ಕೃಷಿ ಬಿಕ್ಕಟ್ಟು : ಕಾರಣಗಳು ಮತ್ತು ಪರಿಹಾರ ಕ್ರಮಗಳು


ನಾವು ಈಗಾಗಲೇ ಭಾರತದ ಅರ್ಥವ್ಯವಸ್ಥೆಯಲ್ಲಿ ಕೃಷಿಯ ಮಹತ್ವವನ್ನು ಗಮನಿಸಿದ್ದೇವೆ, ಜೀವನೋಪಾಯಕ್ಕಾಗಿ ಹೆಚ್ಚಿನ ಸಂಖ್ಯೆಯ ಜನರು ಇದನ್ನು ಅವಲಂಬಿಸಿರುವುದು ಈ ವಲಯದ ಉತ್ತಮ ಸಾಧನೆಯ ಅವಶ್ಯಕತೆಯನ್ನು ಬಿಂಬಿಸುತ್ತದೆ, ಆದರೆ, ಕೃಷಿಯು ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಗ್ರಾಮೀಣ ಜನರ ವಲಸೆ ಮತ್ತು ಹೆಚ್ಚುತ್ತಿರುವ ಆತ್ಮಹತ್ಯೆಯ ಸಂಖ್ಯೆಗಳು ಈ ಸಮಸ್ಯೆಯ ಕರಾಳ ಮುಖಗಳಾಗಿವೆ. ಕೃಷಿಯ ಈ ಬಿಕ್ಕಟ್ಟಿಗೆ ಕಾರಣಗಳನ್ನು ಮತ್ತು ಪರಿಹಾರಗಳನ್ನು ಈಗ ಸಂಕ್ಷಿಪ್ತವಾಗಿ ಅಧ್ಯಯನ ಮಾಡೋಣ,


ಕೃಷಿ ಬಿಕ್ಕಟ್ಟಿಗೆ ಕಾರಣಗಳು : ಹಲವಾರು ಅಂಶಗಳು ಈ ಕೃಷಿಯ ಸಮಸ್ಯೆಗಳನ್ನು ತೀವ್ರವಾಗಿಸಿವೆ.


ಅವುಗಳಲ್ಲಿ ಪ್ರಮುಖವಾದವು ಕೆಳಗಿನಂತಿವೆ:


1. ಸಣ್ಣ ಗಾತ್ರದ ಸಾಗುವಳ ಹಿಡುವಳಿಗಳು : ಹಿಡುವಳಿ ಎಂದರೆ ಒಂದು ಕುಟುಂಬವು ಸಾಗುವ ಮಾಡುತ್ತಿರುವ ಭೂಮಿಯ ಗಾತ್ರವಾಗಿದೆ. ಕೃಷಿಯ ಮೇಲೆ ಅವಲಂಬಿತ ಜನಸಂಖ್ಯೆ ಏರಿಕೆಯಾಗಿದ್ದರಿಂದ, ಹಿಡುವಳಿಗಳು ಸಣ್ಣ ತುಂಡುಗಳಾಗಿ ವಿಭಜಿಸಲ್ಪಟ್ಟಿವೆ, 2011-12ರ ಕೃಷಿ ಗಣತಿಯ ಪ್ರಕಾರ, ಸಣ್ಣ (1ರಿಂದ 2 ಹೆಕ್ಟೇರ್) ಮತ್ತು ಅಂಚನ (1 ಹೆಕ್ಟೇ‌ಗಿಂತ ಕಡಿಮೆ) ಓಡುವಳಿಗಳು ಒಟ್ಟು ಹಿಡುವಳಿಗಳ ಶೇಕಡಾ 85ರಷ್ಟಿವೆ. ಅದರಂತೆ, 2011-12ರಲ್ಲಿ ಹಿಡುವಳಿಗಳ ಸರಾಸರಿ ಗಾತ್ರ ಕೇವಲ 1.16 ಹೆಕ್ಟೇರ್ ಇತ್ತು. ಇಷ್ಟು ಸಣ್ಣ ಗಾತ್ರದ ಭೂಮಿಯಲ್ಲಿ ಯಾವುದೇ ತೆರನಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆಗುವುದಿಲ್ಲ, ಆಧಾನಿಕ ಉತ್ಪಾದನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತತ್ಪರಿಣಾಮವಾಗಿ ಇದ್ದು ಕೃಷಿಕರು ಬಡವರಾಗುತ್ತಿದ್ದಾರೆ.


2. ಉತ್ಪಾದಕತೆ ಕಡಿಮೆ ಅಧಿಕ ಜನಸಂಖ್ಯೆಯ ಒತ್ತಡ: ಆತಿ ಹೆಚ್ಚಿನ ಸಂಖ್ಯೆಯ ದುಡಿಮೆಗಾರರು ತುಂಡು ಭೂಮಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಪ್ರತಿ ವ್ಯಕ್ತಿಯ ಉತ್ಪಾದನೆ ಮತ್ತು ಆದಾಯ ಅತ್ಯಂತ ಕಡಿಮೆ ಇದೆ. ಹಲವಾರು ಸಣ್ಣ ಮತ್ತು ಆತಿ ಸಣ್ಣ ಕೃಷಿಕರು ಕೃಷಿ ಕಾರ್ಮಿಕರಾಗಿ ಅತ್ಯಂತ ಕಡಿಮೆ ಕೂಲಿಗೆ ದುಡಿಯುತ್ತಾರೆ.


3. ಮಳೆ-ಆಧಾರಿತ ಕೃಷಿ ಮತ್ತು ಮೇಲಿಂದ ಮೇಲೆ ಬಂದೆರಗುವ ಬರಗಾಲ : ಭಾರತದ ಕೃಷಿಯು ಮಳೆಯನ್ನು ಅವಲಂಬಿಸಿದ್ದು, ಅದು ಅತ್ತಿತ, ನಿಯಮಿತ ಮತ್ತು ಅಸಮರ್ಪಕ ಇದೆ. ಕೃಷಿ ಭೂಮಿಯ ಶೇಕಡಾ 7ಕ್ಕೆ (143 ದಶಲಕ್ಷ ಪರು ಸಾಗುವಳಿ ಭೂಮಿಯಲ್ಲಿ 43 ದಶಲಕ್ಷ ಹೆಕ್ಟೇರ್‌ಗಳು) ಮಾತ್ರ ನೀರಾವರಿ ಸೌಲಭ್ಯ ಹೊಂದಿದ್ದು, ಉಳಿದ ಭೂಮಿಯು ಮಳೆಯನ್ನೇ ಅವಲಂಘಿಸಿದೆ. ಭಾರತದ ಕೃಷಿಯನ್ನು ಮಾನ್ಸೂನ್ ನೊಂದಿಗೆ ಜೂಜಾಟ ಆಡುತ್ತದೆ’ ಎಂದು ಹೇಳಲಾಗುತ್ತದೆ. ನೀರಾವರಿಯ ಕೊರತೆ ಜೀವನ ನಿಕೃಷ್ಟವಾಗಿದೆ.


4. ಹಸಿರು ಕ್ರಾಂತಿಯ ಭಾಗವ: ಪ್ರಭಾವ : ಹಸಿರು ಕ್ರಾಂತಿಯು ನೀರಾವರಿ ಸೌಲಭ್ಯ ಹೊಂದಿರುವ ಪ್ರದೇಶಗಳಲ್ಲಿ, ಅಕ್ಕಿ ಮತ್ತು ಗೋಧಿ ಬೆಳೆಗಾರರಿಗೆ ಮಾತ್ರ ಪ್ರಯೋಜನ ಒದಗಿಸಿ, ಶುಷ್ಕ ಪ್ರದೇಶಗಳ ಇದು ಕೃಷಿಗೆ ಅದು ಅಷ್ಟೇನೂ ಅನುಕೂಲ ಒದಗಿಸಿಲ್ಲ. ಹಸಿರು ಕ್ರಾಂತಿಯ ತಂತ್ರಜ್ಞಾನವು ವೆಚ್ಚದಾಯಕವಾಗಿರುವುದರಿಂದ ಸಣ್ಣ ಮತ್ತು ಆತಿ ಸಣ್ಣ ರೈತರಿಗೆ ಅದನ್ನು ಅಳವಡಿಸಲು ಸಾಧ್ಯವಾಗಿಲ್ಲ, ಹೀಗೆ, ಬಹಳಷ್ಟು ಕೃಷಿಕರು ಬಡವರಾಗಿ ಮತ್ತು ಹಿಂದುಳಿದವರಾಗಿ ಇರುವರು.


5. ನೀರಾವರಿ ಮತ್ತು ಇತರ ಮೂಲಸೌಕರ್ಯಗಳಲ್ಲಿ ಸಾರ್ವಜನಿಕ ಹೂಡಿಕೆಗಳ ಕುಗ್ಗುವಿಕೆ ಕೃಷಿಯಲ್ಲಿ – ಸಾರ್ವಜನಿಕ ಹೂಡಿಕೆ ಇಳಿಕೆಯಾಗಿದ್ದು, ಇದರಿಂದಾಗಿ ಕೃಷಿಯ ಬೆಳವಣಿಗೆ ಕ್ರಮೇಣ ಕಡಿಮೆಯಾಗಿದೆ. ವಿಶೇಷವಾಗಿ, ನೀರಾವರಿಯಲ್ಲಿ ಕಡಿಮೆಯಾಗುತ್ತಿರುವ ಹೂಡಿಕೆಯು ಕೃಷಿಯ ಬೆಳವಣಿಗೆಯನ್ನು ದುರ್ಬಲಗೊಳಿಸಿದೆ.


6. ಸಾಂಸ್ಥಿಕ ಮೂಲಗಳಿಂದ ಅಸಮರ್ಪಕ ಸಾಲ: ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳಂತಹ ಔಬಿಜಾರಿಕ ಮೂಲಗಳಿಂದ ಕೃಷಿ ವಲಯಕ್ಕೆ ಸಾಲ ಪೂರೈಕೆಯು ಆಸಮರ್ಪಕವಾಗಿರುವುದರಿಂದ, ಕೃಷಿಕರು ಅನೌಪಚಾರಿಕ ಮೂಲಗಳಿಂದ ಸಾಲಕ್ಕೆ ಮೊರೆ ಹೋಗಿ ಅಲ್ಲಿ ಅಧಿಕ ಬಡ್ಡಿ ದರ ನೀಡುತ್ತಿದ್ದಾರೆ, ಇದರಿಂದ ಕೃಷಿಯ ಉಭದಾಯಕತ್ವ ಮತ್ತಷ್ಟು ಕುಗ್ಗಿದೆ.


7. ಲಾಭದಾಯಕ ಬೆಲೆ ಪಡೆಯಲು ಅಸಮರ್ಥತೆ: ಕೃಷಿ ಸರಕುಗಳ ಮಾರಾಟವು ಹಲವಾರು ಸಮಸ್ಯೆಗಳಿಂದ ಬಾಧಿಶವಾಗಿದೆ. ಕೃಷಿ ಸರಕುಗಳಿಗೆ ಉತ್ತಮ ಬೆಲೆ ದೊರೆಯುವುದಿಲ್ಲ. ಬೆಲೆ ಪಾವತಿಯು ಸರಿಯಾದ ಸಮಯದಲ್ಲಿ ಆಗುವುದಿಲ್ಲ ಮತ್ತು ನಿಗದಿತ ದಳ ಪಾವತಿಯಲ್ಲಿ ಹಲವಾರು ಕಡಿತಗಳು ಇರುವದರಿಂದ ಕೃಷಿಕರಿಗೆ ದೊರೆಯುವ ಪ್ರತಿಫಲವು ಅತ್ಯಂತ ಕಡಿಮೆ ಇದೆ, ಸರ್ಕಾರದ ಬೆಂಬಲ ಬೆಲೆ ನೀತಿಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.


ಹೀಗೆ ಕೃಷಿಯಲ್ಲಿ ಆದಾಯ, ಇಳುವರಿ, ಬೆಲೆ, ತಂತ್ರಜ್ಞಾನ ಮತ್ತು ಸಾಲ ಸಂಬಂಧಿತ ಬಹುವಿಧ ಸಮಸ್ಯೆಗಳು ಇರುವುದರಿಂದ ಕೃಷಿಯ ಆಕರ್ಷಣೆ ಕಡಿಮೆಯಾಗಿ ಅದನ್ನು ಎಲ್ಲರೂ ಬಿಡುತ್ತಿದ್ದಾರೆ. 


ಕೃಷಿ ಬಿಕ್ಕಟ್ಟಿಗೆ ಪರಿಹಾರಗಳು : ಕೃಷಿ ಬಿಕ್ಕಟ್ಟಿನ ಕಾರಣಗಳ ಪರಿಹಾರಗಳನ್ನೂ ಸೂಚಿಸುತ್ತಿದ್ದು, ಅವುಗಳಲ್ಲಿ ಮುಖ್ಯವಾಗಿ


1. ಸರ್ಕಾರದ ಹೂಡಿಕೆಯನ್ನು ಹೆಚ್ಚಿಸುವುದು : ಬರಗಾಲ ತಡೆಯಲು, ನೀರಾವರಿ, ಜಿಜಗಳ ಹೊಸ ತಳಿಗಳ ಸಂಶೋಧನೆ, ಕಡಿಮೆ ನೀರನ್ನು ಉಪಯೋಗಿಸುವ ಹೊಸ ಸಾಗುವಳಿ ಪದ್ಧತಿ ಮತ್ತು ಭೂ ಫಲವತ್ತತೆಯ ಸಂರಕ್ಷಣೆ, ಸಮರ್ಥ ಬೆಳೆ ಉತ್ಪಾದನಾ ಪದ್ಧತಿಗಳ ಕುರಿತು ಕೃಷಿಕರಿಗೆ ತರಬೇತಿ ಮತ್ತು ವಿಸ್ತರಣಾ ಕಾರ್ಯಗಳಲ್ಲಿ ಸರ್ಕಾರದ ಹೆಚ್ಚಿನ ಹೂಡಿಕೆಯ ತುರ್ತು ಅಗತ್ಯವಿದೆ,


2. ಸಾಲ ಸೌಲಭ್ಯಗಳ ವಿಸ್ತರಣೆ: ಸಣ್ಣ ಮತ್ತು ಅತಿ ಸಣ್ಣ ಕೃಷಿಕರು ಬ್ಯಾಂಕ್‌ ಇತರ ಹಣಕಾಸು ಸಂಸ್ಥೆಗಳಿಂದ ಸಮರ್ಪಕ ಸಾಲ ನೀಡುವ ವ್ಯವಸ್ಥೆಯಾಗಬೇಕು.ಸಾಲವನ್ನು ನೀಡುವ ವಿಧಾನಗಳು ಸರಳ ಮತ್ತು ರೈತ ಸ್ನೇಹಿ ಆಗಿರಬೇಕು.


3. ಮಾರುಕಟ್ಟೆ ಸುಧಾರಣೆಗಳು : ಕೃಷಿಕರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯ ಭರವಸೆ ಇರಬೇಕು, ಈ ಉದ್ದೇಶಕ್ಕಾಗಿ ಮಾರುಕಟ್ಟೆಗಳು ಮತ್ತು ಸೌಕರ್ಯಗಳನ್ನು ಬಲಗೊಳಿಸುವುದರ ಅಗತ್ಯವಿದೆ.


4. ಬೆಳೆ ವಿಮೆ : ಎಲ್ಲ ಪ್ರಕಾರಗಳ ಗಂಡಾಂತರಗಳಿಂದ ಕೃಷಿಕರಿಗೆ ಉಂಟಾಗುವ ನಷ್ಟವನ್ನು ಭರಿಸುವ ಮತ್ತು ಸರಿದೂಗಿಸುವ ವಿಮಾ ನೀತಿಯ ಅಗತ್ಯವಿದೆ. ಅದರಂತೆ, ವಿಮೆಯ ವೆಚ್ಚದ ಜೊತೆಗೆ ಅನುಸರಿಸುವ ಕಾರ್ಯ ವಿಧಾನಗಳು ಮತ್ತು ವಿಧಿವಿಧಾನಗಳು ಕನಿಷ್ಠವಿರುವ ಅಗತ್ಯವಿದೆ.


5. ಸಲಹೆ ಮತ್ತು ನೈತಿಕ ಬೆಂಬಲ : ಹತಾರಗೊಂಡ ಕೃಷಿಕರಿಗೆ ನೈತಿಕ ಬೆಂಬಲ ನೀಡಲು ಗ್ರಾಮೀಣ ಪ್ರದೇಶಗಳಲ್ಲಿ ಸಲಹಾ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದ್ದು, ಇವುಗಳ ಮೂಲಕ ರೈತರ ಆತ್ಮಹತ್ಯೆಗಳನ್ನು ತಡೆಯಬಹುದಾಗಿದೆ.


6. ಖಾಸಗಿ ಲೇವಾದೇವಿಗಾರರ ನಿಯಂತ್ರಣ : ಮೇಲಿನವುಗಳಲ್ಲದೇ, ಸಾಲಪಡದ ಬಡ ಕೃಷಿಕರನ್ನು ಶೋಷಿಸದಂತೆ ಲೇವಾದೇವಿ ವ್ಯವಹಾರಸ್ಥರ ಚಟುವಟಿಕೆಗಳನ್ನು ನಿಯಂತ್ರಿಸುವ ಅಗತ್ಯವಿದೆ.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು