ಭಾರತದ ಯೋಜನೆಗಳನ್ನು ಒಂದು ಗಮನಾರ್ಹ ಯಶೋಗಾಥೆಯಿದ್ದರೂ, ಅತ್ಯಂತ ಗಂಭೀರ ವಿಫಲತೆಗಳ ಪಟ್ಟಿ ಇದೆ. ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪೈಕಿ ಒಂದಾಗಿದೆ ಮತ್ತು ಅತ್ಯಂತ ತೀವ್ರವಾಗಿ ಬೆಳೆಯುತ್ತಿದೆ ಎಂಬ ಸಂಗತಿಗಳು ಯೋಜನೆಗಳ ಯಶಸ್ಸನ್ನು ಸೂಚಿಸುತ್ತವೆ.
ಸಾಧನೆಗಳು
1. ರಾಷ್ಟ್ರೀಯ ಮತ್ತು ತಲಾ ಆದಾಯದಲ್ಲಿ ಹೆಚ್ಚಳ : ರಾಷ್ಟ್ರೀಯ ಮತ್ತು ತಲಾ ಆದಾಯದ ಗಾತ್ರ ಮತ್ತು ಬೆಳವಣಿಗೆ ದರಗಳೆರಡೂ ಏರಿಕೆಯಾಗಿವೆ. ಯೋಜನಾ ಅವಧಿಯಲ್ಲಿ ರಾಷ್ಟ್ರೀಯ ಆದಾಯವು ಹಲವಾರು ಪಟ್ಟು ಹೆಚ್ಚಳ ಸಾಧಿಸಿದೆ. 1950-51ರಲ್ಲಿ 7513 ರೂಪಾಯಿಗಳಾಗಿದ್ದ ತಲಾ ಆದಾಯವು 2014-15ರ ವೇಳೆಗೆ 74193 ರೂಪಾಯಿಗಳಿಗೆ (ಸ್ಥಿರ ಬೆಲೆಗಳಲ್ಲಿ ಏರಿಕೆಯಾಗಿದೆ.
2. ಕೃಷಿ ಅಭಿವೃದ್ಧಿ : 1950-51ರಲ್ಲಿ 51 ಲಕ್ಷ ಟನ್ನುಗಳಿದ್ದ ಧಾನ್ಯಗಳ ಉತ್ಪಾದನೆಯು 1990-91ರ ವೇಳೆಗೆ 176,4 ದಶಲಕ್ಷ ಟನ್ನುಗಳಿಗೆ ಮತ್ತು 2015-16ರ ವೇಳೆಗೆ 252 ದಶಲಕ್ಷ ಟನ್ನುಗಳಿಗೆ ಹೆಚ್ಚಾಗಿದೆ. ಹತ್ತಿ ಕಟ್ಟು, ಎಣ್ಣೆ ಕಾಳುಗಳು, ತರಕಾರಿ, ಹಣ್ಣುಗಳು, ಹಾಲು ಮತ್ತು ಇತರ ಕೃಷಿ ಉತ್ಪನ್ನಗಳ ಉತ್ಪಾದನೆಯು ಹಲವು ಪಟ್ಟು ಸ್ಥಳವಾಗಿದೆ. ಅತ್ಯವಶ್ಯವಾಗಿದ್ದ ದೇಶದ ಆಹಾರ ಭದ್ರತೆ ಸಾಕಾರಗೊಂಡಿದೆ.
3. ಕೈಗಾರಿಕೆಗಳ ಅಭಿವೃದ್ಧಿ ಕಬ್ಬಿಣ ಮತ್ತು ಉಕ್ಕು ಯಂತ್ರೋಪಕರಣಗಳು, ರಾಸಾಯನಿಕ ಗೊಬ್ಬರಗಳು ಸೇರಿದಂತೆ ಬಂಡವಾಳ ಸರಕುಗಳನ್ನು ಉತ್ಪಾದಿಸುವ ಕೈಗಾರಿಕೆಗಳ ಗೋರ್ನಿಯ ವೃದ್ಧಿ ಆಗಿದೆ.
4. ಆರ್ಥಿಕ ಮೂಲಸೌಕರ್ಯದ ಅಭಿವೃದ್ಧಿ: ಸಾರಿಗೆ, ಶಕ್ತಿ ಉತ್ಪಾದನೆ, ಸಂಪರ್ಕ, ನೀರಾವರಿ ಸೇರಿದಂತೆ ಎಲ್ಲ ಆರ್ಥಿಕ ಮೂಲ ಸೌಕರ್ಯಗಳ ಅಭಿವೃದ್ಧಿಯೂ ಸಹ ಗಣನೀಯ ವೃದ್ಧಿ ಸಾಧಿಸಿವೆ.
5. ಸಾಮಾಜಿಕ ಮೂಲಸೌಕರ್ಯದ ಅಭಿವೃದ್ಧಿ: ಶಿಕ್ಷಣ, ಆರೋಗ್ಯ, ಕುಟುಂಬ ಕಲ್ಯಾಣ, ವಸತಿ, ಕಕಾರ್ಮಿ ಕಲ್ಯಾಣ, ದುರ್ಬಲರ ಕಲ್ಯಾಣವಂತಹ ಸಾಮಾಜಿಕ ಮೂಲ ಸೌಕರ್ಯಗಳ ಅಭಿವೃದ್ಧಿಗೂ ಸಹ ಯೋಜನೆಗಳು ಕೀಭೂತವಾಗಿವೆ.
6. ಸ್ವಾವಲಂಬನೆ: ಮೂಲ ಅನುಭೋಗಿ ಸರಕುಗಳು ಮತ್ತು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸಲು ಸಾಧ್ಯವಾದದ್ದು ಯೋಜನೆಗಳಿಂದಲೇ, ಉಕ್ಕು, ಶಕ್ತಿ ಮತ್ತು ಸಯನಿಕ ಗೊಬ್ಬರಗಳಂತಹ ಮೂಲ ಉದ್ದಿಮೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಇದನ್ನು ನಕಾರಗೊಳಿಸಲಾಯಿತು,
7. ಉದ್ಯೋಗ ನಿರ್ಮಾಣ: ಸಣ್ಣ ಹಾಗೂ ಗುಡಿ ಕೈಗಾರಿಕೆಗಳ ಸ್ಥಾಪನೆ, ತಾಂತ್ರಿಕ ಶಿಕ್ಷಣದ ವಿಸ್ತರಣೆ, ಸ್ವ-ಉದ್ಯೋಗ ಕಾರ್ಯಕ್ರಮಗಳ ಅನುಷ್ಠಾನ, ಬೃಹತ್ ಉದ್ದಿಮೆಗಳ ಸ್ಥಾಪನೆ, ಕೃಷಿ ಮತ್ತು ಸೇವಾ ವಲಯಗಳ ಸುಧಾರಣೆ, ಮುಂತಾದ ಕ್ರಮಗಳ ಮೂಲಕ ಸಾಕಷ್ಟು ಪ್ರಮಾಣದ ಉದ್ಯೋಗಾವಕಾಶ ಸೃಷ್ಟಿಯಾಗಿದೆ.
8. ಬಂಡವಾಳ ಸಂಚಯನ ಆರ್ಥಿಕ ಬೆಳವಣಿಗೆಯ ಜೊತೆಜೊತೆಗೆ ಆದಾಯ ವೃದ್ಧಿಯಾಗಿ ಬಂಡವಾಳ ಸಂಚಯನವೂ ಸಹ ಹೆಚ್ಚಿದೆ.
9. ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿ: ಭಾರತವ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ವಿಶ್ವದಲ್ಲಿ ಮೂರನೆಯ ಸ್ಥಾನದಲ್ಲಿದೆ. ಭಾರತದ ರಂಜಿನಿಯರುಗಳು ಮತ್ತು ವಿಜ್ಞಾನಿಗಳು ಸ್ವತಂತ್ರವಾಗಿ ಯಾವುದೇ ತಾಂತ್ರಿಕ ಕಾರ್ಯ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.
10. ಸಾಮಾಜಿಕ ನ್ಯಾಯ : ಭಾರತೀಯ ಯೋಜನೆಗಳ ಮೂಲಭೂತ ಉದ್ದೇಶವು ಬೆಳವಣಿಗೆಯ ಜೊತೆಗೆ ಸಾಮಾಜಿಕ ನ್ಯಾಯವನ್ನು ಸಾಧಿಸುವುದಾಗಿತ್ತು. ಭೂ ಸುಧಾರಣೆಗಳು, ಜೀತ ಪದ್ಧತಿಯ ನಿರ್ಮೂಲನೆ, ಗ್ರಾಮೀಣ ಸಾಲದ ರದ್ಧತಿ, ಕನಿಷ್ಠ ಕೂಲಿಯ ಸಿಗು ಅವಶ್ಯಕತೆಗಳ ಪೂರೈಕೆ, ಆರ್ಥಿಕ ಶಕ್ತಿಯ ಕೇಂದ್ರೀಕರಣಕ್ಕೆ ತಡೆ ಮತ್ತು ಆರ್ಥಿಕ ಅಂತರಗಳನ್ನು ತೊಡೆದುಹಾಕುವ ಹಲವಾರು ಕ್ರಮಗಳ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ಎಷ್ಟು ಯೋಜನೆಗಳ ಮೂಲಕ ಮಾಡಲಾಗಿದೆ.
ವಿಫಲತೆಗಳು
ಭಾರತೀಯ ಯೋಜನೆಗಳಲ್ಲಿ ಕೆಲವು ವಿಫಲತೆಗಳಿದ್ದು, ಪ್ರಮುಖವಾದುವೆಂದರೆ:
1. ಉತ್ಪಾದನೆಯ ಹಾಗೂ ಆದಾಯಗಳ ನಿಧಾನಗತಿಯ ಬೆಳವಣಿಗೆ : ಯೋಜನೆಗಳಲ್ಲಿ ಉತ್ಪಾದನೆ ಹಾಗೂ ಆದಾಯದ ಬೆಳವಣಿಗೆ ದರಗಳು ನಿಧಾನ ಅಷ್ಟೇ ಅಲ್ಲದೇ ನಿಗದಿಗೊಳಿಸಿದ ಗುರಿಗಳಿಗಿಂತ ಕಡಿಮೆ ಇವೆ.
2. ಬೆಲೆಗಳಲ್ಲಿ ಹೆಚ್ಚಳ: ಉತ್ಪಾದನೆಯ ವಿಧಾನಗತಿಯ ಬೆಳವಣಿಗೆ ಆದರೆ ಜನಸಂಖ್ಯೆಯ ತೀವ್ರ ಬೆಳವಣಿಗೆಗಳ ದೆಸೆಯಿಂದಾಗಿ ಪತಿ ಯೋಜನೆಯಲ್ಲಿ ಬೆಲೆಗಳು ನಿರಂತರವಾಗಿ ಏರುತ್ತ ಸಾಗಿವೆ.
3. ನಿರುದ್ಯೋಗದಲ್ಲಿ ಹೆಚ್ಚಳ: ಯೋಜನಾ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣವೂ ಅಧಿಕವಾಗುತ್ತಾ ಸಾಗಿದೆ. ಉದ್ಯೋಗಾವಕಾಶಗಳ ಸೃಷ್ಟಿಯಾದರೂ, ಅವು ಯುವ ಜನಸಂಖ್ಯೆಯು ಹೆಚ್ಚಳವಾದ ಪ್ರಮಾಣಕ್ಕನುಗುಣವಾಗಿ ಇರಲಿಲ್ಲ. ಹೀಗಾಗಿ ನಿರುದ್ಯೋಗ ಹೆಚ್ಚುತ್ತ ಹೋಗಿದೆ. ವಾಸ್ತವವಾಗಿ ಕಳೆದ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಜರುಗಿದ ಬೆಳವಣಿಗೆಯು ‘ಉದ್ಯೋಗ ರಹಿತ ಬೆಳವಣಿಗೆ ಎಂದು ವರ್ಣಿಸಲ್ಪಟ್ಟಿದೆ.
4. ಬಡತನ ಹಾಗೂ ಅಸಮಾನತೆಯ ಮುಂದುವರಿಕೆ: ಯೋಜನೆಗಳು ಬಡತನವನ್ನು ಕಡಿಮೆ ಮಾಡುವಲ್ಲಿಯೂ ವಿಫಲತೆ ಹೊಂದಿವೆ. ಬಡತನದ ಪ್ರತಿಶತ ಪ್ರಮಾಣ ಕಡಿಮೆಯಾಗಿದ್ದರೂ, ದೇಶದಲ್ಲಿರುವ ಒಟ್ಟು ಬಡಜನದ ಸಂಖ್ಯೆಯು ವಿಶ್ವದಲ್ಲಿಯೇ ಅತಿ ಹೆಚ್ಚಿನದು ಎಂದು ಹೇಳಲಾಗುತ್ತದೆ. ಅಸಮಾನತೆಗಳೂ ಕಡಿಮೆಯಾಗಿಲ್ಲ.
5. ಮೂಲ ಸೌಕರ್ಯಗಳ ಅಸಮರ್ಪಕ ಅಭಿವೃದ್ಧಿ: ತೀವ್ರ ಅಭಿವೃದ್ಧಿಗೆ ಅವಶ್ಯವಿರುವ ಪ್ರಮಾಣದಲ್ಲಿ ಅಥವಾ ಬೇರೆ ರಾಷ್ಟ್ರಗಳಲ್ಲಿ ಲಭ್ಯವಿರುವ ಮಟ್ಟದಲ್ಲಿ ಸಾರಿಗೆ, ಸಂಪರ್ಕ, ಶಕ್ತಿ, ನೀರಾವರಿ, ಶಿಕ್ಷಣ, ಆರೋಗ್ಯ, ಹಣಕಾಸಾ ಸೌಲಭ್ಯ ಮುಂತಾದವುಗಳು ಭಾರತದಲ್ಲಿ ಲಭ್ಯವಿಲ್ಲ,
6. ಅದಕ್ಷ ಆಡಳಿತ: ಭಾರತೀಯ ಯೋಜನೆಗಳ ಒಂದು ಪ್ರಮುಖ ಕೊರತೆ ಎಂದರೆ ಅವುಗಳ ದುರ್ಬಲ ಅನುಷ್ಠಾನ, ಆಡಳಿತಶಾಹಿಯಲ್ಲಿರುವ ಅದಕ್ಷತೆ, ಅಪ್ರಾಮಾಣಿಕತೆ, ಪಟ್ಟಭದ್ರ ಹಿತಾಸಕ್ತಿಯಲ್ಲದೇ, ಕೆಂಪು ಪಟ್ಟಿ ಮನೋಭಾವಗಳು ಯೋಜನೆಗಳ ಸದುದ್ದೇಶಗಳನ್ನೇ ಹಾಳು ಮಾಡಿವೆ.
7. ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದ ರಫ್ತು ಹೆಚ್ಚಳ: ಉತ್ಪಾದನೆಯ ನಿಧಾನಗತಿಯ ಬೆಳವಣಿಗೆ, ಖೈರಾಶನ ತಾಂತ್ರಿಕತೆಯ ಬಳಕೆ ಮತ್ತು ಉತ್ಪಾದನೆಯಲ್ಲಿನ ಅಧ್ಯಕ್ಷತೆಯಿಂದಾಗಿ, ನಮ್ಮ ಸರಕುಗಳು ರಫ್ತ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕವಾಗಿಲ್ಲ. ಹಲವಾರು ವರ್ಷಗಳ ನಮ್ಮ ನೀತಿಯು ಆಮದು ನಿಯಂತ್ರಣದ ಕಡೆಗೆ ಇತ್ತು. ಈ ಎಲ್ಲ ಕಾರಣಗಳಿಂದಾಗಿ ರಫ್ತು ಮತ್ತು ರಸ್ತೆ ಗಳಿಕೆಯು ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.
ಹೀಗೆ ಭಾರತೀಯ ಯೋಜನೆಗಳಿಗೆ ಸಂಬಂಧಿಸಿದಂತೆ ಬಹುವಿಧ ಕೊರತೆಗಳು ಮತ್ತು ಆಸೆ * ಕತೆಗಳು ಕಂಡು ಬರುತ್ತವೆ, ಯೋಜನೆಗಳನ್ನು ಚೆನ್ನಾಗಿ ರೂಪಿಸಲಾಗಿತ್ತು, ಆದರೆ ಅವುಗಳ ಅನುಷ್ಠಾನ ನಿರೀಕ್ಷಿಸಿದಂತೆ ಆಗಿಲ್ಲ.
ಕಾಮೆಂಟ್ ಪೋಸ್ಟ್ ಮಾಡಿ