ಸರ್ಕಾರ ಮತ್ತು ಅರ್ಥವ್ಯವಸ್ಥೆ

 

ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಮತ್ತು ಜನರ ಯೋಗಕ್ಷೇಮ ಹೆಚ್ಚಿಸುವಲ್ಲಿ ಸರ್ಕಾರ ಅಂತ ಮಹತ್ವದ ಪಾತ್ರ ವಹಿಸುತ್ತದೆ. ಆರ್ಥಿಕ ಬೆಳವಣಿಗೆ ಸ್ಥಿರತೆ, ಸಮಾನತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ. ಅಲ್ಲದೇ ಆರ್ಥಿಕ ಬಿಡುಗುಗಳಾದ ಬಡತನ, ನಿರುದ್ಯೋಗ, ಹಣದುಬ್ಬರ, ಮೂಲಸೌಕರ್ಯಗಳ ಕೊರತೆ ಮತ್ತು ಅಸಮಾನತೆಗಳನ್ನು ತೊಡೆದುಹಾಕಲು ಯೋಜನೆಗಳನ್ನು ರೂಪಿಸುತ್ತದೆ.

1947ರಲ್ಲಿ ದೇಶ ಸ್ವಾತಂತ್ರ್ಯ ಪಡೆದಾಗ ಆರ್ಥಿಕ ಪರಿಸ್ಥಿತಿಯು ತುಂಬಾ ಗಂಭೀರವಾಗಿತ್ತು. ಶಬ ಆದಾಯ ಅಲ್ಪವಾಗಿದ್ದಿತು; ಆಹಾರೋತ್ಪಾದನೆಯು ಅಗತ್ಯಕ್ಕಿಂತ ಕಡಿಮೆ ಇದ್ದಿತು. ತುಂಬಾ ಕಡಿಮೆ ಸಂಖ್ಯೆಯ ಉದ್ದಿಮೆಗಳಿದ್ದವು, ಯಂತ್ರೋಪಕರಣಗಳನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು ಸಾರಿಗೆ, ಶಕ್ತಿ, ಸಂಪರ್ಕ ಸಾಧನೆಗಳು ಅಸಮರ್ಪಕವಾಗಿದ್ದವು ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಸ್ವಲ್ಪ ಜನರಿಗೆ ಮಾತ್ರ ದಕ್ಕುತ್ತಿದ್ದವು ಮತ್ತು ಎಲ್ಲೆಡೆ ಹಿಂದುಳಿದ ವಾತಾವರಣವೇ ಇದ್ದಿತು. ಆದ್ದರಿಂದ ಅಭಿವೃದ್ಧಿಗೆ ಇರುವ ಅಡೆತಡೆಗಳನ್ನು ನಿವಾರಿಸಿ ಹಿಂದುಳಿದಿರುವಿಕೆಯನ್ನು ನಿವಾರಿಸಲು ಸರ್ಕಾರವು ಆದ್ಯ ಗಮನ ನೀಡಬೇಕಿತ್ತು. ಈ ಪರಿಸ್ಥಿತಿಯಲ್ಲಿ ಆಗಿನ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸಿ ದೇಶದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಬಹಳಷ್ಟು ಕ್ರಮಗಳನ್ನು ಆರಂಭಿಸಿದರು. ಈ ನಿಟ್ಟಿನಲ್ಲಿ ಪ್ರಮುಖವಾದುದು ಆದರೆ ಯೋಜನಾ ವಿಧಾನ

ಭಾರತದಲ್ಲಿ ಯೋಜನೆ

ಸರ್ವರ ಹಿತಾಸಕ್ತಿ ವೃದ್ಧಿಗೋಸ್ಕರ ಲಭ್ಯವಿರುವ ಸಂಪನ್ಮೂಲಗಳ ವ್ಯವಸ್ಥಿತ ವಿನಿಯೋಜನೆ ಮತ್ತು ಇತರ ಉದ್ದೇಶಪೂರ್ವಕ ಕ್ರಮಗಳನ್ನು ಅಳವಡಿಸಿಕೊಂಡು, ಪರ್ವ ನಿಗದಿತ ಗುರಿಗಳ ಸಾಧನೆಯೆಡೆಗೆ ಸಾಗವುದೇ ಯೋಜನೆ, ಅಗತ್ಯತೆಗಳನ್ನು ಗುರುತಿಸುವುದು: ಗುರಿಗಳನ್ನು ನಿರ್ಧರಿಸುವುದು, ಸಂಪನ್ಮೂಲಗಳನ್ನು ಸಂಗ್ರಹಿಸುವುದು: ಸಂಪನ್ಮೂಲಗಳ ಬಳಕೆಗೆ ಕ್ರಿಯಾಯೋಜನೆಗಳನ್ನು ರೂಪಿಸಿ ಮೇಲುಸ್ತುವಾರಿ ಮಾಡುವುದು ಮತ್ತು ಉದೇಶಗಳ ಈಡೇರಿಕೆಯನ್ನು ಮೌಲ್ಯಮಾವನ ಮಾಡುವ ಕಾರ್ಯಗಳನ್ನು ಒಳಗೊಂಡ ಪ್ರಕ್ರಿಯೆಯನ್ನು ಯೋಜನಾ ವಿಧಾನ’ ಎಂದು ಕರೆಯುತ್ತೇವೆ.

ಈ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಭಾರತದಲ್ಲಿ 1950ರಲ್ಲಿ ಯೋಜ, ಆಯೋಗವನ್ನು ರಚಿಸಲಾಯಿತು. 2015ರಲ್ಲಿ ಯೋಜನಾ ಆಯೋಗದ ಜಾಗದಲ್ಲಿ 19 (National Institute for Trans forming India (NITI) Arog) ಆಯೋಗವನ್ನು ಸ್ಥಾಪಿಸಲಾಯಿತು. ಯೋಜನಾ ಆಯೋಗವು ಮಿತ್ರ ಆರ್ಥಿಕ ವ್ಯವಸ್ಥೆಯ ಚೌಕಟ್ಟಿನಲ್ಲಿ ರಾಷ್ಟ್ರದ ಪ್ರಗತಿಗೆ ನಿರ್ದಿಷ್ಟ ದಿನ ನೀಡಲು ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದರೆ, ನೀತಿ ಆಯೋಗವು ಆರ್ಥವ್ಯವಸ್ಥೆಯನ್ನು ಅಪೇಕ್ಷಿತ ಗುರಿಗಳನ್ನು ಸಾಧಿಸಲು ದೀರ್ಘಾವಧಿ ಮುನ್ನೋಟ ತಂತ್ರಗಳನ್ನು ರೂಪಿಸುವಲ್ಲಿ ಒತ್ತು ನೀಡಿದೆ.


ಭಾರತದಲ್ಲಿ ಯೋಜನೆಗಳ ಉದ್ದೇಶಗಳು

1. ಬೆಳವಣಿಗೆಯನ್ನು ವೃದ್ಧಿಸುವುದು ಬಡತನವನ್ನು ಕಡಿಮೆಗೊಳಿಸಲು ರಾಷ್ಟ್ರೀಯ ಆದಾಯದ ಬೆಳವಣಿಗೆಯನ್ನು ಅತ್ಯವಶ್ಯ ಗುರಿ ಎಂದು ಪಾಲಿಸಲಾಯಿತು.

2. ಅರ್ಥವ್ಯವಸ್ಥೆಯನ್ನು ಆಧುನಿಕರಣಗೊಳಿಸುವುದು: ಅಧಿಕ ಪ್ರಮಾಣದ ಸರಕು ಹಾಗೂ ಸೇವೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಬಳಕೆಯನ್ನು ವಿಸ್ತರಿಸುವುದು ಯೋಜನೆಗಳ ಮತ್ತೊಂದು ಉದ್ದೇಶವಾಗಿದ್ದಿತು.

3. ಸ್ವಾವಲಂಬನೆ ಸಾಧಿಸುವುದು ನಮ್ಮ ಹಲವಾರು ಅವಶ್ಯಕತೆಗಳನ್ನು ಮುಖ್ಯವಾಗಿ ತಂತ್ರಜ್ಞಾನ, ಆಹಾರ ಮತ್ತು ಇಂಧನಗಳನ್ನು ನಾವು ಇತರ ರಾಷ್ಟ್ರಗಳಿಂದ ಆಮದಿನ ಮೂಲಕ ಪೂರೈಸಿಕೊಳ್ಳುತ್ತಿದ್ದವು. ನಮ್ಮ ಆಂತರಿಕ ವಿಷಯಗಳಲ್ಲಿ ವಿದೇಶಿ ಹಸ್ತಕ್ಷೇಪಗಳನ್ನು ಕಡಿಮೆಗೊಳಿಸಲು ಯೋಜನಾ ನಿರೂಪಕರು ಆವುದನ್ನು ಕಡಿಮೆ ಮಾಡುವಂತಹ ದೇಶಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಕ್ರಮ ಕೈಗೊಂಡರು.

4. ಆದಾಯ ಹಾಗೂ ಸಂಪತ್ತಿನ ಅಸಮಾನತೆ ಕಡಿಮೆ ಮಾಡುವುದು: ರಾಷ್ಟ್ರದಲ್ಲಿನ ಸಂಪತ್ತಿನ ಮರುಹಂಚಿಕೆಗೂ ಯೋಜನಾ ನಿರೂಪಕರು ಒತ್ತು ನೀಡಿದರು. ಆರ್ಥಿಕ ಬೆಳವಣಿಗೆಯ ಫಲಗಳು ಬಡಜನರಿಗೆ ತಲುಪಿ ಸರ್ವರಿಗೂ ಮೂಲ ಅವಶ್ಯಕತೆಗಳಾದ ಆಹಾರ, ವಸತಿ, ಶಿಕ್ಷಣ ಮತ್ತು ಆರೋಗ್ಯ ದೊರಕಿಸುವ ಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡಲಾಯಿತು.

5. ಮೂಲ ಸೌಕರ್ಯದ ವೃದ್ಧಿ: ಸಾರಿಗೆ, ಸಂಪರ್ಕ, ಶಕ್ತಿ, ನೀರಾವರಿ, ಶಾಲೆಗಳು, ಆಸ್ಪತ್ರೆಗಳು, ಹಾಗೂ ಎಸ್ತರಣೆಗಳಂತಹ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ರಾಷ್ಟ್ರವು ಸಂಶೋಧನೆ ತೀವ್ರಗತಿಯಲ್ಲಿ ಬೆಳೆಯಲು ಅನುವು ಮಾಡಲಾಯಿತು.

6. ಹಣಕಾಸು ಸಂಸ್ಥೆಗಳ ಅಭಿವೃದ್ಧಿ: ವಿಶಾಲ ತಳಹದಿಯ ಹಣಕಾಸು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿ ಸಂಪನ್ಮೂಲ ಸಂಗ್ರಹಣೆ ಹಾಗೂ ಆ ಸಂಪನ್ಮೂಲಗಳನ್ನು ಆದ್ಯತಾ ವಲಯಗಳಿಗೆ ಒದಗಿಸುವ ಹಣಕಾಸು ಸಂಸ್ಥೆಗಳ ಸ್ಥಾಪನೆ ಮಾಡಿ ತನ್ಮೂಲಕ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲಾಯಿತು.

7. ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ: ಹಲವಾರು ಕಾರಣಗಳಿಂದ ಕೆಲವು ಪ್ರದೇಶಗಳು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹಿಂದುಳಿಯುತ್ತವೆ ಅಥವಾ ನಿಧಾನಗತಿಯಲ್ಲಿ ಬೆಳೆಯುತ್ತವೆ. ಅಂಥ ಪ್ರದೇಶಗಳ ಬೆಳವಣಿಗೆಯನ್ನು ವೃದ್ಧಿಸಿ ಮುಂದುವರೆದ ಪ್ರದೇಶಗಳ ಜೊತೆಗೆ ಸಾಗುವ ನಿಟ್ಟಿನಲ್ಲಿ ಸಮತೋಲಿಕ ಪ್ರಾದೇಶಿಕ ಅಭಿವೃದ್ಧಿಯ ಉದ್ದೇಶವನ್ನೂ ಹೊಂದಲಾಯಿತು.

8. ಖಾಸಗಿ ವಲಯದ ಉತ್ತೇಜನ: ಭಾರತದ ಮಿಶ್ರ ಆರ್ಥಿಕ ಚೌಕಟ್ಟಿನಲ್ಲಿ ಯೋಜನ ವಿಧಾನದಲ್ಲಿ ಖಾಸಗಿ ವಲಯಕ್ಕೂ ಸಮರ್ಪಕ ಅವಕಾಶ ಕಲ್ಪಿಸಿ ಆದರ ಬೆಳವತೆಗೆಗೂ ಉತ್ತೇಜನ ನೀಡಲಾಗಿದೆ.


ಇಲ್ಲಿಯವರೆಗೆ ಭಾರತದಲ್ಲಿ ಹನ್ನೊಂದು ಪಂಚವಾರ್ಷಿಕ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು, ಸದ್ಯ ಹನ್ನೆರಡನೆಯ ಪಂಚವಾರ್ಷಿಕ ಯೋಜನೆಯ ಮುಕ್ತಾಯ ಹಂತದಲ್ಲಿದ್ದೇವೆ. ಪಾರ್ವನಿರ್ಧಾರಿತ ಉದ್ದೇಶಗಳ ಚೌಕಟ್ಟಿನಲ್ಲಿ ಈ ಯೋಜನೆಗಳು ಕಾರ್ಯಾನುಗತವಾಗಿವೆಯಾದರೂ ಪ್ರತಿಯೊಂದು ಯೋಜನೆಯೂ ಒಂದು ಮಹತ್ವದ ಗುರಿಯನ್ನು ಹೊಂದಿದ್ದಿತು, ಕೋಷ್ಟಕದಲ್ಲಿ ಭಾರತದ ಯೋಜನೆಗಳ ಬಗೆಗೆ ಸ್ಕೂಲ ಮಾಹಿತಿಯಿದೆ.




0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು