ಕೈಗಾರಿಕಾ ಅಭಿವೃದ್ಧಿಯ ಅರ್ಥವ್ಯವಸ್ಥೆಯ ತ್ವರಿತಗತಿಯ ಅಭಿವೃದ್ಧಿಗೆ ಅತ್ಯವಶ್ಯವಾಗಿದೆ. ಯಾವ ಸ್ಥಳದಲ್ಲಿಯಾದರೂ, ಸರಳ ತಾಂತ್ರಿಕತೆಯೊಂದಿಗೆ ಕಡಿಮೆ ಸಂಖ್ಯೆಯ ಜನರನ್ನು ಉದ್ಯೋಗಕ್ಕೆ ತೆಗೆದುಕೊಂಡು, ಸ್ಥಳೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆಯಲ್ಲಿ ತೊಡಗುವ ಸಣ್ಣ ಕೈಗಾರಿಕೆಗಳು ಒಟ್ಟಾರೆ ಕೈಗಾರಿಕಾಭಿವೃದ್ಧಿಯಲ್ಲಿ ಬಹಳ ಪ್ರಮುಖವಾದವುಗಳು ಆಗಿನ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಅವುಗಳು ಯಂತ್ರೋಪಕರಣದಲ್ಲಿ ಮಾಡಿದ ಹೂಡಿಕೆಯ ಪ್ರಮಾಣವನ್ನು ವ್ಯಾಖ್ಯಾನಿಸಲಾಗುತ್ತದೆ. 2006ರಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ತದ ಉದ್ಯಮ ಅಭಿವೃದ್ಧಿ (MSME) ಕಾಯಿದೆಯು ನೀಡಿದ ವ್ಯಾಖ್ಯೆಯು ಈ ಕೆಳಗಿನಂತಿದೆ.
ಸಣ್ಣ ಕೈಗಾರಿಕೆಗಳ ಮಹತ್ವ
ಸಣ್ಣ ಕೈಗಾರಿಕೆಗಳ ಚಟುವಟಿಕೆಗಳನ್ನು ಹೆಚ್ಚಿಸುವುದು ಆರ್ಥಿಕ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅವಶ್ಯವೆಂದು ಈ ಕೆಳಗಿನ ಅಂಶಗಳನ್ನು ತಿಳಿಯಬಹುದು.
1. ಉದ್ಯೋಗ ಸೃಷ್ಟಿ: ಸಣ್ಣ ಕೈಗಾರಿಕೆಗಳು ಸ್ವರೂಪದಲ್ಲಿ ಶ್ರಮ ಆಧಾಂತವುಗಳಾಗಿದ್ದು ಅಪಾರಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತವೆ.
2. ಸಂಪನ್ಮೂಲಗಳ ಮತ್ತು ಉದ್ಯಮ ಕೌಶಲ್ಯದ ಕ್ರೋಡಿಕರಣ: ಸಣ್ಣ ಕೈಗಾರಿಕೆಗಳು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಿಂದ ದೊಡ್ಡ ಪ್ರಮಾಣದ ಉಳಿತಾಯಗಳನ್ನು ಮತ್ತು ಉದ್ಯಮಶೀಲತಾ ಕೌಶಲ್ಯವನ್ನು ಬಳಕೆ ಮಾಡುವಲ್ಲಿ ಯಶಸ್ವಿಯಾಗಿವೆ. ಸಣ್ಣ ಉದ್ಯಮದಾರರು ಸಪ್ತ ಮತ್ತು ಕಡೆಗಣಿಸಲಾದ ಪ್ರತಿಭೆಗೆ ಚಾಲನೆಯನ್ನು ನೀಡುತ್ತಿರುವರು,
3. ಆದಾಯದ ಸಮ ಹಂಚಿಕೆ: ಸಣ್ಣ ಕೈಗಾರಿಕೆಗಳು ಸಂಪತ್ತು, ಆದಾಯ ಮತ್ತು ರಾಜಕೀಯ ಶಕ್ತಿಯ ಹೆಚ್ಚು ಸಮಾನ ಮರುಹಂಚಿಕೆಗೆ ಕಾರಣವಾಗುತ್ತವೆ.
4. ಕೈಗಾರಿಕೆಗಳ ಪ್ರಾದೇಶಿಕ ವಿಸ್ತರಣೆ: ಕೆಲವೇ ನಗರಗಳಲ್ಲಿ ಕೈಗಾರಿಕೆಗಳ ಕೇಂದ್ರೀಕರಣದಿಂದಾಗಿ ಅತಿಯಾದ ಜನದಟ್ಟಣೆ, ಮಾಲಿನ್ಯ, ಕೊಳಚೆ ಪ್ರದೇಶಗಳ ಉಗಮ, ಇತ್ಯಾದಿಗಳಿಗೆ ಕಾರಣವಾಗುತ್ತದೆ. ರಾಷ್ಟ್ರದ ಎಲ್ಲ ಪ್ರದೇಶಗಳಲ್ಲಿಯೂ ಹರಡುವ ಸಾಮರ್ಥ್ಯವಿರುವ ಸಣ್ಣ ಕೈಗಾರಿಕೆಗಳು ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಸರಿಪಡಿಸಿ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡಿವೆ.
5. ತಂತ್ರಜ್ಞಾನದ ಅಭಿವೃದ್ಧಿ : ಸಣ್ಣ ಕೈಗಾರಿಕೆಗಳು ಆವಿಷ್ಕಾರಗಳನ್ನು ಸೃಷ್ಟಿಸಿ ಅದನ್ನು ಅಳವಡಿಸಿಕೊಳ್ಳುವ - ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಸಣ್ಣ ಉಬ್ಬಮದಾರರು ಹೊಸ ಆವಿಷ್ಕಾರಗಳನ್ನು ಮತ್ತು ವಸ್ತುಗಳನ್ನು ವಾಣಿಜ್ಯ ಕರಣಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವರು, ತಂತ್ರಜ್ಞಾನದ ವರ್ಗಾವಣೆಗೆ ಕೂಡ ಇವು ಅತ್ಯಂತ ಸೂಕ್ತವಾಗಿವೆ.
6. ರಫ್ತು ಉತ್ತೇಜನ : ರಫ್ತುಗಳ ಹೆಚ್ಚಳಕ್ಕೆ ಮತ್ತು ಅಧಿಕ ವಿದೇಶಿ ವಿನಿಮಯ ಗಳಿಕೆಗೆ ಸಣ್ಣ ಕೈಗಾರಿಕೆಗಳು ಗಣನೀಯ ಕೊಡುಗೆಯನ್ನು ನೀಡುತ್ತಿವೆ. ಭಾರತದ ರಫ್ತುಗಳಲ್ಲಿ ಅವುಗಳ ಪಾಲು ಶೇ.40ರಷ್ಟಿದೆ.
ಭಾರತದಲ್ಲಿ ಸಣ್ಣ ಕೈಗಾರಿಕೆಗಳು
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ವಿಭಾಗದ ವಾರ್ಷಿಕ ವರದಿಯ ಪ್ರಕಾರ, 2013-Hರಲ್ಲಿ ಭಾರತದಲ್ಲಿ 488,4 ಲಕ್ಷ ಉದ್ಯಮಗಳು ಕಾರ್ಯನಿರ್ವಹಿಸುತ್ತಿದ್ದವು ಮತ್ತು ಅವುಗಳು 13,63,700 ಕೋಟಿ ರೂಪಾಯಿಗಳ ಒಟ್ಟು ಹೂಡಿಕೆಯೊಂದಿಗೆ 11,14 ಕೋಟಿ ಜನರಿಗೆ ಉದ್ಯೋಗ ಒದಗಿಸಿದ್ದವು. ಅದೇ ವರ್ಷದಲ್ಲಿ ರಾಷ್ಟ್ರೀಯ ಆದಾಯದ ಶೇ.78ರಷ್ಟು ಪಾಲು ಹೊಂದಿದ್ದವು. ಅವು ಕೈಗಾರಿಕಾ ವಲಯದ ಒಟ್ಟು ಉತ್ಪನ್ನದ ಮೌಲ್ಯರ ಶೇ.35, ಒಟ್ಟು ಕೈಗಾರಿಕಾ ಉದ್ಯೋಗದ ಶೇ.8ರಷ್ಟು ಮತ್ತು ರಾಷ್ಟ್ರದ ಒಟ್ಟು ರಡ್ಡಿನಲ್ಲಿ ಶೇ. 40ರಷ್ಟು ಹೊಂದಿವೆ.
ಸಣ್ಣ ಕೈಗಾರಿಕೆಗಳ ಸಮಸ್ಯೆಗಳು :
ರಾಷ್ಟ್ರದ ಅರ್ಥವ್ಯವಸ್ಥೆಯಲ್ಲಿ ಸಣ್ಣ ಕೈಗಾರಿಕೆಗಳ ಮಹತ್ವ ಗಣನೀಯವಾಗಿದ್ದರೂ ಅವುಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳಲ್ಲಿ ಕೆಲವು
1. ಸರಕುಗಳ ಅಲಭ್ಯತೆ : ಭಾರತದಲ್ಲಿ ಸಣ್ಣ ಕೈಗಾರಿಕೆಗಳು ಕಚ್ಚಾ ಸರಕು ಅಗತ್ಯ ಬಿಡಿ-ಭಾಗಗಳ ಮತ್ತು ಉಪಕರಣಗಳ ಕೊರತೆಯಿಂದ ನರಳುತ್ತಿವೆ.
2. ಹಣಕಾಸಿನ ಸಮಸ್ಯೆ: ಸಣ್ಣ ಉದ್ಯಮಗಳು ಸಮರ್ಪಕ ಪ್ರಮಾ ಸ್ವಂತ ಬಂಡವಾಳವನ್ನು ಹೊಂದಿರುವುದಿಲ್ಲ ಮತ್ತು ಅವುಗಳು ಸಾಲ ಪಡೆಯುವ ಸಾಮರ್ಥ್ಯ ಕೂಡ ಕಡಿಮೆ ಇದೆ.
3. ಕಡಿಮೆ ತಾಂತ್ರಿಕ ಕೌಶಲ್ಯ: ಈ ಉಲ್ಪಮಗಳ ತಾಂತ್ರಿಕ ಕೌಶಲ್ಯ ಮತ್ತು ನಿರ್ವಹಣಾತ್ಮಕ ಸಾಮರ್ಥ್ಯವು ಅಸಮರ್ಪಕವಾಗಿದೆ. ಸುಧಾರಿತ ತಂತ್ರಜ್ಞಾನವನ್ನು ಕೊಂಡುಕೊಳ್ಳುವ ಮತ್ತು ಅಳವಡಿಸಿಕೊಳ್ಳುವ ಅವರ ಸಾಮರ್ಥ್ಯವು ತುಂಬಾ ಕಡಿಮೆ.
4. ಮಾರುಕಟ್ಟೆ ಸದುಸ್ಯೆಗಳು: ಸಣ್ಣ ಉತ್ಪಾದಕರಿಗೆ ದೊಡ್ಡ ಉತ್ಪಾದಕರಂತೆ ಸಂಘಟಿತ ಮಾರಾಟದಲ್ಲಿ ಮತ್ತು ಆಕ್ರಮಣಕಾರಿ ಜಾಹೀರಾತಿನಲ್ಲಿ ತೊಡಗಲು ಆಗುವುದಿಲ್ಲ. ಅವರು ತಮ್ಮ ಮಾರಾಟಗಳನ್ನು ಉತ್ತೇಜಿಸಲು ಮಾರುಕಟ್ಟೆ ಸಂಶೋಧನೆಯನ್ನು ಕೈಗೊಳ್ಳುವ ಸ್ಥಿತಿಯಲ್ಲಿಯೂ ಇರುವುದಿಲ್ಲ. ಹೀಗಾಗಿ ಅವುಗಳು ಮಾರಾಟದ ಸಮಸ್ಯೆಯನ್ನು ಎದುರಿಸುತ್ತವೆ.
5. ಬೃಹತ್ ಕೈಗಾರಿಕೆಗಳಿಂದ ಬೈಪೋಟಿ: ಹಲವಾರು ಸನ್ನಿವೇಶಗಳಲ್ಲಿ, ಬೃಹತ್ ಕೈಗಾರಿಕೆಗಳು ಸಣ್ಣ ಕೈಗಾರಿಕೆಗಳಿಗೆ ಹಾನಿಯನ್ನುಂಟು ಮಾಡುವ ರೀತಿಯಲ್ಲಿ ಆಕ್ರಮಣಕಾರಿ ಮಾರಾಟ ಅಥವಾ ಕಚ್ಚಾ ವಸ್ತುಗಳ ಖರೀದಿಯಲ್ಲಿ ಸಣ್ಣ ಕೈಗಾರಿಕೆಗಳನ್ನು ಸಹಾಯಕ ಮಾಡುತ್ತವೆ.
ಆದಾಗ್ಯೂ, ಭಾರತ ಸರ್ಕಾರವು ಹಲವಾರು ಕ್ರಮಗಳಾದ ಸ್ಟಾರ್ಟ್‌ಅಪ್ ಇಂಡಿಯಾ, ಸ್ಟಾಂಡಪ್ ಇಂಡಿಯಾ, ಮುದ್ರಾ ಬ್ಯಾಂಕ್, ಇತ್ಯಾದಿಗಳಿಂದ ಸಣ್ಣ ಕೈಗಾರಿಕೆಗಳಿಗೆ ಸಹಾಯವನ್ನು ನೀಡುತ್ತಿದೆ.
ಕಾಮೆಂಟ್ ಪೋಸ್ಟ್ ಮಾಡಿ