ನಾವೆಲ್ಲರೂ ಕೆಲಸ ಮಾಡುವುದು ಆದಾಯವನ್ನು ಗಳಿಸಲು, ನಾವು ಗಳಿಸುವ ಆದಾಯವು ನಾವು ಶ್ರೀಮಂತರೋ ಅಥವಾ ಬಡವರೋ ಎಂಬುದನ್ನು ಸೂಚಿಸುತ್ತದೆ. ಇದು ಈ ದೇಶಕ್ಕೂ ಅನ್ವಯಿಸುತ್ತದೆ. ರಾಷ್ಟ್ರದ ಆದಾಯ ಅಧಿಕವಿದ್ದರೆ, ರಾಮನ ಸಮೃದ್ಧಿಯಿಂದ ಇದ್ದು, ರಾಷ್ಟ್ರದ ಆದಾಯ ಕಡಿಮೆ ಇದ್ದರೆ ಅದು ಬಡತನದಿಂದ ಕೂಡಿರುತ್ತದೆ. ಕೆಲವು ರಾಷ್ಟ್ರಗಳು ಏಕೆ ಬಡತನದಿಂದ ನರಳುತ್ತಿವೆ (ಉದಾ: ಕೀನ್ಯಾ) ಮತ್ತು ಕೆಲವು ರಾಷ್ಟ್ರಗಳು ಶ್ರೀಮಂತ ಹೇಗೆ? (ಉದಾ - ಅಮೆರಿಕಾ) ಎಂದು ನೀವು ಚಿಂತನೆ ಮಾಡಿರಲೂಬಹುದು. ಹಾಗೆಯೇ ಕೆಲ ರಾಷ್ಟ್ರಗಳು ತೀವ್ರವಾಗಿ ಬೆಳೆಯುತ್ತಿವೆ (ಉಡಾ: ಚೀನಾ) ಮತ್ತೆ ಇನ್ನು ಕೆಲವು ನಿಧಾನಗತಿಯಲ್ಲಿ ಬೆಳೆಯುತ್ತಿವೆ (ಉದಾ: ಆಫ್ರಿಕದ ರಾಷ್ಟ್ರಗಳು), ಆಫ್ರಿಕದ ರಾಷ್ಟ್ರಗಳು ವಿಪುಲ ನೈಸರ್ಗಿಕ ಸಂಪನ್ಮೂಲ ಹೊಂದಿದ್ದರೂ ಅವು ಕಡಿಮೆ ಅಭಿವೃದ್ಧಿಯನ್ನು ಹೊಂದಿವೆ. ಆದುದರಿಂದ ಅಭಿವೃದ್ಧಿ ಮಟ್ಟವು ಕೇವಲ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರದೇ, ಅವುಗಳಿಂದ ಉಪಯುಕ್ತ ಸರಕುಗಳು ಮತ್ತು ಸೇವೆಗಳನ್ನು ಉತ್ಪಾದಿಸಿ, ಆದಾಯ ಮತ್ತು ಸಂಪತ್ತು ಹೇಗೆ ಸೃಷ್ಟಿಯಾಗುತ್ತದೆ ಎಂಬುದು ಪ್ರಮುಖ ನಿರ್ಧಾರಕವಾಗುತ್ತದೆ.
ರಾಷ್ಟ್ರೀಯ ಆದಾಯವು ಒಂದು ರಾಷ್ಟ್ರದಲ್ಲಿ ಉತ್ಪಾದಿಸಿದ ಸರಕುಗಳ ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಸೂಚಿಸುತ್ತದೆ. ಸೈಮನ ಕುಜನೆಟ್ಟ ವ್ಯಾಖ್ಯಾನಿಸುವಂತೆ, ರಾಷ್ಟ್ರೀಯ ಆದಾಯವು, “ಒಂದು ವರ್ಷದ ಅವಧಿಯಲ್ಲಿ ರಾಜ್ಯದ ಉತ್ಪಾದನಾ ವ್ಯವಸ್ಥೆಯಿಂದ ಅನುಭೋಗಿಗಳ ಕೈಗಳಿಗೆ ಪ್ರವಹಿಸುವ ಅಂತಿಮ ಸರಕುಗಳ ಮತ್ತು ಸೇವೆಗಳ ನಿವ್ವಳ ಉತ್ಪನ್ನವಾಗಿದೆ. ಅಂತಿಮವಾಗಿ ಅನುಭೋಗಿಗಳು ಆದಾಯವನ್ನು ಪಡೆಯುವವರಾಗಿರುವುದರಿಂದ ಒಂದು ವರ್ಷದಲ್ಲಿ ಆರ್ಥಿಕ ಚಟುವಟಿಕೆಗಳಿಂದ ಪಡೆದ ಒಟ್ಟು ಆದಾಯವನ್ನು ರಾಷ್ಟ್ರೀಯ ಆದಾಯ ಎನ್ನುತ್ತಾರೆ. ಇದು ಎಲ್ಲ ವ್ಯಕ್ತಿಗಳಿಗೆ ನೀಡಿದ ಕೂಲಿ, ಬಡ್ಡಿ, ಗೇಣಿ ಮತ್ತು ಲಾಭ ವಾಪತಿಯಾಗಿದೆ. ಸ್ವಾಭಾವಿಕವಾಗಿ, ರಾಷ್ಟ್ರೀಯ ಆದಾಯವು ರಾಷ್ಟ್ರದ ಉತ್ಪಾದನಾ ವ್ಯವಸ್ಥೆಯ ಗಾತ್ರ, ಅನುಭೋಗದ ಗಾತ್ರ, ಉಳಿತಾಯ ಮತ್ತು ವಿವಿಧ ವಲಯಗಳಲ್ಲಿ ಮಾಡಿದ ಹೂಡಿಕೆಯಲ್ಲದೇ ಇತರ ರಾಷ್ಟ್ರಗಳೊಂದಿಗಿನ ವ್ಯಾಪಾರ ವ್ಯವಹಾರಗಳನ್ನು ಸೂಚಿಸುತ್ತದೆ. ಆದಾಗ್ಯೂ, ರಾಷ್ಟ್ರೀಯ ಆದಾಯದ ಮಾವನವು ವ್ಯಕ್ತಿಯ ಆದಾಯದ ಮಾವನದಂತಿರದೇ ಬಹು ಕಷ್ಟಕರವಾಗಿರುತ್ತದೆ ಮತ್ತು ಸಂಕೀರ್ಣ ವಿಧಾನವನ್ನು ಒಳಗೊಂಡಿರುತ್ತದೆ, ರಾಷ್ಟ್ರೀಯ ಆದಾಯದ ಪ್ರಮಾಣ ಮತ್ತು ದರ ಬೆಳವಣಿಗೆಯ ದರವನ್ನು ಮಾವನ ಮಾಡುವುದರಿಂದ ಈ ಕೆಳಗಿನವುಗಳನ್ನು ಅವಲೋಕಿಸಬಹುದು.
1. ಆರ್ಥಿಕ ಬೆಳವಣಿಗೆಯ ದರ
2. ಜೀವನ ಮಟ್ಟದಲ್ಲಿನ ಬದಲಾವಣೆ
3. ಆದಾಯ ಹಂಚಿಕೆಯಲ್ಲಿನ ಬದಲಾವಣೆ
ತಲಾ ಆದಾಯ
ಒಂದು ರಾಷ್ಟ್ರದ ಜನರ ಒಂದು ವರ್ಷದ ಅವಧಿಯ ಸರಾಸರಿ ಆದಾಯವು ಆ ವರ್ಷದ ಸರಾಸರಿ ಆದಾಯವು ಆ ವರ್ಷದ ತಲಾ ಅದಾಯವಾಗಿದೆ. ಉದಾಹರಣೆಗೆ, 2011ರಲ್ಲಿನ ತಲಾ ಆದಾಯವನ್ನು ಕಂಡುಹಿಡಿಯುವಾಗ, ಒಟ್ಟು ರಾಷ್ಟ್ರೀಯ ಆದಾಯವನ್ನು ರಾಷ್ಟ್ರದ ಆ ವರ್ಷದ ಒಟ್ಟು ಜನಸಂಖ್ಯೆಯಿಂದ ಭಾಗಿಸಲಾಗುತ್ತದೆ.
2011 ತಲಾ ಆದಾಯ= (2011ರ ರಾಷ್ಟ್ರೀಯ ಆದಾಯ) + 2011ರ ಜನಸಂಖ್ಯೆ
ತಲಾ ಆದಾಯವು ಜನರ ಸರಾಸರಿ ಆದಾಯ ಮತ್ತು ಜೀವನ ಮಟ್ಟವನ್ನು ಹಿಂತ ಸಹಾಯ ಮಾಡುತ್ತದೆ. ಆದರೆ ಪ್ರತಿ ದೇಶದಲ್ಲಿ ರಾಷ್ಟ್ರೀಯ ಆದಾಯದ ಹಂಚಿಕೆಯು ಆಸಮಾನವಾಗಿದ್ದು ಹೆಚ್ಚಿನ ಭಾಗವೂ ಶ್ರೀಮಂತ ವರ್ಗ ಹೊಂದಿದ್ದು ಸಾಮಾನ್ಯ ವ್ಯಕ್ತಿಯು ಪಡೆಯುವ ಆದಾಯ ಒಟ್ಟಾರೆ ತಲಾ ಆದಾಯಕ್ಕಿಂತ ಕಡಿಮೆ ಇರುತ್ತದೆ.
ಭಾರತದಲ್ಲಿ ರಾಷ್ಟ್ರೀಯ ಮತ್ತು ತಲಾ ಆದಾಯ
ಭಾರತದಲ್ಲಿ, ಕೇಂದ್ರೀಯ ಅಂಕಿಸಂಖ್ಯಾ ಸಂಸ್ಥೆಯ (CSO) ರಾಷ್ಟ್ರೀಯ ಆದಾಯದ ಮೊತ್ತವನ್ನು ಅಂದಾಜಸಿ ಪ್ರಕಟಿಸುತ್ತದೆ. ಭಾರತದಲ್ಲಿನ ರಾಷ್ಟ್ರೀಯ ಮತ್ತು ತಲಾ ಆದಾಯಗಳಲ್ಲಿನ ವಿವರವನ್ನು ಕೋಷ್ಟಕದಲ್ಲಿ ತೋರಿಸಿದೆ.
ಮೂಲ: ಆರ್ಥಿಕ ಸಮೀಕ್ಷೆ 2014-15,
ಭಾರತದ ರಾಷ್ಟ್ರೀಯ ಆದಾಯವು 1951-51ರಲ್ಲಿ 2,69,724 ಕೋಟಿ ರೂಪಾಯಿಗಳಿಂದ 2014-15ರ ವೇಳೆಗೆ 24,00,266 ಕೋಟಿ ರೂಪಾಯಿಗಳಿಗೆ (2011-125 ಸ್ಥಿರ ಬೆಲೆಗಳಲ್ಲಿ ಹೆಚ್ಚಾಗಿದೆ. ಆಂದರೆ 60 ವರ್ಷಗಳ ಅವಧಿಯಲ್ಲಿ 34 ಪಟ್ಟು ಹೆಚ್ಚಳವಾಗಿದ್ದನ್ನು ಇದು ತೋರಿಸುತ್ತದೆ. ಆದರೆ, ಈ ಅವಧಿ ಯಲ್ಲಿನ ಬೆಳವಣಿಗೆಯು ಏಕರೂಪದಲ್ಲಿ ಅಥವಾ ನಿರಂತರವಾಗಿ ಇರಲಿಲ್ಲ, ತಲಾ ಆದಾಯವು ಕೂಡ ಅದೇ ಅವಧಿಯಲ್ಲಿ 7513 ರೂಪಾಯಿಗಳಿಂದ 74,193 ರೂಪಾಯಿಗಳಿಗೆ ಸುಮಾರು 10 ಪಟ್ಟು ಏರಿಕೆಯಾಗಿದೆ.
ಭಾರತದ ಅರ್ಥವ್ಯವಸ್ಥೆ ಕುರಿತಂತೆ ಜಾಗತಿಕ ಬ್ಯಾಂಕಿನ ಮೌಲ್ಯ ಮಾಪನ
I. ರಾಷ್ಟ್ರೀಯ ಆದಾಯವು 2011ರಲ್ಲಿ 1 ಲಿಯನ್ ಗಡಿ ದಾಟಿದ ಮೊದಲ ಚಿಲಿಯನ ಪ್ರಮಾಣ ತಲುಪಲು 60 ವರ್ಷ ತೆಗೆದುಕೊಂಡ ಭಾರತವೆ, ಎರಡನೆಯ ಪ್ರಿಲಿಯನ್ ಅದಾಯವನ್ನು ಕೇವಲ ಏಳು ವರ್ಷಗಳಲ್ಲಿ ಸೇರಿದೆ. 206 Lಲಿಯನ್‌ನಷ್ಟು ಇರುವ ಭಾರತದ ಅರ್ಥವ್ಯವಸ್ಥೆಯ ಈ ಶತಮಾನದ ಪ್ರಾರಂಭದ ಅವಧಿಯಿಂದ ನಾಲ್ಕು ಪಟ್ಟು ಹೆಚ್ಚಳವನ್ನು ಸಾಧಿಸಿದೆ.
II. ಜಾಗತಿಕ ಬ್ಯಾಂಕಿನ ಅಂಕಿಅಂಶಗಳು ತೋರಿಸುವಂತೆ, 201405 ಭಾರತದ ಶಾ ಅವಾಯವ S1,610ಕ್ಕೆ (ಸುಮಾರು ಲಕ್ಷ ಏರಿಕೆಯಾಗಿದೆ. ಭಾರತವು ತನ್ನ ಕೆಳ ಮಧ್ಯಮ ಆದಾಯ ಮಟ್ಟದಿಂದ ಮೇಲ್ಪಟ್ಟದ ಮಾಧ್ಯಮ ಆದಾಯ ಮಟ್ಟಕ್ಕೆ ಏರಿಕೆಯಾಗಲು ಒಂದು ದಶಕಕ್ಕಿಂತ ಹೆಚ್ಚಿನ ಅವಧಿಯನ್ನು ತೆಗೆದುಕೊಂಡಿದೆ.
III. 2014ರಲ್ಲಿ ಬೆಳವಣಿಗೆಯ ದರ ಪ್ರತಿಶತ 74ರಷ್ಟಿದ್ದ ಭಾರತವು ಚೀನಾ ಅಲ್ಲದೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಅರ್ಥವ್ಯವಸ್ಥೆಯಾಗಿದೆ.
ಭಾರತದಲ್ಲಿ ವಲಯವಾರು ಆದಾಯದ ಬೆಳವಣಿಗೆ ಮತ್ತು ಅವುಗಳ ಪಾಲು ಯಾವುದೇ ಅರ್ಥ ವ್ಯವಸ್ಥೆಯಲ್ಲಿ ಅನುಭೋಗಕ್ಕಾಗಿ ಜನರಿಗೆ ವಿವಿಧ ಸರಕುಗಳ ಮತ್ತು ಸೇವೆಗಳ ಅಗತ್ಯವಿರುವುದರಿಂದ, ಅದು ಹಲವಾರು ಚಟುವಟಿಕೆಗಳನ್ನು ಹೊಂದಿರುತ್ತದೆ. ಈ ಚಟುವಟಿಕೆಗಳನ್ನು ಬಳಸುವ ಕಚ್ಚಾ ಸರಕುಗಳು ಮತ್ತು ಉತ್ಪಾದನೆಯ ಉದ್ದೇಶಗಳ ಆಧಾರದ ಮೇಲೆ ವಿಂಗಡಿಸಬಹುದು, ಆಹಾರ ಪದಾರ್ಥಗಳು, ಧಾನ್ಯಗಳು, ತರಕಾರಿ, ಹಣ್ಣುಗಳು, ಹಾಲು ಮೀನು ಇತ್ಯಾದಿಗಳನ್ನು ಪ್ರಮುಖವಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಉತ್ಪಾದಿಸಲಾಗಿರುತ್ತದೆ ಮತ್ತು ಅವುಗಳನ್ನು ನೇರವಾಗಿ ಉಪಯೋಗಿಸಲಾಗುತ್ತದೆ. ಈ ಸರಕುಗಳು ಗಾತ್ರದಲ್ಲಿ ದೊಡ್ಡವಿದ್ದು ಅವುಗಳನ್ನು ಸುಲಭವಾಗಿ ಸಂಗ್ರಹಿಸಿಡಲು ಆಗುವುದಿಲ್ಲ.
ಇತರ ಹಲವಾರು ಸರಕುಗಳನ್ನು ಉತ್ಪಾದಿಸಲಾಗುತ್ತಿದೆ' . ಅಂದರೆ, ಕಚ್ಚಾ ಸರಕುಗಳನ್ನು ಹೆಚ್ಚು ಉಪಯುಕ್ತವಾಗುವ ಮತ್ತು ಸಂಗ್ರಹ ಮಾಡಬಹುದಾದ ರೀತಿಯಲ್ಲಿ ಪರಿವರ್ತಿಸಲಾಗುತ್ತದೆ. ಅಂದರೆ ಹತ್ತಿಯನ್ನು ಬಟ್ಟೆಯನ್ನಾಗಿ ಕಬ್ಬಿಣದ ಅದಿರನ್ನು ಉಕ್ಕು ಆಗಿ, ಕಟ್ಟಿಗೆಯನ್ನು ಪಿಠೋಪಕರಣಗಳಾಗಿ, ಸುಣ್ಣವನ್ನು ಸಿಮೆಂಟಾಗಿ, ಇತ್ಯಾದಿ, ಇಂತಹ ಉತ್ಪಾದಿಸಿದ ವಸ್ತುಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ ಇಡಬಹದಲ್ಲದೇ ಸುಲಭವಾಗಿ ಸಾಗಾಟ ಮಾಡಬಹುದು,
ಅದರಂತೆ, ವಿವಿಧ ಜನರು ಸಲ್ಲಿಸುವ ಸೇವೆಗಳೂ ನಮಗೆ ಅವಶ್ಯ ಸೇವೆಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲವಾದರಿಂದ, ಅವುಗಳು ಒದಗುತ್ತಿರುವ ಸಂದರ್ಭದಲ್ಲಿಯೇ ಅವುಗಳ ಬಳಕೆ ಮಾಡಬೇಕಾಗುತ್ತದೆ. ಈ ಕಾರಣದಿಂದ ಆಗಗಳು ಹೆಚ್ಚು ಮೌಲ್ಯಯುತವಾದವುಗಳು ಆಗಿದೆ, ಶಿಕ್ಷಕರಿಂದ ತರಬೇತಿ, ವೈದ್ಯರಿಂದ ಉಪಚಾರ, ಚಾಲಕರಿಂದ ಸಾರಿಗೆ ಬ್ಯಾಂಕರನಿಂದ ಹಣಕಾಸು, ಮೊಬೈಲ್ ಸೇವೆ ನೀಡುವವರಿಂದ ಸಂಪರ್ಕ ಇತ್ಯಾದಿಗಳು ಆವು ಸೃಷ್ಟಿಯಾಗುವ ಸಮಯದಲ್ಲಿಯೇ ಬಳಕೆಯಾಗುತ್ತವೆ. ಸೇವೆಗಳ ಗುಣಮಟ್ಟವು ಕೃಷಿ ಮತ್ತು ಉತ್ಪಾದನಾ ಚಟುವಟಿಕೆಗಳಲ್ಲಿರುವಂತೆ ಕಟ್ಟಾ ಸರಕುಗಳನ್ನು ಅವಲಂಬಿಸಿರದೇ ಒದಗಿಸುವವರ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.
ಈ ಮೇಲಿನ ವಿವಿಧ ಚಟುವಟಿಕೆಗಳನ್ನು ಮೂರು ವಲಯಗಳಲ್ಲಿ ಅಂದರೆ, ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ವಲಯಗಳಲ್ಲಿ ವಿಂಗಡಿಸುವುದು ವಾಡಿಕೆಯಾಗಿದೆ.
ಪ್ರಾಥಮಿಕ ವಲಯ : ಪ್ರಾಥಮಿಕ ವಲಯವು ನಿಸರ್ಗ ಆಧಾರಿತ ಚಟುವಟಿಕೆಗಳು ಅಂದರೆ ಕೃಷಿ, ರೇಷ್ಮೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಹೂವು ಬೆಳೆಸುವುದು, ಇತ್ಯಾದಿ ಕೃಷಿಗೆ ಪೂರಕವಿರುವ ಚಟುವಟಿಕೆಗಳನ್ನು ಒಳಗೊಂಡಿದೆ.
ಮಹತ್ವ: ಪ್ರಾಥಮಿಕ ವಲಯದಲ್ಲಿ ಕೃಷಿಯು ಪಧಾನ ಚಟುವಟಿಕೆಯಾಗಿದ್ದು ರಾಷ್ಟ್ರೀಯ ಆದಾಯದಲ್ಲಿ ಹೆಚ್ಚಿನ ಪಾಲು ಹೊಂದಿದೆ. ಭಾರತದ ಆರ್ಥವ್ಯವಸ್ಥೆಯಲ್ಲಿ ಕೃಷಿಯ ಪಾತ್ರ ಮತ್ತು ಮಹತ್ವ ಕುರಿತು ಗಮನ ಹರಿಸೋಣ, ಇಂದಿಗೂ ಸಹ ಕೃಷಿಯು ನಮ್ಮ ರಾಷ್ಟ್ರದ ಬೆನ್ನೆಲುಬು ಎಂದು ಪರಿಗಣಿತವಾಗಿದೆ. ಆದು ಅತ್ಯಧಿಕ ಜನರಿಗೆ ಉದ್ಯೋಗ ನೀಡುತ್ತಿದೆಯಲ್ಲದೆ, ನಿರಂತರವಾಗಿ ಏರುತ್ತಿರುವ ಜನಸಂಖ್ಯೆಗೆ ಆಹಾರವನ್ನು ಒದಗಿಸಿದೆ. ಹಲವಾರು ಕೈಗಾರಿಕೆಗಳಿಗೆ ಕಚ್ಚಾ ಸರಕುಗಳನ್ನು ಪೂರೈಸುತ್ತಿದೆ ಮತ್ತು ಸೇವೆಗಳ ಬೆಳವಣಿಗೆಗೆ ಅತ್ಯಮೂಲ್ಯ ಕೊಡುಗೆ ನೀಡಿದೆ.
ದ್ವಿತೀಯ ವಲಯ : ದ್ವಿತೀಯ ವಲಯವನ್ನು ಉತ್ಪಾದನಾ ವಲಯ ಎಂತಲೂ ಕರೆಯುತ್ತಾರೆ. ಇದು ಕಚ್ಚಾ ಸರಕುಗಳನ್ನು ಸಿದ್ದ ವಸ್ತುಗಳನ್ನಾಗಿ ಪರಿವರ್ತಿಸುತ್ತದೆ. ಸಾಮಾನ್ಯವಾಗಿ, ಪ್ರೀತಿಯ ವಲಯವು ಕಟ್ಟಡ ನಿರ್ಮಾಣ ಮತ್ತು ವಿದ್ಯುತ್‌ಶಕ್ತಿ ಉತ್ಪಾದನೆ ಒಳಗೊಂಡಂತೆ ಎಲ್ಲ ಕೈಗಾರಿಕಾ ಚಟುವಟಿಕೆಯನ್ನು ಹೊಂದಿರುತ್ತದೆ. ಆದಾಗ್ಯೂ, ಕೈಗಾರಿಕಾ ಚಟುವಟಿಕೆಯು ಪ್ರಭಾವಶಾಲಿ ಮತ್ತು ಮಹತ್ವದ ಅಂಗವಾಗಿದೆ.
ಕೈಗಾರಿಕಾ ವಲಯದ ಮಹತ್ವ: ಕೈಗಾರಿಕಾ ವಲಯದ ಮಹತ್ವವು ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ಅಧಿಕವಾಗಿದೆ. ಅದು ರಾಷ್ಟ್ರೀಯ ಆದಾಯಕ್ಕೆ ಮೂರನೆಯ ಒಂದು ಭಾಗದಷ್ಟು ಕೊಡುಗೆ ನೀಡುತ್ತದೆ, ಮೂಲಭೂತ ಸೌಕರ್ಯಗಳಾದ ಸಾರಿಗೆ, ಇಂಧನ ಮತ್ತು ಸಂಪರ್ಕಗಳನ್ನು ಸದೃಢಗೊಳಿಸಿದೆ ಮತ್ತು ನಾವು ದಿನನಿತ್ಯ ಬಳಸುವ ಹಲವಾರು ಸರಕುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕೈಗಾರಿಕೆಗಳು ಉತ್ಪಾದಿಸಿವೆ.
ತೃತೀಯ ವಲಯ : ತೃತೀಯ ವಲಯವನ್ನು ಸೇವಾ ವಲಯ ಎಂತಲೂ ಕರೆಯುತ್ತಾರೆ. ಈ ವಲಯವು ಭಾರತವನ್ನು ಒಳಗೊಂಡಂತೆ ವಿಶ್ವದಾದ್ಯಂತ ತೀವ ದರದಲ್ಲಿ ಬೆಳೆಯುತ್ತಿದೆ. ನಿಮ್ಮ ಸುತ್ತಮುತ್ತ ಇರುವ ವಿವಿಧ ಅಂಗಡಿಗಳು, ದೂರವಾಣಿ ಸೇವೆಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಹೋಟೆಲುಗಳು, ರೆಸ್ಟೋರೆಂಟ್‌ಗಳು, ಹಣಕಾಸು ಮತ್ತು ಬ್ಯಾಂಕಿನ ಸಂಸ್ಥೆಗಳು, ತರಬೇತಿ ಮತ್ತು ಸಲಹಾ ಚಟುವಟಿಕೆಗಳು ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳನ್ನು ನೋಡಿ ನಿಮಗೆ ಆಶ್ಚರ್ಯವಾಗಬಹುದು. ಈ ಎಲ್ಲ ಸೇವೆಗಳು ನಿಮ್ಮ ಜೀವನವನ್ನು ಹೆಚ್ಚು ಆರಾಮದಾಯಕ ಮತ್ತು ಮೌಲ್ಯಯುತವಾಗಿಸಲು ಪ್ರಯತ್ನಿಸುತ್ತವೆ. ಆಗಿರುತ್ತದೆ.
ಭಾರತದ ರಾಷ್ಟ್ರೀಯ ಆದಾಯಕ್ಕೆ ಅತ್ಯಧಿಕ ಕೊಡುಗೆಯನ್ನು ಸೇವಾ ವಲಯ (ಶೇ.59) ನೀಡುತ್ತದೆಯಲ್ಲದೇ ಶೇ.28ರಷ್ಟು ಉದ್ಯೋಗ ನೀಡಿದೆ. ಈ ವಲಯವು ವಿದೆ ಬಂಡವಾಳವನ್ನು ಆಕರ್ಷಿಸುವಲ್ಲಿ ಮತ್ತು ರಫ್ತ ಗಳಿಕೆಯಲ್ಲೂ ಮುಂಚೂಣಿಯಲ್ಲಿದೆ. ಭಾರತವು ಸುಮಾರು 5 ಲಕ್ಷ ಕೋಟಿ ರೂಪಾಯಿಗಳನ್ನು ರಫ್ತ ಆದಾಯ ಗಳಿಸಿದೆ.
ರಾಷ್ಟ್ರೀಯ ಆದಾಯದಲ್ಲಿ ವಿವಿಧ ವಲಯಗಳು ಮತ್ತು ಬೆಳವಣಿಗೆ ದರಗಳು
ಕಾಲಾಂತರದಲ್ಲಿ ವಿವಿಧ ಆರ್ಥಿಕ ವಲಯಗಳ ಪಾಲಿನಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. 1951 ರಿಂದ 2013 ರಲ್ಲಿ ನಮ್ಮ ರಾಷ್ಟ್ರೀಯ ಆದಾಯದಲ್ಲಿ ವಿವಿಧ ವಲಯಗಳ ಕೊಡುಗೆಯನ್ನು ಕೆಳಗಿನ ಚಿತ್ರವು ತೋರಿಸುತ್ತದೆ.
ಭಾರತದ ಸಮಗ್ರ ಆಂತರಿಕ ಉತ್ಪನ್ನದಲ್ಲಿ ವಲಯವಾರು ಸಾಲುಗಳ ಬದಲಾವಣೆ, 1951 ರಿಂದ 2013 (%)
ಚಿತ್ರದಲ್ಲಿ ಪ್ರಾಥಮಿಕ ವಲಯದ ಮಹತ್ವ ಕು ತೃತೀಯ ವಲಯದ ಮಹತ್ವ ಹೆಚ್ಚಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಕೈಗಾರಿಕಾ ಚಟವಟಿಕೆಯ ಕೂಡ ಹೆಸರಿಸಲ್ಪಟ್ಟಿದೆ. ವಲಯಗಳ ಅಪಾಯದ ಬೆಳವಣಿಗೆಯ ದರಗಳನ್ನು ಕೆಳಗಿನ ಶೋಕದಲ್ಲಿ ನೀಡಿದೆ.
ಕೋಷ್ಟಕ :: ವಲಯವಾರು ರಾಷ್ಟ್ರೀಯ ಆದಾಯದ ಸರಾಸರಿ ಬೆಳವಣಿಗೆಯ ದರ (%)
ಮೂಲ : ಯೋಜನಾ ಆಯೋಗದ ಅಂಕಿಸಂಖ್ಯೆಗಳಿಂದ ಭಕ್ತ ಮಾಡಲಾಗಿದೆ. ಸೇವಾ ವಲಯದ ಬೆಳವಣಿಗೆಯು ಗರಿಷ್ಠ ಇದ್ದರೆ, ಕೃಷಿಯ ಬೆಳವಣಿಗೆಯ ದರವು ಅತ್ಯಂತ ಕಡಿಮೆ ಇದೆ.
ವಿಶೇಷವಾಗಿ 1990ರ ನಂತರ, ಸೇವಾ ವಲಯದ ಬೆಳವಣಿಗೆಯು ತೀವ್ರಗೊಂಡು ಆರ್ಥಿಕ ಬೆಳವಣಿಗೆಯ ಪ್ರಮುಖ ಕಾರಣವಾಗಿ ಹೊರಹೊಮ್ಮಿದೆ. ಕೈಗಾರಿಕೆ ಬೆಳವಣಿಗೆಯು ಹಲವಾರು ಕಾರಣಗಳಿಂದ ಏರಿಳಿತಗಳನ್ನು ಕಂಡಿದೆ, ಕೃಷಿಯ ಪಾಲು ಇಳಿಕೆಯಾಗಿ ಅದರ ಬೆಳವಣಿಗೆ ದರ ಕಡಿಮೆಯಾಗಿರುವುದರಿಂದ ಭಾರತದಲ್ಲಿ ಗ್ರಾಮೀಣ ಬಡತನದ ಸಮಸ್ಯೆಯು ಗಂಭೀರವಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ