ಬಂಡವಾಳಶಾಹಿ, ಸಮಾಜವಾದಿ ಮತ್ತು ಮಿತ್ರ ಆರ್ಥಿಕ ವ್ಯವಸ್ಥೆಗಳು

 

ಅರ್ಥ ವ್ಯವಸ್ಥೆಗಳನ್ನು ಅವುಗಳಲ್ಲಿನ ಉತ್ಪಾದನಾ ಸಾಧನಗಳ ಒಡೆತನ ಅಲ್ಲದೆ ಆರ್ಥಿಕ ಸುವಟಿಕೆಗಳಲ್ಲಿ ಸರ್ಕಾರದ ಮಧ್ಯಸ್ಥಿಕೆಯ ಪ್ರಮಾಣ ಮತ್ತು ನಿಯಂತ್ರಣದ ಆಧಾರದ ಮೇಲೆ ಬಂಡವಾಳಶಾಹಿ, ಸಮಾಜವಾದಿ ಮತ್ತು ಮಿಶ್ರ ಆರ್ಥಿಕ ವ್ಯವಸ್ಥೆಗಳು ಎಂದು ವಿಂಗಡಿಸಲಾಗಿದೆ. ಈ ಆರ್ಥಿಕ ವ್ಯವಸ್ಥೆಗಳ ಅರ್ಥ, ಲಕ್ಷಣಗಳು, ಗುಣ ಮತ್ತು ದೋಷಗಳನ್ನು ತಿಳಿಯೋಣ,

ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ

ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ವ್ಯಕ್ತಿಗಳು ಉತ್ಪಾದನಾ ಸಾಧನೆಗಳ ಒಡೆತನ ಹೊಂದಿರುತ್ತಾರೆ ಮತ್ತು ಅವರಿಗೆ ಪ್ರಯೋಜನವಾಗುವ ರೀತಿಯಲ್ಲಿ ಅವುಗಳನ್ನು ಉಪಯೋಗಿಸಲು ಸ್ವತಂತ್ರರಾಗಿರುತ್ತಾರೆ. ಆದ್ದರಿಂದ, ಇದನ್ನು ಮುಕ್ತ ಉದ್ಯಮ ಅರ್ಥವ್ಯವಶ್ಯ ಎಂದು ಕರೆಯುತ್ತಾರೆ, ಇಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರ ಹಸ್ತಕ್ಷೇಪವು ಕನಿಷ್ಠ ಮಟ್ಟದ್ದಾಗಿರುತ್ತದೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯ ಪ್ರಮುಖ ಲಕ್ಷಣಗಳು ಹೀಗಿವೆ:

1. ಖಾಸಗಿ ಆಸ್ತಿ: ಇಲ್ಲಿ ವ್ಯಕ್ತಿಗಳು ಅವರ ಇಚ್ಛೆಯ ಮೇರೆಗೆ ಆಸ್ತಿಯನ್ನು ಹೊಂದಲು, ಗಳಿಸಲು ಮತ್ತು ಮರಣದ ನಂತರ ಆಸ್ತಿಯನ್ನು ಬಿಟ್ಟು ಕೊಡಲು ಸ್ವತಂತ್ರರಾಗಿರುತ್ತಾರೆ. ಅದ್ದರಿಂದ, ಆಸ್ತಿಯನ್ನು ಅವರವರ ಸ್ವಂತ ಲಾಭಕ್ಕೆ ಉಪಯೋಗಿಸುವುದರಿಂದ, ಸಂಪತ್ತನ್ನು ಹೊಂದುವ ಮತ್ತು ಸಂಗ್ರಹಿಸುವ ಭಾವನೆಯು ಅತ್ಯಂತ ಪ್ರಬಲವಾಗಿರುತ್ತದೆ.

2. ಸ್ವಾತಂತ್ರ್ಯ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ವ್ಯಕ್ತಿಗಳು ಯಾವುದೇ ಉದ್ಯೋಗ ಆಯ್ದುಕೊಳ್ಳಬಹುದಾಗಿದೆ. ವ್ಯವಹಾರ ಸಂಸ್ಥೆಗಳು ಸಂಪನ್ಮೂಲಗಳನ್ನು ಪಡೆಯಲು ಮತ್ತು ಅವುಗಳನ್ನು ಯಾವುದೇ ಸರಕು ಅಥವಾ ಸೇವೆಯ ಉತ್ಪಾದನೆಗೆ ಬಳಸಬಹುದು ಮತ್ತು ತಮ್ಮ ಆಯ್ಕೆಯ ಮೇರೆಗೆ ಮಾರುಕಟ್ಟೆಯಲ್ಲಿ ಅತ್ಯಧಿಕ ಲಾಭ ಪಡೆಯುವ ಹಾಗೆ ಮಾರಾಟಮಾಡಬಹುದು,

3. ಅನುಭೋಗಿಯ ಸಾರ್ವಭೌಮತ್ವ: ಬಂಡವಾಳಶಾಹಿ ಅರ್ಥ ವ್ಯವಸ್ಥೆಯಲ್ಲಿ ಅನುಭೋಗಿಯ ಸಾರ್ವಭೌಮ ಎಂದು ಹೇಳಲಾಗುತ್ತದೆ. ತಮಗೆ ಗರಿಷ್ಠ ತೃಪ್ತಿ ನೀಡುವ ಸರಕುಗಳು ಮತ್ತು ಸೇವೆಗಳ ಮೇಲೆ ವೆಚ್ಚ ಮಾಡಲು ಅವರು ಸ್ವತಂತರಿರುವರು, ಇಲ್ಲಿ ಉತ್ಪಾದನೆಯು ಅನುಭೋಗಿಗಳ ಆಯ್ಕೆಗಳ ಆಧಾರದ ಮೇಲೆಯೇ ನಿರ್ಧಾರವಾಗುತ್ತಿದೆ.

4. ಲಾಭದ ಉದ್ದೇಶ: ಬಂಡವಾಳಶಾಹಿ ಪದ್ದತಿಯಲ್ಲಿ ಸಂಪತ್ತಿನ ಸ್ವಾಧೀನ ಮತ್ತು ಕ್ರೋಢೀಕರಣದ ಮೇಲೆ ನಿರ್ಬಂಧ ಇರುವುದಿಲ್ಲ, ವ್ಯಕ್ತಿಗಳು ತಮ್ಮ ಸ್ವ-ವಿತಾಸಕ್ತಿಯಿಂದ ನಿರ್ದೇಶಿಸಲ್ಪಡುತ್ತಾರೆ, ವಿಶೇಷವಾಗಿ, ಬಂಡವಾಳಶಾಹಿ ವರ್ಗ ಎಂದು ಕರೆಯಲ್ಪಡುವ ಉತ್ಪಾದಕರು ಕನಿಷ್ಠ ವೆಚ್ಚ ಮಾಡಿ ಗರಿಷ್ಠ ಆದಾಯ ಹಾಗೂ ಗರಿ ಲಾಭ ಹೊಂದಲು ಪಯತ್ನಿಸುತ್ತಾರೆ.

5. ಪೈಪೋಟಿ, ಮಾರುಕಟ್ಟೆಗಳು ಮತ್ತು ಬೆಲೆಗಳು: ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಲಾಭ ಗಳಿಸಲು ಮತ್ತು ತಮ್ಮ ಆಯ್ಕೆಯ ಮೇರೆಗೆ ಉದ್ಯೋಗ ಹೊಂದಲು ಸ್ವತಂತ್ರರಿರುವುದರಿಂದ ತೀವ್ರ ಪೈಪೋಟಿ ಇರುತ್ತದೆ, ಬೆಲೆ ನಿರ್ಧಾರದಲ್ಲಿ ಮಾರುಕಟ್ಟೆ ಶಕ್ತಿಗಳಾದ ಬೇಡಿಕೆ ಮತ್ತು ಪೂರೈಕೆಗಳು ಮುಕ್ತವಾಗಿ ಕಾರ್ಯನಿರ್ವಹಿಸುತ್ತವೆ,

6. ಸರ್ಕಾರದ ಹಸ್ತಕ್ಷೇಪ ಇಲ್ಲದಿರುವಿಕೆ : ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಮತ್ತು ಬೆಳೆ ಪದ್ಧತಿಯು ನಿಯಂತ್ರಕ ಮತ್ತು ನಿರ್ಣಾಯಕ ಆಗಿರುತ್ತವೆ. ಇಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದೇ ಇಲ್ಲ ಅಥವಾ ಅತಿ ಕಡಿಮೆ ಪ್ರಮಾಣದಲ್ಲಿರುತ್ತವೆ,

ಆದರೆ, ಜನರ ಕಲ್ಯಾಣವನ್ನು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ಸರ್ಕಾರದ ಸಕ್ರಿಯ ಪಾತ್ರದ ಅಗತ್ಯವನ್ನು ಮನಗಾಣಲಾಗಿ ಆರ್ಥಿಕ ಚಟುವಟಿಕೆಗಳ ಮೇಲಿನ ಅದರ ನಿಯಂತ್ರಣ ಮತ್ತು ಹಸ್ತಕ್ಷೇಪ ಕ್ರಮೇಣ ಹೆಚ್ಚಾಗಿದ್ದು ಸಂಪೂರ್ಣ ಬಂಡವಾಳಶಾಹಿ ಪದ್ಧತಿಯು ಈಗ ಕಂಡುಬರುವುದಿಲ್ಲ. ಅಮೆರಿಕ ಹಾಗೂ ಯುರೋಪ್‌ನ ಬಹಳಷ್ಟು ರಾಷ್ಟ್ರಗಳು ಹೆಚ್ಚು ಬಂಡವಾಳಶಾಹಿ ವ್ಯವಸ್ಥೆಗಳಾಗಿವೆ


ಸಮಾಜವಾದಿ ಅರ್ಥವ್ಯವಸ್ಥೆ

ಸಮಾಜದ ಸಮಗ್ರ ಹಿತಾಸಕ್ತಿಯನ್ನು ವೃದ್ಧಿಸಲು ಸರ್ಕಾರವು ಉತ್ಪಾದಕ ಸಂಪನ್ಮೂಲಗಳ ಒಡೆತನ ಮತ್ತು ನಿಯಂತ್ರಣ ಹೊಂದಿದ್ದರೆ ಅದನ್ನು ಸಮಾಜವಾದಿ ವ್ಯವಸ್ಥೆ ಎನ್ನುತ್ತಾರೆ. ಈ ವ್ಯವಸ್ಥೆಯಲ್ಲಿ, ಎಲ್ಲರ ಹಿತಾಸಕ್ತಿಗಾಗಿ ಒಂದು ಕೇಂದ್ರ ಯೋಜನಾ ಸಂಸ್ಥೆಯು ಯೋಜನೆಗಳನ್ನು ರೂಪಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಸಮಾಜವಾದಿ ಅರ್ಥವ್ಯವಸ್ಥೆಯು ಈ ಕೆಳಗಿನ ಲಕ್ಷಣಗಳನ್ನು ಹೊಂದಿವೆ i. ಉತ್ಪಾದನಾ ಸಾಧನಗಳ ಮತ್ತು ಸಂಪತ್ತಿನ ಸಾಮೂಹಿಕ ಒಡೆತನ : ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ

1. ಉತ್ಪಾದನಾ ಸಾಧನಗಳ ಒಡೆತನವನ್ನು ಜನರ ಪರವಾಗಿ ಸರ್ಕಾರವೇ ಹೊಂದಿರುತ್ತದೆ. ಎಲ್ಲ ಸಂಪತ್ತಿನ ಒಡೆತನವು ಸಾಮೂಹಿಕವಾಗಿರುತ್ತವೆ.

2. ಸಾಮಾಜಿಕ ಕಲ್ಯಾಣದ ಉದ್ದೇಶ : ಜನರ ಕಲ್ಯಾಣನ್ನು ಹೆಚ್ಚಿಸಲು ಅವರ ಪರವಾಗಿ ಸರ್ಕಾರವು ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಒಟ್ಟಾರೆ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಸರ್ಕಾರವು ಉತ್ಪಾದನಾ ಪ್ರಮಾಣ ಹಾಗೂ ಅವುಗಳ ಹಂಚಿಕೆಯನ್ನು ನಿರ್ಧರಿಸುತ್ತದೆ.

3. ಕೇಂದ್ರೀಕೃತ ಯೋಜನೆ : ರಾಷ್ಟ್ರದ ಅಭಿವೃದ್ಧಿ ಆದ್ಯತೆಗಳನ್ನು ನಿರ್ಧರಿಸಿ ಅವುಗಳನ್ನು ಈಡೇರಿಸಲು ಅಗತ್ಯವಾದ ಸಂಪನ್ಮೂಲಗಳ ಹಂಚಿಕೆಯನ್ನು ಆರ್ಥಿಕ ಯೋಜನೆಯ ಮುಖಾಂತರ ಮಾಡಲಾಗುತ್ತದೆ. ರಾಷ್ಟ್ರದ ಅಗತ್ಯಗಳನ್ನು ಮತ್ತು ಆದ್ಯತೆಗಳನ್ನು ಗುರುತಿಸಿ, ಅವುಗಳನ್ನು ಈಡೇರಿಸಲು ಕಾರ್ಯತಂತ್ರಗಳನ್ನು ರಚಿಸಿ, ಸಮಗ್ರ ಅಭಿವೃದ್ಧಿ ಮತ್ತು ಎಲ್ಲರ ಕಲ್ಯಾಣಕ್ಕಾಗಿ ಆ ಕಾರ್ಯತಂತ್ರಗಳ ಅನುಷ್ಠಾನಕ್ಕಾಗಿ ಒಂದು ಕೇಂದ್ರೀಯ ಯೋಜನಾ ಪ್ರಾಧಿಕಾರವನ್ನು ರಚಿಸಲಾಗುತ್ತದೆ. ಆ ಸಂಸ್ಥೆಯು ರಾಷ್ಟ್ರದ ಆದ್ಯತೆಗಳನ್ನು ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಗಮನದಲ್ಲಿಟ್ಟುಕೊಂಡು ಸಂಪನ್ಮೂಲಗಳ ವಿನಿಯೋಗ ಮಾಡುತ್ತದೆ. ಪ್ರಚಲಿತ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆ, ಅನುಭೋಗ ಮತ್ತು ಹೂಡಿಕೆ ಕುರಿತಂತೆ ಎಲ್ಲ ಆರ್ಥಿಕ ನಿರ್ಣಯಗಳನ್ನು ಸರ್ಕಾರವು ಮಾಡುತ್ತದೆ. ಸಮಾಜವಾದಿ ಅರ್ಥ ವ್ಯವಸ್ಥೆಗಳಲ್ಲಿ ಬೆಲೆ ಮತ್ತು ಮಾರುಕಟ್ಟೆಗಳ ಪಾತ್ರವು ಸಂಕುಚಿತವಾಗಿರುತ್ತದೆ.

4. ಅಸಮಾನತೆಯ ಕಗ್ಗುವಿಕೆ : ಸಮಾಜವಾದಿ ಅರ್ಥ ವ್ಯವಸ್ಥೆಯಲ್ಲಿ ಖಾಸಗಿ ಆಸ್ತಿಯ ಸಂಗ್ರಹಕ್ಕೆ ಆಸ್ಪದ ಇಲ್ಲದಿರುವುದರಿಂದ ಆರ್ಥಿಕ ಅಸಮಾನತೆಯು ಕುಗ್ಗುತ್ತದೆ.

5. ವರ್ಗ ಸಂಘರ್ಷ ಇಲ್ಲದಿರುವಿಕೆ: ಸಮಾಜವಾದಿ ಸಮಾಜದಲ್ಲಿ ಎಲ್ಲರೂ ಸಹ ದುಡಿಮೆಗಾರರ ಆಗಿರುವುದರಿಂದ ವರ್ಗ ಸಂಘರ್ಷ ಇರುವುದಿಲ್ಲ.

ದ್ವಿತೀಯ ಜಾಗತಿಕ ಯುದ್ಧದ ನಂತರ ರಷ್ಯಾ, ಚೀನಾ ಮತ್ತು ಪಶ್ಚಿಮ ಯುರೋಪ್‌ನ ಅನೇಕ ರಾಷ್ಟ್ರಗಳು ಸಮಾಜವಾದವನ್ನು ಅಳವಡಿಸಿಕೊಂಡಿದ್ದವು. ಆದರೆ 1990ರ ಉದಾರೀಕರಣದ ಅಲೆಯು ಈ ರಾಷ್ಟ್ರಗಳ ಮೇಲೆಯೂ ಪ್ರಭಾವ ಬೀರಿ ಈಗ ಬಹುತೇಕ ಎಲ್ಲ ರಾಷ್ಟ್ರಗಳು ಖಾಸಗಿ ವಲಯದ ವಿಸ್ತಾರವನ್ನು ಹೆಚ್ಚಿಸಿಕೊಂಡಿವೆ.


ಮಿಶ್ರ ಅರ್ಥ ವ್ಯವಸ್ಥೆ

ಮಿಶ್ರ ಅರ್ಥವ್ಯವಸ್ಥೆಯು ಬಂಡವಾಳಶಾಹಿ ಮತ್ತು ಸಮಾಜವಾದಿ ವ್ಯವಸ್ಥೆಗಳ ಉತ್ತಮ ಅಂಶಗಳನ್ನು ಒಳಗೊಂಡಿದೆ. ಇದು ಬಂಡವಾಳಶಾಹಿ ಅರ್ಥವ್ಯವಸ್ಥೆಯ ಮುಕ್ತ ಉದ್ಯಮಶೀಲತೆ ಮತ್ತು ಸಮಾಜವಾದ ಅರ್ಥ ವ್ಯವಸ್ಥೆಯ ಸರ್ಕಾರಿ ನಿಯಂತ್ರಣಗಳ ಮಿಶ್ರಣವನ್ನು ಹೊಂದಿದೆ. ಇದನ್ನು ಸಾರ್ವಜನಿಕ ಮತ್ತು ಜೊತೆ ಜೊತೆಯಲ್ಲಿ ಕಾರ್ಯನಿರ್ವಹಿಸುವ ಆರ್ಥಿಕ ಪದ್ಧತಿ ಎಂದು ಮತ್ತ ಅರ್ಥ ವ್ಯವಸ್ಥೆಯ ಲಕ್ಷಣಗಳು ಕೆಳಗಿನಂತಿವ ವ್ಯಾಖ್ಯಾನಿಸಲಾಗಿದೆ.

1. ಸಾರ್ವಜನಿಕ ಮತ್ತು ವಾಸ ವಲಯಗಳ ಸಹಅಸ್ತಿತ್ವ. ಲಾಭದ ಉದ್ದೇಶ ಹೊಂದಿರುವ ಖಾಸಗಿ ಉದ್ಯಮಗಳು ಮತ್ತು ಕಲಾಪರ ಉದ್ದೇಶ ಹೊಂದಿದ ಸರ್ಕಾರದ ಒಡೆತನದ ಉದ್ಯಮಗಳು ಜೊತೆಯಲ್ಲಿ ಅಸ್ತಿತ್ವದಲ್ಲಿರುತ್ತವೆ. ಖಾಸಗಿ ಹಾಗೂ ಸಾರ್ವಜನಿಕ ವಲಯಗಳೆಂದರ ಕಾರ್ಯಕ್ಷೇತ್ರಗಳನ್ನು ವಿಭಜಿಸಿ ನಿರ್ದಿಷ್ಟಗೊಳಿಸಲಾಗಿರುತ್ತದೆ. ಒಟ್ಟಾರೆ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ, ಅರ್ಥವ್ಯವಸ್ಥೆಯ ಸಂಪನ್ಮೂಲಗಳ ಬಳಕೆಯನ್ನು ನಿರ್ದೇಶಿಸಲು ಸರ್ಕಾರವು ಯೋಜನಾ ಸಾಧನವನ್ನು ಬಳಸುತ್ತದೆ. ಇದು ಖಾಸಗಿ ವಲಯದ ಚಟುವಟಿಕೆಗಳನ್ನು ಲೈಸೆನ್ಸ್, ತೆಂಗೆ, ಬೆಲೆ, ಹಣಕಾಸು ಮತ್ತು ಎತ್ತ ನೀತಿಗಳ ಮೂಲಕ ನಿಯಂತ್ರಣಕ್ಕೆ ಒಳಪಡಿಸುತ್ತದೆ.

2. ವೈಯಕ್ತಿಕ ಸ್ವಾತಂತ್ರ್ಯ ವ್ಯಕ್ತಿಗಳು ತಮ್ಮ ಆಸಕ್ತಿಯನುಸಾರ ಉದ್ಯೋಗ ಮತ್ತು ಅನುಭೋಗವನ್ನು ಆಯ್ಕೆ ಮಾಡಲು ಸ್ವತಂತ್ರ ರಾಗಿರುತ್ತಾರೆ, ಉತ್ಪಾದಕರು ಅನುಭೋಗಿಗಳನ್ನು ಮತ್ತು ಕಾರ್ಮಿಕರನ್ನು ಶೋಷಿಸಲು ಅವಕಾಶವಿರುವುದಿಲ್ಲ. ಜನರ ಯೋಗಕ್ಷೇಮವನ್ನು ಗಮನದಲ್ಲಿರಿಸಿ ಸರ್ಕಾರವು ನೀತಿಗಳನ್ನು ರೂಪಿಸುತ್ತದೆ ಮತ್ತು ಖಾಸಗಿ ವಲಯವನ್ನು ನಿಯಂತ್ರಿಸುತ್ತದೆ. ಸರ್ಕಾರದ ಈ ನಿಯಮಗಳು, ನಿಯಂತ್ರಣಗಳು ಮತ್ತು ನಿರ್ಬಂಧಗಳ ಚೌಕಟ್ಟಿನಲ್ಲಿ ಖಾಸಗಿ ವಲಯವು ತನ್ನ ಕಾರ್ಯಾಚರಣೆಯಲ್ಲಿ ಸ್ವಾತಂತ್ರ್ಯ ಹೊಂದಿರುತ್ತದೆ.

3. ಆರ್ಥಿಕ ಯೋಜನೆ : ಅರ್ಥ ವ್ಯವಸ್ಥೆಯ ಅಭಿವೃದ್ಧಿಗಾಗಿ ಸರ್ಕಾರವು ಅಭಿವೃದ್ಧಿಪರ ಯೋಜನೆಗಳನ್ನು ರೂಪಿಸಲು ಯೋಜನಾ ವಿಧಾನವನ್ನು ಬಳಸುತ್ತದೆ ಮತ್ತು ತನ್ಮೂಲಕ ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಪಾತ್ರಗಳನ್ನು ನಿರ್ಧರಿಸುತ್ತದೆ. ಸಾರ್ವಜನಿಕ ವಲಯವು ನೇರವಾಗಿ ಸರ್ಕಾರದ ನಿಯಂತ್ರಣದಲ್ಲಿದ್ದು, ಉತ್ಪಾದನೆಯ ಗುರಿಗಳಿಗೆ ಮತ್ತು ಯೋಜನೆಗಳ ಅನುಗುಣವಾಗಿ ಕಾರ್ಯನಿರ್ವಹಿಸಿದರೆ, ಈ4) ವಲಯವು ಪ್ರೋತ್ಸಾಹಕಗಳು, ಬೆಂಬಲ ಮತ್ತು ಸಹಾಯಧನಗಳ ಮೂಲಕ ಪೋಷಿಸಲ್ಪಡುತ್ತದೆ.

4. ಬೆಲೆ ನೀತಿ : ಮಿಶ್ರ ಅರ್ಥವ್ಯವಸ್ಥೆಯಲ್ಲಿ ಸರಕಾರದ ನೀತಿಗಳು ಬೆಲೆಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತವೆ. ಸಾರ್ವಜನಿಕ ವಲಯದ ಉದ್ದಿಮೆಗಳ ಸರಕು ಅಥವಾ ಸೇವೆಗಳ ಬೆಲೆಯನ್ನು ಸರ್ಕಾರವೇ ನಿರ್ಧರಿಸುತ್ತಿದ್ದು ಅವುಗಳನ್ನು ಆಡಳಿತಾತ್ಮಕ ಬೆಲೆಗಳು ಎಂದು ಕರೆಯುತ್ತೇವೆ (ಉದಾ: ಭಾರತದಲ್ಲಿ ರೈಲುಗಳು),

ಮಿಶ್ರ ಅರ್ಥವ್ಯವಸ್ಥೆಗೆ ಭಾರತವು ಒಂದು ಉತ್ತಮ ಉದಾಹರಣೆ ಆಗಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಕಾರ್ಯಕ್ಷೇತ್ರಗಳನ್ನು ಸುವ್ಯವಸ್ಥಿತವಾಗಿ ನಿರ್ದಿಷ್ಟಪಡಿಸಿದ್ದು, ಅಭಿವೃದ್ಧಿಯನ್ನು ಸಾಧಿಸಲು ಆರ್ಥಿಕ ಯೋಜನೆಯು ಮುಖ್ಯ ತಂತ್ರವಾಗಿದೆ. ಇವತ್ತು ಜಗತ್ತಿನ ಬಹುತೇಕ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯಲ್ಲಿ ಸರ್ಕಾರವು ಸಕ್ರಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಮಿತ ಆರ್ಥ ವ್ಯವಸ್ಥೆಯ ಲಕ್ಷಣಗಳನ್ನು ಪಡೆದಿವೆ


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು