ಅಭಿವೃದ್ಧಿ ಮಟ್ಟದ ಆಧಾರದ ಮೇಲೆ ಅಂದರೆ ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯಗಳನ್ನು ಆಧರಿಸಿ ಆರ್ಥಿಕ ವ್ಯವಸ್ಥೆಗಳನ್ನು ಎರಡು ವರ್ಗಗಳಲ್ಲಿ ವಿಂಗಡಿಸಲಾಗಿದೆ.
(1) ಅಭಿವೃದ್ಧಿ ಹೊಂದಿದ ಅರ್ಥವ್ಯವಸ್ಥೆ
(ii) ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆ
ಅಭಿವೃದ್ಧಿ ಹೊಂದಿದ ರಾಷಗಳು ಅಧಿಕ ರಾಷ್ಟ್ರೀಯ ಮತ್ತು ತಲಾ ಆದಾಯ, ಅಧಿಕ ಉಳಿತಾಯ ಮತ್ತು ಹೂಡಿಕೆ ಹೊಂದಿದ್ದು ಇದರಿಂದಾಗಿ ಅಧಿಕ ಪ್ರಮಾಣದ ಬಂಡವಾಳ ನಿರ್ಮಾಣ ಸಾಧ್ಯವಿದೆ. ಈ ರಾಷ್ಟ್ರಗಳಲ್ಲಿ ಉತ್ತಮ ಕೌಶಲ್ಯ ಮತ್ತು ತರಬೇತಿ ಹೊಂದಿದ ಮಾನವ ಸಂಪನ್ಮೂಲ, ಒಳ್ಳೆಯ ನಾಗರಿಕ ಸೌಲಭ್ಯಗಳು, ಉತ್ತಮ ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳು ಎದ್ದು ಕಡಿಮೆ ಜನನ ದರ, ಕಡಿಮೆ ಮರಣ ದರ ಮತ್ತು ಕಡಿಮೆ ಶಿಶು ಮರಣ ದರ ಇವೆ, ಅವು ಸದೃಢವಾದ ಹಣಕಾಸು ಮತ್ತು ಬಂಡವಾಳ ಮಾರುಕಟ್ಟೆಗಳನ್ನು ಒಳಗೊಂಡಂತೆ ಅಭಿವೃದ್ಧಿ ಹೊಂದಿದ ಕೈಗಾರಿಕೆ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ಹೊಂದಿರುತ್ತವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜನರು ಉನ್ನತ ಜೀವನಮಟ್ಟವನ್ನು ಹೊಂದಿರುತ್ತಾರೆ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಅಭಿವೃದ್ಧಿ ಏಣಿಯ ಕೆಳಹಂತದಲ್ಲಿರುತ್ತವೆ. ಅವುಗಳನ್ನು ಅರ ಅನಭಿವೃದ್ಧಿ ಹೊಂದಿದ, ಹಿಂದುಳಿದ ಅಥವಾ ಬಡ ರಾಷ್ಟ್ರಗಳು ಎಂದು ಸಹ ಕರೆಯುತ್ತಾರೆ. ಈ ರಾಷ್ಟ್ರಗಳ ರಾಷ್ಟ್ರೀಯ ಮತ್ತು ತಲಾ ಆದಾಯಗಳು ಕಡಿಮೆ ಇರುತ್ತದೆ. ಅವುಗಳು ಕಡಿಮೆ ಉಳಿತಾಯ, ಹೂಡಿಕೆ ಮತ್ತು ಬಂಡವಾಳ ನಿರ್ಮಾಣದೊಂದಿಗೆ ಹಿಂದುಳಿದ ಕೃಷಿ ಮತ್ತು ಕೈಗಾರಿಕೆ ವಲಯಗಳನ್ನು ಹೊಂದಿರುತ್ತವೆ. ಈ ರಾಷ್ಟ್ರಗಳು ಸಾಮಾನ್ಯವಾಗಿ ಪ್ರಾಥಮಿಕ ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲ ಆಧಾರಿತ ವಸ್ತುಗಳನ್ನು ರಫ್ತ ಮಾಡುತ್ತವೆ. ಸಂಕ್ಷಿಪ್ತವಾಗಿ, ಅವು ಕಡಿಮೆ ಜೀವನಮಟ್ಟ, ಅನಾರೋಗ್ಯ ಮತ್ತು ಅನ್ಯರ್ವತೆ, ಅಧಿಕ ಪ್ರಮಾಣದ ಶಿಶು ಮರಣ, ಅಧಿಕ ಜನನ ಮತ್ತು ಮರಣ ದರಗಳು ಮತ್ತು ದುರ್ಬಲ ಮೂಲಸೌಕರ್ಯಗಳಿಂದ ಬಾಧಿತವಾಗಿವೆ.
ಮಿಶ್ರ ಅರ್ಥ ವ್ಯವಸ್ಥೆಯಾಗಿ ಭಾರತ
ಸರ್ಕಾರದ ಯೋಜನಾ ಅನುದಾನ ಮತ್ತು ನಿಯಂತ್ರಣಗಳ ಚೌಕಟ್ಟಿನೊಳಗೆ ಸಾರ್ವಜನಿಕ ಮತ್ತು ಖಾಸಗಿ ವಲಯಗಳೆರಡೂ ಕಾರ್ಯನಿರ್ವಹಿಸುತ್ತಿರುವ ಭಾರತವು ಮಿಶ್ರ ಆರ್ಥ ವ್ಯವಸ್ಥೆಗೆ ಒಂದು ಉತ್ತಮ ಉದಾಹರಣೆ ಆಗಿದೆ. ಭಾರತಲ್ಲಿ ಹೆಚ್ಚಿನ ಮತ್ತು ತ್ವರಿತಗತಿಯಲ್ಲಿ ಅಭಿವೃದ್ಧಿ ಸಾಧಿಸಲು ಮತ್ತು ಎಲ್ಲ ವರ್ಗದ ಜನರಿಗೆ ಉತ್ತಮ ಜೀವನ ಮಟ್ಟವನ್ನು ಒದಗಿಸುವ ಸಲುವಾಗಿ ಸ್ವಾತಂತ್ರ್ಯ ಪಡೆದ ನಂತರ, ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು.
ಭಾರತದ ಮಿಶ್ರ ಆರ್ಥಿಕ ವ್ಯವಸ್ಥೆಯ ಪ್ರಮುಖ ಲಕ್ಷಣಗಳು ಹೀಗಿವೆ:
i) ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಹಸ್ತಿತ್ವ: ಭಾರತ ಸರ್ಕಾರವು ಜಾರಿಗೊಳಿಸಿದ 948 ಮತ್ತು 1956ರ ಕೈಗಾರಿಕೆ ನೀತಿಗಳು ಸಾರ್ವಜನಿಕ ವಲಯದ ವಿಸ್ತ್ರತ ಪಾತ್ರದೊಂದಿಗೆ ಸಾರ್ವಜನಿಕ ಮತ್ತು ಖಾಸಗೀ ವಲಯಗಳ ಸಹಅಸ್ತಿತ್ವಕ್ಕೆ ಅವಕಾಶವನ್ನು ಮಾಡಿತು. ಸಾರ್ವಜನಿಕ ವಲಯದಲ್ಲಿ ಮೂಲ ಮತ್ತು ಭಾರೀ ಕೈಗಾರಿಕೆಗಳಿದ್ದವು. ಆದರೆ, 1990ರಿಂದ ಈಚೆಗೆ ಉದಾರೀಕರಣ ನೀತಿಗಳಿಂದಾಗಿ ಖಾಸಗಿ ವಲಯದ ವ್ಯಾಪ್ತಿಯು ವಿಸ್ತಾರಗೊಳ್ಳುತ್ತಿದೆ.
ii) ಯೋಜನಾಧಾರಿತ ಅಭಿವೃದ್ಧಿ : ರಾಷ್ಟ್ರದ ಮತ್ತು ಜನರ ಸಮಗ್ರ ಅಭಿವೃದ್ಧಿಗಾಗಿ, ಸಂವಿಧಾನದಲ್ಲಿ ಅಡಕವಾಗಿರುವ ರಾಷ್ಟ್ರ ರೀತಿಯ ನಿರ್ದೇಶಕ ತತ್ವಗಳ ಚೌಕಟ್ಟಿನೊಳಗೆ ಪಂಚ ವಾರ್ಷಿಕ ಯೋಜನೆಗಳನ್ನು ರೂಪಿಸಲು 1990ರಲ್ಲಿ ಯೋಜನ್ ಆಯೋಗವನ್ನು ಸ್ಥಾಪಿಸಲಾಯಿತು, ಯೋಜನಾ ಆಯೋಗವು ಇಲ್ಲಿಯವರೆಗೆ ಹನ್ನೆರಡು ಪಂಚವಾರ್ಷಿಕ ಯೋಜನೆಗಳನ್ನು, ಆನೇಕ ವಾರ್ಷಿಕ ಯೋಜನೆಗಳನ್ನು ತಯಾರಿಸಿ ಅವುಗಳನ್ನು ಕಾರ್ಯರೂಪದಲ್ಲಿ ತಂದಿದೆ. ಈ ಯೋಜನೆಗಳು ಭಾರತದ ಅರ್ಥ ವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸಿವೆ. 2015ರಲ್ಲಿ, ಯೋಜನಾ sotsen we (NITI National Institution for Transforming India) ಭಾರತದ ಪರಿವರ್ತನೆಗೆ ರಾಷ್ಟ್ರೀಯ ಸಂಸ್ಥೆ ಎಂಬ ಹೊಸ ಸಂಸ್ಥೆ ರಚನೆಯಾಗಿದೆ.
iii) ಸಾರ್ವಜನಿಕ ವಲಯದ ಪಾತ್ರ : ಭಾರತದ ಅರ್ಥವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯವು ಮಹತ್ವದ ಪಾತ್ರವನ್ನು ಹೊಂದಿದೆ. ಇದು ಆರ್ಥಿಕ ಪ್ರಗತಿಯನ್ನು ಹೆಚ್ಚಿಸಿದ ಮತ್ತು ಅವಾಯ ಹಾಗೂ ಸಂಪತ್ತಿನ ಅಸಮಾನತೆಯನ್ನು ಕುಗ್ಗಿಸಿದೆ. ಇದು (ಆ) ಮೂಲ ಸೌಕರ್ಯಗಳ ಅಭಿವೃದ್ಧಿ (ಬ) ಮೂಲ ಮತ್ತು ಭಾರೀ ಕೈಗಾರಿಕೆಗಳ ಸ್ಥಾಪನೆ: (ಕ) ಹಲವಾರು ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳ ವಿಸ್ತರಣೆ: ಮತ್ತು (ಡ) ಅಂತಾರಾಷ್ಟ್ರೀಯ ವ್ಯಾಪಾರ ಒಳಗೊಂಡಂತೆ, ವ್ಯಾಪಾರ – ಮತ್ತು ಮಾರುಕಟ್ಟೆ ಚಟುವಟಿಕೆಗಳನ್ನು ಉತ್ತೇಜಿಸುವ ಕಾರ್ಯಗಳಿಗೆ ಗಮನಾರ್ಹ ಕೊಡುಗೆ ನೀಡಿದೆ.
iv) ಖಾಸಗಿ ವಲಯ : ಕೇವಲ ಕೈಗಾರಿಕೆ ಮಾತ್ರವಲ್ಲದೇ, ಕೃಷಿ, ಸಣ್ಣ ಕೈಗಾರಿಕೆ, ವ್ಯಾಪಾರ, ವಸತಿ ಮತ್ತು ಕಟ್ಟಡ ನಿರ್ಮಾಣದಲ್ಲಿನ ಅಧಿಕ ಪ್ರಮಾಣದ ಚಟುವಟಿಕೆಗಳನ್ನು ಖಾಸಗಿ ವಲಯ ನಿರ್ವಹಿಸುತ್ತದೆ. ಇದು ಮಾನವ ಶಕ್ತಿಯ ಮುಕ್ಕಾಲು ಭಾಗಕ್ಕೆ ಉದ್ಯೋಗವನ್ನು ಒದಗಿಸುತ್ತದೆ. ಖಾಸಗಿ ವಲಯವನ್ನು ನಿಯಂತ್ರಿಸಲು ಹಲವಾರು ನೀತಿಗಳು ಮತ್ತು ನಿಯಮಗಳು ಜಾರಿಯಲ್ಲಿದೆ. ಆದರೆ ಆ ನಿಬಂಧನೆಗಳು ಮೊದಲು ಇದ್ದಂತೆ ಈಗ ಕಠಿಣವಾಗಿ ಇಲ್ಲ
v) ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಮನ್ವಯತೆ : ಯೋಜನಾ ಆಯೋಗದ ಗುರಿಗಳನ್ನು ಸಾಧಿಸಲು ಸಾರ್ವಜನಿಕ ಮತ್ತು ಖಾಸಗಿಗಳೆರಡೂ ಜೊತೆಯಾಗಿ ಕಾರ್ಯನಿರ್ವಹಿಸುತ್ತಿವೆ.
ಆದಾಗ್ಯೂ, ಇತ್ತೀಚೆಗೆ ಸಾರ್ವಜನಿಕ ವಲಯದ ಪಾತ್ರ ಕುಗ್ಗುತ್ತಿದ್ದು, ಖಾಸಗಿ ವಲಯದ ಚಟುವಟಿಕೆಗಳು ವಿಸ್ತಾರಗೊಳ್ಳುತ್ತಿವೆ.
ಭಾರತದಲ್ಲಿ ಸಾರ್ವಜನಿಕ ವಲಯದ ಸಾಧನೆ
ಭಾರತದಲ್ಲಿ ಅರ್ಥವ್ಯವಸ್ಥೆಯ ಪ್ರಮುಖ ವಲಯಗಳ ಮೇಲೆ ಆಧಿಪತ್ವವನ್ನು ಹೊಂದುವ ಉದ್ದೇಶದಿಂದ ಸಾರ್ವಜನಿಕ ವಲಯಕ್ಕೆ ಅತ್ಯಂತ ಮಹತ್ವದ ಪಾತ್ರವನ್ನು ನೀಡಲಾಯಿತು. ತೀವ್ರಗತಿಯ ಆರ್ಥಿಕ ಅಭಿವೃದ್ಧಿ, ಆರ್ಥಿಕ ಶಕ್ತಿಯ ಕೇಂದ್ರೀಕರಣವ ತಗ್ಗಿಸುವಿಕೆ, ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ, ಉದ್ಯೋಗಾವಕಾಶಗಳ ಸೃಷ್ಟಿ, ಆಮದು ನಿಯಂತ್ರಣ ಮತ್ತು ರಫ್ತು ಉತ್ತೇಜನ, ಹಾಗೂ ಸಂಪನ್ಮೂಲಗಳ ಸದುಪಯೋಗದ ಉದ್ದೇಶಗಳು ಸಾರ್ವಜ ವಲಯವನ್ನು ಪ್ರೋತ್ಸಾಹಿಸಲು ಮುಖ್ಯ ಕಾರಣಗಳಾಗಿದ್ದವು.
ಅಂತೆಯೇ, ಸಾರ್ವಜನಿಕ ವಲಯವು ಕೈಗಾರಿಕಾ ವಲಯದಲ್ಲಿನ ಂತರಗಳನ್ನು ತುಂಬುತ್ತಾ ಉದ್ಯೋಗಾವಕಾರಗಳ ನಿರ್ಮಾಣ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಪ್ರೋತ್ಸಾಹಿಸಿ ರಾಷ್ಟ್ರದ ಅರ್ಥವ್ಯವಸ್ಥೆಗೆ ಮಹತ್ತರವಾದ ಕೊಡುಗೆಯನ್ನು ನೀಡಿದೆ, ಪ್ರಮುಖ ಉತ್ಪನ್ನಗಳಾದ ಉಕ್ಕು, ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ಪೆಟ್ರೋಲಿಯಂ ಉರಿಮಗಳಲ್ಲಿ ಅಧಿಕ ಹೂಡಿಕೆ ಮಾಡಿ ಪ್ರಭಾವಿ ವಲಯಗಳ ಉತ್ಸವ ನಿಯಂತ್ರಣ ಹೊಂದಿದೆ,
ಆದರೆ, ದೋಷಪೂರಿತ ಬೆಲೆ : ಅಧಿಕ ರಾಜಕೀಯ ಹಸ್ತಕ್ಷೇಪ ನಿರ್ಣಯ ಕೈಗೊಳ್ಳುವಲ್ಲಿ ವಿಳಂಬ ನೀತಿ: ಮಿತಿಮೀರಿದ ಸಿಬ್ಬಂದಿ, ಉತ್ತರದಾಯಿತ್ವದ ಕೊರತೆ ಮತ್ತು ಸಾಮರ್ಥ್ಯದ ಆರೆ ಉಪಯೋಗಗಳಂತಹ ಹಲವಾರು ಗಂಭೀರ ಸಮಸ್ಯೆಗಳ ಕಾರಣದಿಂದ ಸಾರ್ವಜನಿಕ ವಲಯವು ಉತ್ತಮ ಹಣಕಾಸಿನ ಸಾಧನೆಯನ್ನು ಮಾಡದೇ ನಷ್ಟದಲ್ಲಿ ನರಳುವಂತಾಗಿದೆ.
ಆದ್ದರಿಂದ, 1980ರಿಂದೀಚೆಗೆ ಅವುಗಳ ಕಾರ್ಯಚರಣೆಯನ್ನು ಸುಧಾರಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು ಮತ್ತು 1991ರ ಆರ್ಥಿಕ ಸುಧಾರಣಾ ಕ್ರಮಗಳಲ್ಲಿ ಸರ್ಕಾರದ ಸಾರ್ವಜನಿಕ ವಲಯದ ನೀತಿಯಲ್ಲಿ ಖಾಸಗೀಕರಣವ ಒಂದು ಪ್ರಮುಖ ಅಂಶವಾಗಿದೆ. ಸರ್ಕಾರವು ಸಾರ್ವಜನಿಕ ಉದ್ದಿಮೆಗಳಲ್ಲಿನ ತನ್ನ ಷೇರುಗಳನ್ನು ಖಾಸಗಿಯವರಿಗೆ ಮಾರುತ್ತಲಿದ್ದು ಅದನ್ನು ಬಂಡವಾಳ ಹಿಂತೆಗೆತ ಎನ್ನುತ್ತೇವೆ.
ಕಾಮೆಂಟ್ ಪೋಸ್ಟ್ ಮಾಡಿ