. ಇದು ಸ್ಥಳದಿಂದ ಸ್ಥಳಕ್ಕೆ ಮತ್ತು ಸಮಯದಿಂದ ಸಮಯಕ್ಕೆ ಭಿನ್ನವಾಗಿರುತ್ತದೆ. ಪುರಾತನ ದಿನಗಳಲ್ಲಿ ಜೀವನೋಪಾಯದ ಮೂಲಗಳು ಸರಳವಾಗಿದ್ದವು. ನಾಗರಿಕತೆ ಬೆಳೆದಂತೆ ಅವು ಸಂಕೀರ್ಣವಾಗುತ್ತ ಸಾಗಿರುವುದನ್ನು ಗಮನಿಸಬಹುದು. ಮುಖ್ಯವಾಗಿ, ವ್ಯಕ್ತಿಯ ಜೀವನೋಪಾಯದ ಗಳಿಕೆಯು ನ್ಯಾಯಸಮ್ಮತ ಮತ್ತು ಕಾನೂನು ರೀತಿಯಲ್ಲಿ ಇರಬೇಕು. ಕಾನೂನುಬಾಹಿರವಾದ ಅಂದರೆ ದರೋಡೆ, ಅಕ್ರಮ ಕಳ್ಳಸಾಗಣೆಗಳಿಂದ ಸ್ವಂತಕ್ಕಾಗಿ ಆದಾಯ ಗಳಿಕೆಯಾದರೂ ಸಾಮಾಜಿಕವಾಗಿ ಹಾನಿಕಾರಕವಾಗಿರುವುದರಿಂದ ಅವುಗಳನ್ನು ಆರ್ಥಿಕ ಚಟುವಟಿಕೆಗಳು ಎಂದು ಪರಿಗಣಿಸುವುದಿಲ್ಲ, ಆದ್ದರಿಂದ, ವ್ಯಕ್ತಿಯ ಮತ್ತು ಸಮಾಜದ ಯೋಗಕ್ಷೇಮವನ್ನು ಹೆಚ್ಚಿಸುವ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲಾಗುವ ಆರ್ಥಿಕ ಸಂಸ್ಥೆಗಳ ಚೌಕಟ್ಟನ್ನು ಅರ್ಥವ್ಯವಸ್ಥೆ ಎಂದು ವ್ಯಾಖ್ಯಾನಿಸಬಹುದು. 

ಅರ್ಥವ್ಯವಸ್ಥೆಯು ಲಕ್ಷಣಗಳು

1. ಒಂದು ಅರ್ಥವ್ಯವಸ್ಥೆಯ ವ್ಯಕ್ತಿಗಳು, ಆರ್ಥಿಕ ಸಂಸ್ಥೆಗಳು ಮತ್ತು ಸರ್ಕಾರ ಹಾಗೂ ಅವುಗಳ ಪರಸ್ಪರ ಸಂಬಂಧಗಳನ್ನು ಒಳಗೊಂಡಿರುತ್ತದೆ.

2. ಒಂದು ಅರ್ಥ ವ್ಯವಸ್ಥೆಯು ಕ್ರಿಯಾಶೀಲತೆ ಹೊಂದಿದ್ದು ನಿರಂತರವಾಗಿ ಬದಲಾಗುತ್ತಿರುತ್ತದೆ, ಆರ್ಥಿಕ ಸಂಸ್ಥೆಗಳು ನಿರಂತರವಾಗಿ ರಚನೆಗೊಳ್ಳುತ್ತವೆ, ನಾಶವಾಗುತ್ತವೆ ಮತ್ತು ಬದಲಾಗುತ್ತವೆ. ಉದಾಹರಣೆಗೆ, 1950ರಲ್ಲಿ ಭಾರತದ ಅಭಿವೃದ್ಧಿಗೆ ಸಾಮಾಜಿಕ-ಆರ್ಥಿಕ ಯೋಜನೆಗಳನ್ನು ರೂಪಿಸಲು ಯೋಜನಾ ಆಯೋಗವನ್ನು ರಚಿಸಲಾಯಿತು ಆದರೆ, 2015ರಲ್ಲಿ ೫೬ ಆಯೋಗ ಅದರ ಸ್ಥಾನದಲ್ಲಿ ಸ್ಥಾಪಿತವಾಯಿತು. ಅದರಂತೆ, 1917ರಲ್ಲಿ ಸಾಮ್ರಾಜ್ಯಶಾಹಿ (ಕಮ್ಯುನಿಸಂ) ಅರ್ಥವ್ಯವಸ್ಥೆ ಅಳವಡಿಕೆಯಾಗಿ 1990ರಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆಯಿ ಮೊದಲು, ಸಾಟಿ ವಿನಿಮಯ ಈ ಬದಲಾಯಿಸಲ್ಪಟ್ಟಿತು. ಪದ್ರಯು ಹಾಲ್ತಿಯಲ್ಲಿತ್ತು, ಆದರೆ ಇಂದು ಹಣವಿಲ್ಲದೇ ಯಾವ ವ್ಯವಹಾರವೂ ಜರುಗುವುದಲ್ಲ

3. ಉತ್ಪಾದನೆ, ಅನುಭೋಗ ಮತ್ತು ಹೂಡಿಕೆಗಳು ೯ವ್ಯವಸ್ಥೆಯ ಅತ್ಯಂತ ಪ್ರಮುಖ ಚಟುವಟಿಕೆಗಳಾಗಿವೆ.

4. ವಿವಿಧ ಅರ್ಥವ್ಯವಸ್ಥೆಗಳಲ್ಲಿ ಆರ್ಥಿಕ ಚಟುವಟಿಕೆಗಳು ನಿರಂತರ ಬದಲಾವಣೆ ಹೊಂದುತ್ತಿರುತ್ತವೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕಡಿಮೆ ಆದಾಯವನ್ನು ಒದಗಿಸುವ ಪ್ರಾಥಮಿಕ (ಸಂಪನ್ಮೂಲ ಅಧಾರಿತ) ಚಟುವಟಿಕೆಗಳು ಪ್ರಮುಖವಾಗಿ ಕಂಡುಬರುತ್ತವೆ. ಆದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಧಿಕ ಆದಾಯವನ್ನು ಒದಗಿಸುವ ದ್ವಿತೀಯ ಮತ್ತು ತೃತೀಯ (ಉತ್ಪಾದನೆ ಮತ್ತು ಸೇವೆ ಆಧಾರಿತ) ಪಲಯದ ಚಟುವಟಿಕೆಗಳು ಪ್ರಮುಖವಾಗಿರುತ್ತವೆ. ಅದರಂತೆ, ಉತ್ಪಾದನಾ ತಂತ್ರಜ್ಞಾನವು ಕೂಡ ಬದಲಾಗುತ್ತಿರುತ್ತದೆ.

5. ವ್ಯಕ್ತಿಗಳು ಉತ್ಪಾದಕರು ಮತ್ತು ಅನುಭೋಗಿಗಳೆರಡೂ ಆಗಿರುತ್ತಾರೆ. ಉತ್ಪಾದಕರಾಗಿ ಅವರು ಸರಕುಗಳನ್ನು ಮತ್ತು ಸೇವೆಗಳನ್ನು ಉತ್ಪಾದಿಸುತ್ತಾರೆ ಮತ್ತು ಅನುಭೋಗಿಗಳಾಗಿ ಅವುಗಳನ್ನು ಸೇವಿಸುತ್ತಾರೆ. ನಾವೆಲ್ಲರೂ ಅನುಭೋಗಿಗಳೇ, ಆದರೆ ನಮ್ಮಲ್ಲಿ ಕೆಲವರು ಉತ್ಪಾದಕರೂ ಇದ್ದಾರೆ.

6. ಆಧುನಿಕ ಆರ್ಥಿಕ ವ್ಯವಸ್ಥೆಯು ಸಂಕೀರ್ಣವಾಗಿದ್ದು ವ್ಯಕ್ತಿಗಳ ಚಟುವಟಿಕೆಗಳನ್ನು ಹಲವಾರು ಸಂಸ್ಥೆಗಳು ನಿಯಂತ್ರಿಸುತ್ತವೆ. ಆದ್ದರಿಂದ, ನಾವು ಭಾರತೀಯ ರಿಸರ್ವ ಬ್ಯಾಂಕ್ RBI ಭಾರತೀಯ ನೀರು, ಏಮಯ ಮಂಡಳಿ (SEBI), ಜಾಗತಿಕ ಬ್ಯಾಂಕು, ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF), ವಿಶ್ವ ವ್ಯಾಪಾರ ಸಂಘಟನೆ (WTO), ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ (SAARC), ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADBI, ಇತ್ಯಾದಿ ಸಂಸ್ಥೆಗಳನ್ನು ಹೊಂದಿದ್ದು ಅವು ವ್ಯಕ್ತಿಗಳ ಮತ್ತು ರಾಷ್ಟ್ರಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ ಮತ್ತು ಪ್ರೋತ್ಸಾಹಿಸುತ್ತವೆ.


RBI.       Reserve Bank of India

SEBI. :   Securities Exchange Board of India.

IMF.       Indian monitory fund

WTO      world trade oorganisation

SAARC.South Asian association for regional cooperation

ADB       Asian development Bank


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು